Tag: Photographer

  • ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗೆಯ ರಮಣೀಯ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೇರಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸೆಳೆಯುತ್ತಿದೆ.

    ಗಂಗಾವತಿ ತಾಲೂಕಿನಾದ್ಯಂತ ಹರಿದಿರುವ ತುಂಗಭದ್ರಾ ನದಿಯ ದೃಶ್ಯಗಳು ಛಾಯಾಗ್ರಾಹಕ ಚರಣ್ ಬೊಲೆಂಪಲ್ಲಿ ಅವರು ತಮ್ಮ ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಿಡಿದಿದ್ದಾರೆ. ಗಂಗಾವತಿಯ ಚಿಕ್ಕ ಜಂತಕಲ್ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯು ನೀರಿನಲ್ಲಿ ಮುಳುಗಿರುವ ದೃಶ್ಯ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಕಳೆದ ವರ್ಷವಷ್ಟೇ ಉದ್ಘಾಟನೆ ಆದ ತಾಲೂಕಿನ ಬುಕ್ಕಸಾಗರ-ಕಡೆಬಾಗಿಲು ಬಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆಯ ದೃಶ್ಯ ನೋಡುಗರಿಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ.

    ಜಿಲ್ಲೆಯ ಜನರು ಇದು ನಮ್ಮ ಸೇತುವೆನಾ ಎಂದುಕೊಳ್ಳುವಂತೆ ಮಾಡಿದೆ. ಇನ್ನೂ ಇತ್ತೀಚೆಗಷ್ಟೆ ರಾಜ್ಯಾದ್ಯಂತ ಸುದ್ದಿ ಮಾಡಿದ ವಿರುಪಾಪುರ ಗಡ್ಡಿ ಬಳಿಯ ದೃಶ್ಯವಂತೂ ಒಂದು ಕ್ಷಣ ಮೈಮರೆಯುವಂತೆ ಮಾಡುತ್ತದೆ. ಶ್ರೀ ಕೃಷ್ಣ ದೇವರಾಯ ಕಾಲದ ಸೇತುವೆಯ ಒಳಗಿಂದ ನೀರು ಧುಮ್ಮಿಕ್ಕಿ ಹರಿಯತ್ತಿರುವ ದೃಶ್ಯವನ್ನು ಡ್ರೋನ್ ಕ್ಯಾಮೆರಾದಲ್ಲಿ ಕಂಡ ಜನರು ಛಾಯಾಗ್ರಾಹಕ ಕಾರ್ಯಕ್ಕೆ ಹೊಗುಳಿಕೆಯ ಸುರಿಮಳೆಗೈದಿದ್ದಾರೆ.

    ತುಂಗಭದ್ರಾ ನದಿ ಹುಕ್ಕಿ ಹರಿಯುವ ವೇಳೆ ಡ್ರೋನ್ ಕ್ಯಾಮೆರಾದ ಮೂಲಕ ಅದ್ಭುತವಾದ ದೃಶ್ಯಗಳನ್ನು ಸೆರೆಹಿಡಿದು ಜನರಿಗೆ ಹೆಲಿಕಾಪ್ಟರ್ ಮೇಲೆ ಕುಳಿತು ನೊಡಿದಂತೆ ಮಾಡಿದ ಚರಣ್ ಬೊಲೆಂಪಲ್ಲಿ ಅವರಿಗೆ ಜನರು ಮೆಚ್ವುಗೆ ವ್ಯಕ್ತಪಡಿಸುತ್ತಿದ್ದಾರೆ.

  • ಫೋಟೋಶೂಟ್ ನೆಪದಲ್ಲಿ ಮಾಡೆಲ್ ಜೊತೆ ಅಸಭ್ಯ ವರ್ತನೆ

    ಫೋಟೋಶೂಟ್ ನೆಪದಲ್ಲಿ ಮಾಡೆಲ್ ಜೊತೆ ಅಸಭ್ಯ ವರ್ತನೆ

    ಬೆಂಗಳೂರು: ಫೋಟೋಶೂಟ್ ಮಾಡುವ ನೆಪದಲ್ಲಿ ಫೋಟೋಗ್ರಾಫರ್ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.

    ಶರತ್ ಕುಮಾರ್ ಬಂಧಿತ ಆರೋಪಿ. ಶರತ್ ಕುಮಾರ್ ಶಂಕರನಗರ ಮುಖ್ಯರಸ್ತೆಯಲ್ಲಿ ಇರುವ ಗೋಲ್ಡನ್ ಲೈಟ್ ಕ್ರಿಯೇಶನ್ ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಸ್ಟುಡಿಯೋದಲ್ಲಿ ಫೋಟೋಶೂಟ್ ಮಾಡುವಾಗ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

    ಶರತ್ ಇನ್‍ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡಿದ್ದನು. ಶರತ್ ಮಾತು ಕೇಳಿ ಯುವತಿ ಸ್ಟುಡಿಯೋಗೆ ಹೋಗಿದ್ದಳು.

    ಯುವತಿ ಸ್ಟುಡಿಯೋಗೆ ಬರುತ್ತಿದ್ದಂತೆ ಶರತ್ ಸ್ಟುಡಿಯೋದಲ್ಲಿ ಇದ್ದವರನ್ನು ಹೊರಗೆ ಕಳುಹಿಸಿದ್ದಾನೆ. ಅವರು ಹೊರಗೆ ಹೋಗುತ್ತಿದ್ದಂತೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

    ಸದ್ಯ ಯುವತಿ ಶರತ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಯತ್ನ ಪ್ರಕರಣ ದಾಖಲಿಸಿದ್ದಾಳೆ. ಯುವತಿಯ ದೂರು ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಆರೋಪಿ ಶರತ್ ಕುಮಾರ್‍ನನ್ನು ಬಂಧಿಸಿದ್ದಾರೆ.

  • ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮೃತಪಟ್ಟ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡ ತಾಯಿ!

    ಮಲೇಷ್ಯಾ: ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕವೂ ಫೋಟೋಗಳಲ್ಲಿ ಕಾಣಿಸಿಕೊಂಡರೆ ನಂಬಲು ಅಸಾಧ್ಯ. ಆದರೆ ಮಲೇಷ್ಯಾ ಇಂತಹದೊಂದು ಘಟನೆ ನಡೆದಿದೆ. ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದ ತಾಯಿ 5 ತಿಂಗಳ ಬಳಿಕ ಫ್ಯಾಮಿಲಿ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೌದು. ಇದೇನಪ್ಪ ಸಾವನ್ನಪ್ಪಿದವರು ಫೋಟೋದಲ್ಲಿ ಹೇಗೆ ಬಂದರು ಎಂದು ಅಚ್ಚರಿ ಆಗಬಹುದು, ಆದರೆ ತಂತ್ರಜ್ಞಾನದಿಂದ ಇದು ನಿಜವಾಗಿದೆ. ಮಲೇಷ್ಯಾದ ಮಹಿಳಾ ಫೋಟೋಗ್ರಾಫರ್ ಜಾರಾ ಹಲೀನಾ ಅವರ ಸೃಜನಶೀಲತೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆ ಪಡೆದಿದೆ.

    ಮಲೇಷ್ಯಾದ ಅಡೆಲಿನ್ ನೆಲ್ಡಾ ನಾಲ್ಕನೇ ಮಗುವಿಗೆ ತಾಯಿಯಾಗುವ ಸಂತಸದಲ್ಲಿದ್ದರು. ನಾಲ್ಕನೇ ಮಗು ಜನಿಸಿದ ಬಳಿಕ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕೆಂಬ ಆಸೆ ಹೊಂದಿದ್ದರು. ಆದರಿಂದ ಅವರು ಫೋಟೋಗ್ರಾಫರ್ ಜಾರಾರನ್ನು ಸಂಪರ್ಕಿಸಿ, ಡೆಲಿವರಿ ಬಳಿಕ ಫ್ಯಾಮಿಲಿ ಫೋಟೋಶೂಟ್ ಮಾಡಿಸಲು ನಿರ್ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಡೆಲಿವರಿ ವೇಳೆ ಅಡೆಲಿನಾ ಮೃತಪಟ್ಟಿದ್ದಾರೆ.

    ಅಡೆಲಿನ್ ಸಾವಿನಿಂದ ಆಕೆಯ ಕುಟುಂಬ ಸದಸ್ಯರು ಮಾತ್ರವಲ್ಲದೇ ಛಾಯಾಗ್ರಾಹಕಿ ಜಾರಾ ಕೂಡಾ ಬಹಳಷ್ಟು ದುಃಖಿತರಾಗಿದ್ದರು. ಅಲ್ಲದೇ ಅಡೆಲಿನ್ ಸಾವಿನಿಂದ ಆಕೆ ಕನಸಾಗಿದ್ದ ಫ್ಯಾಮಿಲಿ ಫೋಟೋಶೂಟ್ ಕೂಡಾ ಕನಸಾಗಿಯೇ ಉಳಿದಿತ್ತು. ಆದರೆ ಛಾಯಾಗ್ರಾಹಕಿ ಆ ಕನಸನ್ನ ನನಸು ಮಾಡಿದ್ದಾರೆ.

    ಅಡೆಲಿನ್ ಸಾವನ್ನಪ್ಪಿದ 5 ತಿಂಗಳಲ್ಲೇ ಫ್ಯಾಮಿಲಿ ಫೋಟೋಶೂಟ್ ಆಯೋಜಿಸಿದ ಜಾರಾ ತಂತ್ರಜ್ಞಾನವನ್ನು ಬಳಸಿ ಅಡೆಲಿನ್‍ರನ್ನು ಕೂಡಾ ಈ ಫೋಟೋಗಳಲ್ಲಿ ಕಾಣುವಂತೆ ಕ್ರಿಯೇಟಿವ್ ಎಡಿಟಿಂಗ್ ಮಾಡಿ ಬೇಷ್ ಅನ್ನಿಸಿಕೊಂಡಿದ್ದಾರೆ.

    ಸದ್ಯ ಈ ಫೋಟೋಶೂಟ್‍ನಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಬಹುತೇಕ ಎಲ್ಲಾ ಛಾಯಾಗ್ರಾಹಕರು ಜಾರಾರ ಈ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

  • ಬಡವರ ನೆರವಿಗಾಗಿ ಶ್ರಮಿಸುತ್ತಿದ್ದಾರೆ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ

    ಬಡವರ ನೆರವಿಗಾಗಿ ಶ್ರಮಿಸುತ್ತಿದ್ದಾರೆ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ

    ಗದಗ: ನೂರು ಪದ ಹೇಳೋದನ್ನ ಒಂದು ಫೋಟೋ ಹೇಳುತ್ತೆ ಅಂತ ಪತ್ರಿಕೋದ್ಯಮದಲ್ಲಿ ಮಾತಿದೆ. ಅದರಂತೆಯೇ ಗದಗ ಜಿಲ್ಲೆಯ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ ತಮ್ಮ ಛಾಯಾಗ್ರಹಣದ ಮೂಲಕ ತಮ್ಮ ಬದುಕು ಮಾತ್ರವಲ್ಲದೇ ಬಡವರ ಬದುಕನ್ನೂ ಹಸನು ಮಾಡುತ್ತಾ ಪಬ್ಲಿಕ್ ಹೀರೋ ಆಗಿದ್ದಾರೆ.

    ಜಿಲ್ಲೆಯ ಮುಂಡರಗಿ ಪಟ್ಟಣದ ಮುತ್ತಣ್ಣ ಹಾಳಕೇರಿ ವೃತ್ತಿಯಲ್ಲಿ ಫೋಟೋಗ್ರಾಫರ್. ಆದ್ರೆ ಪ್ರವೃತ್ತಿಯಲ್ಲಿ ಇವರು ಜನಪರ ಹೋರಾಟಗಾರ. ಮಾನವೀಯತೆಗೆ, ಬಡವರಿಗೆ ಸದಾ ಇವರ ಮನ ಮಿಡಿಯುತ್ತೆ.

    ಮುಂಡರಗಿ ಪಟ್ಟಣದಲ್ಲಿ ಪುಟ್ಟ ಡಿಜಿಟಲ್ ಸ್ಟುಡಿಯೋ ಇಟ್ಟುಕೊಂಡು 30 ವರ್ಷಗಳಿಂದ ಫೋಟೋ ಕ್ಲಿಕ್ಕಿಸೋದೇ ಇವರ ಕಾಯಕ. ಇವರು ಕ್ಯಾಮೆರಾ ಕಣ್ಣಲ್ಲಿ ಅದ್ಭುತ ಪ್ರಪಂಚವನ್ನು ಸೃಷ್ಟಿಸುವ ಮೋಡಿಗಾರ. ಅದೇ ರೀತಿ ಬಡವರ ಪಾಲಿನ ದೈವ ಎಂದರೆ ತಪ್ಪಾಗಲಾರದು. ಕಡುಬಡವರು, ಶ್ರಮಿಕರು, ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಮುತ್ತಣ್ಣ ಅವರು ತಮ್ಮ ದುಡಿಮೆಯಲ್ಲಿ ವಾರ್ಷಿಕ ಅಂದಾಜು 40-ರಿಂದ 50 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ.

    ಸಾಮಾನ್ಯವಾಗಿ ಫೋಟೋ ಸ್ಟುಡಿಯೋಗಳಲ್ಲಿ ನಟರು, ಕ್ರಿಕೆಟಿಗರ ಫೋಟೋಗಳನ್ನು ಹಾಕಿರುತ್ತಾರೆ. ಆದ್ರೆ, ಮುತ್ತಣ್ಣ ತಮ್ಮ ಸ್ಟುಡಿಯೋದಲ್ಲಿ ಚಿಂತಕರು, ಹೋರಾಟಗಾರರು, ಪ್ರಗತಿಪರರು, ಸಂಶೋಧಕರ ಚಿತ್ರಗಳನ್ನ ಹಾಕಿದ್ದಾರೆ. ಫೋಟೋಗ್ರಾಫಿ, ಸಮಾಜಸೇವೆ ಜೊತೆಗೆ ಹೋರಾಟಗಾರರೂ ಆಗಿರುವ ಮುತ್ತಣ್ಣ, ಪೊಸ್ಕೋ, ಸಿಂಗಟಾಲೂರು ಏತ ನೀರಾವರಿ, ಕಪ್ಪತ್ತಗುಡ್ಡ ಸಂರಕ್ಷಣೆ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟದಲ್ಲೂ ಭಾಗಿಯಾಗಿದ್ದಾರೆ.

    ಅಷ್ಟೇ ಅಲ್ಲದೆ ಮುತ್ತಣ್ಣ ಅವರ ಫೋಟೋಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರದರ್ಶನ ಕಂಡು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಹಾಗೆಯೇ ಇವರ ಪ್ರತಿಭೆಗೆ ಅನೇಕ ರಾಜ್ಯ, ರಾಷ್ಟ್ರಪ್ರಶಸ್ತಿಗಳು ಕೂಡ ಬಂದಿವೆ. ಮುತ್ತಣ್ಣ ಅವರ ಸ್ಟುಡಿಯೋ ಅಂದ್ರೆ ಅದೊಂದು ಚಿಂತಕರ ಕೂಟ. ನಿಸ್ವಾರ್ಥತೆಯ ಇವರ ಹೋರಾಟದ ಬದುಕಿನಿಂದ ತಮ್ಮ ಖಾಸಗಿ ಬದುಕಿನಲ್ಲಿ ಮದುವೆಯಾಗೋದನ್ನು ಮರೆತಿದ್ದಾರೆ. ಒಬ್ಬ ಛಾಯಾಗ್ರಾಹಕನಾಗಿ ಸಾಮಾಜಿಕ ನ್ಯಾಯ ಒದಗಿಸುವ ಇವರ ಹಂಬಲ ನಿಜಕ್ಕೂ ಶ್ಲಾಘನೀಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಕೇಶ್ ಅಂಬಾನಿ ಪುತ್ರಿ ಮದ್ವೆ ಫೋಟೋ ಕ್ಲಿಕ್ಕಿಸಿದ್ದು ಕನ್ನಡಿಗ!

    ಮುಕೇಶ್ ಅಂಬಾನಿ ಪುತ್ರಿ ಮದ್ವೆ ಫೋಟೋ ಕ್ಲಿಕ್ಕಿಸಿದ್ದು ಕನ್ನಡಿಗ!

    – ಮಂಗಳೂರಿನ ವಿವೇಕ್ ಸಿಕ್ವೇರಾ ತಂಡದಿಂದ ಛಾಯಾಗ್ರಹಣ
    – ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿಯ ಪ್ರತಿಭೆಗೆ ಸಿಕ್ತು ಅದೃಷ್ಟ

    ಬೆಂಗಳೂರು: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿ ಪುತ್ರಿ ಇಶಾ ಮತ್ತು ಉದ್ಯಮಿ ಆನಂದ್ ಪಿರಾಮನ್ ಮದುವೆ ಸಮಾರಂಭದ ಫೋಟೋಗಳನ್ನು ಮಂಗಳೂರಿನ ಫೋಟೋಗ್ರಾಫರ್ ಮತ್ತು ಅವರ ತಂಡ ಕ್ಲಿಕ್ಕಿಸಿದೆ.

    ಹೌದು. ಮಂಗಳೂರಿನ ವಿವೇಕ್ ಸಿಕ್ವೇರಾ ಮತ್ತು ಅವರ ತಂಡ 15 ದಿನಗಳ ಕಾಲ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗಿಯಾಗಿ ಈ ವಿಶೇಷ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ.

    ಆಫರ್ ಸಿಕ್ಕಿದ್ದು ಹೇಗೆ?
    ಜೂನ್ ತಿಂಗಳಿನಲ್ಲಿ ಅಂಬಾನಿ ಮತ್ತು ಪಿರಾಮಲ್ ಕುಟುಂಬಕ್ಕೆ ಆಪ್ತವಾಗಿರುವ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದರು. ಈ ಸಮಯದಲ್ಲಿ ಡಿಸೆಂಬರ್ 1 ರಿಂದ 15 ರವರೆಗಿನ ಎಲ್ಲ ದಿನಗಳನ್ನು ನಮಗಾಗಿ ಕಾಯ್ದಿರಿಸಿ ಎಂದು ಹೇಳಿದರು. ಈ ಸಮಯದಲ್ಲಿ ನೀವು ತೆಗೆದಿರುವ ಕೆಲ ಫೋಟೋ ಸ್ಯಾಂಪಲ್ ಗಳನ್ನು ನಮಗೆ ಕಳುಹಿಸಿಕೊಡಿ ಎಂದು ಕೇಳಿದ್ದರು. ಮಾತುಕತೆಯ ಸಮಯದಲ್ಲಿ 15 ದಿನಗಳ ಕಾಲ ಯಾರ ಮದುವೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಹೇಳಿರಲಿಲ್ಲ ಎಂದು ವಿವೇಕ್ ಅವರು ಆಫರ್ ಸಿಕ್ಕಿದ ವಿಚಾರ ತಿಳಿಸಿದ್ದಾರೆ.

    2 ದಿನ ಬೇಕಾಯ್ತು:
    ಅಕ್ಟೋಬರ್ ನಲ್ಲಿ ಅಂಬಾನಿ ಪುತ್ರಿಯ ಮದುವೆ ಸಮಾರಂಭ ಫೋಟೋ ತೆಗೆಯಲು ನನ್ನನ್ನು ಆಯ್ಕೆ ಮಾಡಿದ ವಿಚಾರ ಗೊತ್ತಾಯಿತು. ಈ ಸಮಯದಲ್ಲಿ ನನ್ನನ್ನೇ ಆಯ್ಕೆ ಮಾಡಿದ್ದು ಯಾಕೆ ಎಂದು ಕೇಳಿದಾಗ, ನನ್ನ ಫೋಟೋ ತೆಗೆಯುವ ಪ್ರತಿಭೆ ನೋಡಿ ಆಯ್ಕೆ ಮಾಡಲಾಯಿತು ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ವಿಷಯವನ್ನು ಅರಗಿಸಿಕೊಳ್ಳಲು ಎರಡು ದಿನ ಬೇಕಾಯಿತು. ಮುಂಬೈಗೆ ಹೋಗಿ ಫೋಟೋ ರಹಸ್ಯ, ಸಂಭಾವನೆ ವಿಚಾರ ಕುರಿತು ಮಾತನಾಡಿ ಒಪ್ಪಂದ ಮಾಡಿಕೊಂಡು ಬಂದೆ. ಯಾವುದೇ ಕಾರಣಕ್ಕೂ ತೆಗೆದ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬಾರದು ಎಂದು ಷರತ್ತು ವಿಧಿಸಲಾಗಿತ್ತು.

    ಮದುವೆಗಾಗಿಯೇ ನಾವು 2 ತಿಂಗಳು ಸಿದ್ಧತೆ ನಡೆಸಿದೆವು. ‘ಲುಕ್ಸ್ ಕ್ಯಾಪ್ಚರ್’ ನ 17 ಮಂದಿ ಸದಸ್ಯರು ಮುಂಬೈ ಮತ್ತು ಉದಯ್‍ಪುರ್ ಸಮಾರಂಭವನ್ನು ಕವರ್ ಮಾಡಿದ್ದೇವೆ. ನನ್ನ ಸ್ಟುಡಿಯೋ ಪಾಲುದಾರನಾಗಿರುವ ಶಂಕರ್ ಜೊತೆ ನಾಲ್ವರು ಮತ್ತು ನಾನು ಫೋಟೋ ತೆಗೆದಿದ್ದೇವೆ. ಉಳಿದ 7 ಮಂದಿ ವಿಡಿಯೋ, ಡ್ರೋನ್ ಮೂಲಕ ಸಮಾರಂಭವನ್ನು ಸೆರೆಹಿಡಿದಿದ್ದಾರೆ. ಉಳಿದವರು ನಮಗೆ ತಾಂತ್ರಿಕ ಸಹಾಯ ನೀಡಿದರು ಎಂದು ವಿವೇಕ್ ವೃತ್ತಿ ಅನುಭವವನ್ನು ಹಂಚಿಕೊಂಡರು.

    ಝಡ್ ಪ್ಲಸ್ ಸೆಕ್ಯೂರಿಟಿಯಲ್ಲಿ ನಡೆದ ಈ ಮದುವೆಯಲ್ಲಿ ಶಂಕರ್ ಮತ್ತು ನನಗೆ ವಿಶೇಷ ಐಡಿ ಕಾರ್ಡ್ ನೀಡಲಾಗಿತ್ತು. ಹೀಗಾಗಿ ವಿಐಪಿ, ವಧು ವರರಿಗೆಂದೇ ಮೀಸಲಾಗಿದ್ದ ಸ್ಥಳದಲ್ಲಿ ನಮಗೆ ಓಡಾಟ ಮಾಡಲು ಅನುಮತಿ ಸಿಕ್ಕಿತ್ತು. 1.2 ಲಕ್ಷ ಫೋಟೋ, ವಿಡಿಯೋ ಸೇರಿ ಒಟ್ಟು 30 ಟಿಬಿ ಡೇಟಾ ಆಗಿದ್ದು, ಒಂದು ತಿಂಗಳ ಡೆಡ್‍ಲೈನ್ ಒಳಗಡೆ ಫೋಟೋಗಳನ್ನು ನೀಡಬೇಕಿದೆ. ಈಗ ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದೇವೆ ಎಂದು ವಿವೇಕ್ ಹೇಳಿದರು.

    ಒಟ್ಟು ಎಷ್ಟು ರೂ. ಬಿಲ್ ಆಗಬಹುದು ಎಂದು ಪ್ರಶ್ನೆ ಕೇಳಿದ್ದಕ್ಕೆ ವಿವೇಕ್ ಅವರು, ಬಿಲ್ ಬಗ್ಗೆ ನಾವು ತಲೆ ಕೆಡಿಸಿಕೊಂಡಿಲ್ಲ. ದೇಶದ ಅತಿ ದೊಡ್ಡ ಮದುವೆ, ವಿವಿಐಪಿಯವರು ಭಾಗವಹಿಸಿದ್ದ ಸಮಾರಂಭದಲ್ಲಿ ಫೋಟೋ ತೆಗೆಯಲು ಅವಕಾಶ ಸಿಕ್ಕಿದ್ದೆ ದೊಡ್ಡದು. ಈ ಸಮಾರಂಭವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಡ್ರಾಪ್‍ಔಟ್ ವಿದ್ಯಾರ್ಥಿ:
    ವಿಶೇಷ ಏನೆಂದರೆ ವಿವೇಕ್ ಅವರು ಕಾಲೇಜ್ ಡ್ರಾಪ್‍ಔಟ್ ವಿದ್ಯಾರ್ಥಿ. ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸಿದ್ದ ಅವರು ನಂತರ ಪೆಟ್ರೋಲ್ ಬಂಕ್ ಒಂದರಲ್ಲಿ ಅಟೆಂಡೆಂಟ್ ಆಗಿ ಕೆಲಸ ಮಾಡಿದ್ದರು. ಸಮಯದಲ್ಲಿ ಸ್ನೇಹಿತರಿಂದ ಫೋಟೋಗ್ರಾಫಿ ಕಲಿತು ಭದ್ರತಾ ಠೇವಣಿಯಾಗಿ ಇಟ್ಟಿದ್ದ 7 ಸಾವಿರ ರೂ. ಹಣವನ್ನು ಡ್ರಾ ಮಾಡಿ 7 ಸಾವಿರ ರೂ. ಮೌಲ್ಯದ ಕ್ಯಾಮೆರಾವನ್ನು ಖರೀದಿಸಿದ್ದರು. ಠೇವಣಿಯನ್ನು ಡ್ರಾ ಮಾಡಿದ ಬಳಿಕ ಕೆಲಸ ಹೋಯ್ತು. ರಿಸ್ಕ್ ಕೆಲಸ ಆದರೂ ವಿವೇಕ್ ಅವರು ಫೋಟೋಗ್ರಫಿಯಲ್ಲೇ ಮುಂದುವರಿದರು.

    2010, 2011, 2012, 2014ರಲ್ಲಿ ಬೆಟರ್ ಫೋಟೋಗ್ರಾಫಿ ಸಂಸ್ಥೆ ನೀಡುವ `ಅತ್ಯುತ್ತಮ ಮದುವೆ ಫೋಟೋಗ್ರಾಫರ್’ ಪ್ರಶಸ್ತಿಗೆ ವಿವೇಕ್ ಅವರಿಗೆ ಲಭಿಸಿದೆ. ಈ ಮಾಹಿತಿಯನ್ನು ಕಲೆ ಹಾಕಿದ್ದ ಅಂಬಾನಿ ಕುಟುಂಬ ವಿವೇಕ್ ಸಿಕ್ವೇರಾ ಅವರನ್ನು ಸಂಪರ್ಕಿಸಿ ಆಫರ್ ನೀಡಿತ್ತು.

    ವಿವೇಕ್ ಜೊತೆ ಭಾರತದ ಇನ್ನೊಂದು ಫೋಟೋಗ್ರಾಫರ್ ತಂಡ ಅಷ್ಟೇ ಅಲ್ಲದೇ ಬ್ರಿಟನ್, ಇಟಲಿ ಇತರೇ ದೇಶಗಳ ಪ್ರಸಿದ್ಧ ಫೋಟೋಗ್ರಾಫರ್ ಗಳು ಅಂಬಾನಿ ಪುತ್ರಿಯ ವೈಭವದ ಮದುವೆಯನ್ನು ಕವರ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗ್ನಲ್‍ನಲ್ಲಿ ದಾರಿ ಬಿಡದ್ದಕ್ಕೆ ಯುವತಿಗೆ ರೇಪ್ ಮಾಡೋದನ್ನ ಹೇಳಿಕೊಡ್ತೀನಿ ಅಂದ ಸವಾರ!

    ಸಿಗ್ನಲ್‍ನಲ್ಲಿ ದಾರಿ ಬಿಡದ್ದಕ್ಕೆ ಯುವತಿಗೆ ರೇಪ್ ಮಾಡೋದನ್ನ ಹೇಳಿಕೊಡ್ತೀನಿ ಅಂದ ಸವಾರ!

    ಬೆಂಗಳೂರು: ಸಿಗ್ನಲ್‍ನಲ್ಲಿ ದಾರಿ ಬಿಡುವಂತೆ ಹಾರ್ನ್ ಹಾಕಿದ್ದಕ್ಕೆ ಕಾರಿನಲ್ಲಿದ್ದ ಯುವತಿ ಅವಾಚ್ಯ ಶಬ್ಧ ಬಳಸಿ ಬೈದಿದ್ದಕ್ಕೆ ಸವಾರ ರೇಪ್ ಮಾಡೋದನ್ನು ಹೇಳಿಕೊಡುತ್ತೀನಿ ಎಂದು ಬೈದಿರುವ ಘಟನೆ ಬೆಂಗಳೂರಿನ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ನಡೆದಿದೆ.

    ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ 26 ವರ್ಷದ ಯುವತಿ ಜಿಮ್‍ನಿಂದ ಶನಿವಾರ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ರೆಡ್ ಲೈಟ್ ಬಿದ್ದಿದ್ದರಿಂದ ಕಾರು ನಿಲ್ಲಿಸಿದ್ದಾರೆ. ಕಾರಿನ ಹಿಂದೆ ನಿಂತಿದ್ದ ಸ್ಕೂಟಿ ಸವಾರ ಹಾರ್ನ್ ಹಾಕಿ, ದಾರಿ ಬಿಡುವಂತೆ ಕೇಳಿದ್ದಾನೆ. ಆದರೆ ಯುವತಿ ದಾರಿ ಬಿಡಲಿಲ್ಲ. ಇದರಿಂದ ಕೋಪಗೊಂಡ ಸವಾರ ಕಾರ್ ಬಳಿಗೆ ಬಂದು ತರಾಟೆಗೆ ತಗೆದುಕೊಂಡಿದ್ದಾನೆ.

    ಈ ವೇಳೆ ಕಾರಿನ ಕ್ಯಾಮೆರಾದಲ್ಲಿ ಸವಾರನ ಫೋಟೋ ತೆಗೆದುಕೊಂಡ ಯುವತಿ, ತನಗಾದ ಅನ್ಯಾಯದ ಕುರಿತು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಯುವತಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಸಿಗ್ನಲ್ ಜಂಪ್ ಮಾಡು ಇಲ್ಲಾ ಅಂದ್ರೆ ನಾನು ರೇಪ್ ಮಾಡ್ತೇನೆ ಎಂದು ನನಗೆ ಸವಾರ ಬೈದಿದ್ದಾನೆ. ಅಷ್ಟಕ್ಕೂ ಬಿಡದೆ ಕಾರನ್ನು ಫಾಲೋ ಮಾಡಿಕೊಂಡು ಬಂದು ಕಾರಿಗೆ ಅಡ್ಡಗಟ್ಟಿ ಸ್ಕೂಟಿ ನಿಲ್ಲಿಸಿ, ಪಕ್ಕಕ್ಕೆ ನಡಿ ರೇಪ್ ಹೇಗೆ ಮಾಡುವುದು ಅಂತಾ ತೋರಿಸುತ್ತೇನೆ ಎಂದಿದ್ದಾನೆ ಎಂದು ಮಹಿಳಾ ಫೋಟೋಗ್ರಾಫರ್ ಆರೋಪಿಸಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಸವಾರನನ್ನು ತಿಲಕನಗರ ಪೊಲೀಸರು ಠಾಣೆಗೆ ಕರೆಸಿದ್ದಾರೆ. ವಿಚಾರಣೆ ವೇಳೆ, ದಾರಿ ಬಿಡುವಂತೆ ಕೇಳಿದ್ದು ನಿಜ. ಆಕೆಯೇ ನನಗೆ ಮೊದಲು ಅವಾಚ್ಯ ಶಬ್ಧದಿಂದ ಬೈದಿದ್ದಾಳೆ. ನಾನು ಯಾವುದೇ ಅವಾಚ್ಯ ಶಬ್ಧದಿಂದ ಬೈದಿಲ್ಲ ಎಂದು ಹೇಳಿದ್ದಾನೆ.

    ಇಬ್ಬರ ಆರೋಪಗಳನ್ನು ಆಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಸಂಧಾನ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/BKpxNY507n8

  • ಮದ್ವೆ ಫೋಟೋದಿಂದಾಗಿ ಸುದ್ದಿಯಾದ ಫೋಟೋಗ್ರಾಫರ್

    ಮದ್ವೆ ಫೋಟೋದಿಂದಾಗಿ ಸುದ್ದಿಯಾದ ಫೋಟೋಗ್ರಾಫರ್

    ತಿರುವನಂತಪುರ: ಸಾಮಾನ್ಯವಾಗಿ ಫೋಟೋಗ್ರಾಫರ್ ತೆಗೆದ ಫೊಟೋಗಳು ವೈರಲ್ ಆಗುವುದನ್ನು ನೋಡಿದ್ದೇವೆ. ಆದ್ರೆ ಇದೀಗ ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾರೆ.

    ಈ ಘಟನೆ ಕೇರಳದಲ್ಲಿ ನಡೆದಿದೆ. ವಿಡಿಯೋದಲ್ಲಿ ಮಲಯಾಳಂ ಮಾತನಾಡುತ್ತಾ, ನಗುವುದನ್ನು ಗಮನಿಸಬಹುದು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಹರಿದಾಡುತ್ತಿವೆ.

    ವಿಡಿಯೋದಲ್ಲೇನಿದೆ?: ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರ್, ಅವರ ಫೋಟೋವನ್ನು ವಿವಿಧ ಭಂಗಿಗಳಲ್ಲಿ ತೆಗೆಯಲೆಂದು ಮರವೇರುತ್ತಾರೆ. ನಂತ್ರ ಮರದ ಕೊಂಬೆಗೆ ಕಾಲುಗಳಿಂದ ಜೋತು ಬಿದ್ದು ತೆಗೆದಿದ್ದಾರೆ.

    ವಧು-ವರರು ಕೆಳಗೆ ನಿಂತು, ಫೋಟೋಗ್ರಾಫರ್ ಜೋತು ಬಿದ್ದು ಫೋಟೋ ತೆಗೆಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ನವದಂಪತಿಗಳು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ತಕ್ಷಣವೇ ಸಾವಿರಾರು ಮಂದಿ ವೀಕ್ಷಿಸಿ ಕಮೆಂಟ್ ಮಾಡಿದ್ದಾರೆ. ಫೋಟೋ ತೆಗೆದಿರುವ ಫೋಟೋಗ್ರಾಫರ್ ನ ಸಾಹಸ ಮತ್ತು ಕಾರ್ಯತತ್ಪರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಶಂಸೆ ವ್ಯಕ್ತವಾಗಿದೆ.

    ಮರದ ಕೊಂಬೆ ನೆಲದಿಂದ ಸುಮಾರು ಅಡಿಗಳ ಅಂತರದಲ್ಲಿ ಇದೆ. ಜೋತು ಬಿದ್ದ ಫೋಟೋಗ್ರಾಫರ್, ತನ್ನ ಕೈಯಲ್ಲಿ ಕ್ಯಾಮೆರಾ ಹಿಡಿದು ಫೋಟೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಅವರ ಕಾಲುಗಳಷ್ಟೇ ಆಧಾರವಾಗಿತ್ತು. ಒಂದು ವೇಳೆ ಕಾಲುಗಳು ಜಾರಿದಲ್ಲಿ ಇಲ್ಲ ಕೊಂಬೆ ಮುರಿದಲ್ಲಿ ತಲೆಗೆ ಅಪಾಯ ಖಚಿತವಾಗಿತ್ತು ಅಂತಾ ಕೆಲವರು ಭಯ ವ್ಯಕ್ತಪಡಿಸಿದ್ದಾರೆ.

    ವಿಭಿನ್ನ ಭಂಗಿಗಳಲ್ಲಿ ಫೋಟೋ ತೆಗೆದ್ದಿದ್ದರಿಂದ ದಂಪತಿ ಫೋಟೋಗ್ರಾಫರ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಫೋಟೋ ತೆಗೆದ ನಂತರ ದಂಪತಿ ಖುಷಿಯಿಂದ ಸ್ಥಳದಿಂದ ಹೊರಟಿದ್ದಾರೆ. ಫೋಟೋಗ್ರಾಫರ್ ಕೂಗಿ ಕ್ಯಾಮೆರಾ ಹಿಡಿಯಲು ಹೇಳಿ ಮರದಿಂದ ಕೆಳಗೆ ಇಳಿದಿದ್ದಾರೆ.

     

  • ಮದ್ವೆಯಲ್ಲಿ ತೆಗೆದ ಫೋಟೋವನ್ನು ಅಶ್ಲೀಲ ಫೋಟೋ ಮಾಡಿ ಅಪ್ಲೋಡ್ ಮಾಡಿದ್ದ ಫೋಟೋಗ್ರಾಫರ್ ಅರೆಸ್ಟ್!

    ಮದ್ವೆಯಲ್ಲಿ ತೆಗೆದ ಫೋಟೋವನ್ನು ಅಶ್ಲೀಲ ಫೋಟೋ ಮಾಡಿ ಅಪ್ಲೋಡ್ ಮಾಡಿದ್ದ ಫೋಟೋಗ್ರಾಫರ್ ಅರೆಸ್ಟ್!

    ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೋಗಳನ್ನು ಹರಿಬಿಟ್ಟ ಆರೋಪದ ಅಡಿಯಲ್ಲಿ ಫೋಟೋಗ್ರಾಫರ್ ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಕೋಝಿಕೋಡ್‍ನ ವದಕಾರಾದಲ್ಲಿರುವ ಸದ್ಯಮ್ ಶೂಟ್ ಆ್ಯಂಡ್ ಎಡಿಟ್ ಸ್ಟುಡಿಯೋ ವಿರುದ್ಧ ದೂರು ದಾಖಲಾಗಿತ್ತು. ಆ ಸ್ಟುಡಿಯೋದಲ್ಲಿ ಮಹಿಳೆಯರ ಫೋಟೋಗಳನ್ನು ಎಡಿಟ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.

    ಸದ್ಯಮ್ ಸ್ಟುಡಿಯೋವನ್ನು ಪೊಲೀಸರು ಸೀಜ್ ಮಾಡಿ ಕೆಲವು ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಸ್ಟುಡಿಯೋ ಮಾಲೀಕ ಬೀಬೇಶ್ ಜೊತೆಗೆ ದಿನೇಶನ್, ಸತೀಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದರು.

    ಕುಟುಂಬವೊಂದು ಮದುವೆಗಾಗಿ ಈ ಸ್ಟುಡಿಯೋವನ್ನು ಸಂಪರ್ಕಿಸಿತ್ತು. ಮದುವೆಯಲ್ಲಿ ತೆಗೆದ ಫೋಟೋಗಳನ್ನು ಅಶ್ಲೀಲ ಫೋಟೋಗಳನ್ನಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ನಂತರ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.