Tag: phone tap

  • ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ – ಅಶೋಕ್‌ಗೆ ಡಿಕೆಶಿ ಪ್ರಶ್ನೆ

    ನಿರ್ಮಲಾನಂದನಾಥ ಶ್ರೀಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ – ಅಶೋಕ್‌ಗೆ ಡಿಕೆಶಿ ಪ್ರಶ್ನೆ

    – ಫೆಬ್ರವರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ತೀರ್ಮಾನ: ಡಿಸಿಎಂ

    ಬೆಂಗಳೂರು: ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ರಲ್ಲಾ, ಆಗ ಬಿಜೆಪಿಯವರು ಎಲ್ಲೋಗಿದ್ರು? ನಿರ್ಮಲಾನಂದನಾಥ ಸ್ವಾಮೀಜಿಗಳ (Nirmalanandanatha Swamiji) ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ? ಆಗ ಅಶೋಕ್ ಎಲ್ಲಿದ್ದರು? ಶ್ರೀಗಳು ಕ್ರಿಮಿನಲ್‌ ತರಹ ಅವರ ನಂಬರ್‌ ಕೊಟ್ಟಿದ್ದರು. ಅದರ ರಿಪೋರ್ಟ್‌ ಬಗ್ಗೆ ಗೊತ್ತಿದ್ಯಾ? ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಪ್ರಶ್ನಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಮತದಾನ ಇಲ್ಲದಂತೆ ಮಾಡಬೇಕು ಎಂಬ ಚಂದ್ರಶೇಖರ ಸ್ವಾಮೀಜಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಒಂದು ಕ್ಷಣವೂ ಯೋಚಿಸದೇ ದಾಖಲೆ, ವೀಡಿಯೋ ರಿಲೀಸ್‌ ಮಾಡ್ಲಿ – ಯತ್ನಾಳ್‌ಗೆ ವಿಜಯೇಂದ್ರ ಸವಾಲ್‌

    ವಿಧಾನಸೌಧದಲ್ಲಿ (VidhanaSoudha) ಸಿಎಂ ಉತ್ತರ ಕೊಟ್ಟಿದ್ದಾರೆ. ನಾನು ನಮ್ಮ ಸ್ವಾಮೀಜಿಗಳಿಗೆ ಹಾಗೂ ಎಲ್ಲ ಸ್ವಾಮೀಜಿಗಳಿಗೆ ಮನವಿ ಮಾಡುತ್ತೇನೆ. ಸಂವಿಧಾನ, ಯಾರ ಹಕ್ಕುಗಳ ಬಗ್ಗೆ ಮಾತನಾಡುವುದು ಬೇಡ, ಜಾತಿಗಳ ಬಗ್ಗೆ ಮಾತನಾಡುವುದು ಬೇಡ. ನಮ್ಮದು ಮಾನವ ಧರ್ಮ, ನಮ್ಮದು ಸಂವಿಧಾನ, ಎರಡಕ್ಕೂ ನಾವು ಹೆಚ್ಚಿಗೆ ಒತ್ತು ಕೊಟ್ಟು ಹೋಗಬೇಕು. ನಾನು ಸ್ವಾಮೀಜಿಗಳು ಹಾಗೂ ಪೊಲೀಸರಿಗೆ ಹೇಳುತ್ತೇನೆ, ಯಾರು ಕೂಡ ಕಾನೂನಿಗಿಂತ ದೊಡ್ಡವರಲ್ಲ. ನಾನು ಮಾತಾಡಿದ್ರೂ ಕೇಸ್ ಹಾಕ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಶೋ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದು ಕಣ್ಣೀರಿಟ್ಟ ಶೋಭಾ- ಕಿಚ್ಚನ ಮಾತಿಗೆ ಡೋರ್ ಓಪನ್

    ನಮ್ಮ ಕಾಂಗ್ರೆಸ್ ಆಫೀಸ್ ಹುಡುಗರ ಮೇಲೆ ಕೇಸ್ ಬಿಜೆಪಿ ಸರ್ಕಾರ ಇದ್ದಾಗ ಹಾಕಿದ್ದಾರೆ. ಸ್ವಾಮೀಜಿಗಳ ವಿಚಾರಕ್ಕೆ ಉಗ್ರ ಹೋರಾಟ ಮಾಡ್ತಿನಿ ಅಂತ ಅಶೋಕ್ ಹೇಳ್ತಾರೆ. ಜೆಡಿಎಸ್ ಸರ್ಕಾರ ಇದ್ದಾಗ ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದ್ರಲ್ಲಾ, ಆಗ ಎಲ್ಲೋಗಿದ್ರು? ಎಲ್ಲಿ ಹೋಗಿದ್ದರು ಬಿಜೆಪಿಯವರು? ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ, ಆಗ ಅಶೋಕ್ ಎಲ್ಲೋಗಿದ್ರು? ಶ್ರೀಗಳು ಕ್ರಿಮಿನಲ್‌ ತರಹ ಅವರ ನಂಬರ್‌ ಕೊಟ್ಟಿದ್ದರು. ಅದರ ರಿಪೋರ್ಟ್‌ ಬಗ್ಗೆ ಗೊತ್ತಿದ್ಯಾ? ಸುಮ್ಮನೆ ಒಣ ರಾಜಕಾರಣ ಬಿಟ್ಟು ಬಿಡಿ, ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದ್ಕೊಂಡು ಕೂತಿದ್ದಾನೆ ಅಶೋಕ್ ಎಂದು ಲೇವಡಿ ಮಾಡಿದರು.

    ಸಮಾವೇಶದಿಂದ ಸ್ಥಳೀಯ ಚುನಾವಣೆಗಳಿಗೆ ಸಹಾಯಕ ಎಂಬ ವಿಚಾರಕ್ಕೆ ಉತ್ತರಿಸಿ, ಏನಾದ್ರೂ ಒಂದು ಉದ್ದೇಶ ಇರಬೇಕು ಅಲ್ವಾ? ಎಲೆಕ್ಷನ್ ಬರುತ್ತಲೇ ಇರುತ್ತದೆ. ನಾವು ಕೂಡ ತಯಾರಿ ಮಾಡಿಕೊಳ್ಳಬೇಕಲ್ವಾ? ಮುಂದಿನ ಫ್ರಬವರಿಯಲ್ಲಿ ಚುನಾವಣೆ ಮಾಡಬೇಕೆಂದು ತೀರ್ಮಾನ ಆಗಿದೆ. ಎಲ್ಲಾ ಕಂಪ್ಲೀಟ್ ಆಗಿ ಎಲೆಕ್ಟರೋಲ್‌ ವರ್ಕ್ಸ್ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಎಸ್‌ವೈ ಕುಟುಂಬ ದೇಶದಲ್ಲಿಯೇ ಪ್ರಾಮಾಣಿಕ ಕುಟುಂಬ, ವಿಜಯೇಂದ್ರ ಅಪ್ಪಟ ಚಿನ್ನ – ಯತ್ನಾಳ್ ವ್ಯಂಗ್ಯ

    ಇದೇ ವೇಳೆ ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಡಿಕೆಶಿ, ನಾನು ಮುಖ್ಯಮಂತ್ರಿ ಅಲ್ಲ ಡಿಸಿಎಂ. ಆದ್ರೆ ಪಾರ್ಟಿ ಅಧ್ಯಕ್ಷ ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಇಲ್ಲ, ಅದರ ಅವಶ್ಯಕತೆಯೂ ಇಲ್ಲ. ಇನ್ನೂ ವಿಧಾನಸಭೆಯಲ್ಲಿ ಯಾವ ಸ್ಥಾನವೂ ಖಾಲಿ ಇಲ್ಲ. ನಾನು ಪಾರ್ಟಿ ಪ್ರೆಸಿಡೆಂಟ್ ಆದ್ರೆ ನಾನೇನು ಹೇಳಬೇಕಿಲ್ಲ ಎಂದರು.

  • ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ನವದೆಹಲಿ: ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅಲ್ಲಗೆಳೆದಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರ ಫೋನ್ ಅನ್ನು ಯಾರು ಏಕೆ ಟ್ಯಾಪ್ ಮಾಡಬೇಕು? ಉಪರಾಷ್ಟ್ರಪತಿ ಚುನಾವಣೆಯಲ್ಲಿ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿರುವಾಗ ಆಳ್ವಾ ಅವರ ಫೋನ್ ಅನ್ನು ಟ್ಯಾಪ್ ಮಾಡುವ ಅಗತ್ಯತೆ ನಮಗಿಲ್ಲ. ಅಂಥಹ ಕೀಳು ಮಟ್ಟದ ರಾಜಕಾರಣವನ್ನು ಬಿಜೆಪಿ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ತಾಕತ್ತಿದ್ದರೆ ನನ್ನ ವಿಚಾರವನ್ನ ಯಾವುದೇ ನ್ಯಾಯಾಲಯಕ್ಕೆ ಹೋಗಿ ಗೆದ್ದು ತೋರಿಸಲಿ: ಈಶ್ವರಪ್ಪ ಸವಾಲ್

    ಕಾಂಗ್ರೆಸ್‍ನಿಂದ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಬಳಿಕ ಮಾರ್ಗರೇಟ್ ಆಳ್ವಾ ಅವರು ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದಾರೆ. ಇಂದು ನನ್ನ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ಆಳ್ವಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಇಂದು ಬಿಜೆಪಿಯ ಕೆಲವು ಸ್ನೇಹಿತರೊಂದಿಗೆ ಮಾತನಾಡಿದೆ. ಆ ನಂತರ ನನ್ನ ಮೊಬೈಲ್‍ಗೆ ಎಲ್ಲಾ ಕರೆಗಳನ್ನು ಡೈವರ್ಟ್ ಮಾಡಲಾಗುತ್ತಿದೆ ಎಂದು ಮಾರ್ಗರೇಟ್ ಆಳ್ವಾ ಅವರು ಆರೋಪಿಸಿದ್ದರು. ನನ್ನ ಫೋನ್ ಟ್ಯಾಪ್ ಆಗಿದ್ದು, ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ನನ್ನ ಫೋನ್ ಸರಿಮಾಡಿದರೆ, ಇಂದು ರಾತ್ರಿ ಬಿಜೆಪಿ, ಟಿಎಂಸಿ ಅಥವಾ ಬಿಜೆಡಿಯಿಂದ ಯಾವುದೇ ಸಂಸದರನ್ನು ಕರೆಯುವುದಿಲ್ಲ ಎಂಬ ಭರವಸೆ ನೀಡುತ್ತೇನೆ ಎಂದು ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದರು.

    ಆಳ್ವಾ ಅವರ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಪ್ರಹ್ಲಾದ್ ಜೋಶಿ ಅವರು, ಇದೊಂದು ಬಾಲಿಶ ಹೇಳಿಕೆ ಅಂತಾ ಲೇವಡಿ ಮಾಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ. ಅದು ಎಲ್ಲರಿಗೂ ಈಗಾಗಲೇ ಗೊತ್ತಿರುವಂತದ್ದು. ಹೀಗಿರುವಾಗ ಯಾರಾದರೂ ಆಳ್ವಾ ಅವರ ಫೋನ್ ಅನ್ನು ಏಕೆ ಟ್ಯಾಪ್ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಮಾರ್ಗರೇಟ್ ಆಳ್ವಾ ಅವರು ಹಿರಿಯ ನಾಯಕಿ. ಈ ರೀತಿಯ ಹೇಳಿಕೆಗಳು ಚೈಲ್ಡಿಶ್ ಮನೋಭಾವವನ್ನು ತೋರಿಸುತ್ತವೆ. ಇಂಥಹ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಆರೋಪಗಳನ್ನು ಮಾಡುವಾಗ ಕನಿಷ್ಠ ಆಲೋಚನೆ ಮಾಡಿ ಆರೋಪಿಸಲಿ. ಹುರುಳಿಲ್ಲದ, ಆಧಾರವಿಲ್ಲದ ಆರೋಪಗಳಿಗೆ ಅರ್ಥವಿಲ್ಲ ಎಂದು ಆಳ್ವಾ ಅವರಿಗೆ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಚಿವ ಎಂಬಿ ಪಾಟೀಲ್ ಸೇರಿದಂತೆ 4 ಸಚಿವರ ಫೋನ್ ಕದ್ದಾಲಿಕೆ ಆಗಿದ್ಯಂತೆ – ಮೋದಿ ಮೇಲೆ ಕೈ ಪಡೆ ಅನುಮಾನ

    ಸಚಿವ ಎಂಬಿ ಪಾಟೀಲ್ ಸೇರಿದಂತೆ 4 ಸಚಿವರ ಫೋನ್ ಕದ್ದಾಲಿಕೆ ಆಗಿದ್ಯಂತೆ – ಮೋದಿ ಮೇಲೆ ಕೈ ಪಡೆ ಅನುಮಾನ

    ವಿಜಯಪುರ: ಐಟಿ ಅಧಿಕಾರಿಗಳು ನಮ್ಮ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

    ವಿಜಯಪುರದ ಭಲೇಶ್ವರದಲ್ಲಿ ಮಾತನಾಡಿದ ಪಾಟೀಲ್, ಐಟಿ ಅಧಿಕಾರಿಗಳು ಒಂದು ವರ್ಷದಿಂದ ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ಅಲ್ಲದೆ ನನ್ನ ಪತ್ನಿ, ಪುತ್ರ ಹಾಗೂ ನನ್ನ ವ್ಯವಹಾರಗಳನ್ನು ನೋಡಿಕೊಳ್ಳುವ ವಕೀಲರು, ಅವ್ರ ಪತ್ನಿಯ ಫೋನ್ ಕರೆಗಳನ್ನು ಐಟಿ ಅಧಿಕಾರಿಗಳು ಟ್ಯಾಪ್ ಮಾಡುತ್ತಿದ್ದಾರೆ ಎಂದರು.

    ಇಂಧನ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಮಹದೇವಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಬಹಳ ಜನರ ಮೊಬೈಲ್ ಟ್ಯಾಪ್ ಮಾಡಲಾಗ್ತಿದೆ. ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ, ಐಟಿ ಇಲಾಖೆ ಅಥವಾ ಗೃಹ ಇಲಾಖೆ ಫೋನ್ ಟ್ಯಾಪ್ ಮಾಡ್ತಿದೆ ಎಂದರು.

    ಶೀಘ್ರದಲ್ಲೇ ಫೋನ್ ಟ್ಯಾಪಿಂಗ್ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು. ಇನ್ನು ಯಾವ ರೀತಿ ಟ್ಯಾಪ್ ಮಾಡಲಾಗ್ತಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ತೋರಿಸ್ತೇನೆ ಎಂದು ಮಾಧ್ಯಮಗಳಿಗೆ ಸಚಿವ ಪಾಟೀಲ್ ಸ್ಪಷ್ಟಪಡಿಸಿದರು.