Tag: Photographer

  • ಕೆಲಸದವನ ಜೊತೆ ಪ್ರಣಯದಾಟ – ಹೆಂಡ್ತಿ ಇನಿಯನಿಂದ ಕೊಲೆಯಾದ ಗಂಡ

    ಕೆಲಸದವನ ಜೊತೆ ಪ್ರಣಯದಾಟ – ಹೆಂಡ್ತಿ ಇನಿಯನಿಂದ ಕೊಲೆಯಾದ ಗಂಡ

    – ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ

    ಬೆಳಗಾವಿ: ಡಿಸೆಂಬರ್ 25ರಂದು ನಡೆದಿದ್ದ ಫೋಟೋಗ್ರಾಫರ್ ಕೊಲೆ ಪ್ರಕರಣವನ್ನ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರು ಬೇಧಿಸಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಡಿ.25ರಂದು ಜಾಂಬೋಟಿಯಲ್ಲಿ ವಿಜಯ್ ಅವಲಕ್ಕಿ ಎಂಬವರ ಕೊಲೆಯಾಗಿತ್ತು. ಮೃತ ವಿಜಯ್ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಸೇರಿ ಐವರನ್ನ ಪೊಲೀಸರು ಬಂಧಿಸಿದ್ದಾರೆ. ವಿಜಯ್ ನನ್ನು ಡಿ.25 ರಂದು ಬರ್ತ್ ಡೇ ಫೋಟೋ ತೆಗೆಯಬೇಕಿದೆ ಎಂದು ಆರೋಪಿ ರಾಮಚಂದ್ರ ಕರೆದುಕೊಂಡು ಹೋಗಿದ್ದನು. ಸಂಜೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ರಾಮಚಂದ್ರ ತನ್ನ ಸಹಚರರ ಜೊತೆ ಸೇರಿ ವಿಜಯ್ ರುಂಡ ಕತ್ತರಿಸಿ ಕೊಲೆಗೈದಿದ್ದನು. ಕೊಲೆಯ ಬಳಿಕ ಆರೋಪಿಗಳೆಲ್ಲರೂ ಎಸ್ಕೇಪ್ ಆಗಿದ್ದರು.

    ಕೊಲೆ ಮಾಡಿದ್ಯಾಕೆ?: ಪ್ರಕರಣದ ಆರೋಪಿ ವಿಜಯ್ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಮಚಂದ್ರ ಮಾಲಕ ವಿಜಯ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಷಯ ತಿಳಿದ ವಿಜಯ್ ಆರೋಪಿಯನ್ನ ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆದ ಕೋಪದಲ್ಲಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

  • ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    ಹೊಸ, ವಿಭಿನ್ನ ಕ್ಯಾಲೆಂಡರ್ ಹೊರ ತಂದ ಪೈಲ್ವಾನ್ ಕೃಷ್ಣ

    – ಹೊಸ ಕ್ಯಾಲೆಂಡರ್ ನಲ್ಲಿ ಏನಿದೆ?

    ಬೆಂಗಳೂರು: ಹೊಸ ವರ್ಷಕ್ಕೆ ನಿರ್ದೇಶಕ ಕೃಷ್ಣವರು 2021ರ ಕ್ಯಾಲೆಂಡರ್ ವಿಭಿನ್ನವಾರಿಗಬೇಕು ಎಂಬ ದೃಷ್ಟಿಯಿಂದ ಕ್ಯಾಲೆಂಡರ್‍ವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಕ್ಯಾಲೆಂಡರ್ ಹೊಂದಿರುವ ವಿಶೇಷತೆಯಿಂದ ಸುದ್ದಿಯಲ್ಲಿದೆ.

    ಕ್ಯಾಲೆಂಡರ್ ಎಂದರೆ ಫೋಟೋ, ಚಿತ್ತಾರಗಳು ತುಂಬಿರುತ್ತವೆ. ಆದರೆ ಈ ಕ್ಯಾಲೆಂಡರ್ ಸ್ಫೂರ್ತಿದಾಯಕ ಕ್ಯಾಲೆಂಡರ್ ಆಗಿದೆ. ವಿಕಲಚೇತನರ ವಿಶಿಷ್ಟ ಸಾಧನೆಯನ್ನು ಪರಿಚಯಿಸುವ ಉತ್ತಮವಾದ ಒಂದು ಆಲೋಚನೆಯಿಂದ ಈ ಕ್ಯಾಲೆಂಡರ್ ರೂಪಿಸಿದ್ದಾರೆ.

    ಬೇರೆ ಬೇರೆ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ವಿಕಲಚೇತನ ಕ್ರೀಡಾಪಟುಗಳು, ಮಾಡೆಲ್ ಅವರ ಕಿರುಪರಿಚಯವನ್ನು 2021ರ ಕ್ಯಾಲೆಂಡರ್ ಒಳಗೊಂಡಿದೆ. ಇದರಿಂದ ತಿಂಗಳಿಗೆ ಒಬ್ಬೊಬ್ಬರ ಕಿರುಪರಿಚಯ ಹಾಗೂ ಅವರ ಸಾಧನೆಗಳ ಕುರಿತಾಗಿ ತಿಳಿದರೆ ಅವರೆಗೆ ಸ್ಫೂರ್ತಿ ನೀಡುತ್ತದೆ ಎಂಬ ಉತ್ತಮ ದೃಷ್ಟಿಕೋನದಿಂದ ಈ ಕ್ಯಾಲೆಂಡರ್ ನಿರ್ಮಾಣವಾಗಿದೆ.

    ಬ್ಲೇಡ್ ರನ್ನರ್ ಶಾಲಿನಿ ಸರಸ್ವತಿ, ಪ್ಯಾರಾ ಒಲಂಪಿಕ್ ಶರತ್ ಗಾಯಾಕ್ವಾಡ್, ಅಡ್ವೆಂಚರ್ ಟೂರಿಸ್ಟ್, ಮಂಜುನಾಥ್ ಚಿಕ್ಕಯ್ಯ, ಫಿಟ್ನೆಸ್ ಶ್ರೀನಿವಾಸ್ ಗೌಡ, ಈಜುಪಟು ಮತ್ತು ಡಾನ್ಸ್ರ್ ಜಯಂತ್, ಕ್ರಿಕೆಟರ್ಸ್ ಅಶ್ವಿನಿ ಸಾಗರ್, ಬಾಸ್ಕೆಟ್ ಬಾಲ್ ಪ್ಲೇಯರ್ ಗೌಸಿಯಾ ತಾಜ್ ಸೆರಿಂದೆ ಇನ್ನು ಅನೇಕರ ಸಾಧನೆಯ ಕುರಿತಾಗಿ ಈ ಕ್ಯಾಲೆಂಡರ್ ಒಳಗೊಂಡಿದೆ.

    ಇಂಥಹ ಒಂದು ಉತ್ತಮ ಆಲೋಚನೆಯೊಂದಿಗೆ ಕ್ಯಾಲೆಂಡರ್ ಅನ್ನು ಇನ್ವೋಕ್ ಫೌಂಡೇಶನ್ ಮಾಡಿದೆ. ಈ ಸಂಸ್ಥೆಯ ಸಾಗರ್ ಗೆ ಅಪಘಾತದಲ್ಲಿ ಬಲವಾದ ಪೆಟ್ಟ ಬಿದ್ದಿತ್ತು. ಈ ಹಿನ್ನೆಯಲ್ಲಿ ಸಂಸ್ಥೆಯು ಹುಟ್ಟಿಕೊಂಡಿತ್ತು. ಈ ಸಂಸ್ಥೆಯಿಂದ ಈ ಕ್ಯಾಲೆಂಡರ್‍ ಛಾಯಾಗ್ರಾಹಕ ಮತ್ತು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಸಾಗರ್ ಪರಿಶ್ರಮದ ಕುರಿತಾಗಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

  • ವಿರುಷ್ಕಾರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಆರ್‌ಸಿಬಿ ಫೋಟೋಗ್ರಾಫರ್

    ವಿರುಷ್ಕಾರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಆರ್‌ಸಿಬಿ ಫೋಟೋಗ್ರಾಫರ್

    ಅಬುಧಾಬಿ: 2020ರ ಐಪಿಎಲ್ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊರ ನಡೆದಿದೆ. ಇದರ ನಡುವೆಯೇ ನವೆಂಬರ್ 5 ರಂದು ನಾಯಕ ವಿರಾಟ್ ಕೊಹ್ಲಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಪರದಾಡಿದ ಸಂಗತಿಯನ್ನು ಸ್ವತಃ ತಂಡದ ಫೋಟೋಗ್ರಾಫರ್ ಬಿಚ್ಚಿಟ್ಟಿದ್ದಾರೆ.

    ಸತತ 4 ಸೋಲುಗಳ ನಡುವೆಯೂ ಪ್ಲೇ ಆಫ್ ಪ್ರವೇಶ ಮಾಡಿದ್ದು ಬೆಂಗಳೂರು ತಂಡದ ಸಾಧನೆಯಾಗಿದೆ. ಆದರೆ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ತಂಡದ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪಾರ್ಟಿ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಲಿಕ್ಕಿಸಲಾಗಿದ್ದ ಅನುಷ್ಕಾ ಶರ್ಮಾ ಹಾಗೂ ಕೊಹ್ಲಿ ಅವರ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಉತ್ತಮ ಫೋಟೋಗಳನ್ನು ಸೆರೆ ಹಿಡಿದ ಫೋಟೋಗ್ರಾಫರ್ ಮಾತ್ರ ವಿರುಷ್ಕಾ ಜೋಡಿಯೊಂದಿಗೆ ಫೋಟೋ ತೆಗೆದುಕೊಳ್ಳಲು ಸಮಸ್ಯೆ ಎದುರಿಸಿದ್ದರು.

    ಈ ಕುರಿತಂತೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿರುವ ಆರ್‌ಸಿಬಿ ತಂಡದ ಫೋಟೋಗ್ರಾಫರ್ ಮೋಹಿತ್ ಕಶ್ಯಪ್, ವಿಶೇಷ ಫೋಟೋವೊಂದರನ್ನು ಹಂಚಿಕೊಂಡು ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಚೆನ್ನಾಗಿರೋ ನಿನ್ನ ಫೋಟೋಗಳು ಏಕಿಲ್ಲ ಎಂದು ಜನರು ಪ್ರಶ್ನಿಸಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದೇ ಉತ್ತರ ನೀಡುತ್ತೇನೆ. ಯಾರೂ ನನ್ನ ಉತ್ತಮ ಫೋಟೋಗಳನ್ನು ಸೆರೆಹಿಡಿಯುವುದಿಲ್ಲ ಎಂದು ಹೇಳುತ್ತೇನೆ. ಇದು ಮತ್ತೊಮ್ಮೆ ಸಾಬೀತಾಗಿದೆ. ಈ ಫೋಟೋ ಸಂಬಂಧಿಸಿದ ರಿಪೇರಿ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಮೋಹಿತ್ ಕಶ್ಯಪ್ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ಕ್ಯಾಮೆರಾ ಫ್ಲಾಶ್ ಲೈಟ್‍ಯಿಂದ ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿಲ್ಲ. ಈ ಫೋಟೋಗೆ ವರ್ಕ್ ಮಾಡಿರುವ ಕಶ್ಯಪ್, ಮುಖ ಕಾಣುವಂತೆ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ತಮ್ಮ 32ನೇ ಹುಟ್ಟುಹಬ್ಬವನ್ನು ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಹಾಗೂ ಆರ್‌ಸಿಬಿ ಆಟಗಾರರು, ಸಿಬ್ಬಂದಿಯೊಂದಿಗೆ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿರನ್ನು ಬಿಗಿದಪ್ಪಿಕೊಂಡು ಕಿಸ್ ಮಾಡಿರುವ ಅನುಷ್ಕಾ ಅವರ ರೊಮ್ಯಾಟಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

     

    View this post on Instagram

     

    ❤️

    A post shared by AnushkaSharma1588 (@anushkasharma) on

  • ಸ್ಟುಡಿಯೋಗೆ ನುಗ್ಗಿ ಫೋಟೋಗ್ರಾಫರ್ ಮೇಲೆ ತಲ್ವಾರ್ ದಾಳಿ

    ಸ್ಟುಡಿಯೋಗೆ ನುಗ್ಗಿ ಫೋಟೋಗ್ರಾಫರ್ ಮೇಲೆ ತಲ್ವಾರ್ ದಾಳಿ

    ಮಂಗಳೂರು: ಏಕಾಏಕಿ ಸ್ಟುಡಿಯೋಗೆ ನುಗ್ಗಿ ಫೋಟೋಗ್ರಾಫರ್ ಮೇಲೆ ತಲ್ವಾರ್ ದಾಳಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ.

    ದಿನೇಶ್ ಕೊಟ್ಟಿಂಜ ದಾಳಿಗೊಳಗಾದ ಫೋಟೋಗ್ರಾಫರ್. ಇವರು ಫರಂಗಿಪೇಟೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಅಂಗಡಿಗೆ ನುಗ್ಗಿ ದಾಳಿ ಮಾಡಿದ್ದಾರೆ.

    ಘಟನೆಯಿಂದ ಗಂಭೀರ ಗಾಯಗೊಂಡ ದಿನೇಶ್ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ ವೆಲೆಂಟೈನ್ ಡಿ.ಸೋಜ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಹಾಗೂ ಎಸ್.ಐ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸುರೇಂದ್ರನನ್ನ ನಾನೇ ಕೊಂದಿದ್ದು – ಪೊಲೀಸರಿಗೆ ಆಡಿಯೋ ಕಳುಹಿಸಿದ ಆರೋಪಿ

  • ಪರ್ಸನಲ್ ಫೋಟೋಗ್ರಾಫರ್ ಬೇಕೆಂದ ಸಿಂಡ್ರೆಲ್ಲಾ- ಜಾಣತನದ ಉತ್ತರ ನೀಡಿದ ರಾಮಾಚಾರಿ

    ಪರ್ಸನಲ್ ಫೋಟೋಗ್ರಾಫರ್ ಬೇಕೆಂದ ಸಿಂಡ್ರೆಲ್ಲಾ- ಜಾಣತನದ ಉತ್ತರ ನೀಡಿದ ರಾಮಾಚಾರಿ

    ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಮಕ್ಕಳ ಪೋಷಣೆಯಲ್ಲೇ ಕಾಲ ಕಳೆಯುತ್ತಿರುವ ನಟಿ, ಬಿಡುವಿದ್ದಾಗ ಸೆಲ್ಫಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಆದರೆ ಇದೀಗ ಸೆಲ್ಫಿ ಫೋಟೋ ಮೂಲಕವೇ ರಾಕಿ ಭಾಯ್‍ಗೆ ಟಾಂಗ್ ನೀಡಿದ್ದಾರೆ. ಇದಕ್ಕೆ ರಾಮಾಚಾರಿ ನಾಜೂಕಾಗಿಯೇ ಉತ್ತರ ನೀಡಿದ್ದಾರೆ.

    ಹೌದು. ಇಂದು ಬೆಳಗ್ಗೆ ಸೆಲ್ಫಿ ಫೋಟೋವೊಂದನ್ನು ಪೋಸ್ಟ್ ಮಾಡಿ ರಾಧಿಕಾ ಪಂಡಿತ್, ಕೆಲವೊಂದು ಸಾಲುಗಳನ್ನು ಬರೆದುಕೊಂಡಿದ್ದರು. ಎಲ್ಲ ಪ್ರಯತ್ನಗಳ ಬಳಿಕ ಈ ಸೆಲ್ಫಿ ಶಾಟ್ ಬಂದಿದೆ. ಹಿಂದೆ ಬಾತುಕೋಳಿಗಳೂ ಕಾಣುವಂತೆ ಸೆರೆಹಿಡಿಯಲು ಯತ್ನಿಸಿದೆ ಆದರೆ ಇದರಲ್ಲಿ ಸಫಲವಾಗಿಲ್ಲ. ಹೀಗಾಗಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ ಎಂದು ಹೇಳಿದ್ದಾರೆ.

    ವಿಶೇಷ ಸೂಚನೆ ಎಂಬಂತೆ ಕೆಳಗೆ ಮತ್ತೊಂದು ಸಾಲುಗಳನ್ನು ಬೆರೆಯುವ ಮೂಲಕ ರಾಕಿ ಭಾಯ್‍ಗೆ ಟಾಂಗ್ ನೀಡಿದ್ದು, ಹೀಗಾಗಿಯೇ ನಮ್ಮ ಜೊತೆಗೆ ಪರ್ಸನಲ್ ಫೋಟೋಗ್ರಾಫರ್ ಅವಶ್ಯಕತೆ ಇದೆ ಎಂದಿದ್ದಾರೆ. ಅಲ್ಲದೆ ಕೊನೆಗೆ ಬ್ರಾಕೆಟ್‍ನಲ್ಲಿ ಪತಿ ಎಂದು ಭಾವಿಸಿ ಓದಿ ಎಂದು ಹೇಳಿದ್ದಾರೆ. ಈ ಮೂಲಕ ರಾಮಾಚಾರಿ ಫೋಟೋ ತೆಗೆಯಬೇಕೆಂದು ನಯವಾಗಿ ಕೇಳಿಕೊಂಡಿದ್ದಾರೆ.

    ಇದಕ್ಕೆ ಯಶ್ ಪ್ರತಿಕ್ರಿಯಿಸಿದ್ದು, ಒತ್ತಾಯಪೂರ್ವಕವಾಗಿ ಎಲ್ಲ ಗಂಡಂದಿರೂ ಫೋಟೋಗ್ರಾಫರ್‍ಗಳೇ. ಎಲ್ಲ ಪತಿಯಂದಿರು ಹಾಗೂ ಬಾಯ್‍ಫ್ರೆಂಡ್‍ಗಳು ಇದನ್ನು ಒಪ್ಪುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಚಮಕ್ ನೀಡಿದ್ದಾರೆ. ಈ ಕಮೆಂಟ್‍ಗೆ ಹಲವರು ಪ್ರತಿಕ್ರಿಯಿಸುತ್ತಿದ್ದು, ರಾಧಿಕಾ ಅವರ ಫೋಟೋ ತೆಗೆಯುವಂತೆ ರಾಕಿ ಭಾಯ್‍ಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೆಲ್ಫಿಗಾಗಿ ಪರದಾಡಿದ ರಾಧಿಕಾ- ಬೇಸರಗೊಂಡು ವಿಡಿಯೋ ಮಾಡಿದ ಯಶ್, ಐರಾ

    ಲಾಕ್‍ಡೌನ್ ಬಳಿಕ ಇತ್ತೀಚೆಗಷ್ಟೇ ಕೆಜಿಎಫ್-2 ಚಿತ್ರೀಕರಣವನ್ನು ಮತ್ತೆ ಶುರು ಮಾಡಲಾಗಿದೆ. ಈ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಅಪ್‍ಡೇಟ್ ನೀಡಿದ್ದರು. ಆದರೆ ಯಶ್ ಅವರ ಚಿತ್ರೀಕರಣದ ಕುರಿತು ಯಾವುದೇ ಅಪ್‍ಡೇಟ್ ಸಿಕ್ಕಿಲ್ಲ.

    ರಾಧಿಕಾ ಪಂಡಿತ್ ಮಕ್ಕಳನ್ನು ನೋಡಿಕೊಳ್ಳುತ್ತಿದ್ದು, ಬಿಡುವಿದ್ದಾಗಲೆಲ್ಲ ಸೆಲ್ಫಿ ಕ್ಲಿಕ್ಕಿಸುತ್ತಿರುತ್ತಾರೆ. ಸಿನಿಮಾದಲ್ಲಿ ಸಹ ನಟಿಸುತ್ತಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ. ಹೀಗಾಗಿ ಲಾಕ್‍ಡೌನ್ ಸಮಯವನ್ನು ಯಶ್, ರಾಧಿಕಾ ದಂಪತಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಕಳೆದಿದ್ದಾರೆ. ಅಲ್ಲದೆ ಇದೇ ವೇಳೆ ಜೂನಿಯರ್ ರಾಕಿ ಭಾಯ್‍ಗೆ ನಾಮಕರಣ ಕಾರ್ಯಕ್ರಮವನ್ನು ಸಹ ಮಾಡಿದ್ದು, ಯಥರ್ವ ಎಂದು ಹೆಸರಿಡಲಾಗಿದೆ. ಅಂದಹಾಗೆ ರಾಧಿಕಾ ಪಂಡಿತ್ ಪ್ರಸ್ತುತ ಆದಿ ಲಕ್ಷ್ಮಿ ಪುರಾಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  • ಫೋಟೋ ತೆಗೆಯುತ್ತಿದ್ದಂತೆ ಉಸಿರಾಡಿದ ಸತ್ತಿದ್ದ ವ್ಯಕ್ತಿ – ಕೇರಳದಲ್ಲೊಂದು ವಿಚಿತ್ರ ಘಟನೆ

    ಫೋಟೋ ತೆಗೆಯುತ್ತಿದ್ದಂತೆ ಉಸಿರಾಡಿದ ಸತ್ತಿದ್ದ ವ್ಯಕ್ತಿ – ಕೇರಳದಲ್ಲೊಂದು ವಿಚಿತ್ರ ಘಟನೆ

    ತಿರುವನಂತಪುರಂ: ಫೋಟೋ ತೆಗೆಯುತ್ತಿದ್ದಂತೆ ಸತ್ತಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಉಸಿರಾಡಿರುವ ವಿಚಿತ್ರ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಭಾನುವಾರ ಎರ್ನಾಕುಲಂನ ಫೋಟೋಗ್ರಾಫರ್ ಟಾಮಿ ಥೋಮಸ್ ಅವರಿಗೆ ಕರೆ ಮಾಡಿದ ಎಡಥಾಲಾ ಪೊಲೀಸರು, ಓರ್ವ ವ್ಯಕ್ತಿ ತನ್ನ ಮನೆಯಲ್ಲೇ ಸಾವನ್ನಪ್ಪಿದ್ದಾನೆ. ಹೀಗಾಗಿ ವಿಚಾರಣಾ ವರದಿಯನ್ನು ತಯಾರು ಮಾಡಲು ಅವನ ಶವದ ಫೋಟೋ ಬೇಕು. ಫೋಟೋ ತೆಗೆದುಕೊಡಿ ಎಂದು ಹೇಳಿದ್ದಾರೆ. ಅದರಂತೆ ಟಾಮಿ ಕೂಡ ಸ್ಥಳಕ್ಕೆ ಹೋಗಿದ್ದಾರೆ.

    ಪೊಲೀಸರ ಮಾತಿನಂತೆ ಮೃತ ವ್ಯಕ್ತಿಯ ಮನೆಗೆ ಹೋದ ಟಾಮಿ, ಮೃತದೇಹದ ಫೋಟೋ ತೆಗೆಲು ಆರಂಭ ಮಾಡಿದ್ದಾರೆ. ಈ ವೇಳೆ ಅವರಿಗೆ ಒಂದು ರೀತಿಯ ಧ್ವನಿ ಕೇಳಿಸಿದೆ. ಆದರೆ ಅದರ ಬಗ್ಗೆ ಗಮನ ಕೊಡದ ಟಾಮಿ ಫೋಟೋ ತೆಗೆಯುವಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅವರಿಗೆ ಮತ್ತೊಮ್ಮೆ ಜೋರಾಗಿ ಧ್ವನಿ ಕೇಳಿಸಿದೆ. ನಂತರ ಅವರು ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಗಮನಿಸಿದಾಗ, ಸತ್ತಂತೆ ಬಿದ್ದಿದ್ದ ವ್ಯಕ್ತಿಯ ದೇಹದಿಂದ ಶಬ್ದ ಬರುತ್ತಿರುವುದು ಅವರಿಗೆ ಗೊತ್ತಾಗಿದೆ.

    ದೇಹದಲ್ಲಿ ಶಬ್ದ ಬರುತ್ತಿದೆ ಎಂದರೇ ಈತ ಬದುಕಿದ್ದಾನೆ ಎಂದು ತಿಳಿದ ಫೋಟೋಗ್ರಾಫರ್ ಟಾಮಿ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಆತನನ್ನು ತ್ರಿಶೂರ್ ನಲ್ಲಿರುವ ಜುಬಿಲಿ ಮಿಷನ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಆತನನ್ನು ಐಸಿಯುನಲಿಟ್ಟು ಚಿಕಿತ್ಸೆ ಮಾಡಿದ್ದಾರೆ. ಈಗ ಆತ ಬದುಕುಳಿದಿದ್ದಾನೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ವರದಿಯ ಪ್ರಕಾರ, ಪಾಲಕ್ಕಾಡ್ ಮೂಲದ ಶಿವದಾಸನ್ ಮನಾಲಿಮುಕ್ಕುವಿನ ಬಾಡಿಗೆ ವಸತಿಗೃಹದಲ್ಲಿ ಏಕಾಂಗಿಯಾಗಿ ವಾಸವಿದ್ದರು. ಶಿವದಾಸನ್ ತಲೆಗೆ ಪೆಟ್ಟಾಗಿ ಮನೆಯಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಈ ವೇಳೆ ಅವರ ಮನೆಗೆ ಬಂದ ಶಿವದಾಸನ್ ಅವರ ಪರಿಚಯಸ್ಥನೊಬ್ಬ, ಅವರು ಬಿದ್ದಿರುವುದನ್ನು ನೋಡಿ ಭಯದಿಂದ ಶಿವದಾಸನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ ಆತನನ್ನು ನೋಡಲು ಹೋಗದ ಪೊಲೀಸರು ಶವದ ಫೋಟೋ ತೆಗೆಸಲು ಫೋಟೋಗ್ರಾಫರ್ ಅನ್ನು ಕರೆದುಕೊಂಡು ಬಂದಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಫೋಟೋಗ್ರಾಫರ್ ಟಾಮಿ, ನಾನು ಮನೆಗೆ ಹೋದಾಗ ಅವರು ಹಿಂಬದಿಯಾಗಿ ಬಿದ್ದಿದ್ದರು. ಅವರು ಏನೋ ಕೆಲಸ ಮಾಡಲು ಹೋಗಿ ಅವರ ಮಂಚಕ್ಕೆ ತಲೆಯನ್ನು ಬಡಿದುಕೊಂಡಿದ್ದಾರೆ. ಇದರಿಂದ ಪ್ರಜ್ಞೆತಪ್ಪಿದ್ದಾರೆ. ನಂತರ ನಾನು ಸ್ಥಳಕ್ಕೆ ಹೋದಾಗ ಫೋಟೋ ತೆಗೆಯಲು ಕತ್ತಲಿದೆ ಎಂದು ಲೈಟ್ ಆನ್ ಮಾಡಿದೆ. ಆಗ ಆತನ ಮೇಲೆ ಬೆಳಕು ಬಿದ್ದು ಆತನಿಗೆ ಎಚ್ಚರವಾಗಿದೆ. ನಾನು ಫೋಟೋ ಕ್ಲಿಕ್ ಮಾಡುವಾಗ ಆತ ಶಬ್ದ ಮಾಡಿದ. ಆಗ ನನಗೆ ಆತ ಬದುಕಿದ್ದಾನೆ ಎಂದು ಗೊತ್ತಾಯ್ತು ಎಂದು ಹೇಳಿದ್ದಾರೆ.

  • ಫೋಟೋಗ್ರಾಫರ್‌ಗಳನ್ನು ನೋಡಿ ಓಡಿ ಹೋದ ದಿಶಾ: ವಿಡಿಯೋ

    ಫೋಟೋಗ್ರಾಫರ್‌ಗಳನ್ನು ನೋಡಿ ಓಡಿ ಹೋದ ದಿಶಾ: ವಿಡಿಯೋ

    ಮುಂಬೈ: ಬಾಲಿವುಡ್ ಬೆಡಗಿ ದಿಶಾ ಪಠಾಣಿ ಫೋಟೋಗ್ರಾಫರ್‌ಗಳನ್ನು ನೋಡಿ ಓಡಿ ಹೋದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಭಾನುವಾರ ದಿಶಾ ತಮ್ಮ ಕಾರಿನಿಂದ ಇಳಿದು ಕಟ್ಟಡವೊಂದಕ್ಕೆ ಹೋಗುತ್ತಿರುತ್ತಾರೆ. ಈ ವೇಳೆ ಛಾಯಾಗ್ರಾಹಕರು ದಿಶಾ ಅವರ ಫೋಟೋ ಕ್ಲಿಕ್ಕಿಸಲು ನಟಿಯನ್ನು ಕರೆಯುತ್ತಾರೆ. ಛಾಯಾಗ್ರಾಹಕರು ಕರೆಯುತ್ತಿದ್ದಂತೆ ನಟಿ ಬಿಲ್ಡಿಂಗ್ ಒಳಗೆ ಓಡಿ ಹೋಗಿದ್ದಾರೆ. ಬಳಿಕ ಕಟ್ಟಡದೊಳಗೆ ದಿಶಾ ಫೋಟೋಗೆ ಪೋಸ್ ನೀಡಿದ್ದಾರೆ.

     

    View this post on Instagram

     

    #dishapatani Clicked at Pvr in #juhu . #yogenshah @yogenshah_s

    A post shared by yogen shah (@yogenshah_s) on

    ದಿಶಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರ ಬಾಡಿಗಾರ್ಡ್ ಫೋಟೋಗ್ರಾಫರ್ ವಿರುದ್ಧ ಗರಂ ಆಗಿದ್ದಾರೆ. ದಿಶಾ ತಮ್ಮ ಕಾರಿನಲಲಿ ಕುಳಿತುಕೊಳ್ಳಲು ಹೋಗುವಾಗ ಛಾಯಾಗ್ರಾಹಕರೊಬ್ಬರು ನಟಿಯ ಕಾರಿನ ಬಾಗಿಲಿನ ಬಳಿ ನಿಂತು ಫೋಟೋ ಕ್ಲಿಕ್ಕಿಸಿದ್ದಾರೆ. ಇದನ್ನು ನೋಡಿದ ದಿಶಾ ಬಾಡಿಗಾರ್ಡ್ ಛಾಯಾಗ್ರಾಹಕರನ್ನು ತಳ್ಳಿ ಗರಂ ಆಗಿ ವರ್ತಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಡಿಗಾರ್ಡ್ ವರ್ತನೆಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ‘ಮಲಂಗ್’ ಚಿತ್ರದಲ್ಲಿ ದಿಶಾ ಅವರ ನಟನೆ ನೋಡಿ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದಿಶಾ ಈಗ ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ನಟನೆಯ `ರಾಧೆ- ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.

  • ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ಪ್ರಧಾನಿ ಮೋದಿಗೆ ಪಾವಗಡದ ಫೋಟೋಗ್ರಾಫರ್

    ತುಮಕೂರು: ಪ್ರಧಾನಿ ಮೋದಿ ಕಲ್ಪತರುನಾಡು ತುಮಕೂರಿಗೆ ನಿನ್ನೆಯಷ್ಟೇ ಭೇಟಿ ನೀಡಿದ್ದರು. ಇದೇ ವೇಳೆ ಪ್ರಧಾನಿಗಳ ಜೊತೆಗಿದ್ದ ಫೋಟೋಗ್ರಾಫರ್ ಕೂಡ ಜಿಲ್ಲೆಯ ಪಾವಗಡ ತಾಲೂಕಿನವರು ಎಂಬ ವಿಚಾರ ಬಹಿರಂಗಗೊಂಡಿದೆ.

    ಪಾವಗಡ ತಾಲೂಕಿನ ಓಬಳಾಪುರ ಮೂಲದ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನಿ ಮೋದಿಯವರ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲೂ ಲೋಕನಾಥ್ ಅವರೇ ಛಾಯಾಗ್ರಾಹಕರಾಗಿದ್ದಾರೆ. ಪ್ರಧಾನಿ ಕಾರ್ಯಾಲಯದ ಪ್ರಸಾರ ಭಾರತಿ ಉದ್ಯೋಗಿ ಹಾಗೂ ಇಲಾಖೆಯ ಪ್ರಧಾನ ಫೋಟೋ ಹಾಗೂ ವೀಡಿಯೋಗ್ರಾಫರ್ ಎಂಬ ಮಾಹಿತಿ ತಿಳಿದು ಬಂದಿದೆ. ಯಡಲಮ್ ಕೃಷ್ಣಮೂರ್ತಿ ಅವರ ತಂದೆ ಹೆಸರಾಗಿದ್ದು, ತಮ್ಮ ಹೆಸರಿನ ಆರಂಭದಲ್ಲಿ ತಂದೆಯ ಹೆಸರು ಸೇರಿಸಿಕೊಂಡು ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ಎಂದು ಗುರುತಿಸಿಕೊಂಡಿದ್ದಾರೆ.

    ಪಾವಗಡ ತಾಲೂಕಿನ ಓಬಳಾಪುರ ಇವರ ಮೂಲವಾಗಿದ್ದು, ತಂದೆ ಯಡಲಮ್ ಕೃಷ್ಣಮೂರ್ತಿ, ತಾಯಿಯ ಹೆಸರು ರತ್ನಮ್ಮ. ಓಬಳಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಪಾವಗಡ ಪಟ್ಟಣದಲ್ಲಿ ಪ್ರೌಢ ಶಿಕ್ಷಣ ಪಡೆದ ಇವರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಬೆಂಗಳೂರಲ್ಲಿ ಫೋಟೋಗ್ರಾಫಿ ಕಲಿತು ಪ್ರಸಾರ ಭಾರತಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ತಮ್ಮ ತವರು ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಲೋಕನಾಥ್ ಅವರು, ಜ.2ರಂದು ತುಮಕೂರಿಗೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ನಾಡಿನ ಜನರಲ್ಲಿ ಅಚ್ಚರಿ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  • ಓದಿದ್ದು ಎಂಜಿನಿಯರಿಂಗ್ ಆಗಿದ್ದು ಖ್ಯಾತ ಮದ್ವೆ ಫೋಟೋಗ್ರಾಫರ್

    ಓದಿದ್ದು ಎಂಜಿನಿಯರಿಂಗ್ ಆಗಿದ್ದು ಖ್ಯಾತ ಮದ್ವೆ ಫೋಟೋಗ್ರಾಫರ್

    – ವಿರುಷ್ಕಾ ಜೋಡಿಯ ಮದ್ವೆ ಫೋಟೋಗ್ರಾಫರ್ ಕಥೆ
    – ಹವ್ಯಾಸವನ್ನೇ ವೃತ್ತಿಯನ್ನಾಗಿಸಿದ ‘ಕ್ಲಿಕ್ಕ’ರ್
    – ವೃತ್ತಿಯಿಂದಾಗಿ ವಿಶ್ವವನ್ನೇ ಸುತ್ತುವ ಭಾಗ್ಯ

    ಮುಂಬೈ: ವೃತ್ತಿ ಜೊತೆ ಬೆಳೆಸಿಕೊಂಡ ಹವ್ಯಾಸವೇ ಕೆಲವೊಮ್ಮೆ ವೃತ್ತಿಯಾಗಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ವಿರುಷ್ಕಾ ಮದುವೆಯ ಪೋಟೋಗ್ರಾಫರ್. ಅವರು ಓದಿದ್ದು ಎಂಜಿನಿಯರ್ ಪದವಿ. ಆದರೆ ಆಗಿದ್ದು ಮದುವೆ ಫೋಟೋಗ್ರಾಫರ್.

    2017 ಡಿ.11 ರಂದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಖ್ಯಾತ ಜೋಡಿಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಈ ಫೋಟೋಗಳನ್ನು ಸೆರೆಹಿಡಿದ ಫೋಟೋಗ್ರಾಫರ್ ಜೋಸೆಫ್ ರಾಧಿಕ್ ತಮ್ಮ ಕೆಲಸದ ಕುರಿತು ಮಾತನಾಡಿದ್ದಾರೆ.

    https://www.instagram.com/p/BckS2WtA3jF/?utm_source=ig_embed&utm_campaign=dlfix

    ಜೋಸೆಫ್ ರಾಧಿಕ್ ಅವರು ವಿರುಷ್ಕಾ ಜೋಡಿಯ ಮದುವೆಯ ಸವಿ ನೆನಪುಗಳನ್ನು ಸೆರೆ ಹಿಡಿದಿದ್ದು, ತಮ್ಮ ಫೋಟೋಗಳು ವಿಶೇಷವಾಗಿರಲು ಹಾಗೂ ಅಷ್ಟು ಮೆಚ್ಚುಗೆ ಪಡೆಯಲು ಕಾರಣವೇನು ಎಂಬುವುದನ್ನು ರಿವೀಲ್ ಮಾಡಿದ್ದಾರೆ. ಎಂಜಿನಿಯರಿಂಗ್ ಪದವಿ ಪಡೆದಿರುವ ರಾಧಿಕ್ ನೆಚ್ಚಿನ ಫೋಟೋಗ್ರಾಫಿಯನ್ನು ವೃತ್ತಿಯಾಗಿಸಿಕೊಂಡಿದ್ದ ಕುರಿತು ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಕಾಲೇಜು ಸಮಯದಲ್ಲಿ ನಾನು ನನ್ನ 1 ಮೆಗಾಪಿಕ್ಸೆಲ್ ಕ್ಯಾಮೆರಾದಿಂದ ಕೇವಲ 3 ವಿಷಯಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಸೂರ್ಯಾಸ್ತ, ಜೀವಿಗಳು ಹಾಗೂ ಹೂಗಳ ಫೋಟೋಗಳನ್ನು ಮಾತ್ರ ತೆಗೆಯುತ್ತಿದ್ದೆ. ಆದರೆ ಎಂದು ಇದನ್ನು ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎಂದು ತಿಳಿದಿರಲಿಲ್ಲ. ಆದರೆ ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿದ್ದು, ಸಹೋದರಿಯ ಮದುವೆ ಕಾರ್ಯಕ್ರಮ. ಈ ವೇಳೆ ಭಾರತದಲ್ಲಿ ಮದುವೆ ಫೋಟೋಗ್ರಾಫಿ ತುಂಬಾ ದೂರ ಸಾಗಬೇಕಿದೆ ಎನ್ನಿಸಿತ್ತು. ನನ್ನ ಸಹೋದರಿ ಮದುವೆ ಫೋಟೋ ಮಾತ್ರವಲ್ಲದೇ ಗೆಳೆಯರ ಮದುವೆಯ ಫೋಟೋಗಳನ್ನು ನಾನು ತೆಗೆದಿದ್ದೆ. ಆ ಫೋಟೋಗಳಿಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

    ನಾನು ಪ್ರತಿ ಜೋಡಿಯ ಫೋಟೋಗಳನ್ನು ತೆಗೆಯುವ ಸಂದರ್ಭದಲ್ಲಿ ಅದನ್ನು ಅವರ ಸ್ನೇಹಿತನೇ ತೆಗೆದಿದ್ದು ಎಂಬ ಭಾವನೆ ಅವರಿಗೆ ಮೂಡಲು ಬಯಸುತ್ತೇನೆ. ಫೋಟೋಗಳಲ್ಲಿ ನೈಜತೆ ಹಾಗೂ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತೇನೆ.  ಇದುವೇ ನನ್ನ ಫೋಟೋಗಳು ಹೆಚ್ಚು ಇಷ್ಟವಾಗಲು ಸಹಾಯಕವಾಗಿದೆ. ವಿರುಷ್ಕಾರ ಮದುವೆಯಲ್ಲೂ ಪ್ರೀತಿಯ ನೈಜ ಅಂಶ ಕಾಣಸಿಗುತ್ತದೆ.

    https://www.instagram.com/p/BckS2N4gsql/?utm_source=ig_embed&utm_campaign=dlfix

    ನಾನು ಉತ್ತಮ ಶಿಕ್ಷಣವನ್ನು ಪಡೆದಿದ್ದ ಕುಟುಂಬದಿಂದ ಬಂದಿದ್ದು, ನನ್ನ ತಂದೆ-ತಾಯಿ ಇಬ್ಬರು ಉನ್ನತ ಶಿಕ್ಷಣವನ್ನು ಪಡೆದಿದ್ದಾರೆ. ಅವರು ತಮ್ಮ ಮಕ್ಕಳು ಉತ್ತಮ ಸಾಧನೆ ಮಾಡಲು ಬಯಸಿದ್ದರು. ಆದರೆ ಎಂದೂ ಮಕ್ಕಳ ಕ್ರಿಯೆಟಿವಿಟಿಯನ್ನು ತಡೆಯುವ ಯತ್ನ ಮಾಡಲಿಲ್ಲ. ನನ್ನ ಬಾಲ್ಯದಲ್ಲಿ ಚಿತ್ರಕಲೆಯಿಂದ ಪೈಲಟ್ ಆಗುವವರೆಗಿನ ಎಲ್ಲಾ ಯೋಚನೆಗಳನ್ನು ನಾನು ಮಾಡಿದ್ದೆ. ಆದರೆ ಯಾವುದೂ ನನಗೆ ಸರಿ ಎನಿಸಲಿಲ್ಲ. ಆ ವೇಳೆ ಫೋಟೋ ಜರ್ನಲಿಸ್ಟ್ ಆಗಿದ್ದ ಚಿಕ್ಕಪ್ಪ ಅವರು ಕಳುಹಿಸುತ್ತಿದ್ದ ಫೋಟೋಗಳು, ನ್ಯಾಷನಲ್ ಜಿಯೋಗ್ರಾಫಿಕ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದದ್ದು ನನ್ನನ್ನು ಆಕರ್ಷಿಸಿತ್ತು. ಇದುವೇ ನನಗೆ ಫೋಟೋಗ್ರಾಫರ್ ಆಗಲು ಪ್ರೇರಣೆ ಎನ್ನಬಹುದು. ಆ ಬಳಿಕ ಶಿಕ್ಷಣದಲ್ಲಿ ನಾನು ಇಷ್ಟಪಟ್ಟು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದೆ.

    ಫೋಟೋಗ್ರಾಫಿ ನನ್ನ ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಬೆಳೆದು ಬಂದಿತ್ತು. ಆದರೆ ನನ್ನ ಬಾಸ್ ಒಮ್ಮೆ ಮುಂದಿನ 5 ವರ್ಷದ ಯೋಜನೆ ಬಗ್ಗೆ ಪ್ರಶ್ನೆ ಮಾಡಿದ್ದರು. ಏಕೆಂದರೆ ಅದು ನನ್ನ ಮುಂದಿನ 40 ವರ್ಷ ನಾನು ಮಾಡಬೇಕಾಗಿದ್ದ ಕಾರ್ಯವಾಗಿತ್ತು. ಆದರೆ ನನ್ನ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಗಿದ್ದು, ನನ್ನ ಸಹೋದರಿಯ ಮದುವೆ. ಈ ವೇಳೆ ಫೋಟೋಗ್ರಾಫಿ ಮಾಡಲು ಸಾಮಾಜಿಕ ಜಾಲತಾಣದಲ್ಲಿ ನಾನು ಸರ್ಚ್ ಮಾಡಿದ್ದೆ. ಇದು ನನಗೆ ಹೊಸ ಪ್ರಪಂಚವನ್ನು ತೆರೆದಿಟ್ಟಿತ್ತು. ಅಲ್ಲದೇ ಭಾರತದಲ್ಲಿ ವೆಡ್ಡಿಂಗ್ ಫೋಟೋಗ್ರಾಫಿ ಬಗ್ಗೆಯೂ ತಿಳಿಸಿತ್ತು. ಮದುವೆಗೆ ಫೋಟೋಗ್ರಾಫರ್ ಬುಕ್ ಮಾಡಿದ್ದರು. ನನ್ನದೇ ಆದ ಕೆಲ ಫೋಟೋಗಳನ್ನು ತೆಗೆದುಕೊಂಡಿದ್ದೆ. ಈ ಫೋಟೋಗಳಿಗೆ ಹೆಚ್ಚು ಮೆಚ್ಚುಗೆ ಬಂದಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ ಹಲವರು ನನ್ನನ್ನು ಸಂಪರ್ಕಿಸಿದ್ದರು.

    https://www.facebook.com/humansofbombay/photos/a.253147214894263/1214501375425504/?type=3&theater

    ಆ ಬಳಿಕ ಕೆಲಸವನ್ನು ಬಿಟ್ಟು ಹಲವು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದೆ. ಕೆಲವೇ ಸಮಯದಲ್ಲಿ ಫೋಟೋಗ್ರಾಫಿ ನನ್ನ ವೃತ್ತಿಯಾಯಿತು. ಈ ವೇಳೆಯೇ ನನಗೆ ವಿರುಷ್ಕಾ ಅವರ ಮದುವೆ ಕಾರ್ಯಕ್ರಮ ಫೋಟೋ ತೆಗೆಯುವ ಅವಕಾಶ ಲಭಿಸಿತ್ತು. ವಿರುಷ್ಕಾರ ಮದುವೆ ಫೋಟೋಗಳಲ್ಲಿ ಅವರ ಪ್ರೀತಿಯ ನೈಜ ಅಂಶ ಕಂಡು ಬಂದಿದ್ದೇ ಎಲ್ಲರಿಗೂ ಇಷ್ಟವಾಗಲು ಕಾರಣವಾಯಿತು. ಇಂದು ನಾನು ವಿಶ್ವದ ಬೇರೆ ಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳೆಸಿ ಅನುಭವಗಳನ್ನು ಪಡೆಯುವ ಮೂಲಕ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಈ ಸಮಯದಲ್ಲಿ ನನಗೆ ಅನ್ನಿಸಿದ್ದು ಇಷ್ಟೇ. ಜೀವನ ನಮಗೆ ಹೆಚ್ಚು ಅವಕಾಶಗಳನ್ನು ನೀಡುವುದಿಲ್ಲ. ಆದರೆ ಒಮ್ಮೆ ಆ ಅವಕಾಶ ಲಭಿಸಿದಾಗ ಅದನ್ನು ಪ್ರೀತಿಯಿಂದ ಬಾಚಿಕೊಳ್ಳಬೇಕು. ಈ ಪ್ರಯಾಣವನ್ನು ಯಾಕೆ ಪ್ರಾರಂಭಿಸಿದ್ದೀರಿ ಎಂಬುವುದನ್ನು ನೀವು ಎಂದಿಗೂ ಮರೆಯದಿದ್ದರೆ ಎಲ್ಲವನ್ನೂ ಮಾಡಬಹುದು.

  • ಅನುಷ್ಕಾ ನಮ್ಮ ಕೆಲಸ ಕಸಿದುಕೊಂಡಿದ್ದಾರೆ- ನಟಿ ವಿರುದ್ಧ ದೂರು

    ಅನುಷ್ಕಾ ನಮ್ಮ ಕೆಲಸ ಕಸಿದುಕೊಂಡಿದ್ದಾರೆ- ನಟಿ ವಿರುದ್ಧ ದೂರು

    ಮುಂಬೈ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಮ್ಮ ಕೆಲಸ ಕಸಿದುಕೊಳ್ಳುತ್ತಿದ್ದಾರೆ ಎಂದು ಸೆಲೆಬ್ರಿಟಿ ಫೋಟೋಗ್ರಾಫರ್ ಕಮೆಂಟ್ ಮಾಡುವ ಮೂಲಕ ದೂರು ನೀಡಿದ್ದಾರೆ.

    ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ವಿರಾಟ್ ಫೋಟೋ ಪೋಸ್ಟ್ ಮಾಡಿ ಅನುಷ್ಕಾ ಶರ್ಮಾ ಅವರಿಗೆ ಪಿಕ್ ಕ್ರೆಡಿಟ್ ಕೊಡುತ್ತಿದ್ದರು. ಇದನ್ನು ನೋಡಿ ಸೆಲೆಬ್ರಿಟಿ ಫೋಟೋಗ್ರಾಫರ್ ವಿರಾಟ್ ಪೋಸ್ಟ್ ನಲ್ಲಿ ಅನುಷ್ಕಾ ವಿರುದ್ಧ ದೂರು ನೀಡಿದ್ದಾರೆ.

    ಸೆಲೆಬ್ರಿಟಿ ಫೋಟೋಗ್ರಾಫರ್ ಅತುಲ್ ಕೆಸ್ಬಕರ್ ವಿರಾಟ್ ಅವರ ಪೋಸ್ಟ್ ನಲ್ಲಿ ‘ಅನುಷ್ಕಾ ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಕಮೆಂಟ್ ಮಾಡುವ ಮೂಲಕ ಅನುಷ್ಕಾ ಅವರನ್ನು ದೂರಿದ್ದಾರೆ. ಅತುಲ್ ಕಮೆಂಟ್ ನೋಡಿದ ಜನರು, ‘ಹೌದು, ನಿಜ’ ಎಂದು ರಿಪ್ಲೈ ಮಾಡುತ್ತಿದ್ದಾರೆ.

     

    View this post on Instagram

     

    ????❄️. Pic credit once again @anushkasharma ????❤️

    A post shared by Virat Kohli (@virat.kohli) on

    ಇತ್ತೀಚೆಗೆ ವಿರಾಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅನುಷ್ಕಾ ಕಪ್ಪು ಬಣ್ಣದ ಸನ್ ಗ್ಲಾಸ್ ಮತ್ತು ಬಿಕಿನಿ ಧರಿಸಿದ್ದರೆ, ವಿರಾಟ್ ಶರ್ಟ್ ಲೆಸ್ ಆಗಿ ಪತ್ನಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ವಿರಾಟ್ ಈ ಫೋಟೋವನ್ನು ಟ್ವೀಟ್ ಮಾಡಿ ಹಾರ್ಟ್ ಎಮೋಜಿ ಹಾಕಿದ್ದರು.

     

    View this post on Instagram

     

    Caught in the moment. Pic credit @anushkasharma ❤️

    A post shared by Virat Kohli (@virat.kohli) on

    ಇತ್ತ ಅನುಷ್ಕಾ ಶರ್ಮಾ ಅವರು ಇತ್ತೀಚೆಗೆ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು. ವಿರಾಟ್ ಅವರು ಅನುಷ್ಕಾ ಅವರ ಫೋಟೋಗೆ ಹಾರ್ಟ್ ಎಮೋಜಿ ನೀಡುವ ಮೂಲಕ ಕಮೆಂಟ್ ಮಾಡಿದ್ದರು.