Tag: Phantom

  • ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್- ನಿರೂಪ್‍ಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್- ನಿರೂಪ್‍ಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್‌ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದೆ.

    ‘ರಂಗಿತರಂಗ’ ಸಿನಿಮಾ ಖ್ಯಾತಿಯ ನಟ ನಿರೂಪ್ ಭಂಡಾರಿ ಹುಟ್ಟುಹಬ್ಬದಂದು ‘ಫ್ಯಾಂಟಮ್’ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಉಡುಗೊರೆಯೊಂದನ್ನು ನೀಡಿದೆ. ಕಿಚ್ಚ ಸುದೀಪ್, ವಿಕ್ರಾಂತ್ ರೋಣನಾಗಿ ಅಭಿನಯಿಸುತ್ತಿರುವ ‘ಫ್ಯಾಂಟಮ್’ ಸಿನಿಮಾದಲ್ಲಿ ನಿರೂಪ್ ಕೂಡ ಸಂಜೀವ್ ಗಾಂಭೀರ ಅಲಿಯಾಸ್ ಸಂಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಗುರುವಾರ ನಿರೂಪ್ ಭಂಡಾರಿ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಸಂಜು ಪೋಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸುದೀಪ್ ಚಿತ್ರದ ಪೋಸ್ಟರನ್ನು ಟ್ವೀಟ್ ಮಾಡಿ ನಿರೂಪ್‍ಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ತಾವೇ ನಿರೂಪ್ ಭಂಡಾರಿಗೋಸ್ಕರ ಕೇಕ್ ತಯಾರಿಸಿದ್ದಾರೆ. ಸುದೀಪ್ ಸಿದ್ಧಪಡಿಸಿರುವ ಕೇಕ್ ಫೋಟೋವನ್ನು ನಿರೂಪ್ ಶೇರ್ ಮಾಡಿಕೊಂಡಿದ್ದು, ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ.

    ಅನೂಪ್ ಕೂಡ ನಿರೂಪ್‍ಗೆ ಶುಭಾಶಯ ಕೋರಿದ್ದು, ಸಹೋದರ ಮಾಡುತ್ತಿರುವ ಸಂಜು ಪಾತ್ರದ ಬಗ್ಗೆ ರಿವೀಲ್ ಮಾಡಿ, ಪೋಸ್ಟರ್ ಹಂಚಿಕೊಂಡಿದ್ದಾರೆ. “ಫ್ಯಾಂಟಮ್ ಚಿತ್ರದ ಇನ್ನೊಂದು ಮುಖ್ಯ ಪಾತ್ರ ಸಂಜೀವ್ ಗಾಂಭೀರ. ಸಂಜು ಲಂಡನ್‍ನಲ್ಲಿ ಬೆಳೆದು ಹುಟ್ಟೂರಿಗೆ ವಾಪಸ್ ಬರುತ್ತಾನೆ. ಅವನು ನಗುತ್ತಾನೆ, ನಗಿಸುತ್ತಾನೆ, ತರ್ಲೆ ಮಾಡುತ್ತಾನೆ ಈ ಮೂಲಕ ಎಲ್ಲ ಮನಸ್ಸಿಗೂ ಹತ್ತಿರವಾಗುತ್ತಾನೆ. ಈ ಸಂಜು ಪಾತ್ರವನ್ನು ನಿರೂಪ್ ಭಂಡಾರಿ ನಿರ್ವಹಿಸುತ್ತಿದ್ದಾರೆ” ಎಂದು ಚಿತ್ರತಂಡಕ್ಕೆ ಅನೂಪ್ ಭಂಡಾರಿ ಸ್ವಾಗತ ಕೋರಿದ್ದಾರೆ.

  • ನಾಳೆ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ – ವಿಕ್ರಾಂತ್ ರೋಣನ ಫಸ್ಟ್‌ಲುಕ್ ರಿಲೀಸ್

    ನಾಳೆ ಸುದೀಪ್ ಅಭಿಮಾನಿಗಳಿಗೆ ಸರ್ಪ್ರೈಸ್ – ವಿಕ್ರಾಂತ್ ರೋಣನ ಫಸ್ಟ್‌ಲುಕ್ ರಿಲೀಸ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಚಿತ್ರತಂಡ ಸಣ್ಣ ಸಣ್ಣ ವಿಡಿಯೋ ರಿಲೀಸ್ ಮಾಡುವ ಮೂಲಕ ಸದ್ದು ಮಾಡುತ್ತಿದೆ. ಈ ನಡುವೆ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಮುಂದಾಗಿದೆ.

    ‘ಫ್ಯಾಂಟಮ್’ ಚಿತ್ರತಂಡ ಸಿನಿಮಾದ ಫಸ್ಟ್‌ಲುಕ್ ರಿಲೀಸ್ ಮಾಡಲು ಮುಂದಾಗಿದೆ. ಸೋಮವಾರ ಅಂದರೆ ನಾಳೆ ಸುದೀಪ್ ಅವರ ಫಸ್ಟ್‌ಲುಕ್ ರಿಲೀಸ್ ಆಗಲಿದೆ. ಈ ಬಗ್ಗೆ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಅವರು ಟ್ವಿಟ್ಟರಿನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    “ನಮ್ಮ ಪ್ಯಾಂಟಮ್ ಸಿನಿಮಾದ ಪ್ರತಿಯೊಂದು ಪಾತ್ರವನ್ನು ಪೋಸ್ಟರ್ ಮೂಲಕ ತಿಳಿಸಲು ಮುಂದಾಗಿದ್ದೇವೆ. ಅದೇ ರೀತಿ ಮೊದಲು ಚಿತ್ರದ ನಾಯಕ ವಿಕ್ರಾಂತ್ ರೋಣ ಅವರ ಮೊದಲ ಪೋಸ್ಟರ್ ರಿಲೀಸ್ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ. ಜೊತೆಗೆ ಸೋಮವಾರ ಬೆಳಗ್ಗೆ 10 ಗಂಟೆಗೆ ಸುದೀಪ್ ಅವರ ಫಸ್ಟ್‌ಲುಕ್ ರಿಲೀಸ್ ಆಗಲಿದೆ. ಈ ಮೂಲಕ ‘ಫ್ಯಾಂಟಮ್’ ಸಿನಿಮಾದಲ್ಲಿ ಸುದೀಪ್ ಯಾವ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

    ಕೊರೊನಾ ಲಾಕ್‍ಡೌನ್‍ನಿಂದ ಚಿತ್ರರಂಗ ಸ್ತಬ್ಧವಾಗಿತ್ತು. ಆದರೆ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಿನಿಮಾ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರತಂಡ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿದ್ದು, ಅಲ್ಲಿ ಕಾಡಿನ ಅದ್ಧೂರಿ ಸೆಟ್ ಹಾಕಿ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ.

    ಮೊದಲಿಗೆ ‘ಫ್ಯಾಂಟಮ್’ ಚಿತ್ರತಂಡ ಒಂದು ಚಿಕ್ಕ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಿಚ್ಚ ಸುದೀಪ್ ಮತ್ತು ಒಂದು ಚಿಕ್ಕ ಮಗು ಮಾತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಈ ದೃಶ್ಯದಲ್ಲಿನ ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಮತ್ತೆ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ಇನ್ನೊಂದು ದೃಶ್ಯವನ್ನು ಹಂಚಿಕೊಂಡಿದ್ದರು. ಅದರಲ್ಲಿ ಬೈಕಿನಲ್ಲಿ ಬರುವ ಕಿಚ್ಚ ನಂತರ ಟಾರ್ಚ್ ಹಿಡಿದು ಏನನ್ನೋ ಹುಡುಕುತ್ತಾ ಕಾಡಿನೊಳಗೆ ಹೋಗುವುದನ್ನು ನಾವು ಕಾಣಬಹುದು. ಈ ದೃಶ್ಯದ ಹಿನ್ನೆಲೆ ಸಂಗೀತ ಕೂಡ ಸಖತ್ ಕ್ಯಾಚಿಯಾಗಿದೆ.

  • ಬೈಕ್ ಏರಿ, ಟಾರ್ಚ್ ಹಿಡಿದು ಕತ್ತಲಲ್ಲಿ ಕಾಡಿಗೆ ನುಗ್ಗಿದ ‘ಹೆಬ್ಬುಲಿ’

    ಬೈಕ್ ಏರಿ, ಟಾರ್ಚ್ ಹಿಡಿದು ಕತ್ತಲಲ್ಲಿ ಕಾಡಿಗೆ ನುಗ್ಗಿದ ‘ಹೆಬ್ಬುಲಿ’

    – ಬನ್ನಿ ಈ ಪ್ರಯಾಣದಲ್ಲಿ ಜೊತೆಯಾಗಿ

    ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು, ಸದ್ಯ ಅವರು ನಟಿಸುತ್ತಿರುವ ಫ್ಯಾಂಟಮ್ ಚಿತ್ರದಿಂದ ಒಂದು ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಕೊರೊನಾ ಲಾಕ್‍ಡೌನ್‍ನಿಂದ ಚಿತ್ರರಂಗ ಸ್ತಬ್ಧವಾಗಿತ್ತು. ಆದರೆ ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ಸಿನಿಮಾ ಶೂಟಿಂಗ್‍ಗೆ ಅನುಮತಿ ನೀಡಲಾಗಿತ್ತು. ಹೀಗಾಗಿ ಸುದೀಪ್ ನಟನೆಯ ಫ್ಯಾಂಟಮ್ ಚಿತ್ರತಂಡ ಚಿತ್ರೀಕರಣಕ್ಕಾಗಿ ಹೈದರಾಬಾದಿಗೆ ಹೋಗಿತ್ತು. ಜೊತೆಗೆ ಅಲ್ಲಿ ಕಾಡಿನ ಅದ್ಧೂರಿ ಸೆಟ್ ಹಾಕಿ ಸಿನಿಮಾದ ಶೂಟಿಂಗ್ ಆರಂಭಿಸಿತ್ತು.

    ಕಳೆದ ವಾರವಾಷ್ಟೇ ಫ್ಯಾಂಟಮ್ ಚಿತ್ರತಂಡ ಒಂದು ಚಿಕ್ಕ ವಿಡಿಯೋವನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕಿಚ್ಚ ಸುದೀಪ್ ಮತ್ತು ಒಂದು ಚಿಕ್ಕ ಮಗು ಮಾತ್ರ ಪ್ರಮುಖವಾಗಿ ಕಾಣಿಸಿಕೊಂಡಿತ್ತು. ಈ ದೃಶ್ಯದಲ್ಲಿನ ಹಿನ್ನೆಲೆ ಸಂಗೀತಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಇಂದು ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಇನ್ನೊಂದು ದೃಶ್ಯವನ್ನು ಹಂಚಿಕೊಂಡಿದ್ದು, ಇದರಲ್ಲಿ ಬೈಕಿನಲ್ಲಿ ಬರುವ ಕಿಚ್ಚ ನಂತರ ಟಾರ್ಚ್ ಹಿಡಿದು ಏನನ್ನೋ ಹುಡುಕುತ್ತಾ ಕಾಡಿನೊಳಗೆ ಹೋಗುವುದನ್ನು ನಾವು ಕಾಣಬಹುದು. ಈ ದೃಶ್ಯದ ಹಿನ್ನೆಲೆ ಸಂಗೀತ ಕೂಡ ಸಖತ್ ಕ್ಯಾಚಿಯಾಗಿದೆ.

    ಇಂದು ಮಧ್ಯಾಹ್ನ ಈ ವಿಚಾರವಾಗಿ ಮೊದಲು ಟ್ವೀಟ್ ಮಾಡಿದ್ದ ಕಿಚ್ಚ, ಗುರುವಾರ ಚಿತ್ರೀಕರಣಗೊಂಡ ಒಂದು ಸಣ್ಣ ದೃಶ್ಯವನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಈ ವಿಡಿಯೋ ನಿಮ್ಮನ್ನು ಫ್ಯಾಂಟಮ್ ಎಂಬ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದರು. ಇದಾದ ಕೆಲವೇ ನಿಮಿಷದಲ್ಲಿ ವಿಡಿಯೋವನ್ನು ಶೇರ್ ಮಾಡಿರುವ ಕಿಚ್ಚ, ಇದು ಕೇವಲ ಒಂದು ತುಣುಕು ಅಷ್ಟೇ ಇದು ನನ್ನ ಅಭಿಮಾನಿಗಳಿಗಾಗಿ ಎಂದು ಬರೆದುಕೊಂಡಿದ್ದಾರೆ.

    ಸುದೀಪ್ ಅವರು ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಕಮೆಂಟ್ ಮಾಡಿರುವ ಅವರ ಅಭಿಮಾನಿಗಳು, ವಿಡಿಯೋ ಮೇಕಿಂಗ್ ಚೆನ್ನಾಗಿದೆ, ಹಿನ್ನೆಲೆ ಸಂಗೀತ ಚೆನ್ನಾಗಿದೆ ಎಂದಿದ್ದಾರೆ. ಜೊತೆಗೆ ಈ ವಿಡಿಯೋ ನೋಡಿ ಕಮೆಂಟ್ ಮಾಡಿರುವ ಸುದೀಪ್ ಅವರ ಅಭಿಮಾನಿಯೋರ್ವ ಇದು ಒಂದು ಹಾರರ್ ಚಿತ್ರವೇ? ನೀವು ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡುತ್ತಿದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಟ್ವೀಟ್ ಮಾಡಿದ ಕಿಚ್ಚ ಇದು ಹಾರರ್ ಸಿನಿಮಾ ಅಲ್ಲ ಎಂದು ಉತ್ತರಿಸಿದ್ದಾರೆ.

    ಫ್ಯಾಂಟಮ್ ಚಿತ್ರ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಭಾರೀ ಮೆಚ್ಚುಗೆ ಪಡೆದಿದೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಈಗಾಗಲೇ ಬಿಡುಗುಡೆಯಾಗಿರುವ ಪೋಸ್ಟರ್ ನಲ್ಲಿ ಸುದೀಪ್‌ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, `ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.

  • ಮೇಕಪ್ ಹಾಕಿದ ಫೀಲ್ ಹಂಚಿಕೊಂಡ ವಿಕ್ರಾಂತ್ ರೋಣ

    ಮೇಕಪ್ ಹಾಕಿದ ಫೀಲ್ ಹಂಚಿಕೊಂಡ ವಿಕ್ರಾಂತ್ ರೋಣ

    ಹೈದರಾಬಾದ್: ಬಹುದಿನಗಳ ಬಳಿಕ ಕೆಲ ದಿನಗಳ ಹಿಂದೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ಇದರಿಂದಾಗಿ ಕಲಾವಿದರಿಗೆ ಹೊಸ ಹುರುಪು ಬಂದಿದ್ದು, ಹಲವರು ತಮ್ಮ ಕಾಯಕದತ್ತ ಮರಳುತ್ತಿದ್ದಾರೆ. ಅಲ್ಲದೆ ಸುಧೀರ್ಘ ರಜೆ ಬಳಿಕ ಕೆಲಸಕ್ಕೆ ಹೋಗುತ್ತಿರುವ ಅನುಭವ ಸೆಲೆಬ್ರೆಟಿಗಳಿಗೆ ಆಗುತ್ತಿದೆ. ಈ ಕುರಿತು ನಟ ಕಿಚ್ಚ ಸುದೀಪ್ ಸಹ ಸುಧೀರ್ಘ ಸಮಯದ ಬಳಿಕ ಶೂಟಿಂಗ್‍ಗೆ ಮರಳಿದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ತುಂಬಾ ದಿನಗಳ ಕಾಲ ಎಲ್ಲ ಸೆಲೆಬ್ರೆಟಿಗಳು ಚಿತ್ರೀಕರಣದಿಂದ ದೂರ ಉಳಿದಿದ್ದರು. ಇದೇ ಸಮಯದಲ್ಲಿ ಹಲವರು ಕುಟುಂಬದೊಂದಿಗೆ ಕಾಲ ಕಳೆದರೆ, ಇನ್ನೂ ಕೆಲವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದರು. ಉಳಿದ ಸಮಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಮೀಸಲಿರಿಸಿದ್ದರು. ಆದರೆ ಇತ್ತೀಚೆಗೆ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯ ಸರ್ಕಾರಗಳು ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಿವೆ. ಆದರೂ ಇಷ್ಟು ದಿನ ನಟ, ನಟಿಯರು ಚಿತ್ರೀಕರಣಕ್ಕೆ ಹೋಗಿರಲಿಲ್ಲ. ಇದೀಗ ಶೂಟಿಂಗ್‍ನಲ್ಲಿ ಭಾಗವಹಿಸಲು ಮುಂದಾಗಿದ್ದು, ಕಿಚ್ಚ ಸುದೀಪ್ ಫ್ಯಾಂಟಮ್ ಶೂಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಇದೇ ವೇಳೆ ಚಿತ್ರೀಕರಣಕ್ಕೆ ಮರಳಿದ ಅನುಭವವನ್ನು ಕಿಚ್ಚ ಸುದೀಪ್ ಹಂಚಿಕೊಂಡಿದ್ದು, ಶೂಟಿಂಗ್‍ನ ಆರಂಭವಾಗಿರುವ ಕುರಿತು ಚಿತ್ರೀಕರಣದ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿರುವ ಅವರು, ಇಂದು ಮೇಕಪ್ ಹಾಕಿಕೊಂಡಾಗ ಅದ್ಭುತ ಅನುಭವವಾಯಿತು. ನನ್ನ ಉತ್ಸಾಹದಿಂದ ವಿಸ್ತøತ ರಜಾದಿನಗಳಲ್ಲಿದ್ದೆ ಎಂದು ಭಾಸವಾಯಿತು. ಸಿನಿಮಾ ಎಂಬ ಉತ್ಸಾಹ. ಹೀಗಾಗಿ ನಾನು ಇಲ್ಲಿದ್ದೇನೆ. ಮತ್ತೆ ವಿಕ್ರಾಂತ್ ರೋಣ ಘರ್ಜಿಸಲಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್‍ನೊಂದಿಗೆ ಫ್ಯಾಂಟಮ್ ಬಿಗಿನ್ಸ್ ಎಂದು ಹಾಕಿದ್ದಾರೆ.

    ಕಿಚ್ಚ ಸುದೀಪ್ ಟ್ವೀಟ್‍ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಶುಭಕೋರುತ್ತಿದ್ದು, ಹಲವು ದಿನಗಳ ಬಳಿಕ ಅಣ್ಣ ಶೂಟಿಂಗ್‍ಗೆ ಮರಳಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ ವಾವ್ ಫೆಂಟಾಸ್ಟಿಕ್, ಯು ಲುಕ್ ಸ್ಟನ್ನಿಂಗ್ ಅಣ್ಣ ಎಂದು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರ ಶೂಟಿಂಗ್ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ಚಿತ್ರೀಕರಣದ ಕೆಲಸಕ್ಕೆ ಚಾಲನೆ ನೀಡಿತ್ತು. ಕೊರೊನಾ ಲಾಕ್‍ಡೌನ್ ಮುನ್ನವೇ ಚಿತ್ರತಂಡ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರಬೇಕಿತ್ತು. ಆದರೆ ಲಾಕ್‍ಡೌನ್ ಕಾರಣದಿಂದ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು.

    ‘ಫ್ಯಾಂಟಮ್’ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣ ಪಾತ್ರದ ಕುರಿತು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಪೋಸ್ಟರ್ ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, `ವಿಕ್ರಾಂತ್ ರೋಣ’ನ ಖಡಕ್ ಲುಕ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

  • ಹೈದರಾಬಾದ್‍ನಲ್ಲಿ ಶೂಟಿಂಗ್ ಆರಂಭಿಸಿದ ‘ಫ್ಯಾಂಟಮ್’ ಚಿತ್ರತಂಡ- ಸೆಟ್‍ನಲ್ಲಿ ಕನ್ನಡಿಗರಿಗೆ ಅವಕಾಶ

    ಹೈದರಾಬಾದ್‍ನಲ್ಲಿ ಶೂಟಿಂಗ್ ಆರಂಭಿಸಿದ ‘ಫ್ಯಾಂಟಮ್’ ಚಿತ್ರತಂಡ- ಸೆಟ್‍ನಲ್ಲಿ ಕನ್ನಡಿಗರಿಗೆ ಅವಕಾಶ

    ಬೆಂಗಳೂರು: ಕೊರೊನಾ ಕಾರಣದಿಂದ ಸ್ಥಗಿತದೊಂಡಿದ್ದ ಸಿನಿರಂಗದ ಚಿತ್ರೀಕರಣಕ್ಕೆ ಸದ್ಯ ಮರುಚಾಲನೆ ಲಭಿಸುತ್ತಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿಬರುತ್ತಿರುವ ‘ಫ್ಯಾಂಟಮ್’ ಸಿನಿಮಾದ ಚಿತ್ರೀಕರಣ ಹೈದರಾಬಾದ್‍ನಲ್ಲಿ ಆರಂಭವಾಗಿದೆ.

    ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರತಂಡ ಗಣಪನಿಗೆ ಪೂಜೆ ಸಲ್ಲಿಸುವ ಮೂಲಕ ಚಿತ್ರೀಕರಣದ ಕೆಲಸಕ್ಕೆ ಚಾಲನೆ ನೀಡಿದೆ. ಕೊರೊನಾ ಲಾಕ್‍ಡೌನ್ ಮುನ್ನವೇ ಚಿತ್ರತಂಡ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರಬೇಕಿತ್ತು. ಆದರೆ ಕೊರೊನಾ ಲಾಕ್‍ಡೌನ್ ಕಾರಣದಿಂದ ಬ್ರೇಕ್ ಬಿದ್ದಿತ್ತು. ಇದನ್ನು ಓದಿ: ದಟ್ಟಕಾನನದ ನಡುವೆ ಕಿಚ್ಚನ ‘ಫ್ಯಾಂಟಮ್’

    ರಾಜ್ಯದಲ್ಲಿ ಸಿನಿಮಾ ಶೂಟಿಂಗ್‍ಗೆ ಅವಕಾಶ ನೀಡಿಲ್ಲವಾದರೂ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರ್ಗಸೂಚಿಗಳನ್ನು ಜಾರಿ ಮಾಡಿ ಶೂಟಿಂಗ್‍ಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಆರಂಭಿಸಿದೆ. ವಿಶೇಷ ಎಂದರೇ ಚಿತ್ರದ ಶೂಟಿಂಗ್ ವೇಳೆ ಅಗತ್ಯವಿರುವ ಸಿಬ್ಬಂದಿಯನ್ನು ಬೆಂಗಳೂರಿನಿಂದಲೇ ಕರೆದುಕೊಂಡು ಹೋಗುವ ಮೂಲಕ ಕನ್ನಡಿಗರಿಗೆ ಮನ್ನಣೆ ನೀಡಲಾಗಿದೆ.

    ಈ ಕುರಿತು ಚಿತ್ರತಂಡ ಮಾಹಿತಿ ನೀಡಿದ್ದು, ಇಂದು ಕೊರೊನಾ ಬಳಿಕ ಶೂಟಿಂಗ್ ಶುರುವಾಗಿದೆ. ವಿಶೇಷ ಎಂದರೇ ಕನ್ನಡ ಒಕ್ಕೂಟ ಶೂಟಿಂಗ್ ವೇಳೆ ಕನ್ನಡಿಗರನ್ನೇ ಬಳಕೆ ಮಾಡಿಕೊಳ್ಳಲು ಮನವಿ ಮಾಡಿತ್ತು. ಸುದೀಪ್ ಅವರು ಕೂಡ ಶೂಟಿಂಗ್‍ಗೆ ಅಗತ್ಯವಿರುವ ತಂತ್ರಜ್ಞರೆಲ್ಲರನ್ನು ಬೆಂಗಳೂರಿಂದಲೇ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಅದರಂತೆ 200 ರಿಂದ 250 ಜನರನ್ನು ಹೈದರಾಬಾದ್‍ಗೆ ಕರೆದುಕೊಂಡು ಬಂದಿದ್ದೇವೆ. ಆ ಮೂಲಕ ನಮ್ಮ ಕೆಲಸಗಾರರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದು ಹೇಳಿದೆ.

    ಕೊರೊನಾ ಕಾರಣದಿಂದ ಚಿತ್ರತಂಡ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ತಂತ್ರಜ್ಞರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಚಿತ್ರೀಕರಣದ ಸಮಯದಲ್ಲಿ ಎಲ್ಲರನ್ನು ಪ್ರತಿದಿನ ಪರೀಕ್ಷೆ ನಡೆಸಿಯೇ ಒಳಬಿಡಲಾಗುತ್ತಿದೆ. ಅಲ್ಲದೇ ಒಬ್ಬ ವೈದ್ಯರು ಸೇರಿದಂತೆ ಅಗತ್ಯ ವೈದ್ಯಕೀಯ ವ್ಯವಸ್ಥೆಯನ್ನು ಚಿತ್ರತಂಡ ಮಾಡಿಕೊಂಡಿದೆ.

    ಫ್ಯಾಂಟಮ್’ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಗಾಂಧಿನಗರದಲ್ಲಿ ಸುನಾಮಿ ಎಬ್ಬಿಸಿರುವ ಚಿತ್ರ. ಪೋಸ್ಟರ್ ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, `ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.

  • ದಟ್ಟಕಾನನದ ನಡುವೆ ಕಿಚ್ಚನ ‘ಫ್ಯಾಂಟಮ್’

    ದಟ್ಟಕಾನನದ ನಡುವೆ ಕಿಚ್ಚನ ‘ಫ್ಯಾಂಟಮ್’

    ಬೆಂಗಳೂರು: ದಟ್ಟ ಕಾನನನದ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾಂಟನ್ ನಿರ್ಮಾಣವಾಗುತ್ತಿದೆ. ಈ ದಟ್ಟ ಕಾನನಕ್ಕಾಗಿ ಫ್ಯಾಂಟಮ್ ಅಖಾಡದಲ್ಲಿ ರಾಜಮಂಡ್ರಿಯಿಂದ ಗಿಡ-ಮರಗಳನ್ನು ತುಂಬಿಕೊಂಡ 22 ಲಾರಿಗಳು ಆಗಮಿಸಿವೆ.

    ಫ್ಯಾಂಟಮ್ ನಿರ್ಮಾಪಕರು ಸುಮಾರು 30 ರಿಂದ 40 ಲಕ್ಷ ಬಂಡವಾಳ ಹಾಕಿ ಈ ಗಿಡಮರಗಳನ್ನು ಖರೀದಿಸಿದ್ದಾರಂತೆ. ಲಾಕ್‍ಡೌನ್ ಮುನ್ನ ಈ ಗಿಡಗಳನ್ನು ತರಿಸಲಾಗಿತ್ತು. ಶೇಕಡ 70ರಷ್ಟು ಸೆಟ್ ವರ್ಕ್ ಕೂಡ ನಡೆದಿತ್ತು. ಈ ನಡುವೆ ಲಾಕ್‍ಡೌನ್ ಆಗಿದ್ರಿಂದ ಶೂಟಿಂಗ್ ಕ್ಯಾನ್ಸಲ್ ಆಯ್ತು. ಹಾಗಾಗಿ ಸೆಟ್ ನಲ್ಲಿ ಗಿಡಗಳಿಗೆ ಬಿಸಿಲು ತಾಗದಂತೆ ಚಿತ್ರತಂಡ ನೆರಳಿನ ವ್ಯವಸ್ಥೆಯನ್ನು ಸಹ ಮಾಡಿದೆ. ಇದೀಗ ಚಿತ್ರೀಕರಣಕ್ಕೆ ಆಂಧ್ರ-ತೆಲಂಗಾಣ ಸರ್ಕಾರ ಅನುಮತಿ ನೀಡಿದ್ದು, ‘ಫ್ಯಾಂಟಮ್’ ಅಂಗಳದಲ್ಲಿ ಸೆಟ್ ವರ್ಕ್ ಕೆಲಸ ಭರದಿಂದ ಸಾಗುತ್ತಿದೆ.

    ಹೈದ್ರಾಬಾದ್‍ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಸೆಟ್‍ವರ್ಕ್ ಕೆಲಸದಲ್ಲಿ ನಿರತವಾಗಿದೆ. ಸೆಟ್‍ನಲ್ಲಿ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಸಿನಿಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿದೆ. ಸರ್ಕಾರದ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋದರ ಜೊತೆಗೆ ಸೆಟ್‍ನಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಚಿತ್ರತಂಡ ನೇಮಕ ಮಾಡಿದೆ. ಸೆಟ್‍ಗೆ ಸಿನಿಕಾರ್ಮಿಕರನ್ನು ಬಿಡುವ ಮುನ್ನವೇ ಪ್ರತಿದಿನ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ.

    ಫ್ಯಾಂಟಮ್’ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಗಾಂಧಿನಗರದಲ್ಲಿ ಸುನಾಮಿ ಎಬ್ಬಿಸಿರುವ ಚಿತ್ರ. ಪೋಸ್ಟರ್‍ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, ‘ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.

    ಚಿತ್ರಕ್ಕಾಗಿ ನಿರ್ಮಾಪಕರಾದ ಜಾಕ್‍ಮಂಜು ಮತ್ತು ಶಾಲಿನಿ ಮಂಜುನಾಥ್ ಕೋಟಿಕೋಟಿ ಸುರಿಯೋದಕ್ಕೆ ರೆಡಿಯಾಗಿದ್ದಾರೆ. ರಾಜಮಂಡ್ರಿಯಿಂದ ಗಿಡಗಳನ್ನು ಇಂಪೋರ್ಟ್ ಮಾಡಿಕೊಂಡು ಹೈದ್ರಬಾದ್‍ನಲ್ಲಿ ಫಾರೆಸ್ಟ್ ಸೆಟ್ ನಿರ್ಮಿಸಲಾಗ್ತಿದೆ. ಇದಕ್ಕಾಗಿ ಕೋಟಿಗಟ್ಟಲೇ ಬಂಡವಾಳ ಸುರಿಯಲಾಗಿದ್ದು, ಕಣ್ಣಿಗೆ ಹಬ್ಬ ನೀಡುವ ಕಾಡಿನ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಲಿವೆ. ಫ್ಯಾಂಟಮ್ ಸಿನಿಮಾ ಮೂಲಕ ಬೆಳ್ಳಿತೆರೆ ಬೆಳಗಲಿವೆ.

  • ಕಿಚ್ಚನ ಅಭಿಮಾನಿಗಳಿಗೆ ‘ಫ್ಯಾಂಟಮ್’ ಚಿತ್ರತಂಡದಿಂದ ಗುಡ್ ನ್ಯೂಸ್

    ಕಿಚ್ಚನ ಅಭಿಮಾನಿಗಳಿಗೆ ‘ಫ್ಯಾಂಟಮ್’ ಚಿತ್ರತಂಡದಿಂದ ಗುಡ್ ನ್ಯೂಸ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಕಿಚ್ಚ ಅಭಿನಯದ ಫ್ಯಾಂಟಮ್ ಚಿತ್ರದ ಶೂಟಿಂಗ್ ಮುಂದಿನ ತಿಂಗಳಿಂದ ಆರಂಭವಾಗಲಿದೆ.

    ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೆ, ಸ್ಯಾಂಡಲ್‍ವುಡ್‍ನಲ್ಲಿ ಕೆಲ ಚಿತ್ರದ ಶೂಟಿಂಗ್ ಆರಂಭಗೊಂಡಿವೆ. ರಾಜ್ಯದಲ್ಲೂ ಕೂಡ ಒಳಾಂಗಣದಲ್ಲಿ ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಹೀಗಾಗಿ ಶೂಟಿಂಗ್ ಪ್ರಕ್ರಿಯೆಗಳು ಗರಿಗೆದರಿವೆ.

    ಮುಂದಿನ ತಿಂಗಳು ಜುಲೈ 1ರಿಂದ ಸುದೀಪ್ ಅವರು ಫ್ಯಾಂಟಮ್ ಚಿತ್ರದ ಚಿತ್ರೀಕರಣವನ್ನು ಆರಂಭ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಜುಲೈನಿಂದ ಹೈದರಾಬಾದ್ ನಲ್ಲಿ ಚಿತ್ರದ ಚಿತ್ರೀಕರಣ ಮಾಡಲು ನಿರ್ಮಾಪಕ ಜಾಕ್ ಮಂಜು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಜೂನ್ 16ರಿಂದ ಹೈದರಾಬಾದ್‍ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗುತ್ತದೆ. ಸ್ಟುಡಿಯೋದ ಎರಡು ಫ್ಲೋರ್ ನಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

    ದೇಶದಲ್ಲಿ ಕೊರೊನಾ ಇನ್ನೂ ಕಮ್ಮಿ ಆಗದ ಕಾರಣ ಬಹಳ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗುತ್ತದೆ. ಈ ಮೂಲಕ ಕಲಾವಿದರು ಮತ್ತು ತಂತ್ರಜ್ಞರಿಗೆ ಬೇಕಾದ ಎಲ್ಲ ಮುನ್ನೆಚರಿಕಾ ಕ್ರಮ ಹಾಗೂ ಶೂಟಿಂಗ್ ಮಾಡಲು ಇರುವ ನಿಯಮವನ್ನ ಪಾಲಿಸಲು ಚಿತ್ರತಂಡ ಸಜ್ಜಾಗಿದೆ. ಸ್ವತಃ ಸುದೀಪ್ ಅವರೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡು ಸಿನಿಮಾ ಶೂಟಿಂಗ್ ಮಾಡಲು ಧೈರ್ಯ ನೀಡಿದ್ದಾರೆ.

    ಮುಂದಿನ ತಿಂಗಳು ಚಿತ್ರತಂಡ ಹೈದರಾಬಾದ್‍ಗೆ ಹೋಗುತ್ತಿದೆ. ಜೊತೆಗೆ ಚಿತ್ರೀಕರಣದಲ್ಲಿ ಭಾಗವಹಿಸುವವರು ಶೂಟಿಂಗ್ ಮುಗಿಯುವ ತನಕ ಶೂಟಿಂಗ್ ಸೆಟ್ ಬಿಟ್ಟು ಹೋಗುವಂತಿಲ್ಲ. ಶೂಟಿಂಗ್ ತೆರಳಿದವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಕೂಡ ಮಾಡಲಾಗಿದೆ. ಚಿತ್ರೀಕರಣ ಮುಗಿಯುವವರೆಗೂ 80 ಜನರನ್ನು ಶೂಟಿಂಗ್ ಕ್ವಾರಂಟೈನ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

    ಪಕ್ಕದ ರಾಜ್ಯದಲ್ಲಿ ಶೂಟಿಂಗ್‍ಗೆ ಅನುಮತಿ ಸಿಕ್ಕ ನಂತರ, ಇತರೆ ಚಿತ್ರತಂಡಗಳು ಕೂಡ ಚಿತ್ರೀಕರಣಕ್ಕೆ ಆಂಧ್ರ ಹಾಗೂ ತೆಲಂಗಾಣಕ್ಕೆ ಹೊರಡಲಿವೆ. ಕೆ.ಜಿ.ಎಫ್-2 ಹಾಗೂ ಪೊಗರು ಚಿತ್ರತಂಡದಿಂದ ಹೈದರಾಬಾದ್‍ನಲ್ಲಿ ಶೂಟಿಂಗ್ ಮಾಡಲಾಗುತ್ತಿತ್ತು. ಈ ಚಿತ್ರತಂಡಗಳು ಕೂಡ ಮತ್ತೆ ಹೈದರಾಬಾದ್‍ಗೆ ತೆರಳುವ ಸಾಧ್ಯತೆ ಇದೆ. ಚಿತ್ರೀಕರಣದ ಕೊನೆಯ ಹಂತದಲ್ಲಿ ಒಂದೆರಡು ಸಾಂಗ್ ಬಾಕಿ ಉಳಿಸಿಕೊಂಡಿರುವ ಚಿತ್ರತಂಡಗಳು ಹೈದರಾಬಾದ್‍ಗೆ ತೆರಳಲಿವೆ.

    ಫ್ಯಾಂಟಮ್ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನದ ಮಾಡುತ್ತಿದ್ದು, ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

  • ವಿಕ್ರಾಂತ್ ರೋಣನ ಅವತಾರ ತಾಳಿದ ಕಿಚ್ಚ

    ವಿಕ್ರಾಂತ್ ರೋಣನ ಅವತಾರ ತಾಳಿದ ಕಿಚ್ಚ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆ ಫ್ಯಾಂಟಮ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಅಭಿಮಾನಿಗಳಲ್ಲಿ ಒಂದು ರೀತಿಯ ಕ್ರೇಜ್ ಕ್ರಿಯೇಟ್ ಮಾಡಿದೆ. ಇಷ್ಟು ದಿನ ನಾಯಕಿಯರ ಆಯ್ಕೆ ಕುರಿತು ಫ್ಯಾಂಟಮ್ ಸುದ್ದಿಯಾಗುತ್ತಿತ್ತು. ಇದೀಗ ಕಿಚ್ಚ ಸುದೀಪ್ ಚಿತ್ರದಲ್ಲಿ ತಮ್ಮ ಪಾತ್ರದ ಹೆಸರನ್ನು ರಿವೀಲ್ ಮಾಡಿದ್ದು, ಅಷ್ಟೇ ಖಡಕ್ ಹಾಗೂ ಖದರ್ ಆಗಿದೆ.

    ಒಂದು ಪೋಸ್ಟರ್‍ನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಪಾತ್ರದ ರೋಚಕತೆಯ ಸುಳಿವನ್ನು ಸುದೀಪ್ ನೀಡಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ವಿಕ್ರಾಂತ್ ರೋಣನಾಗಿ ಬದಲಾಗುತ್ತಿದ್ದಾರೆ. ಮೀಸೆ ತಿರುವುವ ಪೋಸ್ಟರ್‍ನಲ್ಲಿ ಈ ಹೆಸರನ್ನು ಬರೆಯಲಾಗಿದ್ದು, ಕಿಚ್ಚನ ಖಡಕ್ ಲುಕ್ ನೀಡಿದ್ದಾರೆ.

    ಈ ಪೋಸ್ಟರ್‍ನಲ್ಲಿ ಕಿಚ್ಚ ಖಡಕ್ ಆಗಿ ಮೀಸೆ ತಿರುವಿದ್ದು, ಈ ಮೂಲಕ ಕಿಚ್ಚ ಸುದೀಪ್ ಫ್ಯಾಂಟಮ್‍ನಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಝಲಕ್ ತೋರಿಸಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಈ ಫೋಟೋ ನೋಡಿದ ಅಭಿಮಾನಿಗಳು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಲೈಕ್ ಕಮೆಂಟ್ ಮಾಡುವ ಮೂಲಕ ಪಾತ್ರದ ಕುರಿತ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಚಿತ್ರ ತಂಡ ಈಗಾಗಲೇ ಹೈದರಾಬಾದ್‍ನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಈ ಚಿತ್ರದಲ್ಲಿ ಸುದೀಪ್ ಖಡಕ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮತ್ತೊಂದು ಪಾತ್ರದಲ್ಲಿ ನಿರೂಪ್ ಭಂಡಾರಿ ಅಭಿನಯಿಸಿದ್ದಾರೆ ಎನ್ನಲಾಗಿದೆ.

    ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ಬಂಡವಾಳ ಹೂಡಿದ್ದಾರೆ. ಮೊದಲ ಹಂತದ ಚಿತ್ರೀಕರಣ ಹೈದರಾಬಾದ್‍ನಲ್ಲಿ ನಡೆಯಲಿದ್ದು, 2ನೇ ಹಂತದ ಚಿತ್ರೀಕರಣವನ್ನು ಸಿಲಿಕಾನ್ ಸಿಟಿಯಲ್ಲಿ ನಡೆಸಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚಿತ್ರದ ಕುರಿತು ಇರುವ ಕುತೂಹಲದಷ್ಟೇ, ನಾಯಕಿಯಾರು ಎಂಬುದರ ಕುರಿತು ಸಹ ಇದೆ. ಟಾಲಿವುಡ್ ಬೆಡಗಿ ಸಮಂತಾ ಅಕ್ಕಿನೇನಿ ಹೆಸರು ಮೊದಲ ಸ್ಥಾನದಲ್ಲಿದೆ. ಆದರೆ ಇನ್ನೂ ಖಚಿತವಾಗಿಲ್ಲ.

    ರಾಜಮೌಳಿ ನಿರ್ದೇಶನದ ಈಗ ಸಿನಿಮಾದಲ್ಲಿ ಕ್ಯೂಟ್ ಬೆಡಗಿ ಸಮಂತಾ ಕಿಚ್ಚನ ಜೊತೆಯಾಗಿದ್ದರು. ಇದೀಗ ಮತ್ತೊಮ್ಮೆ ಅಭಿನಯ ಚಕ್ರವರ್ತಿಗೆ ಜೋಡಿಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿ ಬರುತ್ತಿವೆ. ಅಲ್ಲದೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಅವರ ಹೆಸರು ಸಹ ಕೇಳಿಬರುತ್ತಿದೆ. ಯಾರು ಅಂತಿಮವಾಗಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

  • ‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

    ‘ಟಕ್ಕರ್’ಗಾಗಿ ಬಂತು ಫ್ಯಾಂಟಮ್!

    ನೋಜ್ ನಾಯಕನಟನಾಗಿ ನಟಿಸುತ್ತಿರುವ `ಟಕ್ಕರ್’ ಚಿತ್ರ ಒಂದಲ್ಲಾ ಒಂದು ವಿಚಾರಕ್ಕೆ ಸೌಂಡ್ ಮಾಡುತ್ತಲೇ ಇದೆ. ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ `ಟಕ್ಕರ್’ ಈಗಾಗಲೇ ಬಹುಪಾಲು ಚಿತ್ರೀಕರಣವನ್ನೂ ಪೂರೈಸಿದೆ.

    ಮೈಸೂರಿನಲ್ಲಿ ಸರಿಸುಮಾರು ಒಂದು ತಿಂಗಳ ಕಾಲ ಬೀಡುಬಿಟ್ಟು ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು ನಂತರ ಬೆಂಗಳೂರಿಗೆ ಬಂದು, ನಾಗರಬಾವಿ ರಿಂಗ್ ರಸ್ತೆ, ಹೆಚ್.ಎಂ.ಟಿ. ಫ್ಯಾಕ್ಟರಿ ಮತ್ತು ಕಂಠೀರವ ಸ್ಟುಡಿಯೋ ಸೇರಿದಂತೆ ಒಂದಷ್ಟು ಕಡೆ ಚಿತ್ರದ ಸಾಹಸ ದೃಶ್ಯಗಳನ್ನು ಕೂಡಾ ಚಿತ್ರೀಕರಿಸಲಾಗಿತ್ತು.

    ಮೊನ್ನೆ ಹೆಚ್.ಎಂ.ಟಿ. ಗ್ರೌಂಡ್‍ನಲ್ಲಿ ನಡೆದ ಹೀರೋ ಇಂಟ್ರಡಕ್ಷನ್ ಫೈಟ್ ಇಡೀ ಚಿತ್ರರಂಗದ ಗಮನ ಸೆಳೆದಿದೆ. ಅತ್ಯಂತ ದುಬಾರಿ ಬಾಡಿಗೆಯ ಹತ್ತು ಸೆಕೆಂಡುಗಳಿಗೆ ಸಾವಿರ ಫ್ರೇಮುಗಳನ್ನು ಕ್ಯಾಪ್ಚರ್ ಮಾಡುವ ಫ್ಯಾಂಟಮ್ ಕ್ಯಾಮೆರಾವನ್ನು ಈ ಚಿತ್ರೀಕರಣಕ್ಕೆ ಬಳಸಲಾಗಿದೆ ಎಂದು ನಿರ್ಮಾಪಕ ನಾಗೇಶ್ ಕೋಗಿಲು ತಿಳಿಸಿದ್ದಾರೆ.

    ಬಿಗ್ ಬಜೆಟ್ ಸಿನಿಮಾಗಳಲ್ಲಿ ಮತ್ತು ಸೂಪರ್ ಸ್ಟಾರ್ ಗಳ ಚಿತ್ರಗಳು ಸೇರಿದಂತೆ ಅಪರೂಪಕ್ಕೆ ಬಳಸುವ ಈ ಕ್ಯಾಮೆರಾವನ್ನು `ಟಕ್ಕರ್’ ಚಿತ್ರಕ್ಕಾಗಿ ಹೈದ್ರಾಬಾದಿನಿಂದ ತರಿಸಲಾಗಿತ್ತು. ರಂಗಿತರಂಗ, ರಾಜರಥ, ಇರುವುದೆಲ್ಲವ ಬಿಟ್ಟು ಮೊದಲಾದ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿ ಕ್ರಿಯಾಶೀಲ ಕ್ಯಾಮರಾಮೆನ್ ಎಂದೇ ಹೆಸರಾಗಿರುವ ವಿಲಿಯಮ್ ಡೇವಿಡ್ ಫ್ಯಾಂಟಮ್ ಕ್ಯಾಮೆರಾದಲ್ಲಿ `ಟಕ್ಕರ್’ ಚಿತ್ರದ ಸಾಹಸ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅಂದ ಹಾಗೆ, ಟಕ್ಕರ್ ಚಿತ್ರದ ಎಲ್ಲಾ ಸಾಹಸ ದೃಶ್ಯಗಳನ್ನೂ ಖ್ಯಾತ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಹೊಸಾ ಬಗೆಯಲ್ಲಿ ಸಂಯೋಜಿಸಿರೋದು ವಿಶೇಷ.

    ಇನ್ನು ಈ ಚಿತ್ರದಲ್ಲಿ ಪುಟ್‍ಗೌರಿ ಮದುವೆ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಲೋಕಿ ಮನೋಜ್ ಎದುರು ಟಕ್ಕರ್ ಕೊಡುವ ವಿಲನ್ ಆಗಿ ಮಿಂಚಿದ್ದಾರೆ. ಚಿತ್ರೀಕರಣವನ್ನು ಬಹುತೇಕ ಕಂಪ್ಲೀಟ್ ಮಾಡಿರುವ `ಟಕ್ಕರ್’ ಟೀಮ್ ಉಳಿದಿರುವ ಹಾಡಿನ ಚಿತ್ರೀಕರಣಕ್ಕಾಗಿ ತಯಾರಿ ನಡೆಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv