Tag: Photo Viral

  • ವೈರಲ್ ಆಯ್ತು ಕಿರುತೆರೆ ನಟಿಯ ಟಾಪ್‍ಲೆಸ್ ಯೋಗಾ ಪೋಸ್

    ವೈರಲ್ ಆಯ್ತು ಕಿರುತೆರೆ ನಟಿಯ ಟಾಪ್‍ಲೆಸ್ ಯೋಗಾ ಪೋಸ್

    ಮುಂಬೈ: ಕಿರುತೆರೆ ನಟಿ ಹಾಗೂ ನಚ್ ಬಲ್ಲಿಯೆ ಸೀಸನ್ 8ರ ಸ್ಪರ್ಧಿ ಅಬಿಗೈಲ್ ಪಾಂಡೆ ಟಾಪ್‍ಲೆಸ್ ಯೋಗಾ ಪೋಸ್‍ನಿಂದಾಗಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದ್ದಾರೆ.

    ಟಾಪ್‍ಲೆಸ್ ಆಗಿ ಯೋಗ ಮಾಡಿದ ಬ್ಯಾಕ್ ಪೋಸ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಬಿಗೈಲ್ ಪಾಂಡೆ ಹಂಚಿಕೊಂಡಿದ್ದು, ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ. ಯೋಗಾಸನ ಆರೋಗ್ಯಕ್ಕೆ ಒಳ್ಳೆಯದು ಎಂದು ಪ್ರೇರೆಪಿಸಲು ಈ ರೀತಿ ಪೋಸ್ಟ್ ಮಾಡಿದ್ದಾರೆ.

    https://www.instagram.com/p/B0dnspZnTQk/?utm_source=ig_embed

    ಫೋಟೋದಲ್ಲಿ ನಟಿ ಟಾಪ್‍ಲೆಸ್ ಆಗಿ ಬೆನ್ನಿನ ಹಿಂದೆ ಎರಡು ಕೈಗಳಿಂದ ನಮಸ್ಕಾರ ಮಾಡಿದ್ದಾರೆ. ಜೊತೆಗೆ ಈ ಪೋಸ್‍ನಲ್ಲಿ ನಾನು ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದೇನೆ ಎಂದು ಕ್ಯಾಪ್ಷನ್ ಕೂಡ ಹಾಕಿದ್ದಾರೆ. ನ್ಯೂಡ್ ಯೋಗಾ ಗರ್ಲ್ ಏನು ಮಾಡುತ್ತಿದ್ದಾಳೆ ಎನ್ನುವುದನ್ನ ನನ್ನ ಮಾತುಗಳು ಅರ್ಥೈಸಲು ಸಾಧ್ಯವಾಗದಿರಬಹುದು. ಮೊದಲು ಈ ಫೋಟೋ ತೆಗೆಸಿಕೊಂಡು ಪೋಸ್ಟ್ ಮಾಡುವಾಗ ಸಂಕೋಚವಾಯ್ತು. ಬೇರೆಯವರು ಏನು ತಿಳಿಯುತ್ತಾರೆ ಎಂದು ಯೋಚನೆ ಬಂತು. ಆಗ ನನ್ನ ಸ್ನೇಹಿತ ಧೈರ್ಯ ತುಂಬಿದ. ಫೋಟೋ ಕ್ಲಿಕ್ಕಿಸುವ ವೇಳೆ ಯಾರು ನನ್ನನ್ನು ನೋಡುತ್ತಿಲ್ಲ ಅಂತ ತಿಳಿದಿತ್ತು. ಆದರೂ ಎಲ್ಲೋ ಸಂಕೋಚ, ಭಯ ಕಾಡುತಿತ್ತು. ಬಳಿಕ ಧೈರ್ಯದಿಂದ ಇದನ್ನು ಅಪ್‍ಲೋಡ್ ಮಾಡಿದ್ದೇನೆ. ಇದು ನನ್ನ ಕಥೆ ನಿಮ್ಮ ಕಥೆ ಏನು ಎಂದು ಇನ್‍ಸ್ಟಾ ಪೋಸ್ಟ್ ನಲ್ಲಿ ನಟಿ ಬರೆದುಕೊಂಡಿದ್ದಾರೆ.

    ಕೆಲವು ದಿನಗಳ ಹಿಂದೆ, ಅಬಿಗೈಲ್ ಅವರ ಆಪ್ತ ಸ್ನೇಹಿತೆ ಆಶ್ಕಾ ಗೊರಾಡಿಯಾ ಅವರು ಯೋಗ ಬ್ಲಾಗರ್ ನ್ಯೂಡ್ ಯೋಗಾಗರ್ಲ್ ಫೋಟೋ ಹಾಕಿದ್ದರು.

  • ಮಗನಿಗಾಗಿ ವಿಶೇಷ ಶಾಲಾ ಬ್ಯಾಗ್ ತಯಾರಿಸಿದ ಬಡ ರೈತ – ಫೋಟೋ ವೈರಲ್

    ಮಗನಿಗಾಗಿ ವಿಶೇಷ ಶಾಲಾ ಬ್ಯಾಗ್ ತಯಾರಿಸಿದ ಬಡ ರೈತ – ಫೋಟೋ ವೈರಲ್

    ನೋಮ್ ಪೆನ್: ಅದೆಷ್ಟೋ ಮಂದಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಬಡತನಕ್ಕೆ ತಮ್ಮ ನೂರಾರು ಕನಸುಗಳನ್ನು ಬಲಿಕೊಟ್ಟಿದ್ದಾರೆ. ಆದರೆ ಕಾಂಬೋಡಿಯಾದಲ್ಲಿ ರೈತರೊಬ್ಬರು ತಮ್ಮ ಮಗನ ಶಾಲಾ ಬ್ಯಾಗ್ ಖರೀದಿಸಲು ಹಣವಿಲ್ಲದೆ ತಾವೇ ಸ್ವತಃ ಒಂದು ಸುಂದರ ಬ್ಯಾಗ್ ತಯಾರಿಸಿ ಎಲ್ಲೆಡೆ ಸುದ್ದಿಯಾಗಿದ್ದಾರೆ.

    ಮಕ್ಕಳ ಉತ್ತಮ ಭವಿಷ್ಯಕ್ಕೆ ಅವರಿಗೆ ಶಿಕ್ಷಣ ಕೊಡಿಸುವ ಹೊಣೆ ಪೋಷಕರ ಮೇಲೆ ಇರುತ್ತದೆ. ಆದರೆ ಬಡತನ ಕೆಲವೊಮ್ಮೆ ಅದಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ ಹಲವು ಮಕ್ಕಳು ಬಡತನದಿಂದ ತಮ್ಮ ಕನಸನ್ನು ಬಲಿಕೊಡಬೇಕಾಗುತ್ತದೆ. ಆದರೆ ಕಾಂಬೋಡಿಯಾದ ರೈತರೊಬ್ಬರು ಬಡತನವಿದ್ದರೂ ಮಗನಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅಲ್ಲದೆ ಮಗನ ಓದಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುವಷ್ಟು ಹಣ ಅವರ ಬಳಿ ಇಲ್ಲ. ಆದರೆ ತಮ್ಮ ಮಗ ಶಿಕ್ಷಣ ಪಡೆಯುವುದು ಮುಖ್ಯವೆಂದು ಸ್ವತಃ ತಾವೇ ವಿಶೇಷವಾಗಿ ಬ್ಯಾಗ್ ತಯಾರಿಸಿ ಮಗನಿಗೆ ನೀಡಿದ್ದಾರೆ.

    ಈ ಬ್ಯಾಗ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹೌದು. ಅಂತ ವಿಶೇಷತೆ ಏನಿದೆಪ್ಪ ಈ ಬ್ಯಾಗ್‍ನಲ್ಲಿ ಎಂದು ಪ್ರಶ್ನೆಹುಟ್ಟುವುದು ಸಹಜ. ತಂದೆಯೊಬ್ಬರು ತನ್ನ ಮಗನಿಗೆ ಶಾಲಾ ಬ್ಯಾಗ್ ಕೊಡಿಸಲು ಆಗದಿದ್ದರೂ ಸ್ವತಃ ತಾವೇ ರಾಫೀಯಾ ಸ್ಟ್ರಿಂಗ್(ಪ್ಲಾಸ್ಟಿಕ್ ಹಗ್ಗ) ಬ್ಯಾಗ್ ತಯಾರಿಸಿದ್ದಾರೆ. ಬೇರೆ ಮಕ್ಕಳನ್ನು ನೋಡಿ ತನ್ನ ಬಳಿ ಬ್ಯಾಗ್ ಇಲ್ಲವೆಂದು ಮಗ ಬೇಸರಪಡಬಾರದು ಎಂದು ತಂದೆ ಈ ಉಪಾಯ ಮಾಡಿದ್ದಾರೆ. ಇವರು ವಾಸಿಸುವ ಪ್ರದೇಶದಲ್ಲಿ ಶಾಲಾ ಬ್ಯಾಗ್ ದುಬಾರಿಯಾಗಿತ್ತು. ಅಲ್ಲದೆ ಅಷ್ಟು ಹಣವನ್ನು ರೈತ ಬರಿಸಲು ಆಗುತ್ತಿರಲಿಲ್ಲ. ಹೀಗಾಗಿ ಬ್ಯಾಗ್‍ಗೆ ಖರ್ಚು ಮಾಡುವ ಹಣವನ್ನು ಉಳಿಸಲು ಪ್ಲಾಸ್ಟಿಕ್ ಹಗ್ಗವನ್ನು ಬಳಸಿ ಬ್ಯಾಗ್ ತಯಾರಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ವಿದ್ಯಾರ್ಥಿ ವೈ.ಎನ್ ಕೆಂಗ್(5) ತನ್ನ ತಂದೆ ತಯಾರಿಸಿದ ಈ ಬ್ಯಾಗ್ ಧರಿಸಿ ಶಾಲೆಗೆ ಹೋಗಿದ್ದನು. ಈ ವೇಳೆ ಶಿಕ್ಷಕಿ ಬ್ಯಾಗ್ ನೋಡಿ ಎಲ್ಲಿ ಖರೀದಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಆಗ ನನ್ನ ತಂದೆ ಈ ಬ್ಯಾಗ್ ತಯಾರಿಸಿದ್ದು ಎಂದನು. ಆದ ವಿದ್ಯಾರ್ಥಿಯ ಬಡತನ ಕಂಡು ಶಿಕ್ಷಕಿ ಈ ಬ್ಯಾಗ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಬ್ಯಾಗ್ ಲುಕ್‍ಗೆ ನೆಟ್ಟಿಗರು ಫಿದಾ ಆಗಿದ್ದು, ತಂದೆ ಉಪಾಯವನ್ನು ಮೆಚ್ಚಿದ್ದಾರೆ. ಅಲ್ಲದೆ ಹಲವರು ಈ ಬದ ವಿದ್ಯಾರ್ಥಿಯ ಶಿಕ್ಷಣಕ್ಕೆ ನೆರವನ್ನು ನೀಡಲು ಮುಂದೆ ಬಂದಿದ್ದಾರೆ.

    https://www.facebook.com/alway.smile.758/posts/1380883075412376

    ವಿಶ್ವಸಂಸ್ಥೆಯ ವರದಿ ಪ್ರಕಾರ ಸುಮಾರು 60 ದಶಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಅದರಲ್ಲಿ ಬಹುತೇಕ ಮಂದಿ ಬಡತನದ ಕಾರಣದಿಂದ ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿಯನ್ನು ವಹಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಮಧ್ಯೆ ಈ ತಂದೆಯ ಉಪಾಯ ಎಲ್ಲರ ಮನ ಗೆದ್ದಿದ್ದು, ಸದ್ಯ ಈ ವಿಶೇಷ ಬ್ಯಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

  • ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    ರಾಜಕಾರಣಿಯ ಅಸಭ್ಯ ನಡೆಗೆ ಚುನಾವಣೆಯಲ್ಲಿ ಉತ್ತರ ನೀಡಿದ ಪೊಲೀಸ್

    – ಒಂದೇ ದಿನದಲ್ಲಿ ಹೀರೋ ಆಗಿದ್ದ ನಿವೃತ್ತ ಸರ್ಕಲ್ ಇನ್‍ಸ್ಪೆಕ್ಟರ್

    ಹೈದರಾಬಾದ್: ಸಂಸದರಾಗಿ ಆಯ್ಕೆಯಾದ ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್‌ಗೆ ಡಿವೈಎಸ್‍ಪಿ ಸೆಲ್ಯೂಟ್ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಆಂಧ್ರಪ್ರದೇಶದ ಕದಿರಿಯಲ್ಲಿ ಗೋರಂಟ್ಲಾ ಮಾಧವ್ ಅವರು ಸರ್ಕಲ್ ಇನ್‍ಸ್ಪೆಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಈಗ ಹಿಂದೂಪುರ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದಾರೆ.

    ಮಾಧವ್ ಅವರಿಗೆ ಹಿಂದಿನ ಮುಖ್ಯಸ್ಥ, ಸಿಐಡಿ ಉಪ ಅಧೀಕ್ಷಕ ಮೆಹಬೂಬ್ ಬಾಷಾ ಅವರು  ಸೆಲ್ಯೂಟ್ ಮಾಡಿದ್ದಾರೆ. ಸ್ಥಳದಲ್ಲಿಯೇ ಇದ್ದ ಕೆಲವರು ಈ ದೃಶ್ಯವನ್ನು ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಮಾಧವ್ ಅವರ ಸಾಧನೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಮಾಧವ್ ಅವರು ಹಿಂದೂಪುರ್ ಲೋಕಸಭಾ ಕ್ಷೇತ್ರದಿಂದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು. ಈ ಮೂಲಕ ಅಲ್ಲಿನ ಸಂಸದರಾಗಿದ್ದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಂಸದ ಕ್ರಿಸ್ತಪ್ಪ ನಿಮ್ಮಾಲಾ ಅವರ ವಿರುದ್ಧ 1,40,748 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

    ಸಂಸದರಾಗಲು ಪ್ರೇರಣೆ ಏನು?
    ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದ ಮಾಧವ್ ಅವರ ಕುಟುಂಬದಲ್ಲಿ ಯಾರೊಬ್ಬರೂ ರಾಜಕಾರಣಿಗಳಿಲ್ಲ. ಅಷ್ಟೇ ಅಲ್ಲದೆ ಅವರು ಚುನಾವಣೆಗೆ ನಿಲ್ಲಬೇಕೆಂದು ಬಯಸಿದವರಲ್ಲ. ಅಷ್ಟೇ ಅಲ್ಲದೆ ಚುನಾವಣಾ ಖರ್ಚು ನಿಭಾಯಿಸುವಷ್ಟು ಹಣವೂ ಅವರ ಬಳಿ ಇರಲಿಲ್ಲ. ಆದರೂ ಓರ್ವ ರಾಜಕಾರಣಿಯ ಅಸಭ್ಯ ವರ್ತನೆ ಅವರನ್ನು ಚುನಾವಣಾ ಕಣಕ್ಕೆ ತಂದು ನಿಲ್ಲಿಸಿತ್ತು. ಈಗ ಅವರು ಭರ್ಜರಿ ಗೆಲುವು ಸಾಧಿಸಿ, ತಿರುಗೇಟು ಕೊಟ್ಟಿದ್ದಾರೆ.

    ರಾಜಕಾರಣಿ ಜೆ.ಸಿ.ದಿವಾಕರ ರೆಡ್ಡಿ ಅವರು ಪ್ರಕರಣವೊಂದರ ವಿಚಾರವಾಗಿ ಪೊಲೀಸರ ಬಗ್ಗೆ ಅಸಭ್ಯ ಪದ ಬಳಸಿದ್ದರು. ಪೊಲೀಸರು ‘ಹಿಜಡಾ’ಗಳಿಗಿಂತ ಕಡೆ ಎಂದು ದಿವಾಕರ ರೆಡ್ಡಿ ಜರಿದಿದ್ದರು. ಈ ಮಾತುಗಳು ಮಾಧವ್ ಅವರ ಕೋಪಕ್ಕೆ ಕಾರಣವಾಗಿತ್ತು.

    ಜೆ.ಸಿ.ದಿವಾಕರ ರೆಡ್ಡಿ ಅವರ ಹೇಳಿಕೆ ವಿಚಾರವಾಗಿ ಮಾಧವ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಪೊಲೀಸರ ಬಗ್ಗೆ ಕಿಳುಮಟ್ಟದ ಪದ ಬಳಕೆ ಮಾಡಿದ ಜೆ.ಸಿ.ದಿವಾಕರ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಪೊಲೀಸ್ ಭಾಷೆಯಲ್ಲಿಯೇ ರೆಡ್ಡಿ ಅವರ ವಿರುದ್ಧ ಕಿಡಿ ಕಾರಿ ಮೀಸೆಯನ್ನು ತಿರುವಿ ಸವಾಲು ಹಾಕಿದ್ದರು.

    ಮಾಧವ್ ಅವರ ಸುದ್ದಿಗೋಷ್ಠಿಯ ವಿಡಿಯೋ ಆಂಧ್ರಪ್ರದೇಶದಲ್ಲಿ ವೈರಲ್ ಆಗಿತ್ತು. ಅಸಭ್ಯ ಪದ ಬಳಕೆ ಮಾಡುವ ರಾಜಕಾರಣಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಮಾಧವ್ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಮೂಲಕ ಮಾಧವ್ ಒಂದೇ ದಿನದಲ್ಲಿ ಜನಪ್ರಿಯತೆ ಗಳಿಸಿದರು. ಈ ವಿಡಿಯೋವನ್ನು ನೋಡಿದ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‍ಮೋಹನ್ ರೆಡ್ಡಿ ಅವರು ಮಾಧವ್ ಅವರನ್ನು ಭೇಟಿಯಾಗಿ ಹಿಂದೂಪುರ್ ಟಿಕೆಟ್ ನೀಡಿದರು. ಇದರಿಂದಾಗಿ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ ಮಾಡಿ ಮಾಧವ್ ಅವರು ಭರ್ಜರಿ ಗೆಲುವು ಸಾಧಿಸಿ ಸಂಸತ್ ಪ್ರವೇಶಿಸಿದ್ದಾರೆ.

  • ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಮೂರು ಕಣ್ಣಿನ ಹಾವು ನೋಡಿ ದಂಗಾದ್ರು ನೆಟ್ಟಿಗರು!

    ಕ್ಯಾನ್ಬೆರಾ: ಸಾಮಾನ್ಯವಾಗಿ ಎರಡು ಕಣ್ಣಿನ ಹಾವನ್ನ ನೋಡಿರುತ್ತೀರಾ. ಅದ್ರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮೂರು ಕಣ್ಣಿನ ಹಾವೊಂದು ಸಖತ್ ಸದ್ದು ಮಾಡುತ್ತಿದೆ.

    ಹೌದು. ಸಹಜವಾಗಿ ಹಾವುಗಳೆಂದರೆ ಎರಡು ಕಣ್ಣು ಇರುತ್ತೆ. ಆದರೆ ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಮೂರು ಕಣ್ಣಿನ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋ ಸಖತ್ ವೈರಲ್ ಆಗಿದೆ. ಬುಧವಾರ ಈ ಬಗ್ಗೆ ಆಸ್ಟ್ರೇಲಿಯಾ ಉತ್ತರ ಭಾಗದ ಅರಣ್ಯ ಇಲಾಖೆ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಮೂರು ಕಣ್ಣಿನ ಹಾವಿನ ಫೋಟೋ ಜೊತೆಗೆ ಅದರ ವಿಶೇಷತೆಯನ್ನು ಶೇರ್ ಮಾಡಿದೆ. ಈ ಮೂರು ಕಣ್ಣಿನ ಹಾವಿನ ನೋಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಅರ್ನ್ ಹೆಮ್ ಹೆದ್ದಾರಿಯಲ್ಲಿ ಸಿಕ್ಕಿರುವ ಈ ಹಾವು ಕಾರ್ಪೆಟ್ ಪೈತಾನ್ ಪ್ರಜಾತಿಗೆ ಸೇರಿದ್ದು, ಇದಕ್ಕೆ `ಮಾಂಟಿ ಪೈತಾನ್’ ಎಂದು ಹೆಸರಿಡಲಾಗಿದೆ. ಮಾರ್ಚ್ ನಲ್ಲಿ ಈ ವಿಚಿತ್ರ ಹಾವು ಪತ್ತೆಯಾಗಿತ್ತು. ಆದ್ರೆ ಹುಟ್ಟಿದ ಕೇವಲ ಮೂರೇ ತಿಂಗಳಲ್ಲಿ ಅದು ಸತ್ತು ಹೋಗಿದೆ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಆರೋಗ್ಯದ ಸಮಸ್ಯೆ ನಡುವೆಯೂ ಅದು ಮೂರು ತಿಂಗಳ ಕಾಲ ಬದುಕಿದ್ದೇ ಅಚ್ಚರಿಯ ಸಂಗತಿ. ಈ ಮೂರು ಕಣ್ಣಿನ ಹಾವು ಸುಮಾರು 40 ಸೆ.ಮಿ ಉದ್ದವಿತ್ತು ಎಂದಿದ್ದಾರೆ. ಹಾಗೆಯೇ ಈ ಹಾವಿನ ಎಕ್ಸ್-ರೆ ಮಾಡಿ ನೋಡಿದಾಗ ಹಾವಿಗೆ ಎರಡು ತಲೆಯಿಲ್ಲ ಎಂಬುದು ತಿಳಿದುಬಂದಿದೆ. ಆದ್ರೆ ಒಂದೇ ತಲೆಬುರುಡೆಯಲ್ಲಿ ಮೂರನೇ ಕಣ್ಣಿಗೆ ಜಾಗವಿದ್ದು, ಮೂರು ಕಣ್ಣು ಕೂಡ ಕಾರ್ಯ ನಿರ್ವಹಿಸುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

    https://www.facebook.com/ParksandWildlifeNT/posts/2284844224909161

  • ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಐಜಾಲ್: ತಾನು ಸೈಕಲ್ ಹತ್ತಿಸಿದ ಕೋಳಿಮರಿಯ ಜೀವ ಉಳಿಸಿಕೊಡಿ ಎಂದು ಆಸ್ಪತ್ರೆಗೆ ಓಡಿ ಬಂದಿದ್ದ ಪುಟ್ಟ ಬಾಲಕನೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ 6ರ ಪೋರನ ಪ್ರಾಣಿ ಕಾಳಜಿ ಮೆಚ್ಚಿ ಪೇಟಾ(ಪ್ರಾಣಿ ದಯಾ ಸಂಘ) ಕಾಂಪಸಿನೇಟ್ ಕಿಡ್ ಎಂದು ಬಿರುದು ನೀಡಿದೆ.

    ಮಿಜೋರಾಂ ರಾಜ್ಯದ ಡೆರೆಕ್ ಸಿ ಲಾಲ್ ಚಹನಿಮಾ(6) ತನ್ನ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದಾನೆ. ಈತ ಆಟವಾಡುತ್ತಿದ್ದಾಗ ಪಕ್ಕದ ಮನೆಯ ಕೋಳಿ ಮರಿಯ ಮೇಲೆ ಆಕಸ್ಮಾತ್ತಾಗಿ ಸೈಕಲ್ ಹತ್ತಿಸಿದ್ದನು. ಪರಿಣಾಮ ಕೋಳಿ ಮರಿ ಬಿದ್ದಿದ್ದು, ಇದರಿಂದ ಗಾಬರಿಗೊಂಡ ಬಾಲಕ ತನ್ನಲ್ಲಿದ್ದ 10 ರೂ. ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿದ್ದಾನೆ. ಅಲ್ಲದೆ ಅಲ್ಲಿ ತನ್ನ ಕೈಯಲ್ಲಿದ್ದ ಹಣ ನೀಡಿ ಕೋಳಿ ಮರಿಯನ್ನು ಬದುಕಿಸಿಕೊಡುವಂತೆ ಗೋಗರೆದಿದ್ದಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಬಳಿಕ ಬಾಲಕನ ಮುಗ್ಧತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಫೋಟೋ ಸಾಕಷ್ಟು ನೆಟ್ಟಿಗರ ಮನ ಗೆದ್ದಿತ್ತು.

    ಈ ಬಾಲಕ ಒಂದು ಕೈಯಲ್ಲಿ ಹತ್ತು ರೂ. ಹಾಗೂ ಇನ್ನೊಂದು ಕೈಯಲ್ಲಿ ಕೋಳಿ ಮರಿ ಹಿಡಿದುಕೊಂಡು ಇರುವ ಫೋಟೋವನ್ನು ಸಂಗ ಸೇಸ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಮುಗ್ಧ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 90 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಇದನ್ನು ಗಮನಿಸಿದ ಭಾರತೀಯ ಪ್ರಾಣಿ ದಯಾ ಸಂಘವು ಈ ಬಾಲಕನ ಮುಗ್ಧತೆಗೆ ಕಾಂಪಸಿನೇಟ್ ಕಿಡ್ ಬಿರುದು ನೀಡಿ, ಈತನಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಬಾಲಕನ ಶಾಲೆ ಕೂಡ ಆತನ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದೆ.

    https://www.facebook.com/sanga.says/posts/2544025018945443:0

  • ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್

    ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್

    ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಆ್ಯಕ್ಟಿಂಗ್ ಹಾಗೂ ಕ್ಯುಟ್ ಹಾಟ್ ಲುಕ್‍ನಿಂದ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ. ಸದ್ಯ ಹಿಂದಿಯ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ನಟಿಸುತ್ತಿದ್ದು, ಈ ಚಿತ್ರದ ಹಾಡಿನ ಫೋಟೋವೊಂದರಲ್ಲಿ ರಕುಲ್ ಅವರ ಖಾಸಗಿ ಅಂಗ ಕಾಣುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದು, ಸದ್ಯ ಫೋಟೋ ವೈರಲ್ ಆಗಿದೆ.

    ಈ ವೈರಲ್ ಫೋಟೋದಲ್ಲಿ ರಕುಲ್ ಪ್ರೀತ್ ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋವನ್ನು ಕಿಡಿಗೇಡಿಗಳು ಬದಲಿಸಿ ಖಾಸಗಿ ಭಾಗಗಳು ಕಾಣಿಸುವಂತೆ ಎಡಿಟ್ ಮಾಡಿದ್ದಾರೆ. ಅಲ್ಲದೆ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿರುವ ನಟಿಗೆ ಮೈ ಮೇಲೆ ಧ್ಯಾನವಿರಲಿಲ್ಲವಾ? ಡ್ಯಾನ್ಸ್ ಮಾಡುವಾಗ ಗೊತ್ತಾಗಿಲ್ವಾ? ಎಂದು ಕಮೆಂಟ್ ಮಾಡಿ ನೆಟ್ಟಿಗರು ಟೀಕಿಸುತ್ತಿದ್ದಾರೆ.

    ಈ ಚಿತ್ರದ ಶರಾಬನ್ ಹಾಡಿಗೆ ರಕುಲ್ ವಿಸ್ಕಿ ಟಾಟಲಿಯನ್ನು ಹಿಡಿದು ಸಖತ್ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್‍ಗೆ ಸಾಥ್ ನೀಡಿರುವ ರಕುಲ್, ಅವರ ಮಾಜಿ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಶರಾಬನ್ ಹಾಡಿನಲ್ಲಿ ರಕುಲ್ ಜೊತೆ ಅಜಯ್ ಅವರು ಕೂಡ ಹೆಜ್ಜೆ ಹಾಕಿದ್ದು, ಸದ್ಯ ಈ ಹಾಡು ಯುವ ಪೀಳಿಗೆಯ ಮನ ಗೆದ್ದಿದೆ.

  • ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

    ವಾಷಿಂಗ್ಟನ್: ನಾವು ವಾಸಿಸುವ ನಗರಗಳಲ್ಲಿ ಪ್ರತಿನಿತ್ಯ ಬಹುತೇಕ ಭಿಕ್ಷುಕರು ಮತ್ತು ನಿರಾಶ್ರಿತರನ್ನು ನೋಡುತ್ತಿರುತ್ತೇವೆ. ಅವರು ಆಹಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ನಿಂದ ರೆಸ್ಟೋರೆಂಟ್ ಗಳ ಮುಂದೆಯೂ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.

    ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ ಹೋಗುತ್ತಿದ್ದರು. ಇದೇ ವೇಳೆ ಆಹಾರಕ್ಕಾಗಿ ಕಾಯುತ್ತಿದ್ದ ಭಿಕ್ಷುಕರು ಕಸದ ತೊಟ್ಟಿಯಿಂದ ಅದನ್ನು ಎತ್ತಿಕೊಂಡು ತಿನ್ನುತ್ತಿದ್ದರು.

    ಕೆಲವು ನಿರಾಶ್ರಿತರು ಕಸದ ತೊಟ್ಟಿಯಲ್ಲಿ ಬಿಸಾಡಿದ್ದ ತುಂಡುಗಳನ್ನು ಎತ್ತಿಕೊಂಡು ತಿನ್ನುತ್ತಿದ್ದರು. ಇದನ್ನು ಗಮನಿಸಿದ ಮಿಶೆಲ್ ಲುಸಿಯರ್ ಅವರು ಭಿಕ್ಷುಕರಿಗಾಗಿ ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಮಿಶೆಲ್ ಅವರು ಕೂಡಲೇ ತಮ್ಮ ಅಂಗಡಿ ಹೊರಗೆ ಬೋರ್ಡ್ ಹಾಕಿ, ಪಿಜ್ಜಾವನ್ನು ನಿರಾಶ್ರಿತರಿಗೆ ಉಚಿತವಾಗಿ ನೀಡಲಾರಂಭಿಸಿದ್ದರು. ಆ ಬೋರ್ಡಿ ನಲ್ಲಿ “ಕಸದ ತೊಟ್ಟಿಯಲ್ಲಿ ಎತ್ತಿಕೊಂಡು ತಿನ್ನುವ ವ್ಯಕ್ತಿಗಳೇ, ನೀವೂ ನಮ್ಮಂತೆ ಮನುಷ್ಯರು, ಆದ್ದರಿಂದ ಕಸದ ಬುಟ್ಟಿಯಲ್ಲಿ ಹಾಕಿರುವ ಆಹಾರಕ್ಕಿಂತ ಉತ್ತಮ ಆಹಾರ ತಿನ್ನಲು ನೀವು ಯೋಗ್ಯರಾಗಿದ್ದೀರಿ. ನೀವು ಬೇರೊಬ್ಬರ ಪಿಜ್ಜಾ ತಿನ್ನಬೇಡಿ, ನಮ್ಮ ಅಂಗಡಿಯೊಳಗೆ ಬಂದು ಉಚಿತವಾಗಿ ಪಿಜ್ಜಾ ಮತ್ತು ನೀರನ್ನು ತೆಗೆದುಕೊಂಡು ಹೋಗಿ” ಎಂದು ಮನವಿ ಮಾಡಿಕೊಂಡಿದ್ದಾರೆ.

    ಯಾವುದೇ ಹಿಂಜರಿತ ಸಂಕೋಚವಿಲ್ಲದೇ ನಮ್ಮ ಅಂಗಡಿಗೆ ಬಂದು ಪಿಜ್ಜಾ ತಿಂದು ಹೋಗಿ. ನೀವು ಅಂಗಡಿಗೆ ಬಂದರೆ ನಿಮ್ಮನ್ನು ಇಲ್ಲಿ ಯಾರೂ ಪ್ರಶ್ನೆ ಮಾಡಲ್ಲ ಎಂದು ಮಿಶೆಲ್ ಬೋರ್ಡ್ ಹಾಕಿದ್ದಾರೆ. ಈ ರೀತಿ ಬರೆದಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಗುರುತಿಸಿ- ನಿಮ್ಮ ದೃಷ್ಟಿಕೋನಕ್ಕೆ ಸವಾಲ್

    ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಗುರುತಿಸಿ- ನಿಮ್ಮ ದೃಷ್ಟಿಕೋನಕ್ಕೆ ಸವಾಲ್

    ನವದೆಹಲಿ: ಯುವಕ ಮತ್ತು ಯುವತಿ ತಬ್ಬಿಕೊಂಡ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಚಿತ್ರದಲ್ಲಿ ಯಾರು ಯಾರನ್ನ ತಬ್ಬಿಕೊಂಡಿದ್ದಾರೆ ಎನ್ನುವ ದ್ವಂದ್ವವು ನೋಡುಗರನ್ನು ಕಾಡುತ್ತದೆ.

    ಈ ಚಿತ್ರವನ್ನು ಮೇ 24 ರಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಕೇವಲ ಐದು ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ ಮತ್ತು 45 ಸಾವಿರ ಬಾರಿ ರೀ ಟ್ವೀಟ್ ಆಗಿದೆ. ಈ ಮೂಲಕ ಅಂತರ್ಜಾಲದಲ್ಲಿ ಬಾರಿ ಸದ್ದು ಮಾಡಿ ರೆಕಾರ್ಡ್ ಮಾಡಿದೆ.

    ಚಿತ್ರ ನೋಡಿದ ಕೆಲವರು ಯುವಕ ಹೈಹೀಲ್ಸ್ ಹಾಕಿಕೊಂಡಿದ್ದಾನೆ. ಚೇರ್ ಮೇಲೆ ಯುವತಿ ಕುಳಿತಿದ್ದು, ಅವಳನ್ನು ಯುವಕ ತಬ್ಬಿಕೊಂಡಿದ್ದಾನೆ ಎಂದು ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದ್ರೆ ಯಾರು ಯಾರನ್ನು ತಬ್ಬಿಕೊಂಡಿದ್ದಾರೆ ಎಂದು ಕಂಡುಹಿಡಿಯುವಲ್ಲಿ ಬಹಳಷ್ಟು ಮಂದಿಯ ಪ್ರಯತ್ನ ವಿಫಲವಾಗಿದೆ. ಹೀಗಾಗಿ ನೀವು ಒಮ್ಮೆ ಗುರುತಿಸಲು ಪ್ರಯತ್ನಿಸಿ.

    ಇಲ್ಲಿದೆ ಉತ್ತರ:
    ಇದು ನಮ್ಮ ದೃಷ್ಟಿಗೆ ಸವಾಲುವೊಡ್ಡುವ ಚಿತ್ರವಾಗಿದ್ದು, ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ನೀಲಿ ಮಾರ್ಕರ್ ನಿಂದ ಗೆರೆ ಎಳೆದಿರುವುದು ಯುವತಿಯ ದೇಹವಾಗಿದ್ದು, ಹಳದಿ ಮಾರ್ಕರ್ ನಿಂದ ಗೆರೆ ಎಳೆದಿರುವುದು ಯುವಕನ ದೇಹ. ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡಿರುವುದನ್ನು ನೀವು ಕಾಣಬಹುದು.

  • ವೈರಲ್ ಆಗ್ತಿದೆ ವೃದ್ದೆಗೆ ಕೈಯಾರೆ ಪೂರಿ ತಿನ್ನಿಸುತ್ತಿರುವ ಟ್ರಾಫಿಕ್ ಪೊಲೀಸ್ ಫೋಟೋ

    ವೈರಲ್ ಆಗ್ತಿದೆ ವೃದ್ದೆಗೆ ಕೈಯಾರೆ ಪೂರಿ ತಿನ್ನಿಸುತ್ತಿರುವ ಟ್ರಾಫಿಕ್ ಪೊಲೀಸ್ ಫೋಟೋ

    ಹೈದರಾಬಾದ್: ದಿನನಿತ್ಯ ರಸ್ತೆಯಲ್ಲಿ ನಿಂತು ಬಳಲುವ ಟ್ರಾಫಿಕ್ ಪೊಲೀಸರು ಆಗಾಗ ಮಾನವೀಯತೆ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ.

    ಭಾನುವಾರ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಒಬ್ಬರು ಬೀದಿ ಬದಿಯಲ್ಲಿದ್ದ ಅನಾಥ ವೃದ್ಧೆಗೆ ಕೈಯಾರೆ ಪೂರಿ ತಿನ್ನಿಸಿದ್ದಾರೆ. ಸದ್ಯಕ್ಕೆ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟ್ರಾಫಿಕ್ ಪೊಲೀಸ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಕುಕಟ್ಪಳ್ಳಿಯ ಟ್ರಾಫಿಕ್ ಪೇದೆ ಬಿ.ಗೋಪಾಲ್, ಅನಾಥ ವೃದ್ಧೆಗೆ ಊಟ ಮಾಡಿಸಿದವರು. ಕುಕಟ್ಪಳ್ಳಿಯ ಜೆಎನ್ ಟಿಯು ಬಳಿ ಸೇವೆ ಸಲ್ಲಿಸುತ್ತಿರುವ ವೇಳೆ ಪಕ್ಕದ ರಸ್ತೆ ಬಳಿ ವೃದ್ಧೆ ಕುಳಿತುಕೊಂಡಿರುವುದು ಕಂಡಿದೆ. ಕೂಡಲೇ ಬಿ.ಗೋಪಾಲ್ ಅಲ್ಲಿಗೆ ಹೋಗಿ ವೃದ್ಧೆಯನ್ನು ವಿಚಾರಿಸಿದ್ದಾರೆ. ನಂತರ ವೃದ್ಧೆ ಹಸಿವಿನಿಂದ ಬಳಲುತ್ತಿರುವುದು ಗೊತ್ತಾಗಿದೆ.

    ಗೋಪಾಲ್ ತಕ್ಷಣ ಕೂಡಲೇ ಹೋಟೆಲ್ ನಿಂದ ಪೂರಿ ಪಾರ್ಸಲ್ ತಂದು ತಮ್ಮ ಕೈಯಾರೆ ತಿನ್ನಿಸಿದ್ದಾರೆ. ಅನಾಥ ವೃದ್ಧೆಗೆ ಪೂರಿ ತಿನ್ನಿಸುತ್ತಿರುವ ಫೋಟೋವನ್ನು ಸಾರ್ವಜನಿಕರು ತೆಗೆದು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.

    ಸದ್ಯಕ್ಕೆ ಆ ಫೋಟೋ ವೈರಲ್ ಆಗಿದ್ದು, ಟ್ರಾಫಿಕ್ ಪೇದೆ ಗೋಪಾಲ್ ಕಾರ್ಯಕ್ಕೆ ಪ್ರಶಂಸೆಗಳ ಸುರಿಮಳೆ ಹರಿದು ಬರುತ್ತಿವೆ.

  • ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!

    ಗಾಂಧಿನಗರ: ಗುಜರಾತಿನ ಗಿರ್ ಅರಣ್ಯದಲ್ಲಿ ಚಿರತೆಯನ್ನು ಹಿಡಿಯಲು ಇಟ್ಟಿದ್ದ ಬೋನಿಗೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಒಳಗೆ ಸೆರೆಯಾಗಿರುವ ಫೋಟೋ ಈಗ ಸಾಮಾಜಿಕ ಜಾತಾಣದಲ್ಲಿ ವೈರಲ್ ಆಗಿದೆ.

    ಗಿರ್ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಬೋನಿನೊಳಗೆ ಸೆರೆಯಾಗಿ ಕೆಲವು ಗಂಟೆಗಳು ಕಳೆದರೂ ಆ ವ್ಯಕ್ತಿಗೆ ಸಹಾಯ ಮಾಡಲು ಯಾರೊಬ್ಬರು ಮುಂದಾಗಲಿಲ್ಲ.

    ವ್ಯಕ್ತಿಯು ನನ್ನನ್ನು ಹೊರಗೆ ಬಿಡಿ, ಹಸಿವಾಗುತ್ತಿದೆ, ಕುಡಿಯಲು ನೀರು ಕೊಡಿ ಎಂದು ಬೇಡಿಕೊಂಡರೂ ಸ್ಥಳಿಯರು ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು ಎಂದು ವರದಿಯಾಗಿದೆ.

    ಸ್ವಯಂಚಾಲಿತ ತಂತ್ರಜ್ಞಾನವನ್ನು ಹೊಂದಿರುವ ಈ ಬೋನ್ ಒಳಗಡೆ ಯಾರೆ ಪ್ರವೇಶಿಸಿದರೂ ತಕ್ಷಣ ಲಾಕ್ ಆಗುತ್ತದೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಅಧಿಕಾರಿಗಳು ಸ್ಥಳಕ್ಕೆ  ಬಂದು  ಬೋನಿನ ಲಾಕ್ ತೆಗೆದಿದ್ದು, ಬಳಿಕ ವೈಕ್ತಿ  ಹೊರಗೆ  ಬಂದಿದ್ದಾನೆ.