Tag: petrol bunk

  • ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ನೋ ಹೆಲ್ಮೆಟ್, ನೋ ಪೆಟ್ರೋಲ್- ಸಿಲಿಕಾನ್ ಸಿಟಿಯಲ್ಲಿ ಹೊಸ ರೂಲ್ಸ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೋ ಹೆಲ್ಮೆಟ್, ನೋ ಪೆಟ್ರೋಲ್ ಎಂಬ ಹೊಸ ರೂಲ್ಸ್ ಜಾರಿಗೆ ತರಲು ಸಿದ್ಧತೆ ನಡೆದಿದೆ.

    ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಕಮಿಷನರ್, ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಮಾತುಕತೆ ನಡೆಸಿದ್ದಾರೆ. ಶನಿವಾರ ಮತ್ತೊಮ್ಮೆ ಈ ವಿಚಾರವಾಗಿ ಮಾತುಕತೆ ನಡೆಸಿ ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ಸೋಮವಾರದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ನಿಯಮ ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಜಾರಿಯಾಗಿದೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಎಂದರೆ ಹೆಲ್ಮೆಟ್ ಇರಲೇಬೇಕು. ಒಂದು ವೇಳೆ ನಿಮ್ಮ ಬಳಿ ಹೆಲ್ಮೆಟ್ ಇಲ್ಲ ಎಂದರೆ ಬಂಕ್‍ನವರು ನಿಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕುವುದಿಲ್ಲ. ಬೆಂಗಳೂರಲ್ಲಿ ಬೈಕ್ ಅಪಘಾತದಿಂದ ಹೆಚ್ಚುತ್ತಿರುವ ಸಾವು-ನೋವು ತಡೆಗೆ ಈ ಹೊಸ ನಿಯಮವನ್ನು ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ಕಳೆದ ವರ್ಷ ಬೈಕ್ ಅಪಘಾತಗಳಲ್ಲಿ ಸುಮಾರು 150 ಮಂದಿ ದುರ್ಮರಣಕ್ಕೀಡಾಗಿದ್ದರು. ದಂಡ ವಿಧಿಸುತ್ತಿದರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿದ್ದರಿಂದ, ಈ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.

  • ಪೆಟ್ರೋಲ್ ಬಂಕ್‍ನಲ್ಲಿ ರಾತ್ರಿ ನಿದ್ದೆ ಮಾಡುವ ಮುನ್ನ ಎಚ್ಚರ!

    ಪೆಟ್ರೋಲ್ ಬಂಕ್‍ನಲ್ಲಿ ರಾತ್ರಿ ನಿದ್ದೆ ಮಾಡುವ ಮುನ್ನ ಎಚ್ಚರ!

    ಬೆಂಗಳೂರು: ರಾತ್ರಿ ಹೊತ್ತು ಪೆಟ್ರೋಲ್ ಬಂಕ್‍ನಲ್ಲಿ ನಿದ್ದೆ ಮಾಡುವ ಸಿಬ್ಬಂದಿ ಮತ್ತು ಮಾಲೀಕರು ಎಚ್ಚರವಾಗಿರಿ. ಯಾಕೆಂದರೆ ಕದ್ದು ಡೀಸೆಲ್ ಹಾಕಿಕೊಂಡು ಹೋಗುವ ಕಾರ್ ಚಾಲಕರಿದ್ದಾರೆ.

    ಬೆಂಗಳೂರಿನ ಬಾಗಲಗುಂಟೆಯಲ್ಲಿ ಮಂಜುನಾಥ್ ಅವರಿಗೆ ಸೇರಿದ ತ್ರಿವೇಣಿ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ಇಂದು ನಸುಕಿನ ಜಾವ ಸುಮಾರು 3.16ಕ್ಕೆ ಕೆಎ 01 ಎಬಿ 2339 ನೋಂದಣಿಯ ಇಂಡಿಕಾ ಕಾರು ತ್ರಿವೇಣಿ ಪೆಟ್ರೋಲ್ ಬಂಕ್ ಬಳಿ ಬಂದಿದೆ.

    ಈ ವೇಳೆ ಪೆಟ್ರೋಲ್ ಬಂಕ್‍ನಲ್ಲಿ ಸಿಬ್ಬಂದಿ ನಿದ್ದೆ ಮಾಡುತ್ತಿದ್ದರು. ಇದೇ ಸಮಯ ನೋಡಿಕೊಂಡು ಚಾಲಕ ತನ್ನ ಕಾರಿಗೆ ಡೀಸೆಲ್ ತುಂಬಿಸಿಕೊಂಡಿದ್ದಾನೆ. ಕಾರಿನ ಚಾಲಕನನ್ನು ತುಮಕೂರು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಕಾರಿಗೆ ಡೀಸೆಲ್ ತುಂಬಿಸಿಕೊಂಡ ಬಳಿಕ ಚಾಲಕ ರಮೇಶ್ ತರಾತುರಿಯಲ್ಲಿ ಕಾರ್ ಸ್ಟಾರ್ಟ್ ಮಾಡಿದ್ದಾನೆ.

    ಅಷ್ಟೊತ್ತಿಗೆ ನಿದ್ದೆಯಿಂದ ಎದ್ದ ಬಂಕ್ ಸಿಬ್ಬಂದಿ ಓಡಿ ಬಂದು ಬಂಕ್‍ನಿಂದಾಚೆ ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದಾನೆ. ಆದರೂ ರಮೇಶ್ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಆದರೆ ಬಂಕ್ ಸಿಬ್ಬಂದಿ ಕಾರಿನ ಬಾನೆಟ್ ಮೇಲೆ ಹತ್ತಿ ನಿಂತಿಕೊಂಡಿದ್ದಾನೆ. ಕೊನೆಗೆ ಸಿಬ್ಬಂದಿ ಕಾರ್ ಚಾಲಕ ರಮೇಶನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

    ಈ ಕುರಿತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಕಸ್ಮಿಕ ಬೆಂಕಿಯಿಂದ ಪೆಟ್ರೋಲ್ ಬಂಕ್ ಸ್ಫೋಟ

    ಆಕಸ್ಮಿಕ ಬೆಂಕಿಯಿಂದ ಪೆಟ್ರೋಲ್ ಬಂಕ್ ಸ್ಫೋಟ

    ಚಾಮರಾಜನಗರ: ಆಕಸ್ಮಿಕ ಬೆಂಕಿ ತಗುಲಿ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿರುವ ಘಟನೆ ಗಡಿ ಜಿಲ್ಲೆಯಲ್ಲಿ ನಡೆದಿದೆ.

    ಭುವನೇಶ್ವರಿ ವೃತ್ತದಲ್ಲಿರುವ ಹೆಚ್‍ಪಿ ಪೆಟ್ರೋಲ್ ಬಂಕ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಡೀ ಪೆಟ್ರೋಲ್ ಬಂಕ್ ಸ್ಫೋಟವಾಗಿ ಸುಟ್ಟು ಕರಕಲಾಗಿದೆ. ಮಧ್ಯಾಹ್ನ ಸುಮಾರು 1.30ಕ್ಕೆ ವೇಳೆ ಪೆಟ್ರೋಲ್ ಹಾಕುವ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.

    ಬೆಂಕಿ ಕಾಣಿಸಿಕೊಂಡ ತಕ್ಷಣ ಬಂಕ್‍ನ ಸಿಬ್ಬಂದಿ ಹಾಗೂ ಗ್ರಾಹಕರು ಪೆಟ್ರೋಲ್ ಬಂಕ್‍ನಿಂದ ಆಚೆ ಓಡಿ ಬಂದಿದ್ದಾರೆ. ನಂತರ ಪೆಟ್ರೋಲ್ ಬಂಕ್ ಬ್ಲಾಸ್ಟ್ ಆಗಿದೆ. ಈ ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ವೇಳೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದ ಪೊಲೀಸ್ ಪೇದೆ ವಸಂತ್ ಕುಮಾರ್ ಮತ್ತು ಪತ್ನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೇ ಎರಡು ಬೈಕ್‍ಗಳು ಬೆಂಕಿಯ ಕಿನ್ನಾಲೆಗೆ ಸಿಲುಕಿ ಸುಟ್ಟು ಕರಕಲಾಗಿವೆ. ಸದ್ಯಕ್ಕೆ ಬೆಂಕಿ ಹೇಗೆ ಕಾಣಿಸಿಕೊಂಡಿದೆ ಎಂದು ಕಾರಣ ತಿಳಿದು ಬಂದಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತಮಿಳು ಚಿತ್ರ ಪ್ರೇರಣೆಯಿಂದ ದರೋಡೆಗಿಳಿದಿದ್ದ ಗ್ಯಾಂಗ್ ಅರೆಸ್ಟ್

    ತಮಿಳು ಚಿತ್ರ ಪ್ರೇರಣೆಯಿಂದ ದರೋಡೆಗಿಳಿದಿದ್ದ ಗ್ಯಾಂಗ್ ಅರೆಸ್ಟ್

    ರಾಮನಗರ: ಮಧ್ಯರಾತ್ರಿ ವೇಳೆ ಏಕಾಏಕಿ ಪೆಟ್ರೋಲ್ ಬಂಕ್ ಗಳಿಗೆ ನುಗ್ಗಿ, ಮಾರಕಾಸ್ತಗಳಿಂದ ಬೆದರಿಸಿ ದರೋಡೆ ನಡೆಸುತ್ತಿದ್ದ ಎಂಟು ಮಂದಿ ದರೋಡೆಕೋರರನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಕರೆಹಳ್ಳಿ ಗ್ರಾಮದ ನಿವಾಸಿ ಯೋಗಾನಂದ, ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿ ಅಭಿಷೇಕ್, ತಲಘಟ್ಟಪುರ ನಿವಾಸಿ ರಮೇಶ್, ಬಾಪೂಜಿನಗರದ ನಿವಾಸಿಗಳಾದ ಚೇತನ, ಸುನೀಲ್ ಕುಮಾರ್, ತೇಜಸ್, ದೊಡ್ಡಬಸ್ತಿ ನಿವಾಸಿ ಉದಯ್, ಆರುಂಧತಿನಗರದ ನಿವಾಸಿ ಸಂಜಯ್ ಕುಮಾರ್ ಬಂಧಿತ ಆರೋಪಿಗಳು.

    ಬಂಧಿತರು ಬರೀ ಪೆಟ್ರೋಲ್ ಬಂಕ್ ಗಳನ್ನೇ ಟಾರ್ಗೆಟ್ ಮಾಡಿ ದರೋಡೆ ನಡೆಸುತ್ತಿದ್ದರು. ಕಾರ್ ಗಳನ್ನ ಕಳ್ಳತನ ಮಾಡಿ ನಂಬರ್ ಪ್ಲೇಟ್ ಬದಲಿಸಿ ಮಂಕಿ ಕ್ಯಾಪ್ ಧರಿಸಿ ದರೋಡೆ ಮಾಡುತ್ತಿದ್ದರು. ಇದುವರೆಗೂ ರಾಮನಗರ ಜಿಲ್ಲೆಯಲ್ಲದೇ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 12 ಕಡೆಗಳಲ್ಲಿ ದರೋಡೆ ನಡೆಸಿದ್ದರು. ಬಂಧಿತರಿಂದ 3 ಕಾರು, 1 ಬೈಕ್, ಲಾಂಗ್, ಮಚ್ಚು, ಡ್ರಾಗರ್, ಪೆಪ್ಪರ್ ಸ್ಪ್ರೇ, ಮಂಕಿ ಕ್ಯಾಂಪ್, ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಸಿನಿಮಾ ಪ್ರೇರಣೆ:
    ಅಂದಹಾಗೆ ಈ ಖತರ್ನಾಕ್ ಗ್ಯಾಂಗ್‍ ನ ಲೀಡರ್ ಯೋಗಾನಂದ್, ಕಳೆದ 5 ತಿಂಗಳ ಹಿಂದೆ ತಮಿಳಿನ ಅರ್ಜುನ್ ಸರ್ಜಾ ಹಾಗೂ ವಿಶಾಲ್ ನಟನೆಯ ಇರುಂಬು ತಿರೈ ಸಿನಿಮಾವನ್ನ ವೀಕ್ಷಣೆ ಮಾಡಿದ್ದನು. ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ಮೊಬೈಲ್ ಬಳಕೆ ಮಾಡದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಪರಿಯನ್ನ ಕಂಡು ತಾನೂ ಕೂಡಾ ಮೊಬೈಲ್ ಬಳಕೆ ಮಾಡೋದನ್ನ ಬಿಟ್ಟಿದ್ದನು.

    ದರೋಡೆಗೆ ಕದ್ದ ಕಾರಿನ ನಂಬರ್ ಪ್ಲೇಟ್, ನಂಬರ್ ಗಳನ್ನ ಬದಲಿಸಿ ದರೋಡೆಗೆ ಇಳಿಯುತ್ತಿದ್ದರು. ಹಿಂದೊಮ್ಮೆ ಮಾರುತಿ ಓಮ್ನಿ ಕಾರನ್ನು ಕದ್ದು ದರೋಡೆ ಮಾಡಿ ಬಳಿಕ ಕಾರನ್ನ ಸುಟ್ಟು ಹಾಕಿದ್ದಾರೆ. ಡಿಸೆಂಬರ್ 3ರಂದು ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ ಗೆ ನುಗ್ಗಿದ್ದ ಈ ಗ್ಯಾಂಗ್ ಬಂಕ್ 82 ಸಾವಿರ ನಗದು ದೋಚಿ ಅಲ್ಲಿದ್ದವರಿಗೆ ಪೆಪ್ಪರ್ ಸ್ಪ್ರೇ ಮಾಡಿ, ಸಿಸಿಕ್ಯಾಮೆರಾದ ಡಿವಿಆರ್ ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ರಾಮನಗರ ಎಸ್‍ಪಿ ಬಿ. ರಮೇಶ್ ಹೇಳಿದ್ದಾರೆ.

    ಬಂಧಿತರ ವಿಚಾರಣೆ ವೇಳೆ ರಾಜ್ಯದ ವಿವಿಧೆಡೆ ನಡೆಸಿದ್ದ ಪೆಟ್ರೋಲ್ ಬಂಕ್ ಗಳ 12 ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ವೊಂದರ ದರೋಡೆಗೆ ಸ್ಕೆಚ್ ಕೂಡ ಹಾಕಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್ ಬಂಕ್ ಬಳಿಯೇ ಹೊತ್ತು ಉರಿದ ಕಾರು-ಸ್ವಲ್ಪದರಲ್ಲೇ ತಪ್ಪಿದ ಭಾರೀ ದುರಂತ

    ಪೆಟ್ರೋಲ್ ಬಂಕ್ ಬಳಿಯೇ ಹೊತ್ತು ಉರಿದ ಕಾರು-ಸ್ವಲ್ಪದರಲ್ಲೇ ತಪ್ಪಿದ ಭಾರೀ ದುರಂತ

    ದಾವಣಗೆರೆ: ಪೆಟ್ರೋಲ್ ಬಂಕ್ ಸಮೀಪವೇ ಮ್ಯಾಟಿಜ್ ಕಾರೊಂದು ಹೊತ್ತಿ ಉರಿದು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದೆ.

    ಇಂದು ಮಧ್ಯಾಹ್ನ ಬೆಂಗಳೂರು ಮೂಲದ ಮಹಮ್ಮದ್ ಸರ್ಮದ್ ಎಂಬವರಿಗೆ ಸೇರಿದ್ದ ಮ್ಯಾಟಿಜ್ ಕಾರು ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಭಾರತ್ ಪೆಟ್ರೋಲ್ ಬಂಕ್ ಬಳಿ ಹೊತ್ತಿ ಉರಿದಿದೆ.

    ಸರ್ಮದ್ ಕಾರಿನಲ್ಲಿ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಎಂಜಿನ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಕೂಡಲೇ ಎಚ್ಚೆತ್ತ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಬಳಿಕ ರೋಗಿಯನ್ನು ಬೇರೊಂದು ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.

    ಬೆಂಕಿ ಹೊತ್ತಿದ ಪರಿಣಾಮ ಮ್ಯಾಟಿಜ್ ಕಾರು ಹೊತ್ತಿ ಉರಿಯತೊಡಗಿದೆ. ಸರ್ಮದ್ ಹಾಗೂ ಸ್ಥಳೀಯರು ಬೆಂಕಿಯನ್ನು ನಂದಿಸುವಲ್ಲಿ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ ಹೊತ್ತಿ ಉರಿದ ಸಮೀಪವೇ ಪೆಟ್ರೋಲ್ ಬಂಕ್ ಇದ್ದ ಕಾರಣ ಕ್ಷಣಕಾಲ ಭಯದ ವಾತಾವರಣ ಉಂಟಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಾಂಗ್, ಮಚ್ಚು ತೋರಿಸಿ ಪೆಟ್ರೋಲ್ ಬಂಕ್‍ನಲ್ಲಿದ್ದ 2.50 ಲಕ್ಷ ರೂ. ದರೋಡೆ

    ಲಾಂಗ್, ಮಚ್ಚು ತೋರಿಸಿ ಪೆಟ್ರೋಲ್ ಬಂಕ್‍ನಲ್ಲಿದ್ದ 2.50 ಲಕ್ಷ ರೂ. ದರೋಡೆ

    – ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಭಯಂಕರ ದೃಶ್ಯ

    ಹಾಸನ: ಲಾಂಗು, ಮಚ್ಚುಗಳನ್ನು ಹಿಡಿದು ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಬೆದರಿಸಿ ¸2.50 ಲಕ್ಷ ರೂಪಾಯಿ ದೋಚಿ ಕಳ್ಳರು ಪರಾರಿಯಾಗಿದ್ದು, ಈಗ ದರೋಡೆಯ ದೃಶ್ಯ ಲಭ್ಯವಾಗಿದೆ.

    ನವೆಂಬರ್ 26ರಂದು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿರುವ ಪೆಟ್ರೋಲ್ ಬಂಕ್ ಮೇಲೆ ಮೂವರು ದುಷ್ಕರ್ಮಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಕೈಯಲ್ಲಿ ಲಾಂಗು-ಮಚ್ಚುಗಳನ್ನು ಹಿಡಿದು ಬೆದರಿಸಿದ್ದಲ್ಲದೇ, ಓರ್ವ ಸಿಬ್ಬಂದಿಗೆ ಇರಿದಿದ್ದರು. ಬಳಿಕ ಬಂಕಿನಲ್ಲಿದ್ದ 2.50 ಲಕ್ಷ ರೂಪಾಯಿಯನ್ನು ದೋಚಿದ್ದರು. ಪರಾರಿಯಾಗುವ ವೇಳೆ ಬಂಕಿನಲ್ಲಿದ್ದ ಸಿಸಿ ಟಿವಿಯ ಕ್ಯಾಮೆರಾ, ಡಿವಿಆರ್ ಹಾಗೂ ಹಾರ್ಡ್‍ಡಿಸ್ಕ್‍ಗಳನ್ನು ಕಿತ್ತು ಹೋಗಿದ್ದರು.

    ಘಟನೆ ಬಳಿಕ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದರು. ಈ ವೇಳೆ ಹಾಳಾಗಿದ್ದ ಸಿಸಿಟಿವಿಯನ್ನು ರಿಪೇರಿಗೆ ಕಳುಹಿಸಿಕೊಟ್ಟಿದ್ದರು. ರಿಪೇರಿ ಬಳಿಕ ಕಳ್ಳರು ತಡರಾತ್ರಿ 3ರ ಸುಮಾರಿಗೆ ದರೋಡೆ ಮಾಡಿದ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ.

    ಪೊಲೀಸರು ಕಳ್ಳರ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದಾರೆ. ಘಟನೆ ಸಂಬಂಧ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡಿದಾಗ ಹೊತ್ತಿಕೊಂಡಿತು ಬೆಂಕಿ- ವಿಡಿಯೋ ನೋಡಿ

    ಪೆಟ್ರೋಲ್ ತುಂಬಿಸಿ ಬೈಕ್ ಸ್ಟಾರ್ಟ್ ಮಾಡಿದಾಗ ಹೊತ್ತಿಕೊಂಡಿತು ಬೆಂಕಿ- ವಿಡಿಯೋ ನೋಡಿ

    ಚೆನ್ನೈ: ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿ ಸ್ಟಾರ್ಟ್ ಮಾಡಿದಾಗ ಬೈಕಿಗೆ ಬೆಂಕಿ ತಗಲಿದ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.

    ಸವಾರರೊಬ್ಬರು ಪೆಟ್ರೋಲ್ ಹಾಕಿಸಲೂ ಬಂಕ್‍ಗೆ ಬಂದಿದ್ದಾರೆ. ಈ ವೇಳೆ ತನ್ನ ಬೈಕ್ ಮೇಲೆ ಕುಳಿತು ಪೆಟ್ರೋಲ್ ತುಂಬಿಸಿದ್ದ ಬಳಿಕ ಹಣವನ್ನು ಪಾವತಿಸಿ ಬೈಕ್ ಅನ್ನು ಚಾಲನೆ ಮಾಡಿದ್ದಾರೆ. ಚಾಲನೆಯಾದ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಅಲ್ಲೆ ಇದ್ದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಸವಾರನನ್ನು ರಕ್ಷಿಸಿದ್ದಾರೆ. ಬೆಂಕಿ ಹತ್ತಿಕೊಳ್ಳುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬೆಂಕಿ ಯಾಕೆ ಹೊತ್ತಿಕೊಳ್ಳುತ್ತೆ?
    ಪೆಟ್ರೋಲ್ ಬಂಕ್ ನಲ್ಲಿ ಬೈಕಿಗೆ ಬೆಂಕಿ ಹೊತ್ತಿಕೊಳ್ಳುವುದು ಹೊಸದೆನಲ್ಲ. ಈ ಹಿಂದೆಯೂ ನಡೆದಿದೆ. ಸಾಧಾರಣವಾಗಿ ದೂರ ಪ್ರಯಾಣ ಮಾಡಿ ಸವಾರರು ಪೆಟ್ರೋಲ್ ತುಂಬಿಸಲು ಬಂಕ್ ಗೆ ಬರುತ್ತಾರೆ. ಈ ವೇಳೆ ಟ್ಯಾಂಕ್ ಫುಲ್ ಮಾಡಲು ಹೇಳುತ್ತಾರೆ. ಟ್ಯಾಂಕ್ ಫುಲ್ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಭರ್ತಿಯಾಗಿ ಪೆಟ್ರೋಲ್ ಹರಿಯುತ್ತದೆ. ಟ್ಯಾಂಕ್ ನಿಂದ ಹರಿದ ಪೆಟ್ರೋಲ್ ಎಂಜಿನ್‍ಗೆ ಬರುತ್ತದೆ. ಬಹಳ ದೂರವನ್ನು ಕ್ರಮಿಸಿದ್ದರಿಂದ ಎಂಜಿನ್ ಮೊದಲೇ ಬಿಸಿಯಾಗಿರುತ್ತದೆ. ಈ ಸಂದರ್ಭದಲ್ಲಿ ಎಂಜಿನ್ ಮೇಲೆ ಪೆಟ್ರೋಲ್ ಬಿದ್ದಾಗ ಗಾಡಿ ಚಾಲನೆಯಾದಾಗ ಬೆಂಕಿ ಹೊತ್ತಿಕೊಳ್ಳುತ್ತದೆ.

    ಕೆಲವೊಮ್ಮೆ ಮೊಬೈಲ್ ಬಳಸಿದರೂ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊಬೈಲ್ ಫೋನ್‍ನಿಂದ ಕಾಂತೀಯ ತರಂಗಗಳು ಸೃಷ್ಟಿಯಾಗುತ್ತವೆ. ಈ ತರಂಗಗಳು ಪೆಟ್ರೋಲ್ ಹೊತ್ತಿ ಉರಿಯಲು ಪ್ರಚೋದಿಸುತ್ತದೆ. ಹೀಗಾಗಿ ಬಂಕ್ ಬಳಿ ಮೊಬೈಲ್ ಬಳಕೆ, ಸಿಗರೇಟ್ ಸೇದುವುದನ್ನು ನಿಷೇಧಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=rPWgDQc3ydE

  • ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗಿ ನಗರದಲ್ಲಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಗುಡ್ಡಗಳು ಕುಸಿದು ಬೀಳುವ ಕಾರಣ ಶಿರಾಡಿ, ಸಂಪಾಜೆ ಘಾಟಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರ ಜೊತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೈಲವನ್ನು ತರಲು ಸಂಕಷ್ಟವಾಗಿದೆ.

    ಕಳೆದ 2-3 ದಿನಗಳಿಂದಲೂ ಬೆಂಗಳೂರಿನ ಖಾಸಗಿ ಬಂಕ್‍ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ನಗರದ ಖಾಸಗಿ ಬಂಕ್ ಗಳಾದ ಶೆಲ್, ಇಸ್ಸಾರ್ ಬಂಕ್ ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಬರೀ ಖಾಸಗಿ ಬಂಕ್‍ಗಳಿಗೆ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ಬಂಕ್‍ಗಳಿಗೆ ಬೇರೆ ಕಡೆಗಳಿಂದ ಪೂರೈಕೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಇಲ್ಲದ ಕಾರಣ ಮಾಲೀಕರು ಬಂಕ್ ಮುಚ್ಚಿದ್ದಾರೆ.

    ಇಂಡಿಯನ್, ಭಾರತ್ ಪೆಟ್ರೋಲ್ ಬಂಕ್ ಗಳಿಗೆ ಬೆಳಗಾವಿ, ಸಜ್ಜಾಪುರ ಭಾಗಗಳಿಂದ ಪೆಟ್ರೋಲ್ ಪೊರೈಕೆ ಆಗುತ್ತಿರುವುದರಿಂದ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.

    ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಮಂಗಳೂರಿನಿಂದ ಪೆಟ್ರೋಲ್ ತರಲು ಸಮಸ್ಯೆಯಾಗಿದೆ. ತೈಲ ಇಲ್ಲದ ಕಾರಣ ಬಂಕ್ ಗಳನ್ನು ಮುಚ್ಚಲಾಗಿದೆ ಎಂದು ಬಂಕ್ ಮಾಲೀಕರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಚಾರ್ಮಾಡಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಈಗ ಘನ ವಾಹನಗಳು ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ರಸ್ತೆಯಲ್ಲೂ ಈಗ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚರಿಸುತ್ತಿದ್ದು, ಆಗಾಗ ಜಾಮ್ ಆಗುತ್ತಿದೆ. ಭಾನುವಾರ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಚಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಕಾರ್ಯ ನಡೆದ ಪರಿಣಾಮ ರಾತ್ರಿ ಮತ್ತೆ ಈ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಧ್ಯರಾತ್ರಿ ಪೆಟ್ರೋಲ್ ಬಂಕ್ ದರೋಡೆಗೆ ಯತ್ನ – ಸರಿಯಾದ ಸಮಯಕ್ಕೆ ಬಂದ ಪೊಲೀಸರಿಂದ ಆರೋಪಿಗಳು ಆರೆಸ್ಟ್

    ಮಧ್ಯರಾತ್ರಿ ಪೆಟ್ರೋಲ್ ಬಂಕ್ ದರೋಡೆಗೆ ಯತ್ನ – ಸರಿಯಾದ ಸಮಯಕ್ಕೆ ಬಂದ ಪೊಲೀಸರಿಂದ ಆರೋಪಿಗಳು ಆರೆಸ್ಟ್

    ಬಾಗಲಕೋಟೆ: ಮಧ್ಯರಾತ್ರಿ ಪೆಟ್ರೋಲ್ ಬಂಕ್‍ಗೆ ನುಗ್ಗಿ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿ ದರೋಡೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಗ್ರಾಮದಲ್ಲಿ ನಡೆದಿದೆ.

    ಭಾನುವಾರ ರಾತ್ರಿ 12.30ರ ಸುಮಾರಿಗೆ ಪೆಟ್ರೋಲ್ ಪಂಪ್‍ಗೆ ನುಗ್ಗಿದ ಎಂಟು ಜನರ ಗ್ಯಾಂಗ್ ಬಂಕ್‍ನ ಕಾರ್ಮಿಕರು ಹಾಗೂ ಮ್ಯಾನೇಜರ್ ಮೇಲೆ ಮನಬಂದತೆ ಹಲ್ಲೆ ನಡೆಸಿದೆ. ರಾಯಲ್ ಎನ್ ಫೀಲ್ಡ್ ಬೈಕ್ ಹಾಗೂ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಎಂಟು ಜನ ಪುಡಾರಿಗಳು ಹಲ್ಲೆ ಮಾಡಿದ್ದು, ಬಂಕ್‍ಗೆ ಸೇರಿದ ಕಾರನ್ನು ಒಡೆದು ಹಣ ಕಳ್ಳತನ ಮಾಡಲು ಯತ್ನಿಸಿದ್ದಾರೆ. ತಕ್ಷಣ ಪೆಟ್ರೋಲ್ ಬಂಕ್ ಸಿಬ್ಬಂದಿ ಲೋಕಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸರಿಯಾದ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಬಂದ ಕಾರಣ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ವೇಳೆ ಪೊಲೀಸ್ ಬಂದಿದ್ದನ್ನ ಗಮನಿಸಿದ 6 ಮಂದಿ ಪರಾರಿಯಾಗಿದ್ದಾರೆ.

    ಪೆಟ್ರೋಲ್ ಬಂಕ್ ಮ್ಯಾನೇಜರ್ ಸಂಗಮೇಶ್ ಸಣ್ಣಕ್ಕಿ, ಕಾರ್ಮಿಕರಾದ ಮಲ್ಲಿಕಾರ್ಜುನ ಮೋಟಗಿ, ಶಿವು ಚಂದರಗಿ, ಶಿವಪ್ಪ ಎಂಬುವರ ಘಟನೆಯಲ್ಲಿ ಗಾಯಗೊಂಡಿದ್ದಾರೆ. ದರೋಡೆಗೆ ಯತ್ನಿಸಿದ್ದ ಶಿವಯ್ಯ ವಿರಕ್ತಮಠ, ವೀರೇಶ್ ಪಂಚಗಟ್ಟಿಮಠರನ್ನು ಲೋಕಾಪುರ ಪೊಲೀಸರು ಬಂಧಿಸಿದ್ದಾರೆ. ಉಳಿದಂತೆ ಆರೋಪಿಗಳಾದ ಮಲ್ಲಿಕಾರ್ಜುನ ವಿರಕ್ತಮಠ, ಅಯ್ಯಪ್ಪಗೌಡ ಪಾಟಿಲ್, ಪ್ರಶಾಂತ ಪಾಟಿಲ್, ಪ್ರಕಾಶ್ ಚಿತ್ತರಗಿ ಪರಾರಿಯಾಗಿದ್ದಾರೆ. ದರೋಡೆಗೆ ಯತ್ನಿಸಿದ ಆರೋಪಿಗಳು ಲೋಕಾಪುರ, ಬಂಟನೂರ, ಬುದ್ನಿ ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪೆಟ್ರೋಲ್ ಬಂಕ್ ದರೋಡೆಗೆ ಯತ್ನಿಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಹಲ್ಲೆ ನಡೆಸಿದ ಭಾರತ್ ಪೆಟ್ರೋಲ್ ಬಂಕ್ ಜಿಲ್ಲೆಯ ಎಎಂ ಪಾಟೀಲ್ ಎಂಬುವವರಿಗೆ ಸೇರಿದೆ. ಈ ಕುರಿತು ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

    ಪೆಟ್ರೋಲ್ ವಿತರಣಾ ಘಟಕಕ್ಕೆ ಡಿಕ್ಕಿ ಹೊಡೆದು, ಆಟೋಗೆ ಗುದ್ದಿದ ಕಾರ್-ವಿಡಿಯೋ ನೋಡಿ

    ರಾಜ್‍ಕೋಟ್: ವೇಗವಾಗಿ ಬಂದ ಕಾರೊಂದು ಬಂಕ್ ನ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿಕೊಂಡು ಆಟೋಗೂ ಗುದ್ದಿರುವ ಆಘಾತಕಾರಿ ಅಪಘಾತವೊಂದು ನಗರದಲ್ಲಿ ನಡೆದಿದೆ.

    ಇಡೀ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಪೆಟ್ರೋಲ್ ವಿತರಣಾ ಘಟಕಕ್ಕೆ ಗುದ್ದಿರುವುದರಿಂದ ಘಟಕ ಮುರಿದು ಬಿದ್ದಿದೆ. ನಂತರ ಆಟೋಕ್ಕೆ ಗುದ್ದಿ ಆಟೋ ಮಗಚಿ ಬಿದ್ದಿದೆ. ಈ ಅಪಘಾತದಲ್ಲಿ ಮೂರು ಜನರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

    ಕಾರ್ ವೇಗವಾಗಿ ಬಂದು ವಿತರಣಾ ಘಟಕಕ್ಕೆ ಡಿಕ್ಕಿಯಾಗಿದ್ದರಿಂದ ಪೆಟ್ರೋಲ್ ಚೆಲ್ಲಿತ್ತು. ಇದರಿಂದ ಗಾಬರಿಗೊಂಡ ಆಟೋ ಚಾಲಕ ಸ್ಥಳದಿಂದ ಓಡಿ ಹೋಗಿದ್ದಾರೆ. ಕಾರು ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

    ಮಂಗಳವಾರ ಬ್ರೇಕ್ ಫೈಲ್ಯೂರ್ ಮತ್ತು ಸ್ಟೇರಿಂಗ್ ಲಾಕ್ ಆದ ಕಾರಣ ನಿಯಂತ್ರಣ ತಪ್ಪಿದ ಕೆಎಸ್‍ಆರ್ ಟಿಸಿ ಬಸ್ಸೊಂದು ಪೆಟ್ರೋಲ್ ಬಂಕ್ ಒಳಗೆಯೇ ನುಗ್ಗಿತ್ತು. ಬೆಂಗಳೂರಿನ ಗೊರಗುಂಟೆ ಪಾಳ್ಯ ಎಚ್‍ಪಿ ಪೆಟ್ರೋಲ್ ಬಂಕ್ ಬಳಿ ಈ ಅಪಘಾತ ಸಂಭವಿಸಿತ್ತು.

    ಕೆಎಸ್‍ಆರ್ ಟಿಸಿ ಬಸ್ ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಬಸ್ ಗೊರಗುಂಟೆಪಾಳ್ಯ ಸಿಗ್ನಲ್ ದಾಟಿದ ನಂತರ ಬ್ರೇಕ್ ವೈಫಲ್ಯವಾಗಿದ್ದ ಕಾರಣ ಸ್ಟೇರಿಂಗ್ ಲಾಕ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಬಸ್ ನೇರವಾಗಿ ಎಚ್‍ಪಿ ಪೆಟ್ರೋಲ್ ಬಂಕ್ ಒಳಗೆ ನುಗ್ಗಿದೆ.

    ಬಸ್ಸಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಸದ್ಯ ಈ ಅವಘಡದಿಂದ ಯಾವುದೇ ರೀತಿಯ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಪೆಟ್ರೋಲ್ ಹಾಕುವ ಕ್ಯಾಬಿನ್ ಪೈಪ್ ಲೈನ್, ಕಾಂಪೌಂಡ್ ಮತ್ತು ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ.

    https://www.youtube.com/watch?v=n34rplpjNRs