Tag: Phone Hack

  • ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ಹ್ಯಾಕರ್‌ ಕಾಟ – ವಿಡಿಯೋ ಹಂಚಿಕೊಂಡ ಉಪ್ಪಿ ದಂಪತಿ

    ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ಹ್ಯಾಕರ್‌ ಕಾಟ – ವಿಡಿಯೋ ಹಂಚಿಕೊಂಡ ಉಪ್ಪಿ ದಂಪತಿ

    ತ್ತೀಚೆಗೆ ಮೊಬೈಲ್ ಹ್ಯಾಕರ್‌ಗಳ ಕಾಟ ಹೆಚ್ಚಾಗಿದೆ. ಈ ಬಿಸಿ ಇದೀಗ ಸ್ಯಾಂಡಲ್‌ವುಡ್‌ನ ಬುದ್ಧಿವಂತನಿಗೂ ತಟ್ಟಿದೆ. ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ ಬೆಳ್ಳಂಬೆಳಗ್ಗೆ ವೀಡಿಯೋ ಮೂಲಕ ತಮ್ಮ ಮೊಬೈಲ್ ಹ್ಯಾಕ್ ಆಗಿರುವ ವಿಚಾರ ಬಹಿರಂಗಪಡಿಸಿದ್ದಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ನಮ್ಮಿಬ್ಬರ ಫೋನ್ ಹ್ಯಾಕ್ ಆಗಿದೆ. ಯಾರಾದರೂ ನಮ್ಮ ಹೆಸರಲ್ಲಿ ಹಣ ಕೇಳಿದರೆ ಕೊಡಬೇಡಿ, ಅದಕ್ಕೂ ಮುನ್ನ ಅನೌನ್ಸ್ ಮಾಡ್ತಿದ್ದೇವೆ. ಮುಂದೆ ಪೊಲೀಸರಿಗೆ ದೂರನ್ನೂ ಕೊಡುತ್ತೇವೆ ಎಂದಿದ್ದಾರೆ ದಂಪತಿ.ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್‌ಗೂ `ಕರ್ನಾಟಕ ರತ್ನ’ ನೀಡುವಂತೆ ಮನವಿ

     

    View this post on Instagram

     

    A post shared by Upendra Kumar (@nimmaupendra)

    ಫೋನ್ ಹ್ಯಾಕ್ ಆಗಿದ್ದು ಹೇಗೆ?
    ಆನ್‌ಲೈನ್‌ನಲ್ಲಿ ವಸ್ತುವೊಂದನ್ನ ಪ್ರಿಯಾಂಕಾ ಆರ್ಡರ್ ಮಾಡಿದ್ರಂತೆ, ಬಳಿಕ ಹ್ಯಾಕರ್ ಒಬ್ಬ ಫೋನ್ ಮಾಡಿ ಹ್ಯಾಶ್‌ ಒತ್ತಿ, ಆ ನಂಬರ್, ಈ ನಂಬರ್ ಒತ್ತಿ ಎಂದು ಹೇಳಿ ಕನ್‌ಫ್ಯೂಸ್ ಮಾಡಿದ್ದಾರೆ. ಬಳಿಕ ಉಪ್ಪಿ ಮೊಬೈಲ್‌ನಿಂದಲೂ ಕಾಲ್‌ ಮಾಡಿದಾಗ ಅವರ ಫೋನ್‌ ಕೂಡ ಹ್ಯಾಕ್‌ ಆಗಿದೆ. ಹೀಗಾಗಿ ದೂರು ಕೊಡೋದಕ್ಕೂ ಮುನ್ನವೇ ವೀಡಿಯೋ ಮೂಲಕ ಎಲ್ಲರಿಗೂ ವಿಷಯ ತಲುಪಿಸಿದ್ದಾರೆ ಉಪೇಂದ್ರ ದಂಪತಿ.

  • ವಾಟ್ಸಪ್‌ಗೆ ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

    ವಾಟ್ಸಪ್‌ಗೆ ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

    ವಾಷಿಂಗ್ಟನ್‌: ವಾಟ್ಸಪ್‌ಗೆ (Whatsapp) ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ದರೂ ಇನ್ನು ಮುಂದೆ ನಿಮ್ಮ ಫೋನ್‌ (Phone) ಹ್ಯಾಕ್‌ (Hack) ಆಗಬಹುದು.

    ಹೌದು. ಇಲ್ಲಿಯವರೆಗೆ ವಾಟ್ಸಪ್‌ ಬಂದ ಲಿಂಕ್‌ ಓಪನ್‌ ಮಾಡಿದ್ದರೆ ಆಗ ಫೋನ್‌ಗಳು ಹ್ಯಾಕ್‌ ಆಗುತ್ತಿದ್ದವು. ಆದರೆ ಈಗ ಹ್ಯಾಕರ್‌ಗಳು ಇನ್ನು ಮುಂದೆ ಹೋಗಿದ್ದು ಲಿಂಕ್‌ ಓಪನ್‌ ಮಾಡದೇ ಹ್ಯಾಕ್‌ ಮಾಡಲು ಆರಂಭಿಸಿದ್ದಾರೆ.

    ಸುಮಾರು 12ಕ್ಕೂ ಹೆಚ್ಚು ದೇಶಗಳಲ್ಲಿ 90 ಜನರ ಮೊಬೈಲಿಗೆ ಸ್ಪೈವೇರ್ (Spyware) ಬಳಸಿ ಹ್ಯಾಕ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ (Israel) ಕಂಪನಿಯಾದ ಪ್ಯಾರಾಗಾನ್ ಸೊಲ್ಯೂಷನ್ಸ್ ಒಡೆತನದ ಹ್ಯಾಕಿಂಗ್ ಟೂಲ್‌ ಬಳಸಿ ಹ್ಯಾಕ್‌ ಮಾಡಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ಪ್ಯಾರಾಗಾನ್‌ನ ಸ್ಪೈವೇರ್ ಅನ್ನು  ಸರ್ಕಾರಗಳಿಗೆ ಮಾರಾಟ ಮಾಡಲಾಗುತ್ತದೆ. ಅಪರಾಧಿಗಳ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧ ಪಟ್ಟ ಪ್ರಕರಣಗಳು ಬಂದಾಗ ಸರ್ಕಾರ ಈ ಸ್ಪೈವೇರ್‌ ಬಳಸಿ ಮಾಹಿತಿಗಳನ್ನು ಕಲೆ ಹಾಕುತ್ತವೆ.

    ಈ ಸ್ಪೈವೇರ್‌ ಪೀಡಿತ ಬಳಕೆದಾರರ ಸಾಧನಗಳು ಅಪಾಯಕ್ಕೆ ಸಿಲುಕಿರಬಹುದು ಎಂದು ವಾಟ್ಸಾಪ್ ದೃಢಪಡಿಸಿದೆ. ಸುಮಾರು 90 ಬಳಕೆದಾರರನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಪತ್ತೆಹಚ್ಚಿರುವುದಾಗಿ ವಾಟ್ಸಾಪ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಿರ್ದಿಷ್ಟವಾಗಿ ಯಾರನ್ನು ಗುರಿಯಾಗಿಸಿ ಈ ಸ್ಪೈವೇರ್‌ ಬಿಡಲಾಗಿದೆ ಎಂದು ಹೇಳಲು ವಾಟ್ಸಪ್‌ ಅಧಿಕಾರಿಗಳು ನಿರಾಕರಿಸಿದ್ದಾರೆ. ಯುರೋಪಿನ ಹಲವಾರು ಜನ ಸೇರಿದಂತೆ 12 ಹೆಚ್ಚು ದೇಶಗಳ ಜನರನ್ನು ಗುರಿಯಾಗಿ ಈ ಸೈಬರ್‌ ದಾಳಿ ನಡೆದಿದೆ.