Tag: petrl bunk

  • ಪೆಟ್ರೋಲ್ ಬಂಕ್‍ನಲ್ಲಿ ಇದ್ದಕ್ಕಿದ್ದಂತೆ ಕಾರ್‍ಗೆ ಬೆಂಕಿ- ಮುಂದೇನಾಯ್ತು? ವಿಡಿಯೋ ನೋಡಿ

    ಪೆಟ್ರೋಲ್ ಬಂಕ್‍ನಲ್ಲಿ ಇದ್ದಕ್ಕಿದ್ದಂತೆ ಕಾರ್‍ಗೆ ಬೆಂಕಿ- ಮುಂದೇನಾಯ್ತು? ವಿಡಿಯೋ ನೋಡಿ

    ರಿಯಾದ್: ಪೆಟ್ರೋಲ್ ಬಂಕ್‍ನಲ್ಲಿ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿದ್ದವರನ್ನು ಆತಂಕಕ್ಕೀಡುಮಾಡಿದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.

    ಪೆಟ್ರೋಲ್ ಬಂಕ್‍ನಲ್ಲಿ ನಿಂತಿದ್ದ ಬಿಳಿ ಬಣ್ಣದ ಎಸ್‍ಯುವಿ ಕಾರ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನ ಚಾಲಕಿ ಕೆಳಗಿಳಿದಿದ್ದು, ಕಾರ್‍ನಲ್ಲಿದ್ದ ಮತ್ತೊಬ್ಬ ಮಹಿಳೆ ಕೂಡ ಆತಂಕದಿಂದ ಹೊರಗೆ ಬಂದಿದ್ದಾರೆ. ನಂತರ ಕಾರಿನಿಂದ ಬೆಂಕಿಯ ಜ್ವಾಲೆ ದಟ್ಟವಾಗಿ ಆವರಿಸಿದೆ. ಈ ವೇಳೆ ಕೆಲವರು ಕಾರಿನ ಬೆಂಕಿ ಆರಿಸಲು ದೌಡಾಯಿಸಿದ್ರೆ ಇನ್ನೂ ಕೆಲವರು ತಮ್ಮ ವಾಹನಗಳನ್ನ ಅಲ್ಲಿಂದ ತೆಗೆಯಲು ಓಡಿದ್ದಾರೆ.

    ಅದೃಷ್ಟವಶಾತ್ ಸ್ಥಳದಲ್ಲಿದ್ದ ಕೆಲವರು ಫೈರ್ ಎಕ್ಟಿಂಗ್ವಿಶರ್ ಬಳಸಿ ಕೆಲವೇ ಸೆಕೆಂಡ್‍ಗಳಲ್ಲಿ ಬೆಂಕಿಯನ್ನ ನಂದಿಸಿ, ಕಾರನ್ನು ಅಲ್ಲಿಂದ ತಳ್ಳಿಕೊಂಡು ಬೇರೆಡೆಗೆ ಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯ ಪೆಟ್ರೋಲ್ ಬಂಕ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯಾರಿಗೂ ಯವುದೇ ಅಪಾಯವಾಗಿಲ್ಲ

    ಆದ್ರೆ ಬೆಂಕಿ ನಂದಿಸಿದವರು ತರಾತುರಿಯಲ್ಲಿ ಹೆಚ್ಚಿನ ಎಕ್ಸಿಂಗ್ವಿಶರ್ ಬಳಸಿದ್ದಕ್ಕೆ ವಿಡಿಯೋ ನೋಡಿದವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. 6 ತಿಂಗಳವರೆಗೆ ಬೆಂಕಿ ನಂದಿಸಬಹುದಾಗಿದ್ದ ಸೌದಿ ಅರೇಬಿಯಾದ ಅಗ್ನಿ ನಿಯಂತ್ರಣ ಸಾಮಥ್ರ್ಯವನ್ನೇ ಖಾಲಿ ಮಡ್ಬಿಟ್ರು ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಅಷ್ಟೂ ಎಕ್ಟಿಂಗ್ವಿಶರ್ ಬಳಸಿ ಸೂರ್ಯನನ್ನೇ ನಂದಿಸಬಹುದಿತ್ತು ಅಂತ ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

    https://www.youtube.com/watch?v=1NXeygw1olU