Tag: Photo Viral

  • ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

    ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ: ಶೀಘ್ರವೇ ದರ್ಶನ್ ಬೇರೆ ಜೈಲಿಗೆ ಶಿಫ್ಟ್?

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara Jail) ದರ್ಶನ್ (Actor Darshan) ಮತ್ತು ವಿಲ್ಸನ್ ಗಾರ್ಡನ್ ನಾಗನ ಫೋಟೋ ವೈರಲ್ ಆದ ಬೆನ್ನಲ್ಲೇ ಇಬ್ಬರು ಬೇರೆ ಕಡೆ ಶಿಫ್ಟ್ ಆಗುವ ಸಾಧ್ಯತೆಯಿದೆ.

    ಮೂಲಗಳ ಪ್ರಕಾರ ಎರಡು ದಿನಗಳ ಒಳಗಡೆ ಬಳ್ಳಾರಿ (Ballary) ಅಥವಾ ಬೆಳಗಾವಿ (Belagavi) ಜೈಲಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇಬ್ಬರನ್ನು ಸ್ಥಳಾಂತರ ಮಾಡುವ ಸಂಬಂಧ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ – 7 ಮಂದಿ ಅಮಾನತು

    ಫೋಟೋ ವೈರಲ್ ಆದ ಬೆನ್ನಲ್ಲೇ ಸರ್ಕಾರ ಈಗಾಗಲೇ 7 ಮಂದಿಯನ್ನು ಅಮಾನತು ಮಾಡಿದೆ.

    ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ (Parameshwar) ಜೈಲಿನಲ್ಲಿ ಈ ರೀತಿ ನಡೆಯಬಾರದು. 7 ಜನ ಭಾಗಿಯಾಗಿದ್ದಾರೆ ಅಂತ ವರದಿ ಬಂದ ಮೇಲೆ ಕ್ರಮ ತೆಗೆದುಕೊಂಡಿದೆ. ಎಲ್ಲಾ ಜೈಲುಗಳಲ್ಲಿ ಜಾಮರ್, ಕ್ಯಾಮೆರಾ ಹಾಕಿದರೂ ಹೀಗೆ ಆಗುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಜೈಲು ಅಧಿಕಾರಿಗಳಾದ ಶರಣ ಬಸವ ಅಮೀನ್‌ಗಡ್, ಪ್ರಭು ಎಸ್. ಖಂಡೇಲ್‌ವಾಲ್, ಅಸಿಸ್ಟೆಂಟ್ ಜೈಲರ್ಸ್ ಎಲ್.ಎಸ್. ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ ಕೊರ್ಟಿ, ಸಂಪತ್ ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ತೇಲಿ ಅವರನ್ನು ಅಮಾನತು ಮಾಡಲಾಗಿದೆ.ಇದನ್ನೂ ಓದಿ: ಕಿಲ್ಲಿಂಗ್ ಸ್ಟಾರ್ ಬಿಂದಾಸ್ ಲೈಫ್- ಜೈಲು ನಿಯಮ ಏನು ಹೇಳುತ್ತೆ?

    ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿಗಳ ಜೊತೆ ಫೋಟೊ ವೈರಲ್ ಬೆನ್ನಲ್ಲೇ ಆಂತರಿಕ ತನಿಖೆಗೆ ಕಾರಾಗೃಹಗಳ ಡಿ.ಜಿ ಮಾಲಿನಿ ಕೃಷ್ಣಮೂರ್ತಿ (DG Malini Krishnamurthy) ಆದೇಶ ನೀಡಿದ್ದಾರೆ. ರಾಜಾತಿಥ್ಯ ನೀಡಿದ ವಿಚಾರ ಹಾಗೂ ರೌಡಿಗಳ ಜೊತೆ ಇರಲು ಬಿಟ್ಟಿದ್ದು ಯಾರು? ಅನ್ನೋದನ್ನು ಜೈಲಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

  • ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಮುಂಬೈ: ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಥ್ರೋಬ್ಯಾಕ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ.

    ಇಂದು ಬಿಸ್ಸನೆಸ್ ಫೀಲ್ಡ್ ನಲ್ಲಿ ಆನಂದ್ ಮಹೀಂದ್ರಾ ಪ್ರಸಿದ್ಧಿಯನ್ನು ಹೊಂದಿದ್ದಾರೆ. ಆದರೆ ಹಿಂದೆ ಆನಂದ್ ಅವರು ಸಿನಿಮಾ ನಿರ್ಮಾಪಕರಾಗಲು ಬಯಸಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಈಗ ಆನಂದ್ ಮಹೀಂದ್ರಾ ಅವರಿಗೆ 66 ವರ್ಷವಾಗಿದ್ದು, ಇಂದು ಮಧ್ಯಾಹ್ನ ಟ್ವಿಟ್ಟರ್ ನಲ್ಲಿ ಅಪರೂಪದ ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡು ತಮ್ಮ ಹಿಂದಿನ ಕನಸಿನ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದಿಂದಲೇ ಕಾನ್ಪುರದಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ತಡೆದ ಮನೆಯವರು

    ಆನಂದ್ ಅವರು ಯುವಕರಾಗಿದ್ದಾಗ ತೆಗೆದ ಬ್ಲಾಕ್ ಅಂಡ್ ವೈಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ಆ ಫೋಟೋವನ್ನು ನೋಡಿದ ಆನಂದ್ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಫೋಟೋ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಆನಂದ್ ಅವರು, ಈ ಫೋಟೋವನ್ನು ಹಲವು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ಬಳಿಯ ದೂರದ ಹಳ್ಳಿಯಲ್ಲಿ 16 ಎಂಎಂ ಕ್ಯಾಮರಾದಲ್ಲಿ ತೆಗೆಯಾಲಾಗಿತ್ತು. ನಾನು ಆಗ ಕಾಲೇಜಿನಲ್ಲಿ ಸಿನಿಮಾ ನಿರ್ಮಾಣದ ತರಬೇತಿಯನ್ನು ಪಡೆಯುತ್ತಿದ್ದೆ. ಈ ಫೋಟೋವನ್ನು ಇಂಧೋರ್ ಬಳಿಯ ದೂರದ ಹಳ್ಳಿಯಲ್ಲಿ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವಾಗ ತೆಗೆಯಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.

    ಟ್ವಿಟರ್ ಬಳಕೆದಾರರು ಆನಂದ್ ಅವರಿಗೆ, ‘ಶಾಲೆ/ಕಾಲೇಜು ದಿನಗಳಲ್ಲಿ ನಿಮ್ಮ ಮಹತ್ವಾಕಾಂಕ್ಷೆ’ ಏನೆಂದು ಕೇಳಿದಾಗ ಅವರು ಉತ್ತರಿಸಿದ್ದು, ಇದಕ್ಕೆ ಉತ್ತರಿಸುವುದು ಸುಲಭ. ನಾನು ಚಲನಚಿತ್ರ ನಿರ್ಮಾಪಕನಾಗಲು ಬಯಸಿದ್ದೆ ಮತ್ತು ಕಾಲೇಜಿನಲ್ಲಿ ಸಿನಿಮಾ ಕುರಿತು ಅಧ್ಯಯನವನ್ನು ಸಹ ಮಾಡಿದ್ದೇನೆ. ನಾನು ನನ್ನ ಪ್ರಬಂಧವನ್ನು ’77 ಕುಂಭಮೇಳ’ ಸಿನಿಮಾ ಬಗ್ಗೆ ಮಾಡಿದ್ದೆ ಎಂದು ಉತ್ತರಿಸಿದ್ದಾರೆ.

    ಆನಂದ್ ಅವರು ಆಗಾಗ್ಗೆ ತಮ್ಮ ಸಿನಿಮಾ ಮೇಲಿನ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. 2017 ರಲ್ಲಿ, ಟ್ವಿಟ್ಟರ್ ನಲ್ಲಿ ಅವರು, ತಮ್ಮ ಪ್ರಬಂಧದ ಸಿನಿಮಾವಾದ ‘ಕುಂಭಮೇಳ’ ಚಿತ್ರೀಕರಣದ ಬಗ್ಗೆ ಹಂಚಿಕೊಂಡಿದ್ದರು. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

    2014 ರ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಚಲನಚಿತ್ರ ನಿರ್ಮಾಣವನ್ನು ಏಕೆ ಆರಿಸಿಕೊಂಡೆ ಎಂದು ಜನರು ನನ್ನನ್ನು ಆಗಾಗ್ಗೆ ಕೇಳುತ್ತಾರೆ. ಅದಕ್ಕೆ ಉತ್ತರ ಇಂದು ಕೊಡುತ್ತೇನೆ. ನನ್ನ ಸ್ವಂತ ಜಾಗವನ್ನು ನಾನು ಕೆತ್ತಬಲ್ಲೆ ಎಂದು ಸಾಬೀತುಪಡಿಸಲು ಚಲನಚಿತ್ರವು ನನಗೆ ಒಂದು ಅದ್ಭುತ ವೇದಿಕೆಯಾಗಿದೆ. ಸಿನಿಮಾ ನನ್ನ ಸಾಮಥ್ರ್ಯವನ್ನು ಹೆಚ್ಚಿಸಲು ವಿಶ್ವಾಸವನ್ನು ನೀಡಿದೆ. ನನ್ನ ಜೀವನದುದ್ದಕ್ಕೂ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್‍ಕುಮಾರ್ ರಾವ್ – ಫೋಟೋ ವೈರಲ್

    ಮುಂಬೈ: ಬಾಲಿವುಡ್ ನಟ ರಾಜ್‍ಕುಮಾರ್ ರಾವ್ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ಫೋಟೋಗಳನ್ನು ರಾಜ್‍ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಲವಾರು ಸೆಲಿಬ್ರೆಟಿಗಳು, ಸ್ನೇಹಿತರು ನವಜೋಡಿಗೆ ಶುಭ ಹಾರೈಸಿದ್ದಾರೆ.

    ನವೆಂಬರ್ 15 ರಂದು ರಾಜ್‍ಕುಮಾರ್ ರಾವ್ ಮತ್ತು ಪತ್ರಲೇಖಾ ಜೊತೆ ಚಂಡೀಗಢದಲ್ಲಿ ಸಪ್ತಪದಿ ತುಳಿದರು. ಸದ್ಯ ಮದುವೆ ಸಮಾರಂಭದ ಫೋಟೋಗಳನ್ನು ರಾಜ್‍ಕುಮಾರ್ ರಾವ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಾಜ್‍ಕುಮಾರ್ ರಾವ್ ಕ್ರೀಮ್ ಕಲರ್ ಸಂಪ್ರದಾಯಿಕ ಉಡುಗೆ ಧರಿಸಿದ್ದರೆ, ಪತ್ರಲೇಖಾ ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಮಿಂಚುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಎಲ್ಲರನ್ನೂ ಕಾಡಲು ಶುರು ಮಾಡಿದೆ ಕಡಲ ತೀರದ ಭಾರ್ಗವ ಚಿತ್ರದ ‘ಸಮಯವೇ’ ಲಿರಿಕಲ್ ವೀಡಿಯೋ ಸಾಂಗ್

    Rajkummar Rao

    ಫೋಟೋ ಜೊತೆಗೆ ’11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ಮೋಜಿನ ನಂತರ ಅಂತಿಮವಾಗಿ ನಾನು ಇಂದು ನನ್ನ ಎಲ್ಲವೂ ಆಗಿದ್ದವರನ್ನು ಮದುವೆಯಾಗಿದ್ದೇನೆ. ನನ್ನ ಆತ್ಮ ಸಂಗಾತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಕುಟುಂಬ. ಇಂದು ಪತ್ರಲೇಖ ಪತಿ ಎಂದು ಕರೆಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಾಗಿ ನನಗೆ ಮತ್ತೊಂದು ಖುಷಿ ಇಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪುನೀತ್ ದೇವರ ಸ್ವರೂಪದಲ್ಲಿದ್ದರು, ಆದ್ರೆ ನಮಗೆ ತಿಳಿಯಲಿಲ್ಲ: ಸೋನು ಗೌಡ

     

    View this post on Instagram

     

    A post shared by RajKummar Rao (@rajkummar_rao)

    ಇದೇ ರೀತಿ ಪತ್ರಲೇಖ ಅವರು ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ನನಗೆ ಎಲ್ಲವೂ ಆಗಿದ್ದವರನ್ನು ನಾನು ಇಂದು ಮದುವೆಯಾಗಿದ್ದೇನೆ. ನನ್ನ ಗೆಳೆಯ, ನನ್ನ ಕ್ರೈಂ ಪಾರ್ಟ್‍ನರ್, ಕಳೆದ 11 ವರ್ಷಗಳ ಉತ್ತಮ ಸ್ನೇಹಿತ. ನಿಮ್ಮ ಹೆಂಡತಿಯಾಗಿರುವುದಕ್ಕಿಂತ ದೊಡ್ಡದೇನಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನ.19ಕ್ಕೆ ಸಾಮಾಜಿಕ ಜಾಲತಾಣಗಳ ಭೀಕರತೆಯನ್ನು ಅನಾವರಣ ಮಾಡಲಿದೆ ‘100’ ಸಿನಿಮಾ

     

    View this post on Instagram

     

    A post shared by ???? Patralekhaa ???? (@patralekhaa)

    ಸದ್ಯ ಈ ನವಜೋಡಿಯ ಫೋಟೋಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್, ದಿಯಾ ಮಿರ್ಜಾ, ಸಾನಿಯಾ ಮಲ್ಹೋತ್ರಾ, ಆಯುಷ್ಮಾನ್ ಕುರಾನಾ, ತಾಪ್ಸಿ ಪನ್ನು, ಭೂಮಿ ಪಡಿಕರ್, ಸೋನಾಲಿ ಬೇಂದ್ರೆ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರೆಟಿಗಳು ಶುಭಾಶಯ ತಿಳಿಸಿದ್ದಾರೆ.

  • 5.7 ಲಕ್ಷ ಕೊಟ್ಟು ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ – ಫೋಟೋ ವೈರಲ್

    5.7 ಲಕ್ಷ ಕೊಟ್ಟು ಚಿನ್ನದ ಮಾಸ್ಕ್ ಖರೀದಿಸಿದ ಉದ್ಯಮಿ – ಫೋಟೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉದ್ಯಮಿಯೊಬ್ಬರು ದುಬಾರಿ ಬೆಲೆಯ ಚಿನ್ನದ ಮಾಸ್ಕ್ ಅನ್ನು ಖರೀದಿಸಿದ್ದಾರೆ.

    ಕೋವಿಡ್-19 ಇನ್ನೂ ಮುಗಿಯದ ಕಾರಣ ನಮ್ಮ ದೈನಂದಿನ ಜೀವನದಲ್ಲಿ ಮಾಸ್ಕ್ ಅಗತ್ಯವಾಗಿದೆ. ಆದರೆ ಜನರು ಮಾಸ್ಕ್‌ನಲ್ಲಿ ಕೂಡ ಟ್ರೆಂಡಿ ಹಾಗೂ ಫ್ಯಾಷನ್ ಅನ್ನು ಹುಡುಕುತ್ತಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ, ನಿಮ್ಮದು ಹಗಲುವೇಷವೋ, ಛದ್ಮ ವೇಷವೋ?: ಬಿಜೆಪಿ ಟ್ವೀಟ್ ವಾರ್

    ಸದ್ಯ ಆಭರಣದ ತಯಾರಕ ಚಂದನ್‍ದಾಸ್ ಎಂಬವರು ಚಿನ್ನದ ಮಾಸ್ಕ್ ತಯಾರಿಸಿದ್ದಾರೆ. ಕೇವಲ 15 ದಿನಗಳಲ್ಲಿ ಸ್ಥಳೀಯ ಉದ್ಯಮಿಗಳೊಂದಿಗೆ ಸೇರಿ ಚಂದನ್ ದಾಸ್ 5.70 ಲಕ್ಷ ರೂಪಾಯಿ ಮೌಲ್ಯದ, 108 ಗ್ರಾಂ ಚಿನ್ನದ ಮಾಸ್ಕ್ ಅನ್ನು ಸಿದ್ದಪಡಿಸಿದ್ದಾರೆ. ಇನ್ನೂ ಈ ಮಾಸ್ಕ್ ಅನ್ನು ಪತ್ರಕರ್ತೆ ರಿತುಪರ್ಣ ಚಟರ್ಜಿ ಎಂಬವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಬಿಎಸ್‌ಎಫ್‌ ಅಧಿಕಾರ ವ್ಯಾಪ್ತಿ ವಿಸ್ತರಣೆ- ಕೇಂದ್ರದ ಅಧಿಸೂಚನೆ ವಿರುದ್ಧ ಪಂಜಾಬ್‌ ನಿರ್ಣಯ

    ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ಪ್ರಶಂಸಿದರೆ, ಮತ್ತೆ ಕೆಲವರು ಅಷ್ಟು ಸಂಪತ್ತನ್ನು ಹೊಂದಿರುವವರು, ಕಾಯಿಲೆಯಿಂದ ತಮ್ಮ ಜೀವವನ್ನು ಕಳೆದುಕೊಂಡ ಸಾವಿರಾರು ಬಡ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದೆ ಅಸಭ್ಯವಾಗಿ ಸಂಪತ್ತಿನ ಪ್ರದರ್ಶನ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ಐಸ್ ಕ್ಯಾಂಡಿ ಇಡ್ಲಿ ಬಳಿಕ ವೈರಲ್ ಆಗ್ತಿದೆ ಇಡ್ಲಿ ವಡಾಪಾವ್

    ತ್ತೀಚೆಗಷ್ಟೇ ಐಸ್ ಕ್ಯಾಂಡಿ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಇಡ್ಲಿ ವಡಾ ಪಾವ್‍ನ ಫೋಟೋ ವೈರಲ್ ಆಗುತ್ತಿದೆ.

    ಸುರೇಶ್ ರೈ ಧೀಮಾನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಇಡ್ಲಿಯನ್ನು ಪಾವ್‍ನಂತೆ ಉರಿದು, ಅದರ ಮಧ್ಯದಲ್ಲಿ ಆಲೂಗಡ್ಡೆ ಸ್ಟಫಿಂಗ್ ಜೊತೆ ಕೆಂಪು ಮಸಾಲ ಬೆರೆಸಿ ತುಂಬಿರುವುದನ್ನು ಕಾಣಬಹುದಾಗಿದೆ.

    ಇಡ್ಲಿ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ಖಾದ್ಯವಾಗಿದ್ದು, ಇದನ್ನು ಸಾಮಾನ್ಯವಾಗಿ ಸಾಂಬಾರ್ ಮತ್ತು ಚಟ್ನಿ ಜೊತೆಗೆ ಜನ ಸವಿಯುತ್ತಾ ಆನಂದಿಸುತ್ತಾರೆ. ಇನ್ನೂ ವಡಾಪಾವ್ ಮಹಾರಾಷ್ಟ್ರದ ಸ್ಥಳೀಯ ಆಹಾರ ಭಕ್ಷ್ಯವಾಗಿದ್ದು, ಈ ಎರಡರ ಮಧ್ಯೆ ಸ್ಪೈಸಿ ಆಲೂಗಡ್ಡೆ ಸ್ಟಫಿಂಗ್ ಅನ್ನು ತುಂಬಿ ಕೆಂಪು ಚಟ್ನಿ ಹಾಗೂ ಪಾನಿಯರಮ್ ಜೊತೆಗೆ ಬಡಿಸಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ಇದೀಗ ಈ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗುತ್ತಿದೆ.

    ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇಡ್ಲಿ ವಡಾಪಾವ್ ನೋಡಿ ಫಿದಾ ಆಗಿದ್ದು, ಹಲವಾರು ರೀತಿ ಕಾಮೆಂಟ್‍ಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್ ಆಯ್ತು ಬೆಂಗಳೂರು ಹೋಟೆಲಿನ ಐಸ್ ಕ್ಯಾಂಡಿ ಇಡ್ಲಿ

    ಇತ್ತೀಚೆಗಷ್ಟೇ ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಐಸ್ ಕ್ಯಾಂಡಿ ಇಡ್ಲಿ ಫೋಟೋವನ್ನು ತಮ್ಮ ಟ್ವಿಟ್ಟರ್‍ನಲ್ಲಿ ಹಂಚಿಕೊಂಡು, ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್, ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿಯನ್ನು ತಡೆಯಲು ಎಂದಿಗೂ ಸಾಧ್ಯವಿಲ್ಲ. ಐಸ್ ಕಡ್ಡಿಯ ಮೇಲೆ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ, ಯಾರು ಇದರ ವಿರುದ್ಧವಾಗಿದ್ದೀರಿ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಪ್ರಶ್ನಿಸಿದ್ದರು.

    ಹೀಗೆ ಪ್ರಶ್ನಿಸುತ್ತಿದ್ದಂತೆ ಹಲವರು ವಿವಿಧ ರೀತಿಯಲ್ಲಿ ಜನರು ತಮ್ಮ ಅಭಿಪ್ರಾಯ ತಿಳಿಸಿದ್ದರು. ಅಲ್ಲದೇ ಈ ಇಡ್ಲಿ ಕುರಿತು ದೇಶಾದ್ಯಂತ ಚರ್ಚೆ ನಡೆದಿತ್ತು ಮತ್ತು ಪರ ವಿರೋಧದ ಕಾಮೆಂಟ್‍ಗಳು ಕೂಡ ಹರಿದು ಬಂದಿತ್ತು. ಇದನ್ನೂ ಓದಿ: ಬಿಸಿಯಾದ ನವಣೆ ಉಪ್ಪಿಟ್ಟು ಮಾಡಿ ಸವಿಯಿರಿ

  • ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರ ವಿರುದ್ಧ ಕ್ರಮ

    ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರ ವಿರುದ್ಧ ಕ್ರಮ

    ಲಕ್ನೋ: ಕಾಂಗ್ರೆಸ್ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಮಹಿಳಾ ಪೊಲೀಸ್ ಕಾನ್ಸ್‌ಸ್ಟೇಬಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

    ಉತ್ತರ ಪ್ರದೇಶದಿಂದ ಆಗ್ರಾಕ್ಕೆ ಹೋಗುವಾಗ ಲಕ್ನೋ ಹೊರವಲಯದಲ್ಲಿ ಪ್ರಿಯಾಂಕಾ ಗಾಂಧಿ ಜೊತೆ ಮಹಿಳಾ ಕಾನ್ಸ್‌ಸ್ಟೇಬಲ್‌ ಗುಂಪೊಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದಾಗ್ಯೂ ಈ ವಿಚಾರ ಕಾನ್ಸ್‌ಸ್ಟೇಬಲ್‍ಗಳಿಗೆ ಖುಷಿಯಾದ ವಿಚಾರವಾಗಿ ಪರಿಣಮಿಸದೇ ಸಮಸ್ಯೆಯಾಗಿ ಎದುರಾಗಿದೆ. ಇದನ್ನೂ ಓದಿ: ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ: ಬಸವರಾಜ ಬೊಮ್ಮಾಯಿ

    ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಫೋಟೋಗೆ ಪೋಸ್ ನೀಡಿದ ಮಹಿಳಾ ಕಾನ್ಸ್‌ಸ್ಟೇಬಲ್‌ಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಲಕ್ನೋ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ತಿಳಿಸಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪ್ರವಾದಿ, ಇಸ್ಲಾಂ ಅವಹೇಳನ – ಪ್ರೊ.ಬಿ.ಆರ್.ರಾಮಚಂದ್ರಯ್ಯರನ್ನು ಕೆಲಸದಿಂದ ವಜಾಗೊಳಿಸಿಲು ಆಗ್ರಹ

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ನನ್ನ ಜೊತೆ ಫೋಟೋ ತೆಗೆದುಕೊಳ್ಳುವುದು ಅಪರಾಧ ಆಗಿದ್ದರೆ, ನನಗೆ ಶಿಕ್ಷೆ ನೀಡಬೇಕು, ಆದರೆ ಮಹಿಳಾ ಕಾನ್ಸ್‌ಸ್ಟೇಬಲ್‌ಗಳನ್ನು ದೂಷಿಸುವುದು ಏಕೆ? ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ- ನಾಳೆ ತುಮಕೂರು ಬಂದ್

    ಯೋಗಿ ಆದಿತ್ಯನಾಥ್ ಅವರಿಗೆ ಈ ಫೋಟೋ ವಿಚಾರವಾಗಿ ಅಸಮಾಧಾನವಿದ್ದು, ಅವರು ಈ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಇದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ನನ್ನೊಂದಿಗೆ ಫೋಟೋ ತೆಗೆದುಕೊಂಡಿರುವುದು ಅಪರಾಧವಾಗಿದ್ದರೆ, ಅದಕ್ಕಾಗಿ ನನಗೆ ಶಿಕ್ಷೆ ನೀಡಬೇಕು. ಅದನ್ನು ಹೊರತುಪಡಿಸಿ ಈ ಶ್ರಮಜೀವಿ ಮತ್ತು ನಿಷ್ಠಾವಂತ ಪೊಲೀಸರ ವೃತ್ತಿಯನ್ನು ಹಾಳುಮಾಡುವುದು ಸರ್ಕಾರಕ್ಕೆ ಕ್ಷೋಭೆಯಲ್ಲ ಎಂದಿದ್ದಾರೆ.

    25 ಲಕ್ಷ ಕಳ್ಳತನ ಮಾಡಿದ ಆರೋಪದಲ್ಲಿ ಅರುಣ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧನ ಮಾಡಿದ್ದರು. ಆದರೆ ಆ ವ್ಯಕ್ತಿಯು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆಗ್ರಾಕ್ಕೆ ತೆರಳುತ್ತಿದ್ದರು. ಆದರೆ ಈ ವೇಳೆ ಪ್ರಿಯಾಂಕಾ ಗಾಂಧಿ ಭೇಟಿಯಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದಿದ್ದರಿಂದ ಪೊಲೀಸರು ಅವರನ್ನು ವಶಕ್ಕೆ ಪಡೆದಿದರು. ಆದರೆ ಸ್ವಲ್ಪ ಸಮಯದ ನಂತರ ಬಿಡುಗಡೆಗೊಳಿಸಿ ಕೇವಲ ನಾಲ್ಕು ಮಂದಿಗೆ ಮಾತ್ರ ಆಗ್ರಾಗೆ ಹೋಗಲು ಅನುಮತಿ ನೀಡಲಾಯಿತು.

  • ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

    ಪುನೀತ್ ಜೊತೆ ಗನ್ ಹಿಡಿದು ಫೋಟೋಗೆ ವಿದೇಶಿ ಹುಡ್ಗೀರ ಪೋಸ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರೀಕರಣದ ವೇಳೆ ಪುನೀತ್ ಜೊತೆ ವಿದೇಶಿ ಹುಡುಗಿರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯಿಸಿದ್ದ ಬಹದ್ದೂರ್, ಭರ್ಜರಿ ಹಾಗೂ ನಟ ಶ್ರೀ ಮುರಳಿ ಅಭಿನಯಿಸಿದ್ದ ಭರಾಟೆ ಸಿನಿಮಾವನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ, ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಪುನೀತ್‍ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ: ತನ್ನದೇ ಹೊಸ ಸಾಮಾಜಿಕ ಮಾಧ್ಯಮ ‘TRUTH Social’ ಆರಂಭಿಸಿದ ಟ್ರಂಪ್

     

     ಜೇಮ್ಸ್ ​ವೊಂದು ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿದ್ದು, ಈಗಾಗಲೇ ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಸದ್ಯ ಚಿತ್ರೀಕರಣದ ನಡುವೆ ಪುನೀತ್ ಜೊತೆ ಇಬ್ಬರು ವಿದೇಶಿ ಹುಡುಗಿಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಫೋಟೋದಲ್ಲಿ ಇಬ್ಬರು ಹುಡುಗಿರು ಗ್ರೇ ಕಲರ್ ಶಾರ್ಟ್ ಟಾಪ್, ಬ್ಲಾಕ್ ಕಲರ್ ಪ್ಯಾಂಟ್ ಹಾಗೂ ಬ್ಲಾಕ್ ಕಲರ್ ಜಾಕೆಟ್ ತೊಟ್ಟು, ಕೈಯಲ್ಲಿ ಗನ್ ಹಿಡಿದುಕೊಂಡು ಪುನೀತ್ ಅಕ್ಕಪಕ್ಕ ನಿಂತು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವಭೂಮಿ ಉತ್ತರಾಖಂಡ್‍ನಲ್ಲಿ ಮೇಘಸ್ಫೋಟ – 12 ಮಂದಿ ಸಾವು, 20 ಮಂದಿ ನಾಪತ್ತೆ

    ಈ ಫೋಟೋ ನೋಡುತ್ತಿದ್ದರೆ, ಬಹುಶಃ ಇದು ಫೈಟಿಂಗ್ ಅಥವಾ ಹಾಡಿನ ಚಿತ್ರೀಕರಣದ ವೇಳೆ ಸೆರೆಹಿಡಿದಿರುವಂತೆ ಕಾಣಿಸುತ್ತದೆ. ಒಟ್ಟಾರೆ ಈ ಫೋಟೋ ನೋಡಿ ಅಭಿಮಾನಿಗಳು ಥ್ರೀಲ್ ಆಗಿದ್ದು, ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಧಾರಾಕಾರ ಮಳೆ – 400ಕ್ಕೂ ಹೆಚ್ಚು ಮನೆಗಳಿಗೆ ನೀರು

    ಈ ಸಿನಿಮಾದಲ್ಲಿ ಪುನೀತ್‍ಗೆ ಜೋಡಿಯಾಗಿ ಕಾಲಿವುಡ್ ನಟಿ ಪ್ರಿಯಾ ಆನಂದ್ ಅಭಿನಯಿಸುತ್ತಿದ್ದು, ಚೇತನ್ ಕುಮಾರ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ನಾಲ್ಕನೇ ಸಿನಿಮಾವಾಗಿದೆ. ಚಿತ್ರಕ್ಕೆ ಎ. ಹರ್ಷ ನೃತ್ಯ ನಿರ್ದೇಶಿಸಲಿದ್ದು, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿಗಳನ್ನು ನಿರ್ದೇಶಿಸಲಿದ್ದಾರೆ ಹಾಗೂ ನಿರ್ಮಾಪಕ ಕಿಶೋರ್ ಪತಿಕೊಂಡ ಬಂಡವಾಳ ಹೂಡಿದ್ದಾರೆ.

  • ಬಟರ್ ಚಿಕನ್ ಗೋಲ್ ಗಪ್ಪ ಫೋಟೋ ವೈರಲ್ – ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

    ಬಟರ್ ಚಿಕನ್ ಗೋಲ್ ಗಪ್ಪ ಫೋಟೋ ವೈರಲ್ – ನೆಟ್ಟಿಗರ ಅಭಿಪ್ರಾಯ ಏನು ಗೊತ್ತಾ?

    ಸಾಮಾನ್ಯವಾಗಿ  ಗೋಲ್ ಗಪ್ಪವನ್ನು ಇಷ್ಟಪಡದೇ ಇರುವವರೇ ಇಲ್ಲ. ಅದರಲ್ಲಿಯೂ ಹುಡುಗಿಯರು ಹೆಚ್ಚಾಗಿ ಗೋಲ್ ಗಪ್ಪ ಪ್ರಿಯರು ಎಂದೇ ಹೇಳಬಹುದು. ಪುಚ್ಕಾ, ಪಾನಿಪುರಿ ಮತ್ತು ಹಲವು ಹೆಸರಿನ ಗರಿಗರಿಯಾದ ಗೋಲ್ ಗಪ್ಪಗಳಿರುವುದನ್ನು ನಾವು ಕಂಡಿದ್ದೇವೆ.

    ಗೋಲ್ ಗಪ್ಪವನ್ನು ಚಟ್‍ಪಟ್ ಮಸಾಲೆಯಿಂದ ತುಂಬಿದ ಆಲೂಗಡ್ಡೆ ಮತ್ತು ಪುದಿನಾದಿಂದ ತಯಾರಿಸಲ್ಪಡುವ ಪಾನಿಯೊಂದಿಗೆ ಸಂಜೆ ವೇಳೆ ಸವಿಯಲು ಸಖತ್ ಟೇಸ್ಟಿಯಾಗಿರುತ್ತದೆ. ರಸ್ತೆ ಬದಿಯಲ್ಲಿ ಹೆಚ್ಚಾಗಿ ಮಾರುವ ಇಂತಹ ಜನಪ್ರಿಯ ತಿಂಡಿಗಳಲ್ಲಿ ಕೆಲವೊಮ್ಮೆ ಮಾಡುವ ವಿಭಿನ್ನ ಪ್ರಯತ್ನಗಳು ಜನರಿಗೆ ಗೊಂದಲ ಸೃಷ್ಟಿಸುವುದಲ್ಲದೇ ಅವರು ತಲೆ ಕೆಡಿಸಿಕೊಳ್ಳುವಂತೆ ಮಾಡುತ್ತದೆ. ಹೌದು ಗೋಲ್ ಗಪ್ಪಗಳಲ್ಲಿ ಬಟರ್ ಚಿಕನ್ ಗೋಲ್ ಗಪ್ಪ ಎಂಬ ವೆರೈಟಿ ಡಿಶ್ ಸಖತ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಕೋವಿಡ್ 19 ಬೂಸ್ಟರ್ ಡೋಸ್ ಪಡೆದ ಜೋ ಬೈಡನ್

    ಡೆವ್ಲಿನಾ ಎಂಬ ಟ್ವಿಟ್ಟರ್ ಖಾತೆಯಲ್ಲಿ ಬಟರ್ ಚಿಕನ್ ಗೋಲ್ ಗಪ್ಪ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಫೋಟೋದಲ್ಲಿ ಬಟರ್ ಚಿಕನ್ ಗೋಲ್ ಗಪ್ಪ ತಯಾರಿಸಿ ತಟ್ಟೆ ಮೇಲಿಟ್ಟು ಸರ್ವ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರಲ್ಲಿ ಚಿಕನ್ ಮತ್ತು ಸೇವ್ ಜೊತೆಗೆ ಪಾನಿ ತುಂಬಿಸಿ ನೀಡುತ್ತಿರುವುದು ಎದ್ದು ಕಾಣಿಸುತ್ತದೆ. ಇದನ್ನೂ ಓದಿ: ಡೋಣಿ ನದಿ ಸೇತುವೆಯಲ್ಲಿ ಬಿರುಕು – ಆಗಮಿಸಲಿದ್ದಾರೆ ದೆಹಲಿ ಎಂಜಿನಿಯರ್‌ಗಳು

    ಸದ್ಯ ಈ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ. ಗೋಲ್ ಗಪ್ಪವನ್ನು ಪುದಿನ ಪಾನಿಯಿಂದ ತಯಾರಿಸುತ್ತಾರೆಯೇ ಎಂದು ಪ್ರಶ್ನಿಸಿದರೆ, ಇನ್ನೂ ಕೆಲವರು ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ಸಿಗುವ ಗೋಲ್ ಗಪ್ಪದಷ್ಟು ರುಚಿ ಈ ಗೋಲ್ ಗಪ್ಪ ನೀಡುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಮನೆಮಾತಾಗಿದ್ದ ಸ್ಪರ್ಧಿಗಳು ಎಂದರೆ ಅದು ಶುಭಾ ಪೂಂಜಾ ಹಾಗೂ ಮಂಜು. ದೊಡ್ಮನೆಯಲ್ಲಿ ಸದಾ ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಮಂಜು ಹಾಗೂ ರಾಜೀವ್ ಜೊತೆಗೆ ಪಾರ್ಟಿ ಮಾಡಿದ್ದಾರೆ.

    shubha

    ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕ ಸದಾ ಮನೆಮಂದಿಯನ್ನೆಲ್ಲಾ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದ ಶುಭಾ ಪೂಂಜಾ ತಮ್ಮ ಪ್ರೀತಿ ಪಾತ್ರರಿಗೆ ಒಂದೊಂದು ಕ್ಯೂಟ್ ಕ್ಯೂಟ್ ಹೆಸರಿಟ್ಟಿದ್ದರು. ಅದರಲ್ಲಿ ಶುಭಾ ಪೂಂಜಾಗೆ ಬಹಳ ಹತ್ತಿರವಾಗಿದ್ದ ರಾಜೀವ್‍ರನ್ನು ಗುಡ್ಡು ಅಂತ ಮತ್ತು ಮಂಜುರನ್ನು ಚಂಪೂ ಎಂದು ಕರೆಯುತ್ತಿದ್ದರು. ಅದೇ ರೀತಿ ಶುಭಾ ಪೂಂಜಾಗೆ ಮಂಜು ಕೂಡ ಪ್ರೀತಿಯಿಂದ ಗುಂಡಮ್ಮ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    shubha

    ಇದೀಗ ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಹಲವು ದಿನಗಳ ಬಳಿಕ ಶುಭಾ ಪೂಂಜಾ, ಮಂಜು ಹಾಗೂ ರಾಜೀವ್ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ವಿಶೇಷವೆಂದರೆ ಈ ಪಾರ್ಟಿಯಲ್ಲಿ ಶುಭಾ ಪೂಂಜಾ ಭಾವಿ ಪತಿ ಸುಮಂತ್, ರಾಜೀವ್ ಪತ್ನಿ ಮತ್ತು ಮಜಾ ಭಾರತ ಕಾರ್ಯಕ್ರಮದ ಕಲಾವಿದರೂ ಕೂಡ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನೇ ಹೊತ್ತೊಯ್ದ ಕಿಡಿಗೇಡಿಗಳು- ವಾಮಾಚಾರದ ಶಂಕೆ

    ಸದ್ಯ ಪಾರ್ಟಿಯ ಕೆಲವೊಂದು ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಮಂಜು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗಳಿಗೆ ಶುಭಾ ಫ್ರೆಂಡ್ ಶಿಪ್ ಹಾಡುಗಳನ್ನು ಸೆಟ್ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಒಟ್ಟಾರೆ ಮೂವರು ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ ಎಂದೇ ಹೇಳಬಹುದು.

  • ಚಂದನ್ ಕುಮಾರ್ ಫಿಟ್ನೆಸ್‍ಗೆ ಫ್ಯಾನ್ಸ್ ಫಿದಾ

    ಚಂದನ್ ಕುಮಾರ್ ಫಿಟ್ನೆಸ್‍ಗೆ ಫ್ಯಾನ್ಸ್ ಫಿದಾ

    ಬೆಂಗಳೂರು: ಕೇವಲ 2 ತಿಂಗಳಲ್ಲಿ ಸ್ಯಾಂಡಲ್‍ವುಡ್ ನಟ ಚಂದನ್ ಕುಮಾರ್ ದೇಹದ ಟ್ರಾನ್ಸ್​ಫಾರ್ಮೇಷನ್​ ನೋಡಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಅನೇಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದ್ದರಿಂದ ಫಿಟ್ನೆಸ್ ಕಳೆದುಕೊಂಡಿದ್ದಾರೆ. ಇದರಲ್ಲಿ ಚಂದನ್ ಕುಮಾರ್ ಕೂಡ ಒಬ್ಬರು. ಆದರೆ ಕೇವಲ ಎರಡೇ ತಿಂಗಳಲ್ಲಿ ಅವರ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

    ಜೂನ್ 21ರ ಫೋಟೋದಲ್ಲಿ ಚಂದನ್‍ಗೆ ಹೊಟ್ಟೆ ಬಂದಿತ್ತು. ಆದರೆ ಆಗಸ್ಟ್ 26ರ ಫೋಟೋದಲ್ಲಿ ಅವರು ಸಖತ್ ಫಿಟ್ ಆಗಿದ್ದಾರೆ. ಈ ಫೋಟೋ ನೋಡಿದ ಫ್ಯಾನ್ಸ್ ಅಚ್ಚರಿ ಹೊರ ಹಾಕಿದ್ದಾರೆ. ಇನ್ನೂ ಕೆಲವರು ನೀವೇ ನಮಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಇದನ್ನೂ ಓದಿ:  ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಚಂದನ್ ಕುಮಾರ್ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಕೊರೊನಾ ಎರಡನೇ ಅಲೆ ಬರುವುದಕ್ಕೂ ಕೆಲ ತಿಂಗಳ ಮೊದಲು ಅವರ ಮದುವೆ ನಿಗದಿ ಆದ ಕಾರಣ ನಟನೆಯಿಂದ ಒಂದು ಬ್ರೇಕ್ ತೆಗೆದುಕೊಂಡರು. ಈ ಕಾರಣಕ್ಕೆ ತೆಲುಗು ಧಾರಾವಾಹಿಯಿಂದ ಹೊರ ಬಂದರು. ಹೀಗಾಗಿ ಚಂದನ್ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಲ್ಲದೆ ಅವರಿಗೆ ಜಿಮ್‍ಗೆ ತೆರಳೋಕು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರ ದೇಹ ಶೇಪ್ ಕಳೆದುಕೊಂಡಿತ್ತು. ಆದರೆ ಸತತ ಎರಡು ತಿಂಗಳು ಜಿಮ್‍ನಲ್ಲಿ ಬೆವರು ಹರಿಸಿದ್ದಾರೆ. ಈ ಮೂಲಕ ಅವರ ಬಾಡಿಯನ್ನು ಕರಗಿಸಿದ್ದಾರೆ.