Tag: Phone Call

  • Chitradurga | ಪೋಷಕರಿಗೆ ಕರೆ ಮಾಡಿ ಮಾತನಾಡಿದ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ – ವೀಡಿಯೋ ವೈರಲ್

    Chitradurga | ಪೋಷಕರಿಗೆ ಕರೆ ಮಾಡಿ ಮಾತನಾಡಿದ ವಿದ್ಯಾರ್ಥಿಗೆ ಮುಖ್ಯ ಶಿಕ್ಷಕನಿಂದ ಹಲ್ಲೆ – ವೀಡಿಯೋ ವೈರಲ್

    ಚಿತ್ರದುರ್ಗ: ತಮ್ಮ ಮಕ್ಕಳು ಸುಸಂಸ್ಕೃತರಾಗಲಿ ಅಂತ ಪೋಷಕರು, ಸಂಸ್ಕೃತ ಹಾಗೂ ವೇದಾಧ್ಯಯನ ಮಾಡಿಸುತ್ತಾರೆ. ಆದರೆ ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್‌ನಿಂದ ಕರೆ (Phone Call) ಮಾಡಿದಕ್ಕೆ ಆಕ್ರೋಶಗೊಂಡ ಮುಖ್ಯ ಶಿಕ್ಷಕ (Head Master) ಮನಸೋಇಚ್ಛೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿರುವ ಪ್ರಕರಣ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

    ಈ ಗ್ರಾಮದಲ್ಲಿರುವ ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ವೇದಾಧ್ಯಯನ ಶಾಲೆಯಲ್ಲಿ ವಿವಿದೆಡೆಯ ಹಲವು ವಿದ್ಯಾರ್ಥಿಗಳು ವೇದಾಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಮೇಲೆ ವೀರೇಶ್ ಹಿರೇಮಠ್ ಎಂಬ ಮುಖ್ಯ ಶಿಕ್ಷಕ ಮನಸೋಇಚ್ಛೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ. ಇದನ್ನೂ ಓದಿ: ಪತಿಯಿಂದಲೇ ವೈದ್ಯೆ ಹತ್ಯೆ ಕೇಸ್‌ – ಯುವತಿಯರ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಕೊಲೆ!

    ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಅ.25ರವರೆಗೆ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ – ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ

    ಇದರ ಬೆನ್ನಲ್ಲೇ ಶಿಕ್ಷಕ ವಿರೇಶ್ ನಾಪಾತ್ತೆಯಾಗಿದ್ದಾನೆ. ಈ ರೀತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆದ ಹಿನ್ನೆಲೆ ಸಾರ್ವಜನಿಕ ವಲಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದೆ. ಈ ಪ್ರಕರಣ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ – ಮನೆ, ಜಮೀನುಗಳಿಗೆ ನುಗ್ಗಿದ ನೀರು

  • ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲರಿಗೆ ಅಪರಿಚಿತ ವ್ಯಕ್ತಿ ಕರೆ – ಎಫ್‌ಐಆರ್‌ ದಾಖಲು

    ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲರಿಗೆ ಅಪರಿಚಿತ ವ್ಯಕ್ತಿ ಕರೆ – ಎಫ್‌ಐಆರ್‌ ದಾಖಲು

    ಬೆಂಗಳೂರು: ಅಪರಿಚಿತನೊಬ್ಬ ಕೇಂದ್ರ ಸಚಿವರ ಹೆಸರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ (Thawar Chand Gehlot) ಅವರಿಗೆ ಕರೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.

    ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅಂತಾ ಹೇಳಿ ಭಾನುವಾರ ಮಧ್ಯಾಹ್ನ 2 ಬಾರಿ ಕರೆ ಮಾಡಿದ್ದಾನೆ. ಮೊದಲ ಬಾರಿಗೆ ಮಾಡಿದಾಗ ಪರಸ್ಪರ ಆರೋಗ್ಯ ವಿಚಾರಿಸಿದ್ದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದವ್ರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಶಿವಾನಂದ ಪಾಟೀಲ್

    ನಂತರ ಅರ್ಧ ಗಂಟೆ ನಂತರ ಮತ್ತೆ ಕರೆ ಮಾಡಿದ ವ್ಯಕ್ತಿ ಅದೇ ರೀತಿ ಮಾತಾಡೋಕೆ ಶುರು ಮಾಡಿದ್ದ. ಈ ವೇಳೆ ಅನುಮಾನಗೊಂಡ ರಾಜ್ಯಪಾಲರು, ಆತನ ಹಿನ್ನೆಲೆ ಬಗ್ಗೆ ಪ್ರಶ್ನೆ ಮಾಡಿದ್ರು. ಆಗ ಏಕಾಏಕಿ ಕಾಲ್ ಕಟ್ ಮಾಡಲಾಗಿದೆ. ಇದನ್ನೂ ಓದಿ: ಗಣೇಶೋತ್ಸವ ಕಲ್ಲು ತೂರಾಟ ಪ್ರಕರಣ; ಪೊಲೀಸ್ ಇಲಾಖೆ ಸಂಪೂರ್ಣ ವಿಫಲ: ವಿಜಯೇಂದ್ರ

    ಈ ಬಗ್ಗೆ ಪರಿಶೀಲನೆ ಮಾಡಿದಾಗ ವೇಳೆ ಆತ ಕೇಂದ್ರ ಸಚಿವ ಅಲ್ಲ ನಕಲಿ ವ್ಯಕ್ತಿ ಅನ್ನೊದು ಗೊತ್ತಾಗಿದೆ. ಆತ ಯಾರು? ಯಾವ ಕಾರಣಕ್ಕೆ ಕರೆ ಮಾಡಿದ್ದ ಅನ್ನೋದು ಪೊಲೀಸ್‌ ತನಿಖೆಯ ಬಳಿಕವಷ್ಟೇ ತಿಳಿಯಬೇಕಿದೆ. ಸದ್ಯ ಈ ಸಂಬಂಧ ಕೇಂದ್ರ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

  • ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

    ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಆಡಿಯೋ ವೈರಲ್

    ಮಡಿಕೇರಿ: ಕೊಡಗಿನಲ್ಲಿ (Kodagu) ಹಿಂದಿನಿಂದಲೂ ಒಬ್ಬರಲ್ಲಾ ಒಬ್ಬ ಉಗ್ರರು ಬಂದು ನೆಲೆಕಂಡುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅಬ್ದುಲ್ ಮದನಿ ಕೂಡ ಕೊಡಗಿನ ಹೊಸತೋಟಕ್ಕೆ ಬಂದು ತಂಗಿದ್ದು ಹೊಸ ವಿಚಾರವೇನು ಅಲ್ಲ. ಆದರೆ ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ (Audio) ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.

    ದೇಶದಲ್ಲಿ ಅಪಾಯಕಾರಿ ಬೆಳವಣಿಗೆಗಳು, ದೇಶ ವಿದ್ರೋಹಿ ಚಟುವಟಿಕೆಗಳು ನಡೆಯಲು ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ (PFI) ಸಂಘಟನೆಯನ್ನು ಇತ್ತೀಚೆಗಷ್ಟೇ ನಿಷೇಧ ಮಾಡಲಾಗಿದೆ. ಆದರೆ ಕಳೆದ ಆರು ತಿಂಗಳ ಹಿಂದೆ ಅಂದರೆ ಏಪ್ರಿಲ್ 25 ರಂದು ಮಡಿಕೇರಿ ನಗರ ಸಭೆ ಸದಸ್ಯ ಜೆಡಿಎಸ್‍ನ ಮುಸ್ತಫಾ ಎಂಬುವರು ಆತನ ಸ್ನೇಹಿತ ಬೆಟ್ಟಗೇರಿಯ ಅಬ್ದುಲ್ಲಾ ಎಂಬುವರೊಂದಿಗೆ ಮಡಿಕೇರಿ ನಗರಕ್ಕೆ ಬಾಂಬ್ ಹಾಕಬೇಕು. ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು. ನಮ್ಮವರು ಒಂದಷ್ಟು ಜನರು ಸತ್ತರೂ ಪರವಾಗಿಲ್ಲ ಎಂದು ಮಾತನಾಡಿರುವ ಆಡಿಯೋ ಲೀಕ್ ಆಗಿದ್ದು, ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ. 50ಕ್ಕೂ ಹೆಚ್ಚು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಮಲೆಯಾಳಂ ಭಾಷೆಯಲ್ಲಿ ಮಾತನಾಡಿರುವ ಆಡಿಯೋ ಹರಿದಾಡುತ್ತಿದೆ. ಇದನ್ನೂ ಓದಿ: RSS ಬಗ್ಗೆ ಹೊಟ್ಟೆ ಕಿಚ್ಚಿದ್ದವರಿಗೆ ಮದ್ದಿಲ್ಲ: ಪ್ರಮೋದ್ ಮಧ್ವರಾಜ್

    50 ಜನರ ತಂಡ ಕಟ್ಟಿ ತರಬೇತಿ ಮಾಡಬೇಕು. ಇದಕ್ಕೆ ಎಲ್ಲರೂ 50 ಸಾವಿರ ಒಂದು ಲಕ್ಷ ಹಾಕಬೇಕು. ಅದನ್ನು ಬಳಸಿಕೊಂಡು ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಿಬಿಡೋದು. ಆ…. ನನ್ನ ಮಕ್ಕಳಿಗೆ ಬುದ್ದಿ ಕಲಿಸಬೇಕು. ಇಡೀ ಮಡಿಕೇರಿ ಟೌನ್ ಹೊತ್ತಿ ಉರಿಯಬೇಕು. ಮಡಿಕೇರಿ ಮಾತ್ರ ಅಲ್ಲ ಎಲ್ಲಾ ಕಡೆ ಹಾಕಬೇಕು. ಅಲ್ಲ ಅಲ್ಲ.. ಇಡೀ ಮಡಿಕೇರಿ ಹೊತ್ತಿ ಉರಿಯಬೇಕು. ಅವರೂ ಸಾಯಲಿ, ನಾವು ಸಾಯೋಣ. ಒಟ್ನಲ್ಲಿ ಅವರಿಗೆ ಭಯ ಹುಟ್ಟಬೇಕು. 50 ಜಾಗದಲ್ಲಿ ಬಾಂಬ್ ಹಾಕಬೇಕು. ಆಗ ಅವರ ಪಾರ್ಟಿ ಲೈಫ್ ಲಾಂಗ್ ಇರಲ್ಲ. ಬಿಜೆಪಿಯವರು ನಿಲ್ಲೋದಕ್ಕೂ ಹೆದರಬೇಕು. ಈ ಬಾರಿ ರಾಜ್ಯದಲ್ಲಿ ಬಿಜೆಪಿ (BJP) ಸೋಲುತ್ತದೆ. ಆಗ ಇವರಿಗೆ ಗೊತ್ತಾಗುತ್ತದೆ. ಡಿಕೆ ಶಿವಕುಮಾರ್ (D.K Shivakumar)  ಮೈಂಡ್ ಹಿಂದುತ್ವದ್ದು, ಸಿದ್ದರಾಮಯ್ಯ (Siddaramaiah) ಮೈಂಡ್ ಜಾತ್ಯಾತೀತ ಮೈಂಡ್. ಎರಡೂ ಒಂದೇ ಆಗಲು ಸಾಧ್ಯವಿಲ್ಲ ಎಂದು ಪರಸ್ಪರ ಮಾತನಾಡಿರುವ ಆಡಿಯೋ ಫೋನ್‍ನಲ್ಲಿ ರೆಕಾರ್ಡ್ ಆಗಿದೆ. ಇದನ್ನೂ ಓದಿ: ಆನ್‌ಲೈನ್ ಶಿಕ್ಷಣವೇ ವಿದ್ಯಾರ್ಥಿಗಳಿಗೆ ಶಿಕ್ಷೆ – ನ್ಯಾ. ಮಲ್ಲಿಕಾರ್ಜುನ ಗೌಡ

     

    ಮಡಿಕೇರಿ ನಗರದ ನಿವಾಸಿ ಶೇಷಪ್ಪ ರೈ ಎಂಬವರು ಮುಸ್ತಫಾ ಅವರಿಗೆ ಯಾವುದೋ ವ್ಯವಹಾರದ ವಿಷಯ ಮಾತನಾಡುವುದಕ್ಕೆ ಕರೆ ಮಾಡಿದ್ದಾರೆ. ಈ ವೇಳೆ ಮುಸ್ತಫಾ, ಶೇಷಪ್ಪ ರೈ ಅವರ ಫೋನ್ ಕಟ್ ಮಾಡುವ ಬದಲು, ಮಿಸ್ ಆಗಿ ರಿಸೀವ್ ಮಾಡಿ ಫೋನ್ ಅನ್ನು ತನ್ನ ಜೇಬಿನಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ವಿಷಯವನ್ನು ತನ್ನ ಸ್ನೇಹಿತ ಅಬ್ದುಲ್ಲಾ ಎಂಬುವವನೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಈ ಎಲ್ಲಾ ವಿಷಯ ಮುಸ್ತಫಾಗೆ ಕರೆ ಮಾಡಿದ್ದ ಶೇಷಪ್ಪ ರೈ ಅವರ ಫೋನ್‌ನಲ್ಲಿ ಕಾಲ್ ರೆಕಾರ್ಡ್ ಆಗಿದೆ. ಇತ್ತೀಚೆಗೆ ಕಾಲ್ ರೆಕಾರ್ಡ್‍ಗಳನ್ನು ಪರಿಶೀಲನೆ ನಡೆಸುವಾಗ ಇದು ಬೆಳಕಿಗೆ ಬಂದಿದ್ದು ಶೇಷಪ್ಪ ರೈ ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಶೇಷಪ್ಪ ರೈ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರದ ಪೊಲೀಸರು ಮಡಿಕೇರಿ ನಗರಸಭೆ ಸದಸ್ಯ ಮುಸ್ತಫಾ, ಬೆಟ್ಟಗೇರಿ ಅಬ್ದುಲ್ಲಾ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೇಣುಕಾಚಾರ್ಯಗೆ ಕೊಲೆ ಬೆದರಿಕೆ – ಸಿಟಿ ರವಿ, ಯತ್ನಾಳ್‍ರನ್ನು ಬಿಡಲ್ಲ

    ರೇಣುಕಾಚಾರ್ಯಗೆ ಕೊಲೆ ಬೆದರಿಕೆ – ಸಿಟಿ ರವಿ, ಯತ್ನಾಳ್‍ರನ್ನು ಬಿಡಲ್ಲ

    ಬೆಂಗಳೂರು: ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಅಪರಿಚಿತ ವ್ಯಕ್ತಿಯೊಬ್ಬ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

    ಇಂದು ಬೆಳಗ್ಗೆಯಿಂದ ಅಪರಿಚಿತ ನಂಬರ್‌ನಿಂದ ಪದೇ ಪದೇ ಕರೆ ಬರ್ತಿತ್ತು. ಸಂಜೆ ವೇಳೆಗೆ ಕಾಲ್ ರಿಸಿವ್ ಮಾಡಿದ ಶಾಸಕ ರೇಣುಕಾಚಾರ್ಯಗೆ ವ್ಯಕ್ತಿಯು ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದ್ದಾನೆ. ನಾಲ್ಕೈದು ದಿನಗಳಲ್ಲಿ ನಿನ್ನ ಮತ್ತು ನಿನ್ನ ಮಗನನ್ನು ಕೊಲೆ ಮಾಡುತ್ತೇವೆ ಅಂತಾ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಆನ್‍ಲೈನ್ ಗೇಮ್ ನಿಷೇಧ ರದ್ದು: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ

    ಹಿಜಾಬ್, ಮುಸ್ಲಿಂ ವ್ಯಾಪಾರಿಗಳ ನಿಷೇಧ, ಹಲಾಲ್ ಕಟ್ ವಿಚಾರವಾಗಿ ಮುಸ್ಲಿಂ ಸಮುದಾಯದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದೀರಿ. ಇಷ್ಟು ದಿನ ಇಲ್ಲದ ಈ ವಿಚಾರಗಳು ನೀವು ಬಂದ ಮೇಲೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಬಿಜೆಪಿ ನಾಯಕರ ಕಥೆ ಏನಾಗಲಿದೆ ನೋಡ್ತಿರಿ ಎಂದಿದ್ದಾನೆ.  ಇದನ್ನೂ ಓದಿ: ಆರ್.ಎನ್ ನಾಯಕ ಕೊಲೆ ಕೇಸ್ – ಭೂಗತಪಾತಕಿ ಬನ್ನಂಜೆ ರಾಜಾ ಸೇರಿ 9 ಆರೋಪಿಗಳು ದೋಷಿ

    ನೀನ್ನೊಬ್ಬನನ್ನೇ ಅಲ್ಲ ಸಿ ಟಿ ರವಿ, ಯತ್ನಾಳ್ ಅವರನ್ನು ಸಹ ಬಿಡಲ್ಲ ಅಂತ ಬಿಜೆಪಿ ನಾಯಕರನ್ನು ಅವಾಚ್ಯ ಪದಗಳಿಂದ ಬೈದಿದ್ದಾನೆ. ಸದ್ಯ ಈ ಸಂಬಂಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರ ಪ್ರಾಥಮಿಕ ಮಾಹಿತಿಯಲ್ಲಿ ಇಂಟರ್ನೆಟ್ ಕಾಲ್ ಬಳಸಿ ಮಾತಾಡಿರುವುದು ತಿಳಿದಿದೆ.

  • ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಜಾಹೀರಾತಿನಲ್ಲಿ ಸಹಾಯವಾಣಿ ನಂಬರ್ ತಪ್ಪಾಗಿದ್ದಕ್ಕೆ ಮಹಿಳೆಗೆ ಎಡಬಿಡದೇ ಬಂತು 4,500 ಫೋನ್‌ ಕಾಲ್‌!

    ಡಬ್ಲಿನ್: ಉತ್ತರ ಐರ್ಲೆಂಡ್ (ಎನ್‌ಐ) ಸರ್ಕಾರಿ ಅಧಿಕಾರಿಗಳ ಯಡವಟ್ಟಿನಿಂದಾಗಿ ಮಹಿಳೆಯೊಬ್ಬರಿಗೆ ಎಡಬಿಡದೇ 4,500 ಕರೆಗಳು ಬಂದಿರುವ ಘಟನೆ ನಡೆದಿದೆ.

    ಸರ್ಕಾರಿ ಯೋಜನೆಯೊಂದರ ಪ್ರಚಾರಕ್ಕಾಗಿ ಜಾಹೀರಾತು ನೀಡಲಾಗಿತ್ತು. ಮಾಹಿತಿಗೆ ಸಹಾಯವಾಣಿ ನಂಬರ್ ಹಾಕುವಾಗ ಒಂದು ಸಂಖ್ಯೆ ತಪ್ಪಾಗಿದೆ. ಪರಿಣಾಮವಾಗಿ ಮಹಿಳೆಯೊಬ್ಬರ ಫೋನ್‌ಗೆ 4,500 ಕ್ಕೂ ಹೆಚ್ಚು ಕರೆಗಳು ಬಂದಿದ್ದು, ದಿಗ್ಭ್ರಮೆಗೊಳಗಾಗಿದ್ದಾರೆ. ಬಿಡುವಿಲ್ಲದೇ ಬಂದ ಕರೆಗಳು ಮಹಿಳೆಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಅಖಿಲೇಶ್ ಯಾದವ್‍ಗೆ ಕೊರೊನಾ ನೆಗೆಟಿವ್ – ಪತ್ನಿ, ಮಗಳಿಗೆ ಪಾಸಿಟಿವ್

    ಕೋವಿಡ್ ನಂತರ ಆರ್ಥಿಕ ಚೇತರಿಕೆ ಉದ್ದೇಶದಿಂದಾಗಿ ಸ್ಪೆಂಡ್ ಲೋಕಲ್ ಕಾರ್ಡ್ ಯೋಜನೆಯನ್ನು ಎನ್‌ಐ ರೂಪಿಸಿತ್ತು. ಸಣ್ಣಪುಟ್ಟ ವ್ಯಾಪಾರಗಳಿಗೆ ಹಣ ವಿನಿಯೋಗಿಸಲು ಅರ್ಹರಿಗೆ ಸ್ಪೆಂಡ್ ಲೋಕಲ್ ಪ್ರೀಪೇಯ್ಡ್ ಕಾರ್ಡ್ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಸದುಪಯೋಗಪಡಿಸಿಕೊಳ್ಳಲೆಂದು ಜಾಹೀರಾತು ನೀಡಿ ಸಹಾಯವಾಣಿ ನಂಬರ್ ಹಾಕಲಾಗಿತ್ತು. ಸಹಾಯವಾಣಿಯ ಒಂದು ಸಂಖ್ಯೆ ತಪ್ಪಾಗಿ ಮಹಿಳೆಯ ನಂಬರ್ ನಮೂದಾಗಿದೆ. ಸಹಾಯವಾಣಿ ಎಂದು ತಿಳಿದ ಸಾವಿರಾರು ಜನರು ಆ ನಂಬರ್‌ಗೆ ಕರೆ ಮಾಡಿದ್ದಾರೆ.

    ನಿರಂತರವಾಗಿ ಬಂದ ಕರೆಗಳಿಂದ ಮಹಿಳೆ ಆತಂಕಕ್ಕೆ ಒಳಗಾಗಿದ್ದಾರೆ. ಏನು ನಡಿಯುತ್ತಿದೆ ಎಂಬುದು ತಿಳಿಯದೇ ಮಹಿಳೆ, ಕೊನೆಗೆ ಕರೆ ಮಾಡಿದ ವ್ಯಕ್ತಿಯೊಬ್ಬರಲ್ಲಿ ವಿಚಾರಿಸಿದ್ದಾರೆ. ಆ ವ್ಯಕ್ತಿ ತಮಗೆ ಬಂದಿರುವ ಮೇಲ್ ಅನ್ನು ಮಹಿಳೆಗೆ ಫಾರ್‌ವರ್ಡ್ ಮಾಡಿದಾಗ ವಿಷಯ ಗೊತ್ತಾಗಿದೆ. ಇದನ್ನೂ ಓದಿ: ಓಮಿಕ್ರಾನ್‌ ಬಗ್ಗೆ ಸಿಕ್ತು ಗುಡ್‌ ನ್ಯೂಸ್‌ – ಪ್ರಾಥಮಿಕ ಅಧ್ಯಯನ ವರದಿಗಳು ಬಹಿರಂಗ

    ಅಧಿಕಾರಿಗಳ ಮಾಡಿದ ಯಡವಟ್ಟಿನಿಂದಾಗಿ ಮಹಿಳೆಗೆ ಕಿರಿಕಿರಿ ಎನಿಸಿದೆ. ಸಾಕಷ್ಟು ಕರೆಗಳನ್ನು ಸ್ವೀಕರಿಸಿದ ಮಹಿಳೆಗೆ ನಂತರದಲ್ಲಿ ಸ್ಪೆಂಡ್ ಲೋಕಲ್ ಸ್ಕೀಮ್‌ನ ನಂಬರ್ ಹಾಗೂ ತನ್ನ ಫೋನ್ ನಂಬರ್‌ನಲ್ಲಿ ಕೇವಲ ಒಂದು ಅಂಕಿ ಮಾತ್ರ ವ್ಯತ್ಯಾಸವಿರುವುದು ಗೊತ್ತಾಗಿದೆ.

    ತಾವು ಮಾಡಿದ ಪ್ರಮಾದಕ್ಕಾಗಿ ಅಧಿಕಾರಿಗಳು ಮಹಿಳೆ ಬಳಿ ಕ್ಷಮೆಯಾಚಿಸಿದ್ದಾರೆ.

  • ರಾಜೀನಾಮೆಗೆ ಮುಂದಾಗಿರೋ ಆನಂದ್ ಸಿಂಗ್ ಸಿಎಂ ಕರೆಗೂ ಡೋಂಟ್ ಕೇರ್!

    ರಾಜೀನಾಮೆಗೆ ಮುಂದಾಗಿರೋ ಆನಂದ್ ಸಿಂಗ್ ಸಿಎಂ ಕರೆಗೂ ಡೋಂಟ್ ಕೇರ್!

    ಬೆಂಗಳೂರು: ರಾಜೀನಾಮೆ ನೀಡಲು ಮುಂದಾಗಿರುವ ಸಚಿವ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರೆಗೂ ಡೋಂಟ್ ಕೇರ್ ಅಂದಿದ್ದಾರೆ.

    ಹೌದು. ಖಾತೆ ಕ್ಯಾತೆ ಸಂಬಂಧ ಬೊಮ್ಮಾಯಿ ಕರೆ ಮಾಡಿದ್ರೂ ಆನಂದ್ ಸಿಂಗ್ ಮಾತ್ರ ಫೋನ್ ಸ್ವೀಕರಿಸುತ್ತಿಲ್ಲ. ಈ ಮೂಲಕ ಸಚಿವರು ಸಿಎಂ ಅವರ ಸಂಪರ್ಕಕ್ಕೆ ಸಿಗುತ್ತಿಲ್ಲ. ಖಾತೆ ಬದಲಾಯಿಸದ ಹಿನ್ನೆಲೆಯಲ್ಲಿ ಸಚಿವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಿಎಂ ಬೊಮ್ಮಾಯಿ ಮೇಲೆ ಮುನಿಸಿಕೊಂಡಿರುವ ಆನಂದ್ ಸಿಂಗ್ ಅವರ ಕುಟುಂಬಸ್ಥರ ಮೊಬೈಲ್‍ಗೆ ಕರೆ ಮಾಡಿದ್ರೂ ಸ್ವೀಕರಿಸಿದೆ ತಮ್ಮ ಸಿಟ್ಟು ಹೊರಹಾಕುತ್ತಿದ್ದಾರೆ. ಇದನ್ನೂ ಓದಿ: ಕಚೇರಿಯ ಬೋರ್ಡ್ ತೆರವು – ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಆನಂದ್ ಸಿಂಗ್?

    ಒಟ್ಟಿನಲ್ಲಿ ಬಿಜೆಪಿ ಸರ್ಕಾರದಲ್ಲಿ ಖಾತೆ ಕ್ಯಾತೆ ಭುಗಿಲೆದ್ದಿದ್ದು, ಪ್ರಬಲ ಖಾತೆಗೆ ಸಚಿವ ಆನಂದ್ ಸಿಂಗ್ ಪಟ್ಟುಹಿಡಿದಿದ್ದಾರೆ. ತಾನು ಬಯಸಿದ ಖಾತೆ ಸಿಕ್ಕಿಲ್ಲವೆಂದು ಸಚಿವರು ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಹೊಸಪೇಟೆಯಲ್ಲಿರುವ ಶಾಸಕರ ಕಚೇರಿ ಬೋರ್ಡ್ ತೆರವುಗೊಳಿಸಿದ್ದಾರೆ. ಕ್ರೇನ್ ಬಳಸಿ ಕಚೇರಿಯ ಬೋರ್ಡ್ ತೆಗೆಸಿದ ಆನಂದ್ ಸಿಂಗ್, ಸಂಪೂರ್ಣ ಕಚೇರಿ ಬಂದ್ ಮಾಡಲು ಮುಂದಾಗಿದ್ದಾರೆ. ಕಳೆದ 14 ವರ್ಷಗಳಿಂದ ಅಚಿವರು ಈ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

    ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರು ಇಂಧನ ಅಥವಾ ಲೋಕೋಪಯೋಗಿ ಅಥವಾ ಗಣಿ ಇಲಾಖೆ ಬಯಸಿದ್ದರು. ಆದರೆ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದ್ದು, ಇದೇ ವಿಚಾರಕ್ಕೆ ಆನಂದ್ ಸಿಂಗ್ ಅವರು ಸಿಟ್ಟಾಗಿದ್ದು, ರಾಜೀನಾಮೆ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

  • ಸಂಸದ ಹೆಗಡೆಗೆ ಜೀವಬೆದರಿಕೆ ಕರೆ – ದೂರು ದಾಖಲು

    ಸಂಸದ ಹೆಗಡೆಗೆ ಜೀವಬೆದರಿಕೆ ಕರೆ – ದೂರು ದಾಖಲು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಇಂದು ವರದಿಯಾಗಿದೆ.

    ಇಂದು ಮುಂಜಾನೆ ಉರ್ದು ಮಿಶ್ರಿತ ಭಾಷೆಯಲ್ಲಿ ಕರೆ ಮಾಡಿ ಮಾತನಾಡಿದ ಅನಾಮಧೇಯ ವ್ಯಕ್ತಿಯೊಬ್ಬ, ಹಿಂದಿನ ಬಾರಿ ಕರೆ ಮಾಡಿದಾಗ ದೂರು ನೀಡಿದ್ದೀಯ, ಪತ್ರಿಕೆಯಲ್ಲೂ ಸುದ್ದಿಯಾಗಿತ್ತು. ನಿನ್ನನ್ನು ಏನು ಮಾಡುತ್ತೇನೆ ನೋಡು, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಕರೆ ಕಟ್ ಮಾಡಿದ್ದಾನೆ ಎಂದು ಅನಂತಕುಮಾರ್ ಹೆಗಡೆಯವರ ಆಪ್ತ ಕಾರ್ಯದರ್ಶಿಯವರು ದೂರಿನಲ್ಲಿ ತಿಳಿಸಿದ್ದಾರೆ.

    2019ರ ಫೆಬ್ರವರಿ 2 ಮತ್ತು 2019ರ ಏಪ್ರಿಲ್ 20 ರಂದು ಇದೇ ಮಾದರಿಯಲ್ಲಿ ಎರಡುಬಾರಿ ಕರೆ ಮಾಡಿ ಅನಂತಕುಮಾರ್ ಹೆಗಡೆಯವರಿಗೆ ಜೀವ ಬೆದರಿಕೆ ಹಾಕಲಾಗಿತ್ತು. ಅನಾಮಧೇಯ ಕರೆ ಹಿನ್ನೆಲೆ ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೆಟ್ಟಿ ಅವರಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಹತ್ರಾಸ್ ಸಂತ್ರಸ್ತೆ, ಆರೋಪಿ ಮಧ್ಯೆ ಇತ್ತು ನಿರಂತರ ಸಂಪರ್ಕ – 104 ಕರೆಯ ರಹಸ್ಯ ಬಿಚ್ಚಿಟ್ಟ ಪೊಲೀಸರು

    ಹತ್ರಾಸ್ ಸಂತ್ರಸ್ತೆ, ಆರೋಪಿ ಮಧ್ಯೆ ಇತ್ತು ನಿರಂತರ ಸಂಪರ್ಕ – 104 ಕರೆಯ ರಹಸ್ಯ ಬಿಚ್ಚಿಟ್ಟ ಪೊಲೀಸರು

    – 62 ಔಟ್ ಗೋಯಿಂಗ್, 42 ಇನ್ ಕಮಿಂಗ್ ಕಾಲ್

    ಲಕ್ನೋ: ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣದ ಪ್ರಮುಖ ಆರೋಪಿ ಜೊತೆ 19 ವರ್ಷದ ಸಂತ್ರಸ್ತೆ ನಿರಂತರ ಸಂಪರ್ಕದಲ್ಲಿದ್ದಳು ಎಂದು ಉತ್ತರಪ್ರದೇಶದ ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ ನಲ್ಲಿ ನಡೆದಿದ್ದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಮಾರಣಾಂತಿಕ ಹಲ್ಲೆಯ ಪ್ರಕರಣದಲ್ಲಿ ಅದೇ ಗ್ರಾಮದ ಸಂದೀಪ್ ಸಿಂಗ್ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಜೊತೆ ಸಂತ್ರಸ್ತೆ ನಿರಂತರ ಸಂಪರ್ಕದಲ್ಲಿದ್ದ ಬಗ್ಗೆ ಪೊಲೀಸರಿಗೆ ತನಿಖೆಯ ವೇಳೆ ಬೆಳಕಿಗೆ ಬಂದಿದೆ.  ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

    ಸಂತ್ರಸ್ತೆಯ ಕುಟುಂಬ ಮತ್ತು ಆರೋಪಿ ಸಂದೀಪ್ ಫೋನ್ ಟ್ರ್ಯಾಕ್ ಮಾಡಿರುವ ಪೊಲೀಸರು, ಆರೋಪಿಯು ಯುವತಿಯೊಂದಿಗೆ ನಿರಂತರವಾಗಿ ದೂರವಾಣಿ ಸಂಪರ್ಕದಲ್ಲಿದ್ದ. ಸಂತ್ರಸ್ತೆಯ ಸಹೋದರನ ಹೆಸರಿನಲ್ಲಿ ಸಂದೀಪ್ ಗೆ ಒಂದೇ ಫೋನ್ ನಂಬರಿನಿಂದ ನಿಯಮಿತವಾಗಿ ಕರೆಗಳು ಬರುತ್ತಿದ್ದವು. ಈ ದೂರವಾಣಿ ಸಂಭಾಷಣೆಗಳು 2019 ಅಕ್ಟೋಬರ್ 13ರಿಂದ ಪ್ರಾರಂಭವಾಗಿವೆ. ಸಂತ್ರಸ್ತೆ ನೆಲೆಸಿದ್ದ ಹಳ್ಳಿ ಬೂಲ್ ಗಾಹಿಯಿಂದ ಕೇವಲ 2 ಕಿ.ಮೀ ದೂರದಲ್ಲಿರುವ ಚಂದಪಾ ಪ್ರದೇಶದಲ್ಲಿರುವ ಸೆಲ್ ಟವರ್ ಗಳಿಂದ ಹೆಚ್ಚಿನ ಕರೆಗಳನ್ನು ಮಾಡಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

    ಎರಡು ಫೋನ್ ನಂಬರ್ ಗಳ ನಡುವೆ 62 ಔಟ್ ಗೋಯಿಂಗ್ ಮತ್ತು 42 ಇನ್ ಕಮಿಂಗ್ ಕಾಲ್ ಗಳು ಬಂದಿದ್ದು, ಒಟ್ಟು 104 ಬಾರಿ ಸಂಪರ್ಕಸಿರುವುದು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಹಾಗೂ ಆರೋಪಿ ನಡುವೆ ನಿರಂತರ ಸಂಪರ್ಕ ಇತ್ತು ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಸೆಪ್ಟೆಂಬರ್ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದರು. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ಸೆ.29ರಂದು ಮೃತಪಟ್ಟಿದ್ದಳು.

    ಯುವತಿ ಸಾವನ್ನಪ್ಪಿದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿಗಳನ್ನು ನೇಣಿಗೇರಿಸುವಂತೆ ದೇಶದ ಮೂಲೆಮೂಲೆಯಿಂದಲೂ ಕೂಗು ಕೇಳಿ ಬಂದಿದೆ. ಈ ಮಧ್ಯೆ ಉತ್ತರಪ್ರದೇಶದ ಪೊಲೀಸರು ಯುವತಿಯ ಕುಟುಂಬಕ್ಕೆ ತಿಳಿಯದಂತೆ ಮೃತದೇಹವನ್ನು ಅಸ್ಪತ್ರೆಯಿಂದ ಶಿಫ್ಟ್ ಮಾಡಿದ್ದಾರೆ ಎಂದು ಸಹೋದರ ಗಂಭೀರವಾಗಿ ಆರೋಪ ಮಾಡಿದ್ದರು. ಯುವತಿಯ ತಂದೆ ಹಾಗೂ ಸಹೋದರ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ನಮಗೆ ಗೊತ್ತಾಗಂದೆ ಪೊಲೀಸರು ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ಸಾಗಿಸಿದ್ದಾರೆ ಎಂದು ಕೂಡ ಸಹೋದರ ದೂರಿದ್ದರು. ಇದನ್ನೂ ಓದಿಹತ್ರಾಸ್ ಯುವತಿ ಮೇಲೆ ಅತ್ಯಾಚಾರವಾಗಿಲ್ಲ – ಶಾಕಿಂಗ್ ಹೇಳಿಕೆ ನೀಡಿದ ಐಜಿ

    ಇತ್ತ ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಯುವತಿಯ ಮೇಲೆ ಕಾಮುಕರ ಅಟ್ಟಹಾಸ ಮೆರೆದು ಸಾವಿಗೆ ಕಾರಣವಾಗಿರುವ ಕುರಿತು ದೇಶಾದ್ಯಂತ ಆಕ್ರೋಶ ಹೊರಹಾಕುತ್ತಿರುವ ಬೆನ್ನಲ್ಲೇ, ಯುವತಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಆಲಿಘಢ ಐಜಿ ಪಿಯೂಷ್ ಮೊರ್ಡಿಯಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದರು. ನಾಲ್ವರು ವ್ಯಕ್ತಿಗಳು ಕ್ರೂರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲ್ಪಟ್ಟ ಹತ್ರಾಸ್ ಯುವತಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಉಲ್ಲೇಖವಾಗಿಲ್ಲ ಎಂದು ತಿಳಿಸಿದ್ದರು.

  • ಕುಟುಂಬದ ಸದಸ್ಯರೊಂದಿಗೆ ಕೈದಿಗಳಿಗೆ ಮಾತನಾಡಲು ಅವಕಾಶ

    ಕುಟುಂಬದ ಸದಸ್ಯರೊಂದಿಗೆ ಕೈದಿಗಳಿಗೆ ಮಾತನಾಡಲು ಅವಕಾಶ

    -ಪ್ರಿಸನ್ ಕಾಲ್ ಮೂಲಕ ಯೋಗಕ್ಷೇಮ ವಿಚಾರಣೆ

    ಹುಬ್ಬಳ್ಳಿ: ಕುಟುಂಬಸ್ಥರೊಂದಿಗೆ ಮಾತನಾಡಲು ಕೈದಿಗಳಿಗೆ ಮಾತನಾಡಲು ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

    ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳ ಹಾಗೂ ಅಪರಾಧಿಗಳ ಕುಟುಂಬದ ಸದಸ್ಯರಲ್ಲಿರುವ ಆತಂಕವನ್ನು ದೂರ ಮಾಡಲು ಹಾಗೂ ಕುಟುಂಬದ ಸದಸ್ಯರು ಕಾರಾಗೃಹಕ್ಕೆ ಬರದೇ ಮನೆಯಲ್ಲಿಯೇ ಇದ್ದು, ಯೋಗಕ್ಷೇಮ ವಿಚಾರಿಸಲು ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ವಿಶೇಷ ಸೇವೆಯನ್ನು ನೀಡಲಾಗಿದೆ.

    ಇಲ್ಲಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ `ಪ್ರಿಸನ್ ಕಾಲ್ ಸಿಸ್ಟಮ್’ ಅಳವಡಿಸುವ ಮೂಲಕ ಕೈದಿಗಳಿಗೆ (ವಿಚಾರಣಾಧೀನ ಅಥವಾ ಅಪರಾಧಿ) ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿರಲು ಅವಕಾಶ ಕಲ್ಪಿಸಲಾಗಿದೆ.

    ಕೈದಿಗಳು ನಿಯಮ ಉಲ್ಲಂಘಿಸದೆ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಅಥವಾ ಕೋರ್ಟ್ ವ್ಯವಹಾರಕ್ಕೆ ಸಂಬಂಧಿಸಿ ವಕೀಲರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಕಾರಾಗೃಹದಿಂದಲೇ ದೂರವಾಣಿ ಮೂಲಕ ಸೌಲಭ್ಯ ಕಲ್ಪಿಸಿಕೊಡುವ ವ್ಯವಸ್ಥೆ ಇದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೈದಿಗಳ ಯೋಗಕ್ಷೇಮವನ್ನು ಕುಟುಂಬಸ್ಥರಿಗೆ ನೀಡಲು ಇದೊಂದು ಸಂಪರ್ಕ ಕೊಂಡಿಯಾಗಿದೆ.

    ಕಾರಾಗೃಹದಿಂದ ದೂರವಾಣಿ ಬಾಕ್ಸ್ ಗೆ ಬಿಎಸ್‍ಎನ್‍ಎಲ್ ಸಂಪರ್ಕ ಕಲ್ಪಿಸಲಾಗಿದ್ದು, ಬೆಂಗಳೂರಿನ ಕಿಯೋನಿಕ್ಸ್ ಸಂಸ್ಥೆ ಅದನ್ನು ಅಳವಡಿಸಿದೆ. ಕಾರಾಗೃಹದಲ್ಲಿ ಸದ್ಯ ಒಂದು ದೂರವಾಣಿ ಬಾಕ್ಸ್ ಅನ್ನು ಮಾತ್ರ ಅಳವಡಿಸಲಾಗಿದ್ದು, ಕೈದಿಗಳು ಹೆಸರನ್ನು ನೋಂದಾಯಿಸಿಕೊಂಡು, ಬೆರಳಚ್ಚು ನೀಡಬೇಕು. ಮಾತನಾಡಲು ಬಯಸುವ ಮೂವರು ವ್ಯಕ್ತಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆ ನೀಡಬೇಕು. ಈ ಎಲ್ಲ ನಂಬರ್‍ಗಳನ್ನು ಅಧಿಕಾರಿಗಳು ದೃಢೀಕರಿಸಿ `ಪ್ರಿಸನ್ ಕಾಲ್ ಸಿಸ್ಟಮ್’ಗೆ ಸೇರಿಸುತ್ತಾರೆ. ನಂತರ ಕೈದಿಗಳು ವಾರದಲ್ಲಿ 12 ನಿಮಿಷ ಮಾತ್ರ ತಾವು ನೀಡಿದ ಯಾವುದೇ ನಂಬರಿಗೆ ಕರೆ ಮಾಡಿ ಮಾತನಾಡಬಹುದು. ಅವಧಿ ಮುಗಿದ ನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡಿತಗೊಳ್ಳುತ್ತದೆ.

    ಇನ್ನೂ ಪ್ರತಿಯೊಂದು ಪ್ರಿಸೆನ್ಸ್ ಕಾಲ್ ಮೇಲೆ ನಿಗಾ ಇಡಲಾಗಿದ್ದು, ಕರೆಯ ಹಣವನ್ನು ಕೈದಿಗಳ ಸಂಬಂಧಿಕರು ಎಂಒ ಮೂಲಕ ಪಾವತಿಸಬೇಕಿದೆ. ಅಲ್ಲದೇ ಎಲ್ಲ ಅಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಯಾವುದೇ ರೀತಿಯ ಅವ್ಯವಸ್ಥೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

  • ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    ಒಂದು ಫೋನ್ ಕಾಲ್ ಸಿಎಂ ‘ಶಾ’ಕ್- ಕೊನೆ ಕ್ಷಣದಲ್ಲಿ ಪ್ಲೇಟ್ ಚೇಂಜ್

    – ಸಂಪುಟ ವಿಸ್ತರಣೆಗೆ ಟ್ವಿಸ್ಟ್ ಕೊಟ್ಟ ಹೈಕಮಾಂಡ್
    – ರಾಜಭವನಕ್ಕೆ ಸಂಭಾವ್ಯ ಸಚಿವರ ಪಟ್ಟಿ ರವಾನೆ

    ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದಲ್ಲಿ ಎದ್ದಿದ್ದ ಅಸಮಾಧಾನ ತಣ್ಣಗಾಯಿತು ಅಂತಾ ಅಂದ್ಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮತ್ತೆ ಶಾಕ್ ನೀಡಿದೆ.

    ಪಕ್ಷದಲ್ಲಿನ ಸಣ್ಣ ಪುಟ್ಟ ಅಸಮಾಧಾನವನ್ನೇ ನೆಪವಾಗಿಸಿಕೊಂಡ ಹೈಕಮಾಂಡ್, ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಮೂಗು ತೂರಿಸಿದೆ. 10+3 ಫಾರ್ಮುಲಾ ಸದ್ಯಕ್ಕೆ ಬೇಡ, ಮೂವರು ಮೂಲ ಶಾಸಕರನ್ನು ನಾವು ಹೇಳುವವರೆಗೂ ಮಂತ್ರಿ ಮಾಡಬೇಡಿ ಎಂದು ಖಡಕ್ಕಾಗಿ ಹೇಳಿದೆ. ಈ ಮೂಲಕ ಗುರುವಾರದ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್ ಕೊಟ್ಟಿದೆ. ಇದರೊಂದಿಗೆ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಮಂತ್ರಿ ಆಸೆಗೆ ಕೊಕ್ಕೆ ಬಿದ್ದಿದೆ. ಹೀಗಾಗಿ ನಾಳೆ ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಮಿತ್ರಮಂಡಳಿಯ 10 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಹೈಕಮಾಂಡ್ ಆದೇಶದಂತೆ ಇಂದು ಸಂಜೆ ಸಿಎಂ ಯಡಿಯೂರಪ್ಪ, 10 ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಟ್ಟಿದ್ದಾರೆ. ನಾಳೆಯ ಪ್ರಮಾಣ ವಚನ ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ಮೂಲಗಳ ಪ್ರಕಾರ, ನಾಳೆಯೇ ಖಾತೆ ಹಂಚಿಕೆ ನಡೆಯಲ್ಲ. ಮುಂದಿನ ವಾರ ಸಿಎಂ ದೆಹಲಿಗೆ ತೆರಳುತ್ತಿದ್ದು, ಆ ಬಳಿಕವಷ್ಟೇ ಖಾತೆ ಹಂಚಿಕೆ ನಡೆಯಲಿದೆ. ಈ ಮಧ್ಯೆ ಸಂಭಾವ್ಯ ಸಚಿವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಸಚಿವ ಸ್ಥಾನ ಕೊಡುತ್ತಿರುವುದಕ್ಕೆ ಸಿಎಂಗೆ ಧನ್ಯವಾದ ಹೇಳಿದರು.

    ಬಿಎಸ್‍ವೈಗೆ ಶಾ ಫೋನ್:
    ಬುಧವಾರ ಬೆಳಗ್ಗೆ 9:30ರವರೆಗೂ ಎಲ್ಲಾ ಸರಿಯಾಗೇ ಇತ್ತು. ಸಿಎಂ ಯಡಿಯೂರಪ್ಪ ಪಾಳಯದಲ್ಲಿ ಮಂತ್ರಿ ಮಂಡಲ ವಿಸ್ತರಣೆಯ ಹುರುಪಿತ್ತು. ಆದರೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ಯಡಿಯೂರಪ್ಪ ಸೇರಿ ಎಲ್ಲಾ ಬಿಜೆಪಿಗರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.

    ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ನಾಳೆ 10 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿ. ಪಕ್ಷದ ಮೂವರು ಮೂಲ ಶಾಸಕರು ಸಚಿವರಾಗುವದು ಬೇಡ. ಪಕ್ಷದಲ್ಲಿ ಸದ್ಯಕ್ಕೆ ಅಸಮಾಧಾನ ಜೋರಾಗಿದೆ. ಆಮೇಲೆ ನೋಡೋಣ ಎಂದು ಸೂಚನೆ ನೀಡಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ಈ ವಿಚಾರವಾಗಿ ಆಪ್ತರಾದ ಉಮೇಶ್ ಕತ್ತಿ, ಯೋಗೇಶ್ವರ್ ಬಳಿ ಕೋಪಾತಾಪ ವ್ಯಕ್ತಪಡಿಸಿದ ಸಿಎಂ, ಈಗಾಗಲೇ 10+3 ಅಂತಾ ಹೇಳಿಬಿಟ್ಟಿದ್ದೇನೆ. ಮೂವರಿಗೆ ಹೇಳಿಬಿಟ್ಟಿದ್ದೇ. ಮೊದಲು ಅನುಮತಿ ಕೊಟ್ಟು ಈಗ ಬೇಡ ಅಂತಿದ್ದಾರೆ. ಈಗ ನನ್ನ ಮಾತಿಗೆ ಕಿಮ್ಮತ್ತಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತೆ. ಸಂಜೆ ತನಕವೂ ಕಾಯಿರಿ ನೋಡೋಣ, ಆಗದಿದ್ದರೆ ತಿಂಗಳ ಬಳಿಕ ಮಾಡ್ತೀನಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ‘ಮೂಲ’ಕ್ಕೆ ಪೆಟ್ಟು ಕೊಟ್ಟಿತೇಕೆ ಹೈಕಮಾಂಡ್?
    ಕಾರಣ 1 > ಮೂಲ ಬಿಜೆಪಿಗರಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಆತಂಕ
    ಕಾರಣ 2 > ಸೋತವರಿಗೆ ಮಂತ್ರಿಗಿರಿ ಕೊಟ್ಟರೆ ಗೊಂದಲ ಉಂಟಾಗುತ್ತದೆ
    ಕಾರಣ 3 > ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ
    ಕಾರಣ 4 > ಜಾತಿವಾರು ಮಂತ್ರಿಗಿರಿ ಹಂಚಿಕೆಯಲ್ಲಿ ಅಸಮತೋಲನ
    ಕಾರಣ 5 > ಭಿನ್ನಮತದಿಂದ ಬಜೆಟ್ ಅಧಿವೇಶನದ ಮೇಲೆ ಪರಿಣಾಮ ಬೀರಬಹುದು