Tag: Photo leak

  • ಕಿಚ್ಚ ನಟನೆಯ ‘ಮ್ಯಾಕ್ಸ್’ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ಫೋಟೋ ಲೀಕ್

    ಕಿಚ್ಚ ನಟನೆಯ ‘ಮ್ಯಾಕ್ಸ್’ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ಫೋಟೋ ಲೀಕ್

    ಹು ನಿರೀಕ್ಷಿತ ಮ್ಯಾಕ್ಸ್ ಸಿನಿಮಾದ ಪ್ರೀ ಕ್ಲೈಮ್ಯಾಕ್ಸ್ ಫೋಟೋ ಲೀಕ್ (Photo leak) ಆಗಿದೆ. ಅದೊಂದು ಸಾಹಸ ಪ್ರಧಾನ ದೃಶ್ಯವಾಗಿದ್ದು ರಗಡ್ ಲುಕ್‍ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಕೆವಿನ್‍ ಸಾಹಸ ನಿರ್ದೇಶನದ ದೃಶ್ಯದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ. ಅದು ವೈರಲ್ ಕೂಡ ಆಗಿದೆ.

    ಮ್ಯಾಕ್ಸ್ (Max) ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗ್ತಿದ್ದಂತೆ.. ‘ಮುಂದಿನ ಚಿತ್ರ ಯಾವುದು ಬಾಸ್’ ಅಂತಿದ್ದಾರೆ ಕಿಚ್ಚನ ಫ್ಯಾನ್ಸ್. ಸುದೀಪ್ (Sudeep) ಕೈಯಲ್ಲಿ ಸದ್ಯ ನಾಲ್ಕೈದು ಚಿತ್ರಗಳಿವೆ. ಅವುಗಳು ಲೈನ್‌ಅಪ್ ಕೂಡ ಆಗಿವೆ. ಆದರೆ, ಮ್ಯಾಕ್ಸ್ ನಂತರ ಯಾವ ಚಿತ್ರದ ಶೂಟಿಂಗ್‌ಗೆ ಸುದೀಪ್ ಹೋಗಲಿದ್ದಾರೆ ಅನ್ನೋದು ಅಭಿಮಾನಿಗಳ ಕಾತರಕ್ಕೆ ಕಾರಣವಾಗಿದೆ.

    ಮ್ಯಾಕ್ಸ್ ಚಿತ್ರೀಕರಣ ಮುಗಿದಿದೆ. ಪೋಸ್ಟ್ಪ್ರೊಡಕ್ಷನ್ ಕೆಲ್ಸನೂ ಆಲ್‌ಮೋಸ್ಟ್ ಕಂಪ್ಲೀಟ್ ಆಗಿದೆ. ಇನ್ನೇನಿದ್ದರೂ ರಿಲೀಸ್ ಮಾಡಿ ಹಬ್ಬ ಮಾಡ್ಬೇಕು ಅಷ್ಟೆ. ಮ್ಯಾಕ್ಸ್ ಮುಗೀತಿದ್ದಂತೆ ಅನೂಪ್ ಭಂಡಾರಿ ಚಿತ್ರದಲ್ಲಿ ಕಿಚ್ಚ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಐದಾರು ವರ್ಷಗಳ ಹಿಂದೆಯೇ ಅನೌನ್ಸ್ ಆಗಿರೋ ಬಿಲ್ಲಾ ರಂಗಾ ಬಾಷಾ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ಅನೂಪ್ ಜೊತೆ ಸಿನಿಮಾ ಇಲ್ಲ ಅಂತಿದೆ ಸೋರ್ಸ್.

     

    ವಿಕ್ರಾಂತ್ ರೋಣಗಿಂತ ಮುಂಚೆಯೇ ಬಿಲ್ಲಾ ರಂಗಾ ಬಾಷಾ ಸೆಟ್ಟೇರಬೇಕಿತ್ತು. ಪೋಸ್ಟರ್ ರಿಲೀಸ್ ಕೂಡ ಆಗಿತ್ತು. ಆದರೆ, ಅದು ಬಿಗ್ ಬಜೆಟ್ ಮೂವ್ಹಿ ಆಗಿರೋದ್ರಿಂದ ಮುಂದಕ್ಕೆ ಹಾಕಬೇಕಾಯಿತಂತೆ. ಅಂದಾಜಿನ ಪ್ರಕಾರ ಇನ್ನೂರು ಕೋಟಿಗೂ ಅಧಿಕ ಬಜೆಟ್ ಬೇಡುವಂಥ ಚಿತ್ರವಂತೆ ಅದು. ಹಾಗಾಗಿ, ತಮಿಳು ನಿರ್ದೇಶಕ ಚರಣ್ (Charan) ಜೊತೆಗಿನ ಚಿತ್ರ ಮುಗಿದ ಮೇಲೆ ಅನೂಪ್ ಚಿತ್ರಕ್ಕೆ ಕೈಹಾಕಲಿದ್ದಾರಂತೆ ಕಿಚ್ಚ. ಅಲ್ಲಿಗೆ ಸುದೀಪ್ ಅವರ ಮುಂದಿನ ಚಿತ್ರವನ್ನು ಚರಣ್ ನಿರ್ದೇಶನ ಮಾಡೋದು ನಿಕ್ಕಿಯಾಗಿದೆ.

  • ‘ರಾಮಾಯಣ’ ಚಿತ್ರೀಕರಣದ ಫೋಟೋ ಲೀಕ್: ಮೊಬೈಲ್ ನಿಷೇಧಿಸಿದ ಟೀಮ್

    ‘ರಾಮಾಯಣ’ ಚಿತ್ರೀಕರಣದ ಫೋಟೋ ಲೀಕ್: ಮೊಬೈಲ್ ನಿಷೇಧಿಸಿದ ಟೀಮ್

    ಮೊನ್ನೆಯಿಂದ ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಶೂಟಿಂಗ್ ಶುರುವಾದ ಮೊದಲನೇ ದಿನವೇ ಶೂಟಿಂಗ್ ಸೆಟ್ ಫೋಟೋ ಲೀಕ್ (Photo leak) ಆಗಿತ್ತು. ಎರಡನೇ ದಿನ ನಟ ಅರುಣ್ ಗೋವಿಲ್ ಮತ್ತು ನಟಿ ಲಾರಾ ದತ್ತ ಹಾಗೂ ಮತ್ತಿತರರು ಶೂಟಿಂಗ್ ನಲ್ಲಿ ಭಾಗಿಯಾದ ಫೋಟೋಗಳು ಲೀಕ್ ಆಗಿವೆ.  ಹಾಗಾಗಿ ಚಿತ್ರೀಕರಣ ಸ್ಥಳದಲ್ಲಿ ಮೊಬೈಲ್ ನಿಷೇಧಿಸಿದೆಯಂತೆ ಚಿತ್ರತಂಡ.

    ಹಲವಾರು ತಿಂಗಳಿಂದ ಸುದ್ದಿಯಲ್ಲಿರುವ ರಾಮಾಯಣ (Ramayana) ಸಿನಿಮಾದ ಶೂಟಿಂಗ್ ಕೊನೆಗೂ ಶುರುವಾಗಿದೆ. ಮೊನ್ನೆಯಿಂದ ಚಿತ್ರೀಕರಣವನ್ನು ಆರಂಭಿಸಿದ್ದಾರೆ ನಿರ್ದೇಶಕ ನಿತಿಶ್ ತೀವಾರಿ. ಈ ಹಂತದ ಚಿತ್ರೀಕರಣದಲ್ಲಿ ಸ್ಟಾರ್ ನಟರು ಭಾಗಿ ಆಗುತ್ತಿಲ್ಲ ಎನ್ನುವ ಮಾಹಿತಿ ಇದೆ. ಗುರುಕುಲ ದೃಶ್ಯದಿಂದ ಚಿತ್ರೀಕರಣ (Shooting) ಆರಂಭಿಸಿದ್ದಾರೆ. ನಂತರದ ಚಿತ್ರೀಕರಣದಲ್ಲಿ ಸ್ಟಾರ್ ತಾರಾಗಣವೇ ಇರಲಿದೆ.

    ಈ ನಡುವೆ ರಾಮಾಯಣ ಸಿನಿಮಾದ ಬಗ್ಗೆ ದಿನಕ್ಕೊಂದು ಮಾಹಿತಿ ಹೊರ ಬೀಳುತ್ತಿದೆ. ಮಂಡೋದರಿ ಪಾತ್ರವನ್ನು ಹಿಂದಿಯ ಖ್ಯಾತ ಕಿರುತೆರೆ ನಟಿ ಸಾಕ್ಷಿ (Sakshi Tanwar)  ತನ್ವರ್ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ಸಾಕಷ್ಟು ಸದ್ದು ಕೂಡ  ಮಾಡಿತ್ತು. ಈ ವಿಷಯ ಸ್ವತಃ ಸಾಕ್ಷಿಗೂ ತಲುಪಿತ್ತು. ಈ ಕುರಿತಂತೆ ಅವರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ರಾಮಾಯಣ ಕುರಿತಂತೆ ಸಿನಿಮಾ ಆಗುತ್ತಿರುವ ವಿಷಯವನ್ನು ನಾನೂ ಬಲ್ಲೆ. ಆದರೆ, ಮಂಡೋದರಿ ಪಾತ್ರಕ್ಕೆ ನನ್ನ ಹೆಸರು ಬಳಕೆ ಆಗಿದ್ದು ನಾನೂ ಕೇಳಿದ್ದೇನೆ. ಆದರೆ, ಈವರೆಗೂ ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಈವರೆಗಿನ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.

    ನಿರ್ದೇಶಕ ನಿತಿಶ್ ತಿವಾರಿ ದಕ್ಷಿಣದ ಹೀರೋಗಳ ಬಗ್ಗೆ ಒಲವು ತೋರಿ, ಇಲ್ಲಿನ ಕಲಾವಿದರನ್ನು ತಮ್ಮ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತೂ ಕೇಳಿ ಬರುತ್ತಿದೆ. ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಈ ಸಿನಿಮಾದಲ್ಲಿ ರಾವಣನ ಸಹೋದರನಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾವಣನ ಸಹೋದರನಾಗಿ ವಿಜಯ್ ಸೇತುಪತಿ ನಟಿಸಿದರೆ, ಈ ಹಿಂದೆ ರಾವಣನಾಗಿ (Raavan) ಕನ್ನಡದ ನಟ ಯಶ್ (Yash) ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಸಾಕಷ್ಟು ಬಾರಿ ಈ ವಿಚಾರ ಮುನ್ನೆಲೆಗೆ ಬಂದರೂ, ಯಶ್ ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ, ಈ ಸುದ್ದಿ ಹರಿದಾಡುವುದು ತಪ್ಪಿಲ್ಲ.

     

    ನಿತಿಶ್ ತಿವಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಸತತ ಮೂರ್ನಾಲ್ಕು ವರ್ಷಗಳಿಂದ ಈ ಚಿತ್ರಕ್ಕಾಗಿ ತಿವಾರಿ ಕೆಲಸ ಮಾಡುತ್ತಿದ್ದಾರೆ. ರಾವಣನಾಗಿ ಯಶ್ ನಟಿಸಿದರೆ, ಶ್ರೀರಾಮನ ಪಾತ್ರವನ್ನು ರಣಬೀರ್ ಕಪೂರ್  (Ranbir Kapoor) ನಿರ್ವಹಿಸಲಿದ್ದಾರೆ. ಸೀತೆ ಪಾತ್ರವು ಸಾಯಿ ಪಲ್ಲವಿ (Sai Pallavi)ಅವರ ಪಾಲಾಗಿದೆ.

  • ಸೀರೆ ತೊಟ್ಟಿರುವ ಅಲ್ಲು ಅರ್ಜುನ್ ಫೋಟೋ ಲೀಕ್: ಬೇಸರಿಸಿಕೊಂಡ ‘ಪುಷ್ಪ’ ಟೀಮ್

    ಸೀರೆ ತೊಟ್ಟಿರುವ ಅಲ್ಲು ಅರ್ಜುನ್ ಫೋಟೋ ಲೀಕ್: ಬೇಸರಿಸಿಕೊಂಡ ‘ಪುಷ್ಪ’ ಟೀಮ್

    ಪುಷ್ಪ ಸಿನಿಮಾ ಶೂಟಿಂಗ್ ಸೆಟ್ ನಿಂದ ಅಲ್ಲು ಅರ್ಜುನ್ ಅವರ ಫೋಟೋವೊಂದು ಲೀಕ್ (Photo Leak) ಆಗಿದ್ದು, ಈ ಕೃತ್ಯ ಮಾಡಿದವರ ವಿರುದ್ಧ ಚಿತ್ರತಂಡ ಗರಂ ಆಗಿದೆ. ಅಲ್ಲು ಅರ್ಜುನ್ ಅವರು ಸೀರೆ ತೊಟ್ಟು ಶೂಟಿಂಗ್ ಗಾಗಿ ಕಾಯುತ್ತಿರುವ ಫೋಟೋ ಅದಾಗಿದ್ದು, ಸಿನಿಮಾದ ಪ್ರಮುಖ ದೃಶ್ಯದಲ್ಲಿ ಅವರು ಆ ರೀತಿ ಕಾಣಲಿದ್ದಾರಂತೆ. ಅದೇ ಫೋಟೋ ಇದೀಗ ಲೀಕ್ ಆಗಿ ಗುಟ್ಟು ರಟ್ಟು ಮಾಡಿದೆ.

    ಈ ನಡುವೆ ಪುಷ್ಪ-2 ಬಿಡುಗಡೆ ಕುರಿತಂತೆ ಮತ್ತೊಂದು ಸ್ಪಷ್ಟನೆ ಬಂದಿದೆ. ಅಲ್ಲಿಗೆ ನಿಗದಿತ ದಿನಾಂಕದಂದೆ ಸಿನಿಮಾ ರಿಲೀಸ್ (Released) ಆಗುವುದು ಫಿಕ್ಸ್ ಆಗಿದೆ. ನಿನ್ನೆಯಷ್ಟೇ ನಿರ್ಮಾಣ ಸಂಸ್ಥೆಯು ಪೋಸ್ಟರ್ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ರಿಲೀಸ್  ಗೆ 200 ದಿನವಷ್ಟೇ ಬಾಕಿ ಎಂದು ಬರೆದಿತ್ತು. ಈ ಹಿಂದೆ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ ಎಂದು ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿತ್ತು. ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದರು. ಇದೀಗ ರಿಲೀಸ್ ಡೇಟ್ ಮುಂದೆ ಹೋಗಿದೆ ಎಂದು ಸುದ್ದಿಯನ್ನು ಹರಿಬಿಡಲಾಗಿದೆ. ಅಂದು ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ ಬರಲಿರುವ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಅಂತ ಸುದ್ದಿ ಆಗಿತ್ತು.

    ಇಂಥದ್ದೊಂದು ಸುದ್ದಿ ಆದ ಬೆನ್ನಲ್ಲೇ ಸಿನಿಮಾ ತಂಡದಿಂದ ಸ್ಪಷ್ಟನೆ ಬಂದಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಮುಂದಕ್ಕೆ ಹಾಕಲ್ಲ ಅಂದಿದ್ದಾರೆ ನಿರ್ದೇಶಕರು. ಘೋಷಣೆ ಮಾಡಿದ ದಿನದಂದೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ತೊಟ್ಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.

    ನಿರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ.

    ‘ಪುಷ್ಪ 2’ ದಿ ರೂಲ್ಸ್ ಶೂಟಿಂಗ್ ಭರದಿಂದ ಸಾಗ್ತಿದೆ. ಈ ನಡುವೆಯೇ ಸೀಕ್ವೆಲ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿರುವ ಖಬರ್ ಹೊರಬಿದ್ದಿದೆ. ಹಿಂದಿ ಬೆಲ್ಟ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹಕ್ಕು ಮಾರಾಟವಾಗಿದೆಯಂತೆ. ಪುಷ್ಪ ಮೊದಲ ಭಾಗ ಬಾಲಿವುಡ್ ಅಂಗಳದಲ್ಲಿ ಬಡಾ ಹಿಟ್ ಕಂಡಿತ್ತು. ಅಲ್ಲು ಆಕ್ಟಿಂಗ್ , ಸುಕುಮಾರ್ ಟೇಕಿಂಗ್ ಗೆ ಹಿಂದಿ ಮಂದಿ ಫಿದಾ ಆಗಿದ್ದರು.

     

    ಬಾಲಿವುಡ್ (Bollywood) ಚಿತ್ರಗಳಿಗೆ ಟಕ್ಕರ್ ಕೊಟ್ಟಿದ್ದ ಪುಷ್ಪ 2ಗಾಗಿ ಬಂಗಾರದ ಬೇಡಿಕೆ ಬಂದಿದೆ. 200 ಕೋಟಿ ಮೊತ್ತಕ್ಕೆ ಹಿಂದಿ ರೈಟ್ಸ್ ಮಾರಾಟವಾಗಿದ್ದು, 75 ಕೋಟಿಗೆ ಆಡಿಯೋ ರೈಟ್ಸ್ ಸೇಲ್ ಆಗಿರುವ ಬಗ್ಗೆ ಸಿನಿ ಜಜಾರ್ ನಲ್ಲಿ ಹೊಸ ಬಜ್ ಓಡಾಡ್ತಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಅದ್ಧೂರಿಯಾಗಿ ತಯಾರಾಗ್ತಿರುವ ಪುಷ್ಪ-2 ಸಿನಿಮಾಗೆ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ.

  • ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ತಂಡ ರಾತ್ರೋರಾತ್ರಿ ತಲೆಕೆಡಿಸಿಕೊಂಡಿದೆ. ಎಷ್ಟೇ ಮುತುವರ್ಜಿ ತಗೆದುಕೊಂಡಿದ್ದರೂ, ಬಿಕಿನಿ ಫೋಟೋ ಲೀಕ್ ಮಾಡಿದವನ ಹುಡುಕಾಟ ನಡೆಸಿದೆ.

    ಹೌದು, ಪರಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಮಹತ್ವದ ಪಾತ್ರ. ಆ ಪಾತ್ರಕ್ಕಾಗಿ ಅವರು ಬಿಕಿನಿ ತೊಟ್ಟಿದ್ದಾರೆ. ಯಾರೋ ರಸಿಕ ಆ ಫೋಟೋವನ್ನು ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಫೋಟೋ ಲೀಕ್ ಆಗುತ್ತಿದ್ದಂತೆಯೇ ಕೋಟ್ಯಾಂತರ ಜನರು ಅದನ್ನು ಶೇರ್ ಮಾಡಿದ್ದಾರೆ. ಹೀಗಾಗಿ ಚಿತ್ರತಂಡ ಸಖತ್ ಬೇಸರದಲ್ಲಿದೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?

    ಸಿನಿಮಾದ ಫೋಟೋಗಳು, ಗೆಟಪ್ ಹಾಗೂ ಇತರ ವಿಷಯಗಳು ಆಚೆ ಹೋಗದಂತೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮುತುವರ್ಜಿ ತಗೆದುಕೊಳ್ಳಲಾಗುತ್ತದೆ. ಕನ್ನಡದಲ್ಲೂ ಎಷ್ಟೋ ಸಿನಿಮಾಗಳ ಶೂಟಿಂಗ್ ಗೆ ಮೊಬೈಲ್ ನಿಷೇಧ ಹೇರಲಾಗಿದೆ. ಆದರೂ, ಈ ರೀತಿಯ ಘಟನೆಗಳು ನಡೆದು ಬಿಡುತ್ತವೆ.

    ಪಠಾಣ್ ಸಿನಿಮಾದ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಸ್ಪೇನ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ದೀಪಿಕಾ ಪಡುಕೋಣೆ ಗಾಢ ಹಳದಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ. ಆ ಬಿಕಿನಿಯ ಮೇಲೆ ನಿಲುವಂಗಿ ತೊಟ್ಟ ಮತ್ತು ಅದನ್ನು ಕಳಚಿದ ಫೋಟೋಗಳು ಕೂಡ ಬಹಿರಂಗವಾಗಿವೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ದೀಪಿಕಾ ಬಿಕಿನಿ ಹಾಕುವುದು ಹೊಸದೇನೂ ಅಲ್ಲ, ಕ್ಯಾಲಂಡರ್ ಶೂಟ್ ಗಾಗಿ ಅವರು ಬಿಕಿನಿ ಹಾಕಿದ್ದೂ ಇದೆ. ಅದೆಷ್ಟೋ ಫೋಟೋಶೂಟ್ ಗಳಲ್ಲಿ ಹಾಟ್ ಹಾಟ್ ಆಗಿ ಕಂಡದ್ದೂ ಇದೆ. ಆದರೆ, ಮದುವೆ ಆದ ನಂತರ ಇದೇ ಮೊದಲ ಬಾರಿಗೆ ಅವರು ಈ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ನಾನಾ ರೀತಿಯಲ್ಲಿ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಹಳೆಯ ಕ್ಯಾಲೆಂಡರ್ ಫೋಟೋಶೂಟ್ ಅನ್ನು ನೆನಪಿಸಿಕೊಂಡಿದ್ದಾರೆ.

  • ಕೊನೆಗೂ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿದ ಅಮೀರ್!

    ಕೊನೆಗೂ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋ ಲೀಕ್ ಬಗ್ಗೆ ಪ್ರತಿಕ್ರಿಯಿಸಿದ ಅಮೀರ್!

    ಮುಂಬೈ: ಅಮಿರ್ ಖಾನ್ ನಟಿಸುತ್ತಿರುವ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ಸಾಕಷ್ಟು ವೈರಲ್ ಆಗಿತ್ತು. ಇದರಿಂದ ಬೇಸರಗೊಂಡ ಅಮಿರ್ ಕೊನೆಗೂ ಈ ಬಗ್ಗೆ ಮೌನ ಮುರಿದಿದ್ದಾರೆ. ನನ್ನ ಹಾಗೂ ಅಮಿತಾಬ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಸಾಕಷ್ಟು ಬೇಸರ ತಂದಿದೆ ಎಂದು ಅಮಿರ್ ತಿಳಿಸಿದ್ದಾರೆ.

    ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಚಿತ್ರತಂಡಕ್ಕೆ ಸಾಕಷ್ಟು ಬೇಸರವಾಗಿದೆ. ನಾವು ಅಧಿಕೃತವಾಗಿ ಬಿಡುಗಡೆ ಮಾಡುವುದಾಗಿ ಯೋಚಿಸಿದ್ದೇವು. ಇದು ತುಂಬಾ ಮಹತ್ವದ ಸಿನಿಮಾ. ಈ ಸಿನಿಮಾದ ಲುಕ್ ಲೀಕ್ ಆಗಬಾರದಿತ್ತು. ಈ ಚಿತ್ರದ ಲುಕ್ ಅನ್ನು ಸರಿಯಾದ ಸಮಯದಲ್ಲಿ ಹಾಗೂ ಸರಿಯಾದ ರೀತಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿತ್ತು. ಆದರೆ ಈಗಲೂ ನಾವು ಸಿನಿಮಾದ ಫಸ್ಟ್ ಲುಕ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

    ಈ ಚಿತ್ರದ ಲುಕ್ ಗಳು ಲೀಕ್ ಆಗದಿದ್ದಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುತ್ತಿದ್ದೆವು. ಆದರೆ ಈಗ ನಾವು ಏನೂ ಮಾಡೋಕೆ ಸಾಧ್ಯವಿಲ್ಲ. ಈ ಹಿಂದೆ ಪಿ.ಕೆ ಚಿತ್ರದಲ್ಲಿ ನನ್ನ ಗಾಗ್ರಾ ಲುಕ್ ಶೂಟಿಂಗ್‍ನ ಮೊದಲ ದಿನವೇ ಲೀಕ್ ಆಗಿತ್ತು. ಈಗ ಎಲ್ಲರ ಹತ್ತಿರ ಕ್ಯಾಮೆರಾ ಇರುವುದರಿಂದ ನಾವು ಎಷ್ಟೇ ಕ್ರಮ ವಹಿಸಿದ್ದರು ತಡೆಯೋಕೆ ಸಾಧ್ಯವಾಗುತ್ತಿಲ್ಲ. ಸಿನಿಮಾ ಸೆಟ್‍ನಲ್ಲಿ ಫೋಟೋಗಳನ್ನು ತೆಗೆದುಕೊಳ್ಳಬಾರದು ಎಂದು ಸೂಚಿಸಿದ್ದೇವೆ ಎಂದು ಅಮೀರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

    ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರದಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ನಟಿಸುತ್ತಿದ್ದು, ಕತ್ರಿನಾ ಕೈಫ್ ಹಾಗೂ ಫಾತಿಮಾ ಸನಾ ಶೇಕ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿದ್ದಾರೆ.

  • ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಮೀರ್ ಖಾನ್ ಲುಕ್ ಲೀಕ್? ವೈರಲ್ ಫೋಟೋ ನೋಡಿ

    ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಅಮೀರ್ ಖಾನ್ ಲುಕ್ ಲೀಕ್? ವೈರಲ್ ಫೋಟೋ ನೋಡಿ

    ಮುಂಬೈ: ಯಶ್ ರಾಜ್ ಫಿಲ್ಮ್ ನ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಮಿರ್ ಖಾನ್, ಅಮಿತಾಬ್ ಬಚ್ಚನ್, ಕತ್ರಿನಾ ಕೈಫ್ ಮತ್ತು ಫಾತಿಮಾ ಸನಾ ಶೇಕ್ ಸೇರಿದಂತೆ ಘಟಾನುಘಟಿ ತಾರಾಬಳಗವೇ ಇದೆ.

    ಯಾವಾಗ್ಲೂ ಚಿತ್ರದ ಪಾತ್ರಗಳ ಲುಕ್ ಹೇಗಿರುತ್ತದೆ ಎಂಬುದನ್ನ ಗುಟ್ಟಾಗಿಡಲು ಚಿತ್ರತಂಡ ಸಾಕಷ್ಟು ಶ್ರಮ ವಹಿಸುತ್ತದೆ. ಆದ್ರೆ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿನ ಆಮಿರ್ ಖಾನ್ ಅವರ ಲುಕ್ ಎನ್ನಲಾದ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಆ ಫೋಟೊದಲ್ಲಿ ಅಮೀರ್‍ನನ್ನು ಗುರುತು ಹಿಡಿಯೋದಕ್ಕೆ ಆಗುವುದಿಲ್ಲ. ಫೋಟೋದಲ್ಲಿ ಅಮೀರ್ ಗುಂಗುರು ಕೂದಲಿನಲ್ಲಿ ಕಾಣಿಸಿಕೊಂಡಿದ್ದು, ಒರಟಾದ ಉಡುಪು ಹಾಕಿದ್ದಾರೆ ಮತ್ತು ಮುಖ ಮತ್ತು ಬಟ್ಟೆ ಮೇಲೆ ಮಣ್ಣು ಮೆತ್ತಿಕೊಂಡಿದೆ. ಸಿನಿಮಾ ಸೆಟ್‍ನಿಂದ ಹೊರಗೆ ಬರುತ್ತಿರುವಾಗ ಈ ಫೋಟೋ ತೆಗೆಯಲಾಗಿದ್ದು, ಆ ಫೋಟೋದಲ್ಲಿ ಅಮೀರ್ ಬಾಡಿಗಾರ್ಡ್ ಕೂಡ ಕಾಣಿಸಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಈ ಫೋಟೋವನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದಲ್ಲಿ ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಮೊದಲನೆ ಬಾರಿಗೆ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳಲಿದ್ದಾರೆ. ಈ ಚಿತ್ರವನ್ನು ಧೂಮ್-3 ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶಿಸುತ್ತಿದ್ದಾರೆ.