Tag: petrol pump

  • ಅವಧಿ ಮುಗಿದ ವಾಹನಗಳಿಗೆ ಇಂದಿನಿಂದ ಪೆಟ್ರೋಲ್, ಡಿಸೇಲ್ ಇಲ್ಲ

    ಅವಧಿ ಮುಗಿದ ವಾಹನಗಳಿಗೆ ಇಂದಿನಿಂದ ಪೆಟ್ರೋಲ್, ಡಿಸೇಲ್ ಇಲ್ಲ

    – ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದ ಹೊಸ ನಿಯಮ ಜಾರಿ
    – 350 ಪೆಟ್ರೋಲ್ ಪಂಪ್‌ನಲ್ಲಿ ಟ್ರಾಫಿಕ್ ಪೊಲೀಸ್ ನಿಯೋಜನೆ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಳೆಯ ವಾಹನಗಳ (Old Vehicle) ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ದೆಹಲಿ ಸರ್ಕಾರವು ಇಂದಿನಿಂದ 15 ವರ್ಷಗಳಿಗಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಮತ್ತು 10 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ರಸ್ತೆಯಲ್ಲಿ ಓಡಿಸುವುದನ್ನು ನಿಷೇಧಿಸಿದೆ.

    ಇದರ ಭಾಗವಾಗಿ ದೆಹಲಿಯಲ್ಲಿ ಅವಧಿ ಮೀರಿದ ವಾಹನಗಳಿಗೆ ಪೆಟ್ರೋಲ್ ಅಥವಾ ಡೀಸೆಲ್ ಹಾಕದಿರಲು ನಿಯಮ ರೂಪಿಸಿದೆ. ಈ ನಿಯಮಗಳ ಕಟ್ಟುನಿಟ್ಟಿನ ಜಾರಿಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಸಾರಿಗೆ ಇಲಾಖೆ, ದೆಹಲಿ ಪೊಲೀಸ್ ಮತ್ತು ಸಂಚಾರ ಸಿಬ್ಬಂದಿಯೊಂದಿಗೆ (Traffic Police) ಸಮನ್ವಯದೊಂದಿಗೆ, ಜೀವಿತಾವಧಿಯ ವಾಹನಗಳಿಗೆ ಇಂಧನ ಪೂರೈಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಸಮಗ್ರ ಕಾರ್ಯತಂತ್ರವನ್ನು ಜಾರಿಗೆ ತಂದಿದೆ. ಇದನ್ನೂ ಓದಿ: ಮೈಸೂರು| ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಮದ್ಯ ಮಾರಾಟ

     

    ಈಗಾಗಲೇ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ (Petrol Pump) ಜುಲೈ 1ರಿಂದ ಜೀವಿತಾವಧಿ ಮುಗಿದ ವಾಹನಗಳಿಗೆ ಇಂಧನವನ್ನು ವಿತರಿಸಲಾಗುವುದಿಲ್ಲ. 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳು ಎಂದು ಹೇಳುವ ಸೂಚನೆಯನ್ನು ಹಾಕಲಾಗಿದೆ. ಇದರ ಜೊತೆಗೆ, ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಜಾರಿಗೊಳಿಸಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಲಾರಿ ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ – ನಾಲ್ವರು ದುರ್ಮರಣ

    ನಿಗದಿತ ಜೀವಿತಾವಧಿ ಮೀರಿದ ವಾಹನಗಳ ಇಂಧನ ತುಂಬುವಿಕೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ತಡೆಯಲು ಗುರುತಿಸಲಾದ 350 ಪೆಟ್ರೋಲ್ ಪಂಪ್‌ಗಳಲ್ಲಿ ತಲಾ ಒಬ್ಬ ಸಂಚಾರ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಯೋಜನೆಯ ಪ್ರಕಾರ, ದೆಹಲಿ ಪೊಲೀಸರು 1 ರಿಂದ 100 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ ನಿಯೋಜಿಸಲ್ಪಡುತ್ತಾರೆ. ಸಾರಿಗೆ ಇಲಾಖೆಯು 101 ರಿಂದ 159 ಸಂಖ್ಯೆಯ ಇಂಧನ ಕೇಂದ್ರಗಳಲ್ಲಿ ಮತ್ತು 59 ಎಮ್‌ಸಿಡಿ ತಂಡಗಳು ವಿವಿಧ ಇಂಧನ ಮಳಿಗೆಗಳಲ್ಲಿಯೂ ಇರುತ್ತವೆ. ಇದನ್ನೂ ಓದಿ: ಎತ್ತಿನಭುಜ ಚಾರಣಕ್ಕೆ ಪ್ರವಾಸಿಗರಿಗೆ ಬ್ರೇಕ್ – ಇಂದಿನಿಂದ 1 ತಿಂಗಳು ಸಂಪೂರ್ಣ ಬಂದ್

    ಸಂಚಾರ ಸಿಬ್ಬಂದಿಗೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಥವಾ ಅವಧಿ ಮುಗಿದ ವಾಹನದ ಮಾಲೀಕರಿಗೆ ಚಲನ್ ನೀಡುವ ಅಧಿಕಾರವಿರುತ್ತದೆ. ಇದಲ್ಲದೆ, ಜಾರಿ ಕಾರ್ಯಾಚರಣೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪ್ರತಿ ಪೆಟ್ರೋಲ್ ಪಂಪ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ದೆಹಲಿಯಾದ್ಯಂತ ಇಂಧನ ಕೇಂದ್ರಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಇಂಧನ ಕೇಂದ್ರದ ಆವರಣಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳ ನೋಂದಣಿ ವಿವರಗಳನ್ನು ಸೆರೆಹಿಡಿಯಲಿದೆ. ಇದನ್ನೂ ಓದಿ: ಬಾಸ್ ಜೊತೆ ಅಕ್ರಮ ಸಂಬಂಧದ ಶಂಕೆ – ಲಿವ್ ಇನ್ ಗೆಳತಿಯ ಹತ್ಯೆಗೈದು ಶವದೊಂದಿಗೆ ಮಲಗಿದ್ದ 2 ಮಕ್ಕಳ ತಂದೆ

  • ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

    ಉಡುಪಿ: ಪೆಟ್ರೋಲ್ ಪಂಪ್ (Petrol Pump) ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ (Tipper) ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ (Hebri) ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.

    ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹೃದಯಾಘಾತದಿಂದ ಸಾವು

    ಅದೇ ಪೆಟ್ರೋಲ್ ಪಂಪ್‌ಗೆ ಬಂದು ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್, ಅಲ್ಲೇ ಮಲಗಿದ್ದ ಶಿವರಾಜ್ ಹಾಗೂ ಮಹೇಂದ್ರ ಮೇಲೆ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಾದಿನಿ ಜೊತೆ ಅಶ್ಲೀಲ ವರ್ತನೆ – ಪ್ರಶ್ನಿಸಿದ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ

  • ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಕಿಡ್ನ್ಯಾಪ್‍ನಿಂದ ಪೆಟ್ರೋಲ್ ಪಂಪ್ ಮಾಲೀಕ ಗ್ರೇಟ್ ಎಸ್ಕೇಪ್

    ಲಕ್ನೋ: ಎಸ್‍ಯುವಿ (SUV) ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಪೆಟ್ರೋಲ್ ಪಂಪ್ ಮಾಲೀಕನನ್ನು (Petrol Pump Owner) ಅಪರಿಹರಿಸಲು ಯತ್ನಿಸಿರುವ ಘಟನೆ ವಾರಣಾಸಿಯಲ್ಲಿ (Varanasi) ನಡೆದಿದೆ.

    ಗುರುವಾರ ರಾತ್ರಿ ಶಿವಪುರಿಯ (Shivpuri) ತರ್ನಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಹನಕ್ಕೆ ಇಂಧನ ತುಂಬಿದ ನಂತರ ಆರೋಪಿಗಳು ಪೆಟ್ರೋಲ್ ಪಂಪ್ ಮಾಲೀಕರನನ್ನು ಅಪಹರಿಸಲು ಪ್ರಯತ್ನಿಸಿದರು. ಆದರೆ ಸಿಬ್ಬಂದಿ ಮಧ್ಯಪ್ರವೇಶಿಸಿದ ಹಿನ್ನೆಲೆ ಅವರ ಕಿಡ್ನ್ಯಾಪ್‍ ಪ್ಲಾನ್ ವಿಫಲವಾಯಿತು.  ಇದನ್ನೂ ಓದಿ: PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    ವೀಡಿಯೋದಲ್ಲಿ ಆರೋಪಿಯೊರ್ವ ಪೆಟ್ರೋಲ್ ಪಂಪ್ ಮಾಲೀಕರೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಮತ್ತಿಬ್ಬರು ಎಸ್‍ಯುವಿ ಕಾರನ್ನು ಚಾಲನೆ ಮಾಡುವಂತೆ ಮತ್ತೊಬ್ಬನಿಗೆ ಹೇಳುತ್ತಿರುತ್ತಾನೆ. ವಾಹನ ಸಮೀಪಕ್ಕೆ ಬರುತ್ತಿದ್ದಂತೆ ಆರೋಪಿ, ಪೆಟ್ರೋಲ್ ಪಂಪ್ ಮಾಲೀಕನನ್ನು ಕಾರಿನೊಳಗೆ ತಳ್ಳಲು ಪ್ರಯತ್ನಿಸುತ್ತಾನೆ. ಇದನ್ನೂ ಓದಿ: 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಮುಕನಿಗೆ 142 ವರ್ಷ ಜೈಲು

    ನಂತರ ಭದ್ರತಾ ಸಿಬ್ಬಂದಿ, ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದಾಗ ಅಲ್ಲಿಯೇ ಇದ್ದ ಗ್ರಾಹಕರು ಜಮಾಯಿಸುತ್ತಾರೆ. ಈ ವೇಳೆ ಗಾಬರಿಗೊಂಡ ಆರೋಪಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಗಳನ್ನು ಗುರುತಿಸಿ ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಪೆಟ್ರೋಲ್ ಬಂಕ್ ಧ್ವಂಸ

    ಯೋಗಿಗೆ ಬೆದರಿಕೆ ಹಾಕಿದ್ದ ಎಸ್‍ಪಿ ಶಾಸಕನ ಪೆಟ್ರೋಲ್ ಬಂಕ್ ಧ್ವಂಸ

    ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಶಾಸಕ ಇಸ್ಲಾಂ ಅನ್ಸಾರಿ ಅವರ ಒಡೆತನದ ಬರೇಲಿಯಲ್ಲಿರುವ ಪೆಟ್ರೋಲ್ ಬಂಕ್‍ನ್ನು ಬುಲ್ಡೋಜರ್‍ನಿಂದ ಧ್ವಂಸಗೊಳಿಸಿದ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಬರೇಲಿಯ ದೆಹಲಿ-ರಾಮ್‍ಪುರ ಹೆದ್ದಾರಿಯಲ್ಲಿರುವ ಶಾಸಕ ಶಾಜಿಲ್ ಇಸ್ಲಾಂ ಅನ್ಸಾರಿ ಒಡೆತನದ ಪೆಟ್ರೋಲ್ ಪಂಪ್ ಅನ್ನು ಅಗತ್ಯ ಪರವಾನಿಗೆ ಇಲ್ಲದೆ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳು ಗುರುವಾರ ಧ್ವಂಸಗೊಳಿಸಿದ್ದಾರೆ. ಈ ಹಿಂದೆ ಶಾಜಿಲ್ ಇಸ್ಲಾಂ ಅವರು ಯೋಗಿ ಆದಿತ್ಯನಾಥ್‍ಗೆ ಬೆದರಿಕೆ ಹಾಕುತ್ತಿರುವ ವೀಡಿಯೋ ಕ್ಲಿಪ್‍ವೊಂದು ಬಿಡುಗಡೆ ಆಗಿತ್ತು. ಇದು ಸಾಕಷ್ಟು ವಿವಾದವನ್ನು ಉಂಟು ಮಾಡಿತ್ತು.

    ಬರೇಲಿಯಲ್ಲಿ ಎಸ್‍ಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕ, ಯೋಗಿ ನಮ್ಮ ವಿರುದ್ಧ ಏನಾದರೂ ಹೇಳಿದರೆ, ನಮ್ಮ ಬಂದೂಕುಗಳು ಹೊಗೆಯನ್ನು ಹೊರಸೂಸುವುದಿಲ್ಲ. ಆದರೆ ಗುಂಡುಗಳನ್ನು ಹಾರಿಸುತ್ತವೆ ಎಂದು ಹೇಳಿದ್ದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಜನರ ಗಮನ ಕೋಮುಸಂಘರ್ಷದತ್ತ ಸೆಳೆದು ಬೆಲೆ ಏರಿಕೆ ಮಾಡುತ್ತಿದೆ: AAP

    ಮುಖ್ಯಮಂತ್ರಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶಾಜಿಲ್ ಇಸ್ಲಾಂ ಮತ್ತು ಪಕ್ಷದ ಇತರ ಕೆಲವು ನಾಯಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ: ಧಾರ್ಮಿಕ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ, ಇದು ಎಲ್ಲರ ಸರ್ಕಾರ: ಡಾ.ಕೆ ಸುಧಾಕರ್

  • 4ರ ಬಾಲಕಿಯನ್ನು ರೇಪ್ ಮಾಡಿ, ಗೋಣಿ ಚೀಲದಲ್ಲಿ ತುಂಬಿ ಪೆಟ್ರೋಲ್ ಪಂಪ್ ಬಳಿ ಬಿಸಾಕಿದ!

    4ರ ಬಾಲಕಿಯನ್ನು ರೇಪ್ ಮಾಡಿ, ಗೋಣಿ ಚೀಲದಲ್ಲಿ ತುಂಬಿ ಪೆಟ್ರೋಲ್ ಪಂಪ್ ಬಳಿ ಬಿಸಾಕಿದ!

    ಮುಂಬೈ: ಲಕ್ಷುರಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ತನ್ನ ಕಾಮತೃಷೆ ತೀರಿಸಿಕೊಂಡ ವಿಲಕ್ಷಣ ಘಟನೆಯೊಂದು ನಡೆದಿದೆ.

    ಕಾಮುಕ ಚಾಲಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಆಕೆಯನ್ನು ಗೋಣಿಚೀಲದಲ್ಲಿ ಕಟ್ಟಿ ಮುಂಬೈ- ಅಹಮ್ಮದಾಬಾದ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಎಸೆದು ಹೋಗಿದ್ದಾನೆ. ಮರುದಿನ ಬೆಳಗ್ಗೆ ಪೆಜ್ಞೆ ಬಂದ ಬಳಿಕ ಗೋಣಿ ಚೀಲದೊಳಗೆ ಚಲನೆ ಕಾಣಿಸಿತ್ತು. ಹೀಗಾಗಿ ಸ್ಥಳೀಯರು ಗೋಣಿಚೀಲವನ್ನು ತೆರೆದು ನೋಡಿದಾಗ ಅದರೊಳಗೆ ಬಾಲಕಿ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಪಾರ್ಕ್ ಮಾಡಿದ್ದ ಲಕ್ಷುರಿ ಬಸ್ಸಿನಲ್ಲಿ ಬಾಲಕಿ ತನ್ನ ಗೆಳೆಯರೊಂದಿಗೆ ಭಾನುವಾರ ಮಧ್ಯಾಹ್ನದ ಬಳಿಕ ಆಟವಾಡುತ್ತಿದ್ದಳು. ಈ ವೇಳೆ ಬಸ್ ಅಚಾನಕ್ ಆಗಿ ಚಲಿಸಿದ್ದು, ಬಾಲಕಿ ಬಿಟ್ಟು ಉಳಿದವರು ಬಸ್ಸಿನಿಂದ ಹಾರಿ ಪಾರಾಗಿದ್ದಾರೆ. ಇತ್ತ ಬಸ್ಸಿನೊಳಗೆ ಬಾಲಕಿ ಇರುವುದನ್ನು ಗಮನಿಸಿದ ಚಾಲಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ಆಕೆಯ ಕತ್ತು ಹಿಸುಕಿದ್ದಾನೆ. ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಂದುಕೊಂಡ ಕಾಮುಕ ಚಾಲಕ ಆಕೆಯನ್ನು ಗೋಣಿಚೀಲದೊಳಗೆ ತುಂಬಿ ನಂತರ ಪೆಟ್ರೋಲ್ ಬಂಕ್ ಬಳಿ ಬಿಸಾಕಿದ್ದಾನೆ.

    ಇತ್ತ ಮಗಳು ನಾಪತ್ತೆಯಾಗಿದ್ದರಿಂದ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಬಾಲಕಿಯ ಪತ್ತೆಗೆ ಹುಡುಕಾಟದಲ್ಲಿದ್ದ ಪೊಲೀಸರು ಬೇರೆ ಬೇರೆ ಠಾಣೆಗಳಿಗೆ ಮಾಹಿತಿ ನೀಡಿದರು. ಅಲ್ಲದೆ ಹತ್ತಿರದ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಆರೋಪಿ ಚಾಲಕನನ್ನು ಪೊಲೀಸರು ಗುರುತಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಡಿಸೆಂಬರ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಮುಂಬೈ ಟು ಮಂಡ್ಯ ಕೊರೊನಾ ಸೋಂಕು- ಉಡುಪಿಯ ಪೆಟ್ರೋಲ್ ಪಂಪ್ ಸೀಲ್

    ಮುಂಬೈ ಟು ಮಂಡ್ಯ ಕೊರೊನಾ ಸೋಂಕು- ಉಡುಪಿಯ ಪೆಟ್ರೋಲ್ ಪಂಪ್ ಸೀಲ್

    ಉಡುಪಿ: ಮಂಡ್ಯ ಜಿಲ್ಲೆ ನಾಗಮಂಗಲದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರೋದು ಖಾತ್ರಿ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ತೆಕ್ಕಟ್ಟೆಯ ಪೆಟ್ರೋಲ್ ಪಂಪನ್ನು ಸೀಲ್ ಮಾಡಲಾಗಿದೆ.

    ಖರ್ಜೂರ ತುಂಬಿದ ಗೂಡ್ಸ್ ಲಾರಿ ಹತ್ತಿಕೊಂಡು ಮುಂಬೈನಿಂದ ಮಂಡ್ಯಕ್ಕೆ ಪ್ರಯಾಣಿಸಿದ ವ್ಯಕ್ತಿಗೆ ಕೊರೊನಾ ಆವರಿಸಿತ್ತು. ಆತ ದಾರಿ ನಡುವೆ ಉಡುಪಿಯ ತೆಕ್ಕಟ್ಟೆಯ ಶಿವಪ್ರಸಾದ್ ಪೆಟ್ರೋಲ್ ಸ್ಟೇಷನ್ ನಲ್ಲಿ ಸ್ನಾನ ಮಾಡಿ ಊಟ ಮಾಡಿ ಕೊಂಚ ವಿರಮಿಸಿದ್ದ. ಹೀಗಾಗಿ ಉಡುಪಿಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.

    ತೆಕ್ಕಟ್ಟೆ ಶಿವಪ್ರಸಾದ್ ಪೆಟ್ರೋಲ್ ಬಂಕನ್ನು ರಾತ್ರೋರಾತ್ರಿ ಜಿಲ್ಲಾಡಳಿತ ಸೀಲ್ ಮಾಡಿದೆ. ಟಿಫನ್ ಮಾಡಿದ ಸ್ಥಳವನ್ನು ಪತ್ತೆ ಹಚ್ಚಿದ ಕುಂದಾಪುರ ಪೊಲೀಸರು, ಟೋಲ್ ಸಿಬ್ಬಂದಿಯನ್ನು ಕೂಡ ಕ್ವಾರಂಟೈನ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಪೆಟ್ರೋಲ್ ಬಂಕ್, ಬಹಳಷ್ಟು ಜನ ಓಡಾಡುವ ಏರಿಯಾ ಇದಾಗಿದೆ. ಹಾಗಾಗಿ ಆತಂಕ ಮನೆಮಾಡಿದೆ.

    ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಗಡಿಯನ್ನು ಸೀಲ್ ಮಾಡಿದ್ದರೂ ಗೂಡ್ಸ್ ಬಿಡಬೇಕಾಗುತ್ತದೆ. ಲಾರಿ, ಟ್ಯಾಂಕರಲ್ಲಿ ಅವಿತುಕುಳಿತು ಪ್ರಯಾಣ ಮಾಡುವವರ ಮೇಲೆ ಕೂಡಾ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು.

  • ಪೆಟ್ರೋಲ್ ಬಂಕ್ ದರೋಡೆ- ಅಪ್ರಾಪ್ತ ಸೇರಿ ಮೂವರು ಅರೆಸ್ಟ್

    ಪೆಟ್ರೋಲ್ ಬಂಕ್ ದರೋಡೆ- ಅಪ್ರಾಪ್ತ ಸೇರಿ ಮೂವರು ಅರೆಸ್ಟ್

    ಮಡಿಕೇರಿ: ಪೆಟ್ರೋಲ್ ಬಂಕ್ ದರೋಡೆ ಮಾಡಿ ತಲೆ ಮರೆಸಿಕೊಂಡಿದ್ದ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.

    ಮೈಸೂರಿನ ರಾಜೀವ್ ನಗರದ ನಿವಾಸಿಗಳಾದ ಸೈಯ್ಯದ್ ಸಕ್ಲೇನ್ (21), ಅಕ್ಬರ್ ಶರೀಪ್ (18) ಹಾಗೂ ಓರ್ವ ಅಪ್ರಾಪ್ತ ಬಂಧಿತ ಆರೋಪಿಗಳು. ಬಂಧಿತರಿಂದ 20,500 ರೂ.ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಶಾಂತಿನಗರದ ಮತ್ತೋರ್ವ ಆರೋಪಿ ನುಹೀದ್ ಖಾನ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ಅಪ್ರಾಪ್ತ ಸೇರಿದಂತೆ ನಾಲ್ವರು ಡಿಸೆಂಬರ್ 12ರಂದು ಬೆಳಗ್ಗೆ 5 ಗಂಟೆಗೆ ವಿರಾಜಪೇಟೆ ತಾಲೂಕಿನ ಕುಟ್ಟಾ-ಮಾನಂದವಾಡಿ ರಸ್ತೆಯಲ್ಲಿರುವ ಅನುಗ್ರಹ ಪೆಟ್ರೋಲ್ ಬಂಕ್‍ಗೆ ಕೆಎ-03 ಎಎಫ್-3919 ನೋಂದಣಿ ಸಂಖ್ಯೆಯ ಕಾರಿನಲ್ಲಿ ಬಂದಿದ್ದರು. ಈ ವೇಳೆ ಸಂಚು ಹಾಕಿ ಬಂಕ್‍ನಲ್ಲಿದ್ದ 24,200 ರೂ. ನಗದು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಪೆಟ್ರೋಲ್ ಬಂಕ್ ಮಾಲೀಕ ಚಂದನ್ ಕಾಮತ್ ಅವರು ಕುಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್ ಮಾರ್ಗದರ್ಶನ ಹಾಗೂ ಕುಟ್ಟ ಸರ್ಕಲ್ ಇನ್ಸ್‍ಪೆಕ್ಟರ್ ಎಸ್.ಪರಶಿವಮೂರ್ತಿ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು. ಈ ತಂಡವು ಆರೋಪಿಗಳ ಜಾಲವನ್ನು ಪತ್ತೆ ಹಚ್ಚಿ ಶುಕ್ರವಾರ ಬಂಧಿಸಿ, ಅವರ ಬಳಿ ಇದ್ದ 20,500 ರೂ.ವನ್ನು ವಶಕ್ಕೆ ಪಡೆಯಲಾಗಿದೆ.

  • ಬಂಕ್‍ನಲ್ಲಿ ಮೊಬೈಲ್ ಬಳಕೆ- ಬೈಕ್‍ಗೆ ಬೆಂಕಿ ತಗುಲಿ ತಪ್ಪಿದ ಭಾರೀ ಅನಾಹುತ

    ಬಂಕ್‍ನಲ್ಲಿ ಮೊಬೈಲ್ ಬಳಕೆ- ಬೈಕ್‍ಗೆ ಬೆಂಕಿ ತಗುಲಿ ತಪ್ಪಿದ ಭಾರೀ ಅನಾಹುತ

    ಬಾಗಲಕೋಟೆ: ಪೆಟ್ರೋಲ್ ಬಂಕ್‍ನಲ್ಲಿ ಬೈಕ್‍ಗೆ ಪೆಟ್ರೋಲ್ ಹಾಕಿಸುವಾಗ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಜಮಖಂಡಿಯಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಮಖಂಡಿ ನಗರದ ಪಟವರ್ಧನ ಪೆಟ್ರೋಲ್ ಪಂಪ್‍ನಲ್ಲಿ ಕಳೆದ ವಾರ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೈಕ್ ಸವಾರ ಯಾರು ಎಂಬುದು ತಿಳಿದು ಬಂದಿಲ್ಲ.

    ಬೈಕ್ ಸವಾರ ಪೆಟ್ರೋಲ್ ಹಾಕಿಸುತ್ತಿದ್ದಾಗ ವ್ಯಕ್ತಿಯೊಬ್ಬ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪೆಟ್ರೋಲ್ ಪಂಪ್ ಸಿಬ್ಬಂದಿ ಹಾಗೂ ಸವಾರ ಗಾಬರಿಗೊಂಡಿದ್ದರು. ತಕ್ಷಣವೇ ಸ್ಥಳದಲ್ಲಿದ್ದ ಬಕೆಟ್ ಎತ್ತಿಕೊಂಡು ಮರಳನ್ನು ಸುರಿದು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಘಟನೆಯ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಬೈಕ್ ಮುಂದೆ ನಿಂತಿದ್ದ ವ್ಯಕ್ತಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದದ್ದೇ ಅನಾಹುತಕ್ಕೆ ಕಾರಣವಾಗಿದೆ. ಪೆಟ್ರೋಲ್ ಪಂಪ್‍ನಲ್ಲಿ ಮೊಬೈಲ್ ಬಳಸಬಾರದು ಎಂಬ ಸೂಚನಾ ಫಲಕ ಇದ್ದರೂ ಕೆಲವರು ಮೊಬೈಲ್ ಬಳಕೆ ಮಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಮಲಗಿದ್ದಾಗಲೇ ಇಬ್ಬರ ಕತ್ತು ಕೊಯ್ದು ಬರ್ಬರ ಹತ್ಯೆ

    ಮಲಗಿದ್ದಾಗಲೇ ಇಬ್ಬರ ಕತ್ತು ಕೊಯ್ದು ಬರ್ಬರ ಹತ್ಯೆ

    ಬೆಳಗಾವಿ: ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕಿತ್ತೂರು ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

    ಲಿಂಗದಳ್ಳಿ ಗ್ರಾಮದ ಮಂಜುನಾಥ ಪಟ್ಟಣಶೆಟ್ಟಿ (30) ಮತ್ತು ತಿಗಡೊಳ್ಳಿ ಗ್ರಾಮದ ಮುಸ್ತಾಕ ಬೀಡಿ (32) ಕೊಲೆಯಾದ ದುರ್ದೈವಿಗಳು. ಮೃತರು ಕಿತ್ತೂರು ಹೊರವಲಯದ ಶಿವಾ ಪೆಟ್ರೋಲ್ ಪಂಪ್‍ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ತಡರಾತ್ರಿ ಮಲಗಿದ್ದಾಗಲೇ ಇಬ್ಬರ ಕತ್ತು ಕೊಯ್ದು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

    ದುಷ್ಕರ್ಮಿಗಳು ಪಂಪ್ ಹೊರಗಡೆ ಮಲಗಿದ್ದ ವ್ಯಕ್ತಿಯ ಕತ್ತು ಕೊಯ್ದು ಬಳಿಕ ಪಂಪ್ ಒಳಗೆ ನುಗ್ಗಿ ಮತ್ತೊಬ್ಬನ ಕೊಲೆ ಮಾಡಿದ್ದಾರೆ. ಬೆಳಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸದ್ಯಕ್ಕೆ ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  • ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

    ಹುಡುಗಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ!

    ಬಾಗಲಕೋಟೆ: ಯುವಕನೊಬ್ಬನನ್ನು ಕೊಡಲಿಯಿಂದ ಬರ್ಬರವಾಗಿ ಕೊಲೆಗೈದ ಘಟನೆ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ. ಶಿರೂರ ಗ್ರಾಮದ ಶರಣಪ್ಪ ಹಿರೇಕೊಂಬಿ(18) ಕೊಲೆಯಾದ ಯುವಕ. ಅದೇ ಗ್ರಾಮದ ಆನಂದ ಬೆನ್ನೂರು (24) ಹತ್ಯೆ ಮಾಡಿದ ಆರೋಪಿ. ಕೊಲೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ ಇಬ್ಬರ ನಡುವೆ ಹುಡುಗಿಯ ವಿಚಾರಕ್ಕೆ ಜಗಳವಾಗಿತ್ತು ಎನ್ನಲಾಗಿದೆ.

    ಘಟನೆಯ ವಿವರ:
    ಶಿರೂರು ಗ್ರಾಮದ ಗುಳೇದಗುಡ್ಡ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಶರಣಪ್ಪ ಕೆಲಸ ಮಾಡುತ್ತಿದ್ದ. ಎಂದಿನಂತೆ ಇಂದು ಕೂಡಾ ಶರಣಪ್ಪ ಕೆಲಸದಲ್ಲಿ ತೊಡಗಿದ್ದ. ಈ ವೇಳೆ ಅಲ್ಲಿಗೆ ಕೊಡಲಿ ಹಿಡಿದು ಬಂದ ಆನಂದ ಶರಣಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭಿರವಾಗಿ ಗಾಯಗೊಂಡಿದ್ದ ಶರಣಪ್ಪ ಅತಿಯಾದ ರಕ್ತಸ್ರಾವದಿಂದ ಸ್ಥಳಲ್ಲಿಯೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ಆರೋಪಿ ಯುವಕ ಅಲ್ಲಿಂದ ಪರಾರಿಯಾಗಿದ್ದ.

    ಪೆಟ್ರೋಲ್ ಬಂಕ್‍ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸೆರೆಯಾಗಿದೆ. ಈ ಕುರಿತು ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv