Tag: petrol

  • ಗ್ರಾಹಕರಿಗೆ ಸಿಹಿಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

    ಗ್ರಾಹಕರಿಗೆ ಸಿಹಿಸುದ್ದಿ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

    ಬೆಂಗಳೂರು: ತೈಲ ಗ್ರಾಹಕರಿಗೆ ಸಿಹಿಸುದ್ದಿ. ಸೋಮವಾರ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

    ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 2.16 ರೂಪಾಯಿ ಕಡಿಮೆಯಾಗಿದೆ. ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 2.10 ರೂಪಾಯಿ ಇಳಿಕೆಯಾಗಿದೆ. ಆದರೂ ಆಯಾ ರಾಜ್ಯಗಳ ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ಪೆಟ್ರೋಲ್ ಬೆಲೆ ಇಳಿಕೆಯಲ್ಲಿ 2.46 ರೂ. ನಿಂದ 3.22 ರೂ.ವರೆಗೆ ವ್ಯತ್ಯಯವಿದೆ ಎಂದು ವರದಿಯಾಗಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರದಲ್ಲಿನ ಬದಲಾವಣೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಹಿಂದೆ ಮೇ 1ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿತ್ತು. ಪ್ರತಿ ಲೀಟರ್ ಪೆಟ್ರೋಲ್‍ಗೆ 2 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 52 ಪೈಸೆ ಏರಿಕೆಯಾಗಿತ್ತು.

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಪ್ರತಿ ಭಾನುವಾರ ಬಂಕ್ ಮುಚ್ಚುವ ನಿರ್ಧಾರದಿಂದ ಮಾಲೀಕರು ತಾತ್ಕಾಲಿಕವಾಗಿ ಹಿಂದೆ ಸರಿದಿದ್ದರು. ಮೇ 17ರಂದು ಮುಂಬೈನಲ್ಲಿ ತೈಲ ಕಂಪನಿಗಳ ಜೊತೆಗೆ ಮಾತುಕತೆ ನಡೆಯಲಿದ್ದು, ಕಮಿಷನ್ ಹೆಚ್ಚಳ, ಡೀಲರ್ಗಳಿಗೆ ಹೆಚ್ಚಿನ ಸೌಲಭ್ಯ ಸೇರಿದಂತೆ ಪ್ರಮುಖ ಬೇಡಿಕೆಗಳ ಜಾರಿಗೆ ಬಂಕ್ ಮಾಲೀಕರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಘೋಷಿಸಿ ಸೋಮವಾರ ಬೆಳಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಬಂಕ್ ಓಪನ್ ಮಾಡಲು ತೀರ್ಮಾನಿಸಿದ್ದರು. ಆದ್ರೆ ಬುಧವಾರ ಮುಂಬೈನಲ್ಲಿ ಸಂಧಾನ ಸಭೆ ನಡೆಯೋ ಕಾರಣ ತಾತ್ಕಾಲಿಕವಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿರೋದಾಗಿ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರನಾಥ್ ಹೇಳಿದ್ದಾರೆ.

    ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳೇನು?
    * ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು.
    * ಜನವರಿ-ಜುಲೈ ಒಳಗೆ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳ ಪರಿಷ್ಕರಣೆಯಾಗಬೇಕು
    * ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು
    * ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಲು ಒತ್ತಾಯ.
    * ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರದ ರಜೆ ಮಾಡಲು ತೀರ್ಮಾನಿಸಲಾಗಿದೆ

    ಅಪೂರ್ವ ಚಂದ್ರ ಕಮಿಟಿ ಶಿಫಾರಸ್ಸುಗಳೇನು?
    * ಪ್ರತಿ ಆರು ತಿಂಗಳಿಗೆ ಸಿಬ್ಬಂದಿ, ಮೂಲ ಸೌಕರ್ಯಗಳ ವೇತನ ಪರಿಷ್ಕರಣೆ ಮಾಡಬೇಕು
    * ಡೀಲರ್ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು.
    * ಈಗ ಇರುವ ಕಮಿಷನ್ ಅನ್ನು ಹೆಚ್ಚಳ ಮಾಡಬೇಕು.

  • ಇಂದಿನಿಂದ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ: ಪ್ರತಿಭಟನೆ ಹೇಗಿರಲಿದೆ? ಬೇಡಿಕೆ ಏನು?

    ಇಂದಿನಿಂದ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ: ಪ್ರತಿಭಟನೆ ಹೇಗಿರಲಿದೆ? ಬೇಡಿಕೆ ಏನು?

    ಬೆಂಗಳೂರು: ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ಇಂದಿನಿಂದ ಪ್ರಾರಂಭವಾಗಿದೆ. ಇಂದು ಪೆಟ್ರೋಲ್ ಬಂಕ್‍ನಲ್ಲಿ ತೈಲ ಖರೀದಿ ಸ್ಥಗಿತ ಮಾಡಿದ್ದು, ಭಾನುವಾರ ಪೆಟ್ರೋಲ್ ಬಂಕ್ ಬಂದ್ ಮಾಡಿ ಹಂತ ಹಂತವಾಗಿ ಪ್ರತಿಭಟನೆ ಮಾಡಲಿದ್ದಾರೆ.

    ಅಪೂರ್ವಚಂದ್ರ ಕಮಿಟಿ ವರದಿ ಜಾರಿಗೆ ಒತ್ತಾಯಿಸಿ ಮುಷ್ಕರದ ಹಾದಿ ಹಿಡಿರುವ ಪೆಟ್ರೋಲ್ ಬಂಕ್‍ನವರು ಮೇ 15 ರಿಂದ ಸಿಂಗಲ್ ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ವಾಹನ ಸವಾರರಿಗೆ ಮುಷ್ಕರದ ಬಿಸಿ ತಟ್ಟಲಿದೆ. ಅಲ್ಲದೇ, ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ಮುಂದುವರೆಸಲಿದ್ದಾರೆ.

    ಪೆಟ್ರೋಲ್ ಬಂಕ್ ಮಾಲೀಕರ ಬೇಡಿಕೆಗಳೇನು..?
    * ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು.
    * ಜನವರಿ-ಜುಲೈ ಒಳಗೆ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳ ಪರಿಷ್ಕರಣೆಯಾಗಬೇಕು
    * ಈಗ ಇರುವ ಕಮಿಷನ್ ಹೆಚ್ಚಳ ಮಾಡಬೇಕು
    * ಪೆಟ್ರೋಲ್‍ಗೆ 15, ಡೀಸೆಲ್‍ಗೆ 10 ಪೈಸೆ ಕಮಿಷನ್ ಮಾಲೀಕರಿಗೆ ನೀಡಲು ಒತ್ತಾಯ.
    * ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ವಾರದ ರಜೆ ಮಾಡಲು ತೀರ್ಮಾನಿಸಲಾಗಿದೆ
    ಅಪೂರ್ವ ಚಂದ್ರ ಕಮಿಟಿ ಶಿಫಾರಸ್ಸುಗಳೇನು?:
    ಪ್ರತಿ ಆರು ತಿಂಗಳಿಗೆ ಸಿಬ್ಬಂದಿ, ಮೂಲ ಸೌಕರ್ಯಗಳ ವೇತನ ಪರಿಷ್ಕರಣೆ ಮಾಡಬೇಕು
    ಡೀಲರ್‍ಗಳಿಗೆ ಹೆಚ್ಚಿನ ಸೌಲಭ್ಯ ನೀಡಬೇಕು.
    ಈಗ ಇರುವ ಕಮಿಷನ್ ಅನ್ನು ಹೆಚ್ಚಳ ಮಾಡಬೇಕು.

  • ಬೆಂಗ್ಳೂರಲ್ಲಾಯ್ತು, ಈಗ ಹಾಸನದಲ್ಲೂ ಕೆರೆಗೆ ಬಿತ್ತು ಬೆಂಕಿ!

    ಬೆಂಗ್ಳೂರಲ್ಲಾಯ್ತು, ಈಗ ಹಾಸನದಲ್ಲೂ ಕೆರೆಗೆ ಬಿತ್ತು ಬೆಂಕಿ!

    ಹಾಸನ: ಕೆರೆಯ ನೀರಿನ ಮಧ್ಯದಿಂದ ಬಾನೆತ್ತರಕ್ಕೆ ಸಾಗಿದ ಬೆಂಕಿ. ದಟ್ಟ ಹೊಗೆಯಿಂದ ಜನರೆಲ್ಲಾ ಕಂಗಾಲು. ಹೌದು, ಕೆರೆಗೂ ಬೆಂಕಿ ಬೀಳುತ್ತಾ ಎಂದು ಕೇಳಬೇಡಿ. ಯಾಕೆಂದರೆ ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ವಿಚಾರ ಜನಮಾನಸದಿಂದ ಮಾಸುವ ಮುನ್ನವೇ ಹಾಸನದಲ್ಲೂ ಇಂಥದ್ದೇ ಘಟನೆ ನಡೆದಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರು ಮಾಡುತ್ತಿರುವ ಸಣ್ಣ ಸಣ್ಣ ಲೋಪಗಳಿಂದಾಗಿ ಇಡೀ ಊರಿನ ಜನರೇ ಸಮಸ್ಯೆಗೆ ಸಿಲುಕುವಂತಾಗಿದೆ.

    ಏನಾಯ್ತು?: ಹಾಸನದ ದೊಡ್ಡಬಸವನಹಳ್ಳಿ ಕೆರೆಯಲ್ಲಿ ಬಿಸಿಲ ಬೇಗೆಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದಿಂದ ಕಚ್ಚಾತೈಲಗಳನ್ನು ಕೆರೆಗೆ ಬಿಡಲಾಗುತ್ತಿದೆ ಇದರಿಂದಾಗಿಯೇ ಈ ಅವಘಡ ಸಂಭವಿಸಿದೆ. ಕುಡಿಯುವ ನೀರು ಸಂಪೂರ್ಣ ಕಲುಷಿತವಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ವಾಸನೆ ಬರುತ್ತಿದೆ. ಐದಾರು ಗ್ರಾಮಗಳ ಜನ್ರು ಈ ಕೆರೆಯನ್ನೇ ಅವಲಂಬಿಸಿದ್ದಾರೆ. ಕುಡಿಯುವ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ.

    ಮಂಗಳೂರಿನಿಂದ ಹಾಸನಕ್ಕೆ ಪೆಟ್ರೋಲಿಯಂ ಪೈಪ್ ಲೈನ್ ಹಾಕಿದ್ದಾರೆ. ಬಿಸಿಲು ಹೆಚ್ಚಾದಾಗ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಡೀ ಕೆರೆ ಪೆಟ್ರೋಲ್ ಮಯವಾಗಿದ್ದು ಕೆರೆಯ ನೀರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ನೂರಾರು ಅಡಿ ಎತ್ತರಕ್ಕೆ ಹಾರುತ್ತಿದೆ. ಈ ಬಗ್ಗೆ ಹಿಂದೂಸ್ತಾನ್ ಪೆಟ್ರೋಲಿಯಂ ಘಟಕದ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    https://youtu.be/jYawxVoQ9hU

     

  • ಪೆಟ್ರೋಲ್ ಡೋರ್ ಡೆಲಿವರಿ: ಅಪಾಯದ ಅರಿವಿಲ್ಲದವರು ಪ್ರಧಾನಿ ಸ್ಥಾನದಲ್ಲಿ ಕೂತಿರೋದು ಆಶ್ಚರ್ಯ!

    ಪೆಟ್ರೋಲ್ ಡೋರ್ ಡೆಲಿವರಿ: ಅಪಾಯದ ಅರಿವಿಲ್ಲದವರು ಪ್ರಧಾನಿ ಸ್ಥಾನದಲ್ಲಿ ಕೂತಿರೋದು ಆಶ್ಚರ್ಯ!

    ಬೆಂಗಳೂರು: ಪೆಟ್ರೋಲ್ ಡೋರ್ ಡೆಲಿವರಿ ವ್ಯವಸ್ಥೆ ಪ್ರಸ್ತಾವನೆಗೆ ಸಂಬಂಧಿಸಿದಂತೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಮುಖಂಡ ಪಾಟೀಲ್ ಕಿಡಿಕಾರಿದ್ದು, ಪಬ್ಲಿಕ್ ರೋಡಲ್ಲಿ ನಿಂತುಕೊಂಡು ಬಿಟ್ಟು ಅಪಾಯದ ಅರಿವಿಲ್ಲದವರು ಪ್ರಧಾನಿ ಸ್ಥಾನದಲ್ಲಿ ಕೂತಿದ್ದಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.

    ಇಂದು ನಡೆದ ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಟೀಲ್, ಪೆಟ್ರೋಲ್ ಬಾಂಬ್ ಇದ್ದ ಹಾಗೆ. ಅದನ್ನು ಬಂಕ್‍ಗೆ ಲೋಡ್, ಅನ್‍ಲೋಡ್ ಮಾಡುವಾಗ ಸಾಕಷ್ಟು ರೂಲ್ಸ್‍ಗಳಿವೆ. ಸ್ವಲ್ಪ ಎಡವಟ್ಟು ಆದ್ರೆ ಬೆಂಕಿ ಹತ್ತುತ್ತೆ. ಅಂಥದ್ರಲ್ಲಿ ರಸ್ತೆಯಲ್ಲಿ, ಮನೆ ಬದಿಯಲ್ಲಿ ನಿಂತು ಪೆಟ್ರೋಲ್ ಮಾರಾಟ, ಡೋರ್ ಡೆಲಿವರಿ ಮಾಡ್ತಾರೆ ಅಂತಾ ಹೇಳುತ್ತಿದ್ದಾರೆ. ಏನಾದ್ರೂ ಅನಾಹುತ ಆದ್ರೆ ಅದಕ್ಕೆ ಯಾರು ಹೊಣೆ. ನಿಜಕ್ಕೂ ಇದು ನಾಚಿಕೆಗೇಡಿನ ನಿರ್ಧಾರ ಎಂದು ಹೇಳಿದ್ರು.

    ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಂಘದವರು ಸರ್ಕಾರದ ಮುಂದೆ ಕೆಲ ಬೇಡಿಕೆಗಳನ್ನು ಇಟ್ಟಿದ್ದು, ಅವುಗಳನ್ನು ಮೇ 9ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆಗೆ ನಡೆಸಲಾಗುವುದು ಎಂದು ಪೆಟ್ರೋಲ್ ಬಂಕ್ ಸಂಘದ ಅಧ್ಯಕ್ಷ ಬಿ. ಆರ್.ರವೀಂದ್ರನಾಥ್ ಹೇಳಿದ್ದಾರೆ.

    ನವೆಂಬರ್ 4ರಂದು ನಡೆದ ಸಭೆಯ ತೀರ್ಮಾನದಂತೆ ಬೇಡಿಕೆ ಈಡೇರಿಸಬೇಕು. ಒಂದು ವೇಳೆ ಬೇಡಿಕೆಗಳು ಪೂರ್ಣವಾಗಲಿಲ್ಲ ಅಂದ್ರೆ ಮೇ 10ರಂದು ಯಾವುದೇ ಪೆಟ್ರೋಲ್ ಖರೀದಿಸದಿರಲು ನಿರ್ಧರಿಸಲಾಗಿದೆ. ಮೇ 15ರಿಂದ ಒಂದು ಪಾಳಿಯ ಕೆಲಸ ಮಾಡಲಾಗುವುದು. ಮೇ 14 ರಿಂದ ಪ್ರತಿ ಭಾನುವಾರ ಪೆಟ್ರೋಲ್ ಸೇವೆ ಸ್ಥಗಿತಗೊಳಿಸಲಾಗುವುದು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 15 ಹಾಗೂ 10 ಪೈಸೆ ಮಾಲೀಕರಿಗೆ ನೀಡಲು ಒತ್ತಾಯ ಹೇರಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಹಾಗಾದರೆ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಬೇಡಿಕೆಗಳೇನು?
    ಅಪೂರ್ವ ಚಂದ್ರ ಕಮಿಟಿ ಜಾರಿ ಮಾಡಬೇಕು. ನವೆಂಬರ್ 4ರಂದು ನಡೆದ ಸಭೆಯ ತೀರ್ಮಾನದಂತೆ ಬೇಡಿಕೆ ಈಡೇರಿಸಬೇಕು. ಜನವರಿ – ಜುಲೈ ಆರು ತಿಂಗಳೊಳಗೆ ಎಲ್ಲಾ ಬಿಲ್ಲುಗಳು ಪರಿಷ್ಕರಣೆ ಆಗಬೇಕು.

     

  • 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ನವದೆಹಲಿ: ಕೇಂದ್ರ ಸರ್ಕಾರ ಮತ್ತು ನೀತಿ ಆಯೋಗದ ಕನಸು ನನಸಾದರೆ 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟ ಆಗಲ್ಲ.

    ಹೌದು. ಕಚ್ಚಾ ತೈಲದ ಆಮದನ್ನು ಕಡಿಮೆ ಮಾಡಲು ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಈ ವಿಚಾರವಾಗಿ ಇಂಧನ ಸಚಿವ ಪಿಯೂಷ್ ಗೋಯಲ್ ಮಾತನಾಡಿದ್ದು, ನಾವು ದೊಡ್ಡ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸಲು ಚಿಂತನೆ ನಡೆಸಿದ್ದೇವೆ. 2030ರ ವೇಳೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟ ಸಂಪೂರ್ಣ ಸ್ಥಗಿತವಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಆರಂಭದ 2-3 ವರ್ಷ ಸರ್ಕಾರವೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಹಾಯ ನೀಡುತ್ತದೆ. ದೇಶದ ಅತಿ ದೊಡ್ಡ ಕಾರು ಉತ್ಪಾದಕ ಕಂಪೆನಿಗೆ ಸರ್ಕಾರ ಸಹಕಾರ ನೀಡಿದರೆ ಮುಂದೆ ದೇಶದ ಆಟೋಮೊಬೈಲ್ ಕೈಗಾರಿಕೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ವಿವರಿಸಿದರು.

    ಬೃಹತ್ ಕೈಗಾರಿಕಾ ಸಚಿವಾಲಯ ಮತ್ತು ನೀತಿ ಆಯೋಗ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗೆ ಇಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ವಾಹನಗಳ ಬೆಲೆ ಬಗ್ಗೆ ಪ್ರತಿಕ್ರಿಯಿಸಿ, ಎಲೆಕ್ಟ್ರಿಕ್ ವಾಹನಗಳು ಜನರ ಕೈಗೆ ಎಟಕುವ ದರದಲ್ಲಿ ಇರಲಿದೆ ಎಂದು ಪೆಟ್ರೋಲ್, ಡೀಸೆಲ್, ಎಲೆಕ್ಟ್ರಿಕ್ ಕಾರು,ಇಂಧನ,  ಪಿಯೂಷ್ ಗೋಯಲ್ ಹೇಳಿದರು.

    ಯುಜಲಾ ಯೋಜನಾ ಮೂಲಕ ಕಳೆದ ಎರಡು ವರ್ಷಗಳಲ್ಲಿ 500 ದಶಲಕ್ಷ ಎಲ್‍ಇಡಿ ಬಲ್ಬ್ ಗಳನ್ನು ದೇಶದಲ್ಲಿ ವಿತರಿಸಲಾಗಿದೆ. ವಿದ್ಯುತ್ ಉತ್ಪಾದನೆಯನ್ನು ಹೆಚ್ಚಳ ಮಾಡಿ ವಿದ್ಯುತ್ ವ್ಯರ್ಥವಾಗಿ ಪೋಲಾಗುವುದನ್ನು ನಿಲ್ಲಿಸುವುದು ನನ್ನ ಕೆಲಸ ಎಂದರು.

    ವಿಶ್ವದಲ್ಲಿ ಮೊದಲ ಬಾರಿಗೆ ನಾರ್ವೆ ಸರ್ಕಾರ ಈ ಕ್ರಮವನ್ನು ಕೈಗೊಂಡಿದ್ದು, 2025ರಿಂದ ಪೆಟ್ರೋಲ್, ಡೀಸೆಲ್ ಕಾರುಗಳು ಅಲ್ಲಿನ ರಸ್ತೆಗೆ ಇಳಿಯುವಂತಿಲ್ಲ. 2030ರ ವೇಳೆಗೆ ಪೆಟ್ರೋಲ್, ಡೀಸೆಲ್ ಕಾರುಗಳನ್ನು ನಿಷೇಧಿಸುವ ನಿರ್ಧಾರವನ್ನು ಜರ್ಮನಿ ಈ ಹಿಂದೆ ಕೈಗೊಂಡಿತ್ತು.

    ಎಲೆಕ್ಟ್ರಿಕ್ ವಾಹನಗಳು ದುಬಾರಿ:
    ಅಶೋಕ್ ಲೇಲ್ಯಾಂಡ್ ಕಂಪೆನಿ ಮೊದಲ ಬಾರಿಗೆ ಸ್ವದೇಶಿ ಎಲೆಕ್ಟ್ರಿಕ್ ಬಸ್ ತಯಾರಿಸಿದೆ. 2016ರ ಅಕ್ಟೋಬರ್ ನಲ್ಲಿ ಈ ಬಸ್ ಬಿಡುಗಡೆ ಮಾಡಿದೆ. 1.75 ಕೋಟಿ ರೂ. ವೆಚ್ಚದಲ್ಲಿ ಈ ಬಸ್ ತಯಾರಾಗಿದ್ದು, ಒಮ್ಮೆ ಬ್ಯಾಟರಿ ಫುಲ್ ಚಾರ್ಜ್ ಮಾಡಿದರೆ 120 ಕಿ.ಮೀ ಕ್ರಮಿಸುತ್ತದೆ.

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ? 

  • ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಲಕ್ನೋ: ರಿಮೋಟ್ ಕಂಟ್ರೋಲ್ ಚಿಪ್‍ಗಳನ್ನ ಬಳಸಿ ಗ್ರಾಹಕರಿಗೆ ವಂಚಸುತ್ತಿದ್ದ ಆರೋಪದ ಮೇಲೆ ಉತ್ತರಪ್ರದೇಶದ ಎಸ್‍ಟಿಎಫ್ ಪೊಲೀಸರು ಶುಕ್ರವಾರದಂದು ಇಲ್ಲಿನ 7 ಪೆಟ್ರೋಲ್ ಬಂಕ್‍ಗಳನ್ನ ಜಪ್ತಿ ಮಾಡಿದ್ದು, 4 ಪೆಟ್ರೋಲ್ ಬಂಕ್ ಮಾಲೀಕರು ಸೇರಿದಂತೆ 23 ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ 7 ಎಫ್‍ಐಆರ್‍ಗಳು ದಾಖಲಾಗಿವೆ.

    ಹೇಗೆ ಮೋಸ ಮಾಡ್ತಿದ್ರು: ಪೆಟ್ರೋಲ್ ಹಾಕಲಾಗುವ ಮಷೀನ್‍ನಲ್ಲಿ ಚಿಪ್ ಆಧಾರಿತ ಸಾಧನವನ್ನ ಅಳವಡಿಸಿ ಪೆಟ್ರೋಲ್ ಹರಿವನ್ನ ಶೇ. 5 ರಿಂದ 10 ರಷ್ಟು ಕಡಿಮೆಯಾಗಿಸುತ್ತಿದ್ದರು. ಆದ್ರೆ ಇದರಿಂದ ಮಷೀನಿನ ಮೀಟರ್ ರೀಡಿಂಗ್‍ನಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಅಂದ್ರೆ ಗ್ರಾಹಕರು ಒಂದು ಲೀಟರ್ ಪೆಟ್ರೋಲ್‍ಗೆ ದುಡ್ಡು ಕೊಟ್ಟರೂ ಅವರಿಗೆ ಸಿಗುತ್ತಿದ್ದದ್ದು 900 ರಿಂದ 950 ಎಂಎಲ್ ಪೆಟ್ರೋಲ್ ಮಾತ್ರ.

    ಈ ಬಗ್ಗೆ ಎಸ್‍ಟಿಎಫ್ ಮುಖ್ಯಕಚೇರಿಗೆ 2016ರಲ್ಲಿ ಮಾಹಿತಿ ಬಂದಿತ್ತು. ಅಂದಿನಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ರು. 2017ರಲ್ಲಿ ರವೀಂದರ್ ಎಂಬ ಎಲೆಕ್ಟ್ರಿಷಿಯನ್ ಈ ಜಾಲದ ಹಿಂದಿರುವುದು ಗೊತ್ತಾಯಿತು. ಈತನೇ ಪೆಟ್ರೋಲ್ ಪಂಪ್‍ಗಳಲ್ಲಿ ಚಿಪ್‍ಗಳನ್ನ ಅಳವಡಿಸುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು.

    ಎಸ್‍ಟಿಎಫ್ ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದರು. ಈತ ಎಲ್ಲೆಲ್ಲಿ ಓಡಾಡ್ತಾನೆ, ಯಾರನ್ನೆಲ್ಲಾ ಭೇಟಿ ಮಾಡ್ತಾನೆ ಎಂಬುದನ್ನ ಗಮನಿಸುತ್ತಿದ್ರು. ಈತ ಈ ಜಾಲದ ಹಿಂದಿರುವುದು ಖಾತ್ರಿಯಾದ ಮೇಲೆ ಪೊಲೀಸರು ರವೀಂದರ್‍ನನ್ನ ಬಂಧಿಸಿದ್ದಾರೆ.

    ಪೊಲೀಸ್ ತನಿಖೆ ವೇಳೆ ರವೀಂದರ್ ತನ್ನ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಕೆಲಸವನ್ನ 6 ವರ್ಷಗಳಿಂದ ಮಾಡುತ್ತಿದ್ದು, 3 ಸಾವಿರ ರೂ.ನಿಂದ 40 ಸಾವಿರ ರೂ.ವರೆಗೆ ಈ ಚಿಪ್‍ಗಳನ್ನ ಪೆಟ್ರೋಲ್ ಪಂಪ್ ಮಾಲೀಕರಿಗೆ ಮಾರಾಟ ಮಾಡಿದ್ದೀನಿ ಎಂಬ ಸಂಗತಿಯನ್ನ ಬಹಿರಂಗಪಡಿಸಿದ್ದಾನೆ. ಕಾನ್ಪುರದ ಸಂಸ್ಥೆಯೊಂದರಿಂದ ಈ ಚಿಪ್ ಖರೀದಿಸಿ, ಪೆಟ್ರೋಲ್ ಪಂಪ್‍ಗಳಲ್ಲಿ ಅಳವಡಿಸುತ್ತಿದ್ದೆ. ಈ ಮಷೀನ್‍ಗಳಿಗೆ ರಿಪೇರಿ ಅಗತ್ಯವಿದ್ದಾಗಲೂ ನಾನೇ ರಿಪೇರಿ ಮಾಡಲು ಹೋಗಬೇಕಿತ್ತು ಎಂದು ಹೇಳಿದ್ದಾನೆ.

    ಚಿಪ್ ಅಳವಡಿಸ್ತಿದ್ದಿದ್ದು ಹೇಗೆ?: ಪೆಟ್ರೋಲ್ ಪಂಪ್ ಮಾಲೀಕರು ಮಷೀನ್ ಸರಿಯಾಗಿ ಕೆಲಸ ಮಾಡ್ತಿಲ್ಲ ಅಂತ ಮೆಶರ್‍ಮೆಂಟ್ ಇಲಾಖೆಗೆ ದೂರು ನೀಡ್ತಿದ್ರು. ಇಲಾಖೆಯವರು ಬಂದು ಯಂತ್ರದ ಪ್ಲಾಸ್ಟಿಕ್ ಬಾಕ್ಸ್ ತೆಗೆದಾಗ ಚಿಪ್ ಅಳವಡಿಸುತ್ತಿದ್ರು. ವಿವಿಧ ರೀತಿಯ ಬಾಕ್ಸ್ ಗಳಿಗೆ ಬೇರೆ ಬೇರೆ ವಿಧದ ಚಿಪ್‍ಗಳನ್ನ ಹಾಕ್ತಿದ್ರು. ಆದ್ರೆ ಈ ಬಾಕ್ಸ್ ಗಳನ್ನ ಸೀಲ್ ಮಾಡಲಾಗುತ್ತಿದ್ದರಿಂದ ಇದನ್ನ ತೆಗೆಯಬೇಕಾದ್ರೆ ಮೆಶರ್‍ಮೆಂಟ್ ಇಲಾಖೆಯವರೇ ಬರಬೇಕು. ಯಾವಾಗ ಬಕ್ಸ್ ತೆಗೆಯುತ್ತಾರೋ ಆಗ ಚಿಪ್ ಅಳವಡಿಸಲಾಗ್ತಿತ್ತು. ಪ್ರತಿ ಚಿಪ್‍ನಲ್ಲೂ ವಿಶೇಷ ಕೋಡ್ ಇದ್ದು, ಇದನ್ನು ಅಳವಡಿಸಿದ ನಂತರ ಪೆಟ್ರೋಲ್ ಪಂಪ್ ಮ್ಯಾನೇಜರ್‍ಗಳ ಬಳಿ ಇರುತ್ತಿದ್ದ ರಿಮೋಟ್‍ನಿಂದ ಆಪರೇಟ್ ಮಾಡಲಾಗ್ತಿತ್ತು.

    ಈ ಪೆಟ್ರೊಲ್ ವಂಚನೆ ಜಾಲ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಹಾಗೂ ಬೇರೆ ರಾಜ್ಯಗಳಲ್ಲೂ ಇರಬಹುದು ಎಂದು ಎಸ್‍ಟಿಎಫ್ ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣದ ಬಗ್ಗೆ ಶೀಘ್ರದಲ್ಲೇ ಸಂಪೂರ್ಣ ವರದಿ ಸಲ್ಲಿಸಲಿದ್ದಾರೆ.

     

  • ಕ್ಯೂ ಮರೆತು ಬಿಡಿ, ಇನ್ನು ಮುಂದೆ ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್, ಡೀಸೆಲ್!

    ಕ್ಯೂ ಮರೆತು ಬಿಡಿ, ಇನ್ನು ಮುಂದೆ ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್, ಡೀಸೆಲ್!

    ನವದೆಹಲಿ: ಆನ್‍ಲೈನಲ್ಲಿ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಪಡೆದುಕೊಳ್ಳುವಂತೆ ಇನ್ನು ಮುಂದೆ ದೇಶದಲ್ಲಿ ಜನ ಪೆಟ್ರೋಲ್, ಡೀಸೆಲ್ ಬುಕ್ ಮಾಡಿ ಮನೆಯಲ್ಲೇ ತೈಲವನ್ನು ತಮ್ಮ ವಾಹನಗಳಿಗೆ ತುಂಬಿಸಬಹುದು.

    ಹೌದು. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಂಕ್‍ಗಳಲ್ಲಿ ಗ್ರಾಹಕರ ಕ್ಯೂ ನಿಲ್ಲುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್ ವಿತರಣೆ ಮಾಡಲು ಚಿಂತನೆ ನಡೆಸಿದೆ.

    ಈ ಸಂಬಂಧ ಸಚಿವಾಲಯ ಟ್ವೀಟ್ ಮಾಡಿದ್ದು, ಕ್ಯೂ ನಿಂತುಕೊಂಡು ಗ್ರಾಹಕರ ಸಮಯ ಹಾಳಾಗುವುದನ್ನು ತಪ್ಪಿಸಲು, ಪ್ರೀ  ಬುಕ್ಕಿಂಗ್ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋ ಉತ್ಪನ್ನಗಳನ್ನು ತಲುಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದೆ.

    ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ಈ ಹಿಂದೆ ಪ್ರತಿದಿನ 150 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆಯುತ್ತಿದ್ದರೆ ಈಗ ಈ ವ್ಯವಹಾರ 450 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

    ಪ್ರತಿ ವರ್ಷ 3.5 ಕೋಟಿ ಜನ ಬಂಕ್‍ಗಳಿಗೆ ಬರುತ್ತಾರೆ. ವಾರ್ಷಿಕವಾಗಿ 2,500 ಕೋಟಿ ರೂ. ವ್ಯವಹಾರ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

    15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದ್ದು, ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಲ್ಲಿ ಜಾರಿಗೆ ಬರಲಿದೆ. ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ಭಾರತೀಯ ತೈಲ ಕಂಪೆನಿಗಳು ತೀರ್ಮಾನಿಸಿದೆ.

    ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಅಲ್ಪ ಸಂಖ್ಯೆಯ ಪಂಪ್‍ಗಳ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.

  • ಮೇ 1 ರಿಂದ ಈ 5 ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗುತ್ತೆ

    ಮೇ 1 ರಿಂದ ಈ 5 ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಆಗುತ್ತೆ

    ನವದೆಹಲಿ: 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದ್ದು, ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಲ್ಲಿ ಜಾರಿಗೆ ಬರಲಿದೆ.

    ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್‍ನ ಜಮ್ಶೆಡ್‌ಪುರ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ಭಾರತೀಯ ತೈಲ ಕಂಪೆನಿಗಳು ತೀರ್ಮಾನಿಸಿದೆ.

    ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.

    ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

    ಗ್ರಾಹಕರಿಗೆ ಲಾಭವೇ?
    ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

    ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

    ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

  • ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರಿಗೆ ಲಾಭವೇ?

    ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದೆ ಪೆಟ್ರೋಲ್, ಡೀಸೆಲ್ ದರ! ಗ್ರಾಹಕರಿಗೆ ಲಾಭವೇ?

    ನವದೆಹಲಿ: ಇಲ್ಲಿಯವರೆಗೆ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗುವ ಸಾಧ್ಯತೆಯಿದೆ.

    ಹೌದು. ಭಾರತೀಯ ತೈಲ ಕಂಪೆನಿಗಳು ಪ್ರತಿದಿನ ತೈಲದರವನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಮುಂದೆ ಇಟ್ಟಿದೆ.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು ಇವರೆಲ್ಲರೂ ಒಟ್ಟಾಗಿ ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸುವ ಪ್ರಸ್ತಾಪವನ್ನು ಮುಂದಿಟ್ಟಿವೆ. ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಬುಧವಾರ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದಾರೆ.

    ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಈಗ ಇದನ್ನು ಕಾರ್ಯರೂಪಕ್ಕೆ ತರಲು ನಾವು ಸಿದ್ಧರಾಗಿದ್ದೇವೆ. ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಪ್ರತಿದಿನ ದರ ಬದಲಾದರೆ ಗ್ರಾಹಕರಿಗೆ ಮತ್ತು ವಿತರಕರಿಗೆ ಲಾಭವಾಗಲಿದೆ ಎಂದು ಅವರು ಹೇಳಿದ್ದಾರೆ.

    ಪ್ರತಿದಿನ ದರವನ್ನು ಪರಿಷ್ಕರಿಸುವ ಹೊಸ ವ್ಯವಸ್ಥೆ ಭಾರತದಲ್ಲಿ ಎಂದಿನಿಂದ ಕಾರ್ಯರೂಪಕ್ಕೆ ಬರುತ್ತದೆ ಎನ್ನುವ ಪ್ರಶ್ನೆಗೆ ಅಧಿಕಾರಿ ಉತ್ತರ ನೀಡಿಲ್ಲ.

    ಗ್ರಾಹಕರಿಗೆ ಲಾಭವೇ?
    ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

    ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

    ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

     

  • ಗುಡ್ ನ್ಯೂಸ್: ಭಾರೀ ಇಳಿಕೆ ಆಯ್ತು ಪೆಟ್ರೋಲ್, ಡೀಸೆಲ್ ಬೆಲೆ

    ಗುಡ್ ನ್ಯೂಸ್: ಭಾರೀ ಇಳಿಕೆ ಆಯ್ತು ಪೆಟ್ರೋಲ್, ಡೀಸೆಲ್ ಬೆಲೆ

    ನವದೆಹಲಿ: ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮೊದಲ ಬಾರಿಗೆ ಭಾರೀ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.77 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 2.91 ರೂ. ಇಳಿಕೆಯಾಗಿದೆ. ಪರಿಷ್ಕೃತ ದರ ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 56 ಡಾಲರ್‍ನಿಂದ (3,700 ರೂ.) 54 ಡಾಲರ್‍ಗೆ (3,570 ರೂ.) ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲಗಳ ದರ ಇಳಿಕೆಯಾಗಿದೆ.

    ಮಾರ್ಚ್ 15ರಂದು ಭಾರತೀಯ ತೈಲ ಕಂಪೆನಿಗಳು ದರ ಪರಿಷ್ಕರಣೆ ಮಾಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಅಂದಾಜು 2 ರೂ.ನಿಂದ 2.50 ರೂ.ರವರೆಗೆ ಇಳಿಕೆ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಆದರೆ ಅಂದು ಯಾವುದೇ ದರ ಪರಿಷ್ಕರಣೆ ಆಗಿರಲಿಲ್ಲ.

    ಪ್ರತಿ 15 ದಿನಗಳಿಗೊಮ್ಮೆ ಭಾರತೀಯ ತೈಲ ಕಂಪೆನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವನ್ನು ನೋಡಿಕೊಂಡು ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ಆದರೆ ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ತೈಲ ಕಂಪೆನಿಗಳು ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆಗೆ ಮುಂದಾಗಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಪರಿಷ್ಕರಿಸಲಾಗಿತ್ತು.

    ಜನವರಿ 15ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 42 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 1.03 ಪೈಸೆ ಏರಿಕೆಯಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 76.28 ರೂ. ಇದ್ದರೆ, ಡೀಸೆಲ್ ಬೆಲೆ 63.16 ರೂ. ಇತ್ತು. ಇಳಿಕೆಯಾದ ನಂತರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 72.51 ರೂ.ಆಗಿದ್ದರೆ, ಡೀಸೆಲ್ ಬೆಲೆ 60.25 ರೂ. ಆಗಿದೆ.