Tag: petdog

  • ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಸಾಕುನಾಯಿ

    ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಸಾಕುನಾಯಿ

    ಲಕ್ನೌ: ಸಾಕುನಾಯಿ ಅಗ್ನಿ ಅವಘಡದಿಂದ 30 ಜನರ ಪ್ರಾಣ ಉಳಿಸಿ ಮೃತಪಟ್ಟ ಘಟನೆಯೊಂದು ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಬಾಂದಾದಲ್ಲಿ ನಡೆದಿದೆ.

    ಬಾಂದಾ ಜಿಲ್ಲೆಯ ಲಖನ್ ಕಾಲೋನಿಯ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೇಸ್‍ಮೆಂಟ್ ಹಾಗೂ ಮೊದಲನೇ ಮಹಡಿಯಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದೇ ಕಟ್ಟಡದ ಮೂರನೇ ಹಾಗೂ ನಾಲ್ಕನೇ ಮಹಡಿಯಲ್ಲಿ ಕುಟುಂಬಗಳು ವಾಸಿಸುತ್ತಿತ್ತು.

    ಸಾಕುನಾಯಿ ಕೂಡ ಅದೇ ಕಟ್ಟಡದಲ್ಲಿ ವಾಸವಾಗಿತ್ತು. ಅಗ್ನಿ ಅವಘಡ ಸಂಭವಿಸಿದನ್ನು ನೋಡಿದ ನಾಯಿ ಜೋರಾಗಿ ಬೊಗಳಲು ಶುರು ಮಾಡಿತ್ತು. ಆಗ ಆ ಬಿಲ್ಡಿಂಗ್‍ನಲ್ಲಿದ್ದ ಜನರು ಸುರಕ್ಷಿತವಾಗಿ ಅಲ್ಲಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

    ನಾಯಿ ಮೃತಪಡುವ ಕೊನೆ ಕ್ಷಣದವರೆಗೂ ಎಲ್ಲರ ಪ್ರಾಣ ಉಳಿಸಿತ್ತು. ಆದರೆ ನಾಯಿ ಸ್ವತಃ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಗ್ನಿ ಅವಘಡ ಆದಾಗ ನಾಯಿಯನ್ನು ಕಟ್ಟಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಪರಿಣಾಮ ಅದು ಮೃತಪಟ್ಟಿದೆ.

    ನಾಯಿ ಜೋರಾಗಿ ಬೊಗಳಿ ನಮ್ಮನ್ನು ಎಚ್ಚರಗೊಳಿಸಿತು. ನಾಯಿ ಜೋರಾಗಿ ಬೊಗಳಿ ಎಲ್ಲರ ಪ್ರಾಣ ಉಳಿಸಿಕೊಳ್ಳಲು ಸಹಾಯ ಮಾಡಿತ್ತು. ಈ ಕಟ್ಟಡದಲ್ಲಿದ್ದ ಜನರು ಸುರಕ್ಷಿತವಾಗಿ ಹೊರ ಬಂದರು. ಆದರೆ ಸಿಲಿಂಡರ್ ಬ್ಲಾಸ್ಟ್ ಆಗಿ ನಾಯಿ ಮೃತಪಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

    ಈ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ಶಾರ್ಟ್ ಸರ್ಕ್ಯೂಟ್‍ ಆದ ಕಾರಣ ಅಗ್ನಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ವಿನಯ್ ಕುಮಾರ್ ತಿಳಿಸಿದ್ದಾರೆ. ಅಲ್ಲದೆ ಕಟ್ಟಡದಲ್ಲಿದ್ದ ಸಿಲಿಂಡರ್‍ಗಳು ಬ್ಲಾಸ್ಟ್ ಆದ ಪರಿಣಾಮ ಹತ್ತಿರದಲ್ಲಿದ್ದ ನಾಲ್ಕು ಕಟ್ಟಡಗಳು ಧ್ವಂಸವಾಗಿದೆ.

  • ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಸಾಂದರ್ಭಿಕ ಚಿತ್ರ

    ನವದೆಹಲಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.

    ವಿಜೇಂದರ್ ರಾಣಾ ಮೃತ ದುರ್ದೈವಿ ವ್ಯಕ್ತಿ. ರಾಣಾ ಅವರ ಟೆಂಪೋ ನಾಯಿಮರಿಗೆ ತಾಗಿತ್ತೆಂದು ಸಿಟ್ಟುಗೊಂಡ ನಾಯಿಯ ಮಾಲೀಕ ಈ ಕೃತ್ಯ ಎಸಗಿದ್ದಾನೆ.

    ಏನಿದು ಘಟನೆ?:
    ರಾಣಾ ಅವರ ಟಾಟಾ ಏಸ್ ಟೆಂಪೋ ಆಕಸ್ಮತ್ತಾಗಿ ನಾಯಿಗೆ ಟಚ್ ಆಗಿದೆ. ಈ ವೇಳೆ ನಾಯಿಯ ಮಾಲೀಕ ತಗಾದೆ ತೆಗೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಸ್ಥಳೀಯರನ್ನು ಸ್ಥಳದಲ್ಲಿ ಜಮಾಯಿಸುವಂತೆ ಮಾಡಿದ್ದಾನೆ. ಈ ವೇಳೆ ರಾಣಾ ಸಹೋದರ ಕೂಡ ಸ್ಥಳಕ್ಕೆ ದೌಡಾಯಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಅಂದರೆ ಮಧ್ಯರಾತ್ರಿ 12.50ರ ಸುಮಾರಿಗೆ ರಾಣಾ ಸಹೋದರಿ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಮಾತಿನ ಚಕಮಕಿ ಮುಂದುವರೆದು ತಾರಕಕ್ಕೇರಿ ಟೆಂಪೋ ಚಾಲಕ ವಿಜೇಂದರ್ ರಾಣಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಮಟ ರೂಪ್ ರಾಣಿ ಮಾಗ್ಗೋ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಇವರ ಸಹೋದರ ರಾಜೇಶ್ ಅವರಿಗೂ ಚಾಕು ಇರಿತವಾಗಿದ್ದು, ಗಾಯಗಳಾಗಿವೆ. ಸದ್ಯ ರಾಜೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಮೂವರು ಆರೋಪಿಗಳಾದ ಅಂಕಿತ್, ಪರಸ್ ಹಾಗೂ ಅವರ ಮನೆ ಮಾಲೀಕ ದೇವ್ ಚೋಪ್ರಾ ಇದೀಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv