Tag: phone

  • ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಪಕ್ಕದ್ಮನೆ ಆಂಟಿ ಮೇಲೆ ಲವ್-ಮದ್ವೆಗಾಗಿ 4 ವರ್ಷದ ಕಂದಮ್ಮನನ್ನೇ ಅಪಹರಿಸಿದ!

    ಘಜಿಯಾಬಾದ್: 4 ವರ್ಷದ ಮಗುವಿನ ತಾಯಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ 28 ವರ್ಷದ ಯುವಕನೊಬ್ಬ ಆಕೆಯ ಕಂದನನ್ನು ಅಪಹರಣ ಮಾಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ನಗರದಲ್ಲಿ ನಡೆದಿದೆ.

    28 ವರ್ಷದ ಮೌನು ತ್ಯಾಗಿ ಮಗುವನ್ನು ಅಪಹರಣ ಮಾಡಿದ್ದ ಆರೋಪಿ. ಸದ್ಯ ಆರೋಪಿ ಅಪಹರಣ ಮಾಡಿದ್ದ ಮಗುವನ್ನು ದೆಹಲಿಯಿಂದ ಸಹರಾನ್ಪುರ್ ಮಾರ್ಗವಾಗಿ ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸರು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

    ಆರೋಪಿ ಮೌನು ತ್ಯಾಗಿ ಕೂಲಿ ಕಾರ್ಮಿಕನಾಗಿದ್ದು, ಮಹಿಳೆ ವಾಸಿಸುತ್ತಿದ್ದ ಮನೆಯ ಬಳಿಯೇ ವಾಸಿಸುತ್ತಿದ್ದ. ಅಲ್ಲದೇ ಕಳೆದ ಒಂದು ವರ್ಷದಿಂದ ಮಹಿಳೆಗೂ ಪರಿಚಯವಿದ್ದ. ಆದರೆ ಜುಲೈ 24 ರಂದು ಮಗು ಶಾಲೆಗೆ ತೆರಳಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ತ್ಯಾಗಿ ಅಪಹರಣ ಮಾಡಿದ್ದ. ಮಗು ಕಾಣೆಯಾದ ಬಗ್ಗೆ 25 ರಂದು ಮಹಿಳೆ ದೂರು ದಾಖಲಿಸಿದ್ದರು.

    ಅಂದಹಾಗೇ ಕುಡಿತದ ದಾಸನಾಗಿದ್ದ ಪತಿಯನ್ನು ತೊರೆದಿದ್ದ ಮಹಿಳೆ ಕಳೆದ ಕೆಲ ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನೇ ಅನುಕೂಲ ಮಾಡಿಕೊಂಡ ತ್ಯಾಗಿ ತನ್ನೊಂದಿಗೆ ಮದುವೆಯಾಗುವಂತೆ ಮಹಿಳೆಗೆ ಒತ್ತಾಯ ಮಾಡಿದ್ದ. ಆದರೆ ಈಗಾಗಲೇ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಮೌನು ತ್ಯಾಗಿಯನ್ನು ಮದುವೆಯಾಗಲು ಮಹಿಳೆ ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ಮಗುವನ್ನು ಅಪಹರಣ ಮಾಡಿದ್ದ.

    ಮೌನು ತ್ಯಾಗಿ ಹಲವು ದಿನಗಳಿಂದ ಕುಟುಂಬಕ್ಕೆ ಪರಿಚಯವಿದ್ದ ಕಾರಣ ಮಗು ಸಹ ಆತ ಕರೆದ ತಕ್ಷಣ ಜೊತೆ ತೆರಳಿದೆ. ಮಗುವನ್ನು ಕರೆದುಕೊಂಡ ಆರೋಪಿ ಮೊದಲು ಮೀರತ್ ಗೆ ತೆರಳಿದ್ದು, ಬಳಿಕ ಮಗುವಿನ ತಾಯಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೇ ತನ್ನನ್ನು ಮದುವೆಯಾಗದಿದ್ದರೆ ಮಗುವನ್ನು ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ. ಈ ವೇಳೆ ಆತಂಕಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಪ್ರಕರಣ ಕುರಿತು ದೂರು ಪಡೆದ ಪೊಲೀಸರು ಆರೋಪಿಯ ಫೋನ್ ಮಾಹಿತಿ ಪಡೆದು ಆತ ಇರುವ ಸ್ಥಳವನ್ನು ಪತ್ತೆಮಾಡಿ ಮಗುವನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿ ಶಾಲೆಯ ಬಳಿಯಿಂದ ಮಗುವನ್ನು ಅಪಹರಣ ಮಾಡಲು ಬಳಕೆ ಮಾಡಿದ್ದ ಬೈಕನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆತನ ವಿರುದ್ಧ ಅಪಹರಣ ದೂರಿನ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಯಾವುದೇ ಹಳೆಯ ಫೀಚರ್ ಫೋನ್ ನೀಡಿ ಹೊಚ್ಚ ಹೊಸ ಜಿಯೋ ಫೋನ್-2 ಖರೀದಿಸಿ

    ಮುಂಬೈ: 50 ಕೋಟಿಗೂ ಹೆಚ್ಚಿನ ಭಾರತೀಯರು ಇನ್ನೂ ಅಂತರ್ಜಾಲ ಸಂಪರ್ಕವಿಲ್ಲದ ಫೀಚರ್ ಫೋನುಗಳನ್ನು ಬಳಸುತ್ತಿದ್ದು, ಇದರಿಂದ ಅವರು ಅಂತರ್ಜಾಲ ಸಂಪರ್ಕಕ್ಕೆ ಒಳಪಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಿಯೋ ಸಂಸ್ಥೆಯು ಕೈಗೆಟುಕುವ ಬೆಲೆಯಲ್ಲಿ ಡಿಜಿಟಲ್ ಸೇವೆಯನ್ನು ಎಲ್ಲರೂ ಬಳಸಬೇಕೆಂದು ನೂತನ ಯೋಜನೆಯನ್ನು ಜಾರಿಗೊಳಿಸಿದೆ.

    ಈ ಯೋಜನೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಯಾವುದೇ ಫೀಚರ್ ಫೋನ್‍ನ್ನು ಜಿಯೋದ ನೂತನ ಮೊಬೈಲ್ ನೊಂದಿಗೆ ಬದಲಾಯಿಸಿಕೊಳ್ಳುವ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. 25 ಕೋಟಿ ಭಾರತೀಯರು ಈಗಾಗಲೇ ಜಿಯೋ ಫೋನ್ ಬಳಸುತ್ತಿದ್ದು, ಇನ್ನೂ ಹಲವು ಕೋಟಿ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ.

    ಇದೇ ಶುಕ್ರವಾರ ಸಂಜೆ 5 ಗಂಟೆಯಿಂದ ಆರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‍ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋ ಫೋನ್‍ನೊಡನೆ ಬದಲಾಯಿಸಿಕೊಳ್ಳಬಹುದು ಎಂದು ಜಿಯೋ ಹೇಳಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:

    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ತನ್ನ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

     

  • 501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    501 ರೂ.ಗೆ ಸಿಗಲಿದೆ ನೂತನ ಜಿಯೋ ಫೋನ್- 2: ಗುಣವೈಶಿಷ್ಟ್ಯಗಳೇನು?

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ನ 41ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಮುಖೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯವರು ನೂತನ ಜಿಯೋ ಫೋನ್- 2 ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

    ಈ ಬಾರಿ ಜಿಯೋ ಫೋನ್- 2 ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಫೇಸ್ಬುಕ್, ವಾಟ್ಸಪ್ ಮತ್ತು ಯೂಟ್ಯೂಬ್ ನಂತಹ ಅತ್ಯಂತ ಜನಪ್ರಿಯ ಅಪ್ಲಿಕೇಶನ್ ಗಳನ್ನು ಒಳಗೊಂಡಿದೆ.

    ರಿಲಯನ್ಸ್ ಕಂಪನಿಯ ನೂತನ ಜಿಯೋ ಫೋನ್-2, ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದರ ಪ್ರಾರಂಭಿಕ ಬೆಲೆ 2,999 ರೂಪಾಯಿಗಳಾಗಿದೆ. ಇದಲ್ಲದೆ ಕಂಪನಿಯು ತನ್ನ ಹಳೆಯ ಜಿಯೋ ಫೋನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಅವರಿಗಾಗಿಯೇ ನೂತನ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಲ್ಲಿ ಗ್ರಾಹಕರು ತಮ್ಮ ಬಳಿ ಇರುವ ಹಳೆಯ ಜಿಯೋ ಫೋನನ್ನು ಕಂಪೆನಿಗೆ ಹಿಂದುರಿಗಿಸಿ 501 ರೂಪಾಯಿಯನ್ನು ಮಾತ್ರ ನೀಡಿ ಹೊಸ ಜಿಯೋ ಫೋನ್-2 ಖರೀದಿಸಬಹುದಾಗಿದೆ.

    ಜಿಯೋ ಫೋನ್-2ರ ಗುಣವೈಶಿಷ್ಟ್ಯಗಳು:
    * ಕ್ವರ್ಟಿ ಕೀ ಪ್ಯಾಡ್ ನ 2.4 ಇಂಚ್ ಸ್ಕೀನ್ ಡಿಸ್ಪ್ಲೇ (240X340 ಪಿಕ್ಸೆಲ್)
    * ಜಿಯೋ ಫೋನ್’ನ ಧ್ವನಿ ಆಜ್ಞೆ (ವಾಯ್ಸ್ ಕಮ್ಯಾಂಡ್) ವೈಶಿಷ್ಟ್ಯವನ್ನು
    * ಫೇಸ್ಬುಕ್, ವಾಟ್ಸಪ್, ಯುಟ್ಯೂಬ್, ವೈ-ಫೈ ಮತ್ತು ಜಿಪಿಎಸ್ ಸೌಲಭ್ಯ.
    * 512 MB RAM 4 ಜಿಬಿ ಆಂತರಿಕ ಮೆಮೊರಿ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 128 ಜಿಬಿವರೆಗೆ ವಿಸ್ತರಿಸಬಹುದು.
    * ಹಿಂದುಗಡೆ 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂದುಗಡೆ 0.3 ಮೆಗಾಪಿಕ್ಸೆಲ್(ವಿಜಿಎ) ಕ್ಯಾಮೆರಾ.
    * ಫೋನ್ ಡ್ಯೂಯಲ್ ಸಿಮ್ ವೈಶಿಷ್ಟ್ಯವನ್ನು ಹಾಗೂ ಲೌಡ್ ಮೆನೋ ಸ್ಪೀಕರ್
    * 2000 ಎಂಎಎಚ್ ಬ್ಯಾಟರಿ ಸಾಮರ್ಥ್ಯ.

    ಜಿಯೋ ಮೊದಲ ಫೋನಿನಲ್ಲಿ ನೀಡಿದಂತೆ ಎಫ್‍ಎಂ ರೇಡಿಯೋ, ವೈಫೈ, ಎನ್‍ಎಫ್‍ಸಿ, ಬ್ಲೂಟೂತ್, ಜಿಪಿಎಸ್ ಹೊಂದಿದ್ದು, ಕನ್ನಡ ಸೇರಿದಂತೆ ದೇಶದ 22 ಭಾಷೆಗಳನ್ನು ಈ ಫೋನ್ ಸಪೋರ್ಟ್  ಮಾಡುತ್ತದೆ. ಮೈ ಜಿಯೋ, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಚಾಟ್, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್ ಪ್ರೆಸ್ ನ್ಯೂಸ್ ಅಪ್ಲಿಕೇಶನ್‍ಗಳು ಪ್ರಿಲೋಡೆಡ್ ಆಗಿ ಇರಲಿದೆ.

    ಜಿಯೋ ಫೋನ್ -1ರ ಗುಣವೈಶಿಷ್ಟ್ಯ ಏನಿತ್ತು?
    ಸಿಂಗಲ್ ನ್ಯಾನೋ ಸಿಮ್ 2.4 ಇಂಚಿನ (240X320 ಪಿಕ್ಸೆಲ್), ಟಾರ್ಚ್ ಲೈಟ್ ಹೊಂದಿರುವ ಈ ಫೀಚರ್ ಫೋನ್ ಕೈ ಆಪರೇಟಿಂಗ್ ಸಿಸ್ಟಂ( KaiOS ) ನೀಡಿತ್ತು.

    1.2 GHz ಡ್ಯುಯಲ್ ಕೋರ್ ಎಸ್‍ಪಿಆರ್ಡಿ ಪ್ರೋಸೆಸರ್ ಹೊಂದಿರುವ ಈ ಫೋನ್ ಮಲಿ 400 ಗ್ರಾಫಿಕ್ಸ್ ಪ್ರೋಸೆಸರ್ ಇದೆ. 2000 ಎಂಎಎಚ್ ಲಿಪೋ ಬ್ಯಾಟರಿ ಹೊಂದಿರುವ ಈ ಫೋನ್ 4ಜಿಬಿ ಆಂತರಿಕ ಮೆಮೊರಿ, 128 ಜಿಬಿವರೆಗೆ ಮೆಮೊರಿ ವಿಸ್ತರಿಸುವ ಸಾಮರ್ಥ್ಯ, ಹಿಂದುಗಡೆ 2 ಎಂಪಿ ಕ್ಯಾಮೆರಾ, ಮುಂದುಗಡೆ ವಿಜಿಎ ಕ್ಯಾಮೆರಾ ಇದ್ದು, ವಿಡಿಯೋ ರೆಕಾರ್ಡಿಂಗ್ ನೀಡಿತ್ತು.

  • ಲೋನ್ ಬೇಕಾದ್ರೆ ನನ್ನ ಜೊತೆ ಸೆಕ್ಸ್ ಗೆ ಬಾ – ಬ್ಯಾಂಕ್ ಮ್ಯಾನೇಜರ್ ನಿಂದ ರೈತನ ಪತ್ನಿಗೆ ಡಿಮ್ಯಾಂಡ್

    ಲೋನ್ ಬೇಕಾದ್ರೆ ನನ್ನ ಜೊತೆ ಸೆಕ್ಸ್ ಗೆ ಬಾ – ಬ್ಯಾಂಕ್ ಮ್ಯಾನೇಜರ್ ನಿಂದ ರೈತನ ಪತ್ನಿಗೆ ಡಿಮ್ಯಾಂಡ್

    ಮುಂಬೈ: ರೈತರು ಸಾಲ ಕೇಳುವ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಹಲವಾರು ದಾಖಲೆಗಳನ್ನು ಕೇಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಸಾಲ ಕೇಳಲು ಬಂದ ರೈತನ ಪತ್ನಿಯನ್ನು ಕಾಮುಕ ಬ್ಯಾಂಕ್ ಮ್ಯಾನೇಜರ್ ಒಬ್ಬ ಸೆಕ್ಸ್ ಗೆ ಬಾ ಎಂದು ಆಹ್ವಾನಿಸಿದ್ದಾನೆ.

    ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ರಾಜೇಶ್ ವಿರುದ್ಧ ಕೇಸ್ ದಾಖಲಾಗಿದೆ. ದತ್ತಾಲಾ ಗ್ರಾಮದ ಮಹಿಳೆಯೊಬ್ಬರು ಬೆಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ತನ್ನ ಪತಿಯ ಜೊತೆಗೆ ಬ್ಯಾಂಕಿಗೆ ಹೋಗಿದ್ದರು. ಅಲ್ಲಿನ ಶಾಖಾ ಮ್ಯಾನೇಜರ್ ರಾಜೇಶ್ ಹಿವಸೇ ಲೋನ್ ಪ್ರಕ್ರಿಯೆ ವೇಳೆ ಮಹಿಳೆಯ ಪೂರ್ಣ ವಿವರಗಳನ್ನು ತೆಗೆದುಕೊಂಡಿದ್ದಾನೆ.

    ಮ್ಯಾನೇಜರ್ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ ಅಷ್ಟೇ ಅಲ್ಲದೇ ಸೆಕ್ಸ್ ಗೆ ಡಿಮ್ಯಾಂಡ್ ಮಾಡಿದ್ದಾನೆ. ನಂತರ ಮ್ಯಾನೇಜರ್ ತನ್ನ ಗುಮಾಸ್ತೆಯನ್ನು ಆಕೆಯ ಮನೆಗೆ ಕಳುಹಿಸಿದ್ದಾನೆ. ಸಹಕರಿಸಿದರೆ ಕೃಷಿ ಸಾಲ ಮತ್ತು ವಿಶೇಷ ಪ್ಯಾಕೇಜ್ ಅಡಿಯಲ್ಲಿ ಪ್ರಯೋಜನಗಳನ್ನು ಬ್ಯಾಂಕ್ ಮ್ಯಾನೇಜರ್ ನೀಡುತ್ತಾರೆ ಎಂದು ಗುಮಾಸ್ತೆ ಹೇಳಿದ್ದಾಳೆ.

    ಮಹಿಳೆ ಮ್ಯಾನೇಜರ್ ಕರೆ ಮಾಡಿದ್ದಾಗ ಫೋನಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಬಳಿಕ ಅದೇ ದಿನ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಮಹಿಳೆ ದೂರು ಸಲ್ಲಿಸಿದ್ದಾರೆ.

    ಸದ್ಯಕ್ಕೆ ಐಪಿಸಿ ಕಾಯ್ದೆಯ ಅಡಿಯಲ್ಲಿ ಮ್ಯಾನೇಜರ್ ಮತ್ತು ಗುಮಾಸ್ತೆ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಹುಡುಕುವ ಕಾರ್ಯಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಫೋನ್ ಕದ್ದಾಲಿಕೆ – ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಫೋನ್ ಕದ್ದಾಲಿಕೆ – ಶೋಭಾ ಕರಂದ್ಲಾಜೆ ಗಂಭೀರ ಆರೋಪ

    ಬೆಂಗಳೂರು: ರಾಜ್ಯ ಸರ್ಕಾರ ಬಿಜೆಪಿ ನಾಯಕರಾದ ಸಿದ್ದೇಶ್ವರ್, ಪಿ.ಸಿ.ಮೋಹನ್ ಹಾಗೂ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಶೋಭಾ ಕರಂದ್ಲಾಜೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಫೋನ್‍ಗಳಿಗೆ ಖಾಸಗಿತನ ಇಲ್ಲ. ರಾಜ್ಯ ಸರ್ಕಾರ ತಮ್ಮ ಹಾಗೂ ಸಿದ್ದೇಶ್ವರ್, ಪಿ.ಸಿ.ಮೋಹನ್ ಫೋನ್ ಕದ್ದಾಲಿಕೆ ಮಾಡುತ್ತಿದೆ. ಈ ಕುರಿತು ಲೋಕಸಭಾ ಸ್ಪೀಕರ್, ದೇಶದ ಗೃಹ ಸಚಿವರು, ಐಜಿ, ಡಿಜಿಗೆ ಪತ್ರ ಬರೆದಿದ್ದೇವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಬಿಜೆಪಿಯಿಂದ ನಮ್ಮ ಶಾಸಕರಿಗೆ ನೂರು ಕೋಟಿ ಆಫರ್ ಕೊಟ್ಟಿದ್ದಾರೆ ಅನ್ನುವ ಕುಮಾರ ಸ್ವಾಮಿ ಹೇಳಿಕೆ ವಿಚಾರ ಪ್ರತಿಕ್ರಿಯೇ ನೀಡಿದ ಅವರು, ಕುದುರೆ ವ್ಯಾಪಾರದಲ್ಲಿ ಯಾರು ಎಕ್ಸ್ ಪರ್ಟ್ ಎನ್ನುವುದು ನಮಗೆ ಗೊತ್ತಿದೆ, ಅದು ರಾಜ್ಯದ ಜನರಿಗೂ ತಿಳಿದಿದೆ ಎಂದು ತಿರುಗೇಟು ನೀಡಿದರು. ಅಲ್ಲದೇ ರೆಸಾರ್ಟ್ ರಾಜಕೀಯದತ್ತ ಸಧ್ಯ ನಾವು ಚಿಂತನೆ ನಡೆಸಿಲ್ಲ ಎಂದರು.

  • ವಿಡಿಯೋ: ತಾನೇ ಫೋನ್ ಬ್ಯಾಟರಿ ಬದಲಾಯಿಸಲು ಹೋಗಿ ಎಡವಟ್ಟು ಮಾಡ್ಕೊಂಡ ವ್ಯಕ್ತಿ

    ವಿಡಿಯೋ: ತಾನೇ ಫೋನ್ ಬ್ಯಾಟರಿ ಬದಲಾಯಿಸಲು ಹೋಗಿ ಎಡವಟ್ಟು ಮಾಡ್ಕೊಂಡ ವ್ಯಕ್ತಿ

    ಬೀಜಿಂಗ್: ವ್ಯಕ್ತಿಯೊಬ್ಬರು ಮೊಬೈಲ್ ಅಂಗಡಿಯಲ್ಲಿ ತನ್ನ ಫೋನ್ ಬ್ಯಾಟರಿ ಬದಲಾಯಿಸುವ ವೇಳೆ ಬ್ಯಾಟರಿ ಸ್ಫೋಟಗೊಂಡ ಘಟನೆ ಚೀನಾದಲ್ಲಿ ನಡೆದಿದೆ.

    ವರದಿಗಳ ಪ್ರಕಾರ ವ್ಯಕ್ತಿ ಆನ್‍ಲೈನ್ ನಲ್ಲಿ ಹೊಸ ಬ್ಯಾಟರಿ ಖರೀದಿಸಿದ್ದರು. ತನ್ನ ಫೋನ್‍ನಲ್ಲಿದ್ದ ಹಳೇ ಬ್ಯಾಟರಿ ತೆಗೆದು ಹೊಸ ಬ್ಯಾಟರಿ ಅಳವಡಿಸಲು ಹತ್ತಿರದ ಮೊಬೈಲ್ ಅಂಗಡಿಗೆ ಹೋಗಿದ್ದರು. ಅಂಗಡಿಯವರಿಂದ ಟ್ವೀಜರ್ ಪಡೆದು ಹಳೇ ಬ್ಯಾಟರಿಯನ್ನ ತೆಗೆಯಲು ಪ್ರಯತ್ನಿಸಿದ್ರು. ಈ ವೇಳೆ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ.

    ವ್ಯಕ್ತಿಯ ಮುಖದ ಸಮೀಪವೇ ಬ್ಯಾಟರಿ ಸ್ಫೋಟಗೊಂಡಿದ್ದು, ಬೆಂಕಿ ಬಂದ ತಕ್ಷಣ ಅಲ್ಲಿಂದ ಎದ್ದು ಓಡಿಹೋಗಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕಡಿಮೆ ಬೆಲೆಗೆ ಸಿಕ್ತು ಅಂತ ಆನ್‍ಲೈನ್ ನಿಂದ ಬ್ಯಾಟರಿ ಖರೀದಿಸಿದ್ದಾಗಿ ಆ ವ್ಯಕ್ತಿ ಹೇಳಿದ್ರು. ತಾನೇ ಬ್ಯಾಟರಿ ಬದಲಾಯಿಸಲು ಟ್ವೀಜರ್ ಕೇಳಿದ್ರು. ಬ್ಯಾಟರಿ ಸ್ಫೋಟಗೊಂಡಾಗ ಗ್ರಾಹಕರು ಅಂಗಡಿಯಿಂದ ಹೊರಗೆ ಓಡಿಹೋದ್ರು ಎಂದು ಮೊಬೈಲ್ ಅಂಗಡಿಯ ಮಾಲೀಕ ಹೇಳಿದ್ದಾರೆ. ಆ ವ್ಯಕ್ತಿ ಆಕಸ್ಮಿಕವಾಗಿ ಬ್ಯಾಟರಿಗೆ ತೂತು ಮಾಡಿದ್ದರಿಂದ ಅದು ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

    ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.

    https://www.youtube.com/watch?v=L1_w9PWCgNQ

  • ಪೋಲಿಸರ ವಿರುದ್ಧ ಸೇಡು- ಕಾಂಟ್ರೋಲ್ ರೂಮ್ ಗೆ 1,264 ಬಾರಿ ಕರೆ ಮಾಡಿದ ವ್ಯಕ್ತಿ

    ಪೋಲಿಸರ ವಿರುದ್ಧ ಸೇಡು- ಕಾಂಟ್ರೋಲ್ ರೂಮ್ ಗೆ 1,264 ಬಾರಿ ಕರೆ ಮಾಡಿದ ವ್ಯಕ್ತಿ

    ಅಹಮದಾಬಾದ್: ವ್ಯಕ್ತಿಯೊಬ್ಬ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಸುಮಾರು 1,264 ಬಾರಿ ಕರೆ ಮಾಡಿ ನಿಂದಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

    ಈಶ್ವರ್ ಭೋಯ್(40) ಎಂಬಾತ ಈ ಕೃತ್ಯವೆಸಗಿದ್ದಾನೆ. ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ಹೊಡೆದಿದ್ದರಿಂದ ಅವರ ಮೇಲೆ ಸೇಡು ಹೊಂದಿದ್ದ. ಮೂರು ವರ್ಷಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಈಶ್ವರ್, 108 ತುರ್ತು ಸೇವೆಯ ನಂಬರ್‍ಗೆ ಕರೆ ಮಾಡಿ ನಿಂದಿಸುವ ಮೂಲಕ ವಿಕೃತ ಆನಂದ ಪಡೆಯುತ್ತಿದ್ದ. ಆಗ ಈಶ್ವರ್ ನನ್ನು ಪೊಲೀಸರು ಬಂಧಿಸಿದ್ದರು.

    ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿ ಈಶ್ವರ್, ಬಳಿಕ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಫೋನ್ ಮಾಡಿ ನಿಂದಿಸಲು ಆರಂಭಿಸಿದ್ದ. ಈ ವೇಳೆ ಕಾಂಟ್ರೋಲ್ ರೂಮ್ ನ ಮಹಿಳಾ ಸಿಬ್ಬಂದಿ ಕರೆ ಸ್ವೀಕರಿಸಿದರೆ ಆರೋಪಿ ಮತ್ತಷ್ಟು ಜೋರಾಗಿ ನಿಂದಿಲು ಆರಂಭಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಹಿಳಾ ಪೊಲೀಸ್ ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಸೈಬರ್ ಕ್ರೈಂ ವಿಭಾಗದ ಪೊಲೀಸರ ಸಹಾಯ ಪಡೆದ ಅಧಿಕಾರಿಗಳು ಮೊಬೈಲ್ ನ ಐಎಂಇಐ ನಂಬರ್ ನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಈಶ್ವರ್ ಗೆ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಬಿಟ್ಟು ಹೋಗಿದ್ದಾಳೆ. ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

  • ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್

    ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ಮಾಡಿ ಸದ್ಯ ಜೈಲು ಸೇರಿರೋ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ತನ್ನ ತಂದೆ ಹ್ಯಾರಿಸ್ ಅವರಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾನೆ ಎಂಬುದಾಗಿ ಪರಪ್ಪನ ಅಗ್ರಹಾರದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇಂದು ರೌಡಿ ನಲಪಾಡ್ ಭವಿಷ್ಯ- ಜಾಮೀನು ಅರ್ಜಿ ಕುರಿತು ಆದೇಶ

    ಪ್ರಕರಣ ಸಂಬಂಧ ಈಗಾಗಲೇ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಜಾಮಿನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದಾನೆ. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ನಲಪಾಡ್‍ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ

    ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆ ಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    https://www.youtube.com/watch?v=oHsWb25A2VM

     

  • ವಿಡಿಯೋ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದವನಿಗೆ ಮಹಿಳೆಯಿಂದ ಧರ್ಮದೇಟು

    ವಿಡಿಯೋ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದವನಿಗೆ ಮಹಿಳೆಯಿಂದ ಧರ್ಮದೇಟು

    ದಾವಣಗೆರೆ: ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಧರ್ಮದೇಟು ನೀಡಿರುವ ಘಟನೆ ಜಿಲ್ಲೆಯ ಹರಿಹರ ಹೊರಭಾಗದ ಪಿಬಿ ರಸ್ತೆಯಲ್ಲಿ ನಡೆದಿದೆ.

    ಜಾವೇದ್ ಗೂಸಾ ತಿಂದ ವ್ಯಕ್ತಿ. ಮಹಿಳೆ ಮತ್ತು ಆಕೆಯ ಪತಿ ರಸ್ತೆ ಬದಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದರು. ನಾನು ರಸ್ತೆಯ ಕಾವಲುಗಾರ, ನನಗೆ ನೀವು ಹಣ ನೀಡಬೇಕೆಂದು ಜಾವೇದ್ ಧಮ್ಕಿ ಹಾಕಿದ್ದಾನೆ. ದಂಪತಿ ಹಣ ನೀಡದಕ್ಕೆ ಮಹಿಳೆಗೆ ಫೋನ್ ಮಾಡಿ ಅವಾಚ್ಯ ಪದಗಳಿಂದ ನಿಂದಿಸುವ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

    ಬುಧವಾರ ಅಂಗಡಿ ಬಳಿ ಬಂದ ಜಾವೇದ್ ನನ್ನು ಹಿಡಿದ ಮಹಿಳೆ ತಕ್ಕ ಪಾಠ ಕಲಿಸಿದ್ದಾರೆ. ಗೂಸಾ ನೀಡಿದ ಬಳಿಕ ಜಾವೇದ್ ನನ್ನು ಹರಿಹರ ಪೊಲೀಸರ ವಶಕ್ಕೆ ನೀಡಿದ್ದಾರೆ.

    https://youtu.be/q4bVEd5JMmM

     

  • ಬೀಳ್ತಿದ್ದ ಮೊಬೈಲ್ ಹಿಡಿಯಲು ಹೋಗಿ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು

    ಬೀಳ್ತಿದ್ದ ಮೊಬೈಲ್ ಹಿಡಿಯಲು ಹೋಗಿ ರೈಲಿನಿಂದ ಬಿದ್ದು ಎಂಟೆಕ್ ವಿದ್ಯಾರ್ಥಿ ಸಾವು

    ಹೈದರಾಬಾದ್: ಬೀಳುತ್ತಿದ್ದ ಮೊಬೈಲ್ ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಎಂಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಎಂಟೆಕ್ ಮೊದಲ ವರ್ಷ ಓದುತ್ತಿದ್ದ ವಿ. ಪ್ರಶಾಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ಪ್ರಶಾಂತ್ ರಜೆ ಇದ್ದ ಹಿನ್ನೆಲೆಯಲ್ಲಿ ವಾರಂಗಲ್ ಜಿಲ್ಲೆಯಲ್ಲಿರುವ ತನ್ನೂರು ಹಾಸನಪರ್ತಿಗೆ ರೈಲಿನಲ್ಲಿ ಹೊರಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ.

    ಪ್ರಶಾಂತ್ ರೆಡ್ಡಿ ಸಿಕಿಂದರಬಾದ್-ನಲಾಗುಂಡಾ ಮಾರ್ಗದ ಶಾತವಾಹನ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಈ ವೇಳೆ ರೈಲು ಬೋಗಿಯ ಬಾಗಿಲಿನ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದನು. ಆಗ ಮೊಬೈಲ್ ಆತನ ಕೈಯಿಂದ ಆಕಸ್ಮಿಕವಾಗಿ ಜಾರಿದೆ. ನಂತರ ಪ್ರಶಾಂತ್ ಜಾರಿ ಬೀಳುತ್ತಿದ್ದ ಮೊಬೈಲ್ ಅನ್ನು ಹಿಡಿದುಕೊಳ್ಳಲು ಹೋಗಿ ರೈಲಿನ ಕೆಳಗೆ ಬಿದ್ದು, ರೈಲು ಕೆಳಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.

    ಈ ಘಟನೆ ಸಂಬಂಧ ಸಿಕಿಂದರಬಾದ್ ರೈಲ್ವೆ ಪೊಲೀಸರು ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿ ಪ್ರಶಾಂತ್ ರೆಡ್ಡಿ ಮೃತ ದೇಹವನ್ನು ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.