Tag: Philippine

  • ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಆರ್ಡರ್ ಮಾಡಿದ್ದು ಫ್ರೈಡ್ ಚಿಕನ್ ಬಂದಿದ್ದು ಮಾತ್ರ ಟವಲ್

    ಮನಿಲಾ: ಫ್ರೈಡ್ ಚಿಕನ್ ಆರ್ಡರ್ ಮಾಡಿದ ಮಹಿಳೆಗೆ ಬಂದಿದ್ದ ಫ್ರೈಡ್ ಟವಲ್ ನೋಡಿ ಮಹಿಳೆ ಶಾಕ್ ಆಗಿರುವ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ. ಈ ಸುದ್ದಿ ಸೋಶಿಯಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಅಲೀಫರೇಜ್ ಎಂಬ ಮಹಿಳೆ ಫ್ರೈಡ್ ಚಿಕನ್ ತಿನ್ನಬೇಕು ಎಂದು ಆಸೆಯಿಂದ ಫುಡ್ ಆರ್ಡರ್ ಮಾಡಿದ್ದಾಳೆ. ಆದರೆ ಡೀಪ್ ಫ್ರೈಡ್ ಚಿಕನ್ ಬದಲು ಡೀಪ್ ಫ್ರೈಡ್ ಟವಲ್ ಸಿಕ್ಕಿದೆ. ಇದನ್ನೂ ಓದಿ:  ಸಂಜೆ ಸ್ನ್ಯಾಕ್ಸ್‌ಗೆ ಮಾಡಿ ಆಲೂ ಭುಜಿಯಾ

    ಅಲೀ ಚಿಕನ್ ಅಂದುಕೊಂಡು ತಿನ್ನಲು ಶುರು ಮಾಡಿದಾಗ ವಿಚಿತ್ರವೆನಿಸಿದ್ದು, ಪೂರ್ತಿ ಚಿಕನ್ ಬಿಡಿಸಿ ನೋಡಿದ್ದಾಳೆ. ಆಗ ಅದು ಚಿಕನ್ ಅಲ್ಲ, ಟವಲ್ ಎಂದು ಗೊತ್ತಾಗಿದೆ. ಇದರ ವೀಡಿಯೋವನ್ನು ಅಲೀಫರೆಜ್ ತಮ್ಮ ಇನ್‍ಸ್ಟಾಗ್ರಾಮ್‍ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಫುಡ್ ಆರ್ಡರ್ ಮಾಡಿದ ರೆಸ್ಟೋರೆಂಟ್ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಾರೆ.

    ನನ್ನ ಮಗನಿಗೆ ಫ್ರೈಡ್ ಚಿಕನ್ ಆರ್ಡರ್ ಮಾಡಿದ್ದನು. ನಾನು ಫ್ರೈಡ್ ಚಿಕನ್ ತಿನ್ನಲು ಪ್ರಯತ್ನಿಸುತ್ತಿರುವಾಗ, ತುಂಡು ಮಾಡುವುದು ಸಹ ಕಷ್ಟವಾಯಿತ್ತು. ನನ್ನ ಕೈಗಳಿಂದ ಅದನ್ನು ತೆರೆಯಲು ಪ್ರಯತ್ನಿಸಿದೆ ಆಗ ಫ್ರೈಡ್ ಚಿಕನ್ ಬದಲಾಗಿ ಇರುವ ಕರಿದ ಟವೆಲ್ ನೋಡಿ ಆಶ್ಚರ್ಯವಾಯಿತ್ತು. ಇದು ನಿಜಕ್ಕೂ ಗೊಂದಲದ ಸಂಗತಿಯಾಗಿದೆ ಎಂದು ಬರೆದಕೊಂಡಿದ್ದಾರೆ. ಅಲೀಫರೆಜ್ ಫ್ರೈಡ್ ಟವಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ಸುದ್ದಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಸಖತ್ ಮಜವಾಗಿ ಕಮೆಂಟ್ ಮಾಡುತ್ತಿದ್ದಾರೆ.

  • 14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    14 ಅಡಿ ಉದ್ದದ ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ ಅಣ್ಣ

    ಮನಿಲಾ: ತನ್ನ ತಂಗಿಯನ್ನು ತಿನ್ನಲು ಬಂದ 14 ಅಡಿ ಮೊಸಳೆಯಿಂದ ಅಣ್ಣನೋರ್ವ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ.

    ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ತನ್ನ 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ ಮೇಲೆ ದಾಳಿ ಮಾಡಿದೆ.

    ಹೈನಾ ಮತ್ತು ಹಾಶಿಮ್ ಇಬ್ಬರು ನದಿ ದಾಟುವಾಗ, ಹಾಶಿಮ್ ಬೇಗ ಮುಂದೆ ಹೋಗಿದ್ದಾನೆ. ಹೈನಾ ನಿಧಾನವಾಗಿ ಬರುತ್ತಿದ್ದ ವೇಳೆ ದಡ ಸಮೀಪಿಸಿದ ಹೈನಾಳ ಬಲಗಾಲನ್ನು ಮೊಸಳೆ ಜಿಗಿದು ಹಿಡಿದುಕೊಂಡಿದೆ. ಈ ವೇಳೆ ಕಿರುಚುತ್ತಿದ್ದ ತಂಗಿಯ ನೆರವಿಗೆ ಬಂದ ಅಣ್ಣ ಹಾಶಿಮ್ ಕಲ್ಲಿನಿಂದ ಮೊಸಳೆಯ ಬಾಯಿಗೆ ಹೊಡೆದು ನಂತರ ತನ್ನ ತಂಗಿಯನ್ನು ತನ್ನ ಕಡೆ ಎಳೆದುಕೊಂಡು ಮೊಸಳೆಯಿಂದ ಕಾಪಾಡಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ತಂಗಿ ಹೈನಾ, ಮೊಸಳೆ ನನಗಿಂತ ದೊಡ್ಡದಾಗಿತ್ತು. ನನಗೆ ಅದನ್ನು ನೋಡಿ ಭಯವಾಗಿತ್ತು. ಆದ್ದರಿಂದ ನಾನು ಭಯದಿಂದ ಅಳುತ್ತಿದ್ದೆ. ಅದು ನನ್ನ ಕಾಲನ್ನು ಹಿಡಿದುಕೊಂಡಿತ್ತು. ಆಗ ನನ್ನ ಸಹಾಯಕ್ಕೆ ಹಾಶಿಮ್ ಬಂದ ಅದರ ಬಾಯಿಗೆ ಕಲ್ಲಿನಿಂದ ಹೊಡೆದು ನನ್ನನ್ನು ಕಾಪಾಡಿದ ಎಂದು ಹೇಳಿದ್ದಾಳೆ.

    ಈ ಘಟನೆಯಲ್ಲಿ ಹೈನಾಳ ಬಲಗಾಲಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಲೆಫ್ಟಿನೆಂಟ್ ಕರ್ನಲ್ ಸಾಕ್ರಟೀಸ್ ಫಾಲ್ಟಾಡೊ, ಈ ಭಾಗದ ನಿವಾಸಿಗಳಿಗೆ ಮೊಸಳೆಯಿಂದ ಇತ್ತೀಚೆಗೆ ಬಹಳ ತೊಂದರೆಯಾಗುತ್ತಿದೆ. ಮೊಸಳೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗುವುದು. ಅವರ ಅಣ್ಣನ ಧೈರ್ಯದಿಂದ ಹುಡುಗಿ ಬದುಕಿ ಬಂದಿದ್ದಾಳೆ ಎಂದು ಹೇಳಿದ್ದಾರೆ.