Tag: phone

  • ಟ್ರಂಪ್‌ ಹೆಸರಿನಲ್ಲಿ ಫೋನ್‌ –  ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಟ್ರಂಪ್‌ ಹೆಸರಿನಲ್ಲಿ ಫೋನ್‌ – ಮೊಬೈಲ್‌ ಉದ್ಯಮಕ್ಕೆ ಕಾಲಿಟ್ಟ ಟ್ರಂಪ್‌ | ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ವಾಷಿಂಗ್ಟನ್‌: ಐಫೋನ್‌ಗಳನ್ನು (iPhone) ಅಮೆರಿಕದಲ್ಲಿ ಉತ್ಪಾದನೆ ಮಾಡುವಂತೆ ಆಪಲ್‌ಗ ಸೂಚಿಸಿದ್ದ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಮೊಬೈಲ್‌ ಫೋನ್‌ ಮತ್ತು ವಯರ್‌ಲೆಸ್‌ ಸೇವಾ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಟ್ರಂಪ್‌ ಕುಟುಂಬ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್‌ ಫೋನ್‌ ಮಾರುಕಟ್ಟೆ ಬಿಡುಗಡೆ ಮಾಡಿದೆ.

    ಚಿನ್ನದ ಬಣ್ಣದ ಫೋನ್‌ ಇದಾಗಿದ್ದು 499 ಡಾಲರ್‌ (ಅಂದಾಜು 43,000 ರೂ.) ದರವನ್ನು ನಿಗದಿ ಮಾಡಲಾಗಿದೆ. ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಎರಿಕ್‌ ಟ್ರಂಪ್‌ ಮತ್ತು ಡೊನಾಲ್ಡ್‌ ಟ್ರಂಪ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.

    T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್‌ ಅಮೆರಿಕದ 47ನೇ ಅಧ್ಯಕ್ಷರಾಗಿದ್ದಾರೆ. ಈ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್‌ ಎಂಬ ಹೆಸರನ್ನು ಇಡಲಾಗಿದೆ

    ಟ್ರಂಪ್ ಮೊಬೈಲ್ ವರ್ಚುವಲ್ ಆಪರೇಟರ್ ಆಗಿ ಕೆಲಸ ಮಾಡುತ್ತದೆ. ಅಂದರೆ ಇದು ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ Verizon, AT&T ಮತ್ತು T-Mobile ನಿಯಂತ್ರಿಸುವ ನೆಟ್‌ವರ್ಕ್‌ಗಳ ಮೂಲಕ ಸೇವೆಗಳನ್ನು ನೀಡುತ್ತದೆ. 5G ಸೇವೆಗೆ ಮಾಸಿಕ 47.45 ಡಾಲರ್‌(4,097 ರೂ.) ದರವನ್ನು ನಿಗದಿ ಮಾಡಲಾಗಿದೆ. ಇದನ್ನೂ ಓದಿ: ಇರಾನ್‌ ಜನ ತಕ್ಷಣವೇ ಟೆಹ್ರಾನ್‌ ಖಾಲಿ ಮಾಡಿ: ಟ್ರಂಪ್‌ ಸೂಚನೆ


    ಫೋನಿನ ಗುಣವೈಶಿಷ್ಟ್ಯಗಳೇನು?
    6.78 ಇಂಚಿನ AMOLED ಸ್ಕ್ರೀನ್‌, 1080 x 2460 ಪಿಕ್ಸೆಲ್‌, ~396 ಪಿಪಿಐ ಹೊಂದಿದೆ. ನ್ಯಾನೋ ಸಿಮ್‌ + ಇ ಸಿಮ್‌ ಹಾಕಬಹುದಾಗಿದ್ದು ಅಕ್ಟಾಕೋರ್‌ ಪ್ರೊಸೆಸರ್‌ನೊಂದಿಗೆ ಬಂದಿದೆ.

    ಆಂಡ್ರಾಯ್ಡ್‌ 15 ಆಪರೇಟಿಂಗ್‌ ಸಿಸ್ಟಂ,  12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್‌ ಮೂಲಕ ಹೆಚ್ಚುವರಿ ಮೆಮೊರಿ ವಿಸ್ತರಿಸಬಹುದಾಗಿದೆ.  ಇದನ್ನೂ ಓದಿ: ಟ್ರಂಪ್‌ 25% ಸುಂಕ ಹೇರಿದ್ರೂ ಭಾರತದ ಐಫೋನ್‌ ಚೀಪ್‌ – ಅಮೆರಿಕದ್ದು ದುಬಾರಿ

    ಹಿಂದು ಗಡೆ 50 ಎಂಪಿ (ವೈಡ್‌), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್)‌ ಕ್ಯಾಮೆರಾವನ್ನು ನೀಡಲಾಗಿದೆ. ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ.  ಫೋನಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಜೊತೆ 5000 mAh ಬ್ಯಾಟರಿಯನ್ನು ನೀಡಲಾಗಿದೆ.

    ಈ ಫೋನ್‌ ಖರೀದಿಸುವ ಗ್ರಾಹಕರು www.trumpmobile.com ಹೋಗಿ ಪ್ರಿ ಆರ್ಡರ್‌ ಮಾಡಬಹುದಾಗಿದೆ.

  • ಬೆಂಗಳೂರಿಗರೇ ಹುಷಾರಾಗಿರಿ, ಮಾತನಾಡಿಕೊಂಡು ಹೋಗ್ತಿದ್ದಾಗಲೇ ಮೊಬೈಲ್‌ ಕಳ್ಳತನ – ರಸ್ತೆಗೆ ಬಿದ್ದ ಡೆಲಿವರಿ ಬಾಯ್‌

    ಬೆಂಗಳೂರಿಗರೇ ಹುಷಾರಾಗಿರಿ, ಮಾತನಾಡಿಕೊಂಡು ಹೋಗ್ತಿದ್ದಾಗಲೇ ಮೊಬೈಲ್‌ ಕಳ್ಳತನ – ರಸ್ತೆಗೆ ಬಿದ್ದ ಡೆಲಿವರಿ ಬಾಯ್‌

    ಬೆಂಗಳೂರು: ಬೈಕ್‌ನಲ್ಲಿ ಹೋಗುವಾಗ ಫೋನ್‌ (Phone) ಹಿಡಿದು ಮಾತನಾಡುವ ಮುನ್ನ ಎಚ್ಚರವಾಗಿರಿ. ಬೆಂಗಳೂರಿನಲ್ಲಿ (Bengaluru) ಹಿಂಬದಿಯಿಂದ ಬಂದು ಫೋನನ್ನು ಕದಿಯುವ ಕಳ್ಳರ ಹಾವಳಿ ಆರಂಭವಾಗಿದೆ.

    ಹೆಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಫೋನ್ ಹಿಡಿದು ಮಾತಾಡುತ್ತಾ ಡೆಲಿವರಿ ಬಾಯ್ (Delivery Boy) ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಸಿಎಂ ವಿರುದ್ಧ ಮುಡಾ ತನಿಖೆ ಆರಂಭ

     

    ಮೊಬೈಲ್ ಕಿತ್ತ ರಭಸಕ್ಕೆ ಡೆಲಿವರಿ ಬಾಯ್ ಆಯತಪ್ಪಿ ರಸ್ತೆಯಲ್ಲೇ ಬಿದ್ದಿದ್ದಾರೆ. ಹಿಂದೆ ಬರುತ್ತಿದ್ದ ಕಾರಿನ ಮಧ್ಯೆ ಸ್ವಲ್ಪ ಅಂತರ ಇದ್ದ ಕಾರಣ ಡೆಲಿವರಿ ಬಾಯ್‌ ಅವರಿಗೆ ಯಾವುದೇ ಸಮಸ್ಯೆಯಾಗಿಲ್ಲ.

    ಡೆಲಿವರಿ ಬಾಯ್‌ ಹಿಂದಿನಿಂದ ಬರುತ್ತಿದ್ದ ಕಾರಿನ ಡ್ಯಾಶ್‌ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿದೆ. ಸೆ.27 ರ ರಾತ್ರಿ ಒಂದು ಗಂಟೆ ಸುಮಾರಿಗೆ ಹೆಚ್ ಎಸ್ ಆರ್ ಲೇಔಟ್ 29ನೇ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

     

  • ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    ಪೊಲೀಸರಿಗೆ ಯಾಮಾರಿಸಲು ಶರ್ಟ್, ಪ್ಯಾಂಟ್ ಬದಲಿಸಿ ಹೋದ ಶಂಕಿತ

    – ದಿಕ್ಕು ತಪ್ಪಿಸಲು ಡಮ್ಮಿ ಫೋನ್ ಬಳಕೆ

    ಬೆಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾಮಾರಿಸಲು ಆರೋಪಿ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಕೆಫೆಯಲ್ಲಿ ಬಾಂಬ್ ಇಟ್ಟ ಬಳಿಕ ಆರೋಪಿ ಶರ್ಟ್ ಮತ್ತು ಮತ್ತು ಪ್ಯಾಂಟ್ ಬದಲಿಸಿ ಹೋಗಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ದಾರಿ ಮಧ್ಯೆ ಆರೋಪಿ ಬಟ್ಟೆ (Clothes) ಬದಲಿಸಿ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಶರ್ಟ್ ಮೇಲೆ ಶರ್ಟ್, ಪ್ಯಾಂಟ್ ಮೇಲೆ ಪ್ಯಾಂಟ್ ಹಾಕಿಕೊಂಡು ಮುಂದೆ ಹೋಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ. ಅಲ್ಲದೇ 3-4 ಬಸ್ ಬದಲಿಸಿ ಪ್ರಯಾಣ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ಗಡಿ ಬಿಟ್ಟು ಹೊರರಾಜ್ಯಕ್ಕೆ ಎಸ್ಕೇಪ್ ಆಗಿರುವ ಬಗ್ಗೆ ಶಂಕಿಸಿದ್ದು, ಸಿಸಿಬಿ, ಪೊಲೀಸ್ ಇಲಾಖೆಯ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ತಲಾಶ್ ನಡೆಸಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ಬಾಂಬರ್‌ ಒಂಟಿ ತೋಳ ಭಯೋತ್ಪಾದಕ!

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 48 ಗಂಟೆಗಳು ಕಳೆದರೂ ಈವರೆಗೂ ಆರೋಪಿಯ ಬಗ್ಗೆ ಸುಳಿವು ಸಿಕ್ಕಿಲ್ಲ. ಸಿಸಿಟಿವಿ, ಮೊಬೈಲ್ ಟವರ್ ಡಂಪ್ ಅನಾಲಿಸಿಸ್ ಮಾಡಿದರೂ ಯಾವುದೇ ಸುಳಿವು ದೊರೆತಿಲ್ಲ. ಇದನ್ನೂ ಓದಿ: ಹೋಟೆಲ್ ಉದ್ಯಮದಲ್ಲಿ ನಾವೆಲ್ಲ ಅಣ್ಣ-ತಮ್ಮಂದಿರು, ಅನ್ನ ನೀಡುತ್ತೇವೆ ಹೊರತು ಕಿತ್ತುಕೊಳ್ಳುವುದಿಲ್ಲ: ರಾಮೇಶ್ವರಂ ಕೆಫೆ ಮಾಲೀಕ

    ಸಿಸಿಟಿವಿಯಲ್ಲಿ ಆತ ಯಾರೊಂದಿಗೂ ಫೋನಿನಲ್ಲಿ ಮಾತನಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಆದರೆ ತನಿಖೆಗೆ ಇಳಿದಾಗ ಆತ ಡಮ್ಮಿ ಫೋನ್ ಅನ್ನು ಬಳಸಿದ್ದು, ಈ ಫೋನ್ ಬಳಸಿದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಮ್ಮ ಕಾಲ್‌ ಮಾಡದಿದ್ದರೆ…- ಕೆಫೆ ಬ್ಲಾಸ್ಟ್‌ ಭಯಾನಕ ಸತ್ಯ ಬಿಚ್ಚಿಟ್ಟ ಟೆಕ್ಕಿ

    ಸಿಸಿಟಿವಿಯಲ್ಲಿ ಮೊಬೈಲ್ ತೋರಿಸಿರುವ ದೃಶ್ಯ ಕಂಡು ತನಿಖಾಧಿಕಾರಿಗಳು ಆರೋಪಿ ಸಿಕ್ಕಿಬಿದ್ದ ಎಂಬ ವಿಶ್ವಾಸದಲ್ಲಿದ್ದರು. ಆದರೆ ಬಾಂಬರ್ ಪಕ್ಕಾ ಪ್ಲಾನ್ ಮಾಡಿಕೊಂಡು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಇದೀಗ ಘಟನಾ ಸ್ಥಳದಲ್ಲಿ ಸಿಕ್ಕ ಸಿಸಿಟಿವಿ, ಬಸ್‌ನಲ್ಲಿರುವ ಸಿಸಿಟಿವಿ ಪರಿಶೀಲನೆ ಮಾಡಿ ಆರೋಪಿಯ ವಾಕಿಂಗ್ ಸ್ಟೈಲ್ ಆಧರಿಸಿ ಸುಳಿವು ಪತ್ತೆಹಚ್ಚಲು ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗಳಿಗೂ ಸಿಸಿಟಿವಿ ದೃಶ್ಯ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಹಿಂದಿದ್ಯಾ ಐಸಿಸ್ ಕೈವಾಡ?

  • ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್

    ಮುಂಬೈ: ಹೊಸದಾಗಿ ಲಾಂಚ್ ಆಗಿರುವ ಆಪಲ್ ಐಫೋನ್ 15 (Apple iPhone 15) ಖರೀದಿಯ ಮೇಲೆ ರಿಲಯನ್ಸ್ ಜಿಯೋ (Reliance Jio) ಬಂಪರ್ ಆಫರ್ ಘೋಷಣೆ ಮಾಡಿದೆ.

    ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್‌ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ 2,394 ರೂ.ಮೌಲ್ಯದ ಆರು ತಿಂಗಳ ಪ್ಲಾನ್ ಅನ್ನು ಉಚಿತವಾಗಿ ಬಳಕೆದಾರರಿಗೆ ನೀಡಲಿದೆ.

    ಭಾರತೀಯ ಮಾರುಕಟ್ಟೆಯಲ್ಲಿ ಬಳಕೆದಾರರ ನಾಡಿ ಮಿಡಿತವನ್ನು ಅರಿತು ಕೊಂಡಿರುವ ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ 399 ರೂ. ಪ್ಲಾನ್ ಅನ್ನು ಆರು ತಿಂಗಳುಗಳ ವರೆಗೆ ಉಚಿತವಾಗಿ ನೀಡಲಿದೆ. ಇದರ ಒಟ್ಟು ಮೌಲ್ಯ 2,394 ರೂ. ಗಳಾಗಲಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ.

    ರಿಲಯನ್ಸ್ ಜಿಯೋ, ಆಪಲ್ ಐಫೋನ್ 15 ಖರೀದಿಸುವವರಿಗೆ ನೀಡುತ್ತಿರುವ 399 ರೂ. ಪ್ಲಾನ್ ನಲ್ಲಿ ಬಳಕೆದಾರರಿಗೆ ಪ್ರತಿ ನಿತ್ಯ 3 ಜಿಬಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದ್ದು, ಜೊತೆಗೆ ಸಂಪೂರ್ಣ ಅನ್ ಲಿಮಿಟೆಡ್ ಕಾಲಿಂಗ್ ಸಹ ಸಿಗಲಿದೆ. ಅಲ್ಲದೇ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಸಹ ಉಚಿತವಾಗಿ ಕಳುಹಿಸಬಹುದಾಗಿದೆ.  ಇದನ್ನೂ ಓದಿ: ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ರಿಲಯನ್ಸ್ ರಿಟೇಲ್ ಸ್ಟೋರ್‌ಗಳು, ರಿಲಯನ್ಸ್ ಡಿಜಿಟಲ್ ಆನ್‌ಲೈನ್ ಅಥವಾ ಜಿಯೋಮಾರ್ಟ್ ನಲ್ಲಿ ಜಿಯೋ ಐಫೋನ್ 15 ಖರೀದಿ ಮಾಡಿದರೆ ಮಾತ್ರವೇ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

    ಜಿಯೋ ಬಳಕೆದಾರರಲಲ್ಲದವರಿಗೂ ಈ ಯೋಜನೆಯ ಲಾಭವು ದೊರೆಯಲಿದ್ದು, ಇದಕ್ಕಾಗಿ ಅವರು ಹೊಸ ಜಿಯೋ ಸಿಮ್ ಖರೀದಿ ಮಾಡಬೇಕು ಇಲ್ಲವೇ ಮೊಬೈಲ್ ನಂಬರ್ ಪೊರ್ಟಬಲಿಟಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ.

    ಈ ಪ್ಲಾನ್ ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದು, ಐಫೋನ್ 15 ಖರೀದಿ ಮಾಡಿ ಜಿಯೋ ಸಿಮ್ ಅನ್ನು ಆಕ್ಟಿವ್ ಮಾಡಿದರೆ ಈ ಹೊಸ ಯೋಜನೆಯು 72 ಗಂಟೆಗಳ ಒಳಗೆ ನಿಮ್ಮ ಬಳಕೆಗೆ ಲಭ್ಯವಾಗಲಿದೆ. ಈ ಯೋಜನೆಯೂ ಕೇವಲ ಐಫೋನ್ 15 ನಲ್ಲಿ ಮಾತ್ರವೇ ಕಾರ್ಯನಿರ್ವಹಿಸಲಿದೆ.

     
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

    ಮುಂಬೈ: 2ಜಿ ಮುಕ್ತ ಭಾರತ ನಿರ್ಮಾಣಕ್ಕೆ ಜಿಯೋ (Jio) ಕಂಪನಿ 999 ರೂ.ಗಳಿಗೆ ಎರಡು 4ಜಿ ಫೀಚರ್‌ (4G Feature Phone) ಫೋನ್‌ ಬಿಡುಗಡೆ ಮಾಡಿದೆ.

    ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಕಾರ್ಬನ್‌ (Karbonn) ಜೊತೆಗೂಡಿ ಜಿಯೋ ಭಾರತ್‌ ವಿ2 (JioBharat V2) ಮತ್ತು ಜಿಯೋ ಭಾರತ್‌ ಕೆ1 ಕಾರ್ಬನ್‌ (JioBharat K1 Karbonn) ಹೆಸರಿನಲ್ಲಿ ಫೋನ್‌ ಬಿಡುಗಡೆ ಮಾಡಿದೆ. ಮೊದಲ 10 ಲಕ್ಷ ಫೋನ್‌ಗಳ ಮಾರಾಟ ಜುಲೈ 7 ರಿಂದ ಆರಂಭವಾಗಲಿದ್ದು ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

    ಜೆಯೋ ಭಾರತ್‌ ಕೆ1 ಬೂದು ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಕಾರ್ಬನ್‌ ಲೋಗೋ ಇದೆ. ಜಿಯೋ ಭಾರತ್‌ ವಿ2 ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಜಿಯೋ ಲೋಗೋವಿದೆ. ಇದನ್ನೂ ಓದಿ: 65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌ – ಒಂದೇ ದಿನ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ಹೆಚ್ಚಳ

    ಈ ಫೋನ್‌ಗಳು ಫೀಚರ್‌ ಫೋನಿನಂತೆ ಕಂಡರೂ 4ಜಿ ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. 22 ಭಾಷೆಗಳನ್ನು ಬೆಂಬಲಿಸುವ ಜಿಯೋ ಭಾರತ್‌ ವಿ2 ಫೋನ್‌ 4.5 ಸೆ.ಮೀ ಸ್ಕ್ರೀನ್‌, ಎಚ್‌ಡಿ ವಾಯ್ಸ್‌ ಕಾಲಿಂಗ್‌, ಪವರ್‌ಫುಲ್‌ ಲೌಡ್‌ ಸ್ಪೀಕರ್‌ ಮತ್ತು ಟಾರ್ಚ್‌, 71 ಗ್ರಾಂ ತೂಕ, 1,000 ಎಂಎಎಚ್‌ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌, 0.3 ಮೆಗಾ ಪಿಕ್ಸೆಲ್‌ ಕ್ಯಾಮೆರಾ, 128 ಜಿಬಿವರೆಗೆ ವಿಸ್ತರಣೆ ಮಾಡಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಜಿಯೋ ಸಿನಿಮಾ ಆಪ್‌ ಮೂಲಕ ಸಿನಿಮಾ ವೀಕ್ಷಿಸಬಹುದು. ಜಿಯೋ ಸಾವನ್‌ ಆಪ್‌ ಮೂಲಕ 8 ಕೋಟಿ ಹಾಡು ಕೇಳಬಹುದು. ಜಿಯೋ ಪೇ ಮೂಲಕ ಯುಪಿಐ ಪಾವತಿ ಮಾಡಬಹುದು.

     

    ಜಿಯೋ ಭಾರತ್‌ ಫೋನಿಗೆ ಜಿಯೋ 123 ರೂ. ಮತ್ತು 1,234 ರೂಪಾಯಿಯ ಎರಡು ಪ್ಲ್ಯಾನ್‌ ಬಿಡುಗಡೆ ಮಾಡಿದೆ. 123 ರೂ ರಿಚಾರ್ಜ್‌ ಮಾಡಿದರೆ 28 ದಿನಗಳ ಅನ್‌ಲಿಮಿಟೆಡ್‌ ಕರೆ, 14 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ. ವಾರ್ಷಿಕ 1234 ರೂ. ರಿಚಾರ್ಜ್‌ ಮಾಡಿದರೆ ಅನ್‌ಲಿಮಿಟೆಡ್‌ ಕರೆ, 168 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ

    ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ

    ರಾಯ್ಪುರ: ವಾಹನ ಚಲಾಯಿಸುವಾಗ ಫೋನ್ ಬಳಕೆ ಮಾಡಬಾರದು ಎಂಬ ಅರಿವಿದ್ದರೂ ಇಲ್ಲೊಬ್ಬ ಚಾಲಕ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ್ದಾನೆ. ಪರಿಣಾಮ 26 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

    ಈ ಘಟನೆ ಛತ್ತೀಸ್‍ಗಢ (Chhattisgarh) ದ ಘರ್ಘೋಡಾ (Gharghoda Area) ಪ್ರದೇಶದಲ್ಲಿ ನಡೆದಿದೆ. ಚಾಲಕ ಫೋನಿನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರೈಲ್ವೇ ಬ್ರಿಡ್ಜ್ (Railway Bridge) ಗೆ ಗುದ್ದಿದೆ. ಪರಿಣಾಮ 26 ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

    ಘಟನೆ ಸಂಬಂಧ ತನಿಖೆ ನಡೆಸಿದಾಗ ಚಾಲಕ ಫೋನ್ (Phone) ಬಳಕೆ ಮಾಡಿರುವುದು ಬಯಲಾಗಿದೆ. ಫೋನ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ರಾಯ್‍ಗಢದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‍ಡಿಪಿಓ ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

    ಕಳೆದ ಏಪ್ರಿಲ್‍ನಲ್ಲಿ ಇಂಥದ್ದೇ ಒಂದು ಅಪಘಾತ ನಡೆದಿತ್ತು. ಛತ್ತೀಸ್‍ಗಢದಲ್ಲಿ ಬಸ್ ಪಲ್ಟಿಯಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಮಂದಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಅಂಬಾಗರ್ ಚೌಕಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

  • ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ವಿಮಾನದಲ್ಲಿ ಕುಳಿತು ಫೋನ್‌ನಲ್ಲಿ ‘ಬಾಂಬ್’ ಕುರಿತು ಸಂಭಾಷಣೆ – ದೆಹಲಿ ಏರ್‌ಪೋರ್ಟ್‌ನಲ್ಲಿ ವ್ಯಕ್ತಿ ಅರೆಸ್ಟ್

    ನವದೆಹಲಿ: ವಿಮಾನದಲ್ಲಿ (Flight) ವ್ಯಕ್ತಿಯೊಬ್ಬ ಫೋನ್‌ನಲ್ಲಿ ಬಾಂಬ್ (Bomb) ಕುರಿತು ಸಂಭಾಷಣೆ ಮಾಡಿದ್ದಕ್ಕೆ ಆತನನ್ನು ಬಂಧಿಸಿರುವ ಘಟನೆ ದೆಹಲಿಯ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Indira Gandhi International Airport)  ನಡೆದಿದೆ.

    ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ಗುರುತಿಸಲಾಗಿದ್ದು, ಆತ ವಿಸ್ತಾರ ವಿಮಾನ (Vistara Airlines) ಸಂಖ್ಯೆ ಯುಕೆ-981ರಲ್ಲಿ ದೆಹಲಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ. ಈ ವೇಳೆ ಆತ ತನ್ನ ಫೋನ್‌ನಲ್ಲಿ ಬಾಂಬ್ ಕುರಿತು ಮಾತನಾಡುತ್ತಿದ್ದ. ಇದನ್ನು ಸಹ ಪ್ರಯಾಣಿಕರೊಬ್ಬರು ಕೇಳಿಸಿಕೊಂಡಿದ್ದಾರೆ.

    ಆರೋಪಿ ಬಾಂಬ್ ಕುರಿತು ವಿಮಾನದಲ್ಲಿ ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಮಹಿಳೆ ತಕ್ಷಣ ವಿಮಾನದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸಿಬ್ಬಂದಿ ಆರೋಪಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ (CIF) ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ – ನಿಮ್ಮ ಜಿಲ್ಲೆಯ ಉಸ್ತುವಾರಿ ಯಾರಿಗೆ?

    ಬಳಿಕ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಫೋನ್‌ನಲ್ಲಿ ಆತ ಬಾಂಬ್ ಕುರಿತು ಸಂಭಾಷಣೆ ಮಾಡುತ್ತಿದ್ದುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 27 ವರ್ಷಗಳ ನಂತರ ಭಾರತದಲ್ಲಿ ವಿಶ್ವಸುಂದರಿ ಸ್ಪರ್ಧೆ: ಮೊದಲಾಗಿದ್ದು ಬೆಂಗಳೂರಿನಲ್ಲಿ

  • ಓದೋ ಟೈಮ್‍ಲ್ಲಿ ಯಾಕೆ ಮೊಬೈಲ್ ಬಳಸ್ತೀಯಾ ಎಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಓದೋ ಟೈಮ್‍ಲ್ಲಿ ಯಾಕೆ ಮೊಬೈಲ್ ಬಳಸ್ತೀಯಾ ಎಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ

    ಮುಂಬೈ: ಓದುವ ಸಮಯದಲ್ಲಿ ಮೊಬೈಲ್ (Phone) ಯಾಕೆ ಹೆಚ್ಚು ಬಳಸುತ್ತೀಯಾ ಎಂದು ತಂದೆ (Father) ಕೇಳಿದ್ದಕ್ಕೆ ಹುಡುಗಿಯೊಬ್ಬಳು (Girl) ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ.

    ಪುಣೆಯ ಘೋಡೆಗಾಂವ್‍ನಲ್ಲಿ 19 ವರ್ಷದ ಹುಡುಗಿ ಓದುತ್ತಿರುವಾಗ ಫೋನ್‍ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಗದರಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಹುಡುಗಿಯು ಟೆರೇಸ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಘಟನೆಗೆ ಸಂಬಂಧಿಸಿ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಕುರಿತು ಘೋಡೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಸಮೀಕ್ಷೆಗಳು ಏನೇ ಹೇಳಲಿ, 115 ಸ್ಥಾನ ಪಡೆದು ಸರ್ಕಾರ ರಚಿಸುತ್ತೇವೆ : ಬಿಎಸ್‌ವೈ

    ಮೃತಳ ತಂದೆ ಉದ್ಯಮಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾಳೆ. ಒಬ್ಬಳೆ ಮಗಳಾಗಿದ್ದು, ಈಕೆ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇವಿಎಂನ್ನು ಮತಗಟ್ಟೆಯಲ್ಲೇ ಬಿಟ್ಟು ಹೋದ ಆರೋಪ- ಎಣಿಕೆ ದಿನ ಲೆಕ್ಕ ಪಕ್ಕಾ ಇರಲಿ ಎಂದ ಮತದಾರ

  • ವೀಡಿಯೋ ನೋಡುತ್ತಿದ್ದಾಗ ಮೊಬೈಲ್ ಬ್ಲಾಸ್ಟ್ – 8ರ ಬಾಲಕಿ ಸಾವು

    ವೀಡಿಯೋ ನೋಡುತ್ತಿದ್ದಾಗ ಮೊಬೈಲ್ ಬ್ಲಾಸ್ಟ್ – 8ರ ಬಾಲಕಿ ಸಾವು

    ತಿರುವನಂತಪುರಂ: 8 ವರ್ಷದ ಬಾಲಕಿಯೊಬ್ಬಳು (Girl) ಮೊಬೈಲ್ (Mobile) ಬಳಸುತ್ತಿದ್ದ ಸಂದರ್ಭ ಅದು ಸ್ಫೋಟಗೊಂಡು (Explode) ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ (Kerala) ಸೋಮವಾರ ತಡರಾತ್ರಿ ನಡೆದಿದೆ.

    ಕೇರಳದ ತಿರುವಿಲ್ವಾಮಲದಲ್ಲಿ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಆಕೆ ಸೋಮವಾರ ರಾತ್ರಿ ಸುಮಾರು 10:30ರ ವೇಳೆಗೆ ಮೊಬೈಲ್ ಫೋನ್ ಅನ್ನು ಬಳಸುತ್ತಿದ್ದಾಗ ಅದು ಸ್ಫೋಟಗೊಂಡಿದೆ.

    ಬಾಲಕಿ ಮೊಬೈಲಿನಲ್ಲಿ ವೀಡಿಯೋ ವೀಕ್ಷಿಸುತ್ತಿದ್ದಳು ಎನ್ನಲಾಗಿದೆ. ಮೊಬೈಲ್ ಆಕೆಯ ಕೈಯಲ್ಲಿದ್ದಾಗಲೇ ಸ್ಫೋಟಗೊಂಡಿದ್ದರಿಂದ ಆಕೆಗೆ ಗಂಭೀರವಾದ ಗಾಯಗಳಾಗಿತ್ತು. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಆಕೆ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಹೊರ ರಾಜ್ಯದಿಂದ ಮಹಿಳೆಯನ್ನು ಕರೆತಂದು ಬೀದರ್‌ನಲ್ಲಿ ಕೊಂದು ಸುಟ್ಟು ಹಾಕಿದ ಹಂತಕರು

    ಆದಿತ್ಯಶ್ರಿ ಸ್ಥಳೀಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುದಿಯುವ ನೀರಿನಲ್ಲಿ ಮುಳುಗಿಸಿ ಮಗು ಕೊಂದ ಪಾಪಿ

  • ಭಾರತದ ಫೋನ್‌ ಕಂಪನಿಗಳು ಸೋತಿದ್ದು ಎಲ್ಲಿ?

    ಭಾರತದ ಫೋನ್‌ ಕಂಪನಿಗಳು ಸೋತಿದ್ದು ಎಲ್ಲಿ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k