Tag: PhD

  • 89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    89 ವರ್ಷ ವಯಸ್ಸಿನ ಅಜ್ಜನಿಗೆ ಡಾಕ್ಟರೇಟ್

    ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು. ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದನ್ನು ಧಾರವಾಡದ (Dharwad) ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ.

    ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ (Dodamani Markandeya) ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ (PHD) ಮುಗಿಸಿ ಇದೀಗ ಡಾಕ್ಟರೇಟ್ (Doctorate) ಪದವಿ ಪಡೆದುಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ನೂರಾರು ಜನ ಶಿವಶರಣರ ಬಗ್ಗೆ ಅಧ್ಯಯನ ಮಾಡಿ ಪಿಎಚ್‌ಡಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್‌ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಸೋನಿಯಾ ಗಾಂಧಿ ರಾಜ್ಯಸಭೆಗೆ ಸ್ಪರ್ಧೆ

    ಈ ಅವಧಿಯಲ್ಲಿ ಅವರ ಗೈಡ್ ನಿಧನರಾದ ಹಿನ್ನೆಲೆ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಇತರ ಕಡೆಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಬಗ್ಗೆ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ಅವರು ಸಿದ್ಧಪಡಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್‌ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ

    ಡೋಹರ ಸಮುದಾಯದ ಚರಿತ್ರೆ, ಬಸವಣ್ಣನವರ ವಚನಗಳಲ್ಲಿ ಕಕ್ಕಯ್ಯನವರನ್ನು ಸ್ಮರಿಸಿಕೊಂಡಿರುವುದು, ಧಾರವಾಡ ಸಮೀಪದಲ್ಲೇ ಕಕ್ಕಯ್ಯ ಪ್ರಾಣ ಬಿಟ್ಟಿರುವುದು, ಗುಜರಾತ್, ಕಾಶ್ಮೀರ ಮತ್ತು ತಮಿಳುನಾಡು ಮೂಲದಿಂದ ಕಲ್ಯಾಣಕ್ಕೆ ಬಂದ ಶಿವಶರಣರ ನಂಟು ಇವೆಲ್ಲದರ ಮೇಲೆ ಮಾರ್ಕಂಡೇಯ ಸಮಗ್ರ ಬೆಳಕು ಚೆಲ್ಲಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಗೋಪಾಲಯ್ಯಗೆ ಕೊಲೆ ಬೆದರಿಕೆ – ಮಾಜಿ ಕಾರ್ಪೊರೇಟರ್ ಪದ್ಮರಾಜ್ ವಿರುದ್ಧ ಎಫ್‌ಐಆರ್

  • ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಹಣ ಪೀಕುತ್ತಿದ್ದ ಪಿಹೆಚ್‍ಡಿ ಹೋಲ್ಡರ್ ಅರೆಸ್ಟ್

    ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಹಣ ಪೀಕುತ್ತಿದ್ದ ಪಿಹೆಚ್‍ಡಿ ಹೋಲ್ಡರ್ ಅರೆಸ್ಟ್

    ಭುವನೇಶ್ವರ: ವಿಜಿಲೆನ್ಸ್ ಅಧಿಕಾರಿ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಹಣ ಪೀಕುತ್ತಿದ್ದ ಪಿಎಚ್‍ಡಿ (PHD) ಹೋಲ್ಡರ್ ಒಬ್ಬನನ್ನು ಒಡಿಶಾ ವಿಶೇಷ ಪೊಲೀಸ್ ಪಡೆ (Special task force of Odisha Police) ಭಾನುವಾರ ಬಂಧಿಸಿದೆ.

    ಆರೋಪಿಯನ್ನು ಪುರಿ ಜಿಲ್ಲೆಯ ಫುಲ್ಬರಿ (Phulbari) ನಿವಾಸಿ ಮನೋಜ್ ಕುಮಾರ್ ಮಾಝಿ ಎಂದು ಗುರುತಿಸಲಾಗಿದೆ. ಆರೋಪಿ ರಸಾಯನಶಾಸ್ತ್ರದಲ್ಲಿ (Chemistry) ಎಂಎಸ್‍ಸಿ (MSc) ಪದವಿ ಪೂರೈಸಿದ್ದಾನೆ. ಅಲ್ಲದೆ ಸಂಬಲ್ಪುರ ವಿಶ್ವವಿದ್ಯಾಲಯದಿಂದ (Sambalpur University) ಪಿಎಚ್‍ಡಿ ಪಡೆದಿದ್ದಾನೆ. ಈತ ಎಂಜಿನಿಯರ್‌ಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ 15 ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 50,000 ರೂ.ಗೆ 17 ವರ್ಷದ ಅಪ್ರಾಪ್ತೆಯ ಮಾರಾಟ – ನಾಲ್ವರ ಬಂಧನ

    ಎಂಜಿನಿಯರ್ ಒಬ್ಬರಿಗೆ ಆರೋಪಿ ಒಂದು ಕೋಟಿ ರೂ. ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಎಂಜಿನಿಯರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

    ವಿಚಾರಣೆ ವೇಳೆ ಆರೋಪಿಯು, ಹಲವು ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ಯತ್ನಿಸಿದ್ದೆ. ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಸದಸ್ಯೆಯ ಪತಿ ಹತ್ಯೆ ಪ್ರಕರಣ – ನಾಪತ್ತೆಯಾದ ಐವರ ವಿರುದ್ಧ ಕೇಸ್

  • ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ

    ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ

    ನವದೆಹಲಿ: ಮದ್ರಾಸ್‍ (Madras) ನಲ್ಲಿರುವ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪಿಹೆಚ್‍ಡಿ (PhD) ಓದುತ್ತಿರುವ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾಗಿದ್ದು, ಇದು ಈ ವರ್ಷದಲ್ಲಿ ನಡೆದ ಮೂರನೇ ಘಟನೆಯಾಗಿದೆ.

    ಮೃತನನ್ನು ಸಚಿನ್ (32) ಎಂದು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳ ಮೂಲದವನಾಗಿದ್ದಾನೆ. ಈತ ಮದ್ರಾಸ್ ಐಐಟಿನಲ್ಲಿ ಪಿಹೆಚ್‍ಡಿ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಆತ್ಮಹತ್ಯೆಗೂ ಕೆಲ ಗಂಟೆಗಳ ಹಿಂದೆ ವಿದ್ಯಾರ್ಥಿ ವಾಟ್ಸಪ್ ಸ್ಟೇಟಸ್ (Whatsapp Status) ಹಾಕಿದ್ದಾನೆ. ಅದರಲ್ಲಿ ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನು ಅಲ್ಲ ಎಂದು ಬರೆದುಕೊಂಡಿದ್ದಾನೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ

    ವಿದ್ಯಾರ್ಥಿ ಈ ರೀತಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದನ್ನು ನೋಡಿದ ಓರ್ವ ಗೆಳೆಯ, ಕೂಡಲೇ ಆತನ ಮನೆಗೆ ಓಡಿದ್ದಾನೆ. ಆದರೆ ಅದಾಗಲೇ ವಿದ್ಯಾರ್ಥಿ ಕುಣಿಕೆಗೆ ಕೊರಳೊಡ್ಡಿರುವುದು ಬೆಳಕಿಗೆ ಬಂದಿದೆ. ಕೂಡಲೇ ಆತ ಅಂಬುಲೆನ್ಸ್ ಗೆ ಕರೆ ಮಾಡಿದ್ದು, ಆದರೆ ಅದಾಗಲೇ ಸಚಿನ್ ಮೃತಪಟ್ಟಿದ್ದನು.

    ಸಚಿನ್ ಮೃತದೇಹವನ್ನು ರೊಯಪೇಟೆ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರ್ಷದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, 2018ರಿಂದ ಇದುವರೆಗೆ ಒಟ್ಟು 11 ಮಂದಿ ಆತ್ಮಹತ್ಯೆಗೆ ಶರಣಾಗಿರುವುದು ವರದಿಯಾಗಿದೆ.

  • ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ

    ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ

    ಬೆಳಗಾವಿ: ಕಾಂಗ್ರೆಸ್ (Congress) ನಾಯಕರು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ (PHD) ಪಡೆದಿದ್ದಾರೆ, ಬೆಂಗಳೂರನ್ನ ಹಾಳು ಮಾಡಿದ್ದಾರೆ. ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರ ಎನ್ನುವಂತಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಗುಡುಗಿದ್ದಾರೆ.

    ತಾಲೂಕಿನ ಸಾಂಬ್ರಾ ಏರ್ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ (Bengaluru) ಒತ್ತುವರಿ ಆಗಿದ್ದು, ರಾಜಕಾಲುವೆ ಮುಚ್ಚಿಹೋಗಿದ್ದು, ರಾಜಕಾಲುವೆ (Rajakaluve) ಹೆಸರಲ್ಲಿ ಭ್ರಷ್ಟಾಚಾರ ಮಾಡಿದ್ದು ಹೀಗೆ ಹತ್ತು ಹಲವು ಹಗರಣ ಅವರ ಕಾಲದಲ್ಲಿ ಆಗಿವೆ. ಲೋಕಾಯುಕ್ತ ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಇದೆಲ್ಲವನ್ನೂ ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಭ್ರಷ್ಟಾಚಾರ ಕಾಂಗ್ರೆಸ್‌ನ ಅವಿಭಾಜ್ಯ ಅಂಗ. ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಭ್ರಷ್ಟಾಚಾರವಾಗಿದೆ. ಅವರು ಒಂದು ಕಡೆ ಪ್ರತಿಭಟನೆ ಮಾಡಿದ್ರೆ ಯಾರೂ ಬರಲ್ಲ. ಆದ್ದರಿಂದ ಮುನ್ನೂರು ಕಡೆ ಮಾಡ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಅಜ್ಮೀರ್ ದರ್ಗಾಗೆ ರೆಡ್ಡಿ ಭೇಟಿ – ಕಾಂಗ್ರೆಸ್ ಪಾಳಯಕ್ಕೆ ಮರ್ಮಾಘಾತ

    ಲೋಕಾಯುಕ್ತ (Karnataka Lokayukta) ಎಂಬ ಇಂಡಿಪೆಂಡೆಂಟ್ ಬಾಡಿ ಮುಚ್ಚಿ ಹಾಕಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದರು. ಅವರೇ ಮಾಡಿದ ಸ್ವಂತ ಭ್ರಷ್ಟಾಚಾರ ಮುಚ್ಚಿ ಹಾಕಿದ್ದರು. ಅವರ ವಿರುದ್ಧ ಇದ್ದ ಎಲ್ಲ ಕಂಪ್ಲೆಂಟ್ ಎಸಿಬಿಗೆ ಕೊಟ್ಟು ಮುಚ್ಚಿ ಹಾಕಿದ್ದರು. ಈಗ ಯರ‍್ಯಾರು ಕಂಪ್ಲೆಂಟ್ ಕೊಟ್ಟಿದ್ದಾರೋ ಅವೆಲ್ಲವೂ ಲೋಕಾಯುಕ್ತಕ್ಕೆ ರೆಫರ್ ಆಗಿ ಮತ್ತೆ ತನಿಖೆ ಆಗುತ್ತದೆ. ಅವರು ಅದರಲ್ಲಿ ಮೊದಲು ಸ್ವಚ್ಛವಾಗಿ ಬರಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿ ತ್ರಿ ಸದಸ್ಯ ಪೀಠದಲ್ಲಿ ಹಿಜಬ್ ಪ್ರಕರಣದ ವಿಚಾರಣೆ ನಡೆಸಲಾಗುವುದು: ಸಿಜೆಐ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    ನಾನೂ ಗೂಂಡಾಗಿರಿ ಮಾಡ್ತಿದ್ದೆ, ಜೀನ್ಸ್ ಪ್ಯಾಂಟ್ ಹಾಕ್ಕೊಂಡ್ರೆ ಹುಡ್ಗೀರೆಲ್ಲಾ ನನ್ನೇ ನೋಡ್ತಿದ್ರು: ಶ್ರೀರಾಮುಲು

    ಬಳ್ಳಾರಿ: ಮೊದಲು ನಾನೂ ಗೂಂಡಾಗಿರಿ ಮಾಡ್ತಿದ್ದೆ, ತುಂಬಾ ಜಗಳ ಮಾಡ್ತಿದ್ದೆ. ಬಡವರಿಗೆ ಯಾರಾದ್ರೂ ತೊಂದರೆ ಕೊಟ್ಟಾಗ ಮಾತ್ರ ಗೂಂಡಾಗಿರಿ ಮಾಡುತ್ತಾ, ಅವರ ಪರವಾಗಿ ನಿಲ್ಲುತ್ತಿದೆ. ಬಡವರ ಪರವಾಗಿ ನಿಂತು ಜಗಳವಾಡಿ 14-15 ಬಾರಿ ಜೈಲಿಗೂ ಹೋಗಿದ್ದೆ ಎಂದು ಸಚಿವ ಶ್ರೀರಾಮುಲು (Sriramulu) ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ವೀರಶೈವ ವಿದ್ಯಾವರ್ಧಕ ಸಂಘದ ಎಸ್‌ಜಿ ಕಾಲೇಜಿನ (SG College) ಅಮೃತ ಮಹೋತ್ಸವ ಮತ್ತು ದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: Breaking News- ಅನಿರುದ್ಧ ಬ್ಯಾನ್ ವಿಚಾರ: ಫಿಲ್ಮ್ ಚೇಂಬರ್ ಗೆ ಬಾರದಿರಲು ನಿರ್ಮಾಪಕರ ಸಂಘ ನಿರ್ಧಾರ

    ನಾನೂ ಗೂಂಡಾಗಿರಿ ಮಾಡ್ತಿದ್ದೆ. ಯಾರಾದರೂ ಬಡವರಿಗೆ ತೊಂದರೆ ಕೊಟ್ಟಾಗ ಮಾತ್ರ ಅವರ ಪರವಾಗಿ ನಿಂತು ಜಗಳವಾಡುತ್ತಿದೆ. ಅದಕ್ಕಾಗಿ ಜೈಲಿಗೂ ಹೋಗಿ ಬಂದಿದ್ದೇನೆ. ನಮ್ಮಪ್ಪ ವಕೀಲರ (Lawyer) ಬಳಿ ಬೇಲ್ ಕೇಳೋದಕ್ಕೆ ಹೋದಾಗಲೆಲ್ಲಾ ಎಷ್ಟು ಬಾರಿ ಬೇಲ್ ಕೊಡಬೇಕು ಅವನಿಗೆ ಎಂದು ಸಿಡಿಮಿಡಿಗೊಳ್ಳುತ್ತಿದ್ದರು. ಅಲ್ಲದೇ ನಿಮ್ಮಪ್ಪನಿಂದಲೇ ನಾನು ದುಡಿಯೋದಕ್ಕೆ ಹೋಗ್ತಿದ್ದೀನಿ ಅಂತ ವಕೀಲರು ನನ್ನ ಬಳಿ ಹೇಳ್ತಿದ್ದರು. ಇಂತಹ ನೆನಪುಗಳನ್ನು ನಾವು ಮರೆಯಬಾರದು ಎಂದು ಮುಗುಳ್ನಕ್ಕರು. ಇದನ್ನೂ ಓದಿ: ಜನಾರ್ದನ ರೆಡ್ಡಿ ನನ್ನ ಆಪ್ತಮಿತ್ರ, ಸ್ನೇಹಕ್ಕಾಗಿ ಪ್ರಾಣ ಕೊಡಲು ಸಿದ್ಧ: ಶ್ರೀರಾಮುಲು

    ನಾನು ಜೀನ್ಸ್‌ಪ್ಯಾಂಟ್‌ (Jeans Pant) ಹಾಕಿಕೊಂಡು ಹೋದ್ರೆ ಹುಡುಗೀರೆಲ್ಲಾ ನನ್ನನ್ನೇ ನೋಡ್ತಿದ್ರು. ಆದ್ರೆ ನಾನು ಬೇರೆಕಡೆ ಹೋಗಿ ಮಾತನಾಡುತ್ತಿರಲಿಲ್ಲ. ನಮ್ಮೂರಿನಲ್ಲಿ ಮಾತ್ರ ಮಾತನಾಡುತ್ತಿದೆ. ನೀವೇ ಹೇಳಿ ನಾನು ಮಾತನಾಡಿದ್ದು ತಪ್ಪಾ? ಎಂದು ಸಭೀಕರನ್ನೇ ಪ್ರಶ್ನಿಸಿದರು.

    ನಾನು ಪರೀಕ್ಷೆಯಲ್ಲಿ ಕಾಪಿ ಹೊಡೆದು ಪಾಸಾಗಿದ್ದೇನೆ, ಕಾಪಿ ಹೊಡೆಯುವುದಲ್ಲಿ ಪಿಹೆಚ್‌ಡಿ (PHD) ಮಾಡಿದ್ದೇನೆ ಎಂದು ಮನಬಿಚ್ಚಿ ಮಾತನಾಡಿದ ಶ್ರೀರಾಮುಲು ತಮ್ಮ ಶಿಕ್ಷಕರನ್ನು ಸ್ಮರಿಸಿದರು.

    Live Tv
    [brid partner=56869869 player=32851 video=960834 autoplay=true]

  • ಪಿಎಚ್‍ಡಿ ವಿದ್ಯಾರ್ಥಿನಿಗೆ ಕಿರುಕುಳ – ಪ್ರಾಧ್ಯಾಪಕ ಬಂಧನ

    ಪಿಎಚ್‍ಡಿ ವಿದ್ಯಾರ್ಥಿನಿಗೆ ಕಿರುಕುಳ – ಪ್ರಾಧ್ಯಾಪಕ ಬಂಧನ

    ಮಂಗಳೂರು: ನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಪಿಎಚ್‍ಡಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಡಿ ಪ್ರಾಧ್ಯಾಪಕನೋರ್ವನನ್ನು ಮಂಗಳೂರು ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಮಮತಾಗೆ ಭರ್ಜರಿ ಜಯ – 2024ರಲ್ಲಿ ದೆಹಲಿಯಲ್ಲಿ ನಮ್ಮದೇ ಸರ್ಕಾರ ಎಂದ ಟಿಎಂಸಿ

    ಆಂಧ್ರಪ್ರದೇಶದ ಪ್ರತಿಷ್ಠಿತ ವಿವಿಯ ಪ್ರಾಧ್ಯಾಪಕ ಡಾ.ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿ. ಮಂಗಳೂರಿನ ವಿದ್ಯಾರ್ಥಿನಿ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಮಾಡುತ್ತಿದ್ದರು, ಈ ಮಧ್ಯೆ ಪರಿಚಯವಾದ ಸುಧೀರ್ ತನ್ನನ್ನು ಮಾರ್ಗದರ್ಶಕನಾಗಿ ನೇಮಿಸುವಂತೆ ಒತ್ತಾಯಿಸಿದ್ದ. ಆದರೆ ವಿ.ವಿಯ ಅನುಮತಿ ಕೇಳಿದಾಗ ಆತನಿಗೆ ಅರ್ಹತೆಯಿಲ್ಲ ಎಂದು ನಿರಾಕರಿಸಲಾಗಿತ್ತು. ಬಳಿಕ ವಿದ್ಯಾರ್ಥಿನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದನ್ನೂ ಓದಿ: ಹೈ ಪ್ರೊಫೈಲ್ ಡ್ರಗ್ಸ್ ಕೇಸ್- ಶಾರುಖ್ ಖಾನ್ ಪುತ್ರನಿಗೆ ಬಂಧನ ಭೀತಿ

    ಸುಧೀರ್ ವಿದ್ಯಾರ್ಥಿನಿ ಮತ್ತು ಮನೆಯವರಿಗೆ ಕಿರುಕುಳ ನೀಡುವುದನ್ನು ಸಹಿಸಲಾಗದೆ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾರ್ಥಿನಿಯ ಫೋಟೋ ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದರಿಂದ ವಿದ್ಯಾರ್ಥಿನಿಯ ಮನೆಯವರ ದೂರಿನ ಹಿನ್ನೆಲೆ ಆರೋಪಿಯನ್ನು ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ನವೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಸುಧಾಕರ್

  • ಪಿಎಚ್‍ಡಿ ವ್ಯಾಸಂಗ ಬೇಡ ಎಂದ ಪಾಲಕರು- ಯುವತಿ ಆತ್ಮಹತ್ಯೆ

    ಪಿಎಚ್‍ಡಿ ವ್ಯಾಸಂಗ ಬೇಡ ಎಂದ ಪಾಲಕರು- ಯುವತಿ ಆತ್ಮಹತ್ಯೆ

    ಬಳ್ಳಾರಿ: ಪಿಎಚ್‍ಡಿ ವ್ಯಾಸಂಗ ಮಾಡುವುದು ಬೇಡ ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಡೆದಿದೆ.

    ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಯು.ಎನ್. ಪೂಜಾ(24) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪೂಜಾ ಎಂ.ಎಸ್ಸಿ ಮುಗಿಸಿಕೊಂಡು ಬಿ.ಎಡ್ ಮಾಡುತ್ತಿದ್ದರು. ಈಗ ಪಿಎಚ್‍ಡಿ ಮಾಡುವುದದಾಗಿ ತಂದೆಯೊಂದಿಗೆ ತನ್ನ ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ತಂದೆ ನಾಗರಾಜ್, ಪಿಎಚ್‍ಡಿ ಮಾಡುವುದು ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ದರೋಡೆ ಮಾಡಿ ಮನೆ ಮಾಲೀಕರಿಗೆ ಖರ್ಚಿಗೆ ಹಣ ಕೊಟ್ರು

    ತಂದೆ ಪಿಎಚ್‍ಡಿ ಮಾಡುವುದು ಬೇಡ ಎಂದಿದ್ದಕ್ಕೆ ಬೇಸರದಿಂದ ಪೂಜಾ ತನ್ನ ರೂಂ ಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾರೆ. ತುಂಬಾ ಹೊತ್ತಿನ ಬಳಿಕ ರೂಂ ನಿಂದ ಪೂಜಾ ಹೊರಗಡೆ ಬರದೆ ಇದ್ದದನ್ನು ಗಮನಿಸಿ, ಬಾಗಿಲು ಒಡೆದು ಒಳಪ್ರವೇಶಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮತ್ತೊಂದು ಹೈ ಪ್ರೊಫೈಲ್ ಕೇಸ್ ಆಗುತ್ತಾ ಗೋವಿಂದಪುರ ಡ್ರಗ್ ಪ್ರಕರಣ?

  • 67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    ಗಾಂಧಿನಗರ: ಸಾಧನೆಗೆ ವಯಸ್ಸಿನ ಅಂತರವಿಲ್ಲ ಎಂಬುದನ್ನು ಗುಜರಾತ್‍ನ ವೃದ್ಧೆಯೊಬ್ಬರು ಪಿಹೆಚ್‍ಡಿ ಪದವಿಯನ್ನು ಪಡೆದುಕೊಳ್ಳುವ ಮೂಲಕವಾಗಿ ಸಾಬೀತು ಮಾಡಿದ್ದಾರೆ.

    ಗುಜರಾತ್‍ನ ವಡೋರಾದ ಉಷಾ ಲೊದಯ ಅವರು 20 ವರ್ಷ ವಯಸ್ಸಿನವರಿದ್ದಗಲೇ ಕಾಲೇಜ್ ಬಿಟ್ಟು ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆಗಿನಿಂದಲೂ ಅವರಿಗೆ ಪಿಹೆಚ್‍ಡಿ ಮುಗಿಸಿ ಡಾಕ್ಟರೇಟ್ ಪಡೆಯುವ ಆಸೆಯೊಂದು ಇತ್ತು. ಆದರೆ ಆಗ ಸಾಧ್ಯವಾಗಿರಲಿಲ್ಲ. ಇದೀಗ ವೃದ್ಧಾಪ್ಯದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಜೈನಿಸಮ್ ವಿಷಯದಲ್ಲಿ ಉಷಾ ಲೊದಯ ಅವರು ಪಿಹೆಚ್‍ಡಿ ಮುಗಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಪಿಹೆಚ್‍ಡಿ ಮಾಡುವ ಇವರ ಕನಸಿಗೆ ಮಗಳು ನೀರೆರೆದಿದ್ದಾರೆ. ಉಷಾ ತನ್ನ 67 ನೇ ವಯಸ್ಸಿನಲ್ಲಿ ಡಾಕ್ಟರೇಟ್ ಪೂರ್ಣಗೊಳಿಸಿದ್ದಕ್ಕಾಗಿ ನೆಟ್ಟಿಗರು ಶ್ಲಾಘಿಸಿದ್ದಾರೆ. ವಯಸ್ಸು ಸಾಧನೆಗೆ ಯಾವುದೇ ಅಡ್ಡಿಯಿಲ್ಲ, ನೀವು ಸ್ಫೂರ್ತಿ ಎಂದೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಾನು ಮದುವೆಯಾದ ಮೊದಲ ವರ್ಷ ಪದವಿ ಮಾಡುತ್ತಿದ್ದೆ. ನನಗೆ ಆಗಿನಿಂದಲೂ ಡಾಕ್ಟರ್ ಆಗಬೇಕೆಂಬ ಕನಸಿತ್ತು. ನನ್ನ ಪೋಷಕರು ನನಗೆ ವಿದ್ಯಾಭ್ಯಾಸ ಮುಂದುವರೆಸಲು ಹೇಳಿದರು. ನನಗೆ ಅದರ ಮೇಲೆ ಪೋಕಸ್ ಮಾಡಲಾಗಲಿಲ್ಲ. ಆದರೆ ಈಗ ಪಿಹೆಚ್‍ಡಿ ಮುಗಿಸಿದ್ದು, ನನಗೆ ತೃಪ್ತಿ ತಂದಿದೆ ಎಂದು ಉಷಾ ಹೇಳಿದ್ದಾರೆ.

  • ಮಂಗಳೂರಿನ ಯೆನೆಪೋಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಜೀವನ್ ರಾಜ್‍ಗೆ ಪಿಎಚ್‍ಡಿ ಪದವಿ

    ಮಂಗಳೂರಿನ ಯೆನೆಪೋಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಜೀವನ್ ರಾಜ್‍ಗೆ ಪಿಎಚ್‍ಡಿ ಪದವಿ

    ಮಂಗಳೂರು: ಯೆನೆಪೋಯ (ಡಿಮ್ಡ್ ಟು ಬಿ ಯುವರ್ಸಿಟಿ)ಯ, ದಿ ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಅಸಿಸ್ಟೆಂಟ್ ಪ್ರೋಫೆಸರ್ ಹಾಗೂ ಅಸಿಸ್ಟೆಂಟ್ ಕಂಟ್ರೋಲರ್ ಆಫ್ ಎಗ್ಸಾಮಿನೇಶನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೀವನ್ ರಾಜ್ ಹಂಪಿ ವಿಶ್ವ ವಿದ್ಯಾನಿಲಯದಿಂದ “ಹೊಸ ಆರ್ಥಿಕ ನೀತಿ ಮತ್ತು ಶೈಕ್ಷಣಿಕ ವಲಯ: ದಕ್ಷಿಣ ಕನ್ನಡ ಜಿಲ್ಲೆಯನ್ನು ಅನುಲಕ್ಷಿಸಿ ಒಂದು ಅಧ್ಯಯನ”. (New Economic Policy and Education Sector: A study with Reference to Dakshina Kannada District) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದಿದ್ದಾರೆ.

    ಪ್ರಾಧ್ಯಾಪಕರಾಗಿ 11 ವರ್ಷಗಳ ಅನುಭವವುಳ್ಳ ಇವರು ಹಿಂದೆ ಸಂತ ಅಲೋಶಿಯಸ್ ಮತ್ತು ಕಣಚೂರು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಇವರು ಎಂ.ಕಾಂ ಪದವಿಯನ್ನು ಸೈಂಟ್ ಅಲೋಶಿಯಸ್ ಕಾಲೇಜ್ ನಲ್ಲಿ ಪಡೆದಿದ್ದಾರೆ. ಮಾತ್ರವಲ್ಲದೆ ಯೆನೆಪೋಯ ವಿವಿಯ “ಉತ್ತಮ ಶಿಕ್ಷಕ -2019” ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.

    ಸರ್ಕಾರಿ ಶಾಲೆ ಉಳಿಸಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಅನೇಕ ಸಾಮಾಜಿಕ ಮತ್ತು ಸಾಹಿತ್ಯ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಸೌಹಾರ್ದ ಕಲಾವಿದರು ಕುತ್ತಾರ್ ಇಲ್ಲಿ ಸಾಂಸ್ಕೃತಿಕ ಚಟುವಟಿಕೆ ಆರಂಭಿಸಿದ ಅವರು, ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲದೆ ಮುನ್ನೂರು ಗ್ರಾಮದ ಹೆಸರಾಂತ ಸಂಸ್ಥೆ ಹನುಮಾನ್ ಕ್ರೀಡಾಮಂಡಳಿಯ ಸದಸ್ಯರು ಆಗಿದ್ದಾರೆ.

    ಸದ್ಯ ಅಭಿಮತ ಮಂಗಳೂರು ಇದರ ಮುಖ್ಯ ಸಂಘಟಕರಾಗಿರುವ ಜೀವನ್ ರಾಜ್ ಕುತ್ತಾರ್ ಸಾಹಿತ್ಯ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಜನರಿಗಾಗಿ ಸಾಹಿತ್ಯ ಎಂಬ ನಿಲುವಿನೊಂದಿಗೆ ನಡೆಯುತ್ತಿರುವ “ಜನನುಡಿ” ಸಂಘಟಕರಲ್ಲಿ ಜೀವನ್ ರಾಜ್ ಕೂಡಾ ಒಬ್ಬರು. ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಜೀವನ್ ರಾಜ್, ಹಂಪಿ ವಿವಿಯಿಂದ ಪಿಎಚ್‍ಡಿ ಪದವಿ ಪಡೆದಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕ್ಷೇತ್ರದ ಹಲವರು ಅಭಿನಂದಿಸಿದ್ದಾರೆ.

  • ರಾಯಚೂರು: ಪಿಎಚ್‍ಡಿ ಗೋಲ್ಮಾಲ್ ಪ್ರಶ್ನಿಸಿದ್ದಕ್ಕೆ ಕೃಷಿ ವಿವಿಯ ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ

    ರಾಯಚೂರು: ಪಿಎಚ್‍ಡಿ ಗೋಲ್‍ಮಾಲ್ ಪ್ರಶ್ನಿಸಿದ್ದಕ್ಕೆ ವಿವಿ ಹಿರಿಯ ಅಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಕೊಲೆಬೆದರಿಕೆ ಹಾಕಿರೋ ಪ್ರಕರಣ ರಾಯಚೂರು ಕೃಷಿ ವಿಶ್ವ ವಿದ್ಯಾಲಯದಲ್ಲಿ ಬೆಳಕಿಗೆ ಬಂದಿದೆ.

    ವಿವಿಯ ಕೃಷಿ ವಿಜ್ಞಾನ ಕೇಂದ್ರದ 16 ಎಕರೆ ಕೃಷಿ ಫಾರ್ಮ್‍ನ ವ್ಯವಸ್ಥಾಪಕಿ ಅನಿತಾ ಹಿರಿಯ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದಾಗಿ ಹೇಳಿದ್ದಾರೆ. ವಿವಿ ಜಮೀನಿನಲ್ಲಿ ಏನೇ ಸಂಶೋಧನಾ ಬೆಳೆ ಬೆಳೆದರೂ ಅದರ ಕಟಾವ್‍ನಿಂದ ಮಾರಾಟದವರೆಗೆ ಅನಿತಾರದ್ದೇ ಜವಾಬ್ದಾರಿ. ಆದ್ರೆ ಇಲ್ಲಿ ಅಧ್ಯಾಪಕರಾಗಿರುವ ಮೋಹನ್ ಚೌಹಾಣ್ ತಮ್ಮ ಪಿಎಚ್‍ಡಿ ಪದವಿಗಾಗಿ ನಡೆಸಿರುವ ಸಹಜ ಹತ್ತಿ ಮೇಲಿನ ಸಂಶೋಧನೆಯಲ್ಲಿ ಗೋಲ್‍ಮಾಲ್ ಮಾಡಿರುವುದನ್ನ ಬಹಿರಂಗ ಪಡಿಸಿದ್ದೇ ಕಿರುಕುಳಕ್ಕೆ ಕಾರಣ ಎನ್ನಲಾಗಿದೆ.

    ಕೆ.ವಿ.ಕೆ. ಫಾರ್ಮ್‍ನಲ್ಲಿ ಬೆಳೆಯದ 300 ಕೆ.ಜಿ. ಬಿಟಿ ಹತ್ತಿಯನ್ನ ತಂದು ಸ್ಟೋರ್‍ನಲ್ಲಿಟ್ಟು ಸಂಶೋಧನಾ ಬೆಳೆ ಅಂತ ಮೋಹನ್ ಚೌಹಾಣ್ ಮಂಡಿಸಲು ಮುಂದಾಗಿದ್ದು, ಇದಕ್ಕೆ ಅನಿತಾ ವಿರೋಧ ವ್ಯಕ್ತಪಡಿಸಿ ವಿವಿ ಕುಲಪತಿ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಸಂಶೋಧನಾ ಮಾರ್ಗದರ್ಶಕ ಡಾ.ಸತ್ಯನಾರಾಯಣ್, ವಿಸ್ತರಣಾ ನಿರ್ದೇಶಕ ಎಸ್.ಕೆ.ಮೇಟಿ ನಕಲಿ ಸಂಶೋಧನೆಗೆ ಪಿಎಚ್‍ಡಿ ಕೊಡಿಸಲು ಮುಂದಾಗಿದ್ದು, ಸುಮ್ಮನಿರುವಂತೆ ಅನಿತಾಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ದೂರು ನೀಡಿದ್ದರಿಂದ ಶಿಕ್ಷಣ ನಿರ್ದೇಶಕ ಡಾ.ಬಿ.ವಿ.ಪಾಟೀಲ್, ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ.ಅಮರೇಶ್ ಕೊಲೆಬೆದರಿಕೆ ಹಾಕಿದ್ದಾರೆ ಅಂತ ಅನಿತಾ ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾಗಿದ್ದಾರೆ.

    ಮೋಹನ್ ಚೌಹಾಣ್ ಸಂಶೋಧನೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದಾಗಿನಿಂದ ಕಚೇರಿಯಲ್ಲಿ ಯಾವುದೇ ಕೆಲಸವನ್ನ ಕೊಡುತ್ತಿಲ್ಲ. ಅಲ್ಲದೆ ಕಚೇರಿಯಲ್ಲಿನ ಸಿಬ್ಬಂದಿಗಳು ಚೌಹಾಣ್ ಪರವಾಗಿದ್ದು ಸಾಮೂಹಿಕ ವರ್ಗಾವಣೆಗೆ ಅರ್ಜಿ ಹಾಕುವ ಮೂಲಕ ನನ್ನ ವಿರುದ್ದ ದೂರು ನೀಡಿದ್ದಾರೆ. ಕೃಷಿ ವಿವಿಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನಗೇ ಶಿಕ್ಷೆ ನೀಡುತ್ತಿದ್ದಾರೆ ಅನ್ನೋದು ಅನಿತಾ ಅಳಲು. ಅನಿತಾ ದೂರಿನ ಮೇರೆಗೆ ವಿವಿ ಕುಲಪತಿ ಡಾ.ಪಿ.ಎಂ.ಸಾಲಿಮಠ್ ಈಗಾಗಲೇ ಸತ್ಯ ಶೋಧನಾ ಸಮಿತಿ ರಚಿಸಿದ್ದು ವರದಿ ಬರುವುದು ಬಾಕಿಯಿದೆ.

    ಇತ್ತೀಚಿಗಷ್ಟೇ ಇಲ್ಲಿನ ಕೆಲ ಪ್ರೋಫೆಸರ್‍ಗಳು ನಕಲಿ ದಾಖಲೆಗಳಿಂದ ಕಲಂ 371 ಜೆ ಪ್ರಮಾಣಪತ್ರ ಪಡೆದು ಸುದ್ದಿಯಾಗಿದ್ರು.