Tag: Phethai

  • ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

    ಪೆಥಾಯ್ ಚಂಡಮಾರುತ: 250ಕ್ಕೂ ಹೆಚ್ಚು ಗೋವುಗಳ ಮಾರಣಹೋಮ

                                                                  ಸಾಂದಭೀಕ ಚಿತ್ರ

    ಭುವನೇಶ್ವರ: ಪೆಥಾಯ್ ಚಂಡಮಾರುತಕ್ಕೆ ತತ್ತರಿಸಿದ ಒಡಿಶಾದಲ್ಲಿ ಮೂರೇ ದಿನದಲ್ಲಿ ಸುಮಾರು 250 ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿದೆ.

    ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯ ತತ್ತರಿಸಿ ಹೋಗಿದೆ. ಗಂಜಮ್ ಜಿಲ್ಲೆಯ ಲ್ಯಾಂಡಜುವಿಲಿ ಗ್ರಾಮದಲ್ಲಿ ಗುರುವಾರ ಒಂದೇ ದಿನಕ್ಕೆ ಸುಮಾರು 57 ಕರುಗಳು ಸಾವನ್ನಪ್ಪಿದ್ದವು. ಈ ವಿಷಯ ತಿಳಿಯುತ್ತಿದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಥಾಯ್ ಚಂಡಮಾರುತದ ಪರಿಣಾಮದಿಂದ ಜಾನುವಾರುಗಳು ಸಾವನ್ನಪ್ಪಿರುವ ಸಂಗತಿ ತಿಳಿದು ಬಂದಿದೆ.

    ಚಂಡಮಾರುತದಿಂದ ಒಡಿಶಾದಲ್ಲಿ ವಾತಾವರಣ ಹದಗೆಟ್ಟಿತ್ತು. ಇದರ ಪರಿಣಾಮವೆಂಬಂತೆ ಈ ಭಾಗದ ಜಾನುವಾರುಗಳು ನೇರವಾಗಿ ಮಳೆಯಲ್ಲಿ ಇದ್ದಿದ್ದರಿಂದ ಹಾಗೂ ಪ್ರದೇಶದಲ್ಲಿ ಹೆಚ್ಚು ಚಳಿ ಇದ್ದ ಕಾರಣಕ್ಕೆ ನ್ಯುಮೋನಿಯಾ ರೋಗ ಬಂದು ಮೃತಪಟ್ಟಿದೆ ಎಂದು ಸಹಾಯಕ ಜಿಲ್ಲಾ ಪಶುವೈದ್ಯಾಧಿಕಾರಿ ರವೀಂದ್ರನಾಥ್ ಪಾಂಡಾ ತಿಳಿಸಿದರು.

    ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿದ್ದ ಜಾನುವಾರುಗಳನ್ನು ಸುಡಲಾಯಿತು. ಅಲ್ಲದೆ ಗಂಜಮ್ ಜಿಲ್ಲೆಯ ಇತರೇ ಜಾನುವಾರುಗಳ ರಕ್ತದ ಪರೀಕ್ಷೆ ನಡೆಸಿ, ನ್ಯುಮೋನಿಯಾ ರೋಗ ಲಕ್ಷಣ ಕಂಡು ಬಂದರೆ ಚಿಕಿತ್ಸೆ ನೀಡಲು ಅಲ್ಲಿನ ಜಿಲ್ಲಾಡಳಿತ ಮುಂದಾಗಿದೆ.

    ಕಳೆದ ಮೂರು ದಿನಗಳಲ್ಲಿ ಸರಿ ಸುಮಾರು 259 ಜಾನುವಾರುಗಳಲ್ಲಿ 223 ಕರುಗಳು ಚಂಡಮಾರುತದ ಮಳೆಗೆ ಬಲಿಯಾಗಿದೆ ಎಂದು ವರದಿಯಾಗಿದೆ. ಪೆಥಾಯ್ ಚಂಡಮಾರುತಕ್ಕೆ ಒಡಿಶಾ ರಾಜ್ಯದ ಜನರ ಜೀವನ ಅಸ್ತವ್ಯಸ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv