Tag: Photo Hyderabad

  • ನೀವು ನನ್ನ ಜೀವನ, ನನ್ನ ಸಲಹೆ, ಬೆಂಬಲ, ನಗು: ಅನುಷ್ಕಾ ಶೆಟ್ಟಿ

    ನೀವು ನನ್ನ ಜೀವನ, ನನ್ನ ಸಲಹೆ, ಬೆಂಬಲ, ನಗು: ಅನುಷ್ಕಾ ಶೆಟ್ಟಿ

    ಹೈದರಾಬಾದ್: ಕರಾವಳಿ ಸುಂದರಿ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್ ಎಷ್ಟೇ ಎತ್ತರಕ್ಕೆ ಬೆಳೆದರೂ ಬಹಳ ಸಿಂಪಲ್ ಹಾಗೂ ಸರಳ ವ್ಯಕ್ತಿತ್ವದ ನಟಿ. ತಮ್ಮ ಬ್ಯುಸಿ ಶೆಡ್ಯೂಲ್‍ಗಳ ಮಧ್ಯೆ ಫ್ಯಾಮಿಲಿಯನ್ನು ಮರೆಯದೇ ಅವರ ಪೋಷಕರ ಜೊತೆಗೂ ಕೂಡ ಟೈಮ್ ಸ್ಪೆಂಡ್ ಮಾಡುತ್ತಾರೆ.

    ಸದ್ಯ ನಿಶ್ಯಬ್ದಂ ಸಿನಿಮಾದ ನಂತರ ಬ್ರೇಕ್ ಪಡೆದು ಹೈದರಾಬಾದ್‍ನಲ್ಲಿರುವ ಅನುಷ್ಕಾ, ದೂರದ ಊರಿನಲ್ಲಿದ್ದರೂ ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ.

    ಅನುಷ್ಕಾ ಶೆಟ್ಟಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ತಾಯಿ ಪ್ರಫುಲ್ಲಾ ಶೆಟ್ಟಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಕ್ಯೂಟ್ ಸೆಲ್ಫಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ನೀವು ಸುಂದರ, ಬಲಿಷ್ಠ ಹಾಗೂ ಬುದ್ಧಿವಂತ ಮಹಿಳೆ. ನೀವು ನನ್ನ ಜೀವನ, ನೀನು ನನಗೆ ಸಲಹೆ, ಬೆಂಬಲ, ನಗುವನ್ನು ನೀಡಿದ್ದೀರಾ. ನಾನು ಇದಕ್ಕಿಂತ ಹೆಚ್ಚಾಗಿ ನಿಮ್ಮನ್ನು ಏನು ಕೇಳಲು ಸಾಧ್ಯವಿಲ್ಲ. ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ಎಂದು ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ರಿಲೀಲ್ ಆಯ್ತು ವಿಕ್ರಾಂತ್ ರೋಣದಲ್ಲಿ ಜಾಕ್ವೆಲಿನ್ ಲುಕ್

    ಅನುಷ್ಕಾ ಶೆಟ್ಟಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈ ಮುನ್ನ ಅನುಷ್ಕಾ ತಮ್ಮ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಕನ್ನಡದಲ್ಲಿಯೇ ವಿಶ್ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದರು.