Tag: PG

  • ಬೆಂಗಳೂರು | ಕೋ ಲಿವಿಂಗ್ ಪಿಜಿಯಲ್ಲಿ ಸೆಕ್ಸ್‌ಗೆ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ

    ಬೆಂಗಳೂರು | ಕೋ ಲಿವಿಂಗ್ ಪಿಜಿಯಲ್ಲಿ ಸೆಕ್ಸ್‌ಗೆ ಒಪ್ಪದ ಯುವತಿಗೆ ಚಾಕು ಇರಿದ ಟೆಕ್ಕಿ

    – ಮದುವೆಯಾಗಿ ಮಗು ಇದ್ರೂ ಪಿಜಿಯಲ್ಲಿದ್ದ ಪಾತಕಿ

    ಬೆಂಗಳೂರು: ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ವೈಟ್ ಫೀಲ್ಡ್‌ನಲ್ಲಿರುವ (Whitefield) ಕೋ ಲಿವಿಂಗ್ ಪಿಜಿಯಲ್ಲಿ (Co-living PG) ನಡೆದಿದೆ.

    ಚಾಕು ಇರಿದ ಆರೋಪಿಯನ್ನು ಬಾಬು ಎಂದು ಗುರುತಿಸಲಾಗಿದೆ. ಈತ ಸಾಫ್ಟ್‌ವೇರ್ ಇಂಜಿನಿಯರ್‌ (Techie) ಆಗಿದ್ದು, ಮುದುವೆಯಾಗಿ ಮಗುವಿದೆ. ಆದರೂ ಒಬ್ಬನೇ ಪಿಜಿಯಲ್ಲಿ ವಾಸವಿದ್ದ. ಎರಡು ತಿಂಗಳ ಹಿಂದೆ ಅದೇ ಪಿಜಿಗೆ ಬಂದು ವಾಸವಿದ್ದ ಯುವತಿಯನ್ನು ಆರೋಪಿ ಪರಿಚಯ ಮಾಡಿಕೊಂಡಿದ್ದ. ಆಕೆಯ ಮೊಬೈಲ್‌ ನಂಬರ್ ಪಡೆದು ಫೋನ್‌ ಮಾಡಿ ಮಾತನಾಡುತ್ತಿದ್ದನಂತೆ. ಕಳೆದ ಮೂರು ದಿನದ ಹಿಂದೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ಒಪ್ಪದಿದ್ದಾಗ, ಆಕೆಯ ಖಾಸಗಿ ಫೋಟೊ ಇಟ್ಟುಕೊಂಡು 70 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಅಮೆರಿಕ ಪೊಲೀಸರ ಗುಂಡೇಟಿಗೆ ಭಾರತೀಯ ಟೆಕ್ಕಿ ಬಲಿ

    ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರ ಬಳಿ ಸಾಲ ಮಾಡಿ ಕೊಡುವುದಾಗಿ ಯುವತಿ ತಿಳಿಸಿದ್ದಳು. ಬಳಿಕ ಆಕೆಯ ಮೊಬೈಲ್ ಪಡೆದು 14 ಸಾವಿರ ರೂ. ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ. ಬಳಿಕ ಗಲಾಟೆ ಮಾಡಿ ಯುವತಿಯ ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.

    ಗಾಯಾಳು ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸಿಎಂ ನಿಂದಿಸಿದ್ದ ನಿವೃತ್ತ ಯೋಧನ ಬಂಧನ

  • ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

    ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯದ 127 ಪಿಜಿಗಳಿಗೆ ನೋಟಿಸ್ – 4 ಪಿಜಿಗಳಿಗೆ ದಂಡ

    ಬೆಂಗಳೂರು: ಪಿಜಿಗಳಲ್ಲಿ (PG) ಆಹಾರ ಸುರಕ್ಷತೆ ಕಾಪಾಡಿಕೊಳ್ಳದ ಹಿನ್ನೆಲೆ ರಾಜ್ಯದ 127 ಪಿಜಿಗಳಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ (FSSAI) ಇಲಾಖೆ ನೋಟಿಸ್ ನೀಡಿದೆ.

    ರಾಜ್ಯದ 305 ಪಿಜಿಗಳಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 127 ಪಿಜಿಗಳಲ್ಲಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಲಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗೆ ಮಂಜೂರಾದ ಜಾಗದಲ್ಲಿ ದೇಗುಲ – ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವು

    ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಪರೀಕ್ಷಿಸಿದ ವೇಳೆ ಸುರಕ್ಷತೆ ಕಾಪಾಡದೇ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆ 127 ಪಿಜಿಗಳಿಗೆ ನೋಟಿಸ್ ನೀಡಲಾಗಿದೆ. ಅದರಲ್ಲಿ ನಾಲ್ಕು ಪಿಜಿಗಳಿಗೆ ಸೇರಿ ಒಟ್ಟು 21,000 ರೂ. ದಂಡ ಹಾಕಲಾಗಿದೆ. ಇದನ್ನೂ ಓದಿ: Kolar| ಚೆಂಡು ಹೂವು ಬೆಲೆ ಕುಸಿತ – ರಸ್ತೆಬದಿ ಸುರಿದು ರೈತ ಆಕ್ರೋಶ

  • Bengaluru | ಪಿಜಿಯ 5ನೇ ಮಹಡಿಯಿಂದ ಜಿಗಿದು ಟೆಕ್ಕಿ ಯುವತಿ ಆತ್ಮಹತ್ಯೆ

    Bengaluru | ಪಿಜಿಯ 5ನೇ ಮಹಡಿಯಿಂದ ಜಿಗಿದು ಟೆಕ್ಕಿ ಯುವತಿ ಆತ್ಮಹತ್ಯೆ

    ಬೆಂಗಳೂರು: ಸಾಫ್ಟ್‌ವೇರ್‌ ಇಂಜಿನಿಯರ್ ಯುವತಿಯೊಬ್ಬಳು ತಾನು ವಾಸವಾಗಿದ್ದ ಪಿಜಿಯ (PG) 5ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ (Bengaluru Whitefield) ನಡೆದಿದೆ.

    ಆಂಧ್ರಪ್ರದೇಶದ ಕಡಪ ಮೂಲದ ಗೌತಮಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ನಗರದ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಗೌತಮಿ, ಗುರುವಾರ ಸಂಜೆ 7 ಗಂಟೆ ವೇಳೆಗೆ ವೈಟ್‌ಫೀಲ್ಡ್ನ ಪ್ರಶಾಂತ ಲೇಔಟ್‌ನ ಪಿಜಿಯ ಐದನೇ ಹಂತದಿಂದ ಬಿದ್ದು ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: Chhattisgarh | ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 14 ನಕ್ಸಲರು ಬಲಿ‌

    ವಿಚಾರ ತಿಳಿದ ಪೊಲೀಸರು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾಳೆ. ಈ ವೇಳೆ ಗೌತಮಿ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಸತ್ತಮೇಲೆ ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡಬೇಡಿ, ನಮ್ಮ ತಂದೆ ತಾಯಿಗೆ ಮೃತದೇಹವನ್ನು ಹಸ್ತಾಂತರ ಮಾಡಿ ಅಂತ ಬರೆದು ಕೊನೆಯಲ್ಲಿ ಪೋಷಕರಿಗೆ ಸಾರಿ ಅಂತಾ ಬರೆದಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

  • ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್‌ – ಕೋರಮಂಗಲ ಪೊಲೀಸರಿಂದ ಆರೋಪಿ ವಿರುದ್ಧ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್‌ – ಕೋರಮಂಗಲ ಪೊಲೀಸರಿಂದ ಆರೋಪಿ ವಿರುದ್ಧ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

    ಬೆಂಗಳೂರು: ಕೋರಮಂಗಲದ (Koramangala) ಪಿಜಿಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಭಿಷೇಕ್ ವಿರುದ್ಧ ಕೋರಮಂಗಲ ಪೊಲೀಸರು (Koramangala Police) ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.

    ಘಟನೆ ನಡೆದ 38 ದಿನಗಳ ಒಳಗಾಗಿ 39ನೇ ಎಸಿಎಂಎಂ ನ್ಯಾಯಾಲಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. 1,205 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಬಿಎನ್‌ಎಸ್ ಅಡಿಯಲ್ಲಿ ದಾಖಲಾದ ಕೊಲೆ ಪ್ರಕರಣದ ಮೊದಲ ಚಾರ್ಜ್‌ಶೀಟ್ ಇದಾಗಿದೆ. ಜುಲೈ 23ರ ರಾತ್ರಿ 11 ಗಂಟೆಗೆ ಕೋರಮಂಗಲದ ಲೇಡಿಸ್ ಪಿಜಿ ಒಳಗೆ ನುಗ್ಗಿ ಕೃತಿಕಾ ಎಂಬ ಯುವತಿಯನ್ನು ಅಭಿಷೇಕ್ ಕೊಲೆ ಮಾಡಿದ್ದ. 85 ಸಾಕ್ಷಿಗಳ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಇದನ್ನೂ ಓದಿ: Paris Paralympics 2024 | ಭಾರತಕ್ಕೆ ಮತ್ತೊಂದು ಪದಕ – ಕಂಚಿಗೆ ರುಬಿನಾ ಶೂಟ್‌

    ಸೈಕೋ ಅಭಿಷೇಕ್, ಮೃತ ಕೃತಿಕಾ ಸ್ನೇಹಿತೆಯನ್ನು ಲವ್ ಮಾಡುತ್ತಿದ್ದ. ಕೃತಿ ಗೆಳತಿಯನ್ನು ಪಾಗಲ್ ಪ್ರೇಮಿ ರೂಂನಲ್ಲಿ ಕೂಡಿ ಹಾಕಿದ್ದ. ರೂಂಮೇಟ್ ಪಿಜಿಗೆ ಬರಲಿಲ್ಲ ಎಂದು ತಲೆಬಿಸಿ ಮಾಡಿಕೊಂಡಿದ್ದ ಕೃತಿ ವಿಷಯ ಗೊತ್ತಾಗಿ ಗೆಳತಿಯನ್ನು ಬಂಧನದಿಂದ ಬಿಡಿಸಿದ್ದಳು. ಕೃತಿಕಾಳಿಂದ ನನ್ನ ಪ್ರೇಯಸಿ ದೂರವಾಗುತ್ತಿದ್ದಾಳೆಂದು ಪಿಜಿ ಬಳಿ ಕಾದು ಕೊಲೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕೋರಮಂಗಲ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಮೂರು ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ – ಮಧುರೈ-ಬೆಂಗಳೂರು ರೈಲಿಗೂ ಹಸಿರು ಪತಾಕೆ ತೋರಿದ ಪ್ರಧಾನಿ

  • ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರಿನ ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ – ಐಡಿ ಕಾರ್ಡ್ ವಿತರಣೆಗೆ ಚಿಂತನೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಪಿಜಿಗಳು (PG) ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿವೆ. ಪಿಜಿಗಳಿಗೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟಿಸುತ್ತಿದ್ದಂತೆ ಪಿಜಿ ಅಸೋಸಿಯೇಷನ್ ಹೊಸ ನಿರ್ಧಾರಕ್ಕೆ ಬಂದಿದೆ. ಪೊಲೀಸರಿಗೆ ನೆರವಾಗಲು ಹಾಗೂ ಪಿಜಿಯಲ್ಲಿದ್ದವರ ಸುರಕ್ಷತೆಗೆ ಐಡಿ ಕಾರ್ಡ್ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾಗಿದೆ.

    ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಪಿಜಿ ನಿವಾಸಿಗಳ ಸುರಕ್ಷತೆ, ಭದ್ರತೆಯ ವಿಚಾರಕ್ಕೆ ಪೊಲೀಸ್ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ ಮಾಡಲಾಗಿತ್ತು. ಇದೀಗ ಪೊಲೀಸರಿಗೆ ಸಹಾಯಕಾರಿಯಾಗಲು ಪಿಜಿ ಅಸೋಸಿಯೇಷನ್ ಮತ್ತಷ್ಟು ಸ್ಮಾರ್ಟ್ ಪ್ಲ್ಯಾನ್ ಮಾಡಿದೆ. ಪಿಜಿಯಲ್ಲಿ ವಾಸ ಮಾಡುವವರಿಗೆ ಇನ್ಮುಂದೆ ಪಿಜಿ ಅಡ್ಮಿಶನ್‌ನ ಐಡಿ ಕಾರ್ಡ್‌ ನೀಡಲು ಚಿಂತನೆ ನಡೆಸುತ್ತಿದೆ. ಜೊತೆಗೆ ಫ್ಯಾಮಿಲಿ ಹಾಗೂ ಸ್ನೇಹಿತರ ಫೋನ್ ನಂಬರ್‌ಗಳನ್ನು ಸಂಗ್ರಹಿಸಿಕೊಳ್ಳಲು ಮುಂದಾಗಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌ – ರಾಜ್ಯದ ಹಲವೆಡೆ ಮನೆ, ಕಚೇರಿಗಳ ಮೇಲೆ ದಾಳಿ

    ನಗರದಲ್ಲಿ 25 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪಾಲಿಕೆ, ಬೆಸ್ಕಾಂ, ಜಲಮಂಡಳಿ ಪ್ರಕಾರ 50 ಸಾವಿರಕ್ಕೂ ಅಧಿಕ ಪಿಜಿಗಳಿವೆ. ಪೊಲೀಸರ ತನಿಖೆ ಹಾಗೂ ಪಿಜಿ ವಾಸಿಗಳ ಸುರಕ್ಷತೆಯ ನಿಟ್ಟಿನಲ್ಲಿ ಆಯಾ ಪಿಜಿಗಳಲ್ಲಿ ಅಡ್ಮಿಷನ್ ಐಡಿ ಕಾರ್ಡ್ ವಿತರಿಸಿ ಅದನ್ನು ಪ್ರತಿ ತಿಂಗಳಿಗೊಮ್ಮೆ ರಿನಿವಲ್ ಮಾಡೋಕೆ ಪಿಜಿ ಅಸೋಸಿಯೇಷನ್ ನಿರ್ಧರಿಸಿದೆ. ನ್ನು ಪಿಜಿ ಅಸೋಸಿಯೇಷನ್ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಈ ಪ್ಲ್ಯಾನ್ ಅನ್ನು ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ. ಪಿಜಿ ಮಾಲೀಕರ ಐಡಿ ಕಾರ್ಡ್ ಪ್ಲ್ಯಾನ್, ಪೊಲೀಸರ ತನಿಖೆಗಳಿಗೆ ಮತ್ತಷ್ಟು ಸಹಾಯಕಾರಿಯಾಗಲಿದೆ. ಇದನ್ನೂ ಓದಿ: ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಕೊಬ್ಬರಿ ಬೆಂಕಿಗಾಹುತಿ

  • ಪಿಜಿ ಅಸೋಸಿಯೇಷನ್‍ಗಳಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

    ಪಿಜಿ ಅಸೋಸಿಯೇಷನ್‍ಗಳಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ

    ಬೆಂಗಳೂರು: ಕೊರೋನಾ (Corona Virus) ಹೆಸರು ಕೇಳಿದ್ರೆ ಸಾಕು ಜನ ಬೆಚ್ಚಿಬೀಳ್ತಾರೆ. ಯಾಕೆಂದ್ರೆ ಅಲೆಗಳ ಮೇಲೆ ಅಲೆಗಳು ಅಂತಾ ಬಂದು ಜನರು ಜೊತೆ ಉದ್ಯಮಗಳು ನೆಲ ಕಚ್ಚಿ ಹೋಗಿದ್ವು. ಹೀಗಾಗಿ ಈ ಬಾರಿ ವೇಷ ಬದಲಿಸಿಕೊಂಡು ಬಂದಿರುವ ಹೊಸ ತಳಿ ಬಗ್ಗೆ ಆತಂಕ ಹೆಚ್ಚು ಮಾಡಿದೆ. ಆರೋಗ್ಯ ಇಲಾಖೆ ರೂಲ್ಸ್ ತರಲಿ ಬಿಡಲಿ ನಮಗೆ ನಾವೇ ರೂಲ್ಸ್ ಮಾಡ್ಕೋತೀವಿ ಅಂತ ಪಿಜಿ ಓನರ್ಸ್ (PG Owners) ಡಿಸೈಡ್ ಮಾಡಿದ್ದಾರೆ.

    ಕೊರೊನಾ ವೈರಸ್‍ನಿಂದ ಪಿಜಿ ಉದ್ಯಮ ಮಾತ್ರ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. ಕಳೆದ ಕೋವಿಡ್ ಅಟ್ಟಹಾಸಕ್ಕೆ ನಡುಗಿದ್ದ ಪಿಜಿ ಅಸೋಸಿಯೇಷನ್ ಇದೀಗ ಮುಂಜಾಗ್ರತವಾಗಿ ಸಭೆ ನಡೆಸಿ ಹೊರ ರಾಜ್ಯದಿಂದ ಬರುವಂತವರಿಗೆ ಆರ್ಟಿಪಿಸಿಆರ್ ಕಡ್ಡಾಯಗೊಳಿಸಿ, ಸುರಕ್ಷತಾ ಕ್ರಮಗಳ ಮೇಲೆ ಕಣ್ಣಿಟ್ಟು ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದೇವೆ ಎನ್ನುತ್ತಿದ್ದಾರೆ. ಇದನ್ನೂ ಓದಿ: ಕೊರೊನಾಗೆ ಇಬ್ಬರು ಬಲಿ – 74 ಪಾಸಿಟಿವ್‌, ಬೆಂಗಳೂರಿನಲ್ಲೇ 57 ಮಂದಿಗೆ ಸೋಂಕು

    ಪಿಜಿ ಅಸೋಸಿಯೇಷನ್‍ನ ಕ್ರಮಗಳೇನು..?: ಕ್ರಿಸ್ಮಸ್ (Christmas) ರಜೆ, ಹೊಸ ವರ್ಷಾಚರಣೆ ಹಿನ್ನಲೆ ಪಿಜಿಯಿಂದ ಊರಿಗೆ ತೆರಳಿದ್ದಾರೆ. ಪಿಜಿಗೆ ಹಿಂದಿರುಗುವಾಗ ಆರೋಗ್ಯದಲ್ಲಿ ಏರುಪೇರಿದ್ರೆ ಕೂಡಲೇ ಆರ್ ಟಿಪಿಸಿಆರ್ ಟೆಸ್ಟ್ (RTPCR Test) ಮಾಡಿಸಬೇಕು. ಆರೋಗ್ಯ ಸಮಸ್ಯೆ ಇದ್ದವರು ಕಡ್ಡಾಯ ಮಾಸ್ಕ್ ಧರಿಸೋದು. ಎಲ್ಲರೂ ಕೋವಿಡ್ ಲಸಿಕೆ ಪಡೆದಿದ್ದಾರಾ ಎಂದು ತಪಾಸಣೆ ಮಾಡುವುದು. 50 ವರ್ಷ ಮೇಲ್ಪಟ್ಟವರಿದ್ರೇ ಬಿಪಿ, ಶುಗರ್ ಇದ್ದವರು ಮಾಸ್ಕ್ ಧರಿಸಬೇಕು.

    ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, ಲಕ್ಷಾಂತರ ಮಂದಿ ಪಿಜಿಯಲ್ಲಿರುವುದರಿಂದ ಪಿಜಿ ಮಾಲೀಕರೇ ಮುಂಜಾಗ್ರತೆಗೆ ಮುಂದಾಗಿದ್ದಾರೆ. ಯಾಕಂದ್ರೆ ಕಳೆದ ಬಾರಿಯ ಕೋವಿಡ್‍ಗೆ ಸಾಕಷ್ಟು ಮಂದಿ ದಿಢೀರ್ ಅಂತಾ ಪಿಜಿ ಖಾಲಿ ಮಾಡಿಕೊಂಡು ಹೋಗಿದ್ರು. ಅದೆಷ್ಟೋ ಜನ ಲಗೇಜ್ ಬಿಟ್ಟು ಹೋಗಿದ್ರು. ಅದೆಷ್ಟೋ ಪಿಜಿ ಮಾಲೀಕರು ವರ್ಷದ ಕಾಲ ಬಿಲ್ಡಿಂಗ್‍ಗಳು ಖಾಲಿ ಖಾಲಿಯಾಗಿದ್ದವು. ಹೀಗಾಗಿ ಈಗಿರುವಂತವರನ್ನು ಜಾಗೃತಿಯಾಗಿ ಉಳಿಸಿಕೊಂಡು ಹೋದ್ರೆ ನಮ್ಮ ಉದ್ಯಮಕ್ಕೂ ತೊಂದರೆ ಆಗುವುದಿಲ್ಲ. ಪಿಜಿಯಲ್ಲಿ ವಾಸಿಸುವಂತವರಿಗೂ ತೊಂದರೆ ಆಗುವುದಿಲ್ಲ ಸುರಕ್ಷತೆಯಿಂದ ಇರಬಹುದು ಅಂತಾ ಒಂದಿಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ ಎನ್ನುತ್ತಿದ್ದಾರೆ.

    ಕಳೆದ ಬಾರಿ ಕೋವಿಡ್ ಅಲೆಗೆ ತತ್ತರಿಸಿ ಹೋಗಿದ್ದ ಪಿಜಿ ಅಸೋಸಿಯೇಷನ್, ಸರ್ಕಾರದ ಗೈಡ್‍ಲೈನ್‍ಗೂ ಮುನ್ನವೇ ಸಭೆ ನಡೆಸಿ ಒಂದಿಷ್ಟು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.. ಅಲ್ಲದೇ ವೇಷ ಬದಲಿಸಿಕೊಂಡು ಬಂದಿರುವ ಈ ವೈರಸ್‍ಗೆ ಪಿಜಿ ಅಸೋಸಿಯೇಷನ್ ಮುಂಜಾಗ್ರತಾಗೊಂಡಿದೆ.

  • ಸೋಮವಾರದಿಂದ ಟಫ್ ರೂಲ್ಸ್ – ಪಿಜಿಗಳಿಗಾಗಿಯೇ ಹೊಸ ವೆಬ್ ಪೋರ್ಟಲ್

    ಸೋಮವಾರದಿಂದ ಟಫ್ ರೂಲ್ಸ್ – ಪಿಜಿಗಳಿಗಾಗಿಯೇ ಹೊಸ ವೆಬ್ ಪೋರ್ಟಲ್

    ಬೆಂಗಳೂರು: ಪಿಜಿಗಳಲ್ಲಿ (PG) ಇದ್ದುಕೊಂಡು ಅನೈತಿಕ ಚಟುವಟಿಕೆಗಳನ್ನು (Unethical Activity) ನಡೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಗರದಲ್ಲಿ ಸುಮಾರು ಐದು ಸಾವಿರ ಪಿಜಿಗಳದ್ದು, ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಅವರ ಹಿನ್ನೆಲೆ ಏನು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಬೆಂಗಳೂರು (Bengaluru) ಎಂಬ ಈ ಮಾಯನಗರಿಗೆ ದಿನ ಲಕ್ಷಾಂತರ ಜನ ಬಂದು ಹೋಗಿ ಮಾಡುತ್ತಾರೆ. ಯಾರು ಎಲ್ಲಿಂದ ಬರುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಅವರು ಬೆಂಗಳೂರಿಗೆ ಬಂದಿರುವುದು ಯಾಕೆ ಎಂಬುದನ್ನು ಕಂಡುಹಿಡಿಯುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಇತ್ತೀಚಿಗೆ ದೇಶವಿರೋಧಿ ಚಟುವಟಿಗಳು ನಡೆಸುವವರು, ರೌಡಿಶೀಟರ್‌ಗಳು ಪಿಜಿಗಳ ಕಡೆ ಮುಖ ಮಾಡಿದ್ದಾರೆ. ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಂಡರೇ ಪೊಲೀಸರ ಕಣ್ಣುತಪ್ಪಿಸುವುದು ಕಷ್ಟ ಎಂಬುದನ್ನು ತಿಳಿದಿರುವ ಆರೋಪಿಗಳು, ನಕಲಿ ಐಡಿ ಅಡ್ರೆಸ್‌ಗಳನ್ನು ನೀಡಿ ಪಿಜಿಗಳಲ್ಲಿ ವಾಸ ಮಾಡಲು ಶುರುಮಾಡಿದ್ದಾರೆ ಎಂಬುದು ಬಯಲಾಗಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಬೆಂಗಳೂರಿನಲ್ಲಿ ಸುಮಾರು ಐದು ಸಾವಿರ ಪಿಜಿಗಳಿದ್ದು, ಅದರಲ್ಲಿ ಬರೋಬ್ಬರಿ ನಾಲ್ಕೂವರೆ ಲಕ್ಷ ಜನ ವಾಸವಾಗಿದ್ದಾರೆ. ಇದರಿಂದ ಎಚ್ಚೆತ್ತ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪಿಜಿಗಳಿಗೆ ಪ್ರತ್ಯೇಕ ವೆಬ್ ಪೋರ್ಟಲ್ (Web Portal) ಮಾಡಲು ಮುಂದಾಗಿದ್ಧಾರೆ. ಪಿಜಿಯ ಹೆಸರು, ಮಾಲೀಕರ ಅಡ್ರೆಸ್, ಅಲ್ಲಿಗೆ ಬರುವವರ ಗುರುತು, ಅಧಾರ್ ಕಾರ್ಡ್, ಫೋಟೋ, ಸಿಸಿಟಿವಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಈ ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಅಪರಿಚಿತ ವ್ಯಕ್ತಿಗಳ ಗುರುತು ಪತ್ತೆ ಮಾಡಲು ಅಥವಾ ಅಪರಾಧ ಚಟುವಟಿಕೆಗಳು ನಡೆದರೆ ಆರೋಪಿಗಳನ್ನು ಸೆರೆಹಿಡಿಯಲು ಸುಲಭವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ಪ್ಲಾನ್ ಮಾಡಲಾಗಿದೆ. ಈಗಾಗಲೇ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 147 ಪಿಜಿಗಳನ್ನು ಪೋರ್ಟಲ್‌ಗೆ ನಮೂದಿಸುತ್ತಿದ್ದು, ಹಂತ ಹಂತವಾಗಿ ಇಡೀ ಬೆಂಗಳೂರಿನ ಪಿಜಿಗಳನ್ನು ಇದರ ವ್ಯಾಪ್ತಿಗೆ ತರಲು ಮುಂದಾಗಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?

    ಬೇರೆ ಬೇರೆ ಉದ್ದೇಶಗಳಿಗೆ ನಗರಕ್ಕೆ ಬಂದು ಕೃತ್ಯವೆಸಗಿ ಎಸ್ಕೇಪ್ ಆಗುವವರನ್ನು ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ ಎಂಬುದು ಪೊಲೀಸರ ವಾದ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಲಿದೆ? ಇದರ ಸಾಧಕಬಾದಕಗಳೇನು ಎಂದು ಎಲ್ಲಾ ಪಿಜಿಗಳನ್ನು ಪೋರ್ಟಲ್ ವ್ಯಾಪ್ತಿಗೆ ತಂದ ಮೇಲಷ್ಟೇ ಗೊತ್ತಾಗಬೇಕಿದೆ. ಇದನ್ನೂ ಓದಿ: ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ

  • ವಸತಿಗೃಹಗಳಲ್ಲಿ ಇರೋರು ಇನ್ಮುಂದೆ ಕಟ್ಬೇಕು ಜಿಎಸ್‌ಟಿ – ಹಾಸ್ಟೆಲ್, ಪಿಜಿಗಳ ಬೆಲೆ ಏರಿಕೆಗೆ ನಿರ್ಧಾರ

    ವಸತಿಗೃಹಗಳಲ್ಲಿ ಇರೋರು ಇನ್ಮುಂದೆ ಕಟ್ಬೇಕು ಜಿಎಸ್‌ಟಿ – ಹಾಸ್ಟೆಲ್, ಪಿಜಿಗಳ ಬೆಲೆ ಏರಿಕೆಗೆ ನಿರ್ಧಾರ

    ಬೆಂಗಳೂರು: ಜನಸಾಮಾನ್ಯರಿಗೆ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ದಿನಸಿ ಪದಾರ್ಥ, ತರಕಾರಿ ಬೆಲೆ ಏರಿಕೆ ಆಯಿತು. ಇದೀಗ ಪಿಜಿ (PG) ಹಾಗೂ ಹಾಸ್ಟೆಲ್ (Hostel) ಬಾಡಿಗೆ (Rent) ಬೆಲೆ ಏರಿಕೆಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್‌ಗಳ ಜೇಬಿಗೆ ಕನ್ನ ಹಾಕಲಿದೆ.

    ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಕಾದಿದೆ. ಇನ್ನುಮುಂದೆ ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವವರು ಸಹ ಜಿಎಸ್‌ಟಿ (GST) ಕಟ್ಟಬೇಕು. ಇದು ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಹೊರೆಯಾಗಲಿದೆ. ದಿನದ ಬಾಡಿಗೆ 1,000 ರೂ.ಗಿಂತ ಕಡಿಮೆಯಿದ್ದರೆ 12% ಜಿಎಸ್‌ಟಿ ಹಾಗೂ ಸಾವಿರಕ್ಕಿಂತ ಹೆಚ್ಚಿದ್ದರೆ 18% ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೆಂಗಳೂರಿನ (Bengaluru) ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠ ಈ ಬಗ್ಗೆ ಆದೇಶ ನೀಡಿದೆ. ಇದನ್ನೂ ಓದಿ: ಮೈಸೂರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

    ಇನ್ನೂ ಈ ಜಿಎಸ್‌ಟಿ ವಿಧಿಸುವ ನಿರ್ಧಾರದಿಂದಾಗಿ, ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯವೆಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ. ಅಲ್ಲದೇ ಜಿಎಸ್‌ಟಿಯನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುವುದು ಎಂದು ಹೇಳಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಸಾಕಷ್ಟು ಹೊಡೆತ ಬೀಳಲಿದೆ. ಈಗಾಗಲೇ ಬೆಂಗಳೂರಲ್ಲಿ ಪಿಜಿ ಹಾಗೂ ಹಾಸ್ಟೆಲ್‌ಗಳ ಬಾಡಿಗೆ ಸಾಕಷ್ಟು ಹೆಚ್ಚಿದೆ. ಈ ಜಿಎಸ್‌ಟಿ ನಿರ್ಧಾರ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಚಿಕ್ಕಮಗಳೂರು ದೇವೀರಮ್ಮ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ನಂಗೂ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಪಿಜಿ ಮಾಡಬೇಕು ಅನಿಸಿದೆ: ಹೆಚ್. ಆರ್ ರಂಗನಾಥ್

    ಬೆಂಗಳೂರು: ನಾನು ಸ್ನಾತಕೋತ್ತರ ಪದವಿ ಪಡೆದಿಲ್ಲ. ಅಂದಿನ ಸ್ಥಿತಿಯಲ್ಲಿ ನನಗೆ ಪಿಜಿ ಮಾಡಲು ಆಗಲೇ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್. ಆರ್ ರಂಗನಾಥ್ ಹೇಳಿದರು.

    ಇಂದು ಪಬ್ಲಿಕ್ ಟಿವಿ ಪ್ರಸ್ತುತ ಪಡೆಸುತ್ತಿರುವ ವಿದ್ಯಾಮಂದಿರ ಎಜುಕೇಶನ್ ಎಕ್ಸ್ ಪೋ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲದ ಶಿಕ್ಷಣಕ್ಕೂ ಈಗನ ಶಿಕ್ಷಣಕ್ಕೂ ಇರುವ ವ್ಯತ್ಯಾಸಗಳನ್ನು ವಿವರಿಸಿದರು. ನಾನು ಡಿಗ್ರಿಯಲ್ಲಿ ಫೈನಲ್ ಇಯರ್ ಪರೀಕ್ಷೆ ಬರೆಯುವ ಮೊದಲೇ ನನಗೆ ಕೆಲಸ ಕೊಟ್ಟರು. ಬಮದು ಕೆಲಸ ಮಾಡಿ ಪರೀಕ್ಷೆಗೆ ರಜೆ ತೆಗೆದುಕೊಂಡು ಹೋಗಿ ಡಿಗ್ರಿ ಪರೀಕ್ಷೆ ಬರೆದು ಬಂದೆ. ಹೀಗಾಗಿ ಆಗ ನಾನು ಸ್ನಾತಕೋತ್ತರ ಪದವಿ ಪಡೆದಿದ್ದರೆ ಚೆನ್ನಾಗಿತ್ತು ಅಂತ ಅನಿಸಿತ್ತು. ಆದರೆ ಈಗ ಕಾಲ ಮುಗಿದಿದೆ. ಈವಾಗಲೂ ನಾನು ಅದನ್ನು ಮಾಡಬಲ್ಲೆ. ಪತ್ರಿಕೋದ್ಯಮದಲ್ಲಿಯೇ ಯಾವುದಾದರೂ ಒಂದು ಒಳ್ಳೆಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕೆಂದು ಅನಿಸ್ತಿದೆ. ಆದರೆ ಅಲ್ಲಿ ನಾನು ಅಲ್ಲಿ ತುಂಬಾ ತಂದರೆ ಕೊಡುವ ವಿದ್ಯಾರ್ಥಿ ಆಗಬಹುದು. ಇದು ತುಂಬಾ ಕಷ್ಟವಾಗಬಹುದೆಂದು ನಕ್ಕರು.

    ಬಹಳ ಹಿಂದೆ ಪೊಲೀಸ್ ಆಗೋಕೆ 8ನೇ ಕ್ಲಾಸ್ ಆದವರು ಸಾಕು ಎಂಬ ಜಾಹೀರಾತು ಬರುತ್ತಿತ್ತು. ಆದರೆ ಇಂದು ಪೊಲೀಸ್ ಕಾನ್ಸ್ ಟೇಬಲ್‍ಗೆ 60 ಪರ್ಸೆಂಟ್ ಪದವಿ ಪಡೆದವರು, 20-21 ಪರ್ಸೆಂಟ್ ಪಿಜಿ ಮಾಡಿವರು ಅಪ್ಲೈ ಮಾಡುತ್ತಿದ್ದಾರೆ. ಈ ಮೂಲಕ ಉದ್ಯೋಗಕ್ಕೆ ಬೇಕಾದ ತಯಾರಿ ಇಲ್ಲದ ಶಿಕ್ಷಣ ಸಿಗುತ್ತಿದೆ ಅಂತ ಉದ್ಯೋಗ ಬೇಕು ಅಂದ್ರೆ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಕೆಲವೊಂದು ಉದ್ಯೋಗಗಳಿಗೆ ಪಿಜಿ ಮುಗಿಸಿರಲೇಬೇಕು ಎಂಬಂತಾಗಿದೆ. ಹೀಗಾಗಿ ಡಿಗ್ರಿ ಮಾಡದವರಿಗೆ ಮುಂದೊಂದು ದಿನ ಕೆಲಸ ಸಿಗುವುದು ಕೂಡ ಕಷ್ಟವಾಗಬಹುದು ಎಂದು ಎಚ್ಚರಿಸಿದರು. ಇದನ್ನೂ ಓದಿ: ಡಿಗ್ರಿ ಬಳಿಕ ಡಾಕ್ಟರೇಟ್ ಕೋರ್ಸ್‍ಗಳ ಕಡೆ ಯುವಕರು ಹೆಚ್ಚು ಗಮನ ಹರಿಸಬೇಕು: ಅಶ್ವಥ್ ನಾರಾಯಣ್

     ಪಿಜಿ ಹಾಗೂ ರಿಸರ್ಚ್ ಶಿಕ್ಷಣದಲ್ಲಿ ಕರ್ನಾಟಕ ಈಗ ಒಂದು ಹೆಜ್ಜೆ ಮುಂದೆಯೇ ಇದೆ ಎಂದನಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಗಳು ಕೂಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮುಂದೆ ಈ ಶಿಕ್ಷಣಕ್ಕೆ ಸಹಾಯ ಆಗಬಹುದೆಂಬ ನಿಟ್ಟಿನಲ್ಲಿ ಎರಡು ದಿನಗಳ ಈ ಎಕ್ಸ್ ಪೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಶಿಕ್ಷಣ ಸಚಿವರಾಗಿರುವ ಅಶ್ವಥ್ ನಾರಾಯಣ್ ಕೂಡ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಮೂಲಕ ಹೆಚ್ಚಿನ ಕೊಡುಗೆಗಳನ್ನು ಕೊಡುತ್ತಿದ್ದಾರೆ.

    ಎರಡು ದಿನವಿರಲಿದೆ ವಿದ್ಯಮಂದಿರ: ವಿದ್ಯಾಮಂದಿರ ಶೈಕ್ಷಣಿಕ ಮೇಳದಲ್ಲಿ 36ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳು ಭಾಗವಹಿಸುತ್ತಿವೆ. ಡಿಗ್ರಿ ನಂತ್ರ ಏನ್ ಮಾಡಬೇಕು, ಯಾವ ಕೋರ್ಸ್, ಯಾವ ಕಾಲೇಜ್ ಆಯ್ಕೆ ಮಾಡಿಕೊಳ್ಳಬಹುದು.. ಹೀಗೆ ಹಲವು ಅನುಮಾನಗಳಿಗೆ ಪೋಷಕರು, ವಿದ್ಯಾರ್ಥಿಗಳು ಇಲ್ಲಿ ಉತ್ತರ ಕಂಡುಕೊಳ್ಳಬಹುದಾಗಿದೆ. ವಿದ್ಯಾಮಂದಿರದಲ್ಲಿ ಹಲವು ವಿಚಾರಗಳ ಬಗ್ಗೆ ವಿಷಯ ತಜ್ಞರಿಂದ ವಿಶೇಷ ಸೆಮಿನಾರ್ ಇರುತ್ತೆ. ಹಾಗೇ, ಶೈಕ್ಷಣಿಕ ಮೇಳಕ್ಕೆ ಬಂದವರಿಗೆ ಆಪ್‍ಕೆ ಇವಿ ಸಂಸ್ಥೆಯ ಎಲೆಕ್ಟ್ರಿಕ್ ಬೈಕ್ ಸೇರಿ ಹಲವು ಬಂಪರ್ ಬಹುಮಾನಗಳು ಇದೆ. ಹೀಗಾಗಿ ತಪ್ಪದೇ ವಿದ್ಯಾಮಂದಿರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ.. ಬಹುಮಾನ ಗೆಲ್ಲಿ.. ವಿದ್ಯಾಮಂದಿರವನ್ನ ಸದುಪಯೋಗಪಡಿಸಿಕೊಳ್ಳಿ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳವು!

    ಸಿಎಂ ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳವು!

    ಬೆಂಗಳೂರು: (Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಿವಾಸದ ಸಮೀಪ ಇರುವ ಪಿಜಿಯೊಂದರಲ್ಲಿ ಲ್ಯಾಪ್‌ಟಾಪ್‌ (Laptop) ಕಳುವಾಗಿರುವ ಘಟನೆ ನಡೆದಿದೆ.

    ಇಲ್ಲಿನ ಆರ್‌.ಟಿ.ನಗರದಲ್ಲಿರುವ ಪಿಜಿಯಲ್ಲಿ ಲ್ಯಾಪ್‌ಟಾಪ್‌ ಕಳುವಾಗಿದೆ. ಈ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಅಲ್ಲದೇ ಸಹಾಯ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್‌ ಮೂಲಕ ಮನವಿ ಮಾಡಲಾಗಿದೆ. ಇದನ್ನೂ ಓದಿ: ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

    ಶಶಾಂಕ್ ಮಾಲ್ವಿಯಾ ಎಂಬಾತ ನಗರ ಪೊಲೀಸರಿಗೆ ಹಾಗೂ ಸಿಎಂಗೆ ಟ್ವೀಟ್‌ ಮಾಡಿದ್ದಾನೆ. ʻನಿಮ್ಮ ಮನೆಯ ಸಮೀಪದ ಪಿಜಿಯಲ್ಲಿ ಕಳ್ಳತನ ಆಗಿದೆ. ಮೊಬೈಲ್‌ ಹಾಗೂ ಲ್ಯಾಪ್‌ಟ್ಯಾಪ್ ಕಳ್ಳತನ ಆಗಿದೆ. ದಯವಿಟ್ಟು ಸಹಾಯ ಮಾಡಿ ಅಂತ ಸಿಎಂಗೆ ಮನವಿ ಮಾಡಿದ್ದಾನೆ.

    ನಿನ್ನೆ ಬೆಳಗ್ಗೆ 7 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ. ಕಳ್ಳರು ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಕಳ್ಳತನದ ದೃಶ್ಯ ಸಿಸಿಟಿಪಿಯಲ್ಲಿ ಸೆರೆಯಾಗಿದೆ. ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಬೆಂಗಳೂರಲ್ಲಿ ಮತ್ತೆ ಆಪರೇಷನ್‌ ಬುಲ್ಡೋಜರ್‌ – ದೊಡ್ಡ ಕಟ್ಟಡಗಳು, ವಿಲ್ಲಾಗಳನ್ನು ಕೆಡವುತ್ತಾ BBMP?

    Live Tv
    [brid partner=56869869 player=32851 video=960834 autoplay=true]