Tag: Phantom

  • ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಅಗಲಿದ ಫ್ಯಾಂಟಮ್‌ – ಸೇನೆಯಿಂದ ಕಣ್ಣೀರ ವಿದಾಯ

    ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಅಗಲಿದ ಫ್ಯಾಂಟಮ್‌ – ಸೇನೆಯಿಂದ ಕಣ್ಣೀರ ವಿದಾಯ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಅಖ್ನೂರ್‌ನ ಸುಂದರ್‌ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನ (Army Dog) ಫ್ಯಾಂಟಮ್ (Phantom) ಪ್ರಾಣ ಕಳೆದುಕೊಂಡಿದೆ.

    ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಫ್ಯಾಂಟಮ್‌ (4) ಮೃತಪಟ್ಟಿದೆ. ಫ್ಯಾಂಟಮ್ ಬೆಲ್ಜಿಯನ್ ಮಾಲಿನೋಯಿಸ್ ತಳಿಯ ಶ್ವಾನವಾಗಿದ್ದು, 2020ರ ಮೇ 25 ರಂದು ಜನಿಸಿತ್ತು. ಅದು K9 ಘಟಕದ ಆಕ್ರಮಣಕಾರಿ ಶ್ವಾನವಾಗಿತ್ತು. ಇದು ಉಗ್ರರ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸುವ ತರಬೇತಿ ಪಡೆದ ಶ್ವಾನ ದಳದ ವಿಶೇಷ ಘಟಕವಾಗಿದೆ. ಫ್ಯಾಂಟಮ್‌ನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆಯನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದು ಸೇನೆ ಹೇಳಿದೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸೇನೆ, ನಮ್ಮ ಶ್ವಾನ ಫ್ಯಾಂಟಮ್‌ನ ತ್ಯಾಗಕ್ಕೆ ನಮನ ಸಲ್ಲಿಸುತ್ತೇವೆ. ನಮ್ಮ ಸೈನಿಕರು ಸಿಕ್ಕಿಬಿದ್ದ ಭಯೋತ್ಪಾದಕರ ಬಳಿಗೆ ತೆರಳುತ್ತಿದ್ದಾಗ ಫ್ಯಾಂಟಮ್ ಶತ್ರುಗಳ ದಾಳಿಗೆ ಒಳಗಾಯಿತು. ಅವನ ಧೈರ್ಯ, ನಿಷ್ಠೆ ಮತ್ತು ಸಮರ್ಪಣೆ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.

    ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನ ಅಸನ್, ಸುಂದರಬಂಡಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ಸೇನಾ ವಾಹನವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ದಾಳಿ ನಡೆಸಿದ್ದ ಉಗ್ರರ ಪತ್ತೆಗೆ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.

    ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಯೋಧನ ಜೀವ ಉಳಿಸಲು ಹೋಗಿ ಆರು ವರ್ಷದ ಸೇನೆಯ ಶ್ವಾನ ಕೆಂಟ್ ಸಾವನ್ನಪ್ಪಿತ್ತು. ಅದಕ್ಕೂ ಮೊದಲು ಕೆಂಟ್‌ 9 ಕಾರ್ಯಾಚರಣೆಗಳ ಭಾಗವಾಗಿತ್ತು.

  • ಫ್ಯಾಂಟಮ್ ಟೈಟಲ್ ಬದಲಾಗಿದ್ದೇಕೆ? ಅನೂಪ್ ಭಂಡಾರಿ ಸ್ಪಷ್ಟನೆ

    ಫ್ಯಾಂಟಮ್ ಟೈಟಲ್ ಬದಲಾಗಿದ್ದೇಕೆ? ಅನೂಪ್ ಭಂಡಾರಿ ಸ್ಪಷ್ಟನೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಾಗಿದ್ದೇಕೆ ಅನ್ನೋ ಪ್ರಶ್ನೆಗೆ ನಿರ್ದೇಶಕ ಅನೂಪ್ ಭಂಡಾರಿ ಸ್ಪಷ್ಟನೆ ನೀಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿರುವ ಅನೂಪ್ ಭಂಡಾರಿ, ಸಿನಿಮಾದ ಚಿತ್ರೀಕರಣ ಆರಂಭವಾದಾಗ ಅರ್ಧ ಮುಖದ ಫೋಟೋ ಹಾಕಿ ವಿಕ್ರಾಂತ್ ರೋಣ ಡ್ಯೂಟಿಗೆ ಹಾಜರು ಅಂತ ಹಾಕಿಕೊಂಡಿದ್ದಾರೆ. ಫ್ಯಾಂಟಮ್ ಟೈಟಲ್ ಗಿಂತ ವಿಕ್ರಾಂತ್ ರೋಣ ಹೆಸರು ಹೆಚ್ಚು ಸದ್ದು ಮಾಡಿದೆ. ಹಾಗಾಗಿ ಸಿನಿಮಾ ಟೈಟಲ್ ಬದಲಿಸಲಾಗಿದೆ. ವಿಕ್ರಾಂತ್ ರೋಣ ಅಲ್ಲಿಂದ ತಂದಿರೋದ ಶೀರ್ಷಿಕೆ ಅಲ್ಲ. ಇದು ಸಿನಿಮಾದ ನಿಮ್ಮ ಹೀರೋ ಹೆಸರು. ಹಾಗಾಗಿ ಅಭಿಮಾನಿಗಳ ಇಷ್ಟದಂತೆ ಫ್ಯಾಂಟಮ್ ಸಿನಿಮಾವನ್ನ ವಿಕ್ರಾಂತ್ ರೋಣನನ್ನಾಗಿ ಪರಿಚಯಿಸಲಾಗ್ತಿದೆ ಎಂದು ತಿಳಿಸಿದ್ದಾರೆ.

    ವಿಕ್ರಾಂತ್ ರೋಣನಾಗಿ ಜನವರಿ 31ರಂದು ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ. ನಿರ್ದೇಶಕ ಅನೂಪ್ ಭಂಡಾರಿ, ಜನವರಿ 31 ರಂದು ಟೈಟಲ್ ಲೋಗೋ ಹಾಗೂ 3 ನಿಮಿಷದ ವೀಡಿಯೋವನ್ನು ಬುರ್ಜ್ ಖಲೀಫ ಮೇಲೆ ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ.

  • ಫ್ಯಾಂಟಮ್ ನಂತ್ರ ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರಾ ಕಿಚ್ಚ?

    ಫ್ಯಾಂಟಮ್ ನಂತ್ರ ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರಾ ಕಿಚ್ಚ?

    ಬೆಂಗಳೂರು: ಫ್ಯಾಂಟಮ್ ಚಿತ್ರದ ನಂತರ ಕಿಚ್ಚ ಸುದೀಪ್ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬರುತ್ತಿದೆ.

    ಹೌದು ಸದ್ಯ ಕಿಚ್ಚ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಕೊರೊನಾ ಲಾಕ್‍ಡೌನ್ ಮುಗಿದ ಬಳಿಕ ಸಿನಿಮಾ ಶೂಟಿಂಗ್ ಭರದಿಂದ ಸಾಗಿ ಇನ್ನೇನು ಅಂತಿಮ ಹಂತಕ್ಕೆ ಬಂದು ನಿಂತಿದೆ. ಹೀಗಿರುವಾಗ ಕಿಚ್ಚ ಈ ಸಿನಿಮಾ ಮುಗಿದ ಬಳಿಕ ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಕಿಚ್ಚ ಸುದೀಪ್ ಅವರು ಸುಖಾಸುಮ್ಮನೆ ಚಿತ್ರವನ್ನು ನಿರ್ದೇಶನ ಮಾಡಲು ಕೈಹಾಕುವುದಿಲ್ಲ. ಕೊರೊನಾ ಬಿಡುವಿನ ಸಮಯ ಮತ್ತು ಫ್ಯಾಂಟಮ್ ಚಿತ್ರದ ಶೂಟಿಂಗ್ ನಡುವೆ ಒಂದು ಕಥೆ ರೆಡಿ ಮಾಡಿದ್ದಾರೆ. ಅವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಓನ್ ಲೈನ್ ಸ್ಟೋರಿಯನ್ನು ಕಿಚ್ಚ ಮುಂಚೆಯೇ ಸಿದ್ಧ ಮಾಡಿದ್ದರಂತೆ. ಈಗ ಸಿನಿಮಾದ ಪೂರ್ತಿ ಸ್ಕ್ರಿಪ್ಟ್ ರೆಡಿಯಾಗಿದ್ದು, ಫ್ಯಾಂಟಮ್ ಮುಗಿದ ಬಳಿಕ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

    ಕಿಚ್ಚ ಸುದೀಪ್ ಅವರು ತಾವು ನಿರ್ದೇಶನ ಮಾಡುತ್ತಿರುವ ಸಿನಿಮಾದ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಸಿನಿಮಾ ನಿರ್ದೇಶನ ಮಾಡುವುದು ಪಕ್ಕ ಎಂಬ ಮಾತು ಸ್ಯಾಂಡಲ್‍ವುಡ್ ಅಡ್ಡದಲ್ಲಿ ಗಿರಕಿ ಹೊಡೆಯುತ್ತಿದೆ. ಈ ನಡುವೆ ಅಪಾರ ದಿನಗಳ ಬಳಿಕ ಕಿಚ್ಚ ನಿರ್ದೇಶನ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಅಂತ್ಯವಾದ ಬಳಿಕ ಕಿಚ್ಚ ತಮ್ಮ ಹೊಸ ಸಿನಿಮಾವನ್ನು ಘೋಷಣೆ ಮಾಡಲಿದ್ದಾರೆ.

    ಸುದೀಪ್ ಅವರಿಗೆ ನಿರ್ದೇಶನ ಎಂಬುದು ಹೊಸದೇನಲ್ಲ. ಈ ಹಿಂದೆ 2006ರಲ್ಲಿ ಮೈ ಆಟೋಗ್ರಾಫ್ ಎಂಬ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿ ತಾವೇ ನಟಿಸಿದ್ದರು. ನಂತರ 2011ರಲ್ಲಿ ಕೆಂಪೇಗೌಡ ಸಿನಿಮಾ ನಿರ್ದೇಶನ ಮಾಡಿದ್ದರು. ಜೊತೆಗೆ 2016ರಲ್ಲಿ ಮಾಣಿಕ್ಯ ಸಿನಿಮಾವನ್ನು ಅವರೇ ಡೈರೆಕ್ಟ್ ಮಾಡಿ ಯಶಸ್ವಿಯಾಗಿದ್ದರು. ಸದ್ಯ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಫ್ಯಾಂಟಮ್ ಚಿತ್ರದ ಅಂತಿಮ ಹಂತದ ಶೂಟಿಂಗ್ ನಡೆಯುತ್ತಿದೆ.

  • ಕಿಚ್ಚನ ಜೊತೆ ಸ್ಟೆಪ್ ಹಾಕುವ ಬಾಲಿವುಡ್ ಬೆಡಗಿ ಯಾರು?

    ಕಿಚ್ಚನ ಜೊತೆ ಸ್ಟೆಪ್ ಹಾಕುವ ಬಾಲಿವುಡ್ ಬೆಡಗಿ ಯಾರು?

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಹವಾ ಜೋರಾಗಿದ್ದು, ಹೆಚ್ಚಿನ ಅಪ್‍ಡೇಟ್ ಸಹ ಸಿಗುತ್ತಿದೆ. ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಫ್ಯಾಂಟಮ್ ಸಿನಿಮಾದಲ್ಲಿ ಕಿಚ್ಚನ ಜೊತೆ ಬಾಲಿವುಡ್ ಬೆಡಗಿಯರು ಸ್ಟೆಪ್ ಹಾಕಲಿದ್ದಾರಂತೆ.

    ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಭಾರೀ ಸದ್ದು ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಸದ್ಯ ಹೈದರಾಬಾದ್‍ನಲ್ಲಿ ಚಿತ್ರತಂಡ ಮೊಕ್ಕಾಂ ಹೂಡಿದೆ. ಅಲ್ಲದೆ ಇದಾದ ಬಳಿಕ ಕೊನೇಯ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಮಾಡಲು ನಿರ್ಧರಿಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಿನಿಮಾ ಅಂಗಳದಿಂದ ಹೊರ ಬಿದ್ದಿದೆ.

    ಇತ್ತೀಚೆಗೆ ತಾವು ವರ್ಕೌಟ್ ಮಾಡಿ ದಂಡಿಸಿರುವ ದೇಹದ ಹಿಂಬದಿಯ ಫೋಟೋವನ್ನು ಹಂಚಿಕೊಂಡಿದ್ದ ಕಿಚ್ಚ, ಒಳ್ಳೆಯ ಆಹಾರ, ಡಿಸೆಂಟ್ ಲೈಫ್‍ಸ್ಟೈಲ್, ಅಲ್ಪ ಪ್ರಮಾಣದ ಶಿಸ್ತು ಇವುಗಳ ಜೊತೆಗೆ ತುಂಬಾ ದಿನಗಳ ನಂತರ ಮತ್ತೆ ಒಳ್ಳೆಯ ವರ್ಕೌಟ್ ಮಾಡಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಫಿಟ್ನೆಸ್ ಮಂತ್ರವನ್ನು ರೀವಿಲ್ ಮಾಡಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿನಿಂದ ಫ್ಯಾಂಟಮ್ ಸಿನಿಮಾ ಚಿತ್ರೀಕರಣದಲ್ಲಿ ನಿರತವಾಗಿದ್ದು, ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ. ಡಿಸೆಂಬರ್ 4ರಿಂದ ಆರಂಭವಾಗಲಿರುವ ಲಾಸ್ಟ್ ಶೆಡ್ಯೂಲ್‍ಗೆ ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡು ಸುದ್ದಿಯಾಗಿದ್ದರು.

    ಇದೀಗ ವಿಶೇಷ ಡ್ಯಾನ್ಸ್ ಕುರಿತು ಚಿತ್ರ ತಂಡ ಯೋಚಿಸಿದ್ದು, ಅದರಲ್ಲೂ ಬಾಲಿವುಡ್ ಬೆಡಗಿಯರನ್ನು ಕರೆ ತರಲು ಚಿಂತನೆ ನಡೆಸಿದ್ದಾರೆ. ಚಿತ್ರ ತಂಡ ಈಗಾಗಲೇ ಇಬ್ಬರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಬಾಲಿವುಡ್ ಸೆನ್ಸೇಷನ್ ನಟಿ ಕತ್ರಿನಾ ಕೈಫ್ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ ಅವರನ್ನು ಕಿಚ್ಚಿನ ಜೊತೆ ಹೆಜ್ಜೆ ಹಾಕಲು ಅಪ್ರೋಚ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಪ್ಯಾನ್ ಇಂಡಿಯಾ ರೀತಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ.

    ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿತ್ತು, ಬಳಿಕ ಸರ್ಕಾರ ಅನುಮತಿ ನೀಡಿದ ಮೇಲೆ ಹೈದರಾಬಾದ್‍ನಲ್ಲಿ ಶೂಟಿಂಗ್ ಆರಂಭವಾಗಿತ್ತು. ಇದೀಗ ಕೊನೆಯ ಹಂತದ ಚಿತ್ರೀಕರಣವಷ್ಟೇ ಬಾಕಿ ಇದೆ. ಕೇರಳದಲ್ಲಿ ಚಿತ್ರೀಕಣಕ್ಕೆ ತಂಡ ಸಜ್ಜಾಗುತ್ತಿದೆ. ಈ ಮಧ್ಯೆಯೇ ಈ ಸಪ್ರ್ರೈಸಿಂಗ್ ಸುದ್ದಿ ಹೊರ ಬಿದ್ದಿದೆ.

    ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದು, ಜಾಕ್ ಮಂಜು ನಿರ್ಮಿಸುತ್ತಿದ್ದಾರೆ. ಅಜ್ನೀಶ್ ಲೋಕ್‍ನಾಥ್ ಸಂಗೀತ ಚಿತ್ರಕ್ಕಿದೆ. ಶೂಟಿಂಗ್ ವೇಳೆ ಬಿಡುಗಡೆಯಾದ ಪೋಸ್ಟರ್‍ಗಳು ಕುತೂಹಲವನ್ನು ಹೆಚ್ಚಿಸಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ.

  • ಫಿಟ್ನೆಸ್ ಮಂತ್ರ – ಕಿಚ್ಚನ ಖಡಕ್ ವರ್ಕೌಟ್‍ಗೆ ಅಭಿಮಾನಿಗಳು ಫಿದಾ

    ಫಿಟ್ನೆಸ್ ಮಂತ್ರ – ಕಿಚ್ಚನ ಖಡಕ್ ವರ್ಕೌಟ್‍ಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಕಿಚ್ಚ ಸುದೀಪ್ ಅವರು ಖಡಕ್ ಆಗಿ ವರ್ಕೌಟ್ ಮಾಡಿರುವ ಫೋಟೋ ಜೊತೆಗೆ ತಮ್ಮ ಫಿಟ್ನೆಸ್ ಮಂತ್ರವನ್ನು ರಿವೀಲ್ ಮಾಡಿದ್ದು, ಅಭಿಮಾನಿಗಳು ಕಿಚ್ಚನ ಬೇರ್ ಬಾಡಿ ನೋಡಿ ಫಿದಾ ಆಗಿದ್ದಾರೆ.

    ಹೀರೋಗಳು ಎಂದಮೇಲೆ ತಮ್ಮ ಫಿಟ್ನೆಸ್ ಕಡೆ ಗಮನಕೊಡಲೇಬೇಕು. ಇದಕ್ಕಾಗಿ ದಿನಾ ಬೆಳಗ್ಗೆ ಎದ್ದು ರಗಡ್ ಆಗಿ ವ್ಯಾಯಾಮ ಮಾಡಿ ತಮ್ಮ ದೇಹವನ್ನು ದಂಡಿಸಲೇಬೇಕು. ಈಗ ಕಿಚ್ಚ ಸುದೀಪ್ ಅವರು ಕೂಡ ಖಡಕ್ ಆಗಿ ವ್ಯಾಯಾಮ ಮಾಡಿದ್ದು, ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

    ತಾವು ವರ್ಕೌಟ್ ಮಾಡಿ ದಂಡಿಸಿರುವ ದೇಹದ ಹಿಂಬದಿಯ ಫೋಟೋವನ್ನು ಹಂಚಿಕೊಂಡಿರುವ ಕಿಚ್ಚ, ಒಳ್ಳೆಯ ಆಹಾರ, ಡಿಸೆಂಟ್ ಲೈಫ್‍ಸ್ಟೈಲ್, ಅಲ್ಪ ಪ್ರಮಾಣದ ಶಿಸ್ತು ಇವುಗಳ ಜೊತೆಗೆ ತುಂಬಾ ದಿನಗಳ ನಂತರ ಮತ್ತೆ ಒಳ್ಳೆಯ ವರ್ಕೌಟ್ ಮಾಡಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಫಿಟ್ನೆಸ್ ಮಂತ್ರವನ್ನು ರೀವಿಲ್ ಮಾಡಿದ್ದಾರೆ. ಜೊತೆಗೆ ಫ್ಯಾಂಟಮ್ ಸಿನಿಮಾದ ಚಿತ್ರೀಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ನಿರತವಾಗಿದ್ದು, ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ ಎಂದು ತಿಳಿಸಿದ್ದಾರೆ.

    ಕೊರೊನಾದಿಂದ ಸ್ಥಗಿತವಾಗಿದ್ದ ಫ್ಯಾಂಟಮ್ ಚಿತ್ರೀಕರಣ ಅನ್‍ಲಾಕ್ ಬಳಿಕ ಆರಂಭಗೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಸುದೀಪ್ ಮತ್ತು ನಟಿ ಅಪರ್ಣಾ ಬಲ್ಲಾಳ್ ಹುಟ್ಟುಹಬ್ಬದಂದು ಚಿತ್ರದಲ್ಲಿಯ ಇಬ್ಬರ ಲುಕ್ ರಿವೀಲ್ ಮಾಡಿತ್ತು. ಹಾಗೆಯೇ ದಟ್ಟ ಕಾನನದ ನಡುವೆ ಸುದೀಪ್ ದೋಣಿಯಲ್ಲಿ ಹೊರಟ ಧಗಿಧಗಿಸುವ ನೋಟ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು.

    ಈ ಚಿತ್ರವನ್ನು ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿಯವರು ನಿರ್ದೇಶನ ಮಾಡುತ್ತಿದ್ದಾರೆ. ಜಾಕ್ ಮಂಜು ಅವರು ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾಗೆ ಅಜ್ನೀಶ್ ಲೋಕ್‍ನಾಥ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಆರಂಭವಾದ ಇಲ್ಲಿಯವರೆಗೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತದೆ. ಜೊತೆಗೆ ಚಿತ್ರತಂಡ ಒಂದೇ ಒಂದೇ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ಕೂತೂಹಲವನ್ನು ಹೆಚ್ಚಿಸುತ್ತಾ ಬರುತ್ತಿದೆ.

  • ಅಧ್ಭುತ ಕಲ್ಪನೆಯ ಲೋಕದಲ್ಲಿ ಫ್ಯಾಂಟಮ್ ಕೊನೆ ಭಾಗದ ಚಿತ್ರೀಕರಣ

    ಅಧ್ಭುತ ಕಲ್ಪನೆಯ ಲೋಕದಲ್ಲಿ ಫ್ಯಾಂಟಮ್ ಕೊನೆ ಭಾಗದ ಚಿತ್ರೀಕರಣ

    ಬೆಂಗಳೂರು: ಅನ್‍ಲಾಕ್ ಬಳಿಕ ಸ್ಯಾಂಡಲ್‍ವುಡ್ ನಲ್ಲಿ ಸದ್ದು ಮಾಡುತ್ತಿರುವ ಫ್ಯಾಂಟಮ್ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ಕುರಿತು ಫ್ಯಾಂಟಮ್ ಲೋಕದ ವಿಕ್ರಾಂತ ರೋಣ ಮಾಹಿತಿ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಕುರ್ಚಿ ಹಾಕಿಕೊಂಡು ಕುಳಿತ ಫೋಟೋ ಹಂಚಿಕೊಂಡಿರುವ ಸುದೀಪ್ ಸಿನಿಮಾದ ಅಪ್‍ಡೇಟ್ ನೀಡಿದ್ದಾರೆ.

    ಫ್ಯಾಂಟಮ್ ಚಿತ್ರದ ಕೊನೆಯ ಭಾಗದ ಚಿತ್ರೀಕರಣ ನಡೆಯುತ್ತಿದೆ. ಚಾಲೆಂಜಿಂಗ್ ಎಪಿಸೋಡ್ ಮತ್ತು ದೃಶ್ಯವಾಳಿಗಳ ಕಲ್ಪನೆ ಸಹ ಮತ್ತೊಂದು ದೊಡ್ಡ ಟಾಸ್ಕ್, ಹೈದಾರಾಬಾದ್ ನಲ್ಲಿ ಕೊನೆಯ ಶೆಡ್ಯೂಲ್ ಇದಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

    ಕೊರೊನಾದಿಂದ ಸ್ಥಗಿತವಾಗಿದ್ದ ಫ್ಯಾಂಟಮ್ ಚಿತ್ರೀಕರಣ ಅನ್‍ಲಾಕ್ ಬಳಿಕ ಆರಂಭಗೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಸುದೀಪ್ ಮತ್ತು ನಟಿ ಅಪರ್ಣಾ ಬಲ್ಲಾಳ್ ಹುಟ್ಟುಹಬ್ಬದಂದು ಚಿತ್ರದಲ್ಲಿಯ ಇಬ್ಬರ ಲುಕ್ ರಿವೀಲ್ ಮಾಡಿತ್ತು. ಹಾಗೆಯೇ ದಟ್ಟ ಕಾನನದ ನಡುವೆ ಸುದೀಪ್ ದೋಣಿಯಲ್ಲಿ ಹೊರಟ ಧಗಿಧಗಿಸುವ ನೋಟ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿಸಿತ್ತು.

  • ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಪವನ್ ಕಲ್ಯಾಣ್ ಭೇಟಿ ಮಾಡಿದ ಕಿಚ್ಚ ಸುದೀಪ್

    ಹೈದರಾಬಾದ್: ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ.

    ಹೈದರಾಬಾದ್‍ನ ಪವನ್ ಕಲ್ಯಾಣ್ ಅವರ ಕಚೇರಿಗೆ ಕಿಚ್ಚ ಸುದೀಪ್ ಭೇಟಿ ಮಾಡಿದ್ದು, ಈ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ. ಭೇಟಿ ಮಾಡಿದ ಕುರಿತು ಕಿಚ್ಚ ಸುದೀಪ್ ಸಹ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಸರಳ ವ್ಯಕ್ತಿತ್ವ ಹೊಂದಿರುವ ಮಾನವನನ್ನು ಭೇಟಿಯಾದೆ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು. ವಂಡರ್ ಫುಲ್ ಇಂಟರ್ಯಾಕ್ಟಿಂಗ್ ವಿತ್ ಯು ಸರ್ ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

    ಸುದೀಪ್ ಟ್ವೀಟ್ ಮಾಡುವುದಕ್ಕೂ ಮೊದಲೇ ಇಬ್ಬರು ಭೇಟಿ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು. ಪವನ್ ಕಲ್ಯಾಣ್ ಅವರ ಕಚೇರಿಯಲ್ಲಿ ಇಬ್ಬರೂ ನಟರು ಸುಮಾರು ಹೊತ್ತು ಚರ್ಚೆ ನಡೆಸಿದ್ದಾರೆ. ಆದರೆ ಯಾವ ಕಾರಣಕ್ಕೆ ಕಿಚ್ಚ ಸುದೀಪ್ ಪವನ್ ಕಲ್ಯಾಣ್ ಭೇಟಿಯಾಗಿದ್ದಾರೆ ಎಂಬುದಕ್ಕೆ ಖಚಿತ ಮಾಹಿತಿ ತಿಳಿದಿಲ್ಲ.

    ಅನ್‍ಲಾಕ್ ಬಳಿಕ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಬಹುತೇಕ ಸಿನಿಮಾಗಳ ಶೂಟಿಂಗ್ ಭರದಿಂದ ಸಾಗಿದೆ. ಅದೇ ರೀತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಫ್ಯಾಂಟಮ್ ಚಿತ್ರದ ಶೂಟಿಂಗ್ ಇತ್ತೀಚೆಗೆ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲೇ ನಡೆಯುತ್ತಿತ್ತು. ಹೀಗಾಗಿ ಫ್ಯಾಂಟಮ್ ಚಿತ್ರದ ಇಡೀ ತಂಡ ಹೈದರಾಬಾದ್‍ನಲ್ಲೇ ಬೀಡು ಬಿಟ್ಟಿದೆ. ಇದೇ ಗ್ಯಾಪ್‍ನಲ್ಲಿ ಕಿಚ್ಚ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.

    ಕಿಚ್ಚ ಸುದೀಪ್ ಸದ್ಯ ಕೋಟಿಗೊಬ್ಬ-3 ಹಾಗೂ ಫ್ಯಾಂಟಮ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಆಗಲೇ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಅನುಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವೇಳೆ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕಿಚ್ಚ ಸುದೀಪ್ ಅಚ್ಚರಿ ನೀಡಿದ್ದಾರೆ.

  • ಫ್ಯಾಂಟಮ್‍ನಲ್ಲಿ ವಿಕ್ರಾಂತ್ ರೋಣನ ಬ್ಯಾಟಿಂಗ್-ವಿಡಿಯೋ ನೋಡಿ

    ಫ್ಯಾಂಟಮ್‍ನಲ್ಲಿ ವಿಕ್ರಾಂತ್ ರೋಣನ ಬ್ಯಾಟಿಂಗ್-ವಿಡಿಯೋ ನೋಡಿ

    ಬೆಂಗಳೂರು: ಫ್ಯಾಂಟಮ್ ಚಿತ್ರೀಕರಣದ ವೇಳೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬ್ಯಾಟ್ ಬೀಸಿದ್ದಾರೆ. ಚಿತ್ರೀಕರಣದ ವೇಳೆ ತಾವು ಹೇಗೆ ಸಮಯ ಕಳೆಯುತ್ತೇವೆ ಎಂಬುದರ ವಿಡಿಯೋವನ್ನು ಸುದೀಪ್ ಇಂದು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಶೂಟಿಂಗ್ ಸೆಟ್ ಹೊರಗಡೆ ಕಿಚ್ಚ ಸುದೀಪ್ ಚಿತ್ರತಂಡದ ಜೊತೆಗೆ ಕ್ರಿಕೆಟ್ ಆಡಿದ್ದಾರೆ. ನಮ್ಮ ಸುತ್ತಲೂ ನಡೆಯುತ್ತಿರುವುದರ ಜೊತೆಗೆ ನಾವು ಸಹ ಸಾಗಬೇಕಿದೆ. ಇವುಗಳಲ್ಲಿ ಕೆಲವೇ ಕೆಲವು ಉತ್ತಮವಾದ ಕ್ಷಣಗಳು ನಮ್ಮದಾಗುತ್ತವೆ. ನಿಮಗೆ ಸಂತೋಷ ಮತ್ತು ಶಕ್ತಿಯನ್ನು ನೀಡುವ ಉತ್ತಮವಾದ ಅಂಶಗಳನ್ನು ಅತ್ಯುತ್ತಮ ಮಾಡಿಕೊಳ್ಳುವುದು ಒಳ್ಳೆಯದು. ಎರಡೂವರೆ ತಿಂಗಳು ಚಿತ್ರೀಕರಣದಲ್ಲಿ ಭಾಗಿಯಾಗಲು ಅವಕಾಶ ನೀಡಿದ ಫ್ಯಾಂಟಮ್ ಚಿತ್ರತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾನು ಹೊಡೆದಿರುವ ಶಾಟ್ ಅಷ್ಟೇನೂ ಕೆಟ್ಟದಾಗಿಲ್ಲ ಅಲ್ಲವಾ? ಎಂದು ಸುದೀಪ್ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    ಲಾಕ್‍ಡೌನ್ ಬಳಿಕ ಫ್ಯಾಂಟಮ್ ಸಿನಿಮಾದಲ್ಲಿ ಶೂಟಿಂಗ್‍ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಚಿತ್ರೀಕರಣ ಆರಂಭವಾದಾಗ ಚಿತ್ರತಂಡ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡುವ ಮೂಲಕ ಸಿನಿ ಅಂಗಳದಲ್ಲಿ ಧೂಳೆಬ್ಬಿಸಿತ್ತು. ತದನಂತರ ಕೋಟೆ ದ್ವಾರದಲ್ಲಿ ಗನ್ ಹಿಡಿದು ಕುಳಿತ ರೋಣನ ಲುಕ್ ಗೆ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದರು. ಇತ್ತೀಚೆಗೆ ಫ್ಯಾಂಟಮ್ ಮೂಲಕ ಹಿರಿತೆರೆಗೆ ಎಂಟ್ರಿ ಕೊಡುತ್ತಿರುವ ನಟಿ ನೀತಾ ಅಶೋಕ್ ಪಾತ್ರದ ಬಗ್ಗೆ ಮಾಹಿತಿ ನೀಡಿತ್ತು.

    ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ರೂ ಸುದೀಪ್ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಯಾಂಕ್ ಅಗರ್ವಾಲ್ ಆಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಂಜಾಬ್ ಮತ್ತು ಆರ್‍ಸಿಬಿ ತಂಡಗಳ ನಡುವೆ ಪಂದ್ಯವಿದ್ದಾಗಲೂ ಸುದೀಪ್ ಟ್ವೀಟ್ ಮಾಡಿದ್ದರು.

    ಫ್ಯಾಂಟಮ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಭರವಸೆಯನ್ನು ಹೆಚ್ಚಿಸುತ್ತಾ ಬಂದಿದೆ. ಲಾಕ್‍ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ ಫ್ಯಾಂಟಮ್, ಚಿತ್ರದ ಹೊಸ ಹೊಸ ಲುಕ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೈಯಲ್ಲಿ ಗನ್ ಹಿಡಿದು ಕುಳಿತ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ದಟ್ಟಾರಣ್ಯದಲ್ಲಿ ಹೊರಟ ವಿಕ್ರಾಂತ್ ರೋಣನ ಒಂದು ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

  • ಕಿಚ್ಚನ ಬರ್ತ್‍ಡೇಗೆ ವಿಶ್ ಮಾಡಿದ ‘ಮಾರಿಗುಡ್ಡದ ಗಡ್ಡಧಾರಿಗಳು’

    ಕಿಚ್ಚನ ಬರ್ತ್‍ಡೇಗೆ ವಿಶ್ ಮಾಡಿದ ‘ಮಾರಿಗುಡ್ಡದ ಗಡ್ಡಧಾರಿಗಳು’

    ಇಂದು ಕಿಚ್ಚ ಸುದೀಪ್ ಅವರು ಹುಟ್ಟಿದ ದಿನ. ಅಭಿಮಾನಿಗಳ ಕಡೆಯಿಂದ, ನಾನಾ ದಿಕ್ಕುಗಳಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅದೇ ಖುಷಿಯಲ್ಲಿ ಅವರು ನಟಿಸಿರೋ ಫ್ಯಾಂಟಮ್ ಚಿತ್ರವೂ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಕಿಚ್ಚನಿಗೆ ‘ಮಾರಿಗುಡ್ಡದ ಗಡ್ಡಧಾರಿಗಳು’ ಡಿಫರೆಂಟಾಗೊಂದು ವಿಶ್ ಮಾಡಿದ್ದಾರೆ!

    ಅಂದಹಾಗೆ ಮಾರಿಗುಡ್ಡದ ಗಡ್ಡಧಾರಿಗಳು ಅನ್ನೋದು ಸಿನಿಮಾವೊಂದರ ಟೈಟಲ್ಲು. ಕೇಳಿದಾಕ್ಷಣವೇ ನಿಗೂಢ ಕಂಟೆಂಟಿನ ಸುಳಿವು ಕೊಡುವಂತಿರೋ ಈ ಸಿನಿಮಾ ಪೋಸ್ಟರ್ ಡಿಸೈನರ್ ಆಗಿ ಹೆಸರು ಮಾಡಿರುವ ರಾಜೀವ್ ಚಂದ್ರಕಾಂತ್ ನಾಯ್ಕರ್ ಅವರ ಮೊದಲ ಕನಸು. ವಿಶೇಷ ಅಂದ್ರೆ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಲೇ ಅವರು ಟೈಟಲ್ ಅನಾವರಣಗೊಳಿಸಿದ್ದಾರೆ. ಇದನ್ನೂ ಓದಿ: ಕಾಮಿಡಿ ಕಚಗುಳಿಯಲ್ಲಿ ಕೋಟಿಗೊಬ್ಬನ ಟೀಸರ್ ಔಟ್

    ರಾಜೀವ್ ಚಂದ್ರಕಾಂತ್ ನಾಯ್ಕರ್ ಕ್ರಿಯೇಟಿವ್ ಪೋಸ್ಟರ್ ಡಿಸೈನರ್ ಆಗಿ ಚಿರಪರಿಚಿತರು. ಈ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಪ್ರಧಾನ ಆಸಕ್ತಿಯಾಗಿರೋದು ಸಿನಿಮಾ ನಿರ್ದೇಶನ. ಹಲವಾರು ಪ್ರಸಿದ್ಧ ಧಾರಾವಾಹಿಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಅನಿವಾರ್ಯತೆಗೆ ಬಿದ್ದು ಪೋಸ್ಟರ್ ಡಿಸೈನರ್ ಆಗಿದ್ದರು.

    ಈ ಕ್ಷೇತ್ರದಲ್ಲಿಯೇ ಹೆಸರು ಮಾಡಿ ಸಾಕಷ್ಟು ಅವಕಾಶಗಳಿದ್ದಾಗಲೂ ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಮಾತ್ರ ಧುಮುಗುಡುತ್ತಲೇ ಇತ್ತು. ಅದಕ್ಕಾಗಿ ಅವರು ಕೊರೊನಾ ಕಾಲವನ್ನು ಸರಿಕಟ್ಟಾಗಿಯೇ ಬಳಸಿಕೊಂಡಿದ್ದಾರೆ. ಈ ಕಾಲಾವಧಿಯಲ್ಲಿ ಪಟ್ಟಾಗಿ ಕೂತು ಚೆಂದದ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಸಿದ್ಧಪಡಿಸಿಕೊಂಡಿದ್ದಾರೆ. ಇದೀಗ ಅದಕ್ಕೆ ಮಾರಿ ಗುಡ್ಡದ ಗಡ್ಡಧಾರಿಗಳು ಎಂಬ ಆಕರ್ಷಕ ಶೀರ್ಷಿಕೆಯೂ ನಿಕ್ಕಿಯಾಗಿದೆ.

    ಈ ಹಿಂದೆ ಅಯ್ಯೋ ರಾಮ ಅಂತೊಂದು ಚಿತ್ರ ನಿರ್ಮಾಣ ಮಾಡಿದ್ದ ತ್ರಿವಿಕ್ರಮ ರಘು ಈ ಸಿನಿಮಾಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಅವರಿಗೆ ಅಶೋಕ್ ಇಳಂತಿಲ ಮತ್ತು ಪ್ರಸನ್ನ ಪಾಟೀಲ್ ಸಾಥ್ ಕೊಟ್ಟಿದ್ದಾರೆ. ಇನ್ನುಳಿದಂತೆ ಮುಖ್ಯ ಪಾತ್ರಕ್ಕೆ ಹೊಸ ಹುಡುಗ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಇನ್ನುಳಿದ ತಾರಾಗಣ, ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಚಾಲ್ತಿಯಲ್ಲಿದೆ.

    ಕಾದಂಬರಿ, ಕನ್ನಡಿ, ಗಾಳಿಪಟ ಮುಂತಾದ ಸೀರಿಯಲ್‍ಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ರಾಜೀವ್, ನಾಗಾಭರಣ ಅವರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಆ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಕೊಂಡು ಚೆಂದದ ಕಥೆಯನ್ನ ರೆಡಿ ಮಾಡಿಕೊಂಡಿದ್ದಾರಂತೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಮುಗಿಸಿದೆ. ಇದೇ ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭಿಸಲು ನಿರ್ಧರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾರಿಗುಡ್ಡದ ಗಡ್ಡಧಾರಿಗಳ ಬಗ್ಗೆ ಇನ್ನಷ್ಟು ರೋಚಕ ಸಂಗತಿಗಳು ಹೊರಬೀಳಲಿವೆ.

  • ಸುದೀಪ್ ಫ್ಯಾಂಟಮ್ ಲೋಕಕ್ಕೆ ಪನ್ನಾ ಎಂಟ್ರಿ

    ಸುದೀಪ್ ಫ್ಯಾಂಟಮ್ ಲೋಕಕ್ಕೆ ಪನ್ನಾ ಎಂಟ್ರಿ

    ಬೆಂಗಳೂರು: ಅನೂಪ್ ಭಂಡಾರಿ ಕಲ್ಪನೆಯ ಕಿಚ್ಚನ ಫ್ಯಾಂಟಮ್ ಲೋಕಕ್ಕೆ ಹೊಸ ಪಾತ್ರ ಪನ್ನಾ ಎಂಟ್ರಿಯಾಗಿದೆ. ಬುಧವಾರ ಫ್ಯಾಂಟಮ್ ಚಿತ್ರತಂಡ ಪನ್ನಾ ಪಾತ್ರ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿತ್ತು.

    ವಿಡಿಯೋ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪನ್ನಾ ಪಾತ್ರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಪನ್ನಾ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಹಾಗಾಗಿ ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಪನ್ನಾ ಸಾಹಸಿಯಾಗಿದ್ದು ಎಲ್ಲವನ್ನು ತಿಳಿದುಕೊಳ್ಳುವ ಕುತುಹೂಲ ಹೊಂದಿರುವ ಯುವತಿ. ಫ್ಯಾಂಟಮ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಬಹು ಪ್ರಮುಖ ಪಾತ್ರ. ನೀತಾ ಅಶೋಕ್ ಈ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಫ್ಯಾಂಟಮ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಭರವಸೆಯನ್ನು ಹೆಚ್ಚಿಸುತ್ತಾ ಬಂದಿದೆ. ಲಾಕ್‍ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ ಫ್ಯಾಂಟಮ್, ಚಿತ್ರದ ಹೊಸ ಹೊಸ ಲುಕ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೈಯಲ್ಲಿ ಗನ್ ಹಿಡಿದು ಕುಳಿತ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ದಟ್ಟಾರಣ್ಯದಲ್ಲಿ ಹೊರಟ ವಿಕ್ರಾಂತ್ ರೋಣನ ಒಂದು ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.