Tag: petrol price

  • ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌  ದರ ಇಳಿಕೆಯಾಗುತ್ತಾ?

    ಕಚ್ಚಾ ತೈಲ ದರ ಭಾರೀ ಇಳಿಕೆ- ಭಾರತದಲ್ಲೂ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾಗುತ್ತಾ?

    ಲಂಡನ್‌/ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ಆರಂಭಿಸಿದ ತೆರಿಗೆ ಸಮರದಿಂದ ಷೇರು ಮಾರುಕಟ್ಟೆಯಲ್ಲಿ (Share Market) ರಕ್ತಪಾತವಾಗುತ್ತಿದ್ದಂತೆ ಇನ್ನೊಂದು ಕಡೆ ಕಚ್ಚಾ ತೈಲ ದರ (Crude Oil Price) ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡಿದೆ.

    ಟ್ರಂಪ್ ಸರ್ಕಾರ ತೆರಿಗೆ ಸಮರ ಘೋಷಿಸಿದ ಒಂದು ವಾರದಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ (159 ಲೀಟರ್) ಬೆಲೆ ಸುಮಾರು 10 ಡಾಲರ್(‌ಅಂದಾಜು 850 ರೂ.) ಇಳಿಕೆಯಾಗಿದೆ.

    ತೈಲ ಮತ್ತು ಅನಿಲ ವಲಯವನ್ನು ಈ ಸುಂಕಗಳಿಂದ ವಿನಾಯಿತಿ ನೀಡಲಾಗಿದ್ದರೂ, ಹಣದುಬ್ಬರದ ಕಳವಳ, ಆರ್ಥಿಕ ಹಿಂಜರಿತ ಭೀತಿ, ನಿಧಾನ ಆರ್ಥಿಕ ಬೆಳವಣಿಗೆ ಮತ್ತು ವ್ಯಾಪಾರ ವಿವಾದಗಳು ತೀವ್ರಗೊಂಡಿರುವುದರಿಂದ ಬೆಲೆ ಇಳಿಕೆಯಾಗಿದೆ. ಈ ಮೂಲಕ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿವೆ.

    ಬ್ಯಾರೆಲ್‌ಗೆ 72.94 ಡಾಲರ್‌ನಲ್ಲಿ (ಅಂದಾಜು 6,250) ವಹಿವಾಟು ನಡೆಸುತ್ತಿದ್ದ ಬ್ರೆಂಟ್ ಕಚ್ಚಾ ತೈಲವು ದರ ಈಗ 62.91 ಡಾಲರ್‌ಗೆ (ಅಂದಾಜು 5,390 ರೂ.) ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್‌ ದರ 7% ಇಳಿಕೆಯಾಗಿ 59.34 ಡಾಲರ್‌ (ಅಂದಾಜು 5,090ರೂ.)ತಲುಪಿದೆ.

    ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC+) ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಗಳನ್ನು ಘೋಷಿಸಿದೆ. ಮೇ ತಿಂಗಳಲ್ಲಿ ದಿನಕ್ಕೆ 4,11,000 ಬ್ಯಾರೆಲ್‌ಗಳನ್ನು (bpd) ತೈಲ ಉತ್ಪಾದನೆ ಮಾಡಲು ಮುಂದಾಗಿದೆ. ಈ ಹಿಂದೆ ನಿರ್ಧರಿಸಲಾಗಿದ್ದ 1,35,000 ಬಿಪಿಡಿಯಿಂದ ಹೆಚ್ಚು ಉತ್ಪಾದನೆ ಮಾಡುವ ನಿರ್ಧಾರ ಕೈಗೊಂಡಿದ್ದು ಇದು ತೈಲ ಬೆಲೆ ಕುಸಿಯಲು ಕಾರಣವಾಗಿದೆ. ಇದನ್ನೂ ಓದಿ: Black Monday ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ19 ಲಕ್ಷ ಕೋಟಿ

    ಭಾರತದಲ್ಲೂ ಇಳಿಕೆಯಾಗುತ್ತಾ?
    ಈ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತಿತ್ತು. ಆದರೆ ತೈಲ ಬೆಲೆ ಏರಿಕೆಯಾದರೆ ದೇಶದಲ್ಲಿ ವಸ್ತುಗಳ ಬೆಲೆ ಏರಿಕೆಯಾಗುವ ಕಾರಣ ಕೇಂದ್ರ ಸರ್ಕಾರ ಈಗ ನಿತ್ಯ ದರ ಪರಿಷ್ಕರಣೆ ಮಾಡುವುದನ್ನು ನಿಲ್ಲಿಸಿದೆ.‌

    ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ 2024ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 99.83 ರೂ. ಆಗಿದ್ದರೆ ಡೀಸೆಲ್‌ ದರ 85.93 ರೂ. ಇತ್ತು. ಇದನ್ನೂ ಓದಿ: ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    2024ರ ಜೂನ್‌ ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 3.02 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳದಿಂದ ಪೆಟ್ರೋಲ್‌ ದರ 102.84 ರೂ. ಆಗಿದ್ದರೆ ಡೀಸೆಲ್‌ ದರ 89.79 ರೂ.ಗೆ ಏರಿಕೆಯಾಗಿತ್ತು.

    ಏಪ್ರಿಲ್‌ 1 ರಿಂದ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 18.44% ರಿಂದ 21.17% ಗೆ ಸರ್ಕಾರ ಏರಿಕೆ ಮಾಡಿದ್ದರಿಂದ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 2 ರೂ. ಏರಿಕೆಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್‌ ದರ 5 ರೂ. ಏರಿಕೆ ಮಾಡಿದೆ.

    ಈ ಹಿಂದೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಸೆಸ್‌ ಹಾಕಿದ್ದರಿಂದ ದರ ಕಡಿತದ ಲಾಭ ಜನರಿಗೆ ಸಿಕ್ಕಿರಲಿಲ್ಲ.

     

  • ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ: ಪರಮೇಶ್ವರ್‌

    ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ: ಪರಮೇಶ್ವರ್‌

    ಬೆಂಗಳೂರು: ಈಗಾಗಲೇ ತೈಲ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ದರ ಹೆಚ್ಚಾದ ಬಳಿಕ ಜನರೂ ಕೂಡ ಪೆಟ್ರೋಲ್, ಡೀಸೆಲ್ (Petrol, Diesel) ಹಾಕಿಸಿಕೊಳ್ತಿದ್ದಾರೆ. ಈಗ ಯಾವುದೇ ಕಾರಣಕ್ಕೂ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ (Parameshwara) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್ ದರ ಇಳಿಸ್ತೀರಾ ಎಂಬ ಪ್ರಶ್ನೆ ಉತ್ತರಿಸಿದರು. ಈಗಾಗಲೇ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ದರ ಹೆಚ್ಚಾದ ಬಳಿಕ ಜನರೂ ಕೂಡ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ತಿದ್ದಾರೆ. ನೆರೆಯ ರಾಜ್ಯದವರು ಕಡಿಮೆ ದರ ಇದೆ ಅಂತ ಇಲ್ಲಿಗೆ ಬಂದು ಪೆಟ್ರೋಲ್ ಹಾಕಿಸಿಕೊಳ್ತಿದ್ದಾರೆ. ಈಗ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಪೊಲೀಸರ ವಿಚಾರಣೆಯಲ್ಲಿ ಸತ್ಯ ಬಾಯ್ಬಿಟ್ಟ `ದಾಸ’ – 30 ಲಕ್ಷ ಹಣ ನೀಡಿರೋದಾಗಿ ಸ್ವ-ಇಚ್ಛಾ ಹೇಳಿಕೆ!

    ಅಲ್ಲದೇ ನೀರು ಮತ್ತು ಬಸ್‌ ಟಿಕೆಟ್‌ ದರ ಹೆಚ್ಚಳ ಕುರಿತು ಪ್ರತಿಕ್ರಿಯಿಸಿ, ನೀರು ಮತ್ತು ಬಸ್‌ ಟಿಕೆಟ್‌ ದರ ಏರಿಸುವುದು ಆಯಾ ಇಲಾಖೆಗೆ ಸಂಬಂಧಿಸಿದ್ದು. ಅವರೇನಾದ್ರೂ ಇಂಥವರ ವಿರುದ್ಧ ಕೇಸ್‌ ಬುಕ್‌ ಮಾಡಿ ಅಂತ ದೂರು ಕೊಟ್ಟರೇ ನಮ್ಮ ವ್ಯಾಪ್ತಿಗೆ ಬರುತ್ತೆ. ಯಾರೂ ಕೇಸ್‌ ಕೊಟ್ಟರೂ ತಗೋತೀವಿ, ನಂತರ ಕ್ರಮ ವಹಿಸುತ್ತೇವೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಆದ್ರೆ ಬಂದಿದ್ದು ವಿಷಕಾರಿ ಹಾವು – ಬಾಕ್ಸ್‌ ಓಪನ್‌ ಮಾಡಿದ ಯುವತಿ ಜಸ್ಟ್‌ ಮಿಸ್‌!

    ಇದೇ ವೇಳೆ ವಾಲ್ಮೀಕಿ ನಿಗಮದಲ್ಲಿ ಸಿಎಂ ಹಸ್ತಕ್ಷೇಪ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹಸ್ತಕ್ಷೇಪ ಮಾಡಿದ್ದರೆ, ಬಿಜೆಪಿಯವರು ಸಾಬೀತು ಮಾಡಲಿ. ಇಷ್ಟು ದಿನ ಹಗರಣವನ್ನ ಸಿಬಿಐ ತನಿಖೆಗೆ ಕೊಡಿ ಅಂತ ಬಿಜೆಪಿಯವ್ರು ಕೂಗಾಡ್ತಿದ್ರು. ಈಗ ಸಿಬಿಐ ಕೂಡ ಎಂಟ್ರಿಯಾಗಿದೆ. ಬ್ಯಾಂಕ್ ಫ್ರಾಡ್ ಅನ್ನೋ ಕಾರಣಕ್ಕೆ ಸಿಬಿಐ ಎಂಟ್ರಿಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಹರಿಸಿ ಹತ್ಯೆ – ರಾಜ್ಯಸಭಾ ಸಂಸದರ ಪುತ್ರಿಗೆ ಜಾಮೀನು! 

  • ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ

    ಉತ್ತರ ಭಾರತಕ್ಕೆ ಹೋಲಿಸಿದ್ರೆ ದಕ್ಷಿಣ ಭಾರತದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ

    ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ (Petrol Diesel Price Hike) ಮಾಡಿ ವಾಹನ ಸವಾರರಿಗೆ ಶಾಕ್ ಕೊಟ್ಟಿದ್ದೆ. ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್ ಸೇಲ್ಸ್ ಟ್ಯಾಕ್ಸ್ ದರ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳವಾಗಿದೆ. ಕರ್ನಾಟಕ ಮಾತ್ರವಲ್ಲದೇ ಉತ್ತರ ಭಾರತಕ್ಕೆ (North India) ಹೋಲಿಸಿದರೆ ದಕ್ಷಿಣ ಭಾರತದಲ್ಲೇ (South India) ತೈಲ ಬೆಲೆ ಏರಿಕೆ ಗಗನಕ್ಕೆ ಏರಿಕೆಯಾಗಿದೆ. ಹಾಗಾದರೆ ಯಾವ ರಾಜ್ಯಗಳ ನಗರಗಳಲ್ಲಿ? ಪೆಟ್ರೋಲ್‌, ಡೀಸೆಲ್‌ ದರ ಹೇಗಿದೆ ಎಂಬುದನ್ನ ನೋಡೋಣ…

    ನಗರ – ಪೆಟ್ರೋಲ್ – ಡಿಸೇಲ್ ( ಬೆಲೆ ರೂ.ಗಳಲ್ಲಿ)

    ನವದೆಹಲಿ – 94.72 – 87.62
    ಕೋಲ್ಕತ್ತಾ – 103.94 – 90.76
    ಮುಂಬೈ – 104.21 – 92.15
    ಚೆನ್ನೈ – 100.75 – 92.34
    ಗುರ್ಗಾಂವ್ – 94.90 – 87.76
    ನೋಯ್ಡಾ – 94.72 – 87.83
    ಭುವನೇಶ್ವರ್ – 100.97 – 92.55
    ಚಂಡೀಗಢ – 94.24 – 82.40
    ಹೈದರಾಬಾದ್ – 107.41 – 95.65
    ಜೈಪುರ – 104.86 – 90.33
    ಲಕ್ನೋ – 94.56 – 87.66
    ಪಾಟ್ನಾ – 105.18 – 92.04
    ತಿರುವನಂತಪುರ – 107.56 – 96.43
    ಬೆಂಗಳೂರು – 102.85- 88.93

    ತೆರಿಗೆ ದರ ಹೆಚ್ಚಳ ವಿವರ

    ಪೆಟ್ರೋಲ್
    ಹಿಂದಿನ ದರ – 25.92%
    ಹೆಚ್ಚಳ ದರ – 29.84%
    ಏರಿಕೆ – 3.9%

    ಡಿಸೇಲ್
    ಹಿಂದಿನ ದರ – 14.34%
    ಹೆಚ್ಚಳದ ದರ – 18.44%
    ಏರಿಕೆ – 4.1%

    ಟ್ಯಾಕ್ಸ್ ಏರಿಕೆ ಬಳಿಕ ತೈಲದರ ಎಷ್ಟು?

    ಪೆಟ್ರೋಲ್ ( ಪ್ರತಿ ಲೀಟರ್‌ಗೆ)
    ಇವತ್ತಿನ ದರ – 99.54 ರೂ
    ಏರಿಕೆ ಬಳಿಕ ದರ – 102 ರೂ

    ಡಿಸೇಲ್ (ಪ್ರತಿ ಲೀಟರ್)
    ಇವತ್ತಿನ ದರ – 85.93 ರೂ
    ಏರಿಕೆ ಬಳಿಕ ದರ – 89.43 ರೂ

  • ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ಪೆಟ್ರೋಲ್ ಬೆಲೆ ಇಳಿಸಿದ್ದು ಭಯದಿಂದ: ಪ್ರಿಯಾಂಕಾ ಗಾಂಧಿ

    ನವದೆಹಲಿ: ತೈಲ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

    ಇಷ್ಟುದಿನ ತೈಲ ಬೆಲೆ ಏರಿಕೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ನೇತೃತ್ವ ಕೇಂದ್ರ ಸರ್ಕಾರ ವಿಫಲವಾಗಿದೆ. ಇದರಿಂದ ಸಾಮಾನ್ಯರ ಜೀವನ ಸಂಕಷ್ಟಕ್ಕೆ ತಿರುಗಿದೆ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

     

    ಕೇಂದ್ರ ಸರ್ಕಾ ತೈಲ ಬೆಲೆ ಇಳಿಕೆ ಮಾಡಿದೆ. ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಇಳಿಕೆಯ ನಂತರ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ತೈಲ ಬೆಲೆ ಇಳಿಕೆ ಮಾಡಿದ್ದು, ಹೃಯದದಿಂದ ಅಲ್ಲ, ಬದಲಾಗಿ ಭಯದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಲೂಟಿಕೋರ ಸರ್ಕಾರಕ್ಕೆ ಚುನಾವಣೆಯಲ್ಲಿ ಉತ್ತರ ನೀಡಬೇಕಾಗಿದೆ ಎಂದು ಟ್ವೀಟ್ ಮಾಡಿ ಆಢಳಿತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

    ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ರೂ. ಹಾಗೂ 5 ರೂ. ಕ್ಕೆ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿರಂತರವಾಗಿತ್ತು. ಅಕ್ಟೋಬರ್ ಒಂದೇ ತಿಂಗಳಲ್ಲಿ ಸುಮಾರು 30ಕ್ಕೂ ಅಧಿಕ ಬಾರಿ ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಕೆಯಾಗಿತ್ತು. ಇದರಿಂದ ಜನ ಸಾಮಾನ್ಯರಿಗೆ ನೇರವಾಗಿ ಪರಿಣಾಮ ಬೀರುವುದಲ್ಲದೇ ಪೆಟ್ರೋಲ್, ಡೀಸೆಲ್ ಅವಲಂಬಿತ ಎಲ್ಲ ವಸ್ತುಗಳ ಬೆಲೆಯೂ ಅಧಿಕವಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ನಿರಂತರ ಏರಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಜನ ಸಾಮಾನ್ಯರ ಆಕ್ರೋಶ ಎದುರಿಸಲಾಗದ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದವು. ಈ ವಿಚಾರವನ್ನು ಗಣನೆಗೆ ತೆಗೆದುಕೊಂಡ ಮೋದಿ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಇಳಿಕೆ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

  • ಅಫ್ಘಾನಿಸ್ತಾನಕ್ಕೆ ಹೋಗಿ, ಪೆಟ್ರೋಲ್ ಬೆಲೆ ಕಡಿಮೆ ಇದೆ – ಬಿಜೆಪಿ ನಾಯಕ

    ಅಫ್ಘಾನಿಸ್ತಾನಕ್ಕೆ ಹೋಗಿ, ಪೆಟ್ರೋಲ್ ಬೆಲೆ ಕಡಿಮೆ ಇದೆ – ಬಿಜೆಪಿ ನಾಯಕ

    ಭೋಪಾಲ್: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಕುರಿತಂತೆ ಪ್ರಶ್ನಿಸಿದ ಪತ್ರಕರ್ತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಹೇಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಮಾಧ್ಯಮದವರು ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಕುರಿತಂತೆ ಬಿಜೆಪಿ ನಾಯಕ ರಾಮರತನ್ ಪಾಯಲ್‍ರವರಿಗೆ ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ತಾಲಿಬಾನ್‍ಗೆ ಹೋಗಿ.. ನಿಮ್ಮ ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಲೀಟರ್ ಗೆ 50 ರೂಪಾಯಿ ಆಗಿದೆ. ಅಲ್ಲಿ ಹೋಗಿ ಇಂಧನವನ್ನು ಮರು ತುಂಬಿಸಿ ಅಫ್ಘಾನಿಸ್ತಾನದಲ್ಲಿ ಇಂಧನವನ್ನು ಮರು ತುಂಬಲು ಯಾರು ಇಲ್ಲ. ಕನಿಷ್ಠ ಪಕ್ಷ ಭಾರತದಲ್ಲಿ ನಿಮಗೆ ಸುರಕ್ಷತೆ ಇದೆ. ಲಭ್ಯವಿರುವುದರಿಂದ ತಾಲಿಬಾನ್‍ಗೆ ಹೋಗುವಂತೆ ಹೇಳಿದ್ದಾರೆ. ಈಗಾಗಲೇ ಭಾರತ ಎರಡು ಕೊರೊನಾ ಅಲೆಯನ್ನು ಎದುರಿಸಿದ್ದು, ಇದೀಗ ಕೊರೊನಾ ಮೂರನೇ ಅಲೆಯ ಭೀತಿಯಲ್ಲಿದೆ ಅದು ನಿಮಗೆ ಕಾಣಿಸುತ್ತಿಲ್ಲವೇ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ಕಾಬೂಲ್ ವಿಮಾನ ನಿಲ್ದಾಣಕ್ಕೆ 5 ಸಾವಿರ ಅಮೆರಿಕ ಸೈನಿಕರ ನಿಯೋಜನೆ

    ಸದ್ಯ ಮಂತ್ರಿಗಳ ಹೇಳಿಕೆ ವಿಚಾರವಾಗಿ, ಕೋವಿಡ್ ಬಗ್ಗೆ ಇಷ್ಟೆಲ್ಲಾ ಕಾಳಜಿ ತೋರುತ್ತಿರುವ ಮಂತ್ರಿಗಳು ಮತ್ತು ಅವರ ಬೆಂಬಲಿಗರು ಮಾಸ್ಕ್ ಮಾತ್ರ ಯಾಕೆ ಧರಿಸುತ್ತಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕಿಡಿಕಾರಿದ್ದಾರೆ.  ಇದನ್ನೂ ಓದಿ:ಅಫ್ಘಾನ್‍ನಲ್ಲಿ ತಾಲಿಬಾನಿಗಳ ಅಟ್ಟಹಾಸ- ಭಾರತದಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೆ

  • ಅಡುಗೆ ಅನಿಲ, ಪೆಟ್ರೋಲ್ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್‍ನಿಂದ ಪ್ರತಿಭಟನೆ

    ಅಡುಗೆ ಅನಿಲ, ಪೆಟ್ರೋಲ್ ದರ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್‍ನಿಂದ ಪ್ರತಿಭಟನೆ

    ಧಾರವಾಡ: ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

    ನಗರದ ಅಂಬೇಡ್ಕರ್ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಕಾರ್ಯಕರ್ತೆಯರು, ತಕ್ಷಣ ಅಡುಗೆ ಅನಿಲ ಹಾಗೂ ಪೆಟ್ರೋಲ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

    ಪೆಟ್ರೋಲ್ ದರ ನೂರರ ಗಡಿ ದಾಟಿದೆ, ಅದೇ ರೀತಿ ಅಡುಗೆ ಅನಿಲ ದರ ಸಹ 800 ಗಡಿ ದಾಟಿದೆ. ಸರ್ಕಾರ ರಚನೆಯಾಗುವ ಮೊದಲು ಇದೇ ಬಿಜೆಪಿ ಸರ್ಕಾರಗಳು ಜನರಿಗೆ ಸುಳ್ಳು ಬರವಸೆ ನೀಡಿ, ಈಗ ಬೆಲೆ ಹೆಚ್ಚಳ ಮಾಡಿವೆ ಎಂದು ಕಾಂಗ್ರೆಸ್ ಮಹಿಳಾ ಮುಖಂಡೆ ಶಾಂತಮ್ಮ ಗುಜ್ಜಳ ಆರೋಪಿಸಿದರು.

  • ಕೊನೆಗೂ ಪೆಟ್ರೋಲ್ ನೂರರ ಗಡಿ ಕ್ರಾಸ್ ಮಾಡ್ತು – ಸೈಕಲ್ ಏರಿದ ಸನ್ನಿ ಲಿಯೋನ್

    ಕೊನೆಗೂ ಪೆಟ್ರೋಲ್ ನೂರರ ಗಡಿ ಕ್ರಾಸ್ ಮಾಡ್ತು – ಸೈಕಲ್ ಏರಿದ ಸನ್ನಿ ಲಿಯೋನ್

    ಮುಂಬೈ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪರೋಕ್ಷವಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು  ಮಾಡಿದ್ದಾರೆ.

    ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಧ್ವನಿ ಎತ್ತಿದ್ದಾರೆ. ಅಲ್ಲದೇ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಸದ್ಯ ಪೆಟ್ರೋಲ್ ಬೆಲೆ ಏರಿಕೆ ಜನ ಸಾಮಾನ್ಯರ ಜೀವನದ ಮೇಲೆ ಬರೆ ಎಳೆದಂತಾಗಿದೆ. ಇಷ್ಟೆಲ್ಲ ಇದ್ದರೂ ಸೆಲೆಬ್ರೆಟಿಗಳು ಮಾತ್ರ ಈ ಬಗ್ಗೆ ಬಾಯಿ ಬಿಡದೇ ಗಪ್‍ಚುಪ್ ಆಗಿದ್ದಾರೆ. ಆದರೆ ಈ ಮಧ್ಯೆ ಬಾಲಿವುಡ್ ನಟಿ ಸನ್ನಿಲಿಯೋನ್ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದನ್ನು ವಿರೋಧಿಸಿದ್ದಾರೆ.

    ಈ ಕುರಿತಂತೆ ಸನ್ನಿಲಿಯೋನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ಸೈಕಲ್ ಜೊತೆ ನಿಂತು ಪೋಸ್ ನೀಡಿದ್ದಾರೆ. ಅಲ್ಲದೇ, ಕೊನೆಗೂ 100ರ ಗಡಿ ದಾಟಿಯೇ ಬಿಟ್ಟಿತು. ನಿಮ್ಮ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಿ ಎಂದು ಕ್ಯಾಪ್ಷನ್‍ನಲ್ಲಿ ಹಾಕಿದ್ದು, ಹೊಸ ಗ್ಲಾಮ್‍ನೊಂದಿಗೆ ಸೈಕಲ್ ಎಂದು ಹ್ಯಾಶ್‍ನಲ್ಲಿ ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಕನ್ನಡದ ಕಾಟನ್ ಪೇಟೆ ಸಿನಿಮಾದ ಹಾಡೋದರಲ್ಲಿ ನೃತ್ಯ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಈ ಮುನ್ನ ಲವ್ ಯೂ ಅಲಿಯಾ ಸಿನಿಮಾದ ಕಾಮಾಕ್ಷಿ ಕಾಮಾಕ್ಷಿ.. ಹಾಗೂ ಡಿಕೆ ಸಿನಿಮಾದ ಸೆಸಮ್ಮ.. ಎಂಬ ಐಟಂ ಸಾಂಗ್‍ಗೆ ಹೆಜ್ಜೆಹಾಕಿದ್ದರು. ಇದನ್ನೂ ಓದಿ: ನನ್ನ ಮದುವೆಗೆ ಯಾರು ಬರಲ್ಲ ಅಂತೆ: ರಮ್ಯಾ

  • ಪ್ರತಿ ಬಾರಿ ನಿಲುವು ಬದಲಿಸೋ ಪ್ರತಾಪ್ ಸಿಂಹ ಅಪ್ರಬುದ್ಧ ರಾಜಕಾರಣಿ: ಸಿದ್ದರಾಮಯ್ಯ

    ಪ್ರತಿ ಬಾರಿ ನಿಲುವು ಬದಲಿಸೋ ಪ್ರತಾಪ್ ಸಿಂಹ ಅಪ್ರಬುದ್ಧ ರಾಜಕಾರಣಿ: ಸಿದ್ದರಾಮಯ್ಯ

    ಬೆಂಗಳೂರು: ಸಂಸದ ಪ್ರತಾಪ್ ಸಿಂಹಗೆ ಯಾವುದೇ ನಿಲುವಿನಲ್ಲಿ ಬದ್ಧತೆ ಇಲ್ಲ, ಪ್ರತಿ ಬಾರಿಯೂ ನಿಲುವು ಬದಲಿಸೋ ಅಪ್ರಬುದ್ಧ ರಾಜಕಾರಣಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಪ್ರತಾಪ ಸಿಂಹ ನನ್ನನ್ನು ಸಿದ್ದರಾಮಯ್ಯ ಗಾರು ಎಂದು ಸಂಬೋಧಿಸಿದ್ದಾರೆ. ಪ್ರತಾಪ್ ಸಿಂಹ ತಮಗೂ ತೆಲಗು ಬರುತ್ತೆ ಅಂತಾ ತೋರಿಸಲು ಯತ್ನಿಸಿದ್ದಾರೆ. ಇದು ವ್ಯಂಗ್ಯ ಇರಬಹುದಾ ಅಂತ ನನಗೆ ಗೊತ್ತಿಲ್ಲ. ಗಾರು ಎಂಬುದನ್ನ ಸೂಕ್ತ ರೀತಿಯಲ್ಲಿ ಸ್ವೀಕರಿಸುತ್ತೇನೆ. ಆದರೆ ಪಾಪಾ ಬಹುವಚನದಲ್ಲಿ ಮಾತಾನಾಡಿದ್ದಾರೆ ಎಂದರು.

    ಚಾಮರಾಜನಗರ ಪ್ರಕರಣದಲ್ಲಿ ರೋಹಿಣಿ ಸಿಂಧೂರಿ ಪರ ಮಾತನಾಡಿದ್ದರು. ಈ ಹಿಂದೆ ರೋಹಿಣಿ ಸಿಂಧೂರಿಗೆ ಬೆಂಬಲಿಸಿದ್ದು ಯಾರು? ಈಗ ಸ್ವಾರ್ಥಕ್ಕಾಗಿ ವಿರೋಧಿಸುತ್ತಿದ್ದಾರೆ. ಭೂ ಮಾಫಿಯಾದಿಂದ ವರ್ಗಾವಣೆಯಾಗಿದೆ ಮತ್ತು ಶಾಸಕ ಸಾ.ರಾ.ಮಹೇಶ್ ಹೆಸರನ್ನ ರೋಹಿಣಿ ಸಿಂಧೂರಿ ಹೇಳಿದ್ದಾರೆ. ರಾಜಕಾಲುವೆ ಮೇಲೆ ಕಟ್ಟಡ ಕಟ್ಟಿದ್ರೆ ಈ ಬಗ್ಗೆ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಜಗಳ ನಡೆಯದೇ ಇರಲು ಅಂದು ಸಿಂಧೂರಿಯನ್ನು ಸಮರ್ಥಿಸಿಕೊಂಡಿದ್ದೆ – ಪ್ರತಾಪ್ ಸಿಂಹ

    ಸರ್ಕಾರ ಯೂನಿಟ್ ಗೆ 30% ರಷ್ಟು ಹೆಚ್ಚಳ ಮಾಡಿದೆ. ಕೊರೊನಾ ಸಂಕಷ್ಟದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಸರಿಯಲ್ಲ. ಇತ್ತ ಪೆಟ್ರೋಲ್, ಗ್ಯಾಸ್ ಬೆಲೆ ಸಹ ಏರಿಕೆಯಾಗಿದೆ. ಅಚ್ಚೇದಿನ ಆಯೇಗಾ ಅಂತಾರೆ. ಇದೆನಾ ಅಚ್ಚೇದಿನ್ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿಯೇ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೂ, ಅದಾನಿ ಕಂಪನಿಯಿಂದ ಏಕೆ ಖರೀದಿಸಬೇಕು ಎಂದು ಪ್ರಶ್ನೆ ಮಾಡಿದರು.  ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

    ಐದು ದಿನ ಪ್ರತಿಭಟನೆ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಮಾಡುವಂತೆ ಎಐಸಿಸಿ ಸೂಚಿಸಿದೆ. ನಾಳೆಯಿಂದ ಐದು ದಿನಗಳ ಕಾಲ ಪೆಟ್ರೋಲ್ ಬಂಕ್ ಗಳ ಮುಂದೆ ಧರಣಿ ಮಾಡುತ್ತೇನೆ. ಇಡೀ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಮಾಹಿತಿ ನೀಡಿದರು.

  • ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ತಿರುವನಂತಪುರಂ: ಕೇರಳ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ರೂ. ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

    ಈ ಕುರಿತು ಮಾಹಿತಿ ನೀಡಿದ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 1 ರೂ. ಕಡಿತಗೊಳಿಸುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ. ಅಧಿಕ ಹೊರೆ ಆಗಲಿದೆ. ರಾಜ್ಯದ ಆದಾಯದಲ್ಲಿ ಇಂಧನ ಮಾರಾಟದಿಂದ ಬರುವ ತೆರಿಗೆ ಮೂರನೇ ಸ್ಥಾನದಲ್ಲಿದೆ. ಜೂನ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

    ಬುಧವಾರ ಕೇರಳ ರಾಜಧಾನಿ ತಿರುವನಂತಪುರಂ ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 82.61 ರೂ. ಇದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 75.10 ರೂ. ಇದೆ. ತೈಲ ಬೆಲೆ ಹೆಚ್ಚಳ ದಿಂದ ರಾಜ್ಯ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಹಲವರು ಬೆಲೆ ಕಡಿತಗೊಳಿಸುವಂತೆ ಸಲಹೆ ನೀಡಿದ್ದರು. ಅದ್ದರಿಂದ ತಕ್ಷಣದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ 2014ರ ರಿಂದ ಇದುವರೆಗೂ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, 2016 ರಲ್ಲಿ ಎರಡು ಬಾರಿ ಮಾತ್ರ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್ ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್ ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್ ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್ ಗೆ)

  • ಇನ್ಮುಂದೆ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ- ಪ್ರತಿದಿನದ ರೇಟ್ ಚೆಕ್ ಮಾಡೋದು ಹೇಗೆ?

    ಇನ್ಮುಂದೆ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ- ಪ್ರತಿದಿನದ ರೇಟ್ ಚೆಕ್ ಮಾಡೋದು ಹೇಗೆ?

    ನವದೆಹಲಿ: ಇನ್ಮುಂದೆ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ರೇಟ್ ಬದಲಾಗಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತು ಡಾಲರ್-ರೂಪಾಯಿ ವಿನಿಮಯ ದರ ಆಧರಿಸಿ ಬದಲಾವಣೆ ಮಾಡಲಾಗುತ್ತದೆ. ಪ್ರತಿ ದಿನವೂ ಬೆಳಗ್ಗೆ 6 ಗಂಟೆಯಿಂದ ಹೊಸ ದರ ಅನ್ವಯವಾಗಲಿದೆ.

    ಈವರೆಗೆ 15 ದಿನಕ್ಕೊಮ್ಮೆ ಪೆಟ್ರೋಲ್ ಕಂಪನಿಗಳು ಬೆಲೆ ಏರಿಳಿತ ಮಾಡ್ತಿದ್ದವು ಮತ್ತು ಹೊಸ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿತ್ತು. ಗುರುವಾರದಂದು ಪೆಟ್ರೋಲ್ ದರವನ್ನು ಲೀಟರ್‍ಗೆ 1 ರೂಪಾಯಿ 12 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 1 ರೂಪಾಯಿ 24 ಪೈಸೆಯಷ್ಟು ಕಡಿತಗೊಳಿಸಲಾಗಿದೆ.

    ಹಾಗಾದ್ರೆ ಪ್ರತಿದಿನ ಪೆಟ್ರೋಲ್‍ಗೆ ಇಷ್ಟು, ಡೀಸೆಲ್‍ಗೆ ಇಷ್ಟು ಬೆಲೆ ಅಂತಾ ತಿಳಿದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಪ್ರತಿ ದಿನ ಸಂಜೆ 8 ಗಂಟೆಗೆ ಬಂಕ್ ಮಾಲೀಕರಿಗೆ ಮಾರನೇ ದಿನ ವಿಧಿಸಬೇಕಾಗಿರುವ ದರದ ಪಟ್ಟಿ ಲಭ್ಯವಾಗುತ್ತೆ. ಅದನ್ನು ಮಾಲೀಕರು ತಮ್ಮ ಬಂಕ್‍ನಲ್ಲಿ ಪ್ರದರ್ಶಿಸುವುದು ಕಡ್ಡಾಯ. ಗಮನಿಸಬೇಕಾದ ಅಂಶವೆಂದರೆ ಒಂದೇ ನಗರದಲ್ಲಿ ಬೇರೆ-ಬೇರೆ ಬಂಕ್‍ಗಳಲ್ಲಿ ದರ ವ್ಯತ್ಯಾಸವಾಗಿರುತ್ತೆ. ಉದಾಹರಣೆಗೆ ಜಯನಗರದಲ್ಲಿರುವ ರೇಟ್ ಬಸವನಗುಡಿಯಲ್ಲಿ ಇಲ್ಲದೇ ಇರಬಹುದು. ಅಂದರೆ ಒಂದೇ ನಗರದಲ್ಲಿ 10-15 ಪೈಸೆ ಹೆಚ್ಚು ಕಡಿಮೆ ಇರಲಿದೆ.

    ಹಾಗಾದ್ರೆ ಗ್ರಾಹಕರು ರೇಟ್ ಬಗ್ಗೆ ತಿಳಿದುಕೊಳ್ಳುವುದು ಹೇಗೆ? ಅದಕ್ಕೆ ಇಲ್ಲಿದೆ ದಾರಿ:

    – ಒಂದು ವೇಳೆ ನೀವು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕರಾದ್ರೆ RSP< SPACE >DEALER CODE  ಟೈಪ್ ಮಾಡಿ 92249 92249 ಸಂಖ್ಯೆಗೆ SMS ಮಾಡಿ. ಅಥವಾ  “Fuel@IOC – IndianOil” ಮೊಬೈಲ್ ಅಪ್ಲಿಕೇಷನ್ ಕೂಡಾ ಲಭ್ಯವಿದೆ. ಅಥವಾ ನೇರವಾಗಿ ಇಂಡಿಯನ್ ಆಯಿಲ್  ವೆಬ್‍ಸೈಟ್‍ಗೆ ಹೋಗಿ ಆಯಾ ಪ್ರದೇಶದಲ್ಲಿ ದರ ಎಷ್ಟಿದೆ ಅಂತ ಚೆಕ್ ಮಾಡಬಹುದು.

    – ಒಂದು ವೇಳೆ ಹಿಂದೂಸ್ತಾನ್ ಪೆಟ್ರೋಲಿಯಂ ಗ್ರಾಹಕರಾದ್ರೆ HP PRICE DEALER CODE ಟೈಪ್ ಮಾಡಿ 92222 01122 ಸಂಖ್ಯೆಗೆ SMS ಮಾಡಿ. ಅಥವಾ MY HPCL ಮೊಬೈಲ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಳ್ಳಿ.

    – ಭಾರತ್ ಪೆಟ್ರೋಲಿಯಂ ಗ್ರಾಹಕರಾದ್ರೆ RSP DEALER CODE ಟೈಪ್ ಮಾಡಿ 92231 12222 ಸಂಖ್ಯೆಗೆ SMS ಮಾಡಿ. Smart Drive ಮೊಬೈಲ್ ಅಪ್ಲಿಕೇಷನ್‍ನಲ್ಲೂ ಮಾಹಿತಿ ಲಭ್ಯ. 1800 22 4344 ಟೋಲ್ ಫ್ರೀ ನಂಬರ್‍ಗೆ ಕರೆಮಾಡಬಹುದು.

    ಪ್ರತಿ ಬಂಕ್‍ನಲ್ಲೂ ಡೀಲರ್ ಕೋಡ್ ಹಾಕಿರ್ತಾರೆ.

    ಇದನ್ನೂ ಓದಿ: ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್