Tag: Phonecall

  • 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

    9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

    ಮುಂಬೈ: ಕಾಣೆಯಾಗಿದ್ದಾರೆ ಎನ್ನುವ 2013ರ ಡಿಜಿಟಲ್ ಪೋಸ್ಟರ್‌ನ ನಕಲು ಪ್ರತಿಯೊಂದು 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಅಪ್ರಾಪ್ತೆ ಮತ್ತೆ ತನ್ನ ಕುಟುಂಬದೊಂದಿಗೆ ಸೇರಲು ಸಹಾಯ ಮಾಡಿದೆ.

    2013ರಲ್ಲಿ ಪ್ರಕಟಿಸಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್ ಸಹಾಯದಿಂದ ತನ್ನವರನ್ನು ಸಂಪರ್ಕಿಸಿದ ಬಾಲಕಿ 9 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾಳೆ.

    ಮುಂಬೈನ ಅಂಧೇರಿಯಲ್ಲಿ ಪೋಷಕರೊಂದಿಗೆ ವಾಸವಿದ್ದ 7 ವರ್ಷದ ಬಾಲಕಿ ಪೂಜಾ 2013ರ ಜನವರಿ 22 ರಂದು ತನ್ನ ಸಹೋದರನೊಂದಿಗೆ ಶಾಲೆಗೆ ಹೋಗಿದ್ದಳು. ಈ ವೇಳೆ ಹೆನ್ರಿ ಜೋಸೆಫ್ ಡಿಸೋಜಾ ಹೆಸರಿನ ವ್ಯಕ್ತಿಯೊಬ್ಬ ತನಗೆ ಐಸ್‌ಕ್ರೀಂ ಕೊಡಿಸೋದಾಗಿ ಆಕೆಯನ್ನು ಅಪಹರಿಸಿದ್ದನು. ಇದೀಗ ಬಂಧನಕ್ಕೊಳಗಾಗಿರುವ ಹೆನ್ರಿ ತನಗೆ ಮಕ್ಕಳಾಗದಿರುವ ಕಾರಣ ಪೂಜಾಳನ್ನ ಅಪಹರಿಸಿದ್ದೆ ಎಂಬುದಾಗಿ ಕೇಳಿದ್ದಾನೆ. ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ – 5 ದಿನ ಇಂಟರ್‌ನೆಟ್ ಸ್ಥಗಿತ

    ಪೂಜಾ ಯಾರಿಂದಲೂ ಗುರುತಿಸಲ್ಪಡುವುದಿಲ್ಲ ಎಂದು ಹೇಳಿ ಹೆನ್ರಿ ಡಿಸೋಜಾ ಆಕೆಯನ್ನು ಕರ್ನಾಟಕದಲ್ಲಿನ ಹಾಸ್ಟೆಲ್‌ಗೆ ಕಳುಹಿಸಿದ್ದನು. ಅಲ್ಲದೆ ಆನಿ ಡಿಸೋಜಾ ಎಂದು ಹೆಸರನ್ನೂ ಬದಲಾಯಿಸಿದ್ದನು. ಹೆನ್ರಿ ದಂಪತಿಗೆ ಸ್ವಂತ ಮಗುವಾದಾಗ ಆಕೆಯನ್ನು ಹಾಸ್ಟೆಲ್‌ನಿಂದ ವಾಪಸ್ ತನ್ನ ಮನೆಗೆ ಕರೆತಂದಿದ್ದನು. ಅಂದಿನಿಂದ ಮನೆಗೆಲಸ ಮಾಡಿಸುತ್ತಾ ಪೂಜಾಳನ್ನು ಚೆನ್ನಾಗಿ ನೋಡಿಕೊಳ್ಳುವುದನ್ನೇ ನಿಲ್ಲಿಸಿದ್ದನು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಆಜಾದಿ ಸ್ಯಾಟ್ ಉಪಗ್ರಹ ಉಡಾವಣೆ ವಿಫಲ: ಇಸ್ರೋ

    ಸದ್ಯ ಪೂಜಾ 16 ವರ್ಷದ ಬಾಲಕಿಯಾಗಿದ್ದಾಳೆ. ಆದರೆ ಕುಟುಂಬದ ಸದಸ್ಯರ ಬಗ್ಗೆ ಹೆಚ್ಚು ನೆನಪಿರಲಿಲ್ಲ. ಹಾಗಾಗಿ ಪೋಷಕರಿಂದ ದೂರವೇ ಉಳಿದ್ದರು. ಆದರೆ ಹೆನ್ರಿ ಕುಡಿದ ಅಮಲಿನಲ್ಲಿ ಈಕೆ ತನ್ನ ಮಗಳಲ್ಲ ಎಂದು ಹೇಳಿದ ನಂತರ ಪೂಜಾ ತನ್ನ ನಿಜವಾದ ಸುಳಿವಿನ ಬಗ್ಗೆ ಹುಡುಕಾಟ ನಡೆಸಲು ಪ್ರಾರಂಭಿಸಿದಳು. ಪೂಜಾ ಕಾಣೆಯಾದ ನಂತರ ಆಕೆಯ ಸ್ನೇಹಿತರು ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಪೂಜಾ ಸಹ ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ 2013ರಲ್ಲಿ ಹಾಕಿದ್ದ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್‌ವೊಂದು ಸಿಕ್ಕಿದೆ. ಅದರಲ್ಲಿ 5 ಸಂಪರ್ಕ ಸಂಖ್ಯೆಗಳನ್ನು ನಮೂದಿಸಲಾಗಿತ್ತು. ಆದರೆ 4 ಸಂಖ್ಯೆಗಳು ಸೇವೆಯಲ್ಲಿರಲಿಲ್ಲ. ಅದೃಷ್ಟವಶಾತ್ ಉಳಿದ ಒಂದು ಸಂಖ್ಯೆ ಪೂಜಾ ಕುಟುಂಬದ ನೆರೆಯವರಾಗಿದ್ದ ರಫಿಕ್ ಅವರದ್ದಾಗಿತ್ತು. ಪೂಜಾ ರಫಿಕ್‌ಗೆ ಕರೆ ಮಾಡಿ ತನ್ನ ಬಗ್ಗೆ ಹೇಳಿಕೊಂಡಳು. ಆಗ ರಫಿಕ್ ವೀಡಿಯೋ ಕರೆ ಮಾಡಿ ಅವಳೊಂದಿಗೆ ಮಾತನಾಡಿ ಆಕೆಯನ್ನು ಗುರುತಿಸಿದನು. ವೀಡಿಯೋ ಕರೆ ಮಾಡಿ ಪೂಜಾಳ ತಾಯಿಯೊಂದಿಗೂ ಮಾತನಾಡಿಸಿದನು. ಪೂಜಾಳ ತಾಯಿಯೂ ಆಕೆಯನ್ನೂ ಗುರುತಿಸಿದರು.

    ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹಿರಿಯ ಪೊಲೀಸ್ ಅಧಿಕಾರಿ ಮಿಲಿಂದ್ ಕುರ್ದರ್ ಅವರ ಸಹಾಯದಿಂದ ಪೂಜಾ ಮತ್ತೆ ತನ್ನ ಮನೆ ಸೇರಿದಳು. ಈ ಅವಧಿಯಲ್ಲಿ ಪೂಜಾ ತನ್ನ ತಂದೆಯನ್ನು ಕಳೆದುಕೊಂಡಿದ್ದಳು. ಕುಟುಂಬದವರನ್ನು ಭೇಟಿಯಾದ ಕೂಡಲೇ ತನ್ನ ತಾಯಿ ಹಾಗೂ ಸಹೋದರರೊಂದಿಗೆ ಸಂತಸ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಮರ್ಯಾದೆಯಿಂದ ವಾಪಸ್ ಹೋಗೋ ಲೇ – ಇನ್ಸ್‌ಪೆಕ್ಟರ್‌ಗೆ ಎಂ.ಪಿ.ಕುಮಾರಸ್ವಾಮಿ ಆವಾಜ್

    ಮರ್ಯಾದೆಯಿಂದ ವಾಪಸ್ ಹೋಗೋ ಲೇ – ಇನ್ಸ್‌ಪೆಕ್ಟರ್‌ಗೆ ಎಂ.ಪಿ.ಕುಮಾರಸ್ವಾಮಿ ಆವಾಜ್

    ಚಿಕ್ಕಮಗಳೂರು: ಆಗಾಗ್ಗೆ ತನ್ನ ದರ್ಪ ತೋರಿಸುತ್ತಾ ವಿವಾದಕ್ಕೆ ಗುರಿಯಾಗುತ್ತಿರುವ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರಿಗೆ ಫೋನ್ ನಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ

    ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಠಾಣೆಗೆ ಹೊಸದಾಗಿ ಚಾರ್ಜ್ ತೆಗೆದುಕೊಂಡ ಪೊಲೀಸ್ ಇನ್ಸ್ಪೆಕ್ಟರ್ ರವೀಶ್‌ಗೆ ಆವಾಜ್ ಹಾಕಿದ್ದು, ಏಕವಚನದಲ್ಲೇ ಅಸಾಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್‌ನಿಂದ ಇಬ್ಬರನ್ನು ಇರಿದು ಕೊಂದ

    MUDIGERE PSI MLA 2

    ಯಾರನ್ನ ಕೇಳಿ ಚಾರ್ಜ್ ತೆಗೆದುಕೊಂಡೆ, ಎಲ್ಲಿದ್ದೀಯಾ? ನಿನಿಗೆ ಬರ್ಬೇಡಾ ಅಂತ ಹೇಳಿದ್ದೆ ತಾನೆ? ನೀನು ವಾಪಸ್ ಹೋಗು, ಠಾಣೆಯಲ್ಲಿ ಇರಬೇಡ, ಮರ್ಯಾದೆಯಿಂದ ವಾಪಸ್ ಹೋಗೋ ಲೇ, ನಾನು ಹೇಳಿದ ಹಾಗೆ ಕೇಳು, ಬೇಕಾದ್ರೆ ರೆಕಾರ್ಡ್ ಮಾಡ್ಕೊ, ನಾಳೆನೇ ನಿನ್ನ ಎತ್ತಂಗಡಿ ಮಾಡಿಸ್ತೇನೆ ಎಂದು ಗದರಿದ್ದಾರೆ.

    ಮುಂದುವರಿದು ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿ? ಮೂಡಿಗೆರೆಗೆ ನಾನೇ ಎಲ್ಲ, ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ ಎಂದು ಇನ್ಸ್ಪೆಕ್ಟರ್‌ನನ್ನು ಅಲ್ಲಗಳೆದಿದ್ದಾರೆ.  ಇದನ್ನೂ ಓದಿ: ಖಾವಿ ಬಟ್ಟೆತೊಟ್ಟು ಗುತ್ತಿಗೆದಾರನಿಂದ ಲಕ್ಷ-ಲಕ್ಷ ಕಿತ್ತ ಸ್ವಾಮೀಜಿಗಳು: ಪ್ರಕರಣ ದಾಖಲು

    ಈ ವಿಚಾರದ ಅಭಿಪ್ರಾಯ ಕೇಳಲು ಶಾಸಕರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದೆ. ಈ ವೇಳೆ, ಸರ್ಕಾರ ನಮ್ಮದು ನಾವು ಹೇಳಿದಂಗೆನೇ ನಡೆಯಬೇಕು ಎಂದು ಉದ್ಧಟತನ ಮೆರೆದಿದ್ದಾರೆ.

    MUDIGERE PSI MLA

    ಹೀಗಿತ್ತು ಶಾಸಕ-ಇನ್ಸ್‌ಪೆಕ್ಟರ್‌ ನಡುವಿನ ಸಂಭಾಷಣೆ:
    ಶಾಸಕ : ಹಲೋ ಯಾರಪ್ಪಾ ಇದು ನಂಬರು
    ಪಿಎಸ್‌ಐ : ಸರ್, ನಾನು ರವೀಶ್ ಮಾತಾಡೋದು ಸಾರ್

    ಶಾಸಕ : ಈಗ ಎಲ್ಲಿದ್ದೀಯಾ…
    ಪಿಎಸ್‌ಐ : ಸ್ಟೇಷನ್ ನಲ್ಲಿ ಇದೀನಿ ಸರ್…

    ಶಾಸಕ : ಇಲ್ಲಿಗೆ ಬರ್ಬೇಡ ಅಂದಿದ್ನಲ್ಲ ನಾನು.
    ಪಿಎಸ್‌ಐ : ಐಜಿ ಸರ್ ಫೋನ್ ಮಾಡಿ ಹೇಳಿದ್ರು ಸರ್, ಚಾರ್ಜ್ ತಗೋಳಿ ಹೋಗಿ ಅಂತ.

    ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು… ಸ್ಟೇಷನ್ ನಲ್ಲಿ ಇರಬೇಡ… ಮರ್ಯಾದೆಯಿಂದ ವಾಪಸ್ ಹೋಗಲೇ, ನಾನು ಹೇಳಿದಂತೆ ಕೇಳು, ರೆಕಾರ್ಡ್ ಮಾಡಿಕೋ ಬೇಕಾದ್ರೆ.
    ಪಿಎಸ್‌ಐ : ಸರ್ ಹಾಗೇನಿಲ್ಲ ಸರ್, ಅಲ್ಲಿಗೆ ನಿಮ್ಮ ಬಳಿ ಬರ್ತೇನೆ ಸರ್, ನಾಳೆ ಬಂದ್ ನಿಮ್ಮನ್ನಾ ಕಾಣ್ತೀನಿ ಸರ್.

    MUDIGERE PSI MLA 3

    ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ವಾಪಸ್ ಹೋಗು, ನಾಳೆಯೇ ಚೇಂಜ್ ಮಾಡಿಸ್ತೀನಿ ನೋಡು, ನಿಮ್ಮದು ನಡಿಯಲ್ಲ, ಎಷ್ಟು ಲಂಚ ಕೊಟ್ಟಿದ್ದೀಯಾ, ಐಜಿಗೆ – ಯಾರಿಗೆ ಎಷ್ಟು ಕೊಟ್ಡೀದ್ದೀಯಾ, ನನಗೆ ಗೊತ್ತಿಲ್ವಾ.
    ಪಿಎಸ್‌ಐ : ಸರ್ ಆ ರೀತಿ ಏನಿಲ್ಲ ಸರ್ ನಾನೇನು ಕೊಟ್ಟಿಲ್ಲ ಸರ್ ಇದನ್ನೂ ಓದಿ: 70 ವಯಸ್ಸಿನ ಬುದ್ಧಿಮಾಂದ್ಯ ವೃದ್ಧೆಯನ್ನು ಅಪಹರಿಸಿ ಅತ್ಯಾಚಾರ

    ಶಾಸಕ : ಮರ್ಯಾದೆಯಿಂದ ಹೊರಟು ಹೋಗು, ಬಂದ ದಾರಿಯಲ್ಲಿ ಹೋಗು.
    ಪಿಎಸ್‌ಐ : ನಾಳೆ ಬಂದು ನಿಮ್ಮನ್ನ ಭೇಟಿ ಮಾಡ್ತೀನಿ ಸರ್.

    ಶಾಸಕ : ಯಾವನ್ ಐಜಿ, ಐಜಿ ಅಲ್ಲ, ಮೂಡಿಗೆರೆಗೆ ಎಲ್ಲ ನಾನೇ, ಅವನಿಗೆ ಹೇಳು ಐಜಿಗೆ.
    ಪಿಎಸ್‌ಐ : ನಾಳೆ ಬಂದು ನಿಮ್ಮನ್ನ ಭೇಟಿ ಆಗುತ್ತೇನೆ ಸರ್. ಇದನ್ನೂ ಓದಿ: ದೂರು ನೀಡಿದ್ದಕ್ಕೆ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್- ಮೂವರು ಅರೆಸ್ಟ್

    ಪಿಎಸ್‌ಐ : ಸರ್ ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಸರ್.
    ಶಾಸಕ : ಮರ್ಯಾದೆಯಿಂದ ವಾಪಸ್ ಹೋಗು, ಬಂದ ದಾರಿಯಲ್ಲೇ ಹೋಗು. ಒದ್ದು ಓಡಿಸುತ್ತೇನೆ ಬಂದ್ರೆ.

  • AC ವಿಷಾನಿಲ ಸೋರಿಕೆ, ಬೆಂಕಿ ಅವಘಡ – ನಾಲ್ವರು ಸಜೀವ ದಹನ

    AC ವಿಷಾನಿಲ ಸೋರಿಕೆ, ಬೆಂಕಿ ಅವಘಡ – ನಾಲ್ವರು ಸಜೀವ ದಹನ

    ವಿಜಯನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ನಾಲ್ಕು ಜನ ಮಲಗಿದ್ದಲ್ಲೇ ಮೃತಪಟ್ಟಿರುವ ಘಟನೆ ವಿಜಯನಗರದ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ತಡರಾತ್ರಿ ಸಂಭವಿಸಿದೆ.

    ರಾಘವೇಂದ್ರ ಶೆಟ್ಟಿ ಎಂಬವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯ ವಿಷಾನಿಲ ಸೋರಿಕೆಯಾಗಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಲ್ಲಿ ವೆಂಕಟ್ ಪ್ರಶಾಂತ್ (42), ಪತ್ನಿ ಡಿ.ಚಂದ್ರಕಲಾ (38), ಮಕ್ಕಳಾದ ಎಚ್.ಎ.ಅದ್ವಿಕ್(16), ಪ್ರೇರಣಾ,(8) ಹೊರಬರಲಾಗದೇ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 2 ಕೋಟಿ ದರೋಡೆ ಕೇಸ್ – ಪತ್ನಿ ಸಾಲ ತೀರಿಸಲು ಕನ್ನ ಹಾಕಿದ ಇಬ್ಬರು ಪತ್ನಿಯರ ಮುದ್ದಿನ ಗಂಡ

    Ac

    ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಸೋರಿಕೆಯೊಗಿ ಸ್ಫೋಟ ಸಂಭವಿಸಿದೆ. ತಡರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಧಗಧಗನೆ ಹೊತ್ತಿ ಉರಿದು ಇಡೀ ಮನೆ ಆವರಿಸಿದ್ದರಿಂದ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ.

    ಇಷ್ಟಾದರು ಅಗ್ನಿಯ ರೌದ್ರಾವತಾರ ಮತ್ತೆ ಮುಂದುವರಿದಿದ್ದು, ಎಸಿಯ ವೈರ್ ಮತ್ತು ಮನೆಯ ವೈರಿಂಗ್ ಮೂಲಕ ಮತ್ತೊಮ್ಮೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇದನ್ನೂ ಓದಿ: ಮದ್ಯದ ಬಾಟಲಿಯಿಂದ ಸಿಕ್ಕಿ ಬಿದ್ರು 2 ಕೋಟಿ ಕದ್ದ ಖದೀಮರು

    ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಸ್ವಲ್ಪ ವೈಮನಸ್ಸು, ವಿವಾದಗಳಿದ್ದು ತೆಗೆದುಕೊಂಡ ಸಾಲ ಮರುಪಾವತಿ ಮಾಡಿರಲಿಲ್ಲ, ಆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    AC 03

    ಜೀವ ಉಳಿಸುತ್ತಿತ್ತು ಫೋನ್ ಕಾಲ್: ಘಟನೆ ಸಂಬಂಧ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಾಘವೇಂದ್ರ ಶೆಟ್ಟಿ, ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ನಾವು ಕೆಳ ಮನೆಯಲ್ಲಿ ಮಲಗಿದ್ದು, ಮಗ, ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು ಮಹಡಿಯಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಾಗ, ನಾನು ಫೋನ್‌ಕಾಲ್ ಮಾಡಿ ಮಗನನ್ನು ಎಬ್ಬಿಸಲು ಪ್ರಯತ್ನಿಸಿದೆ. ಆದರೆ ಮಗ ಫೋನ್ ತೆಗೆಯಲೇ ಇಲ್ಲ. ನಾವು ಹೊರಬಂದು ಬಿಟ್ಟೆವು. ಮಹಡಿ ಮೇಲಿನ ರೂಂ ಒಳಗಡೆಯಿಂದ ಲಾಕ್ ಆಗಿದ್ದರಿಂದ ಅವರು ಗಾಬರಿಯಿಂದ ಹೊರ ಬರಲು ಆಗಲಿಲ್ಲ. ಇದರಿಂದಾಗಿ ಅವಘಡ ಸಂಭವಿಸಿದ್ದು, ಈಗ ಮನೆಯಲ್ಲಿ ನೀರವ ಮೌನ ತುಂಬಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?

    ರಾಘವೇಂದ್ರ ಅವರಿಗೆ ಮತ್ತೆ ಶಾಕ್: ಘಟನೆಯಲ್ಲಿ ಈಗಾಗಲೇ ಮಗ ಸೊಸೆ, ಮೊಮ್ಮಕ್ಕಳನ್ನು ಕಳೆದುಕೊಂಡಿರುವ ರಾಘವೇಂದ್ರ ಶೆಟ್ಟಿ ಅವರಿಗೆ ಘಟನೆ ಮಾಸುವ ಮುನ್ನವೇ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿ ಕಾಣಿಸಿಕೊಂಡ ದಟ್ಟ ಹೊಗೆಯನ್ನು ಗಮನಿಸಿ ಸ್ಥಳೀಯರೇ ಬೆಂಕಿ ನಂದಿಸಿದ್ದಾರೆ.