Tag: Petromax film

  • ವಿದೇಶದಲ್ಲಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್

    ವಿದೇಶದಲ್ಲಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್

    ಸ್ಯಾಂಡಲ್‌ವುಡ್‌ನ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್ ತನ್ನ ಸಹೋದರಿ ಜತೆ ವಿದೇಶಕ್ಕೆ ಹಾರಿದ್ದಾರೆ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಮಸ್ತ್ ಮಜಾ ಮಾಡ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Karunya Ram (@ikarunya)

    ವಜ್ರಕಾಯ, ಎರಡು ಕನಸು, ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಗಮನ ಸೆಳೆದ ನಟಿ ಕಾರುಣ್ಯ ರಾಮ್ `ಪೆಟ್ರೋಮ್ಯಾಕ್ಸ್’ ಚಿತ್ರದ ರಿಲೀಸ್ ನಂತರ ವಿದೇಶಕ್ಕೆ ಹಾರಿದ್ದಾರೆ. ಸಹೋದರಿ ಸಮೃದ್ಧಿ ಜತೆ ಪ್ಯಾರಿಸ್, ಸ್ವೀಜರ್‌ಲ್ಯಾಂಡ್ ಮತ್ತು ಯುರೋಪ್ ದೇಶಕ್ಕೆ ಹೊಗಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿ, ಸಹೋದರಿಯರಿಬ್ಬರು ಮಸ್ತ್ ಮಜಾ ಮಾಡ್ತಿದ್ದಾರೆ. ಇದನ್ನೂ ಓದಿ:3500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ : ಪಾಕಿಸ್ತಾನ ಸೇರಿ 27 ದೇಶಗಳಲ್ಲಿ ಚಿತ್ರ ಪ್ರದರ್ಶನ

     

    View this post on Instagram

     

    A post shared by Karunya Ram (@ikarunya)

    ಕಳೆದ ವಾರವಷ್ಟೇ ತೆರೆಕಂಡ ಸತೀಶ್ ನೀನಾಸಂ ನಟನೆಯ `ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ಕಾರುಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ.

     

    View this post on Instagram

     

    A post shared by Karunya Ram (@ikarunya)

    ಈ ಬೆನ್ನಲ್ಲೇ ಪ್ಯಾರಿಸ್, ಸ್ವೀಜರ್‌ಲ್ಯಾಂಡ್, ಯುರೋಪ್‌ನಲ್ಲಿ ಪ್ರವಾಸ ಮಾಡುತ್ತಾ ಫುಲ್ ಎಂಜಾಯ್ ಮಾಡ್ತಿದ್ದಾರೆ. ನಟಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆ

    ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆ

    ಬೆಂಗಳೂರು: ಸೆಪ್ಟೆಂಬರ್ 20ಕ್ಕೆ ಸತೀಶ್ ನೀನಾಸಂ, ಹರಿಪ್ರಿಯ ಜೋಡಿಯ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

    ಸತೀಶ್ ನೀನಾಸಂ, ಹರಿಪ್ರಿಯ ಜೋಡಿ ಅಭಿನಯದ ‘ಪೆಟ್ರೋಮ್ಯಾಕ್ಸ್’ ಚಿತ್ರ ಬಹಳ ನಿರೀಕ್ಷೆ ಮೂಡಿಸಿದೆ. ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರ ಸದ್ಯದಲ್ಲೇ ಟ್ರೇಲರ್ ಮೂಲಕ ಗಮನ ಸೆಳೆಯಲು ಸಜ್ಜಾಗಿದೆ.

    ಸೆಪ್ಟೆಂಬರ್ 20ರಂದು ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. 36 ದಿನದಲ್ಲಿ ಚಿತ್ರೀಕರಣ ಮುಗಿಸಿರುವ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹತ್ತು ಹಲವು ವಿಶೇಷತೆಗಳಿವೆ. ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ, ಹರಿಪ್ರಿಯ ತೆರೆ ಹಂಚಿಕೊಳ್ಳುತ್ತಿದ್ದು, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಹಾಸ್ಯದ ಜೊತೆಗೆ ಇಂಟ್ರಸ್ಟಿಂಗ್ ಕಥೆಯೂ ಚಿತ್ರದಲ್ಲಿದ್ದೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನುತ್ತದೆ ಚಿತ್ರತಂಡ. ಇದೀಗ ಟ್ರೇಲರ್ ಮೂಲಕ ಚಿತ್ರದ ಝಲಕ್ ತೋರಿಸಲು ಚಿತ್ರತಂಡ ಮುಂದಾಗಿದೆ.

    ನಿರ್ದೇಶನದ ಜೊತೆಗೆ ಚಿತ್ರಕ್ಕೆ ಕಥೆ ಚಿತ್ರಕಥೆ ಕೂಡ ವಿಜಯ ಪ್ರಸಾದ್ ಅವರದ್ದೇ. ವಿಜಯಲಕ್ಷೀ ಸಿಂಗ್, ಕಾರುಣ್ಯ ರಾಮ್ ಸೇರಿದಂತೆ ಚಿತ್ರದಲ್ಲಿ ಹಲವು ಕಲಾವಿದರು ಬಣ್ಣಹಚ್ಚಿದ್ದಾರೆ.

    ಸತೀಶ್ ನೀನಾಸಂ, ರಾಕೆಟ್ ಸಿನಿಮಾ ನಂತರ ಮತ್ತೊಮ್ಮೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹಭಾಗಿತ್ವದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ನಿರಂಜನ್ ಬಾಬು ಕ್ಯಾಮೆರಾ ವರ್ಕ್ ‘ಪೆಟ್ರೋಮ್ಯಾಕ್ಸ್’ ಚಿತ್ರಕ್ಕಿದೆ.