Tag: Pharmacy

  • ಅನಿಲ ಸೋರಿಕೆಯಾಗಿ ಭೀಕರ ಸ್ಫೋಟ – 4 ಸಾವು, ಒಬ್ಬರಿಗೆ ಗಾಯ

    ಅನಿಲ ಸೋರಿಕೆಯಾಗಿ ಭೀಕರ ಸ್ಫೋಟ – 4 ಸಾವು, ಒಬ್ಬರಿಗೆ ಗಾಯ

    ಅಮರಾವತಿ: ಔಷಧಿ ಅಂಗಡಿಯೊಂದರಲ್ಲಿ (Pharmacy) ಅನಿಲ ಸೋರಿಕೆಯಾಗಿ (Gas Leakage) ಭೀಕರ ಸ್ಫೋಟ (Explosion) ಸಂಭವಿಸಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನಲ್ಲಿ (Visakhapatnam) ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯಗಳಾಗಿವೆ.

    ವಿಶಾಖಪಟ್ಟಣಂ ಸಮೀಪದ ಅನಕಪಲ್ಲಿ ಜಿಲ್ಲೆಯ ಜವಾಹರಲಾಲ್ ನೆಹರು ಫಾರ್ಮಸಿಯಲ್ಲಿ ಸೋಮವಾರ ಈ ಭೀಕರ ಘಟನೆ ನಡೆದಿದೆ. ಸಂಜೆ 3 ಗಂಟೆ ವೇಳೆಗೆ ಫಾರ್ಮಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಔಷಧ ಅಂಗಡಿಯಲ್ಲಿದ್ದ ಕೆಲಸಗಾರರು ಬೆಂಕಿಯನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ಅನಿಲ ಸೋರಿಕೆ ಹಿನ್ನೆಲೆ ಭೀಕರ ಸ್ಫೋಟ ಸಂಭವಿಸಿದೆ. ಇದನ್ನೂ ಓದಿ: ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಔಷಧಾಲಯದ ಆಡಳಿತದ ಪ್ರಕಾರ, ವಿಶಾಖಪಟ್ಟಣಂನ ಫಾರ್ಮಾ ಸಿಟಿಯಲ್ಲಿರುವ ಲಾರಸ್ ಕಂಪನಿಯ ಯುನಿಟ್-3ರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಂಭವಿಸಿದೆ. ಸ್ಫೋಟ ಉಂಟಾದ ಬಳಿಕ ಅಗ್ನಿಶಾಮಕ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ತಿಳಿಸಿದೆ.

    ಮೃತರನ್ನು ಖಮ್ಮಂ ಮೂಲದ ಬಿ ರಾಂಬಾಬು, ಗುಂಟೂರಿನ ರಾಜೇಪ್ ಬಾಬು, ಕೋಟಪಾಡುವಿನ ಆರ್ ರಾಮಕೃಷ್ಣ ಮತ್ತು ಚೋಡಾವರಂನ ಮಜ್ಜಿ ವೆಂಕಟರಾವ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸತೀಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಭೀಕರ ಸುನಾಮಿಗೆ 60 ಮಂದಿ ಬಲಿ – 15 ಸಾವಿರ ವಿಮಾನಗಳ ಸಂಚಾರ ರದ್ದು

    Live Tv
    [brid partner=56869869 player=32851 video=960834 autoplay=true]

  • ಗಾಯಗೊಂಡು ಫಾರ್ಮಸಿಗೆ ಬಂದ ಶ್ವಾನ -ವಿಡಿಯೋ ವೈರಲ್

    ಗಾಯಗೊಂಡು ಫಾರ್ಮಸಿಗೆ ಬಂದ ಶ್ವಾನ -ವಿಡಿಯೋ ವೈರಲ್

    ಅಂಕಾರಾ: ಸಾಮಾನ್ಯವಾಗಿ ಮನುಷ್ಯರು ಗಾಯಗೊಂಡರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಇಲ್ಲೊಂದು ಶ್ವಾನ ಗಾಯಗೊಂಡ ತಕ್ಷಣ ಫಾರ್ಮಸಿಗೆ ಓಡಿ ಬಂದಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.

    ಕಳೆದ ವಾರ ಟರ್ಕಿಯ ಇಸ್ತಾಂಬುಲ್‍ನಲ್ಲಿ ಈ ಘಟನೆ ನಡೆದಿದ್ದು, ನಾಯಿ ಫಾರ್ಮಸಿಗೆ ಓಡಿ ಬಂದು ಚಿಕಿತ್ಸೆ ಪಡೆದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಗಾಯಗೊಂಡು ದಾರಿತಪ್ಪಿ ಶ್ವಾನ, ಬಾನು ಸೆಂಗಿಜ್ ನಡೆಸುತ್ತಿದ್ದ ಫಾರ್ಮಸಿ(ಔಷಧಾಲಯಕ್ಕೆ) ಬಂದಿದೆ. ಗಾಯಗೊಂಡು ಫಾರ್ಮಸಿಗೆ ಬಂದು ಮಲಗಲು ಜಾಗ ಹುಡುಕುತ್ತಿರುವ ನಾಯಿ ಪ್ರಾಣಿ ಪ್ರೇಮಿಯಾಗಿರುವ ಎಂ.ಎಸ್. ಸೆಂಗಿಜ್ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಅವರು ನಾಯಿಯನ್ನು ನೋಡಿ ಬೇಬಿ, ಸಮಸ್ಯೆ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

    ನಾಯಿಯ ಒಂದು ಕಾಲಿಗೆ ಗಾಯವಾಗಿ ರಕ್ತ ಬರುತ್ತಿತ್ತು. ಇದನ್ನು ನೋಡಿದ ಸೆಂಗಿಜ್ ಅವರು ಗಾಯಗೊಂಡಿದ್ದ ನಾಯಿಗೆ ಚಿಕಿತ್ಸೆ ನೀಡಿದ್ದಾರೆ. ಅವರು ಚಿಕಿತ್ಸೆ ನೀಡುವಾಗ ನಾಯಿಯು ಸುಮ್ಮನೆ ನೋಡುತ್ತಾ ಚಿಕಿತ್ಸೆ ಪಡೆಯುತ್ತಿತ್ತು ಇದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಚಿಕಿತ್ಸೆ ಪಡೆದ ತಕ್ಷಣ ನಾಯಿ ಅಲ್ಲಿಯೇ ಮಲಗಿಕೊಂಡಿತು. ನಾನು ಬೇರೆ ಏನಾದರೂ ಸಮಸ್ಯೆ ಇದೆಯಾ ಎಂದು ಪರೀಕ್ಷೆ ಮಾಡಿದೆ. ಆದರೆ ಬೇರೆ ಯಾವ ಗಾಯವೂ ಆಗಿರಲಿಲ್ಲ. ಸ್ವಲ್ಪ ಸಮಯದ ನಂತರ ಅದು ನನಗೆ ಧನ್ಯವಾದ ಹೇಳಿತು ಎಂದು ತಿಳಿಸಿದ್ದಾರೆ.

    ತನಗೆ ಅಗತ್ಯವಾದ ಚಿಕಿತ್ಸೆ ಸಿಕ್ಕ ನಂತರ ನಾಯಿ ಅಲ್ಲಿಯೇ ವಿಶ್ರಾಂತಿ ಪಡೆದಿದೆ. ಸ್ವಲ್ಪ ಸಮಯದವರೆಗೂ ಫಾರ್ಮಸಿಯಲ್ಲಿ ಚೇತರಿಸಿಕೊಂಡು ಬಳಿಕ ಹೋಗಿದೆ. ಈ ಎಲ್ಲವೂ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಲಾಗಿದೆ. ಇದೀಗ ಆಡಿಯೋ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

  • ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

    ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ- ಲಕ್ಷಾಂತರ ರೂ. ನಷ್ಟ

    ದಾವಣಗೆರೆ: ಮಧ್ಯರಾತ್ರಿ ಫಾರ್ಮಸಿ ಬಿಲ್ಡಿಂಗ್‍ಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ನಗರದ ವಿದ್ಯಾರ್ಥಿ ಭವನ್ ಸರ್ಕಲ್ ಬಳಿ ನಡೆದಿದೆ.

    ವಿದ್ಯಾರ್ಥಿ ಭವನ್ ಸರ್ಕಲ್ ಬಳಿ ಇರುವ ಚೇತನಾ ಫಾರ್ಮಸಿ ಬಿಲ್ಡಿಂಗ್ ನ 1 ಮತ್ತು 2 ನೇ ಮಹಡಿಯಲ್ಲಿ ಮಧ್ಯರಾತ್ರಿ ಸುಮಾರು 1 ಗಂಟೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಒಂದೇ ಸಮನೆ ಧಗಧಗನೆ ಉರಿಯಲು ಪ್ರಾರಂಭಿಸಿದೆ. ಬೆಂಕಿಯನ್ನು ಕಂಡ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಫಾರ್ಮಸಿಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.

    ಕಳೆದ ವರ್ಷವು ಸಹ ಲಕ್ಷ್ಮಿ ಪೂಜೆಯ ದಿನ ನಗರದ ತರಕಾರಿ ಮಾರ್ಕೆಟ್‍ಗೆ ಬೆಂಕಿ ತಗಲಿ ಅನಾಹುತವಾಗಿ ಸಾಕಷ್ಟು ನಷ್ಟ ಉಂಟಾಗಿತ್ತು. ಈ ಬಾರಿಯೂ ಅದೇ ರೀತಿ ಬೆಂಕಿ ಅನಾಹುತವಾಗಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

     

     

  • ಖಾಲಿ ನಿವೇಶನಗಳಲ್ಲಿ ಮೆಡಿಕಲ್ ತ್ಯಾಜ್ಯ ಹಾಕುತ್ತಿದ್ದ ವ್ಯಕ್ತಿ ವಿರುದ್ಧ ಜನರ ಆಕ್ರೋಶ

    ಖಾಲಿ ನಿವೇಶನಗಳಲ್ಲಿ ಮೆಡಿಕಲ್ ತ್ಯಾಜ್ಯ ಹಾಕುತ್ತಿದ್ದ ವ್ಯಕ್ತಿ ವಿರುದ್ಧ ಜನರ ಆಕ್ರೋಶ

    ದಾವಣಗೆರೆ: ಖಾಲಿ ನಿವೇಶನಗಳಲ್ಲಿ ಟನ್ ಗಟ್ಟಲ್ಲೆ ಮೆಡಿಕಲ್ ವೇಸ್ಟ್ ಹಾಕಿ ಸುಡಲು ಮುಂದಾದ ಘಟನೆ ದಾವಣಗೆರೆಯ ರಾಮನಗರದಲ್ಲಿ ನಡೆದಿದೆ.

    ಪ್ರತಿನಿತ್ಯ ಅನೈಸರ್ಗಿಕವಾಗಿ ಮೆಡಿಕಲ್ ವೇಸ್ಟ್ ಸುಡುತ್ತಿದ್ದು, ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಗಿತ್ತು. ಇಂದು ಸಹ ವೇಸ್ಟ್ ಮೆಡಿಸಿನ್ ಸುಡಲು ಬಂದ ವಾಹನವನ್ನು ಅಲ್ಲಿನ ನಿವಾಸಿಗಳು ತಡೆದು ತಂದವರಿಗೆ ಛೀಮಾರಿ ಹಾಕಿದ್ದಾರೆ.

    ಮೆಡಿಕಲ್ ವೇಸ್ಟ್ ಸುಡುವುದರಿಂದ ಪರಿಸರ ಮತ್ತು ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತೆ ಅಂತ ಗೊತ್ತಿದ್ದರೂ ಸಹ ಅದನ್ನು ಲೆಕ್ಕಿಸದೆ ಫಾರ್ಮಸಿ ಮಾಲೀಕರು ಜನರ ಆರೋಗ್ಯದ ಜೊತೆ ಅಟವಾಡುತ್ತಿದ್ದಾರೆ.

    ವೇಸ್ಟ್ ಮೆಡಿಸಿನ್ ಸುಡಲು ಸರ್ಕಾರದಿಂದ ವ್ಯವಸ್ಥೆ ಮಾಡಿದ್ರು ಅದನ್ನು ಫಾರ್ಮಸಿ ಮಾಲೀಕರು ಉಪಯೋಗಿಸಿಕೊಳ್ಳದೆ ಖಾಲಿ ನಿವೇಶನಗಳಿಗೆ ತಂದು ಸುರಿಯುತ್ತಾರೆ ಎಂದು ಸ್ಥಳೀಯರು ಅರೋಪ ಮಾಡುತ್ತಿದ್ದಾರೆ. ಇನ್ನು ಇಷ್ಟೆಲ್ಲ ಅವಾಂತರ ನಡಿತಾ ಇದ್ರೂ ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜ್ಮೆಂಟ್ ಆ್ಯಕ್ಟ್ ನ ಉಲ್ಲಂಘನೆ ಮಾಡುತ್ತಿದ್ರೂ ಡ್ರಗ್ ಕಂಟ್ರೋಲರ್ ಅಧಿಕಾರಿಗಳು ಮಾತ್ರ ಯಾವ ಕ್ರಮವನ್ನು ಕೈಗೊಂಡಿಲ್ಲ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.