Tag: petrol bunk

  • Bengaluru| ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಟ್ರಕ್

    Bengaluru| ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಟ್ರಕ್

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಟ್ರಕ್‌ವೊಂದು (Mini Truck) ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ಬೆಂಗಳೂರಿನ (Bengaluru) ಚಾಮರಾಜಪೇಟೆ (Chamrajpet) ಮುಖ್ಯರಸ್ತೆಯ ನಯಾರಾ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.

    ಚಾಮರಾಜಪೇಟೆ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಸನ್‌ಪ್ಯೂರ್ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ರಕ್ ನುಗ್ಗಿದ ಪರಿಣಾಮ ಪೆಟ್ರೋಲ್ ಬಂಕ್‌ನ (Petrol Bunk) ಶೌಚಾಲಯದ ಕಟ್ಟಡ ಜಖಂಗೊಂಡಿದೆ. ಅಲ್ಲದೇ ಡಿಕ್ಕಿಯ ರಭಸಕ್ಕೆ ಒಂದು ಬೈಕ್ ಕೂಡ ಲಾರಿಯಡಿಗೆ ಸಿಲುಕಿ ಸಂಪೂರ್ಣ ಜಖಂಗೊಂಡಿದೆ. ಇದನ್ನೂ ಓದಿ: ಬಿಗ್‌ಬಾಸ್‌ಗೆ ಬಿಗ್‌ ರಿಲೀಫ್‌ – ಸಮಸ್ಯೆ ಇತ್ಯರ್ಥಕ್ಕೆ 10 ದಿನ ಕಾಲಾವಕಾಶ

    ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಾಯಕ ಜುಬೀನ್ ಗರ್ಗ್ ಸಾವು ಕೇಸ್; ಸಹೋದರ ಸಂಬಂಧಿ ಡಿಎಸ್‌ಪಿ ಬಂಧನ

  • 1,500 ರೂ. ಪೆಟ್ರೋಲ್ ಹಾಕಿಸಿದ್ರೆ ಮಾತ್ರ ಪಿಂಕ್ ನೋಟ್ ಕೊಡಿ – ಪೆಟ್ರೋಲ್ ಬಂಕ್‌ಗಳಲ್ಲಿ ಬೋರ್ಡ್ ಅಳವಡಿಕೆ

    1,500 ರೂ. ಪೆಟ್ರೋಲ್ ಹಾಕಿಸಿದ್ರೆ ಮಾತ್ರ ಪಿಂಕ್ ನೋಟ್ ಕೊಡಿ – ಪೆಟ್ರೋಲ್ ಬಂಕ್‌ಗಳಲ್ಲಿ ಬೋರ್ಡ್ ಅಳವಡಿಕೆ

    ಬೆಂಗಳೂರು: 2,000 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ (RBI) ಹಿಂಪಡೆದ ನಂತರ ಪೆಟ್ರೋಲ್ ಬಂಕ್‌ಗಳಲ್ಲಿ (Petrol Bunk) ಪಿಂಕ್ ನೋಟಿನ ಹಾವಳಿ ಜಾಸ್ತಿಯಾಗಿದೆ. ಜನರು 200 ರೂ.ಗಳ ಪೆಟ್ರೋಲ್ ಹಾಕಿಸಿಕೊಂಡರೂ 2,000 ರೂ. ನೀಡುತ್ತಿದ್ದಾರೆ. ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

    2,000 ರೂ. ನೋಟ್ ಬ್ಯಾನ್ (Note Ban) ಬೆನ್ನಲ್ಲೇ ಜನರು ತಮ್ಮಲ್ಲಿರುವ 2,000 ರೂ. ನೋಟುಗಳನ್ನು ಬ್ಯಾಂಕ್, ಆಸ್ಪತ್ರೆ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ ಕೊಟ್ಟು ಬಚಾವ್ ಆಗುತ್ತಿದ್ದಾರೆ. ಆದರೆ ಇದರಿಂದ ಪೆಟ್ರೋಲ್ ಬಂಕ್ ಮಾಲೀಕರು ಕಂಗೆಟ್ಟಿದ್ದಾರೆ. ಜನರು 100-200 ರೂ. ಪೆಟ್ರೋಲ್ ಹಾಕಿಸಿದರೂ 2,000 ರೂ. ಪಿಂಕ್ ನೋಟನ್ನು ಕೊಡುತ್ತಿದ್ದಾರೆ. ಇದರಿಂದ ಬಂಕ್ ಮಾಲೀಕರಿಗೆ ಚೇಂಜ್  ಸಮಸ್ಯೆ ಆಗುತ್ತಿದೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ಇದರಿಂದ ಹೈರಾಣಾದ ಗೊರಗುಂಟೆಪಾಳ್ಯ (Goraguntepalya) ಪೆಟ್ರೋಲ್ ಬಂಕ್ ಮಾಲೀಕರು ಹೊಸದೊಂದು ಬೋರ್ಡ್ ಅನ್ನು ತಮ್ಮ ಪೆಟ್ರೋಲ್ ಬಂಕ್‌ನಲ್ಲಿ ಅಳವಡಿಸಿದ್ದಾರೆ. ಆ ಬೋರ್ಡ್‌ನಲ್ಲಿ  1,500 ರೂ.ಗಳ ಪೆಟ್ರೋಲ್ ಹಾಕಿಸಿದರೆ ಮಾತ್ರ 2,000 ರೂ. ನೋಟನ್ನು ನೀಡಿ ಸಹಕರಿಸಿ ಎಂದು ಬರೆಯುವ ಮೂಲಕ ಜನರಲ್ಲಿ ಚೇಂಜ್ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರದ ಬಳಿ ಅಂಕಿ ಅಂಶಗಳೇ ಇಲ್ಲ – ಶೀಘ್ರವೇ ಗ್ಯಾರಂಟಿ ಯೋಜನೆ ಜಾರಿ ಅನುಮಾನ

  • ಪೆಟ್ರೋಲ್‌ ಬಂಕ್‌ನಲ್ಲಿ ಅಗ್ನಿ ದುರಂತ – ತುಮಕೂರು ಯುವತಿ ಬಲಿ

    ಪೆಟ್ರೋಲ್‌ ಬಂಕ್‌ನಲ್ಲಿ ಅಗ್ನಿ ದುರಂತ – ತುಮಕೂರು ಯುವತಿ ಬಲಿ

    ತುಮಕೂರು: ಪೆಟ್ರೋಲ್‌ ಬಂಕ್‌ನಲ್ಲಿ (Petrol Bunk) ನಡೆದ ಅಗ್ನಿ ದುರಂತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಧುಗಿರಿಯ ಬಡವನಹಳ್ಳಿಯಲ್ಲಿ ನಡೆದಿದೆ.

    ಶಿರಾ ತಾಲ್ಲೂಕಿನ ಜವನಹಳ್ಳಿ ಗ್ರಾಮದ ನಿವಾಸಿ ಭವ್ಯಾಗೌಡ ಮೃತ ಯುವತಿ. ಸ್ಕೂಟರ್‌ ನಲ್ಲಿ ಪೆಟ್ರೋಲ್‌ (Petrol) ಹಾಕಿಸಲು ಬಂದಿದ್ದ ಯುವತಿ ಬೈಕ್‌ ಮೇಲೆ ಕುಳಿತೇ ಪೆಟ್ರೋಲ್‌ ಹಾಕಿಸುತ್ತಿದ್ದಳು. ಸ್ಕೂಟರ್‌ ಎಂಜಿನ್‌ ಬಿಸಿಯಾಗಿದ್ದರಿಂದ ತಕ್ಷಣವೇ ಹೊತ್ತಿಕೊಂಡ ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲೇ ಭವ್ಯಾಳ ದೇಹಕ್ಕೂ ಹಬ್ಬಿದೆ. ಇದನ್ನೂ ಓದಿ: ಆ ನಟಿ ತನ್ನದೇ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದಳು : ಪ್ರಿಯಕರ ಆರೋಪ

    ಕೊನೆಗೆ ಬೆಂಕಿಯನ್ನು ನಂದಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಭವ್ಯಾಗೌಡ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಇದನ್ನೂ ಓದಿ: ಮಹಿಳೆಯರಿಗೆ ಬಳಸಿದ ಕಾಂಡೋಮ್, ಲೈಂಗಿಕ ಸಂದೇಶದ ಲೆಟರ್ ಪೋಸ್ಟ್ – ಯಾರು ಕಳಿಸಿದ್ದಾರೆ ಅನ್ನೋದೆ ಸಸ್ಪೆನ್ಸ್ 

  • ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು

    ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು

    ಚೆನ್ನೈ: ನೀರು ಮಿಶ್ರಿತ ಪೆಟ್ರೋಲ್‌ ನೀಡಿದ್ದಕ್ಕೆ ಪೆಟ್ರೋಲ್‌ ಬಂಕ್‌ ವಿರುದ್ಧ ತಮಿಳುನಾಡಿನಲ್ಲಿ (Tamil Nadu) ಕೇಸ್‌ ದಾಖಲಾಗಿದೆ.

    ಕೊಯಮತ್ತೂರಿನ (Coimbatore) ಅವರಂಪಾಲಯಂ (Avarampalayam) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಿದ್ದಪುದೂರು ನಿವಾಸಿ ಪಾಂಡಿಯನ್ ಅವರಿಗೆ ಸೇರಿರುವ ಕಾರನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿತ್ತು ಮತ್ತು ಈ ಕಾರನ್ನು ರಮೇಶ್ ಚಾಲನೆ ಮಾಡುತ್ತಿದ್ದರು. ಇದನ್ನೂ ಓದಿ: ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    PETROL

    ನವೆಂಬರ್ 15ರ ಮಂಗಳವಾರ ಬೆಳಗ್ಗೆ ಅವರಂಪಳಯಂ ಪ್ರದೇಶದ ಪೆಟ್ರೋಲ್ ಬಂಕ್‍ನಲ್ಲಿ ರಮೇಶ್ 4,119 ರೂ. ನೀಡಿ ಕಾರಿಗೆ 39.90 ಲೀಟರ್ ಪೆಟ್ರೋಲ್ ಹಾಕಿಸಿದ್ದರು. ಹೀಗಿದ್ದರೂ ಕಾರು ಮಧ್ಯದಾರಿಯಲ್ಲಿಯೇ ನಿಂತುಹೋಗಿತ್ತು. ನಂತರ ಮೆಕ್ಯಾನಿಕ್ ಬಂದು ವಾಹನವನ್ನು ಪರಿಶೀಲಿಸಿದಾಗ ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ತುಂಬಿಕೊಂಡಿತ್ತು. ಕೂಡಲೇ ರಮೇಶ್ ಪೆಟ್ರೋಲ್ ಬಂಕ್‍ಗೆ ಹಿಂದಿರುಗಿ ಪೆಟ್ರೋಲ್ ಬದಲು ನೀರು ಇದೆ ಎಂದು ತಿಳಿಸಿದ್ದಾರೆ. ಆದರೆ, ಆಡಳಿತ ಮಂಡಳಿ ಅವರಿಗೆ ಸೂಕ್ತ ಉತ್ತರ ನೀಡಲು ವಿಫಲವಾಗಿದೆ.

    ಈ ಹಿನ್ನೆಲೆ ರಮೇಶ್ ಕತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆಟ್ರೋಲ್ ಬಂಕ್ ಮ್ಯಾನೇಜರ್ ನಂದಗೋಪಾಲ್ ಘಟನೆಯ ಬಗ್ಗೆ ಇಂಡಿಯನ್ ಆಯಿಲ್ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಇಂಜಿನಿಯರ್‌ಗಳು ಬಂದು ಹಾನಿಗೊಳಗಾದ ಪೆಟ್ರೋಲ್ ಪಂಪ್ ಪರಿಶೀಲಿಸಲಿದ್ದಾರೆ ಎಂದು ನಂದಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ

    ಇದೇ ವೇಳೆ ರಮೇಶ್ ತನ್ನ ಟ್ಯಾಂಕ್‍ನಲ್ಲಿ ತುಂಬಿದ್ದ ಪೆಟ್ರೋಲ್ ಅನ್ನು ಬಾಟಲಿಗೆ ಸಂಗ್ರಹಿಸಿ ತಾನು ಮೋಸ ಹೋಗಿರುವುದನ್ನು ತೋರಿಸಿದ್ದಾನೆ. ಈ ವಿಚಾರ ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ಇದೀಗ ಪೆಟ್ರೋಲ್ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಕಾರಿನ ದುರಸ್ತಿಗೆ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಪೆಟ್ರೋಲ್ ಬಂಕ್‍ನವರು ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊಲೀಸ್ ಜೀಪ್‍ಗೆ ಹಾಕಿದ ಡಿಸೇಲ್ ಹಣ ಕೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೂಟಿನೇಟು

    ಪೊಲೀಸ್ ಜೀಪ್‍ಗೆ ಹಾಕಿದ ಡಿಸೇಲ್ ಹಣ ಕೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೂಟಿನೇಟು

    ಕಾರವಾರ: ಪೊಲೀಸ್ (Police) ಜೀಪ್‍ಗೆ ಡಿಸೇಲ್ (Diesel)  ಹಾಕಿಸಿ ಹಣ ನೀಡದೇ ಹೋಗಿದ್ದಕ್ಕೆ ಡಿಸೇಲ್ ಹಣ ಕೊಡುವಂತೆ ಪೆಟ್ರೋಲ್ ಬಂಕ್‍ನ (Petrol Bunk)  ಸಿಬ್ಬಂದಿ ಕೇಳಿದ ಎಂದು ಠಾಣೆಗೆ ಕರೆಸಿ ಚಿತ್ರಹಿಂಸೆ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ರಾಘು ಎಂಬ ಯುವಕ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಪೆಟ್ರೋಲ್ ಬಂಕ್‍ ಸಿಬ್ಬಂದಿ. ಮಹಾದೇವ ಬಂಡಿಗೇರಿ ಚಿತ್ರಹಿಂಸೆ ನೀಡಿದ ಪೊಲೀಸ್ ಕಾನ್ಸ್‌ಟೇಬಲ್‌. ಸೋಮವಾರ ನಗರದದ ಬೆಂಡಿಗೇರಿ ಪೆಟ್ರೋಲ್ ಬಂಕ್‍ಗೆ ಡಿಸೇಲ್ ಹಾಕಿಸಲು ಮುಂಡಗೋಡು ಠಾಣೆ ಕಾನ್ಸ್‌ಟೇಬಲ್‌ ಮಹಾದೇವ ಬಂಡಿಗೇರಿ ಆಗಮಿಸಿದ್ದು, 30 ಲೀಟರ್ ಡಿಸೇಲ್ ಹಾಕಿಸಿದ್ದಾರೆ. ಈ ವೇಳೆ ರಾಘು ಡಿಸೇಲ್ ಹಣ ಕೇಳಿದ್ದಾರೆ. ಸಂಜೆ ಕೊಡುವುದಾಗಿ ಹೇಳಿ ಹೋದ ಕಾನ್ಸ್‌ಟೇಬಲ್‌ ಹಣ ನೀಡಿರಲಿಲ್ಲ. ಇದಕ್ಕಾಗಿ ಅವರಿಗೆ ಕರೆಮಾಡಿದಾಗ ಅವಾಚ್ಯ ಶಬ್ದದಿಂದ ನಿಂದಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ನಂತರ ಈತನಿಗೆ ಹಣ ಕೇಳಿದ್ದಕ್ಕೆ ಬೂಟು ಕಾಲಿನಿಂದ ಒದ್ದು, ಬೆಲ್ಟ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿ ಕಳುಹಿಸಿದ್ದಾರೆ. ಇದನ್ನೂ ಓದಿ: ಬಂಡೇ ಮಠದ ಶ್ರೀ ಬರೆದಿದ್ದು ಒಟ್ಟು 6 ಪುಟಗಳ ಡೆತ್‍ನೋಟ್ – ಈಗಾಗಲೇ 20 ಮಂದಿಯ ವಿಚಾರಣೆ

    ಪೊಲೀಸಪ್ಪನ ಬೋಟುಗಾಲು ಹೊಡೆತಕ್ಕೆ ರಾಘು ಜರ್ಜರಿತರಾಗಿದ್ದು, ಮುಂಡಗೋಡು ಸರ್ಕಾರಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಠಾಣೆಗೆ ಬಂದು ಸಾರ್ವಜನಿಕರು ಪ್ರಶ್ನಿಸಿದಾಗ ರಾಜಿ ಸಂಧಾನ ಮಾಡಿ ಪ್ರಕರಣ ಇತ್ಯರ್ಥಗೊಳಿಸಿದ್ದಾರೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಮತ್ತಷ್ಟು ಹಣ ಬಿಡುಗಡೆ ಮಾಡಲು ಮುಂದಾದ ಸರ್ಕಾರ

    Live Tv
    [brid partner=56869869 player=32851 video=960834 autoplay=true]

  • ಪೆಟ್ರೋಲ್ ಬಂಕ್ ಮಾಲೀಕನಿಗೆ ಚಾಕು ತೋರಿಸಿ 10 ಲಕ್ಷ ಎಗರಿಸಿದ ಖದೀಮರು

    ಪೆಟ್ರೋಲ್ ಬಂಕ್ ಮಾಲೀಕನಿಗೆ ಚಾಕು ತೋರಿಸಿ 10 ಲಕ್ಷ ಎಗರಿಸಿದ ಖದೀಮರು

    ಹಾಸನ: ಬೈಕ್‍ನಲ್ಲಿ ಹಿಂಬಾಲಿಸಿದ ಖದೀಮರು ಪೆಟ್ರೋಲ್ ಬಂಕ್ ಮಾಲೀಕನಿಗೆ ಚಾಕು ತೋರಿಸಿ ಕಾರಿನಲ್ಲಿದ್ದ 10 ಲಕ್ಷ ರೂ.ಗಳನ್ನು ಕಿತ್ತುಕೊಂಡು ಪರಾರಿಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿ ಕದ್ಬಳ್ಳಿಯಲ್ಲಿ ಶ್ರೀ ಲಕ್ಷ್ಮಿರಂಗನಾಥಸ್ವಾಮಿ ಪೆಟ್ರೋಲ್ ಬಂಕ್ ಮಾಲೀಕರಾದ ಹೇಮ ಕುಮಾರ್ ಅವರು ಜೂನ್ 27ರಂದು ಬಂಕ್ ನಿಂದ 10 ಲಕ್ಷ ರೂಗಳನ್ನು ಸಂಗ್ರಹಿಸಿ, ತಮ್ಮ ಸ್ವಿಫ್ಟ್ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಖದೀಮರು, ಹೇಮ ಕುಮಾರ್ ಅವರಿಗೆ ಚಾಕು ತೋರಿಸಿ ಕಾರಿನ ಬ್ಯಾಗ್ ನಲ್ಲಿದ್ದ 10 ಲಕ್ಷ ರೂ.ಗಳ ಕಿತ್ತು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರಧಾನಿ ವರದಿ ಕೇಳೋದ್ರಲ್ಲಿ ಏನಿಲ್ಲ, ಸುಪ್ರೀಂ ನ್ಯಾಯಾಧೀಶರಿಂದ ತನಿಖೆಯಾಗಲಿ: ಡಿಕೆಶಿ

    10 ಲಕ್ಷ ರೂ. ಎಗರಿಸುವ ಮುನ್ನ ಎರಡು ಬೈಕ್‍ಗಳಲ್ಲಿ ತಂಡವಾಗಿ ಬಂದಂತಹ ಅಪರಿಚಿತರು ಹೇಮ ಕುಮಾರ್ ಕಾರಿನ ಟೈರ್ ಪಂಕ್ಜರ್ ಆಗಿದೆ ಎಂದು ಸನ್ನೆ ಮಾಡುವ ಮೂಲಕ ಅವರ ಗಮನವನ್ನು ಬೇರೆಡೆ ಸೆಳೆದಿದ್ದಾರೆ. ಇದಾದ ಬಳಿಕ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ ಮತ್ತೊಂದು ಬೈಕ್‍ನಲ್ಲಿ ಇದ್ದ ಇಬ್ಬರು ಸವಾರರು, ಹೇಮ ಕುಮಾರ್ ಅವರಿಗೆ ಚಾಕು ತೋರಿಸಿ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದೀಗ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಹೇಮ ಕುಮಾರ್ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗುತ್ತಿಗೆದಾರರ ಸಂಘದಿಂದ ದಾಖಲೆ ಕೇಳಿದ ಕೇಂದ್ರ ಗೃಹ ಸಚಿವಾಲಯ

    Live Tv

  • ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

    ರಾಜ್ಯದಲ್ಲೂ ಶುರುವಾಯ್ತು ಡೀಸೆಲ್‌ ಅಭಾವ – ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

    ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ನೀರಿಗೆ ಅಭಾವ ಆಗೋದು ಸಹಜ, ಆದರೀಗ ರಾಜ್ಯದಲ್ಲಿ ಡೀಸೆಲ್ ಅಭಾವ ಶುರುವಾಗಿದೆ.

    ರಾಜ್ಯದ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಕಳೆದ 1 ವಾರದಿಂದ ಸಮಸ್ಯೆ ಉಂಟಾಗುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಿಪಿಸಿಎಲ್ ಬಂಕ್‌ನಲ್ಲಿ ಡೀಸೆಲ್ ನೋ ಸ್ಟಾಕ್ ಬೋರ್ಡ್ ಕಾಣುತ್ತಿವೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    PETROL

    ಬಹುತೇಕ ಬಿಪಿಸಿಎಲ್ ಬಂಕ್‌ಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಇದ್ರಿಂದ ಅಕ್ಕ ಪಕ್ಕದ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಖಾಸಗಿ ಬಂಕ್‌ಗಳತ್ತ ಗ್ರಾಹಕರು ಮುಖ ಮಾಡಿದ್ದಾರೆ. ಇದನ್ನೂ ಓದಿ: ದೋಣಿ ಸಮಸ್ಯೆ – ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ ನಾಲ್ವರಲ್ಲಿ ಓರ್ವ ಯುವಕ ಸಾವು

    ಈ ಕುರಿತು ಮಾತನಾಡಿರುವ ಬಂಕ್ ಮಾಲೀಕ ಗಿರೀಶ್, ಬಿಪಿಸಿಎಲ್ ಸಂಸ್ಥೆ ವತಿಯಿಂದ ಡೀಸೆಲ್ ಸರಬರಾಜು ಕಡಿತ ಮಾಡುತ್ತಿದ್ದಾರೆ. ಕೇಳಿದಷ್ಟು ಡೀಸೆಲ್ ಸರಬರಾಜು ಮಾಡುತ್ತಿಲ್ಲ. ಡೀಸೆಲ್ ನಿಂದ 23 ರೂಪಾಯಿ ನಷ್ಠ ಸಂಭವಿಸುತ್ತಿದೆ. ಅಂತ ಡೀಸೆಲ್ ಪೂರೈಕೆ ಕಡಿಮೆ ಮಾಡಿದ್ದಾರೆ. ಸಂಸ್ಥೆಗೆ ಸಾವಿರಾರು ಕೋಟಿ ನಷ್ಟದ ಕಾರಣವೊಡ್ಡಿ ದಿನೇ ದಿನೇ ಡೀಸೆಲ್ ಪೂರೈಕೆ ಕಡಿತ ಮಾಡುತ್ತಿದ್ದಾರೆ. ಇದ್ರಿಂದ ಡೀಸೆಲ್‌ಗೆ ಅಭಾವ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

    ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಕೆಲ ಬಂಕ್‌ಗಳಲ್ಲಿ ಡೀಸೆಲ್ ಸಿಗದೇ ಗ್ರಾಹಕರು ಪರದಾಡುವಂತಾಗಿದೆ.

  • ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಫೋನ್ ಪೇ ಮೂಲಕ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ

    ಬೆಳಗಾವಿ: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು ಫೋನ್ ಪೇ ಮೂಲಕ ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು

    ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಅಂತಾ ಮಾತ್ರ ಈ ಫೋನ್ ಪೇ ಆ್ಯಪ್ ನವರು ಫಂಡ್ ರಿಟರ್ನ್ ಅನ್ನೋ ಆಪ್ಷನ್ ಇಟ್ಟಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್‌ನಿಂದ ಪಂಪ್‍ನ ನಂಬರ್‌ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್‍ನ ನಂಬರ್‌ನಿಂದ ಮತ್ತೆ ತನ್ನ ಅಕೌಂಟ್‍ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಹಣವನ್ನು ಎಗರಿಸಿದ್ದಾನೆ.

    ಇತ್ತ ದಿನೇ ದಿನೇ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ರೋಹಿತ್‍ನನ್ನು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದ್ದು, ಈಗಾಗಲೇ ಆತನಿಂದ ಸುಮಾರು 28 ಲಕ್ಷ ರೂ.ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ

  • ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಹಲ್ಲೆ

    ಬೆಂಗಳೂರು: ಪೆಟ್ರೋಲ್ ಬಂಕ್‍ನಲ್ಲಿ ಪುಂಡ ಯುವಕರಿಂದ ಡೀಸೆಲ್ ಹಾಕಿಸಿಕೊಳ್ಳಲು ಬಂದಿದ್ದ ಇನ್ನೋವಾ ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಿದ ಘಟನೆ ನಿನ್ನೆ ರಾತ್ರಿ ಆನೇಕಲ್ ತಾಲೂಕಿನ ಗುಡ್ಡನಹಳ್ಳಿಯಲ್ಲಿ ನಡೆದಿದೆ.

    ಕಾರಿನಲ್ಲಿದ್ದವರು ಕೆಳಗಿಳಿದು ಡೀಸೆಲ್ ಹಾಕಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಪುಂಡರು ಪೆಟ್ರೋಲ್ ಹಾಕಿಸಿಕೊಂಡಿದ್ದರು. ಪೆಟ್ರೋಲ್ ಹಾಕಿಸಿಕೊಂಡ ಬಳಿಕ ನನ್ನ ಹಣವನ್ನು ನೀನೇ ಕೊಡು ಅಂತ ಇನ್ನೋವಾ ಕಾರಿನನವನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಹಣ ಕೊಡದೆ ಇದ್ದಾಗ ಕಾರಿನಲ್ಲಿ ಕುಳಿತಿದ್ದ ಇಬ್ಬರ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಇದ್ದ ಚಾಕು ತೆಗೆದುಕೊಂಡು ಹಲ್ಲೆ ಎಸಗಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ

    ಇತ್ತೀಚೆಗೆ ರಾಜ್ಯದ ಗಡಿಭಾಗದಲ್ಲಿನ ಯುವಕರ ಪುಂಡಾಟ ಹೆಚ್ಚಾಗಿದೆ. ಹೊರರಾಜ್ಯದಿಂದ ಬಂದವರೇ ಇವರ ಗುರಿಯಾಗಿದ್ದಾರೆ. ಇಂತಹ ಪುಂಡ ಪೋಕರಿಗಳು ಹಣಮಾಡಲು ಅಡ್ಡದಾರಿ ಹಿಡಿದಿದ್ದಾರೆ. ತಮಿಳುನಾಡು ಗಡಿ ಮೂಲಕ ಆನೇಕಲ್ಲಿನ ಮೂಲಕ ಬರುವವರನ್ನು ಅಡ್ಡಗಟ್ಟಿ ಹಲ್ಲೆ ನಡೆಸುತ್ತಾರೆ. ನಿರ್ಜನ ಪ್ರದೇಶದ ರಸ್ತೆ ಆಗಿರುವುದರಿಂದ ಇವರ ಕಳ್ಳಾಟ ಹೆಚ್ಚಾಗಿದ್ದು, ಇಂತಹ ಪುಂಡರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

  • ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಪೆಟ್ರೋಲ್ ಬಂಕ್‌ನಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ

    ಚಿಕ್ಕಮಗಳೂರು: ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಂಕ್‌ನಲ್ಲಿದ್ದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.

    ಕಳೆದ ರಾತ್ರಿ ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್‌ನಲ್ಲಿ ಖಾಸಗಿ ಬಸ್ ನಿಂತಿತ್ತು. ಆದರೆ ಮಧ್ಯರಾತ್ರಿ ಸುಮಾರಿಗೆ ಖಾಸಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಪೆಟ್ರೋಲ್ ಬಂಕ್‌ನಲ್ಲೇ ಮಲಗಿದ್ದ ಸಿಬ್ಬಂದಿಗೆ ಎಚ್ಚರವಾಗಿದೆ. ಬೆಂಕಿಯನ್ನು ನೋಡಿದ ತಕ್ಷಣ ಅಕ್ಕಪಕ್ಕದವರನ್ನು ಕೂಗಿ ಎಬ್ಬಿಸಿದ್ದಾರೆ. ಕೂಡಲೇ ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ.

    ಪೆಟ್ರೋಲ್ ಬಂಕ್‌ನಲ್ಲಿ ಸಾವಿರಾರು ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಇತ್ತು. ಒಂದು ವೇಳೆ ಪೆಟ್ರೋಲ್ ಬಂಕ್ ಸಿಬ್ಬಂದಿ ಬಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದನ್ನು ನೋಡದಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಪೆಟ್ರೋಲ್ ಬಂಕ್ ನೌಕರನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಸ್ಥಳೀಯರು ಬಸ್ಸಿಗೆ ತಾಗಿದ್ದ ಬೆಂಕಿಯನ್ನು ನಂದಿಸುವಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ. ಇದನ್ನೂ ಓದಿ: ದೇವಾಲಯದ ಪ್ರಸಾದ ಸೇವಿಸಿ 50ಕ್ಕೂ ಹೆಚ್ಚು ಜನ ಅಸ್ವಸ್ಥ