Tag: photo

  • ಅಭಿಮಾನಿಗಳಿಗಾಗಿ ಮಗಳ ಫೋಟೋ ಹಂಚಿಕೊಂಡ ಧ್ರುವ ಸರ್ಜಾ ಪತ್ನಿ

    ಅಭಿಮಾನಿಗಳಿಗಾಗಿ ಮಗಳ ಫೋಟೋ ಹಂಚಿಕೊಂಡ ಧ್ರುವ ಸರ್ಜಾ ಪತ್ನಿ

    ನಾಲ್ಕುವರೆ ತಿಂಗಳ ನಂತರ ನಟ  ಧ್ರುವ ಸರ್ಜಾ ಪತ್ನಿ ಪ್ರೇರಣಾ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಮಗಳನ್ನು ಪರಿಚಯಿಸಿದ್ದಾರೆ. ಅಕ್ಟೋಬರ್ 2ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪ್ರೇರಣಾ, ತಮ್ಮ ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆ ಎಂದು ಬರೆದುಕೊಂಡಿದ್ದರು.

    ಧ್ರುವ ಸರ್ಜಾ ಪುತ್ರಿ ಹೇಗಿರಬಹುದು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಆಗಾಗ್ಗೆ ಮಗಳ ಬಗ್ಗೆ ಮಾಹಿತಿಯನ್ನೂ ಅಭಿಮಾನಿಗಳು ಕೇಳುತ್ತಿದ್ದರು. ಯಾವಾಗ ಮಗಳ ಮುಖವನ್ನು ತೋರಿಸುತ್ತೀರಿ ಎಂದು ಹಲವಾರು ಬಾರಿ ಪ್ರಶ್ನೆ ಮಾಡಿದ್ದೂ ಇದೆ. ಆ ಅಭಿಮಾನಿಗಳ ಆಸೆಯನ್ನು ಇದೀಗ ಅವರು ಈಡೇರಿಸಿದ್ದಾರೆ. ಮಗಳಿಗೆ ನಿಮ್ಮೆಲ್ಲರ ಪ್ರೀತಿ ಇರಲಿ ಎಂದು ಪ್ರೇರಣಾ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಕೂಡ ʻಕಾಂತಾರʼ ಸಿನಿಮಾ ನೋಡಿದೆ: ಅಮಿತ್‌ ಶಾ

    ಧ್ರುವ ಸರ್ಜಾ ಸದ್ಯ ‘ಕೆಡಿ’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರೀಕರಣದ ನಡುವೆಯೂ ಮಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುತ್ತಾರಂತೆ. ನಾಲ್ಕುವರೆ ತಿಂಗಳ ಮಗುವಿನ ಜೊತೆ ಆಟ ಆಡುವುದೇ ಸೊಗಸು ಎಂದು ಹಲವಾರಿ ಬಾರಿ ಅವರ ಆಪ್ತರ ಜೊತೆ ಮಾತನಾಡಿದ್ದಾರೆ. ತಮ್ಮ ಮಗಳು ಮತ್ತು ಸಹೋದರ ಚಿರು ಸರ್ಜಾ ಮಗನ ಜೊತೆ ಧ್ರುವ ವೀಕೆಂಡ್ ಅನ್ನು ಕಳೆಯುತ್ತಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್

    ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವಿದ್ಯಾರ್ಥಿ ಅರೆಸ್ಟ್

    ಬೆಂಗಳೂರು: ವಿದ್ಯಾರ್ಥಿನಿಯರ ಅರೆನಗ್ನ ವೀಡಿಯೋಗಳನ್ನು ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಶುಭಂ ಎಂ ಆಜಾದ್ ಎಂದು ಗುರುತಿಸಲಾಗಿದೆ. ಈತ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ.

    ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಕೃತ್ಯ ಎಸಗುತ್ತಿದ್ದ. ಹೀಗೆ 1,200 ಕ್ಕೂ ಅಧಿಕ ವೀಡಿಯೋ (Girls Video) ಹಾಗೂ ಫೋಟೋ (Photo) ಚಿತ್ರೀಕರಿಸಿದ್ದಾನೆ. ಸ್ನೇಹಿತೆಯರು ಜೊತೆಯಲ್ಲಿದ್ದಾಗಲೂ ಅವರ ಅರೆನಗ್ನ ಫೋಟೋ ತೆಗೆದಿದ್ದ.

    ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ ಯುವತಿಯರು ಚೀರಾಡಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಿದ್ದ. ಬಳಿಕ ಸಿಸಿಟಿವಿ (CCTV) ಪರಿಶೀಲನೆ ವೇಳೆ ಶುಭಂ ಕೃತ್ಯ ಬೆಳಕಿಗೆ ಬಂದಿದೆ. ಈ ಹಿಂದೆಯೂ ಇದೇ ರೀತಿ ಮಾಡಿ ಕ್ಷಮೆಯಾಚನೆ ಬರೆದುಕೊಟ್ಟಿದ್ದ. ಇದನ್ನೂ ಓದಿ: ಅತ್ಯಾಚಾರಿ, ಕೊಲೆಗಡುಕರ ತಂದೆ ತಾಯಿಗಳನ್ನು ಒಂದೆರಡು ವರ್ಷ ಶಿಕ್ಷಿಸಿ: ಬಿಜೆಪಿ MLA ಆಕಾಶ್

    ಇದೀಗ ಮತ್ತೆ ತನ್ನ ಚಾಳಿ ಮುಂದುವರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತನ ಮೊಬೈಲ್ ನಲ್ಲಿ 1,200 ಕ್ಕೂ ಅಧಿಕ ವೀಡಿಯೋ ಹಾಗೂ ಫೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವೀಡಿಯೋಗಳು ಪತ್ತೆಯಾಗುವ ಸಾಧ್ಯತೆ ಇದೆ.

    ಸದ್ಯ ಗಿರಿನಗರ ಪೊಲೀಸ್ ಠಾಣೆ (Girinagar Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚರಣೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

    ಕಾಂಗ್ರೆಸ್ ಟಿಕೆಟ್‍ಗೆ ಜೈಲಿನಿಂದಲೇ ಅರ್ಜಿ ಸಲ್ಲಿಸಿದ ಎಸ್.ಕೆ ಬಸವರಾಜನ್

    ಚಿತ್ರದುರ್ಗ: ಜೈಲಿನಲ್ಲಿದ್ದುಕೊಂಡೇ (Jail) ಮಾಜಿ ಶಾಸಕ ಎಸ್. ಕೆ ಬಸವರಾಜನ್  (SK Basavarajan) ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ.

    ಮುರುಘಾ ಮಠದಲ್ಲಿ (Murugha Mutt)  ಫೋಟೋಗಳು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ (Police) ವಶದಲ್ಲಿರುವ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಬೆಂಬಲಿಗರ ಮೂಲಕ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿಯನ್ನು ಕೆಪಿಸಿಸಿ ಕಚೇರಿಗೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ರೂ. ಬಿಲ್ಡಿಂಗ್ ಫಂಡ್ ನೀಡಿ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ.

    ಎಸ್.ಕೆ. ಬಸವರಾಜನ್ 2008ರಲ್ಲಿ ಜೆಡಿಎಸ್‍ನಿಂದ ಚಿತ್ರದುರ್ಗ ಶಾಸಕರಾಗಿದ್ದರು. ಅದಾದ ಬಳಿಕ 2013ರಲ್ಲಿ ಜೆಡಿಎಸ್ (JDS) ಅಭ್ಯರ್ಥಿಯಾಗಿ ಸೋತಿದ್ದು, 2018ರಲ್ಲಿ ಎಸ್.ಕೆ ಬಸವರಾಜನ್ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಇದೀಗ 2023ಕ್ಕೆ ಕಾಂಗ್ರೆಸ್ (Congress) ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಸಾವು ಪ್ರಕರಣ – ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಕೆ

    ಪೊಲೀಸ್ ವಶದಲ್ಲಿ ಬಸವರಾಜನ್: ದಸರಾ ಉತ್ಸವದ ಅಂಗವಾಗಿ ನಡೆದ ಪೀಠಾರೋಹಣದ ಹಿಂದಿನ ದಿನ ಅ.5ರ ಮಧ್ಯರಾತ್ರಿ ವೇಳೆ ರಾಜಾಂಗಣದಲ್ಲಿ ಗೋಡೆಗೆ ಹಾಕಿದ್ದ 47 ಫೋಟೋಗಳು (Photo) ಕಳ್ಳತನವಾಗಿದ್ದವು. ಧಾರ್ಮಿಕ ಮುಖಂಡರು, ರಾಷ್ಟ್ರಪತಿ, ಪ್ರಧಾನಿ, ಹಾಗೂ ರಾಜ್ಯದ ಸಿಎಂಗಳ ಜೊತೆಗಿನ ಮುರುಘಾಶ್ರೀ ಫೋಟೋಗಳನ್ನು ಕಳ್ಳರು ಕದ್ದೊಯ್ದಿದ್ದರು. ಆ ಬಳಿಕ ವಿಚಾರಣೆ ಆರಂಭಿಸಿದ ಪೊಲೀಸರು ನ.7ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

    ಹೊಸಹಳ್ಳಿ ಗ್ರಾ.ಪಂ ಸದಸ್ಯ ಮೋಹನ ಮೂರ್ತಿ ಅಲಿಯಾಸ್ ಸ್ವಾಮಿ, ಎಸ್‍ಜೆಎಮ್ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದ ಸ್ವಾಮಿಯನ್ನು ಫೋಟೋ ಕಳವು ಮಾಡಿದ ಆರೋಪದಡಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಬಸವರಾಜನ್ ಫೋಟೋವನ್ನು ಕಳವು ಮಾಡುವಂತೆ ಪ್ರಚೋದನೆ ನೀಡಿದ್ದರು ಎಂಬ ಸತ್ಯ ಒಪ್ಪಿಕೊಂಡಿದ್ದರು. ಹಾಗಾಗಿ ಪೊಲೀಸರು ಬಸವರಾಜನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: 25ನೇ ಬೆಂಗಳೂರು ಟೆಕ್ ಸಮ್ಮಿಟ್- ಕನ್ನಡದಲ್ಲಿಯೇ ಮಾತು ಶುರು ಮಾಡಿದ ಪ್ರಧಾನಿ ಮೋದಿ

    Live Tv
    [brid partner=56869869 player=32851 video=960834 autoplay=true]

  • ಹೆಗಲ ಮೇಲೆ ಮೇಕೆ ಹೊತ್ತ ರಾಹುಲ್ – ಫೋಟೋ ವೈರಲ್

    ಹೆಗಲ ಮೇಲೆ ಮೇಕೆ ಹೊತ್ತ ರಾಹುಲ್ – ಫೋಟೋ ವೈರಲ್

    ಹೈದರಾಬಾದ್: ಭಾರತ್ ಜೋಡೋ ಯಾತ್ರೆ (Bharat Jodo Yatra) ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹೆಗಲ ಮೇಲೆ ಮೇಕೆಯನ್ನು ಹೊತ್ತುಕೊಂಡಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ಫೋಟೋವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್  (Jairam Ramesh) ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ‘G.O.A.T’, ಎಂದು ಬರೆದುಕೊಂಡಿದ್ದಾರೆ. ಅಂದರೆ ಎಲ್ಲಾ ಸಮಯದಲ್ಲೂ ಶ್ರೇಷ್ಠ ವ್ಯಕ್ತಿ (ಗ್ರೇಟೆಸ್ಟ್ ಆಫ್ ಆಲ್ ಟೈಂ). ಇದನ್ನೂ ಓದಿ: ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

    ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳಕ್ಕೆ ಭೇಟಿ ನೀಡಿದ ನಂತರ ಈ ವಾರ ರಾಹುಲ್ ಗಾಂಧಿ ಅವರು ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ನಡೆಸುತ್ತಿದ್ದಾರೆ. ಇಂದು ಧರ್ಮಪುರದಿಂದ ಭಾರತ್ ಜೋಡೋ ಯಾತ್ರೆಯನ್ನು ಪುನಾರಂಭಿಸಿದ ರಾಹುಲ್ ಬುಡಕಟ್ಟು ಜನಾಂಗದವರೊಂದಿಗೆ ಸಾಂಪ್ರದಾಯಿಕ ನೃತ್ಯವನ್ನು ಮಾಡಿದ್ದಾರೆ.

    ಈ ನೃತ್ಯದ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು, ನಮ್ಮ ದೇಶದ ಆದಿವಾಸಿಗಳು, ನಮ್ಮ ಕಾಲಾತೀತ ಸಂಸ್ಕೃತಿಗಳು ಮತ್ತು ವೈವಿಧ್ಯತೆಯ ಭಂಡಾರ. ಕೋಯಾ ಬುಡಕಟ್ಟು ನೃತ್ಯಗಾರರೊಂದಿಗೆ ನೃತ್ಯ ಮಾಡಿ ಸಂತಸವಾಯಿತು. ಅವರ ಕಲೆ ಅವರ ಮೌಲ್ಯಗಳನ್ನು ತೋರಿಸುತ್ತದೆ. ನಾವು ಅದನ್ನು ಕಲಿಯಬೇಕು ಮತ್ತು ಸಂರಕ್ಷಿಸಬೇಕು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು.

    ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಕಾಶ್ಮೀರದವರೆಗೆ ನಡೆಯಲಿದೆ. ಈ 3500 ಕಿಮೀ ಪ್ರಯಾಣವು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಐದು ತಿಂಗಳ ಕಾಲ ಈ ಪಾದಯಾತ್ರೆ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್

    ಬಾತ್‍ರೂಮ್ ಚಪ್ಪಲಿಗೆ 54% ಆಫರ್ ನೀಡಿದ್ರೂ 8,990 ರೂ. ಬೆಲೆ – ಫೋಟೋ ವೈರಲ್

    ನವದೆಹಲಿ: ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ ಕಂಪನಿ ಬಿಡುಗಡೆ ಮಾಡಿರುವ ನೀಲಿ ಬಣ್ಣದ ಚಪ್ಪಲಿಯನ್ನು (Slippers) 54% ರಿಯಾಯಿತಿಯೊಂದಿಗೆ 8,990 ರೂ. ಮೌಲ್ಯಕ್ಕೆ ಮಾರಾಟಕ್ಕಿಟ್ಟಿರುವ ಫೋಟೋ (Photo) ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ ಆಗುತ್ತಿದೆ.

    ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಬ್ರ್ಯಾಂಡ್‍ಗಳು ತಮ್ಮ ಉತ್ಪನ್ನಗಳನ್ನು ವಿಶಿಷ್ಟ ಆಲೋಚನೆಯೊಂದಿಗೆ ಬಿಡುಗಡೆ ಮಾಡಿ ಹೆಚ್ಚು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ವಿವಿಧ ರೀತಿಯ ಆಕರ್ಷಕ ಬೆಲೆಯನ್ನು ಇಡುವ ಮೂಲಕ ಪ್ರಚಾರ ಪಡೆಯುತ್ತಿದೆ. ಅದೇ ರೀತಿ ಹ್ಯೂಗೋ ಬಾಸ್ ಬಿಡುಗಡೆ ಮಾಡಿರುವ ಚಪ್ಪಲಿ ನೋಡಲು ಬಾತ್‍ರೂಮ್ ಚಪ್ಪಲಿ ರೀತಿ ಇದ್ದು, 100ರಿಂದ 150 ರೂ. ಮೌಲ್ಯದ ರೀತಿ ಕಾಣುತ್ತಿದೆ. ಆದರೆ ಕಂಪನಿಯು ಈ ಚಪ್ಪಲಿಗೆ 54% ರಿಯಾಯಿತಿ ನೀಡಿ, 8,990 ರೂ.ಗೆ ಮಾರಾಟ ಮಾಡುತ್ತಿದೆ. ಆದರೆ ಇದರ ನಿಜವಾದ ಬೆಲೆ 19,500 ರೂ. ಆಗಿದೆ. ಇದೀಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಭಿನ್ನ ರೀತಿಯ ಕಾಮೆಂಟ್ ಮಾಡಿದ್ದಾರೆ.

    ನೆಟ್ಟಿಗನೊಬ್ಬ ಇದಕ್ಕೆ ಕಾಮೆಂಟ್ ಮಾಡಿ ಈ ಚಪ್ಪಲಿ 100 ರಿಂದ 150 ಕ್ಕಿಂತ ಹೆಚ್ಚು ಬೆಲೆ ಬಾಳುವುದಿಲ್ಲ. ಈ ಚಪ್ಪಲಿಗಿಂತಲೂ ಬೇರೆ ಚಪ್ಪಲಿಯೇ ಉತ್ತಮವಾಗಿ ಕಾಣುತ್ತದೆ ಎಂದು ಹೇಳಿದ್ದಾರೆ. ಇದು ಬಾತ್‍ರೂಮ್ ಚಪ್ಪಲಿ, ಸಣ್ಣ ಪುಟ್ಟ ಬಜಾರ್‌ಗಳಲ್ಲಿ ಜನರು 50 ರೂ.ಗೆ ಈ ಚಪ್ಪಲಿಯನ್ನು ಪಡೆಯಬಹುದು ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾನೆ. ಇದನ್ನೂ ಓದಿ: ಅ. 21ರಂದು ಹುಕ್ಕೇರಿಯಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ

    ಈ ಹಿಂದೆ ಬಾಲೆನ್ಸಿಯಗ ಕಂಪನಿ ಬಿಡುಗಡೆ ಮಾಡಿದ್ದ 1,42,652 ರೂ. ಮೌಲ್ಯದ ಕಸದ ಚೀಲ ವೈರಲ್ ಆಗಿತ್ತು. ಇದನ್ನೂ ಓದಿ: ಪ್ರೇಮಿಗಳನ್ನು ಒಂದು ಮಾಡುವುದಾಗಿ ನಂಬಿಸಿ ಕರೆದೊಯ್ದು ಮರ್ಯಾದಾ ಹತ್ಯೆ

    Live Tv
    [brid partner=56869869 player=32851 video=960834 autoplay=true]

  • ಲವ್, ಸೆಕ್ಸ್, ದೋಖಾ – ಮದುವೆ ನೆಪದಲ್ಲಿ ಮಹಿಳೆಯರ ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್

    ಲವ್, ಸೆಕ್ಸ್, ದೋಖಾ – ಮದುವೆ ನೆಪದಲ್ಲಿ ಮಹಿಳೆಯರ ನಗ್ನ ಫೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್

    ಜೈಪುರ: ಮದುವೆಯಾಗುವುದಾಗಿ ನಂಬಿಸಿ ಹಲವಾರು ಮಹಿಳೆಯರ ಮೇಲೆ 26 ವರ್ಷದ ಯುವಕ ಅತ್ಯಾಚಾರವೆಸಗಿರುವುದಾಗಿ ಘಟನೆ ರಾಜಸ್ಥಾನದ (Rajasthan) ಸಿಕಾರ್ (Sikar) ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಸಂದೀಪ್ ಗೋದಾರ ಎಂದು ಗುರುತಿಸಲಾಗಿದ್ದು, ವಿಚ್ಛೇದಿತ, ಅಂಗವಿಕಲ ಮತ್ತು ಒಂಟಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿಕೊಂಡು ಅತ್ಯಾಚಾರ ವೆಸಗಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು. ಆದರೀಗ ಈತನ ವಿರುದ್ಧ ಸಿಕರ್‍ನ ವಿವಾಹಿತ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

    Love

    ಆರೋಪಿ ಮದುವೆಯಾಗುವ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿ ನಂತರ ತನನ್ ಅಶ್ಲೀಲ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಕ್ಲಿಕ್ಕಿಸಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು ಎಂದು ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಹಿಂಸಾಚಾರ – ಬಿಜೆಪಿ ರಾಜ್ಯಾಧ್ಯಕ್ಷನ ಬಂಧನ

    ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ, ಮದುವೆಯಾಗುವ ನೆಪದಲ್ಲಿ ಅನೇಕ ಮಹಿಳೆಯರಿಗೆ ಆರೋಪಿ ಶೋಷಣೆ ಮಾಡಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯೊಬ್ಬರು ಫೇಸ್‍ಬುಕ್ ಮೂಲಕ ಆರೋಪಿ ಜೊತೆ ಸ್ನೇಹ ಬೆಳೆಸಿದ್ದೆ. ಶೀಘ್ರದಲ್ಲೇ ನಾವಿಬ್ಬರು ಮದುವೆಯಾಗೋಣ ಎಂದು ಇಬ್ಬರು ಮಾತನಾಡಿಕೊಂಡಿದ್ದೇವು. ಅಷ್ಟೇ ಅಲ್ಲದೇ ಮದುವೆಗೂ ಮುನ್ನವೇ ತನ್ನ ಆಧಾರ್ ಕಾರ್ಡ್ ಮೇಲೆ ಆರೋಪಿ ಮಹಿಳೆಯ ಪತಿ ಎಂದು ಬರೆಸಿಕೊಂಡಿದ್ದನು ಎಂದು ತಿಳಿಸಿದ್ದಾರೆ.

    ಮದುವೆ ವಿಚಾರವಾಗಿ ಕೇಳಿದಾಗಲೆಲ್ಲ ಸಂದೀಪ್ ತನ್ನ ಆಧಾರ್ ಕಾರ್ಡ್‍ನಲ್ಲಿ ಆಕೆಯ ಪತಿ ಎಂದು ಹೆಸರನ್ನು ಬರೆಸಿಕೊಂಡಿರುವುದನ್ನು ತೋರಿಸಿ ನಂಬಿಕೆಯನ್ನು ಗಳಿಸುತ್ತಿದ್ದನು. ಇದರಿಂದ ನಿಜವಾಗಿಯೂ ತನ್ನ ವಿಚಾರವನ್ನು ಆರೋಪಿ ಗಂಭೀರವಾಗಿ ತೆಗೆದುಕೊಂಡಿದ್ದಾನೆ ಎಂದು ಮಹಿಳೆ ಆತನ ಬಲೆಗೆ ಬಿದ್ದಿದ್ದಾಳೆ. ಇದನ್ನೂ ಓದಿ: ಕ್ಷುಲ್ಲಕ ವಿಷಯಕ್ಕೆ ಗಲಾಟೆ – ಪತ್ನಿಯ ಕತ್ತು ಸೀಳಿದ 78ರ ವೃದ್ಧ

    ಆರೋಪಿಯು ಸಂತ್ರಸ್ತೆಯ ಅಶ್ಲೀಲ ವೀಡಿಯೋಗಳನ್ನು ಕ್ಲಿಕ್ಕಿಸಿಕೊಂಡಿದ್ದರಿಂದ ಸಂತ್ರಸ್ತೆ ಆತನಿಂದ ದೂರವಾಗಲು ಯತ್ನಿಸಿದ್ದಾಳೆ. ಈ ವೇಳೆ ಆಕೆಯ ಅಶ್ಲೀಲ ಫೋಟೋಗಳು ಮತ್ತು ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿ ಬ್ಲಾಕ್ ಮೇಲ್ ಮಾಡಿದ್ದಾನೆ. ಸದ್ಯ ಮಹಿಳೆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜೈಪುರದ ಚೌಮು ಪುಲಿಯಾದಲ್ಲಿರುವ ಮಾಲ್‍ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ  ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಈ ಕೃತ್ಯದ ಹಿಂದಿನ ಉದ್ದೇಶವನ್ನು ಪತ್ತೆ ಹಚ್ಚುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಮಿಥುನ್ ರೈ ಎಲ್ಲಿ, ಸೆಲ್ಫಿ ತೆಗೆದುಕೊಳ್ಳಲು ಬರ್ಲಿ: ಶೋಭಾ ಕರಂದ್ಲಾಜೆ ತಿರುಗೇಟು

    ಉಡುಪಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ (mithun Rai) ಅವರು ಸಚಿವೆ ಶೋಭಾ ಕರಂದ್ಲಾಜೆ ಕಂಡರೆ ಪೋಟೋ ತೆಗೆದು ಕಳುಹಿಸಿ. ನಾನು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಶೋಭಾ ಅವರು, ಮಿಥುನ್ ರೈ ಎಲ್ಲಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ ಎಂದು ಸವಾಲೆಸೆದಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ (Selfie) ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು ಬರಲಿ ಎಂದು ಸಚಿವೆ ಗರಂ ಆಗಿ ಹೇಳಿದ್ದಾರೆ.  ಇದನ್ನೂ ಓದಿ: ಹೆಸರು ಬದಲಾಯಿಸಲು ತಲೆ ಕೆಟ್ಟಿದ್ಯಾ?: ಶೋಭಾ ಕರಂದ್ಲಾಜೆ ಗರಂ

    ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಅವನು ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವಾಗ್ದಾಳಿ ನಡೆಸಿ ಶೋಭಾ ಕರಂದ್ಲಾಜೆ (Shobha Karandlaje) ಕಾರು ಹತ್ತಿದರು.

    ಮಿಥುನ್ ರೈ ಹೇಳಿದ್ದೇನು..?: ಉಡುಪಿಯ ಮಲ್ಪೆ ಮೊಳಕಾಲ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಂತೆ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತು. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ. ಅವರ ಜೊತೆ ಸೆಲ್ಫಿ ತೆಗೆದವರಿಗೆ ಐದು ಸಾವಿರ ರೂಪಾಯಿ ಬಹುಮಾನ ಎಂದು ಮಿಥುನ್ ರೈ ಘೋಷಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಪ್ರಮೋದಾ ದೇವಿ ಮುಂದೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ – ಫೋಟೋ ವೈರಲ್

    ಮೈಸೂರು: ಅರಮನೆ ನಗರಿಯಲ್ಲಿ ದಸರಾ (Mysuru Dasara 2022) ಸಂಭ್ರಮ ಕಳೆಗಟ್ಟಿದೆ. ಈ ಮಧ್ಯೆ ಸಾಕಷ್ಟು ಗಮನಸೆಳೆಯುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸಖತ್ ಚರ್ಚೆ ಕೂಡ ಆಗುತ್ತಿದೆ.

    ಹೌದು. ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ (Pramoda Devi) ಯ ಮುಂದೆ ಮಂಡಿಯೂರಿ (Bow) ಇನ್ಫೋಸಿಸ್ (Infosys) ಅಧ್ಯಕ್ಷೆ ಸುಧಾಮೂರ್ತಿ (Sudhamurthy) ನಮಸ್ಕರಿಸಿದ್ದಾರೆ. ಈ ಫೋಟೋ (Viral Photo) ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಸುಧಾಮೂರ್ತಿಯ ಸರಳತೆಗೆ ಜನ ಮತ್ತೊಮ್ಮೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

    ಚರ್ಚೆ ಆರಂಭವಾಗಿದ್ದು ಹೇಗೆ..?: ಮಗುವಿನ ಮನೆಕೆಲಸಕ್ಕಾಗಿ ವರ್ಕ್‍ಶೀಟ್ ಅನ್ನು ತೋರಿಸುವ ಟ್ವಿಟ್ಟರ್ ಪೋಸ್ಟ್ ನೊಂದಿಗೆ ಇದು ಪ್ರಾರಂಭವಾಯಿತು. “ನಾನು ____ ರಾಜನಿಗೆ,” ಬಿಟ್ಟ ಸ್ಥಳ ತುಂಬುವಂತೆ ಒಂದು ವಾಕ್ಯವನ್ನು ನೀಡಲಾಗಿದ್ದು, ಅದಕ್ಕೆ ‘ತಲೆಬಾಗು’ ಎಂಬ ಆಯ್ಕೆ ನೀಡಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುಗೆ ಕೌದಿ, ರೇಷ್ಮೆ ಸೀರೆ ಗಿಫ್ಟ್ ಕೊಟ್ರು ಸುಧಾ ಮೂರ್ತಿ

    ಮಗುವಿನ ಹೋಂ ವರ್ಕ್ (Home Work) ನಿಂದ ಕಳವಳಗೊಂಡ ತಂದೆ, ನನ್ನ ಮಗುವಿಗೆ ಈ ರೀತಿಯ ಹೋಂ ವರ್ಕ್ ಗಳನ್ನು ಕೊಡಬೇಡಿ. ಇಂತಹ ಪ್ರಜಾಸತ್ತಾತ್ಮಕವಲ್ಲದ ಬೋಧನೆಗಳ ಬಗ್ಗೆ ಶಾಲೆಗಳು ಸ್ವಲ್ಪ ಜಾಗರೂಕರಾಗಿರಬೇಕು. ಅವು ಮಕ್ಕಳ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯಗಳನ್ನು ತುಂಬಬಹುದು ಎಂದು ಆಕ್ರೋಶ ಹೊರಹಾಕಿ ಗುರುಪ್ರಸಾದ್ ಡಿ.ಎನ್ ಎಂಬವರು ಟ್ವೀಟ್ ಮಾಡಿದ್ದರು.

    ಈ ಟ್ವೀಟ್‍ (Tweet) ಗೆ ಮತ್ತೊಬ್ಬ ಬಳಕೆದಾರ, ಮೈಸೂರು ರಾಜಮನೆತನದ ಸದಸ್ಯರ ಮುಂದೆ ಸುಧಾ ಮೂರ್ತಿಯವರು ಪ್ರಮೋದಾ ದೇವಿಗೆ ನಮಸ್ಕರಿಸುತ್ತಿರುವ ಫೋಟೋ ರಿಟ್ವೀಟ್ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ. ಹಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ರಾಜಪ್ರಭುತ್ವ ಅಂತ್ಯಗೊಂಡ ದಶಕಗಳ ನಂತರ ರಾಜಮನೆತನದ ಸಂಸ್ಕೃತಿಯನ್ನು ಗೌರವಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜಮನೆತನದವರು ಇನ್ನೂ ಸಾಮಾನ್ಯ ಜನರ ಗೌರವಕ್ಕೆ ಅರ್ಹರೇ ಎಂಬ ಅಭಿಪ್ರಾಯದಲ್ಲಿ ಈ ಚರ್ಚೆ ನಡೆದಿದೆ.

    ಹಲವರು ಸುಧಾಮೂರ್ತಿಯವರ ನಡತೆಯನ್ನು ಸಮರ್ಥಿಸಿಕೊಂಡರು. ಫೋಟೋ ನೋಡಿದ ಒಬ್ಬರು, ಅವರು ರೋಲ್ ಮಾಡೆಲ್ (Role Model) ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಅದು ನಮ್ಮ ಸಂಸ್ಕೃತಿ. ವಯಸ್ಸು, ಅಂತಸ್ತು, ಸ್ಥಾನಮಾನಗಳ ಭೇದವಿಲ್ಲದೆ ಎಲ್ಲರೂ ರಾಜಮನೆತನವನ್ನು ಗೌರವಿಸುತ್ತಾರೆ. ಅವಳ ಸಂಸ್ಕೃತಿ ಅವಳಿಗೆ ಇದನ್ನು ಕಲಿಸಿದೆ. ಮತ್ತೊಬ್ಬರು, ಗುಲಾಮಗಿರಿಯು ಆಳವಾಗಿ ಬೇರೂರಿದೆ ಎಂದು ಪೋಸ್ಟ್ ಮಾಡಿದ್ದಾರೆ. ಹಳೆಯ ಮೈಸೂರು ರಾಜ್ಯದ ಜನರು ಯಾವಾಗಲೂ ರಾಜಮನೆತನದ ಬಗ್ಗೆ ಅಪಾರ ಗೌರವವನ್ನು ಹೊಂದಿರುತ್ತಾರೆ. ರಾಣಿಗೆ ನಮಸ್ಕರಿಸುವುದು ಸಾಮಾನ್ಯ ವಿಚಾರವಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಹೀಗೆ ಹಲವಾರು ಚರ್ಚೆಗಳು ನಡೆದಿವೆ. ಸದ್ಯ ಚರ್ಚೆ ಗೀಡಾದ ಫೋಟೋ ಹಳೆಯ ಫೋಟೋವೆಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಿಶ್ಚಯವಾದ ಮಗಳ ಮದುವೆಗೆ ಕಿರಿಕ್ ತಂದ ಫೋಟೋ- ತಾಯಿ ಸಾವಿನಲ್ಲಿ ಅಂತ್ಯ

    ನಿಶ್ಚಯವಾದ ಮಗಳ ಮದುವೆಗೆ ಕಿರಿಕ್ ತಂದ ಫೋಟೋ- ತಾಯಿ ಸಾವಿನಲ್ಲಿ ಅಂತ್ಯ

    ಬೆಂಗಳೂರು: ನಿಶ್ಚಯವಾದ ಮದುವೆ(Marriage)ಗೆ ಫೋಟೋವೊಂದು ಕಿರಿಕ್ ತಂದಿದೆ. ಫೋಟೋ (Photo) ವಿಚಾರಕ್ಕೆ ಯುವತಿಯ ತಂದೆ ಹಾಗೂ ತಾಯಿಯ ನಡುವೆ ನಡೆದ ಜಗಳ ಮಹಿಳೆಯ ಸಾವಿನಲ್ಲಿ ಅಂತ್ಯವಾಗಿದೆ.

    ಶಾಹಿದಾ ಸಾವನ್ನಪ್ಪಿದ ಮಹಿಳೆ. ಸೆಪ್ಟೆಂಬರ್ 21ರಂದು ಘಟನೆ ಮೋದಿ ಮಸೀದಿ ರಸ್ತೆಯಲ್ಲಿ ನಡೆದಿದೆ. ಇದನ್ನೂ ಓದಿ: ಮನೆ ಬಿದ್ದು 9 ತಿಂಗಳಾದ್ರೂ ಪರಿಹಾರ ನೀಡಿಲ್ಲ – ಆತ್ಮಹತ್ಯೆ ಬೆದರಿಕೆ ಹಾಕಿದ ನೆರೆ ಸಂತ್ರಸ್ತ

    ಏನಿದು ಪ್ರಕರಣ..?: ಮುನಾವರ್ ಜೊತೆ ಮದುವೆಯಾಗಿ 19 ವರ್ಷವಾಗಿತ್ತು. ಬಳಿಕ ಹುಟ್ಟಿದ ಮಗಳಿಗೆ ಮದುವೆ ನಿಶ್ಚಯವಾಗಿತ್ತು. ಹುಡುಗನ ಜೊತೆ ಪೋಷಕರು ಮಗಳ ಎಂಗೆಜ್ಮೆಂಟ್ (Engagement) ಸಹ ಮಾಡಿದ್ದರು. ಆದರೆ ಈ ನಡುವೆ ಹುಡುಗನ ಕಡೆಯವರಿಗೆ ಅದೊಂದು ಫೋಟೋ ತಲುಪಿದೆ.

    ಬೇರೊಬ್ಬನ ಜೊತೆ ಯುವತಿ ಇರುವ ಫೋಟೋ ಯುವಕನ ಮನೆಗೆ ತಲುಪಿದೆ. ಈ ಫೋಟೋ ಹಿಡಿದು ಯುವಕನ ತಂದೆ, ಯುವತಿ ತಂದೆ ಮುನಾವರ್ ಪ್ರಶ್ನಿಸಿದ್ದರು. ಬಳಿಕ ಆ ಫೋಟೋ ವಿಚಾರವಾಗಿ ಮುನಾವರ್ ಹಾಗೂ ಪತ್ನಿ ಶಾಹಿದಾ ಜೊತೆ ಜಗಳ ನಡೆದಿದೆ. ಈ ವೇಳೆ ತಳ್ಳಾಟದ ಸಂದರ್ಭ ಶಾಹಿದಾ ಕೆಳ ಬಿದ್ದಿದ್ದಾರೆ.

    ಕೆಳಗೆ ಬಿದ್ದ ಸಂದರ್ಭದಲ್ಲಿ ಚೂಪಾದ ವಸ್ತುವೊಂದು ಶಾಹಿದಾ ಹೊಟ್ಟೆ (Stomach) ಕುಯ್ದಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಇದೀಗ ಚಿಕಿತ್ಸೆ ಫಲಿಸಿದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿದಂತೆ ಸದ್ಯ ಮುನಾವರ್‍ನನ್ನು ಡಿಜೆ ಹಳ್ಳಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇನ್‍ಸ್ಟಾಗ್ರಾಮ್ ಸರ್ವರ್ ಡೌನ್ – ಫೋಟೋ, ವೀಡಿಯೋ ಅಪ್‍ಲೋಡ್ ಮಾಡಲಾಗದೇ ಜನರ ಪರದಾಟ

    ನವದೆಹಲಿ: ಜನಪ್ರಿಯ ಸೋಶಿಯಲ್ ಮೀಡಿಯಾ ಅಪ್ಲಿಕೇಶನ್ ಇನ್‍ಸ್ಟಾಗ್ರಾಮ್ (Instagram) ಗುರುವಾರ ವಿಶ್ವದ ವಿವಿಧ ಭಾಗಗಳಲ್ಲಿ ಸರ್ವರ್ ಡೌನ್ (Server down) ಆಗಿತ್ತು. ಇದರಿಂದ ಇನ್‍ಸ್ಟಾಗ್ರಾಮ್ ಬಳಕೆದಾರರು (Instagram users) ಫೋಟೋ, ವೀಡಿಯೋ ಪೋಸ್ಟ್ ಮಾಡಲಾಗದೇ ಪರದಾಡಿದ್ದಾರೆ. ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಅನ್ನು ಮತ್ತೆ ಮೊದಲಿನಿಂದ ಓಪನ್ ಮಾಡಿದರೂ ಕ್ರ್ಯಾಶ್ (Crash) ಆಗುತ್ತಿತ್ತು ಎಂದು ವರದಿಯಾಗಿದೆ.

    ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ಒಪ್ಪಿಕೊಂಡ ಇನ್‍ಸ್ಟಾಗ್ರಾಮ್, ಕೆಲವು ಬಳಕೆದಾರರು ಇನ್‍ಸ್ಟಾಗ್ರಾಮ್ ಅಪ್ಲಿಕೇಶನ್ ಓಪನ್ ಮಾಡಲು ಆಗದೇ ಸಮಸ್ಯೆ ಎದುರಿಸುತ್ತಿರುವುದು ನಮಗೆ ತಿಳಿದುಬಂದಿದೆ. ನಾವು ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ತರಲು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿತ್ತು. ಈ ರೀತಿಯ ಅಡಚಣೆಗೆ ಕ್ಷಮಿಸಿ ಎಂದು ಟ್ವೀಟ್ ಮಾಡಿ ಕ್ಷಮೆ ಕೋರಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ

    ಹೀಗಿದ್ದರೂ ಅನೇಕ ಇನ್‍ಸ್ಟಾಗ್ರಾಮ್ ಬಳಕೆದಾರರು ಈಗ ಸುಮಾರು ಒಂದು ಗಂಟೆಯವರೆಗೂ ಇನ್‍ಸ್ಟಾಗ್ರಾಮ್ ಸ್ಥಗಿತಗೊಂಡಿದೆ ಮತ್ತು ವೈಬ್‍ಸೈಟ್ (website) ಮೂಲಕ ಇನ್‍ಸ್ಟಾಗ್ರಾಮ್‍ಗೆ ಲಾಗ್ ಇನ್ (Login) ಆಗಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಸಾಮಾಜಿಕ ಮಾಧ್ಯಮ ಸೈಟ್‍ನಲ್ಲಿ #Instagram ಟ್ರೆಂಡಿಂಗ್ ಹ್ಯಾಶ್‍ಟ್ಯಾಗ್‍ನೊಂದಿಗೆ ಹಲವಾರು ಬಳಕೆದಾರರು ಸೇವೆಯ ಅಡಚಣೆಯ ಕುರಿತು ನವೀಕರಣಗಳು ಮತ್ತು ಮೀಮ್‍ಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]