Tag: Pharmaceutical Company

  • ಔಷಧಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 5 ಕಿ.ಮೀ. ದೂರದವರೆಗೆ ಕೇಳಿದ ಸ್ಫೋಟದ ಸದ್ದು

    ಔಷಧಿ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ – 5 ಕಿ.ಮೀ. ದೂರದವರೆಗೆ ಕೇಳಿದ ಸ್ಫೋಟದ ಸದ್ದು

    – ರಸ್ತೆಗೆ ಓಡಿ ಬಂದ ಸಿಬ್ಬಂದಿ

    ಮುಂಬೈ: ಮಹಾರಾಷ್ಟ್ರದ ರತ್ನಗಿರಿಯ ಎಂಐಡಿಸಿಯ ಎಂ ಫಾರ್ಮಾ ಔಷಧ ಕಂಪನಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

    ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ ಮತ್ತು ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ಪ್ಲಾಂಟ್ ನಲ್ಲಿ ಒಂದು ಟ್ಯಾಂಕರ್ ಸ್ಫೋಟಗೊಂಡ ಪರಿಣಾಮ ಬೆಂಕಿ ವ್ಯಾಪಿಸಿದೆ. ಈ ಸ್ಫೋಟದ ಸದ್ದು ಸುಮಾರು 5 ಕಿಲೋ ಮೀಟರ್ ದೂರದವರೆಗೆ ಕೇಳಿಸಿದೆ. ಕಂಪನಿ ವ್ಯಾಪ್ತಿಯಲ್ಲಿ ಹೊಗೆ ಆಕಾಶವನ್ನ ತಲುಪಿದ ರೀತಿ ಕಾಣಿಸುತ್ತಿತ್ತು. ಸ್ಫೋಟದ ತೀವ್ರತೆಗೆ ಕಂಪನಿಯ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿವೆ.

    ವಿಷಯ ತಿಳಿಯುತ್ತಿದ್ದಂತೆ ಏಳು ವಾಹನಗಳೊಂದಿಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನ ನಿಯಂತ್ರಿಸಿದ್ದಾರೆ. ಸದ್ಯ ಕಂಪನಿಯ ಎಲ್ಲ ಸಿಬ್ಬಂದಿಯನ್ನ ಮನೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಕಂಪನಿ ಮತ್ತು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಟ್ಯಾಂಕರ್ ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಫ್ಯಾಕ್ಟರಿಯಲ್ಲಿ ಸ್ಫೋಟವಾಗ್ತಿದ್ದಂತೆ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಇತ್ತ ರಸ್ತೆಯಲ್ಲಿದ್ದ ಜನರು ದಟ್ಟ ಹೊಗೆ ಕಂಡು ಓಡಿ ಹೋಗಿದ್ದಾರೆ.