Tag: pets

  • ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

    ಹಾಂಕಾಂಗ್: ಸಾಕು ಪ್ರಾಣಿಗಳ ಅಂಗಡಿಯ ಮಾಲಿಕನೊಬ್ಬನಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಸುಮಾರು 2000 ಪುಟ್ಟ ಪ್ರಾಣಿಗಳನ್ನು ಸಾಯಿಸುವಂತೆ ಹಾಂಕಾಂಗ್ ಆಡಳಿತ ಆದೇಶ ಪ್ರಕಟಿಸಿದೆ.

    ಹಾಂಕಾಂಗ್ ನಗರದಲ್ಲಿ ಹ್ಯಾಮ್ಸ್ಟರ್(ಸಣ್ಣ ಜಾತಿಯ ಒಂದು ಸಾಕು ಪ್ರಾಣಿ) ಹಾಗೂ ಇತರ ಸಾಕು ಪ್ರಾಣಿಗಳ ಆಮದನ್ನು ಕೂಡಾ ನಿಷೇಧಿಸುವುದಾಗಿ ಕೃಷಿ, ಮೀನುಗಾರಿಕೆ ಹಾಗೂ ಸಂರಕ್ಷಣಾ ಇಲಾಖೆ ತಿಳಿಸಿದೆ.

    ಸಾಕು ಪ್ರಾಣಿ ಅಂಗಡಿಯ ಮಾಲೀಕನಿಗೆ ಸೋಮವಾರ ಕೋವಿಡ್ ಪರೀಕ್ಷೆಯಲ್ಲಿ ಡೆಲ್ಟಾ ರೂಪಾಂತರಿ ಪತ್ತೆಯಾಗಿತ್ತು. ನಂತರ ಆತನ ಅಂಗಡಿಯಲ್ಲಿದ್ದ ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಂಡಿದ್ದ ಹಲವಾರು ಪುಟ್ಟ ಪ್ರಾಣಿಗಳಲ್ಲೂ ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ನಿಧನ

    ಕೊರೊನಾ ವೈರಸ್ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುವುದಿಲ್ಲ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ತಿಳಿಸಿತ್ತು. ಆದರೆ ಇವುಗಳಿಂದಲೂ ಸೋಕು ಹರಡುತ್ತದೆ ಎಂದು ಹಾಂಕಾಂಗ್ ಅಧಿಕಾರಿಗಳು ತಿಳಿಸಿದ್ದಾರೆ.

    ನಿಮ್ಮ ಮನೆಯಲ್ಲಿರುವ ಸಾಕು ಪ್ರಾಣಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು. ಅವುಗಳನ್ನು ಹೊರಗಡೆ ತರಬೇಡಿ. ಸಾಕು ಪ್ರಾಣಿಗಳೊಂದಿಗೆ ಅದರ ಮಾಲೀಕರು ಉತ್ತಮ ನೈರ್ಮಲ್ಯದ ಬಗ್ಗೆ ಗಮನ ಹರಿಸುವುದು ಅಗತ್ಯ. ಅವುಗಳಿಗೆ ಆಹಾರ ನೀಡುವುದು ಹಾಗೂ ಸ್ಪರ್ಶಿಸಿದ ಬಳಿಕ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಎಂದು ಇಲಾಖೆಯ ನಿರ್ದೇಶಕ ಲೆಂಗ್ ಸಿಯು-ಫೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

  • ಕೋಳಿಗಳೊಂದಿಗೆ ನೃತ್ಯ ಮಾಡಿದ ವ್ಯಕ್ತಿಯ ವೀಡಿಯೋ ವೈರಲ್

    ಕೋಳಿಗಳೊಂದಿಗೆ ನೃತ್ಯ ಮಾಡಿದ ವ್ಯಕ್ತಿಯ ವೀಡಿಯೋ ವೈರಲ್

    ಮೂರು ಕೋಳಿಗಳೊಂದಿಗೆ ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುತ್ತಾ ಹೋಗುವಾಗ ಕಾಣಸಿಗುವ ಕೆಲವೊಂದು ದೃಶ್ಯಗಳು ನಮ್ಮನ್ನು ನಗಿಸಿಬಿಡುತ್ತದೆ. ಅದರಲ್ಲಂತೂ ಪ್ರಾಣಿ, ಪಕ್ಷಿಗಳಿಗೆ ಸಂಬಂಧಿಸಿದ ಕೆಲವೊಂದು ದೃಶ್ಯಗಳು ತಟ್ಟನೆ ನಮ್ಮಲ್ಲಿ ಮುಗುಳ್ನಗೆ ಮೂಡಿಸುತ್ತದೆ. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಸಾಂದರ್ಭಿಕ ಚಿತ್ರ

    ನಾಯಿ, ಆನೆ, ಬೆಕ್ಕು, ದನಗಳು ಸೇರಿದಂತೆ ಕೆಲ ಪ್ರಾಣಿಗಳು ಮಾಲೀಕರು ಹೇಳಿದಂತೆ ವರ್ತಿಸುವ ದೃಶ್ಯಗಳು ಕಾಣಸಿಗುವುದು ಸಾಮಾನ್ಯ. ಆದರೆ ಇಲ್ಲಿ ಕೋಳಿಗಳು ಮಾಲೀಕನ ಮಾತು ಕೇಳುವುದು ಒಂದು ಅಚ್ಚರಿ ಎನಿಸುವಂತಹ ಘಟನೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಮೂರು ಕೋಳಿಗಳೊಂದಿಗೆ ಡ್ಯಾನ್ಸ್ ಮಾಡುವ ಭಂಗಿ ನೋಡಿದರೆ ವಿಸ್ಮಯ ಅನಿಸಿಬಿಡುತ್ತದೆ. ಇದನ್ನೂ ಓದಿ: ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ- ಮೂವರು ಅಸ್ವಸ್ಥ

     

    View this post on Instagram

     

    A post shared by hepgul5 (@hepgul5)

    ವೀಡಿಯೋ ವೈರಲ್ ಆಗುತ್ತಿದ್ದಂತೆ ಇದು ಅನೇಕ ನೆಟ್ಟಿಗರ ಗಮನ ಸೆಳೆದಿದೆ. 14,000ಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದ್ದು, ಕಾಮೆಂಟ್‌ಗಳ ಸುರಿಮಳೆ ಹರಿದು ಬಂದಿದೆ. ಕೆಲವರು ವಿಡಿಯೋ ನೋಡಿ ಅಚ್ಚರಿ, ಖುಷಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

  • ಸಾವಿರಾರು ಜಾನುವಾರುಗಳ ನೀರಿನ ದಾಹ ತೀರಿಸೋರು ಯಾರು?

    ಸಾವಿರಾರು ಜಾನುವಾರುಗಳ ನೀರಿನ ದಾಹ ತೀರಿಸೋರು ಯಾರು?

    ಧಾರವಾಡ: ಜಿಲ್ಲೆಯ ಗಡಿ ಭಾಗದ ಅರಣ್ಯದಲ್ಲಿ ಹುಣಶಿಕುಮರಿ ಎಂಬ ಕುಗ್ರಾಮವಿದೆ. ಕಳೆದ 70 ವರ್ಷಗಳಿಂದ ಇಲ್ಲಿ ಮನೆಗಳನ್ನು ಕಟ್ಟಿಕೊಂಡು ಗ್ರಾಮಸ್ಥರು  ಜೀವನ ಮಾಡುತ್ತಿದ್ದಾರೆ. 100 ಮನೆ ಇರುವ ಈ ಗ್ರಾಮದ ಜನರ ಕಸುಬು ಹೈನುಗಾರಿಕೆ. ಈ ಗ್ರಾಮಸ್ಥರಿಗೆ ಜಾನುವಾರುಗಳೇ ಸರ್ವಸ್ವ. ಗ್ರಾಮದಲ್ಲಿ ಸುಮಾರು 2,500 ಜಾನುವಾರುಗಳಿದ್ದು ಇವುಗಳಿಂದಲೇ ಜೀವನ ಕಟ್ಟಿಕೊಂಡಿದ್ದಾರೆ.

    ಅರಣ್ಯದಲ್ಲಿರುವ ಈ ಕುಗ್ರಾಮದಲ್ಲಿ ಮಳೆಗಾಲದಲ್ಲಿ ಅಲ್ಲಿ ಇಲ್ಲಿ ಕೆರೆಗಳಲ್ಲಿ ನಿಂತ ನೀರು ಕುಡಿದು ಮೂಖ ಜೀವಿಗಳು ಬದುಕುತ್ತಿವೆ. ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಆದಾಗಿ ಇರೋ ಸ್ಥಳವನ್ನು ಬಿಟ್ಟು ಸುಮಾರು 6 ತಿಂಗಳ ಕಾಲ ಅರಣ್ಯದಲ್ಲೇ ದನಗಳನ್ನ ಮೇಯಿಸುತ್ತ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದಾರೆ.

    ಈ ಕುಗ್ರಾಮವು ಕಲಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರೋದ್ರಿಂದ ನೀರಿನ ತೊಟ್ಟಿ ಮಾಡಿಸಿ ಕೊಡಲಾಗಿದೆ. ಆದ್ರೆ ಗ್ರಾಮದಲ್ಲಿ 2,500 ದನಗಳಿದ್ದು ಇಷ್ಟು ದನಗಳಿಗೆ ನೀರು ಸಂಗ್ರಹಣೆ ಅಸಾಧ್ಯವಾಗಿದೆ. ಆದಾಗಿ ಜಾನುವಾರುಗಳಿಗೆ ಸುಮಾರು 30 ಅಡಿ ಉದ್ದದ ನೀರಿನ ತೊಟ್ಟಿ ನಿರ್ಮಾಣಗೊಂಡರೆ ಜಾನುವಾರುಗಳ ದಾಹ ತೀರುತ್ತದೆ ಎಂದು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ನೆರವು ಬಯಸುತ್ತಿದ್ದಾರೆ.

    https://www.youtube.com/watch?v=LbsjoTuV68Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಶ್ಮಿಕಾ ಮನೆಯಲ್ಲಿದ್ದಾರೆ ಇಬ್ಬರು ಹುಡುಗರು – ಅಭಿಮಾನಿಗಳಿಗೆ ಇಷ್ಟವಾಯ್ತು ವಿಡಿಯೋ

    ರಶ್ಮಿಕಾ ಮನೆಯಲ್ಲಿದ್ದಾರೆ ಇಬ್ಬರು ಹುಡುಗರು – ಅಭಿಮಾನಿಗಳಿಗೆ ಇಷ್ಟವಾಯ್ತು ವಿಡಿಯೋ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಶ್ಮಿಕಾ ಮಂದಣ್ಣ ಪ್ರಾಣಿ- ಪಕ್ಷಿಗಳನ್ನು ಕ್ಯೂಟ್ ಆಗಿ ಮುದ್ದು ಮಾಡುತ್ತಾ ಆಟವಾಡ್ತಿರೋ ಫೋಟೋ, ವಿಡಿಯೋವನ್ನು ಟ್ವೀಟ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

    ರಶ್ಮಿಕಾಗೆ ಪ್ರಾಣಿ-ಪಕ್ಷಿಗಳು ಅಂದ್ರೆ ಅಚ್ಚುಮೆಚ್ಚು. ಆದರಿಂದ ಮನೆಯಲ್ಲಿ ನಾಯಿ, ಬೆಕ್ಕು, ಪಾರಿವಾಳ ಅಂತ ಪ್ರಾಣಿ-ಪಕ್ಷಿಗಳನ್ನು ಸಾಕಿದ್ದಾರೆ. ಅವರ ಬಿಡುವಿನ ಸಮಯದಲ್ಲಿ ಅವುಗಳೊಟ್ಟಿಗೆ ಸಮಯ ಕಳೆದು ಖುಷಿಪಡೋದು ರಶ್ಮಿಕಾಗೆ ಇಷ್ಟ. ಹೀಗಾಗಿ ಎಂದಿನಂತೆ ತಮ್ಮ ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳೊಂದಿಗೆ ಆಟವಾಡುತ್ತಿರುವ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಒಂದರಲ್ಲಿ ಪಾರಿವಾಳದ ಜೊತೆ ಪೋಸ್ ಕೊಟ್ಟರೆ, ಇನ್ನೊಂದರಲ್ಲಿ ಮುದ್ದಿನ ಬೆಕ್ಕನ್ನು ಮುದ್ದಾಡುತ್ತಿರುವ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಯಲ್ಲಿ 2 ಮುದ್ದು ಶ್ವಾನಗಳೊಟ್ಟಿಗೆ ಆಟವಾಡುತ್ತಿರುವ ವಿಡಿಯೋವನ್ನು ಹಾಕಿದ್ದಾರೆ.

    ನಾಯಿಗಳ ಜೊತೆ ಆಟವಾಡುತ್ತಿರುವ ವಿಡಿಯೋಗೆ ರಶ್ಮಿಕಾ,` These are my two big boys ‘ ಎಂದು ಬರೆದಿದ್ದಾರೆ. ಈ ವಿಡಿಯೋಗೆ 9 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದು, 190ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    15 ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಸಾಯಿಸಿದ್ದ ಮಹಿಳೆಗೆ ಕೋರ್ಟ್ ನೀಡಿದ್ದು ಈ ಶಿಕ್ಷೆ

    ಬೆಂಗಳೂರು: ನಾಯಿಮರಿಗಳನ್ನು ಹತ್ಯೆಗೈದ ಮಹಿಳೆಗೆ ನ್ಯಾಯಾಲಯ 1 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದೆ.

    ಪೊನ್ನಮ್ಮ ಶಿಕ್ಷೆಗೆ ಗುರಿಯಾಗಿರುವ ಮಹಿಳೆ. 2016ರ ಮಾರ್ಚ್ 16 ರಂದು 15 ದಿನಗಳ ಎಂಟು ನಾಯಿ ಮರಿಗಳನ್ನು ಮಹಿಳೆ ಕ್ರೂರವಾಗಿ ಹತ್ಯೆ ಮಾಡಿದ್ದಳು. ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶೆಟ್ಟಿಹಳ್ಳಿಯಲ್ಲಿ ಈ ಪ್ರಕರಣ ನಡೆದಿದ್ದು, ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮರಿ ಹಾಕಿದ್ದ ನಾಯಿ ರಾತ್ರಿಯಲ್ಲಾ ಬೋಗಳುತ್ತೆ ಅನ್ನೊ ಕಾರಣಕ್ಕೆ ಹದಿನೈದು ದಿನದ 8 ನಾಯಿ ಮರಿಗಳನ್ನು ಕಲ್ಲಿಗೆ ಹೊಡೆದು ಮಹಿಳೆ ಹತ್ಯೆ ಮಾಡಿದ್ದಳು.

    ಈ ಘಟನೆ ನಡೆದ ಹದಿನೈದು ದಿನಗಳ ಬಳಿಕ ತಾಯಿ ನಾಯಿಯೂ ಸಾವನಪ್ಪಿತ್ತು. ಈ ಕುರಿತು ಸ್ಥಳೀಯರು ನೀಡಿದ ದೂರಿನ ಮೇರೆಗೆ ಕ್ಯೂಪಾ ಪ್ರಾಣಿ ದಯಾ ಸಂಘ ದೂರು ದಾಖಲಿಸಿತ್ತು.

    ಪ್ರಕರಣದ ಬಳಿಕ ಪೀಣ್ಯ ಪೊಲೀಸರು ಪೊನ್ನಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ಆರೋಪಿತ ಮಹಿಳೆಗೆ 45ನೇ ಎಸಿಎಂಎಂ ಕೋರ್ಟ್ 1 ಸಾವಿರ ದಂಡ ಇಲ್ಲವೇ 15 ದಿನ ಜೈಲು ಶಿಕ್ಷೆ ಪ್ರಕಟಿಸಿದೆ. ಸದ್ಯ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪ್ರಾಣಿ ದಯಾ ಸಂಘದ ಕಾರ್ಯಕರ್ತರು ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.