Tag: Phone number

  • ಮಹಿಳಾ ಟೆಕ್ಕಿಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ ಒಡೆದ್ರು!

    ಮಹಿಳಾ ಟೆಕ್ಕಿಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ ಒಡೆದ್ರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ ಮಿತಿ ಮೀರುತ್ತಿದ್ದು, ಇದೀಗ ಫೋನ್ ನಂಬರ್ ಕೊಟ್ಟಿಲ್ಲವೆಂದು ಮಹಿಳಾ ಟೆಕ್ಕಿ (Woman Techie) ಯನ್ನು ಮನೆಯವರೆಗೂ ಫಾಲೋ ಮಾಡಿ ಕಾರ್ ಗ್ಲಾಸ್ (Car Glass) ಒಡೆದ ಪ್ರಸಂಗವೊಂದು ನಡೆದಿದೆ.

    ಬೆಂಗಳೂರು (Bengaluru) ಉತ್ತರ ತಾಲೂಕಿನ ಬೃಂದಾವನ ನಗರದಲ್ಲಿ ಈ ಘಟನೆ ನಡೆದಿದೆ. ಡ್ಯೂಟಿ ಮುಗಿಸಿ ಮನೆಗೆ ಬರುತ್ತಿದ್ದಾಗ ಅಡ್ಡಗಟ್ಟಿ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಟೆಕ್ಕಿ ಆರೋಪಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗೆ ಬೆಂಕಿ ಹಚ್ಚಿದ ಪ್ರಕರಣ- ಮನೆಗೆ ಬೀಗ ಜಡಿದು ಯುವತಿ ಮನೆಯವರು ಎಸ್ಕೇಪ್

    ಆರೋಪವೇನು..?: ಎಂದಿನಂತೆ ಡ್ಯೂಟಿ ಮುಗಿಸಿ ಬರುತ್ತಿದ್ದ ವೇಳೆ ಏಕಾಏಕಿ ನುಗ್ಗಿ ಬಂದ ಇಬ್ಬರು, ಟೈಮ್ ಪಾಸ್ ಗಾಗಿ ನಿಮ್ಮ ಪೆÇೀನ್ ನಂಬರ್ ಕೊಡಿ ಮಾತನಾಡಬೇಕೆಂದು ಟಾರ್ಚರ್ ಕೊಟ್ಟಿದ್ದಾರೆ. ಈ ವೇಳೆ ಫೋನ್ ನಂಬರ್ (Phone Number) ಕೊಡಲು ನಿರಾಕರಿಸಿದ್ದೇನೆ. ಅಲ್ಲದೆ ನಿನಗೇಕೆ ನನ್ನ ನಂಬರ್ ಕೊಡಬೇಕು ಎಂದು ಬೈದು ಮನೆಗೆ ತೆರಳಿದ್ದೆ. ಆದರೆ ಕಿಡಿಗೇಡಿಗಳು ಮನೆವರೆಗೂ ಫಾಲೋ ಮಾಡಿಕೊಂಡು ಬಂದು ಕಾರ್ ಗ್ಲಾಸ್ ಒಡೆದು ಪರಾರಿಯಾಗಿದ್ದಾರೆ. ಮೊದಲು ಇಬ್ಬರೂ ತಮ್ಮ ಮುಖವನ್ನು ಮುಚ್ಚಿಕೊಂಡು ಬಂದು ಕಲ್ಲು ತೂರಿ ಪರಾರಿಯಾಗಿದ್ದಾರೆ. ಮತ್ತೆ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಬೈಕ್ ನಲ್ಲಿ ಬಂದು ಬ್ರೀಜಾ ಕಾರಿನ ಮುಂಭಾಗದ ಗ್ಲಾಸ್ ಹೊಡೆದು ಎಸ್ಕೇಪ್ ಆಗಿದ್ದಾರೆ ಎಂದು ದೂರಿದ್ದಾರೆ.

    ಓರ್ವನನ್ನು ಸ್ಥಳೀಯ ನಿವಾಸಿ ವೆಂಕಟೇಶ್ ಎಂದು ಗುರುತಿಸಲಾಗಿದೆ. ಸದ್ಯ ಮಹಿಳಾ ಟೆಕ್ಕಿ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ (Peenya Police Station) ಪ್ರಕರಣ ದಾಖಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ನಟಿ ಅದಾ ಫೋನ್ ನಂಬರ್ ಲೀಕ್ ಮಾಡಿದ ಕಿಡಿಗೇಡಿಗಳು

    ‘ದಿ ಕೇರಳ ಸ್ಟೋರಿ’ ನಟಿ ಅದಾ ಫೋನ್ ನಂಬರ್ ಲೀಕ್ ಮಾಡಿದ ಕಿಡಿಗೇಡಿಗಳು

    ದಿ ಕೇರಳ ಸ್ಟೋರಿ (The Kerala Story) ಸಿನಿಮಾದ ನಾಯಕಿ ಅದಾ ಶರ್ಮಾ ಅವರ ಫೋನ್ ನಂಬರ್ (Phone Number) ಅನ್ನು ಕಿಡಿಗೇಡಿಗಳು ಲೀಕ್ ಮಾಡಿದ್ದಾರೆ. ಅದಾ ಬಳಸುತ್ತಿದ್ದ ಪರ್ಸನಲ್ ನಂಬರ್ ಅನ್ನು ಜಾಲತಾಣದಲ್ಲಿ ಕಿಡಿಕೇಡಿಗಳು ಪೋಸ್ಟ್ ಮಾಡಿದ್ದು, ಅದರಿಂದಾಗಿ ಅವರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರಂತೆ. ಅಪರಿಚಿತರು ನಿರಂತರ ಕರೆ ಮತ್ತು ಮಸೇಜ್ ಗಳನ್ನು ಮಾಡುತ್ತಿದ್ದಾರಂತೆ. ಕೆಲವರಂತೂ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ.

    ಹಲವು ವಾರಗಳಿಂದ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದ ನಟಿ ಸೋನಿಯಾ ಬಾಲಾನಿಗೂ ಈ ಹಿಂದೆ ಕೊಲೆ ಬೆದರಿಕೆ  (Death Threat) ಹಾಕಲಾಗಿತ್ತು. ಅಲ್ಲದೇ ಅದಾ ಶರ್ಮಾಗೂ (Adah Sharma) ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು. ಇದನ್ನೂ ಓದಿ:ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಸೋನಿಯಾ (Sonia Balani) ಮುಸ್ಲಿಂ ಹುಡುಗಿಯಾಗಿ, ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ನಟಿಯಾಗಿ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರ ಹಲವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಕೊಲೆ ಬೆದರಿಕೆಯ ಸಂದೇಶಗಳು ಸೋನಿಯಾಗೆ ಬಂದಿವೆಯಂತೆ. ಹಾಗಾಗಿ ಆ ನಟಿಗೂ ಭದ್ರತೆಯನ್ನು ಒದಗಿಸಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿತ್ತು.

    ನಟಿಯರಿಗೆ ಒಂದು ಕಡೆ ಜೀವ ಬೆದರಿಕೆ ಮಸೇಜ್ ಗಳು ಬರುತ್ತಿದ್ದರೆ, ಮತ್ತೊಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಈ ಸಿನಿಮಾ. ವಿವಾದ, ನಿಷೇಧದ ನಡುವೆಯೂ ಸಿನಿಮಾ 200 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ದೋಚಿದೆ. ಕರ್ನಾಟಕವೂ ಸೇರಿದಂತೆ ದೇಶದ ನಾನಾ ಕಡೆ ಸಿನಿಮಾ ತುಂಬಿದ ಪ್ರದರ್ಶನ ಕಾಣುತ್ತಿದೆ.

  • ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಬಿಜೆಪಿ ಐಟಿ ಸೆಲ್‍ನಿಂದ ಫೋನ್ ನಂಬರ್ ಲೀಕ್, ಅತ್ಯಾಚಾರ, ಕೊಲೆ ಬೆದರಿಕೆ ಕರೆಗಳು ಬರುತ್ತಿವೆ- ಸಿದ್ಧಾರ್ಥ್ ಆಕ್ರೋಶ

    ಚೆನ್ನೈ: ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದು, ನೂರಾರು ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಮಿಳು ನಟ ಸಿದ್ಧಾರ್ಥ್ ಆರೋಪಿಸಿದ್ದಾರೆ. ಈ ಬಗ್ಗೆ ಇದೀಗ ಟ್ವಿಟ್ಟರ್ ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

    ಈ ಕುರಿತು ಟ್ವೀಟ್ ಮಾಡಿರುವ ಸಿದ್ಧಾರ್ಥ್, ನನ್ನ ಫೋನ್ ನಂಬರ್ ನ್ನು ತಮಿಳುನಾಡು ಬಿಜೆಪಿ ಹಾಗೂ ತಮಿಳುನಾಡು ಬಿಜೆಪಿ ಐಟಿ ಸೆಲ್‍ನವರು ಲೀಕ್ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆಯ ಕರೆಗಳು ಬರುತ್ತಿವೆ. ಕಳೆದ 24 ಗಂಟೆಗಳಿಂದ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆರಿಕೆ ಕರೆಗಳು ಬರುತ್ತಿವೆ. ಬಿಜೆಪಿಯ ಲಿಂಕ್ ಹಾಗೂ ಡಿಪಿಗಳೊಂದಿಗೆ ಎಲ್ಲ ನಂಬರ್‍ಗಳನ್ನು ದಾಖಲಿಸಿದ್ದೇನೆ ಹಾಗೂ ಪೊಲೀಸರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸುಮ್ಮನಿರುವುದಿಲ್ಲ, ಪ್ರಯತ್ನಿಸುತ್ತಲೇ ಇರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವೀಟ್‍ನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ತಮಿಳುನಾಡು ಬಿಜೆಪಿಯ ಹಲವು ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಅವುಗಳಲ್ಲಿ ಇದೂ ಒಂದು. ಬಿಜೆಪಿ ಸದಸಯರು ನಿನ್ನೆ ನನ್ನ ಫೋನ್ ನಂಬರ್ ಲೀಕ್ ಮಾಡಿದ್ದಾರೆ. ನನ್ನ ಮೇಲೆ ದಾಳಿ ನಡೆಸಿ, ಕಿರುಕುಳ ನೀಡುವಂತೆ ಜನರಿಗೆ ಹೇಳಿದ್ದಾರೆ.

    ಈ ವ್ಯಕ್ತಿ ಇನ್ನೆಂದೂ ಇನ್ನೆಂದೂ ಬಾಯ್ಬಿಡಬಾರದು ಬರೆದಿದ್ದಾರೆ. ಕೋವಿಡ್‍ನಿಂದ ನಾವು ಬದುಕಬಹುದು, ಇಂತಹ ಜನರಿಂದ ನಾವು ಉಳಿಯಲು ಸಾಧ್ಯವೇ ಎಂದು ಸಿದ್ಧಾರ್ಥ್ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

    ಈ ಕುರಿತು ಇದೀಗ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಟ್ರೆಂಡಿಂಗ್‍ನಲ್ಲಿದೆ. ಕೋವಿಡ್ ನಿರ್ವಹಣೆ ವಿಚಾರವಾಗಿ ಸಿದ್ಧಾರ್ಥ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

  • ಫೋನ್ ನಂಬರ್ ಕೊಡದ ಅಪ್ರಾಪ್ತೆ ಮೇಲೆ ರಾಡ್‍ನಿಂದ ಹಲ್ಲೆ

    ಫೋನ್ ನಂಬರ್ ಕೊಡದ ಅಪ್ರಾಪ್ತೆ ಮೇಲೆ ರಾಡ್‍ನಿಂದ ಹಲ್ಲೆ

    – ದಾರಿ ಮಧ್ಯೆ ಅಡ್ಡಹಾಕಿದ ಆರೋಪಿ
    – ಘಟನೆ ಸಂಬಂಧ ಇಬ್ಬರು ಅರೆಸ್ಟ್

    ಲಕ್ನೋ: ಪೋಷಕರು ಹಾಗೂ ಅವರ ಅಪ್ರಾಪ್ತೆ ಮಗಳ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‍ನ ವಿಜಯನಗರದಲ್ಲಿ ನಡೆದಿದೆ. ಪ್ರಮುಖ ಆರೋಪಿ ಫೋನ್ ನಂಬರ್ ಕೊಡುವಂತೆ ಅಪ್ರಾಪ್ತೆಯ ಬಳಿ ಕೇಳಿದ್ದಾನೆ. ಈ ವೇಳೆ ಆಕೆ ನಂಬರ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ಗೆಳೆಯರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ.

    ಶನಿವಾರ ರಾತ್ರಿ 9.30ರ ಸುಮಾರಿಗೆ 17 ವರ್ಷದ ಹುಡುಗಿ ಸ್ಥಳೀಯ ಅಂಗಡಿಗೆ ತೆರಳಿದ್ದಾಳೆ. ಈ ವೇಳೆ ಆರೋಪಿ ಶರದ್ ಎಂಬಾತ ಆಕೆಯನ್ನು ದಾರಿ ಮಧ್ಯೆ ಅಡ್ಡಹಾಕಿ ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ನಾನು ಆತನಿಗೆ ಫೋನ್ ನಂಬರ್ ಕೊಡಲು ನಿರಾಕರಿಸಿದಾಗ ಆತ ನನ್ನನ್ನು ನಿಂದಿಸಿದ್ದಾನೆ. ಈ ವೇಳೆ ನಾನು ಕಿರುಚಿಕೊಂಡೆ. ಕೂಡಲೇ ನನ್ನ ಪೋಷಕರು ಹಾಗೂ ಸಂಬಂಧಿಕರು ಬಂದು ನನ್ನನ್ನು ಕಾಪಾಡಿದರು. ಇದೇ ವೇಳೆ ಆರೋಪಿ ಶರದ್ ಕೂಡ ಆತನ ಗೆಳೆಯರನ್ನು ಸ್ಥಳಕ್ಕೆ ಕರೆಸಿಕೊಂಡ. ಅಂತೆಯೇ ರೋಹಿತ್, ಪಿಂಕು, ರೀಸವ್ ಹಾಗೂ ಮತ್ತೊಬ್ಬ ಗೆಳೆಯ ಸ್ಥಳಕ್ಕೆ ದೌಡಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದರು. ಇದನ್ನು ವಿರೋಧಿಸಲು ಯತ್ನಿಸಿದಾಗ ಅವರು ನನ್ನ ಹಾಗೂ ನನ್ನ ಹೆತ್ತವರ ಮೇಲೆಯೂ ಹಲ್ಲೆ ಮಾಡಿದರು ಎಂದು ಘಟನೆಯ ಬಗ್ಗೆ ಅಪ್ರಾಪ್ತೆ ವಿವರಿಸಿದ್ದಾಳೆ.

    ಆರೋಪಿಗಳನ್ನು ನಮ್ಮ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ನನಗೆ ಹಾಗೂ ತಂದೆಗೆ ಗಾಯಘಳಾಗಿವೆ ಎಂದು ಕೂಡ ಅಪ್ರಾಪ್ತೆ ಆರೋಪ ಮಾಡಿದ್ದಾಳೆ.

  • ಡೇಟಿಂಗ್ ಆ್ಯಪ್‍ಗೆ 19ರ ಯುವಕನಿಂದ ಆಂಟಿಯ ನಂಬರ್ ಅಪ್ಲೋಡ್

    ಡೇಟಿಂಗ್ ಆ್ಯಪ್‍ಗೆ 19ರ ಯುವಕನಿಂದ ಆಂಟಿಯ ನಂಬರ್ ಅಪ್ಲೋಡ್

    – ಕೇಕ್ ಆರ್ಡರ್ ಕೊಡುವಾಗ ನಂಬರ್ ಕೊಟ್ಟಿದ್ದ ಮಹಿಳೆ

    ಚೆನ್ನೈ: 19 ವರ್ಷದ ಯುವಕನೊಬ್ಬ ಡೇಟಿಂಗ್ ಆ್ಯಪ್‍ಗೆ ಮಹಿಳೆಯೊಬ್ಬರ ಫೋನ್ ನಂಬರನ್ನು ಅಪ್ಲೋಡ್ ಮಾಡಿದ್ದು, ಇದೀಗ ಆತ ಪೊಲೀಸರ ಅತಿಥಿಯಾಗಿದ್ದಾನೆ.

    ಆರೋಪಿ ಯುವಕನನ್ನು ಡಿ.ವೆಂಕಟೇಶ್ ಎಂದು ಗುರುತಿಸಲಾಗಿದೆ. ಡೇಟಿಂಗ್ ಆ್ಯಪ್‍ಗೆ ಫೋನ್ ನಂಬರ್ ಅಪ್ಲೋಡ್ ಮಾಡಿದ ನಂತರ ಮಹಿಳೆ ಅನೇಕ ಫೋನ್ ಕರೆಗಳು ಮತ್ತು ಅಪರಿಚಿತ ನಂಬರ್‌ಗಳಿಂದ ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ನಂತರ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

    ಆರೋಪಿ ಡಿ.ವೆಂಕಟೇಶ್ ತಮಿಳುನಾಡಿನ ವಿಲ್ಲುಪುರಂ ನಿವಾಸಿಯಾಗಿದ್ದು, ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಸೆಪ್ಟೆಂಬರ್ 8 ರಂದು ಮಹಿಳೆ ಕೇಕ್ ಆರ್ಡರ್ ಮಾಡಲು ಬೇಕರಿಗೆ ಹೋಗಿದ್ದರು. ಈ ವೇಳೆ ಮಹಿಳೆ ತನ್ನ ಫೋನ್ ನಂಬರನ್ನು ವೆಂಕಟೇಶ್‍ಗೆ ಕೊಟ್ಟಿದ್ದರು. ನಂಬರ್ ಸಿಕ್ಕಿದ ತಕ್ಷಣ ಯುವಕ ಡೇಟಿಂಗ್ ಆ್ಯಪ್‍ಗೆ ಮಹಿಳೆಯ ಫೋನ್ ನಂಬರನ್ನು ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಡೇಟಿಂಗ್ ಆ್ಯಪ್‍ಗೆ ಫೋನ್ ನಂಬರ್ ಅಪ್ಲೋಡ್ ಮಾಡಿದ ನಂತರ ಮಹಿಳೆಗೆ ಅನೇಕ ಫೋನ್ ಕರೆಗಳು ಬಂದಿದ್ದು, ಅಶ್ಲೀಲವಾಗಿ ಮಾತನಾಡುತ್ತಿದ್ದರು. ಅಲ್ಲದೇ ಅಪರಿಚಿತ ನಂಬರ್‌ಗಳಿಂದ ಅಸಭ್ಯವಾದ ಮೆಸೇಜ್‍ಗಳು ಬರಲು ಪ್ರಾರಂಭಿಸಿದವು. ಕೊನೆಗೆ ಮಹಿಳೆ ಅಂಬತ್ತೂರು ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಶುರು ಮಾಡಿದ್ದರು.

    ತನಿಖೆ ವೇಳೆ ಡೇಟಿಂಗ್ ಅಪ್ಲಿಕೇಶನ್‍ನಲ್ಲಿ ಮಹಿಳೆಯ ಫೋನ್ ನಂಬರ್ ಅಪ್ಲೋಡ್ ಮಾಡಿ ಆಕೆಯ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಲಾಗಿತ್ತು. ಅಲ್ಲದೇ ಆರೋಪಿ ಯುವಕ ತನ್ನ ಸಂಪರ್ಕ ವಿವರಗಳ ಮಾಹಿತಿಯನ್ನು ಡೇಟಿಂಗ್ ಅಪ್ಲಿಕೇಶನ್‍ನಲ್ಲಿ ಹಂಚಿಕೊಂಡಿದ್ದನು. ಇದೀಗ ಪೊಲೀಸರು ಆರೋಪಿ ವೆಂಕಟೇಶ್‍ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಆತನ ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ.

  • ಅಮ್ಮನ ಹೆಸರನ್ನು ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾದ ಅಕ್ಷಯ್ ಪುತ್ರ

    ಅಮ್ಮನ ಹೆಸರನ್ನು ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾದ ಅಕ್ಷಯ್ ಪುತ್ರ

    ಮುಂಬೈ: ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಪುತ್ರ ತನ್ನ ತಾಯಿಯ ಹೆಸರನ್ನು ಫೋನಿನಲ್ಲಿ ವಿಶಿಷ್ಟವಾಗಿ ಸೇವ್ ಮಾಡಿ ಸುದ್ದಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ-ನಟಿಯ ಮಕ್ಕಳು ಏನೇ ಮಾಡಿದರು ಅದು ಸುದ್ದಿಯಾಗುತ್ತದೆ. ಅದೇ ರೀತಿಯಲ್ಲಿ ನಟ ಅಕ್ಷಯ್ ಕುಮಾರ್ ಅವರ ಪುತ್ರ ಆರವ್ ಕುಮಾರ್ ಅವರು ತಮ್ಮ ತಾಯಿ ಟ್ವಿಂಕಲ್ ಖನ್ನಾ ಅವರ ಫೋನ್ ನಂಬರ್ ಅನ್ನು ‘ಪೊಲೀಸ್’ ಎಂದು ಸೇವ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ.

    https://www.instagram.com/p/B7nEa-glbD7/?utm_source=ig_embed

    ಸದಾ ಸಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅಕ್ಷಯ್ ಪತ್ನಿ ಟ್ವಿಂಕಲ್ ಖನ್ನಾ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಫ್ಯಾಮಿಲಿ ವಿಚಾರಗಳು ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನೋರಂಜನೆ ನೀಡುತ್ತಿರುತ್ತಾರೆ. ಈಗ ತಮ್ಮ ಮಗ ತನ್ನ ನಂಬರ್ ಅನ್ನು ಪೊಲೀಸ್ ಎಂದು ಸೇವ್ ಮಾಡಿರುವುದನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.

    ಮಗ ತನ್ನ ನಂಬರ್ ಅನ್ನು ಪೊಲೀಸ್ ಎಂದು ಸೇವ್ ಮಾಡಿರುವ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‍ವೊಂದನ್ನು ಹಾಕಿರುವ ಟ್ವಿಂಕಲ್ ಖನ್ನಾ ಅವರು, ತಾವು ಪೊಲೀಸ್ ವ್ಯಾನ್ ಮುಂದೆ ನಿಂತುಕೊಂಡಿರುವ ಫೋಟೋ ಹಾಕಿ. ನನ್ನ ಮಗ ನನ್ನ ನಂಬರ್ ಅನ್ನು ಅವನ ಫೋನಿನಲ್ಲಿ ಪೊಲೀಸ್ ಎಂದು ಸೇವ್ ಮಾಡಿದ್ದಾನೆ ಎಂದು ಬರೆದುಕೊಂಡಿದ್ದಾರೆ.

  • ಅಂಬಿ ತಮ್ಮ ಪತ್ನಿ ಫೋನ್ ನಂಬರ್ ಸೇವ್ ಮಾಡಿದ್ದು ಹೀಗೆ

    ಅಂಬಿ ತಮ್ಮ ಪತ್ನಿ ಫೋನ್ ನಂಬರ್ ಸೇವ್ ಮಾಡಿದ್ದು ಹೀಗೆ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ತಮ್ಮ ಪತ್ನಿ ಸುಮಲತಾ ಅವರ ಫೋನ್ ನಂಬರನ್ನು ‘ಗಾಡೆಸ್’ (ದೇವತೆ) ಎಂದು ಸೇವ್ ಮಾಡಿಕೊಂಡಿದ್ದರು. ಗಾಡೆಸ್ ಫೋನ್ ಬಂದರೆ ಅಂಬರೀಶ್ ಯಾವುದೇ ಕೆಲಸವಿದ್ದರೂ ತಪ್ಪದೇ ಫೋನ್ ರಿಸೀವ್ ಮಾಡುತ್ತಿದ್ದರು.

    ಅಂಬರೀಶ್ ಅವರು ಕುಟುಂಬದ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದರು. ರಾಜಕೀಯದಲ್ಲೂ ತೊಡಗಿಕೊಂಡಿದ್ದ ಅವರು ಯಾವುದೇ ಕರೆ ಬಂದರು ಅಷ್ಟಾಗಿ ತಲೆಕಡೆಸಿಕೊಳ್ಳುತ್ತಿರಲಿಲ್ಲ. ಆದರೆ ಗಾಡೆಸ್ (ಸುಮಲತಾ) ಫೋನ್ ಬಂದ ತಕ್ಷಣ ಅಂಬಿ ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಅವರ ಫೋನ್ ರಿಸೀವ್ ಮಾಡುತ್ತಿದ್ದರು.

    ಅಂಬಿ ತಮ್ಮ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಸುಮಲತಾ ಅವರು ಅಂಬಿ ಬದುಕಲಿ ದೇವತೆಯಾಗಿ ಬಂದಿದ್ದರು. ಅಂಬಿ ಬಾಳಿಗೆ ಸುಮಲತಾ ಬಂದ ಬಳಿಕ ಜೀವನ ತುಂಬಾ ಸುಧಾರಿಸಿತು ಎಂದು ಹೇಳಲಾಗಿದೆ. ಅಲ್ಲದೇ ಸುಮಲತಾ ಅವರನ್ನು ಮದುವೆಯಾದ ನಂತರ ಅಂಬಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    ಸುಮಲತಾ ಅವರು ಮಲೇಷಿಯಾದಲ್ಲಿ ನಡೆದ 25ನೇ ಮದುವೆ ವಾರ್ಷಿಕೋತ್ಸವ ಸಂದರ್ಭದಲ್ಲಿ ತೆಗೆಸಿದ್ದ ಫೋಟೋವನ್ನ ಮಂಗಳವಾರ ಮಧ್ಯಾಹ್ನ ವೇಳೆಗೆ ತಮ್ಮ ಫೇಸ್‍ಬುಕ್ ಕವರ್ ಫೋಟೋ ಆಗಿ ಅಪ್‍ಡೇಟ್ ಮಾಡಿದ್ದಾರೆ. ಅಲ್ಲದೇ ಅಂತಿಮ ವಿಧಿ ವಿಧಾನ ನಡೆಯುವ ವೇಳೆ ಇರಿಸಿದ್ದ ಫೋಟೋವನ್ನು ಪ್ರೊಫೈಲ್ ಆಗಿ ಫೋಟೋ ಮಾಡಿದ್ದಾರೆ.

    1984 ರಲ್ಲಿ ಬಂದ ಕನ್ನಡ `ಆಹುತಿ’ ಸಿನಿಮಾದಲ್ಲಿ ಅಂಬಿ ಹಾಗೂ ಸುಮಲತಾ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಬಳಿಕ ಸುಮಾರು ಆರೇಳು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿಯ ಸ್ನೇಹ ಪ್ರೀತಿಗೆ ತಿರುಗಿ 1991ರಲ್ಲಿ ಮದುವೆಯಾಗಿದ್ದರು. ಡಿ. 8ರಂದು ಅಂಬಿ- ಸುಮಲತಾ ಅವರ 27ನೇ ಮದ್ವೆ ವಾರ್ಷಿಕೋತ್ಸವವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    13 ಡಿಜಿಟ್‍ಗೆ ಮೊಬೈಲ್ ನಂಬರ್ ಬದಲಾಗಲ್ಲ – ದಯವಿಟ್ಟು ಮೆಸೇಜ್ ಶೇರ್ ಮಾಡೋ ಮುನ್ನ ಈ ಸುದ್ದಿ ಓದಿ

    ನವದೆಹಲಿ: “ಜುಲೈ 1ರಿಂದ 10 ಸಂಖ್ಯೆಯ ಮೊಬೈಲ್ ನಂಬರ್ ಹೊಂದಿರುವ ಗ್ರಾಹಕರು ತಮ್ಮ ಮೊಬೈಲ್ ನಂಬರ್ ಅನ್ನು 13 ಡಿಜಿಟ್ ಗೆ ಬದಲಾಯಿಸಬೇಕು. 13 ಡಿಜಿಟ್ ಮೊಬೈಲ್ ನಂಬರ್ ನೀಡುವಂತೆ ಎಲ್ಲ ಟೆಲಿಕಾಂ ಕಂಪೆನಿಗಳಿಗೆ ದೂರ ಸಂಪರ್ಕ ಸಚಿವಾಲಯ ಇಲಾಖೆ ಆದೇಶ ನೀಡಿದೆ”

    ಈ ಮೇಲಿನ ವಾಕ್ಯಗಳಿರುವ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ, ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದು, ದಯವಿಟ್ಟು ಯಾರು ಈ ಸಂದೇಶವನ್ನು ಶೇರ್ ಮಾಡಬೇಡಿ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರೂ ಗಾಬರಿಯಾಗಿ ಗೊಂದಲಕ್ಕೆ ಬೀಳಬೇಡಿ. ಮೊಬೈಲ್ ಸಂಖ್ಯೆಗಳು ಈಗ ಹೇಗೆ 10 ಸಂಖ್ಯೆಗಳು ಇದೆಯೋ ಅದು ಹಾಗೆಯೇ ಮುಂದುವರಿಯುತ್ತದೆ.

    ಸರಿ ಹಾಗಾದ್ರೆ ಯಾವುದಕ್ಕೆ 13 ನಂಬರ್?
    ದೂರಸಂಪರ್ಕ ಇಲಾಖೆಯ (ಡಿಓಟಿ) ಆದೇಶ ಮೆಷಿನ್ ಟು ಮೆಷಿನ್(ಎಂ2ಎಂ) ಸಿಮ್ ಗಳಿಗೆ ಮಾತ್ರ ಸೀಮಿತವಾಗಿದ್ದು ಪೀರ್ ಟು ಪೀರ್(ಪಿ2ಪಿ) ಸಿಮ್ ಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ. ಸುಳ್ಳು ಸುದ್ದಿ ಪ್ರಕಟವಾಗುತ್ತಿದ್ದಂತೆ ಟೆಲಿಕಾಂ ಕಂಪೆನಿಗಳಾದ ಏರ್‍ಟೆಲ್, ರಿಲಯನ್ಸ್ ಜಿಯೋ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಗ್ರಾಹಕರ ನಂಬರ್ ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದೆ.

    ಏನಿದು ಎಂ2ಎಂ?
    ಸುಲಭವಾಗಿ ಸರಳವಾಗಿ ಹೇಳುವುದಾದರೆ ದೂರದಲ್ಲಿರುವ ಯಂತ್ರಗಳನ್ನು ನಿಮ್ಮ ಮೊಬೈಲ್ ಮೂಲಕವೇ ನಿಯಂತ್ರಿಸಬಹುದಾದ ವ್ಯವಸ್ಥೆ. ವೈರ್‌ಲೆಸ್‌ ಮೂಲಕ ಎರಡು ಸಾಧನಗಳನ್ನು ಪರಸ್ಪರ ಕೆಲಸಕ್ಕಾಗಿ ಜೋಡಿಸುವ ಹೊಸ ಪೀಳಿಗೆಯ ತಂತ್ರಜ್ಞಾನವೇ ಎಂ2ಎಂ. ಕಾರುಗಳು, ವಿದ್ಯುತ್ ಮೀಟರ್, ಸ್ವೈಪಿಂಗ್ ಯಂತ್ರಗಳಿಗೆ ಎಂ2ಎಂ ಸಂಖ್ಯೆಗಳಿರುವ ಸಿಮ್ ಗಳನ್ನು ನೀಡಲಾಗುತ್ತದೆ.

    ಡಿಓಟಿ ಆದೇಶದಲ್ಲಿ ಏನಿದೆ?
    ಪ್ರಸ್ತುತ ಇರುವ 10 ಅಂಕಿಗಳ ಸಂಖ್ಯೆಯಿಂದ 13 ಅಂಕಿಗಳ ಸಂಖ್ಯೆಗೆ ಬದಲಾವಣೆ ಪ್ರಕ್ರಿಯೆ 2018ರ ಅಕ್ಟೋಬರ್ 1ರಿಂದ ಆರಂಭವಾಗಲಿದ್ದು, ಡಿಸೆಂಬರ್ 31ರೊಳಗೆ ಪೂರ್ಣಗೊಳ್ಳಬೇಕಿದೆ. 2018ರ ಜುಲೈ 1ರಿಂದ ವಿತರಣೆಯಾಗಲಿರುವ ಎಲ್ಲ ಹೊಸ ಎಂ2ಎಂ ಸಂಖ್ಯೆಗಳು 13 ಅಂಕಿಗಳದ್ದಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

    ಸುಳ್ಳು ಸುದ್ದಿ ಪ್ರಸಾರ ಆಗಿದ್ದು ಹೇಗೆ?
    ಮೆಷಿನ್ ಟು ಮೆಷಿನ್(ಎಂ2ಎಂ)ಗಳಿಗೆ ಸಂಬಂಧಿಸಿದಂತೆ ಈ ಆದೇಶ ಪ್ರಕಟವಾಗಿದ್ದರೂ ಇದೂ ಪೀರ್ ಟು ಪೀರ್(ಪಿ2ಪಿ) ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ತಪ್ಪಾಗಿ ಅರ್ಥೈಸಿಕೊಂಡು ಸುದ್ದಿ ಪ್ರಕಟಿಸಿದ್ದರಿಂದ ಸುಳ್ಳು ಸುದ್ದಿ ಈಗ ಸೃಷ್ಟಿಯಾಗಿದೆ.

    ಎಂ2ಎಂ ತಂತ್ರಜ್ಞಾನ ಹೇಗೆ ಭಿನ್ನ?
    ಈಗ ನೀವು ನಿಮ್ಮ ಮನೆಯಲ್ಲಿ ಸಿಸಿಕ್ಯಾಮೆರಾ ಹಾಕಿದ್ದೀರಿ ಎಂದು ಭಾವಿಸಿಕೊಳ್ಳಿ. ಕ್ಯಾಮೆರಾ ತನ್ನ ಮುಂದುಗಡೆ ಏನು ನಡೆಯುತ್ತಿರುತ್ತದೋ ಆ ಎಲ್ಲ ದೃಶ್ಯಗಳನ್ನು ಮಾತ್ರ ಸೆರೆಹಿಡಿಯುತ್ತದೆ. ಅಂದರೆ ಸಿಸಿ ಕ್ಯಾಮೆರಾ ನಿಮ್ಮ ಮನೆಗೆ ನುಗ್ಗಿದ ಕಳ್ಳನ ಚಲನವಲನಗಳನ್ನು ಸೆರೆ ಹಿಡಿಯಬಹುದೇ ವಿನಾಃ ಕಳ್ಳತನವನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಎಂ2ಎ ತಂತ್ರಜ್ಞಾನದಲ್ಲಿ ಕಳ್ಳತನವನ್ನು ತಡೆಯಬಹುದು. ಹೌದು. ಎಂ2ಎಂ ಅಪ್ಲಿಕೇಶನ್ ಆಧಾರಿತ ಕ್ಷೇತ್ರದಲ್ಲಿ ಮೊಬೈಲ್ ಫೋನ್‍ ನಲ್ಲಿರುವ ಒಂದು ಬಟನ್ ಕ್ಲಿಕ್ ಮಾಡಿ ದೂರದಲ್ಲಿರುವ ಯಂತ್ರಗಳನ್ನು ನಿಯಂತ್ರಿಸಿ ಕಳ್ಳತನವನ್ನು ತಡೆಯಬಹುದು.

    ವೈರ್‌ಲೆಸ್‌ ಕ್ಯಾಮೆರಾಗಳನ್ನು ಮನೆಯಲ್ಲಿ ನಿಮಗೆ ಎಲ್ಲಿ ಬೇಕೋ ಅಲ್ಲಿ ಅಳವಡಿಸಿದರೆ ಆಯ್ತು. ಈ ಸ್ಮಾರ್ಟ್ ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯವನ್ನು ಮೊಬೈಲ್ ಮೂಲಕವೇ ವೀಕ್ಷಿಸಬಹುದು. ಕ್ಯಾಮೆರಾವನ್ನು ಯಾವ ಕಡೆಗೂ ಬೇಕಾದರೂ ತಿರುಗಿಸಿ ಝೂಮ್ ಮಾಡಬಹುದು. ಯಾರಾದರೂ ಪ್ರವೇಶಿಸಿದ್ದಲ್ಲಿ ಎಂ2ಎಂ ಅಪ್ಲಿಕೇಶನ್ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಲು ಸಾಧ್ಯವಿದೆ. ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಎಂ2ಎಂ ಸಿಮ್ ಯಾರು ಕೊಡ್ತಾರೆ?
    ವಿದೇಶದಲ್ಲಿ ಈ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದ್ದರೂ ಭಾರತದಲ್ಲಿ ಈಗಷ್ಟೇ ಹೆಚ್ಚು ಬಳಕೆಯಾಗುತ್ತಿದೆ. ಸ್ವೈಪಿಂಗ್ ಯಂತ್ರಗಳಲ್ಲಿ ಈ ತಂತ್ರಜ್ಞಾನವೇ ಬಳಕೆ ಆಗುತ್ತಿದೆ. ಬಿಎಸ್‍ಎನ್‍ಎಲ್, ಏರ್‍ಟೆಲ್, ವೊಡಾಫೋನ್, ಆರ್ ಕಾಂ ಕಂಪೆನಿಗಳು ಎಂ2ಎಂ ಸಿಮ್ ನೀಡುತ್ತಿವೆ. ಏರ್‍ಟೆಲ್ ಸ್ಮಾರ್ಟ್ ಮೀಟರ್, ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ ನಂತಹ ಸೌಲಭ್ಯಗಳನ್ನು ನೀಡುತ್ತಿದೆ.  ಇದನ್ನೂ ಓದಿ: ಇನ್ನು ಮುಂದೆ ಡಿಎಲ್, ಆರ್ ಸಿ ಕೇಳಿದ್ರೆ ಮೊಬೈಲ್‍ನಲ್ಲೇ ತೋರಿಸಿ

     

     

     

  • ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ.

    ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಅವರು ತಮ್ಮ ಸ್ನೇಹಿತೆಗೆ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಇಜಜುಲ್ ಮಿಯಾ ಎಂಬವರ ಮೊಬೈಲ್ ನಂಬರ್ ಆಗಿದ್ದು ಈಗ ದಿನಕ್ಕೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದೆ.

    ಚಿತ್ರದಲ್ಲಿ ನನ್ನ ಫೋನ್ ನಂಬರ್ ಬಳಸಿದರಿಂದ ನನ್ನ ಜೀವನ ಹಾಳಾಗಿ ಹೋಗಿದೆ. ಹಲೋ, ಶಕೀಬ್ ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ಜೊತೆ ಎರಡು ನಿಮಿಷ ಮಾತಾಡಬೇಕು ಎಂದು ಹೇಳಿ ಶಕೀಬ್ ಅವರ ಮಹಿಳಾ ಅಭಿಮಾನಿಗಳಿಂದ ನನಗೆ ದಿನಕ್ಕೆ 100 ಕರೆಗಳು ಬರುತ್ತಿದೆ ಎಂದು ಇಜಜುಲ್ ಮಿಯಾ ಹೇಳಿದ್ದಾರೆ.

    ಚಿತ್ರ ಬಿಡುಗಡೆಯಾದ ನಂತರ ಮಹಿಳೆಯರಿಂದ ಕರೆಗಳು ಬರುತ್ತಿರುವುದನ್ನು ಗಮನಿಸಿದ ನನ್ನ ಪತ್ನಿ ನನಗೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನನ್ನನ್ನು ತೊರೆಯಲು ಮುಂದಾಗಿದ್ದಳು ಎಂದು ಅವರು ನೋವನ್ನು ತೋಡಿಕೊಂಡಿದ್ದಾರೆ.

    ಸಮಸ್ಯೆಯಾದರೂ ಹೊಸ ಫೋನ್ ನಂಬರ್ ತೆಗೆದುಕೊಳ್ಳಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ಬಹಳ ವರ್ಷಗಳಿಂದ ಈ ಫೋನ್ ನಂಬರ್ ಬಳಸುತ್ತಿದ್ದು, ಗ್ರಾಹಕರಿಗೆ ಈ ನಂಬರ್ ನೀಡಿದ್ದೇನೆ. ನಂಬರ್ ಬದಲಾಯಿಸಿದರೆ ನನ್ನ ಉದ್ಯೋಗಕ್ಕೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಹೊಸ ನಂಬರ್ ತೆಗೆದುಕೊಳ್ಳಲಿಲ್ಲ ಎಂದು ಮಿಯಾ ಉತ್ತರಿಸಿದ್ದಾರೆ.

    ಹೊಸದಾಗಿ ನಾನು ಮದುವೆಯಾಗಿದ್ದು ಹಾಗೂ ನನಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಈ ಹಿಂದೆ ನಾನು ಶಕೀಬ್ ಎಂದು ತಿಳಿದುಕೊಂಡು ಒಬ್ಬ ಅಭಿಮಾನಿ ನಾನು ಇರುವ ಜಾಗ ತಿಳಿದುಕೊಂಡು 500 ಕಿ.ಮಿ ಫಾಲೋ ಮಾಡಿದ್ದ ಎಂದು ತಿಳಿಸಿದರು.

    ತನಗೆ ಆಗುತ್ತಿರುವ ಮಾನಸಿಕ ಕಿರುಕುಳದಿಂದ ಬೇಸತ್ತು ಹೋಗಿರುವ ಇಜಜುಲ್ ಮಿಯಾ ಅವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಸೂವ್ ಖಾನ್ ವಿರುದ್ಧ ಕೋರ್ಟ್ ಮೊರೆಹೋಗಿದ್ದು, 50 ಲಕ್ಷ ಟಕಾ(ಅಂದಾಜು 39.38 ಲಕ್ಷ ರೂ.) ಪರಿಹಾರ ನೀಡಲು ಆದೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಮಿಯಾ ಪರ ವಕೀಲ ಮಜೀದ್ ಅವರು ಪ್ರತಿಕ್ರಿಯಿಸಿ, ಈ ವಾರ ನಾನು ಕಕ್ಷಿದಾರರ ಪರವಾಗಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾ ನ್ಯಾಯಾಧಿಶರು ಹಿಂದೇಟು ಹಾಕಿದರು. ಆದರೆ ಫೋನ್ ಕರೆಯಿಂದ ಮಿಯಾ ಅವರ ಜೀವನ ಹೇಗೆ ಹಾಳಾಗಿದೆ ಎಂಬುದಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ ಬಳಿಕ ಜಡ್ಜ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.

  • ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ಗಮನಿಸಿ, ಆಧಾರ್ ಲಿಂಕ್ ಮಾಡದಿದ್ರೆ ರದ್ದಾಗುತ್ತೆ ಸಿಮ್ ಕಾರ್ಡ್

    ನವದೆಹಲಿ: ಆಧಾರ್ ಜೊತೆ ನಿಮ್ಮ ಸಿಮ್ ಕಾರ್ಡ್ ಲಿಂಕ್ ಆಗದೇ ಇದ್ದಲ್ಲಿ ನಿಮ್ಮ ಫೋನ್ ನಂಬರ್ ಮುಂದೆ ರದ್ದಾಗಲಿದೆ.

    ಹೌದು. ಆಧಾರ್ ಜತೆ ಸಿಮ್ ಕಾರ್ಡ್‍ಗಳನ್ನು ಲಿಂಕ್ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಒಂದು ವೇಳೆ ಲಿಂಕ್ ಆಗದೇ ಇದ್ದಲ್ಲಿ ಆ ಸಿಮ್ ಕಾರ್ಡ್ ಗಳನ್ನು 2018ರ ಫೆಬ್ರವರಿಯ ನಂತರ ರದ್ದುಗೊಳಿಸಲಾಗುವುದು ಎಂದು ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

    ಲೋಕನೀತಿ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಶನಿವಾರ ನಡೆದ ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಅಪರಾಧಿಗಳು, ಭಯೋತ್ಪಾದಕರು ಸಿಮ್ ಕಾರ್ಡ್‍ಗಳನ್ನು ಬಳಸುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಎಲ್ಲ ಟೆಲಿಕಾಂ ಆಪರೇಟರ್ ಗಳು ಗ್ರಾಹಕರಿಗೆ ಮೊಬೈಲ್, ಇಮೇಲ್ ಅಥವಾ ಜಾಹೀರಾತುಗಳ ಮೂಲಕ ಈ ವಿಚಾರವನ್ನು ತಿಳಿಸಬೇಕು ಎಂದು ಸೂಚಿಸಿದೆ.

    ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಮೊಬೈಲ್ ಆಪರೇಟರ್‍ಗಳು ಸಂಗ್ರಹಿಸುವಂತಿಲ್ಲ. ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿಡುವುದು 2016ರ ಆಧಾರ್ ಕಾಯ್ದೆಯ ಅನ್ವಯ ಶಿಕ್ಷಾರ್ಹವಾಗಿದ್ದು, ಆರೋಪ ಸಾಬೀತಾದರೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!