Tag: phone

  • ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡ್ತಾಳೆ ಮಗಳು!

    – ಮಗು ಖುಷಿ ಕಸಿದುಕೊಂಡ ಕೊರೊನಾ ಮಹಾಮಾರಿ
    – 2 ವರ್ಷದ ಹಿಂದೆ ತಾಯಿ ನಿಧನ

    ಶಿವಮೊಗ್ಗ: ಈ ಕೊರೊನಾ ಮಹಾಮಾರಿ ಎಲ್ಲರ ಜೀವ, ಜೀವನದ ಜೊತೆ ಚೆಲ್ಲಾಟವಾಡಿದೆ. ಹಲವರ ಖುಷಿ ಕಸಿದುಕೊಂಡಿದೆ. ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಅದೆಷ್ಟೋ ಮಕ್ಕಳು ಅನಾಥರಾಗಿವೆ. ಹಾಗೆಯೇ ಪುಟಾಣಿಯೊಬ್ಬಳು ಅಪ್ಪನಿಗೆ ನಿತ್ಯವೂ ಹಲವು ಬಾರಿ ಫೋನ್ ಮಾಡುವ ಪ್ರಯತ್ನ ಮಾಡುತ್ತಾಳೆ. ಇಂತಹ ಒಂದು ಮನ ಕಲಕುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಈ ಪುಟಾಣಿ ಸಮ್ಯಾ(3) ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಕೊಪ್ಪದ ಶರಣ್ ಎಂಬವರ ಪುತ್ರಿ. ಸಮ್ಯಾ ತಾಯಿ ಇಹಲೋಕ ತ್ಯಜಿಸಿದಾಗ ಈ ಪುಟಾಣಿಗೆ ಒಂದು ವರ್ಷವಾಗಿತ್ತು. ಒಂದು ವರ್ಷದವಳಾಗಿದ್ದಾಗಲೇ ಈ ಪುಟಾಣಿ ತಾಯಿಯನ್ನು ಕಳೆದುಕೊಂಡಿತ್ತು. ಈ ಪುಟಾಣಿಯ ತಂದೆ ಶರಣ್ ಅವರೇ ತಾಯಿ ತಂದೆ ಎರಡು ಆಗಿ ಮಗಳನ್ನು ಪೋಷಿಸುತ್ತಿದ್ದರು.

    ಶರಣ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದರು. ಆದರೆ ಕಳೆದ ಬಾರಿ ಕೊರೊನಾ ವಕ್ಕರಿಸಿದ್ದರಿಂದ ಮೊದಲ ಬಾರಿ ಲಾಕ್ ಡೌನ್ ಜಾರಿಯಾಯ್ತು. ಲಾಕ್ ಡೌನ್ ನಿಂದಾಗಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ನಂತರ ಶಿವಮೊಗ್ಗದಲ್ಲಿಯೇ ಕೆಲಸ ಹುಡುಕಿಕೊಂಡಿದ್ದರು. ಕೆಲಸದ ಜೊತೆ ಜೊತೆಗೆ ಸಂಸ್ಕøತಿ ಫೌಂಡೇಶನ್ ಎಂಬ ಹೆಸರಿನ ಸಂಸ್ಥೆ ಸ್ಥಾಪಿಸಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು.

    ಕೊರೊನಾ ಎರಡನೇ ಅಲೆ ಆರಂಭವಾದ ಸಂದರ್ಭದಲ್ಲಿ ಶರಣ್ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಸುಮಾರು 10 ಸಾವಿರ ಮಂದಿಗೆ ಎನ್ 95 ಮಾಸ್ಕ್, ಸ್ಯಾನಿಟೈಸರ್ ಹಾಗೂ ದಿನಸಿ ಕಿಟ್ ವಿತರಿಸಿದ್ದರು. ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ, ಶರಣ್ ಗೆ ಸೋಂಕು ತಗುಲಿ ಕಳೆದ ಒಂದು ತಿಂಗಳ ಹಿಂದೆ ಮಹಾಮಾರಿಗೆ ಬಲಿಯಾದರು. ಇದೀಗ ಶರಣ್ ಪುತ್ರಿ ಸಮ್ಯಾ ಅಪ್ಪನನ್ನು ಕಳೆದುಕೊಂಡು ಅನಾಥವಾಗಿದ್ದಾಳೆ.

    ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡಿರುವ ಪುಟಾಣಿ ಸಮ್ಯಾಳಿಗೆ ಶರಣ್ ಸಹೋದರಿ ಅಖಿಲಾ ಆಸರೆ ನೀಡಿದ್ದಾರೆ. ಎರಡು ವರ್ಷದ ಹಿಂದೆ ತಾಯಿ ಕಳೆದುಕೊಂಡ ದಿನದಿಂದ ಸಮ್ಯಾ ಅಖಿಲಾ ಅವರ ಜೊತೆ ಬೆಳೆಯುತ್ತಿದ್ದಳು. ಜೊತೆಗೆ ಅವರನ್ನೇ ತಾಯಿ ಅಂದುಕೊಂಡಿದ್ದಳು. ಇದೀಗ ಈ ಪುಟಾಣಿಗೆ ಅವರೇ ಎಲ್ಲವೂ ಆಗಿದ್ದಾರೆ. ಅಮ್ಮ ಹೋದ ಬಳಿಕ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಆದರೆ ಈ ಕಂದಮ್ಮನಿಗೆ ಅಪ್ಪ ಇಲ್ಲ ಎಂಬ ಸತ್ಯವೇ ತಿಳಿದಿಲ್ಲ. ದಿನಕ್ಕೆ ನಾಲ್ಕೈದು ಬಾರಿ ಅಪ್ಪನ ನಂಬರಿಗೆ ಕರೆ ಮಾಡುತ್ತಾಳೆ. ಅಪ್ಪ ಯಾಕೋ ಬ್ಯೂಸಿ ಇರಬೇಕು ಎಂದು ಅವಳೇ ಅಂದುಕೊಂಡು ಸುಮ್ಮನಾಗುತ್ತಾಳಂತೆ.

    ಅಖಿಲಾ ಅವರಿಗೂ ಒಬ್ಬಳು ಮಗಳಿದ್ದಾಳೆ. ಇದೀಗ ಸಮ್ಯಾ ಸೇರಿ ನಮಗೆ ಇಬ್ಬರು ಮಕ್ಕಳು. ಸಮ್ಯಾ ಕೂಡಾ ನಮ್ಮ ಮಗಳೇ. ಸಮ್ಯಾಳಿಗೆ ಅಪ್ಪ ಅಮ್ಮ ಇಲ್ಲ ಎನ್ನುವ ಕೊರಗು ಬಾರದ ರೀತಿ ನೋಡಿಕೊಳ್ಳುತ್ತೇವೆ. ಇಬ್ಬರು ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸುತ್ತೇವೆ. ಸದಾ ಅವಳಿಗೆ ನೆರಳಾಗಿ ಇರುತ್ತೇವೆ ಎನ್ನುತ್ತಾರೆ. ಒಟ್ಟಿನಲ್ಲಿ ಮೊದಲೇ ತಾಯಿ ಕಳೆದುಕೊಂಡಿದ್ದ ಪುಟಾಣಿ ಇದೀಗ ಮಹಾಮಾರಿಗೆ ತಂದೆಯನ್ನು ಕಳೆದುಕೊಂಡಿದೆ. ಏಯ್ ವಿಧಿಯೇ ನೀನೆಷ್ಟು ಕ್ರೂರಿ ನಿನಗೆ ಧಿಕ್ಕಾರವಿರಲಿ. ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಅಧಿಕಾರ ಕಳೆದುಕೊಂಡು ಬುದ್ದಿ ಭ್ರಮಣೆಯಾಗಿದೆ: ಶ್ರೀರಾಮುಲು

  • ಪ್ರೀತ್ಸೆ..ಪ್ರೀತ್ಸೆ ಅಂತ ಕಾಡಿದ ಪಾಗಲ್ ಪ್ರೇಮಿ – ಯುವಕನ ಕಾಟ ಸಹಿಸಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

    ಪ್ರೀತ್ಸೆ..ಪ್ರೀತ್ಸೆ ಅಂತ ಕಾಡಿದ ಪಾಗಲ್ ಪ್ರೇಮಿ – ಯುವಕನ ಕಾಟ ಸಹಿಸಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ

    ಶಿವಮೊಗ್ಗ: ಪ್ರೀತ್ಸೆ, ಪ್ರೀತ್ಸೆ ಅಂತ ಬೆನ್ನಿಗೆ ಬಿದ್ದಿದ್ದ ಯುವಕನಿಂದ ಬೇಸತ್ತು ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕರಿಮನೆ ಗ್ರಾಮದಲ್ಲಿ ನಡೆದಿದೆ.

    ಹೊಸನಗರ ತಾಲೂಕಿನ ಸಹನಾ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸಹನಾ ಹೊಸ ನಗರದ ಹೋಲಿ ರೆಡಿಮೆಡ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆರೋಪಿ ಪ್ರಶಾಂತ್ ಕನ್ನಳ್ಳಿಯ ನಿವಾಸಿಯಾಗಿದ್ದು, ತನ್ನನ್ನು ಪ್ರೀತಿಸುವಂತೆ ಆಗಾಗ ಸಹಾನ ಫೋನ್‍ಗೆ ಕರೆ ಮಾಡಿ ಪದೇ ಪದೇ ಪೀಡಿಸುತ್ತಿದ್ದ. ಈ ಬಗ್ಗೆ ಮೃತ ಸಹನಾ ಕೂಡ ತನ್ನ ತಾಯಿಯ ಜೊತೆ ಹೇಳಿಕೊಂಡಿದ್ದಳು. ನಂತರ ಸಹನಾಳ ತಂದೆ ತಾಯಿ ಪ್ರಶಾಂತ್ ಗೆ ತನ್ನ ಮಗಳಿಗೆ ಫೋನ್ ಮಾಡಬೇಡ, ಅವಳ ಹಿಂದೆ ಹೋಗಬೇಡ ಎಂದು ಬುದ್ದಿ ಹೇಳಿದ್ದರು. ಇದನ್ನು ಓದಿ:  ಸಿಎಂ ರಾಜೀನಾಮೆ ಮಾತುಗಳ ಹಿಂದಿನ ರಹಸ್ಯ ತಿಳಿಸಿದ ಶಾಸಕ ರಾಜೂಗೌಡ

    ಬುದ್ದಿ ಹೇಳಿದರೂ ಪ್ರಶಾಂತ್ ತನ್ನ ಚಾಳಿಯನ್ನು ಮುಂದುವರಿಸಿದ್ದ. ಇದರಿಂದ ಬೇಸತ್ತ ಸಹನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಮ್ಮ ಮಗಳ ಆತ್ಮಹತ್ಯೆಗೆ ಪ್ರಶಾಂತ್ ಕಾರಣ ಎಂದು ಸಹನಾ ಪೋಷಕರಾದ ಸುಧಾಕರ್ ಹಾಗೂ ಮಮತ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಹನಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಪ್ರಶಾಂತ್ ನಾಪತ್ತೆಯಾಗಿದ್ದಾನೆ. ಇದನ್ನು ಓದಿ: ಗುಡುಗು ಯತ್ನಾಳ್, ಮಿಂಚು ಯೋಗೇಶ್ವರ್ ಮಳೆ ಬಂದ್ಮೇಲೆ ತಣ್ಣಗಾಗ್ತಾರೆ: ಕೋಟ ವ್ಯಾಖ್ಯಾನ

  • ಅಂತರ್‌ಜಿಲ್ಲಾ ಮೊಬೈಲ್ ಫೋನ್ ಕಳ್ಳರ ಬಂಧನ

    ಅಂತರ್‌ಜಿಲ್ಲಾ ಮೊಬೈಲ್ ಫೋನ್ ಕಳ್ಳರ ಬಂಧನ

    ಹುಬ್ಬಳ್ಳಿ: ವಿವಿಧ ಕಂಪನಿಯ ಬೆಲೆಬಾಳುವ ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರವೀಂದ್ರ ಬಸವರಾಜ ಭೋವಿ, ರಂಗಪ್ಪ ತಿಮ್ಮಣ್ಣ ಭೋವಿ ಹಾಗೂ ತುಮಕೂರು ಜಿಲ್ಲೆಯ ಪಾವಗಡದ ರಾಘವೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ.

    ಬಂಧಿತರಿಂದ 22 ವಿವಿದ ಕಂಪನಿಯ, 2,78,000 ರೂ. ಬೆಲೆಬಾಳುವ ಇತರೆ ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣಗಳನ್ನು ಭೇದಿಸಿದ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ  ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಉತ್ತಮ ಕರ್ತವ್ಯ ನಿರ್ವಹಿಸಿದ್ದು, ಇವರ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರ ಲಾಬೂರಾಮ್ ಶ್ಲಾಘಿಸಿದ್ದಾರೆ.

  • ನನ್ನ ಪತ್ನಿಗೂ ವೆಂಟಿಲೇಟರ್ ಕೊಡಿಸೋ ಯೋಗ್ಯತೆ ಇಲ್ಲ: ಮೈಸೂರು ಡಿಹೆಚ್‍ಒ

    ನನ್ನ ಪತ್ನಿಗೂ ವೆಂಟಿಲೇಟರ್ ಕೊಡಿಸೋ ಯೋಗ್ಯತೆ ಇಲ್ಲ: ಮೈಸೂರು ಡಿಹೆಚ್‍ಒ

    – ನನ್ನ ಕೈ ಸೋತೋಗಿದೆ ಅಂತ ಕಣ್ಣೀರು

    ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ಯೋಗ್ಯತೆ ಇಲ್ಲ ಎಂದು ಹೇಳುವ ಮೂಲಕ ಮೈಸೂರು ಡಿಹೆಚ್‍ಒ ಅಮರನಾಥ್ ತಮ್ಮ ಅಸಹಾಯಕತೆಯನ್ನು ಹೊರಹಾಕಿದರು.

    ರೋಗಿ ಸಂಬಂಧಿಕರ ಜೊತೆ ಫೋನ್ ಸಂಭಾಷಣೆ ಮಾಡಿರುವ ಅಮರನಾಥ್ ಆಡಿಯೋ ಇದೀಗ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ. ಈ ವೇಳೆ ಡಿಹೆಚ್‍ಒ, ವಾರ್ ರೂಂ ಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.

    ಆಗ ವ್ಯಕ್ತಿ, ಅವರು ರೆಸ್ಪಾಂಡ್ ಮಾಡುತ್ತಿಲ್ಲ ಎಂದರು. ಬೆಡ್ ಗು ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ, ನನ್ನ ಹೆಂಡತಿಗೂ ಬೆಡ್ ಕೊಡಿಸಲು ಯೋಗ್ಯತೆ ಇಲ್ಲ. ನನ್ನ ಕೈ ಸೋತೋಗಿದೆ ಎಂದು ಗದ್ಗದಿತರಾಗಿದ್ದಾರೆ.

    ಆಗ ವ್ಯಕ್ತಿ ನಿಮಗೆ ಜವಾಬ್ದಾರಿ ಏಕೆ ಕೆಲಸ ಬಿಟ್ಟೋಗಿ ಅಂದಿದ್ದಾರೆ. ಕೆಲಸದಿಂದ ಕಳುಹಿಸಿ ಬಿಟ್ಟೋಗಲು ರೆಡಿ ಇದ್ದೇನೆ ಎಂದಿರುವ ಡಿ.ಎಚ್.ಓ, ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • ಮದ್ವೆಯಾಗಿದ್ದರೂ ಲಿವಿಂಗ್  ಟುಗೆದರ್‌ – ಪ್ರೇಯಸಿಯನ್ನು ಹತ್ಯೆಗೈದು ನೇಣಿಗೆ ಶರಣಾದ ಪ್ರಿಯಕರ

    ಮದ್ವೆಯಾಗಿದ್ದರೂ ಲಿವಿಂಗ್ ಟುಗೆದರ್‌ – ಪ್ರೇಯಸಿಯನ್ನು ಹತ್ಯೆಗೈದು ನೇಣಿಗೆ ಶರಣಾದ ಪ್ರಿಯಕರ

    ಬೆಂಗಳೂರು: ಫೋನ್ ಸ್ವೀಕರಿಸಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಾರಕಾಸ್ತ್ರಗಳಿಂದ ಪ್ರೇಯಸಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ನಂತರ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ವೀವರಸ್ ಕಾಲನಿಯಲ್ಲಿ ನಡೆದಿದೆ.

    ರಮ್ಯಾ (35) ಪ್ರಿಯಕರನಿಂದ ಕೊಲೆಯಾದ ಮಹಿಳೆ. ಪ್ರೇಯಸಿಯನ್ನು ಕೊಲೆ ಮಾಡಿ ಚಿಕ್ಕಮೊಗ (45) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಭದ್ರತಾ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದನು. ಇಬ್ಬರೂ ವಿವಾಹಿತರಾಗಿದ್ದರು. ಅನೈತಿಕ ಸಂಬಂಧವನ್ನು ಹೊಂದಿದ್ದರು. ಕ್ಷುಲ್ಲಕ ಕಾರಣಕ್ಕೆ ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಚಿಕ್ಕಮೊಗ ಪತ್ನಿಯನ್ನು ತೊರೆದು ರಮ್ಯಾ ಜೊತೆಯಲ್ಲೇ ಬೆಂಗಳೂರಿನಲ್ಲಿ ನೆಲೆಸಿದ್ದ. ರಮ್ಯಾ ಕೂಡಾ ಪತಿಯನ್ನು ತೊರೆದು ಚಿಕ್ಕಮೊಗನೊಂದಿಗೆ ಜೀವನ ನಡೆಸುತ್ತಿದ್ದಳು. ರಾತ್ರಿ ಪ್ರೇಯಸಿ ರಮ್ಯಾಗೆ ಚಿಕ್ಕಮೊಗ ಕರೆ ಮಾಡಿದ್ದಾನೆ. ಆ ವೇಳೆ ಆಕೆ ಕರೆ ಸ್ವೀಕರಿಸಿಲ್ಲ. ಇದರಿಂದ ಕೋಪಗೊಂಡ ಚಿಕ್ಕಮೊಗ ಮನೆಗೆ ಬಂದವನೆ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ನಂತರ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

    ಮನೆಯಿಂದ ಶವದ ವಾಸನೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿರುವ ಕೋಣನಕುಂಟೆ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

  • ತುಂಬು ಗರ್ಭಿಣಿ ಪತ್ನಿ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾದ ಕಾರ್ಮಿಕ!

    ತುಂಬು ಗರ್ಭಿಣಿ ಪತ್ನಿ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾದ ಕಾರ್ಮಿಕ!

    ಹುಬ್ಬಳ್ಳಿ: ಪತ್ನಿಯ ಜೊತೆ ಮೊಬೈಲ್ ನಲ್ಲಿ ಮಾತುನಾಡುತ್ತಲೇ ಕಾರ್ಮಿಕನೊಬ್ಬ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಮೋಹನ್ ಸಿಂಗ್ ಆತ್ಮಹತ್ಯೆಗೆ ಶರಣಾದ ಕಾರ್ಮಿಕನಾಗಿದ್ದು, ಪಶ್ಚಿಮಬಂಗಾಳ ಮೂಲದ ನಿವಾಸಿ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೋಹನ್ ಸಿಂಗ್ ತಂದೆಯ ಸಾವಿನಿಂದ ಮನನೊಂದಿದ್ದರು.

    ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದಿಂದ ಕೆಲಸಕ್ಕೆಂದು ಬಂದು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಫೇವರ್ಸ್ ಕಂಪನಿಯಲ್ಲಿ ಮೋಹನಸಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ತಂದೆಯ ಸಾವಿನ ದುಃಖದಲ್ಲಿಯೇ ತನ್ನ ತುಂಬು ಗರ್ಭಿಣಿ ಹೆಂಡತಿಯ ಜೊತೆ ಮಾತನಾಡುತ್ತಲೇ ನೇಣಿಗೆ ಶರಣಾಗಿದ್ದಾರೆ.

    ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಗಂಡನ ಮಾತುಗಳನ್ನ ಕೇಳಿ ಪತ್ನಿ ಗಾಬರಿಗೊಂಡಿದ್ದಾರೆ. ಕೂಡಲೇ ಗಂಡನ ಜೊತೆ ಕೆಲಸ ಮಾಡುವ ಸಹ ಕಾರ್ಮಿಕ ಶುಭಾಷಿನ ಎಂಬಾತನಿಗೆ ಕರೆ ಮಾಡಿ ನನ್ನ ಗಂಡ ಹೀಗೆ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ. ಅಷ್ಟರಲ್ಲಿಯೇ ಅಲ್ಲಿಗೆ ಹೋದ ಸಹ ಕಾರ್ಮಿಕರು ನೇಣಿನಲ್ಲಿದ್ದವನನ್ನ ಕೆಳಗಿಳಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಮೃತಪಟ್ಟಿದ್ದಾರೆ.

    ಘಟನೆಯ ಬಗ್ಗೆ ಕಾರ್ಮಿಕನ ಕುಟುಂಬಕ್ಕೆ ಗ್ರಾಮೀಣ ಪೊಲೀಸರು ಮಾಹಿತಿ ನೀಡಿದ್ದು, ಶವವನ್ನ ಕಿಮ್ಸ್ ನ ಶವಾಗಾರದಲ್ಲಿಡಲಾಗಿದೆ. ಪ್ರಕರಣ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಚಾಕು ಇರಿತಕ್ಕೆ ಒಳಗಾದ ಯುವತಿಯಿಂದಲೇ ಯುವಕನಿಗೆ ಕೊಲೆ ಬೆದರಿಕೆ

    ಚಾಕು ಇರಿತಕ್ಕೆ ಒಳಗಾದ ಯುವತಿಯಿಂದಲೇ ಯುವಕನಿಗೆ ಕೊಲೆ ಬೆದರಿಕೆ

    – ಬದುಕಿದ್ದರೆ ನನ್ನ ಸಾಯಿಸುತ್ತಾಳೆ ಅನ್ನೋ ಭಯದಿಂದ ಚಾಕು ಇರಿತ

    ಮೈಸೂರು: ಕಳೆದ ವಾರ ಮೈಸೂರಿನಲ್ಲಿ ನಡೆದಿದ್ದ ಯುವತಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್ ಸಿಕಿದ್ದು, ಯುವತಿಯೇ ಯುವಕನಿಗೆ ಕೊಲೆ ಬೆದರಿಕೆ ಹಾಕಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.

    ಕಳೆದ ನವೆಂಬರ್ 15ರಂದು ಪ್ರೇಮ ವೈಫಲ್ಯದ ವಿಚಾರವಾಗಿ ಯವಕ ಗಗನ್ ಅಶ್ವಿನಿಗೆ ಚಾಕು ಇರಿದಿದ್ದ. ಗಗನ್ ಹಾಗೂ ಅಶ್ವಿನ ಸುಮಾರು 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಅಶ್ವಿನಿ ಗಗನ್‍ನನ್ನು ಮದುವೆಯಾಗಲು ನಿರಾಕರಿಸಿದ್ದಳು. ಇದೇ ವಿಚಾರಕ್ಕೆ ಮನೆ ಮುಂದೆ ನಿಂತಿದ್ದ ಅಶ್ವಿನಿಗೆ ಗಗನ್ ಚಾಕು ಹಾಕಿ ಎಸ್ಕೇಪ್ ಆಗಿದ್ದ. ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.

    ಈಗ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು. ಲವ್ ಮಾಡುತ್ತಿದ್ದಾಗ ಗಗನ್ ಅಶ್ವಿನಿಗೆ ಫೋನ್ ಕೊಡಿಸಿರುತ್ತಾನೆ. ಲವ್ ಮುರಿದು ಬಿದ್ದ ನಂತರ ಗಗನ್ ನನ್ನ ಫೋನ್ ನನಗೆ ವಾಪಸ್ ನೀಡುವಂತೆ ಫೋನ್ ಮಾಡುತ್ತಾನೆ. ಆಗ ಅಶ್ವಿನ ಫೋನ್ ಕೊಡಲ್ಲ ದುಡ್ಡು ಕೊಡುತ್ತೇನೆ ಎಂದು ಅವಾಜ್ ಹಾಕುತ್ತಾಳೆ. ಆದರೆ ಗಗನ್ ನನಗೆ ದುಡ್ಡು ಬೇಡ ನನ್ ಫೋನ್ ಬೇಕು ಎಂದು ಹೇಳುತ್ತಾನೆ ಎಂದು ಹೇಳಿದ್ದಾರೆ.

    ಇದರಿಂದ ಕೋಪಗೊಂಡ ಅಶ್ವಿನಿ, ಗಗನ್‍ನನ್ನು ಅವಾಚ್ಯ ಪದಗಳಿಂದ ನಿಂದಿಸಿ ನಿನ್ನ ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಇದರಿಂದ ಭಯಗೊಂಡ ಗಗನ್ ಇವಳು ಬದುಕಿದ್ದರೆ, ನನ್ನ ಕೊಲೆ ಮಾಡಿಸುತ್ತಾಳೆ ಎಂದು ಹೆದರಿ ಆಕೆಗೆ ಚಾಕು ಹಾಕಿರುತ್ತಾನೆ ಎಂದು ಮೈಸೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗಗನ್ ಜೈಲುಪಾಲು ಆಗಿದ್ದಾನೆ. ಲಕ್ಷ್ಮೀಪುರಂ ಠಾಣೆಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

  • ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಶವ ಪತ್ತೆ

    ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಯುವತಿಯ ಶವ ಪತ್ತೆ

    ಶಿವಮೊಗ್ಗ; ಚಲಿಸುತ್ತಿದ್ದ ರೈಲಿನಿಂದ ಯುವತಿವೋರ್ವಳು ಕಾಲು ಜಾರಿ ತುಂಗಾ ನದಿಗೆ ಬಿದ್ದಿದ್ದ ಘಟನೆ ಕಳೆದ ಎರಡು ದಿನದ ಹಿಂದೆ ಶಿವಮೊಗ್ಗದಲ್ಲಿ ನಡೆದಿತ್ತು.

    ನದಿಗೆ ಬಿದ್ದಿದ್ದ ಯುವತಿಯನ್ನು ಶಿವಮೊಗ್ಗ ಗಾಡಿಕೊಪ್ಪದ ಸಹನಾ (24) ಎಂದು ಗುರುತಿಸಲಾಗಿತ್ತು. ಯುವತಿಯ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಕಳೆದ ಎರಡು ದಿನದಿಂದಲೂ ತುಂಗಾನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಇಂದು ಮುಂಜಾನೆ ಯುವತಿಯ ಶವ ತುಂಗಾನದಿಯಲ್ಲಿ ಪತ್ತೆಯಾಗಿದೆ

    ಮೃತ ಯುವತಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತಾಯಿ ಜೊತೆ ಇಂಟರ್ ಸಿಟಿ ರೈಲಿನಲ್ಲಿ ಬರುತ್ತಿದ್ದಳು. ವೇಳೆ ಈ ಅವಘಡ ಜರುಗಿತ್ತು. ಶಿವಮೊಗ್ಗ ನಗರದ ತುಂಗಾ ನದಿಯ ರೈಲ್ವೆ ಬ್ರಿಡ್ಜ್ ಮೇಲೆ ರೈಲು ಸಂಚರಿಸುತ್ತಿದ್ದಾಗ ಯುವತಿ ಬಾಗಿಲ ಬಳಿ ನಿಂತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾಳೆ ಎಂದು ಯುವತಿಯ ತಾಯಿ ತಿಳಿಸಿದ್ದರು.

    ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

  • ಆ್ಯಪ್ ಇನ್‍ಸ್ಟಾಲ್ ಮಾಡಲು ಹೇಳಿ 9 ಲಕ್ಷ ದೋಚಿದ ಅನಾಮಿಕ!

    ಆ್ಯಪ್ ಇನ್‍ಸ್ಟಾಲ್ ಮಾಡಲು ಹೇಳಿ 9 ಲಕ್ಷ ದೋಚಿದ ಅನಾಮಿಕ!

    – ಅಪ್ಪನ ಫೋನಿಗೆ ಬಂದ ಕರೆ ಸ್ವೀಕರಿಸಿದ ಮಗ
    – ಮಗನಿಂದಾಗಿ ಹಣ ಕಳೆದುಕೊಂಡ ತಂದೆ

    ಮುಂಬೈ: ಆನ್‍ಲೈನ್ ವಂಚನೆಯ ಪ್ರಕರಣವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಆ್ಯಪ್ ಇನ್‍ಸ್ಟಾಲ್ ಮಾಡಲು ಹೇಳಿ 9 ಲಕ್ಷ ದೋಚಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

    ಅಶೋಕ್ ಮನ್ವಾಟೆ ಹಣ ಕಳೆದುಕೊಂಡ ವ್ಯಕ್ತಿ. ಘಟನೆ ಸಂಬಂಧ ಸದ್ಯ ಅಶೋಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಶೋಕ್ ಅವರಿಗೆ ಬಂದ ಅನಾಮಧೇಯ ಕರೆಯನ್ನು 15 ವರ್ಷದ ಮಗ ಸ್ವೀಕರಿಸಿದ್ದಾನೆ. ಈ ವೇಳೆ ಕರೆ ಮಾಡಿದ ವ್ಯಕ್ತಿ ಮೊದಲು ತನ್ನನ್ನು ತಾನು ಪರಿಚಯಿಸಿಕೊಂಡ.

    ತಾನು ಡಿಜಿಟಲ್ ಹಣ ಪಾವತಿ ಕಂಪನಿಯ ಗ್ರಾಹಕ ಆರೈಕೆಯ ಕಾರ್ಯನಿರ್ವಾಹಕ ಎಂದು ಹೇಳಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿ ಅದಕ್ಕೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವಂತೆಯೂ ಹೇಳಿದ್ದಾನೆ. ಅಲ್ಲದೆ ಕ್ರೆಡಿಟ್ ಮಿತಿ ಹೆಚ್ಚಿಸುವುದಾಗಿ ತಿಳಿಸಿದ್ದಾನೆ. ಆತ ಹೇಳಿದ ಕೂಡಲೇ ಬಾಲಕ ತಂದೆಯ ಮೊಬೈಲ್ ನಲ್ಲಿ ಆ್ಯಪ್ ಇನ್ ಸ್ಟಾಲ್ ಮಾಡಿಯೇ ಬಿಟ್ಟಿದ್ದಾನೆ.

    ಬಾಲಕ ಆ್ಯಪ್ ಡೌನ್ ಲೋಡ್ ಮಾಡಿದ ಕೂಡಲೇ ಕರೆ ಮಾಡಿದ ವ್ಯಕ್ತಿ, ಬಾಲಕನ ತಂದೆಯ ಬ್ಯಾಂಕ್ ಅಕೌಂಟಿನಿಂದ 8.95 ಲಕ್ಷ ಎಗರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

    ಘಟನೆ ಸಂಬಂಧ ಅಶೋಕ್ ದೂರು ಸ್ವೀಕರಿಸಿರುವ ಪೊಲೀಸರು ಅನಾಮಿಕನ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಸಂಪತ್ ರಾಜ್ ಕುಟುಂಬ ಸದಸ್ಯರ ಫೋನ್ ಸ್ವಿಚ್ ಆಫ್ – ಪತ್ತೆಗೆ ವಿಶೇಷ ತಂಡ ರಚನೆ

    ಸಂಪತ್ ರಾಜ್ ಕುಟುಂಬ ಸದಸ್ಯರ ಫೋನ್ ಸ್ವಿಚ್ ಆಫ್ – ಪತ್ತೆಗೆ ವಿಶೇಷ ತಂಡ ರಚನೆ

    ಬೆಂಗಳೂರು: ಕಾಡುಗೊಂಡನಹಳ್ಳಿ(ಕೆಜೆ ಹಳ್ಳಿ) ಮತ್ತು ದೇವರಜೀವನ ಹಳ್ಳಿ(ಡಿಜೆ ಹಳ್ಳಿ)  ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಗೆ ಸಿಸಿಬಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪರಾರಿಯಾಗಿರುವ ಸಂಪತ್ ರಾಜ್ ಜೊತೆ ಅವರ ಕುಟುಂಬದ ಸದಸ್ಯರ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಹೀಗಿದ್ದರೂ ಮಹತ್ವದ ಸುಳಿವನ್ನು ಸಿಸಿಬಿ ಕಲೆ ಹಾಕಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದ್ದು ಯಾವುದೇ ಕ್ಷಣದಲ್ಲಿ ಸಂಪತ್ ರಾಜ್ ಬಂಧನವಾಗುವ ಸಾಧ್ಯತೆಯಿದೆ.

    ಕೊರೊನಾ ಸೋಂಕು ತಗುಲಿದೆ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಸಂಪತ್ ರಾಜ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡೋ ಭಯದಲ್ಲಿ ಸಿನಿಮಾ ಶೈಲಿಯಲ್ಲಿ ರಾತ್ರೋರಾತ್ರಿ ಪರಾರಿಯಾಗಿದ್ದು, ಗುರುವಾರ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಸಿಬಿ ತಂಡಕ್ಕೆ ಶಾಕ್ ಆಗಿದೆ. ಬುಧವಾರ ಮಧ್ಯರಾತ್ರಿಯೇ ಡಿಸ್ಚಾರ್ಜ್ ಆಗಿ ಪರಾರಿಯಾಗಿದ್ದಾರೆ.  ಇದನ್ನೂ ಓದಿ: ಎಫ್‌ಬಿ ಪೋಸ್ಟ್‌ ನೆಪ ಮಾತ್ರ – ಅಖಂಡ ಮನೆಗೆ ಬೆಂಕಿ ಹಂಚಿದ್ದು ಪೂರ್ವನಿಯೋಜಿತ ಸಂಚು

    ಸಂಪತ್ ರಾಜ್ ಡಿಸ್ಚಾರ್ಜ್ ಮಾಡುವಾಗ ಸಿಸಿಬಿ ಅಧಿಕಾರಿಗಳ ಗಮನಕ್ಕೆ ತರುವಂತೆ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸಿಸಿಬಿ ಗಮನಕ್ಕೆ ತರದೇ ರಾತ್ರೋರಾತ್ರಿ ಸಂಪತ್ ರಾಜ್ ಡಿಸ್ಚಾರ್ಜ್ ಆಗಿದ್ದು, ಪರಾರಿಯಾಗಿದ್ದಾರೆ. ಕಾಕ್ಸ್ ಟೌನ್ ನಲ್ಲಿರುವ ಸಂಪತ್ ರಾಜ್ ಮನೆ ಸಹ ಬೀಗ ಹಾಕಿದ್ದು, ಸಿಸಿಬಿ ತಂಡ ಸಂಪತ್ ರಾಜ್ ಗಾಗಿ ಹುಡುಕಾಟ ನಡೆಸಿದೆ. ಅಲ್ಲದೆ ಡಿಸ್ಚಾರ್ಜ್ ಮಾಡಿದ್ದರ ಕುರಿತು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ನೋಟಿಸ್ ನೀಡಲಾಗಿದೆ.

    ಸಂಪತ್ ರಾಜ್ ಕೇರಳ ಕಡೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಪತ್ ರಾಜ್ ಮೆಡಿಕಲ್ ರಿಪೋರ್ಟ್ ನೋಡಿ ಸಿಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ಸೆಪ್ಟೆಂಬರ್ 14 ರಂದು ಅಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್, ಒಂದೇ ತಿಂಗಳಲ್ಲಿ 4 ಬಾರಿ ಅಡ್ಮಿಟ್, 4 ಬಾರಿ ಡಿಸ್ಚಾರ್ಜ್ ಆಗಿದ್ದಾರೆ. ಈಗ ಮೆಡಿಕಲ್ ರಿಪೋರ್ಟ್ ಸೀಜ್ ಮಾಡಿ ಸಿಸಿಬಿ ತಂಡ ಪರಿಶೀಲನೆ ನಡೆಸಿದೆ. ಸಂಪತ್ ರಾಜ್‍ಗೆ ಚಿಕಿತ್ಸೆ ನೀಡಿದ ವೈದ್ಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

    ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ 50 ಪುಟಗಳ ಮಧ್ಯಂತರ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಾಜಿ ಮೇಯರ್ ಸಂಪತ್ ರಾಜ್ 51ನೇ ಆರೋಪಿಯಾಗಿದ್ದರೆ, ಮಾಜಿ ಪಾಲಿಕೆ ಸದಸ್ಯ ಝಾಕೀರ್ 52ನೇ ಆರೋಪಿಯಾಗಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸಕ್ಕೆ ಬೆಂಕಿ ಇಡಲು ಇವರ ಪಾತ್ರ ಇದೆ. ಟೆಕ್ನಿಕಲ್ ಸಾಕ್ಷ್ಯಗಳ ಮೂಲಕ ಗಲಭೆಯಲ್ಲಿ ಭಾಗಿಯಾದ ಮತ್ತಷ್ಟು ಆರೋಪಿಗಳ ಹೆಸರನ್ನು ಸೇರಿಸಲಾಗುವುದು ಎಂದು ಚಾರ್ಜ್‍ಶೀಟ್‍ನಲ್ಲಿ ತಿಳಿಸಲಾಗಿದೆ.

    ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಎರಡನೇ ಬಾರಿ ನೋಟಿಸ್ ನೀಡಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸಂಪತ್ ರಾಜ್ ಅವರಿಗೆ ತಾತ್ಕಾಲಿಕ ವಿನಾಯಿತಿ ನೀಡಲಾಗಿದೆ ಎಂಬ ಅಂಶ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿತ್ತು.