ಮಂಗಳೂರು: ಕರಾವಳಿಯಲ್ಲಿ ಮತ್ತೆ ನಿಷೇಧಿತ ಪಿಎಫ್‌ಐ ಸಂಘಟನೆ ಆಕ್ಟೀವ್ ಆಗಿದೆಯಾ ಎಂಬ ಅನುಮಾನ ಮೂಡಿದೆ. ವಾಟ್ಸಾಪ್ ಗ್ರೂಪ್‌ವೊಂದನ್ನು ರಚಿಸಿ ಪಿಎಫ್‌ಐ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ ಮುಸ್ಲಿಂ ಧರ್ಮಗುರುವನ್ನ ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಡಬ ನಿವಾಸಿ ಸೈಯ್ಯದ್ ಇಬ್ರಾಹಿಂ ತಂಙಳ್ ಬಂಧಿತ ಆರೋಪಿ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್ ಸಲ್ಮಾನ್ ಸಲಾಂ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಪಿಎಫ್‌ಐ ಸಂಘಟನೆಯ ಬಗ್ಗೆ ಸಂಘಟನೆಯ ಪುನರ್ ರಚನೆಯ ಬಗ್ಗೆ ಪ್ರಚಾರ ಮಾಡುತ್ತಿದ್ದ. ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ ಸೈಯ್ಯದ್ ಇಬ್ರಾಹಿಂ ತಂಙಳ್, ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದನೆಂಬ ಆರೋಪ ಇದೆ. ಇದನ್ನೂ ಓದಿ: ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ
ಮಂಗಳೂರಿನ ಉರ್ವಾಸ್ಟೋರ್ ಬಳಿಯಿಂದ ವಶಕ್ಕೆ ಪಡೆದ ಪೊಲೀಸರು, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯನ್ನು ಅ.24 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮಂಗಳೂರು/ಮಡಿಕೇರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಕತಾರ್‌ನಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಅಬ್ದುಲ್ ರೆಹಮಾನ್ ನನ್ನ ಬಂಧಿಸಿದ್ದಾರೆ.
2022ರ ಜುಲೈ 26ರಂದು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ದೆಹಲಿ ಕಚೇರಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಎನ್‌ಐಎ ಓರ್ವ ಪ್ರಮುಖ ಆರೋಪಿ ಅತೀಖ್ ಅಹ್ಮದ್ ಸೇರಿ 22 ಆರೋಪಿಗಳನ್ನ ಬಂಧಿಸಿತ್ತು. ಒಟ್ಟು 28 ಆರೋಪಿಗಳ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿದ್ದ ಎನ್‌ಐಎ ಉಳಿದ 6 ಆರೋಪಿಗಳಿಗೆ ತೀವ್ರ ಹುಡುಕಾಟ ನಡೆಸಿತ್ತು.
ನಿಷೇಧಿತ ಸಂಘಟನೆ ಪಿಎಫ್‌ಐ ಸೂಚನೆಯಂತೆ ಹತ್ಯೆ ನಡೆದಿತ್ತು. ಪ್ರಕರಣದ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಅಬ್ದುಲ್ ರಹಿಮಾನ್ ಇಂದು ಬಂಧನವಾಗಿದ್ದಾನೆ.
ಹಂತಕರಿಗೆ ಕೊಡಗಿನಲ್ಲಿ ಆಶ್ರಯ
ಬಂಧಿತನಾಗಿರುವ ಅಬ್ದುಲ್ ರೆಹಮಾನ್ ಕೊಡಗಿನ ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದವನಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ್ದ ಹಂತಕರಿಗೆ ಆಶ್ರಯ ನೀಡಿದ್ದ. ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ಹಾರಿದ್ದ ರೆಹಮಾನ್ ಕತಾರ್‌ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ. ಹೀಗಾಗಿ ರೆಹಮಾನ್ ಸೇರಿದಂತೆ ಉಳಿದ 6 ಆರೋಪಿಗಳ ಸುಳಿವು ಕೊಟ್ಟವರಿಗೆ ಎನ್‌ಐಎ ಬಹುಮಾನ ಘೋಷಿಸಿತ್ತು. ಸದ್ಯ ರೆಹಮಾನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗೂ ಎನ್‌ಐಎ ತಂಡ ಬಲೆ ಬೀಸಿದೆ.
ಮಂಗಳೂರು: ಬೃಹತ್ ಅಕ್ರಮ ಪಿಸ್ತೂಲ್ ಮಾರಾಟ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದು, ಕರಾವಳಿಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಮತ್ತೆ ಆಕ್ಟಿವ್ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೇರಳ ಮೂಲದ ನಟೋರಿಯಸ್ ವೆಪೆನ್ ಡೀಲರ್ ಸೇರಿದಂತೆ ಐವರನ್ನು ಮಂಗಳೂರು ಸಿಸಿಬಿ ಬಂಧಿಸಿದೆ. ಕೇರಳದ ಮೂಲದ ಕ್ರಿಮಿನಲ್‌ಗಳಾದ ಅಬ್ದುಲ್ ಲತೀಫ್, ಮನ್ಸೂರು, ನೌಫಾಲ್, ಮಹಮ್ಮದ್ ಅಸ್ಗರ್, ಮಹಮ್ಮದ್ ಸಾಲಿ ಬಂಧಿತರು.
ಬಂಧಿತರಿಂದ ಮೂರು ಪಿಸ್ತೂಲ್ ಹಾಗೂ 6 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈನಿಂದ ಬೃಹತ್ ಅಕ್ರಮ ಪಿಸ್ತೂಲ್ ಸರಬರಾಜು ನಡೆಯುತ್ತಿತ್ತು. ಸಮಾಜಘಾತುಕ ಶಕ್ತಿಗಳಿಗೆ ಶಸ್ತ್ರಾಸ್ತ್ರ ಸರಬರಾಜಾಗುತ್ತಿತ್ತು.
ನಿಷೇಧಿತ ಪಿಎಫ್‌ಐ ಮುಖಂಡರಿಗೆ ಅಬ್ದುಲ್ ಲತೀಫ್ ಯಾನೆ ತೋಕ್ ಲತೀಫ್ ಪಿಸ್ತೂಲ್ ನೀಡಿದ್ದ. ಪಿಎಫ್‌ಐ ಕ್ಯಾಡರ್‌ಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ. ವಾಮಂಜೂರುನಲ್ಲಿ ಜ.6ರಂದು ನಡೆದಿದ್ದ ಮಿಸ್ ಫೈಯರ್ ಪ್ರಕರಣದಲ್ಲಿ ಬಂಧಿತರಿಗೆ ಈತನೇ ಪಿಸ್ತೂಲ್ ನೀಡಿದ್ದ. ಮಿಸ್ ಫೈಯರ್ ಪ್ರಕರಣದಲ್ಲಿ ಬಂಧಿತ ಬದ್ರುದ್ದೀನ್ ಮತ್ತು ಇಮ್ರಾನ್ ಇಬ್ಬರೂ ನಿಷೇಧಿತ PFI ಮುಖಂಡರು. ಕೇರಳದಲ್ಲಿ ನಿಷೇಧಿತ PFI ಸಂಘಟನೆಯೊಂದಿಗೆ ಆರೋಪಿಗಳು ನೇರ ಸಂಬಂಧ ಹೊಂದಿದ್ದಾರೆ.
ನಿಷೇಧಿತ PFI ಮುಖಂಡರ ಕೈಗೆ ಪಿಸ್ತೂಲ್ ಬಂದಿದ್ದಾದರೂ ಏಕೆ? ಮಂಗಳೂರು PFI ಮುಖಂಡರ ಅಸಲಿ ಟಾರ್ಗೆಟ್ ಯಾರು? ಕೇರಳದಿಂದ ಪಿಸ್ತೂಲ್ ಮಂಗಳೂರಿಗೆ ಬಂದಿದ್ದಾದರೂ ಏಕೆ? ಅಬ್ದುಲ್ ಲತೀಫ್ ಇನ್ನೂ ಹಲವೆಡೆ ಪಿಸ್ತೂಲ್ ಸರಬರಾಜು ಮಾಡಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ಗೆ ಸಂಬಂಧಿಸಿದ ಪ್ರಧಾನ ಕಚೇರಿ ಸೇರಿ ಹಲವು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.
ಎಸ್‌ಡಿಪಿಐ (SDPI) ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಬಂಧನದ ಬೆನ್ನಲ್ಲೇ ಇಡಿ ದಾಳಿ ನಡೆಸಿದೆ. ನವದೆಹಲಿಯಲ್ಲಿರುವ ಎಸ್‌ಡಿಪಿಐ ಪ್ರಧಾನ ಕಚೇರಿ, ಕೇರಳದ ತಿರುವನಂತಪುರಂ ಮತ್ತು ಮಲಪ್ಪುರಂ, ಬೆಂಗಳೂರು, ಆಂಧ್ರಪ್ರದೇಶದ ನಂದ್ಯಾಲ್, ಥಾಣೆ, ಚೆನ್ನೈ, ಜಾರ್ಖಂಡ್‌ನ ಪಾಕೂರ್, ಕೋಲ್ಕತ್ತಾ, ಲಕ್ನೋ ಮತ್ತು ಜೈಪುರ ಸೇರಿದಂತೆ 12 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇದನ್ನೂ ಓದಿ: ಹಾಸನ| ರಸ್ತೆ ವಿಚಾರಕ್ಕೆ ಸೈನಿಕ, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ
ಎಸ್‌ಡಿಪಿಐಯು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಅಂಗವಾಗಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ, 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ಕಾನೂನುಬಾಹಿರ ಸಂಘವೆಂದು ಘೋಷಿಸಿತ್ತು. ಎಸ್‌ಡಿಪಿಐಯು ಭಾರತದ ಚುನಾವಣಾ ಆಯೋಗದಲ್ಲಿ ರಾಜಕೀಯ ಪಕ್ಷವಾಗಿ ನೋಂದಾಯಿಸಲ್ಪಟ್ಟ ಹಿನ್ನೆಲೆ ನಿಷೇಧ ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಒಂದೂವರೆ ತಿಂಗಳ ಮಗುವಿಗೆ 2 ವರ್ಷ ಅವಧಿ ಮುಗಿದ ಲಸಿಕೆ ಹಾಕಿದ ವೈದ್ಯ
ಪಿಎಫ್‌ಐ ನಿಷೇಧದ ಬಳಿಕ 2009ರಲ್ಲಿ ಸ್ಥಾಪನೆಯಾದ ಮತ್ತು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಎಸ್‌ಡಿಪಿಐ ಮೂಲಕ ಪಿಎಫ್‌ಐ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಇಡಿ ಆರೋಪಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಪಿಎಫ್‌ಐ ಬ್ಯಾಂಕ್ ಖಾತೆಗಳಿಂದ ಎಸ್‌ಡಿಪಿಐಗೆ ಭಾರೀ ಪ್ರಮಾಣದ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಕಮ್ಯೂನಲ್ ಕ್ರಿಮಿನಲ್‌ಗಳಿಗೆ ಸಪೋರ್ಟ್ ಮಾಡುವ ರಾಜನೀತಿ ದೇಶಕ್ಕೆ ಅಪಾಯಕಾರಿ: ಸಿ.ಟಿ.ರವಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ಮಾಡಲು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿ ಅವರನ್ನು ಮಾ. 3ರಂದು ಬಂಧಿಸಿರುವ ಇಡಿ ಅಧಿಕಾರಿಗಳು ಎಸ್‌ಡಿಪಿಐ ಮತ್ತು ನಿಷೇಧಿತ ಪಿಎಫ್‌ಐ ನಡುವಿನ ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಾಳಿಯ ಮೂಲಕ ಎಸ್‌ಡಿಪಿಐ ಆರ್ಥಿಕ ವ್ಯವಹಾರಗಳನ್ನು ಇಡಿ ಪರಿಶೀಲಿಸುತ್ತಿದೆ.
ನವದೆಹಲಿ/ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಅತೀಖ್ ಅಹ್ಮದ್ ಬಂಧಿತ ಆರೋಪಿ. ಪ್ರಕರಣದಲ್ಲಿ ಇದುವರೆಗೆ 21 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. 2022 ರ ಜುಲೈನಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಉಳಿದ ಆರು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಅವರ ತಲೆಗೆ ಇನಾಮು ಘೋಷಿಸಿದೆ.
ಪಿಎಫ್‌ಐ ನಾಯಕತ್ವದ ಮಾರ್ಗದರ್ಶನದಲ್ಲಿ ಅತೀಖ್, ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲ್ಪಟ್ಟ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಜನರಲ್ಲಿ ಭಯ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಪಿಎಫ್‌ಐ ಕಾರ್ಯಸೂಚಿಯ ಭಾಗವಾಗಿ ಮುಸ್ತಫಾ ಕೊಲೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದ.
ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಸ್ತಫಾ ಪರಾರಿಯಾಗಿದ್ದ. ಅತೀಖ್ ಆತ ಎಸ್ಕೇಪ್ ಆಗಲು ಅನುಕೂಲ ಮಾಡಿಕೊಟ್ಟಿದ್ದ. ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೂ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಅತೀಕ್ ಸಹಾಯ ಮಾಡಿದ್ದ.
2022 ರ ಆಗಸ್ಟ್‌ನಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದ NIA ತನಿಖೆಯ ಸಂದರ್ಭದಲ್ಲಿ, ‘PFI “PFI ಸೇವಾ ತಂಡಗಳು” ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ. ನೆಟ್ಟಾರು ಥರದವರನ್ನು ಗುರಿಯಾಗಿಸಿ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ’ ಎಂದು ತಿಳಿಸಿತ್ತು.
ಬೆಂಗಳೂರು: ನಾಗಮಂಗಲ ಗಲಭೆಗೆ (Nagamangala Violence) ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಇದೊಂದು ಪ್ರೀ ಪ್ಲ್ಯಾನ್. ಪಿಎಫ್‌ಐ (PFI) ಸಂಘಟನೆ ನಾಗಮಂಗಲದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಆರೋಪ ಮಾಡಿದ್ದಾರೆ.
ಅಶ್ವಥ್ ನಾರಾಯಣ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿ ಇಂದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ಸಲ್ಲಿಕೆ ಮಾಡಿತು. ವರದಿ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ, ರಾಜಕೀಯ ತುಷ್ಟೀಕರಣವೇ ಇಂತಹ ಘಟನೆಗೆ ಕಾರಣ. ವಿಭಜನೆ ರಾಜಕೀಯಕ್ಕಾಗಿ ಇಂತಹ ಘಟನೆ ನಡೆದಿದೆ. ಪೊಲೀಸರ ವೈಫಲ್ಯ ಇಲ್ಲಿ ಇದೆ. ಪೊಲೀಸರ ಕೈಯನ್ನು ಈ ಸರ್ಕಾರ ಕಟ್ಟಿ ಹಾಕಿದೆ ಅಂತ ಆರೋಪ ಮಾಡಿದರು.
ಮೆರವಣಿಗೆಯಲ್ಲಿ ಭಾಗಿಯಾದವರು 25-30 ಜನ ಮಾತ್ರ. ಕಳೆದ ವರ್ಷವೂ ಇದೇ ರೀತಿ ಘಟನೆ ಆಗಿದೆ. ಆದರೂ ಈ ವರ್ಷ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರೀ ಪ್ಲ್ಯಾನ್ ಮಾಡಿ ಬೆಂಕಿ ಹಾಕಿದ್ದಾರೆ, ಮಾಸ್ಕ್ ಹಾಕಿಕೊಂಡು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನಾಗಮಂಗಲ ಪಿಎಫ್‌ಐ ಕಾರ್ಯಚಟುವಟಿಕೆಗೆ ನೆಲೆಯಾಗಿದೆ. ಕೇರಳ ಭಾಗದ ವ್ಯಕ್ತಿಗಳು ಭಾಗಿಯಾಗಿದ್ದಾರೆ ಅಂತ ಗೃಹಸಚಿವರು ಹೇಳಿದ್ದಾರೆ. ಬಾಂಗ್ಲಾದೇಶದವರು ನಾಗಮಂಗಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಎಫ್‌ಐ ನಿಷೇಧ ಆಗಿರುವ ಸಂಸ್ಥೆಯಾದರೂ ಇಲ್ಲಿ ಚಟುವಟಿಕೆಗಳನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ
ಘಟನೆ ಸಂಬಂಧ UAPA ಕೇಸ್ ಯಾರ ಮೇಲೂ ಹಾಕಿಲ್ಲ. ಇಂಟಲಿಜೆನ್ಸ್ ಸಂಪೂರ್ಣ ಫೇಲ್ ಆಗಿದೆ. ನಮ್ಮ ಕಾಲದಲ್ಲಿ ಇಂತಹ ಘಟನೆ ಆಗಿರಲಿಲ್ಲ.ಈ ಸರ್ಕಾರದಲ್ಲಿ 8-10 ಕಡೆ ಇಂತಹ ಘಟನೆಗಳು ನಡೆದಿವೆ. ಈ ಸರ್ಕಾರದಲ್ಲಿ ಏನ್ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಬಾಂಗ್ಲಾದೇಶದಲ್ಲಿ ಆದಂತೆ ನಾವು ನುಗ್ಗುತ್ತೇವೆ ಅಂತಾರೆ. ಅವರ ಮೇಲೆ ಕೇಸ್ ಹಾಕಲ್ಲ. ಇಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು ವಿಪಕ್ಷಗಳ ಮೇಲೆ ಕೇಸ್ ಹಾಕೋ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃತ್ಯ ಮಾಡಿದವರನ್ನು ಬಿಟ್ಟು ನಿರಾಪರಾಧಿಗಳ ಮೇಲೆ ಕೇಸ್ ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಅವರ ಮೇಲೆ ಕೇಸ್ ಆಗಿಲ್ಲ. ನಾಗಮಂಗಲ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸಬೇಕು. ಹಿಂದೂ ಸಮಾಜದ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಹಿಂದೂಗಳ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಘಟನೆಯಲ್ಲಿ ಭಾಗಿಯಾಗಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. 100% ನಷ್ಟ ಆದವರಿಗೆ ಪರಿಹಾರ ಸರ್ಕಾರ ಕೊಡಬೇಕು. ಮುಂದೆ ಸರ್ಕಾರದ ವಿರುದ್ದ ಹೇಗೆ ಪ್ರತಿಭಟನೆ ಮಾಡಬೇಕು ಅಂತ ಹಿರಿಯರು ಕೂತು ನಿರ್ಧಾರ ಮಾಡುತ್ತೇವೆ ಎಂದರು.
ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ (Nagamangala Violence) ನಿಗಿನಿಗಿ ಕೆಂಡವಾಗಿದ್ದ ನಾಗಮಂಗಲ ಈಗ ಸಹಜ ಸ್ಥಿತಿಗೆ ಮರಳಿದೆ. ಸಚಿವ ಚಲುವನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ. ಅಲ್ಲದೇ ಭಾನುವಾರ (ಇಂದು) ನಿಷೇಧಾಜ್ಞೆ ತೆರವಾಗಿದೆ. ಈ ನಡುವೆ ಕೋಮು ಗಲಭೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಿಗೆ ಬಂದಿದೆ.
ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ (Kerala Link) ಇರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ನಿಷೇಧಿತ ಪಿಎಫ್‌ಐ (PFI) ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್ ಮಾಡಿದ್ದರು ಎಂಬ ಶಂಕೆಯೂ ವ್ಯಕ್ತವಾಗಿದೆ. ಇದನ್ನೂ ಓದಿ: ಭಾನುವಾರದ ಬಾಡೂಟ; ಆಂಧ್ರ ಶೈಲಿಯ ತಲೆಮಾಂಸದ ಸಾಂಬಾರ್ ಮಾಡೋದು ಹೇಗೆ?
ಈ ನಡುವೆ ಆರೋಪಿಗಳಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಗಲಭೆ ನಡೆಸಲು ಪೂರ್ವ ತಯಾರಿ ನಡೆದಿದೆ. ಗಲಾಟೆ ನಡೆದ ದಿನ ಮೆಡಿಕಲ್‌ನಲ್ಲಿ 200 ಮಾಸ್ಕ್ ಖರೀದಿ ಮಾಡಲಾಗಿದೆ. ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ. ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್‌ಐಎ ನಡೆಸಬೇಕು ಎಂದು ವಿಹೆಚ್‌ಪಿ ಆಗ್ರಹಿಸಿದೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವ ಆಫರ್ ಬಂದಿತ್ತು, ನಾನೇ ತಿರಸ್ಕರಿಸಿದೆ: ನಿತಿನ್ ಗಡ್ಕರಿ
ನವದೆಹಲಿ/ಕೇಪ್‌ಟೌನ್: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮೋಸ್ಟ್ ವಾಂಟೆಡ್ ದರೋಡೆಕೋರರಲ್ಲಿ ಒಬ್ಬನಾದ ಮೊಹಮ್ಮದ್ ಗೌಸ್ ನಿಯಾಜಿನನ್ನ (Mohammed Gaus Niyazi) ದಕ್ಷಿಣ ಆಫ್ರಿಕಾದಲ್ಲಿ ಯಶಸ್ವಿಯಾಗಿ ಬಂಧಿಸಿದೆ. ಎನ್‌ಐಎ ಏಜೆನ್ಸಿಯು ನಿಯಾಜಿಯ ಪತ್ತೆಗಾಗಿ 5 ಲಕ್ಷ ರೂ.ಗಳ ಬಹುಮಾನ ಘೋಷಣೆ ಮಾಡಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ನಾಯಕ ಮೊಹಮ್ಮದ್ ಗೌಸ್ ನಿಯಾಜಿ, 2016ರಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಎಂಬಾತನನ್ನ ಹತ್ಯೆಗೈದಿದ್ದ. ಘಟನೆ ನಂತರ ದೇಶದಿಂದ ಪಲಾಯನ ಮಾಡಿದ್ದ ನಿಯಾಜಿ, ವಿವಿಧ ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಎನ್‌ಎಐ ಮೂಲಗಳು ಹೇಳಿವೆ. ಇದನ್ನೂ ಓದಿ: ರಾಜಕೀಯ ಕರ್ತವ್ಯದಿಂದ ನನ್ನನ್ನು ಮುಕ್ತಗೊಳಿಸಿ – ರಾಜಕೀಯ ನಿವೃತ್ತಿ ಸುಳಿವು ನೀಡಿದ ಗಂಭೀರ್
ರುದ್ರೇಶ್‌ನನ್ನ ಹತ್ಯೆಗೈದಿದ್ದ ನಿಯಾಜಿ ವಿವಿಧ ದೇಶಗಳಲ್ಲಿ ತಲೆ ಮರೆಸಿಕೊಂಡಿದ್ದ. ತನಿಖೆಯ ಮುಂದಾಳತ್ವ ವಹಿಸಿದ್ದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ನಿಯಾಜಿಯ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಕೊನೆಗೆ ಆತ ದಕ್ಷಿಣ ಆಫ್ರಿಕಾದಲ್ಲಿ ನೆಲೆಸಿರುವ ಬಗ್ಗೆ ಸುಳಿವು ಸಿಕ್ಕಿತು. ಕೂಡಲೇ ಈ ಮಾಹಿತಿಯನ್ನು ಕೇಂದ್ರದ ಭದ್ರತಾ ಏಜೆನ್ಸಿಗೆ ರವಾನಿಸಿತು. ನಂತರ ಎನ್‌ಐಎ ದಕ್ಷಿಣ ಆಫ್ರಿಕಾದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಇದನ್ನೂ ಓದಿ: ಪಾಕ್ ವಶದಲ್ಲಿದ್ದ ‘ಸಿಂಗಂ’ ವಿಂಗ್ ಕಮಾಂಡರ್ ತಾಯ್ನಾಡಿಗೆ ವಾಪಸ್ – ಭಾರತದ ಗೆಲುವಿಗೆ 5ರ ಸಂಭ್ರಮ
ಆರೋಪಿ ನಿಯಾಜಿನನ್ನ ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಿದ ನಂತರ ತ್ವರಿತವಾಗಿ ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಸದ್ಯ ಆರೋಪಿಯನ್ನು ಮುಂಬೈಗೆ ಕರೆತರಲಾಗುತ್ತಿದ್ದು, ಮುಂಬೈನಲ್ಲೇ ವಿಚಾರಣೆ ನಡೆಸಲಾಗುತ್ತದೆ ಎಂದು ಎನ್‌ಐಎ ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: CAA ಉಲ್ಲೇಖವಿರೋ ಅಮಿತ್ ಶಾ, ರಾಜನಾಥ್ ಸಿಂಗ್ ಕಾರಿನ ನಂಬರ್ ಪ್ಲೇಟ್ ವೈರಲ್
ಮಾವೇಲಿಕ್ಕರ (ಆಲೆಪ್ಪಿ): ಬಿಜೆಪಿ (BJP) ಮುಖಂಡ ಹಾಗೂ ವಕೀಲ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ಆರೋಪಿಗಳಾದ 15 ಪಿಎಫ್‌ಐ ಕಾರ್ಯಕರ್ತರಿಗೆ (PFI Activists) ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ (ಒಂದು) ವಿ.ಜಿ.ಶ್ರೀದೇವಿ ಶಿಕ್ಷೆ ಪ್ರಕಟಿಸಿದ್ದು, ಆರೋಪಿಗಳು ಯಾವುದೇ ರೀತಿಯ ಕರುಣೆಗೂ ಅರ್ಹರಲ್ಲ ಎಂದು ತೀರ್ಪು ನೀಡಿದರು.
ಆರೋಪಿಗಳ್ಯಾರು..?
ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ನಿಸಾಮ್, ಅಜ್ಮಲ್, ಅನೂಪ್, ಮುಹಮ್ಮದ್ ಅಸ್ಲಂ, ಮಣ್ಣಂಜೇರಿ ಞರವೇಲಿ ಅಬ್ದುಲ್ ಕಲಾಂ ಅಲಿಯಾಸ್ ಸಲಾಂ, ಅಬ್ದುಲ್ ಕಲಾಂ, ಸರಫುದ್ದೀನ್, ಮನ್ಷಾದ್, ಜಸೀಬ್ ರಾಜ, ನವಾಸ್, ಸಮೀರ್, ನಸೀರ್, ಝಕೀರ್ ಹುಸೈನ್, ಷಾಜಿ, ಶೆರ್ನಾಝ್ ಅಶ್ರಫ್ ಆರೋಪಿಗಳು. 10ನೇ ಆರೋಪಿ ನವಾಜ್ ಅನಾರೋಗ್ಯದಿಂದ ಬಳಲುತ್ತಿದ್ದು, ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ: ED ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್ BMW ಕಾರು ವಶಕ್ಕೆ
ಬಿಗಿ ಬಂದೋಬಸ್ತ್:
ಈ ತಿಂಗಳ 20 ರಂದು ಎಲ್ಲಾ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಿತು. ಬಳಿಕ ಆರೋಪಿಗಳ ವಾದವನ್ನು ಆಲಿಸಿದ ಬಳಿಕ ಶಿಕ್ಷೆ ಪ್ರಕಟಿಸುವ ದಿನಾಂಕವನ್ನು ಇಂದಿಗೆ ಮುಂದೂಡಲಾಯಿತು. ಇಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆಂಗನ್ನೂರು ಮತ್ತು ಕಾಯಂಕುಳಂ ಡಿವೈಎಸ್ಪಿಗಳು ನ್ಯಾಯಾಲಯದಲ್ಲಿ ಭದ್ರತೆ ಒದಗಿಸಿದರು. ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ
ಪ್ರಕರಣದ ವಿವರ:
2012ರ ಡಿಸೆಂಬರ್ 19ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಅರೋಪಿಗಳು ಕುಟುಂಬ ಸದಸ್ಯರ ಎದುರೇ ಕೊಚ್ಚಿ ಕೊಲೆ ಮಾಡಿದ್ದರು. ಆಲೆಪ್ಪಿ ಜಿಲ್ಲೆಯಲ್ಲಿ ನಡೆದ 3 ಸರಣಿ ರಾಜಕೀಯ ಕೊಲೆಗಳಲ್ಲಿ ಕೊನೆಯದಾಗಿ ರಂಜಿತ್ ಕೊಲೆಯಾಗಿತ್ತು. ವಯಲಾರ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಆರ್.ನಂದುಕೃಷ್ಣ ಹತ್ಯೆಯಾದ ಮೊದಲ ವ್ಯಕ್ತಿ. ನಂತರ ಮಣ್ಣಂಜೇರಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಕೊಲೆಯಾಗಿತ್ತು. ಇದರ ಮರುದಿನ ಬೆಳಗ್ಗೆ ರಂಜಿತ್ ಕೊಲೆಯಾಗಿತ್ತು. ಇದನ್ನೂ ಓದಿ: ‘ಬಾಯ್ಕಾಟ್ ಮಾಲ್ಡೀವ್ಸ್’ ಎಫೆಕ್ಟ್ – ಮಾಲ್ಡೀವ್ಸ್ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ
ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಅಭಿಯೋಜಕ ಪ್ರತಾಪ್ ಜಿ.ಪಡಿಕ್ಕಲ್ ವಾದ ಮಂಡಿಸಿದ್ದರು. ನ್ಯಾಯಾಲಯವು ಆರೋಪಿಗಳ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾ ಪರೀಕ್ಷಾಧಿಕಾರಿ, ಜೈಲಿನಲ್ಲಿ ಆರೋಪಿಗಳಿದ್ದಾಗ ಇದ್ದ ಅವರ ಮಾನಸಿಕ ವರ್ತನೆಯ ವರದಿ, ಮನೋವೈದ್ಯಕೀಯ ವರದಿಯನ್ನು ಪಡೆದುಕೊಂಡಿತ್ತು. ಇದನ್ನೂ ಓದಿ: ನಮ್ಮ ಮಕ್ಕಳು ಲೆಹೆಂಗಾ ಧರಿಸಿ ಶಾಲೆಗೆ ಹೋಗ್ತಾರೆ: ಹಿಜಬ್ ವಿರುದ್ಧ ಬಿಜೆಪಿ ಶಾಸಕ ಹೇಳಿಕೆ
ನವದೆಹಲಿ/ಬಳ್ಳಾರಿ: ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಗ್ಯಾಂಗ್ ರಾಷ್ಟ್ರೀಯ ತನಿಖಾ ದಳ(NIA) ಬಲೆಗೆ ಬಿದ್ದಿದೆ. ಐಇಡಿ (IED) ಸ್ಫೋಟಿಸಲು ಬೇಕಾಗಿದ್ದ ವಸ್ತುಗಳನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದ ವಿಚಾರ ದಾಳಿ ವೇಳೆ ಬಯಲಾಗಿದೆ.
ಐಸಿಸ್‌ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಆತನ ಸಹಚರನನ್ನು ವಶಕ್ಕೆ ಪಡೆಯಲಾಗಿದೆ. ಬಳ್ಳಾರಿ ಐಸಿಸ್ ಮಾಡ್ಯೂಲ್ (ISIS Ballari Module) ಹೆಸರಿನಿಂದ ಗುರುತಿಸಿಕೊಂಡಿದ್ದ ಈ ತಂಡ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು.
ಕಳೆದ 5 ವರ್ಷದಿಂದ ಪಿಎಫ್‌ಐ (PFI) ಸಂಘಟನೆಯಲ್ಲಿ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈತನಿಗೆ ಬಳ್ಳಾರಿಯ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉ.ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಇವರು ಪ್ಲ್ಯಾನ್ ಮಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಜಿಹಾದ್‌ಗೆ ಯಾರು ಗಮನ ಕೊಡುತ್ತಾರೋ ಅವರನ್ನೇ ಬಳಸಿಕೊಳ್ಳುತ್ತಿದ್ದರು. ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ಬಳಿಕ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು. ಇದನ್ನೂ ಓದಿ: ಬೆಂಗಳೂರು ಉಗ್ರರ ಪ್ರಯೋಗಾಲಯ ಆಗದಿರಲಿ: ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ
ಬಂಧಿತರಿಂದ ಸಲ್ಫರ್, ಪೊಟಾಷಿಯಂ ನೈಟ್ರೇಟ್, ಗನ್ ಪೌಡರ್, ಸಕ್ಕರೆ, ಎಥೆನಾಲ್, ಹರಿತವಾದ ಆಯುಧಗಳು, ಹಣ, ರಹಸ್ಯ, ಮಾಹಿತಿಯ ದಾಖಲೆಗಳು, ಸ್ಮಾರ್ಟ್‌ಫೋನ್, ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆ ಚುರುಕು: ಬೆಂಗಳೂರಲ್ಲಿ ಎನ್‌ಐಎ ದಾಳಿ ವೇಳೆ ಸೋಡಿಯಂ ನೈಟ್ರೇಟ್ ಪತ್ತೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. 7 ಕೆಜಿ ಸೋಡಿಯಂ ನೈಟ್ರೇಟ್ ಮನೆಗೆ ತಂದಿದ್ದ ಸಮೀವುಲ್ಲಾಗೆ ಡ್ರಿಲ್ ಹೆಚ್ಚಾಗಿದೆ. ಸೋಡಿಯಂ ನೈಟ್ರೇಟ್ ಡೀಲಿಂಗ್ ಹಿಂದಿರೋ ರಹಸ್ಯವನ್ನು ಎನ್‌ಐಎ ರಿವೀಲ್ ಮಾಡಿದೆ.
ಹೈದರಾಬಾದ್ ಲಿಂಕ್‌ನಿಂದ ಎನ್‌ಐಎ ಬೆಂಗಳೂರು ಬ್ಯಾಡರಹಳ್ಳಿ ಕದ ತಟ್ಟಿತ್ತು. ಬ್ಯಾಡರಹಳ್ಳಿಯ ಬಾಡಿಗೆ ಮನೆಯಲ್ಲಿ ಸಮೀವುಲ್ಲಾ ಸೋಡಿಯಂ ನೈಟ್ರೇಟ್ ತಂದಿಟ್ಟುಕೊಂಡಿದ್ದ. ಸಮೀವುಲ್ಲಾ ಬಳ್ಳಾರಿಯವನಾಗಿದ್ದು ಎಲ್‌ಎಲ್‌ಬಿ ಪದವೀಧರ. ಸದ್ಯ ಸಮೀವುಲ್ಲಾ ರೂಮ್‌ಮೆಟ್‌ಗಳಾದ ಮುನಿರುದ್ದೀನ್, ಮಿಸ್ಬಾ ಹಾಗೂ ಅಲ್ತಾಫ್ ಸಹ ವಿಚಾರಣೆ ನಡೆಸಲಾಗುತ್ತಿದೆ. ಅರೆಸ್ಟ್ ಆದ ಶಂಕಿತರೆಲ್ಲರೂ ಬಳ್ಳಾರಿ ಮೂಲದ ಯುವಕರಾಗಿದ್ದಾರೆ. ಈ ಗ್ಯಾಂಗ್ ಐಇಡಿ ಸ್ಫೋಟ ಮಾಡಲು ತಯಾರಿ ನಡೆಸಿತ್ತಾ ಎಂಬ ಅನುಮಾನ ಬಂದಿದೆ.