Tag: Phillipines

  • 3 ವರ್ಷದಿಂದ ತೆಂಗಿನ ಮರದಲ್ಲಿ ವಾಸವಿದ್ದ ವ್ಯಕ್ತಿಯನ್ನು ಕೆಳಗಿಳಿಸಲು ಮರವನ್ನೇ ಉರುಳಿಸಿದ್ರು: ವಿಡಿಯೋ ನೋಡಿ

    3 ವರ್ಷದಿಂದ ತೆಂಗಿನ ಮರದಲ್ಲಿ ವಾಸವಿದ್ದ ವ್ಯಕ್ತಿಯನ್ನು ಕೆಳಗಿಳಿಸಲು ಮರವನ್ನೇ ಉರುಳಿಸಿದ್ರು: ವಿಡಿಯೋ ನೋಡಿ

    ಮನಿಲಾ: ವ್ಯಕ್ತಿಯೊಬ್ಬ 3 ವರ್ಷದಿಂದ ತೆಂಗಿನ ಮರದಲ್ಲಿ ವಾಸವಿದ್ದು, ಆತನನ್ನು ಕೆಳಗಿಳಿಸಲು ಆಗದೆ ಮರವನ್ನೇ ಉರುಳಿಸಿರುವ ಘಟನೆ ಫಿಲಿಫೈನ್ಸ್ ನಲ್ಲಿ ನಡೆದಿದೆ.

    ಅಗುಸನ್ ದೆಲ್ ಸುರ್ ನ ಗಿಲ್ ಬರ್ಟ್ ಶಾನ್ ಚೇಜ್ ಎಂಬ ವ್ಯಕ್ತಿ 3 ವರ್ಷದಿಂದ ತೆಂಗಿನ ಮರದಲ್ಲಿ ವಾಸವಿದ್ದು, ಆತನನ್ನು ರಕ್ಷಣಾ ಸಿಬ್ಬಂದಿಯವರು ರಕ್ಷಿಸಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಆತನನ್ನು ರಕ್ಷಣೆ ಮಾಡಿದ ವಿಡಿಯೋವೊಂದನ್ನು ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ.

    ಗಿಲ್ ಬರ್ಟ್ ತಲೆಗೆ ಪಿಸ್ತೂಲ್ ನಿಂದ ಏಟು ಬಿದ್ದಿದ್ದು, ಆ ದಿನದಿಂದ ಆತನು 60 ಅಡಿ ಎತ್ತರವಿರುವ ತೆಂಗಿನ ಮರದ ಮೇಲೆ ವಾಸಿಸುತ್ತಿದ್ದನು. ಹಳೆಯ ಬಟ್ಟೆಗಳ ಜೊತೆ ಮರದ ತುಂಡನ್ನು ತೆಗೆದುಕೊಂಡು ಹೋಗಿ, ಮರದ ಮೇಲೆ ತನ್ನ ಮನೆಯನ್ನು ನಿರ್ಮಿಸಿಕೊಂಡಿದ್ದನು. ಮನೆಗೆ ಗೋಡೆ ಇರದಿದ್ದರೂ ತೆಂಗಿನ ಗರಿಯಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಿದ್ದನು. ಕೆಲವು ಬಟ್ಟೆಗಳು ಬಿಟ್ಟರೆ ಅವನ ಜೊತೆ ಬೇರೆ ಯಾವ ವಸ್ತು ಕೂಡ ಇರಲಿಲ್ಲ.

    ಗಿಲ್ ಬರ್ಟ್‍ನ ತಾಯಿ ವೇನೆಫ್ರೇಡ್ ಶಾನ್ ಚೇಜ್ ತನ್ನ ಮಗನ ಯೋಚನೆಯಿಂದ ಬೆಳಗ್ಗೆ ಬೇಗ ಎದ್ದು ಗಿಲ್ ಬರ್ಟ್‍ಗಾಗಿ ಅಡುಗೆ ಮಾಡಿ, ಅವನು ವಾಸವಿರುವ ಜಾಗಕ್ಕೆ ಹೋಗಿ ಊಟ ಹಾಗೂ ಸಿಗರೇಟ್ ಕೋಡುತ್ತಿದ್ದರು. ಗಿಲ್ ಬರ್ಟ್ ಉದ್ದದ ಹಗ್ಗವನ್ನು ಕೆಳಗೆ ಬಿಟ್ಟು ಅಲ್ಲಿಂದ ಊಟವನ್ನು ತೆಗೆದುಕೊಳ್ಳುತ್ತಿದ್ದನು.

    ಬಿಸಿಲು ಅಥವಾ ಮಳೆಯಿರಲ್ಲಿ ಗಿಲ್ ಬರ್ಟ್ ಎಲ್ಲರಿಂದಲ್ಲೂ ದೂರವಿರುತ್ತಿದ್ದ. ಗಿಲ್ ಬರ್ಟ್‍ನ ಸಹೋದರಿ ಪ್ರಕಾರ 2014 ರಲ್ಲಿ ನಡೆದ ಒಂದು ಜಗಳದಿಂದ ಆತನ ತಲೆಗೆ ಪಿಸ್ತೂಲ್ ನಿಂದ ಏಟು ಬಿದಿದ್ದ ಕಾರಣ ಗಿಲ್ ಬರ್ಟ್ ಈ ರೀತಿ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

    ಗಿಲ್ ಬರ್ಟ್ ಕೆಳಗಿಳಿಯಲ್ಲು ನಿರಾಕರಿಸಿದ್ದಾಗ, ರಕ್ಷಣಾ ಸಿಬ್ಬಂದಿ ಆತನನ್ನು ರಕ್ಷಿಸಲು ಎಲ್ಲಾ ರೀತಿಯ ಉಪಕರಣಗಳನ್ನು ತಯಾರಿ ಮಾಡಿಕೊಂಡರು. ನಂತರ ಮರವನ್ನು ಕತ್ತರಿಸಿ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿಕೊಂಡರು.

    ಫೇಸ್‍ ಬುಕ್ ನಲ್ಲಿ ಇದದೂವರೆಗೂ ವಿಡಿಯೋ 28 ಲಕ್ಷ ವ್ಯೂ ಕಂಡಿದ್ದು, 46 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.