Tag: phani varma

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಬಿಗ್ ಬಾಸ್’ ತೇಜಸ್ವಿನಿ ಪ್ರಕಾಶ್

    ಸ್ಯಾಂಡಲ್‌ವುಡ್ (Sandalwood) ನಟಿ ತೇಜಸ್ವಿನಿ ಪ್ರಕಾಶ್ (Tejaswini Prakash) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಹೊಸ ಅತಿಥಿ ಆಗಮನ ಆಗುತ್ತಿರೋ ಸಂಭ್ರಮದಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪನಿ ವರ್ಮಾ ಜೊತೆ ತೇಜಸ್ವಿನಿ ಕಳೆದ ವರ್ಷ ಮಾರ್ಚ್ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಜರುಗಿತ್ತು. ಮದುವೆಯಾಗಿ 1 ವರ್ಷ ಕಳೆದಿದ್ದು, ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಮಸಣದ ಮಕ್ಕಳು, ಗಜ(Gaja), ಈ ಪ್ರೀತಿ ಏಕೆ ಭೂಮಿ ಮೇಲಿದೆ, ಸವಿ ಸವಿ ನೆನಪು, ಬಂಧು ಬಳಗ, ಅರಮನೆ, ಜೊತೆಯಾಗಿ ಹಿತವಾಗಿ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ವಿಜಯ್ ನಟನೆಯ ‘ಲಿಯೋ’ ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ

    2017ರಲ್ಲಿ ಕನ್ನಡದ ಬಿಗ್ ಬಾಸ್ ಶೋನಲ್ಲಿ (Bigg Boss Kannada) ಕಾಣಿಸಿಕೊಂಡಿದ್ದರು. ಬಳಿಕ ‘ನನ್ನರಸಿ ರಾಧೆ’ ಸೀರಿಯಲ್‌ನಲ್ಲಿ ಲಾವಣ್ಯ ಎಂಬ ಪಾತ್ರದಲ್ಲಿ ವಿಲನ್ ಆಗಿ ಬಣ್ಣ ಹಚ್ಚಿದ್ದರು. ಈ ಸೀರಿಯಲ್ ತೇಜಸ್ವಿನಿ ನಟಿಸಿದ ಕೊನೆಯ ಪ್ರಾಜೆಕ್ಟ್ ಆಗಿದೆ. ಸದ್ಯ ವೈಯಕ್ತಿಕ ಜೀವನದಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]