Tag: PETA

  • ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ – ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

    ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸೇರಿಸೋದು ಅವೈಜ್ಞಾನಿಕ – ಸುಪ್ರೀಂ ತೀರ್ಪಿಗೆ PETA ಪ್ರತಿಕ್ರಿಯೆ

    ನವದೆಹಲಿ: ದೆಹಲಿಯಲ್ಲಿ (Delhi) ಬೀದಿ ನಾಯಿಗಳ (Stray Dogs) ಹಾವಳಿ ನಿಯಂತ್ರಿಸಲು 2 ತಿಂಗಳೊಳಗೆ ಆಶ್ರಯತಾಣಗಳಿಗೆ ಅವುಗಳನ್ನು ಸೇರಿಸುವಂತೆ ಸುಪ್ರೀಂ ಕೋರ್ಟ್‌ (Supreme Court) ನೀಡಿದ್ದ ಆದೇಶಕ್ಕೆ ʻಪೆಟಾʼ (PETA) ಸಂಸ್ಥೆ ಪ್ರತಿಕ್ರಿಯಿಸಿದೆ. ಬೀದಿನಾಯಿಗಳನ್ನು ಆಶ್ರಯ ತಾಣಗಳಿಗೆ ಸೇರಿಸೋ ಕ್ರಮ ಅವೈಜ್ಞಾನಿಕವಾಗಿದೆ ಎಂದು ಹೇಳಿದೆ.

    ಸುಪ್ರೀಂ ಕೋರ್ಟ್ ದೆಹಲಿ, ಗುರುಗ್ರಾಮ್, ನೋಯ್ಡಾ ಮತ್ತು ಗಾಜಿಯಾಬಾದ್‌ನ ಸಂಬಂಧಪಟ್ಟ ಅಧಿಕಾರಿಗಳಿಗೆ, ಬೀದಿ ನಾಯಿಗಳನ್ನು 2 ತಿಂಗಳೊಳಗೆ ಆಶ್ರಯ ತಾಣಗಳಿಗೆ ಸಾಗಿಸಲು ಆದೇಶಿಸಿತ್ತು. ಅಲ್ಲದೇ ಅವುಗಳು ಮತ್ತೆ ರಸ್ತೆಗೆ ಬರದಂತೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ಕ್ರಮಕ್ಕೆ ಯಾರಾದರೂ ಅಡ್ಡ ಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು. ಈ ತೀರ್ಪಿನ ಬೆನ್ನಲ್ಲೇ ಪೆಟಾ ಇಂಡಿಯಾದ ಪಶುವೈದ್ಯಕೀಯ ವ್ಯವಹಾರಗಳ ಹಿರಿಯ ನಿರ್ದೇಶಕಿ ಡಾ. ಮಿನಿ ಅರವಿಂದನ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: 2 ತಿಂಗಳಲ್ಲಿ ಇಡೀ ದೆಹಲಿಯನ್ನ ಬೀದಿನಾಯಿಗಳಿಂದ ಮುಕ್ತಗೊಳಿಸಬೇಕು – ಸುಪ್ರೀಂ ಆದೇಶ

    ನಾಯಿಗಳನ್ನು ಸ್ಥಳಾಂತರಿಸುವುದು ಮತ್ತು ಅವುಗಳನ್ನು ಬಂಧನದಲ್ಲಿಡುವುದು ವೈಜ್ಞಾನಿಕವಲ್ಲ. 2022-23 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದೆಹಲಿಯಲ್ಲಿ ಸುಮಾರು 10 ಲಕ್ಷ ನಾಯಿಗಳಿವೆ. ಅವುಗಳಲ್ಲಿ ಅರ್ಧ ಭಾಗಕ್ಕಿಂತಲೂ ಕಡಿಮೆ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿಡುವ ಕ್ರಮ, ಅಂತಿಮವಾಗಿ ನಾಯಿಗಳ ಸಂಖ್ಯೆ ಕಡಿಮೆ ಆಗುವಂತೆ ಮಾಡುತ್ತದೆಯೇ ಹೊರತು, ರೇಬೀಸ್ ಅಥವಾ ನಾಯಿ ಕಡಿತದ ಘಟನೆಗಳನ್ನು ತಡೆಯಲು ಏನನ್ನೂ ಮಾಡುವುದಿಲ್ಲ. 2001ರಲ್ಲಿ ನಾಯಿಗಳಿಗೆ ಸಂತಾನಹರಣ ಮತ್ತು ಲಸಿಕೆ ಹಾಕುವ ಯೋಜನೆಯನ್ನು ರೂಪಿಸಲಾಗಿತ್ತು. ಈ ಯೋಜನೆ ಸರಿಯಾಗಿ ಜಾರಿಗೆ ತಂದಿದ್ದರೆ, ಇಂದು ರಸ್ತೆಯಲ್ಲಿ ಯಾವುದೇ ನಾಯಿಗಳು ಇರುತ್ತಿರಲಿಲ್ಲ ಎಂದಿದ್ದಾರೆ.

    ಕೆಲವರು ನೆರೆಹೊರೆಯ ನಾಯಿಗಳನ್ನು ಕುಟುಂಬದ ಭಾಗದಂತೆ ಭಾವಿಸುತ್ತಾರೆ. ಈ ರೀತಿ ಲಕ್ಷಾಂತರ ನಾಯಿಗಳನ್ನು ಬಲವಂತವಾಗಿ ಬಂಧನದಲ್ಲಿಡುವುದು ಶ್ವಾನಪ್ರಿಯರಲ್ಲಿ ಬೇಸರ ಉಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಪರಿಣಾಮಕಾರಿಯಲ್ಲದ ಮತ್ತು ಅಮಾನವೀಯ ಸ್ಥಳಾಂತರದಿಂದ ಸಮಯ, ಶ್ರಮ ಮತ್ತು ಸಾರ್ವಜನಿಕರ ಹಣ ವ್ಯರ್ಥ ಮಾಡುವ ಬದಲು, ಪರಿಣಾಮಕಾರಿ ಸಂತಾನಹರಣದಂತಹ ತುರ್ತು ಕ್ರಮಗಳು ಅಗತ್ಯವಾಗಿದೆ. ಅಲ್ಲದೇ ಪ್ರಾಣಿಗಳನ್ನು ತ್ಯಜಿಸಲು ಕಾರಣವಾಗುವ ಅಕ್ರಮ ಸಾಕುಪ್ರಾಣಿ ಅಂಗಡಿಗಳು ಮತ್ತು ತಳಿಗಾರರ ವಿರುದ್ಧ ಕ್ರಮಕೈಗೊಳ್ಳಬೇಕು. ಪ್ರಾಣಿಗಳ ಆಶ್ರಯ ಅಥವಾ ಬೀದಿಯಿಂದ ಅಗತ್ಯವಿರುವ ನಾಯಿಯನ್ನು ಸಾಕಲು ಸಾರ್ವಜನಿಕರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ | ಯಾವುದೇ ಕಾರಣಕ್ಕೂ ಚಿಕ್ಕ ಮಕ್ಕಳು ರೇಬಿಸ್‌ನಿಂದ ಸಾಯಬಾರದು: ಸುಪ್ರೀಂ ಕೋರ್ಟ್‌

  • ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳವನ್ನು ನಿಲ್ಲಿಸಿ: ಪೇಟಾದಿಂದ ಪಿಐಎಲ್‌ ಸಲ್ಲಿಕೆ

    ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳವನ್ನು ನಿಲ್ಲಿಸಿ: ಪೇಟಾದಿಂದ ಪಿಐಎಲ್‌ ಸಲ್ಲಿಕೆ

    ಬೆಂಗಳೂರು: ಅಕ್ಟೋಬರ್‌ 25 ರಂದು ಬೆಂಗಳೂರಿನಲ್ಲಿ (Bengaluru) ಆಯೋಜನೆಗೊಂಡಿರುವ ಕಂಬಳವನ್ನು (Kambala) ನಿಲ್ಲಿಸುವಂತೆ ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸಂಸ್ಥೆ ಹೈಕೋರ್ಟ್‌ನಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

    ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಅರ್ಜಿಯನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದರು.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಈ ಕ್ರೀಡೆಯನ್ನು ಈ ತಿಂಗಳು ನಗರದಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಇರುವ ಕೋಣಗಳನ್ನು ಬೆಂಗಳೂರಿಗೆ ಕರೆತರಲಾಗುತ್ತದೆ. ಇದರಿಂದ ಕೋಣಗಳಿಗೆ ಹಿಂಸೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಮಾಸ್‌ ರೇಪಿಸ್ಟ್‌ ಎಂದ ರಾಹುಲ್‌ಗೆ ರಿಲೀಫ್‌ – ಅರ್ಜಿ ವಜಾ, 25 ಸಾವಿರ ದಂಡ

    ಈ ವರ್ಷದ ಜುಲೈನಲ್ಲಿ ಪಿಐಎಲ್ (PIL) ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಅದನ್ನು ಪಟ್ಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತುರ್ತು ವಿಚಾರಣೆ ಕೋರಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್‌ ಮಂಗಳವಾರ (ಅ.21 ರಂದು) ವಿಚಾರಣೆ ನಡೆಸುವುದಾಗಿ ಹೇಳಿತು.

    ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಮೇ ತಿಂಗಳಲ್ಲಿ ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಪೇಟಾ ಮರು ಪರಿಶೀಲನಾ ಅರ್ಜಿಯನ್ನು ಪೇಟಾ ಸಲ್ಲಿಸಿದೆ.

  • ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆ ದೇಣಿಗೆ ನೀಡಿದ ದಿಗಂತ್ ದಂಪತಿ

    ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆ ದೇಣಿಗೆ ನೀಡಿದ ದಿಗಂತ್ ದಂಪತಿ

    ತ್ತೀಚೆಗೆ ಕೇರಳದ ದೇವಸ್ಥಾನವೊಂದಕ್ಕೆ ಕನ್ನಡತಿ ಪ್ರಿಯಾಮಣಿ ಎಲೆಕ್ಟ್ರಿಕಲ್ ಆನೆಯೊಂದನ್ನು (Electrical Elephant) ದೇಣಿಗೆ ನೀಡಿದ್ದರು. ಇದೀಗ ಸುತ್ತೂರು ಮಠಕ್ಕೆ ಎಲೆಕ್ಟ್ರಿಕಲ್ ಆನೆಯನ್ನು ಉಡುಗೊರೆಯಾಗಿ ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಮತ್ತು ಐಂದ್ರಿತಾ ರೇ  (Aindrita Ray) ದಂಪತಿ ನೀಡಿದ್ದಾರೆ. ಇದನ್ನೂ ಓದಿ:ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

    ಸುತ್ತೂರು ಮಠಕ್ಕೆ ಭೇಟಿ ನೀಡಿ ಎಲೆಕ್ಟ್ರಿಕಲ್ ಆನೆಯನ್ನು ದೇಣಿಗೆ ನೀಡಿದ್ದು, ದಿಗಂತ್ ದಂಪತಿಯ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ದಿಗಂತ್ ದಂಪತಿಯ ಕಾರ್ಯಕ್ಕೆ ಬಿಗ್ ಬಾಸ್ ಬೆಡಗಿ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ನಟ ದಿಗಂತ್ ಕನ್ನಡದ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಐಂದ್ರಿತಾ ರೇ ಕನ್ನಡದ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಆ್ಯಕ್ಟೀವ್ ಆಗಿದ್ದಾರೆ.

  • ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ

    ಮೋದಿ ತೊಟ್ಟ ಪೇಟ ಖರೀದಿಸಿದ ಮೈಸೂರಿನ ಅಭಿಮಾನಿ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ತೊಟ್ಟ ಪೇಟವನ್ನು ಮೈಸೂರಿನ (Mysuru) ಮೋದಿ ಅಭಿಮಾನಿಯೊಬ್ಬರು ಹರಾಜಿನ ಮೂಲಕ ಖರೀದಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕೊಟ್ಟ ಸ್ಮರಣಿಕೆಗಳನ್ನು ಅಕ್ಟೋಬರ್ 14ರಂದು ಈ ಹರಾಜು ಹಾಕಲಾಗಿತ್ತು. ಹರಾಜಿನಲ್ಲಿ ಭಾಗವಹಿಸಿದ್ದ ಮೈಸೂರಿನ ಶ್ರೀರಾಂಪುರ ನಿವಾಸಿ ಶ್ರೀಕಂಠಕುಮಾರ್ 3,300 ರೂಪಾಯಿಗೆ ಒಂದು ಪೇಟವನ್ನು ಖರೀದಿಸಿದ್ದಾರೆ.

    ನಿನ್ನೆ ಆ ಪೇಟ ಶ್ರೀಕಂಠಕುಮಾರ್ ಅವರಿಗೆ ತಲುಪಿದೆ. ಈ ಬಗ್ಗೆ ಮಾತನಾಡಿದ ಅವರು, ಮೋದಿ ಅವರ ಬಗ್ಗೆ ಅವರು ಗುಜರಾತ್‍ನಲ್ಲಿ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಓದಿ ತಿಳಿದುಕೊಂಡಿದ್ದೆ. ಆಗಿನಿಂದಲೂ ಮೋದಿ ಅಭಿಮಾನಿ ಆಗಿದ್ದೆ. ಅದಾದ ಬಳಿಕ ಹರಾಜು ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು ಭಾಗವಹಿಸಿದ್ದೆ. ಮೋದಿ ಅಂದ ಕೂಡಲೇ ಅವರು ತೊಡುವ ಪೇಟಾ ಬಹಳ ಆಕರ್ಷಣಿಯವಾಗಿರುತ್ತದೆ. ಇದರಿಂದಾಗಿ ಪೇಟವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ ಎಂದರು. ಇದನ್ನೂ ಓದಿ: ಧರ್ಮಸ್ಥಳದಿಂದ ಶೃಂಗೇರಿಗೆ ತೆರಳುತ್ತಿದ್ದ ಬಸ್ ಅಪಘಾತ- ಮೂವರ ದುರ್ಮರಣ 

    ಈ ಪೇಟಕ್ಕೆ ಗಾಜಿನ ಶೋಕೆಸ್ ಮಾಡಿ ಇಡುವ ಯೋಚನೆಯಲ್ಲಿದ್ದೇನೆ. ಜೊತೆಗೆ ಅವರು ಪೇಟಕ್ಕೆ ನೀಡಿದ್ದ ಹಣವು ನಮಾಮಿ ಗಂಗಾ ಯೋಜನೆಗೆ ಬಳಕೆಯಾಗುತ್ತದೆ ಎಂಬ ಸಂತಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಆಪ್ ಸೇರಿದ್ದ ಕೆಲವೇ ಗಂಟೆಯಲ್ಲಿ ಕಾಂಗ್ರೆಸ್ ವಾಪಸ್ಸಾದ ಮುಖಂಡರು

    Live Tv
    [brid partner=56869869 player=32851 video=960834 autoplay=true]

  • ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

    ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

    ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲಾಗಿದ್ದೆ ಬಂತು ಆಫರ್ ಗಳ ಮೇಲೆ ಆಫರ್ ಬರುತ್ತಿವೆಯಂತೆ. ಮೊದ ಮೊದಲು ಈ ನಟ ಯಾಕೆ ಹೀಗೆ ಮಾಡಿದರು ಎನ್ನುವ ಮಾತುಗಳು ಕೇಳಿ ಬಂದವು. ಹಲವರು ರಣವೀರ್ ವಿರುದ್ಧ ಸಿಡಿದು ಬಿದ್ದರು, ಕೆಲವರು ಗೇಲಿ ಮಾಡಿದರು. ಇನ್ನೂ ಕೆಲವರು ತಾವೂ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಸಂಭ್ರಮಿಸಿದರು. ಇಷ್ಟೆಲ್ಲಗಳ ನಡುವೆ ರಣವೀರ್ ತಮ್ಮ ಪಾಡಿಗೆ ತಾವು ಸುಮ್ಮನಿದ್ದರು. ಈಗ ಅವರು ಮಾತನಾಡಬೇಕಾದ ಸಂದರ್ಭ ಬಂದಿದೆ.

    ಪ್ರಾಣಿಗಳ ದಯಾ ಸಂಘ ಪೇಟಾ ರಣವೀರ್ ಸಿಂಗ್ ಅವರಿಗೆ ಹೀಗೊಂದು ಮನವಿ ಮಾಡಿದ್ದು, ಪ್ರಾಣಿಗಳ ರಕ್ಷಣೆಗಾಗಿ ನೀವು ಬೆತ್ತಲಾಗಬೇಕೆಂದು ಮನವಿ ಮಾಡಿದೆ. ಈ ಬೆತ್ತಲೆ ಆಗುವುದಕ್ಕೂ ಪ್ರಾಣಿಗಳ ರಕ್ಷಣೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬೆತ್ತಲೆಯಾದರೆ, ಜನರ ಗಮನ ಸೆಳೆಯುವುದು ಸಲೀಸು. ಈ ಸಮಯದಲ್ಲಿ ಪ್ರಾಣಿಗಳ ರಕ್ಷಣೆ ಕುರಿತು ರಣವೀರ್ ಮಾತನಾಡಬಹುದು ಎನ್ನುವ ಉಪಾಯ ಇದರ ಹಿಂದಿದೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

    ಪೇಟಾ ಈ ಹಿಂದೆ ಇಂತಹ ಅನೇಕ ಪ್ರಯೋಗಗಳನ್ನು ಮಾಡಿದೆ. ಅದರಲ್ಲಿ ಗೆಲುವು ಕೂಡ ಕಂಡಿದೆ. ಪ್ರಾಣಿಗಳ ದಯೆ ವಿಷಯದಲ್ಲಿ ಅನೇಕ ಬಾರಿ ಸಿನಿಮಾಗಳ ವಿರುದ್ಧವೇ ಇದು ದಾವೆ ಹೂಡಿದೆ. ಆದರೂ, ಈ ಬಾರಿ ಸಿನಿಮಾ ಕಲಾವಿದರ ಮೂಲಕ ಪ್ರಾಣಿಗಳ ರಕ್ಷಣೆ ಕುರಿತಾಗಿ ಅಭಿಯಾನ ಮಾಡಲು ಹೊರಟಿದೆ. ಪೇಟಾ ಏನೋ ಇಂಥದ್ದೊಂದು ಕನಸು ಕಂಡಿದೆ. ಅದಕ್ಕೆ ರಣವೀರ್ ಸಿಂಗ್ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಹಿಜಬ್, ದುಪ್ಪಟ್ಟ, ಪೇಟ ನಡುವಿನ ವ್ಯತ್ಯಾಸ ಅರಿತುಕೊಳ್ಳಿ: ಸಿದ್ದರಾಮಯ್ಯ ವಿರುದ್ಧ BJP ಕಿಡಿ

    ಹಿಜಬ್, ದುಪ್ಪಟ್ಟ, ಪೇಟ ನಡುವಿನ ವ್ಯತ್ಯಾಸ ಅರಿತುಕೊಳ್ಳಿ: ಸಿದ್ದರಾಮಯ್ಯ ವಿರುದ್ಧ BJP ಕಿಡಿ

    ಬೆಂಗಳೂರು: ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ. ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ ಎಂದು ಸಿದ್ದರಾಮಯ್ಯರ ಮೈಸೂರಿನಲ್ಲಿ ನೀಡಿರುವ ಹೇಳಿಕೆಗೆ ಬಿಜೆಪಿ ಟ್ವೀಟ್ ಮಾಡಿ ಖಂಡಿಸಿದೆ.

    ಟ್ವೀಟ್‍ನಲ್ಲಿ ಏನಿದೆ?: ಮಾನ್ಯ ಸಿದ್ದರಾಮಯ್ಯನವರೇ, ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ಮೊದಲನೆಯದಾಗಿ ಹಿಜಬ್, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ ಎಂದು ವಾಗ್ದಾಳಿ ಮಾಡಿದೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

    ಹಿಜಬ್ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಬ್‍ಗೆ ಅವಕಾಶ ನಿರಾಕರಿಸಲಾಗಿದೆ ಅಷ್ಟೇ. ಹಿಜಾಬ್‍ಗೆ ಎಲ್ಲಿ ವಿರೋಧ ವ್ಯಕ್ತವಾಗಿದೆ ಎನ್ನುವುದರ ಬಗ್ಗೆಯೇ ಸಿದ್ದರಾಮಯ್ಯ ಅವರಿಗೆ ಗೊಂದಲವಿದೆ. ಹಾದಿಬೀದಿಯಲ್ಲಿ, ಕಾಲೇಜಿನ ಆವರಣದಲ್ಲಿ ಹಿಜಬ್ ನಿಷೇಧಿಸಿಲ್ಲ. ವಸ್ತ್ರಸಂಹಿತೆಯ ಪ್ರಕಾರ ತರಗತಿಯಲ್ಲಿ ಅವಕಾಶ ನೀಡಿಲ್ಲ. ಹಿಜಬ್ ಒಳಗೆ ಅಡಗಿರುವ ಅಲ್ಪ ಮತಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಕಿಡಿಕಾರಿದೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ

    ಸಿದ್ದರಾಮಯ್ಯ ಹೇಳಿದ್ದೇನು?: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ  ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತಾರೆ ಅಂದರೆ ಅದರಲ್ಲಿ ತಪ್ಪೇನಿದೆ?. ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.

    ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಹೇಳಿದ್ದಾರೆ.

  • 10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    ನವದೆಹಲಿ: ಈ ಹಿಂದೆ ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಮತ್ತು ತಮಿಳುನಾಡಿನ ಜಲ್ಲಿಕಟ್ಟು ನಿಷೇಧಿಸುವಂತೆ ಆಗ್ರಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಾಣಿ ದಯಾ ಸಂಘ(ಪೇಟಾ)ನೀಡಿದ ಸಲಹೆಗೆ ಅಮುಲ್ ಸಂಸ್ಥೆ ಗರಂ ಆಗಿದೆ.

    ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆಯಾದ ಅಮುಲ್‍ಗೆ ಪೇಟಾ ಪತ್ರ ಬರೆದು ವಿಚಿತ್ರ ಸಲಹೆಯನ್ನು ನೀಡಿದೆ. ಈಗ ಮಾರುಕಟ್ಟೆ ಬದಲಾಗಿದೆ. ದನದಿಂದ ಹಾಲನ್ನು ಕರೆಯುವ ಬದಲು ಸಸ್ಯಗಳ ಉತ್ಪನ್ನಗಳಿಂದ ಕಾರ್ಖಾನೆಗಳಲ್ಲಿ ಹಾಲನ್ನು ತಯಾರಿಸಬೇಕು. ಈ ಬದಲಾವಣೆಯನ್ನು ಅಮುಲ್ ಒಪ್ಪಿಕೊಳ್ಳುತ್ತದೆ ಎಂಬ ಭರವಸೆ ನನ್ನದು ಎಂದು ಹೇಳಿದೆ.

    ಈ ಸಲಹೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಕೆಂಡಾಮಂಡಲವಾಗಿದ್ದಾರೆ. ಹೈನುಗಾರಿಕೆಯನ್ನು ನಂಬಿರುವ ದೇಶದ 10 ಕೋಟಿ ಮಂದಿಗೆ ಪೇಟಾ ಉದ್ಯೋಗ ನೀಡುತ್ತಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಹೈನುಗಾರಿಕೆ ಉದ್ಯೋಗ ಮಾಡುತ್ತಿರುವ ಶೇ.75 ಮಂದಿಗೆ ಭೂಮಿಯೇ ಇಲ್ಲ. ಈ ರೈತರ ಮಕ್ಕಳ ಶಾಲಾ ಶಿಕ್ಷಣಕ್ಕೆ ಹಣ ನೀಡುತ್ತಾ? ದೇಶದ ಬಡ ಜನತೆಗೆ ಇರುವ ಹಾಲಿನ ಅಗತ್ಯವನ್ನು ಕಡಿಮೆ ಬೆಲೆಗೆ ನೀಡುತ್ತಾ? ಲ್ಯಾಬ್ ಗಳಲ್ಲಿ ರಸಾಯನಿಕ ಮತ್ತು ಸಿಂಥೆಟಿಕ್ ವಿಟಮಿನ್ ಬಳಸಿ ತಯಾರಾಗುವ ಈ ಫ್ಯಾಕ್ಟರಿ ಆಹಾರವನ್ನು ಎಷ್ಟು ಮಂದಿ ಖರೀದಿಸಲು ಸಾಧ್ಯ ಎಂದು ಸೋಧಿ ಖಾರವಾಗಿ ಪ್ರಶ್ನಿಸಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪೇಟಾ ಫೋರ್ಬ್ಸ್ ಸುದ್ದಿಯನ್ನು ಉಲ್ಲೇಖಿಸಿ, ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರುಕಟ್ಟೆಯಲ್ಲಿ ಭಾರತ ವಿಶ್ವನಾಯಕ ಎನಿಸಿಕೊಳ್ಳಲಿದೆ. ಪ್ರಾಣಿಗಳ ಜೀವ ಉಳಿಸಲು ಭಾರತದ ರೈತರು ಮತ್ತು ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದೆ.

    ವಿಚಿತ್ರ ಸಲಹೆಗೆ ಜನರು ಗರಂ ಆಗಿದ್ದು ಪೇಟಾ ಇಂಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಿಮಗೆ ಯಾಕೆ ಭಾರತದ ಮೇಲೆಯೇ ಕಣ್ಣು? ವಿದೇಶದಲ್ಲಿ ಕುಳಿತ ನೀವು ನಮಗೆ ಸಲಹೆ ನೀಡುವ ಅಗತ್ಯವಿಲ್ಲ. ಭಾರತದ ಆರ್ಥಿಕತೆಯೆ ಮೇಲೆ ಹೊಡೆತ ನೀಡಲು ಈ ಸಲಹೆ ನೀಡಿದ್ದೀರಾ ಎಂದು ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಐಎಂಎ ವರ್ಸಸ್ ಆರ್ಯುವೇದ, ಪೇಟಾ ವರ್ಸಸ್ ಅಮುಲ್. ಭಾರತದ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ. ಇದರ ಬೇರುಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪೇಟಾ ನೀಡಿದ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.

  • 10 ಸಾವಿರ ಕಾರ್ಮಿಕರಿಗೆ ಅನ್ನ ನೀಡಿದ ನಟಿ ಸನ್ನಿಲಿಯೋನ್

    10 ಸಾವಿರ ಕಾರ್ಮಿಕರಿಗೆ ಅನ್ನ ನೀಡಿದ ನಟಿ ಸನ್ನಿಲಿಯೋನ್

    ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ನಿಂದ ಭಾರತ ನಲುಗುತ್ತಿದೆ. ಇದರ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಕೆಲವೆಡೆ ಲಾಕ್ ಡೌನ್ ಮಾಡಿರುವ ಪರಿಣಾಮ ಅನೇಕ ಮಂದಿ ವಲಸೆ ಕಾರ್ಮಿಕರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇಂತವರಿಗೆ ಅನೇಕ ಮಂದಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅಂತೆಯೇ ಇದೀಗ ಬಾಲಿವುಡ್ ನಟಿ ಸನ್ನಿಲಿಯೋನ್ ಕೂಡ ವಲಸೆ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

    ಬಾಲಿವುಡ್ ನಟಿ ಸನ್ನಿಲಿಯೋನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಸದಾ ಕಷ್ಟಕ್ಕೆ ಮಿಡಿಯುವ ಸನ್ನಿ ಮನ ಕೋವಿಡ್ ಸಂಕಷ್ಟದಲ್ಲಿರುವವರ ಪಾಲಿಗೂ ನೆರವಾಗುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.

    ಪೇಟಾದ ಜೊತೆ ಕೈ ಜೋಡಿಸಿರುವ ಸನ್ನಿ, ರಾಷ್ಟ್ರ ರಾಜಧಾನಿಯಲ್ಲಿ ಹಸಿದಿರುವ ಸುಮಾರು 10 ಸಾವಿರ ಮಂದಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ಸನ್ನಿ ಅವರ ಈ ಕಾರ್ಯವನ್ನು ಉದಯ್ ಫೌಂಡೇಶನ್ ಎಂಬ ಎನ್‍ಜಿಒ ಕೂಡ ಬೆಂಬಲಿಸಿದೆ. ಕಾರ್ಮಿಕರಿಗೆ ಆಹಾರದ ಜೊತೆ ಹಣ್ಣು ಕೂಡ ನೀಡಿದ್ದಾರೆ.

    ಈ ಸಂಬಂಧ ಮಾತನಾಡಿರುವ ಸನ್ನಿಲಿಯೋನ್, ಸದ್ಯ ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಆದರೆ ಸಹಾನುಭೂತಿ ಮತ್ತು ಒಗ್ಗಟ್ಟಿನೊಂದಿಗೆ ನಾವು ಮುಂದೆ ಬರುತ್ತೇವೆ. ಪೆಟಾ ಇಂಡಿಯಾದೊಂದಿಗೆ ಮತ್ತೆ ಕೈಜೋಡಿಸಲು ನನಗೆ ಸಂತೋಷವಾಗಿದೆ. ಈ ಸಮಯದಲ್ಲಿ ಅಗತ್ಯವಿರುವ ಸಾವಿರಾರು ಜನರಿಗೆ ಪ್ರೋಟೀನ್ ತುಂಬಿದ ಸಸ್ಯಾಹಾರಿ ಆಹಾರ ನೀಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಈ ಹಿಂದೆಯೂ ಅನೇಕ ಮಂದಿ ಕಾರ್ಮಿಕರಿಗೆ ಆಹಾರ ನೀಡಿದ್ದಾರೆ. ನಟ ಸಲ್ಮಾನ್ ಖಾನ್ ಕೂಡ ತಮ್ಮ ಟ್ರಕ್‍ಗಳ ಮೂಲಕ ಮುಂಬೈನಲ್ಲಿ ಸಿಲುಕಿರುವ ಕಾರ್ಮಿಕರಿಗೆ ಆಹಾರ ಕಿಟ್‍ಗಳನ್ನು ವಿತರಿಸುತ್ತಿದ್ದಾರೆ. ಸಲ್ಮಾನ್‍ರ ಆಹಾರ ಟ್ರಕ್‍ಗಳು ವರ್ಲಿ ಮತ್ತು ಜುಹು ಪ್ರದೇಶಗಳಲ್ಲಿ ಆಹಾರ ಕಿಟ್‍ಗಳನ್ನು ವಿತರಿಸುತ್ತಿವೆ. ಶಿಲ್ಪಾ ಶೆಟ್ಟಿ ಕೂಡ ತಮ್ಮ ಫೌಂಡೇಶನ್ ಮೂಲಕ ಆಹಾರ ಹಾಗೂ ದಿನಸಿ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.

    ಸೋನು ಸೂದ್, ಭೂಮಿ ಪೆಡ್ನೆಕರ್, ಜಾಕ್ವೆಲಿನ್ ಫರ್ನಾಂಡೀಸ್, ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವಾರು ಗಣ್ಯರು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ಮಧ್ಯೆ ನಾಗರಿಕರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  • ಬೆಂಗಳೂರಿನಲ್ಲಿ ಟಗರು ಬೆಟ್ಟಿಂಗ್ ಭರಾಟೆ ಜೋರು- ಹಳ್ಳಿ ಕ್ರೇಜ್ ಸಿಟಿಗೆ ಶಿಫ್ಟ್

    ಬೆಂಗಳೂರಿನಲ್ಲಿ ಟಗರು ಬೆಟ್ಟಿಂಗ್ ಭರಾಟೆ ಜೋರು- ಹಳ್ಳಿ ಕ್ರೇಜ್ ಸಿಟಿಗೆ ಶಿಫ್ಟ್

    ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಸಮಯದಲ್ಲೇ ಟಗರು ಆಟ ಜೋರಾಗಿದೆ.

    ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದ ಟಗರು ಬೆಟ್ಟಿಂಗ್ ಕ್ರೇಜ್ ಈಗ ನಗರಕ್ಕೆ ಶಿಫ್ಟ್ ಆಗಿದೆ. ಕೆಲಸ ಇಲ್ಲದ ಯುವಕರು ಟಗರು ಆಟದ ಮೂಲ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಜಯನಗರ ಸೇರಿದಂತೆ ನಗರದ ಹಲವು ಕಡೆ ಈಗ ಟಗರು ಕಾಳಗ ಸಖತ್ ಕ್ರೇಜ್ ಸೃಷ್ಟಿಸಿದೆ. ಹೊಡಿ ಮಗಾ ಅನ್ನೋ ಟೀಂ ಇದ್ರಲ್ಲಿ ಸಕ್ರೀಯ ಆಗಿದೆ. ಆದರೆ ಈ ಟಗರು ಕಾಳಗದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಅಕ್ರಮ ಚಟುವಟಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತ ವಿಡಿಯೋಗಳನ್ನು ಕ್ಯೂಪಾ, ಪೇಟಾ ಸೇರಿ ಹಲವು ಪ್ರಾಣಿದಯಾ ಸಂಘಟನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ದೂರು ಕೊಟ್ಟಿದ್ದಾರೆ.

  • ಪ್ರಿಯಾಂಕ-ನಿಕ್ ಮದ್ವೆಗೆ ಪೇಟಾ ಆಕ್ರೋಶ

    ಪ್ರಿಯಾಂಕ-ನಿಕ್ ಮದ್ವೆಗೆ ಪೇಟಾ ಆಕ್ರೋಶ

    ನವದೆಹಲಿ: ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈಗ ಅವರ ವಿರುದ್ಧ ಪೇಟಾ(ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

    ಪ್ರಿಯಾಂಕ ತನ್ನ ಗೆಳೆಯ ನಿಕ್ ಜೋನಸ್ ಜೊತೆ ಡಿ.1 ಹಾಗೂ 2ರಂದು ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದ ಪ್ರಕಾರ ಜೋಧ್‍ಪುರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರಿಯಾಂಕ ಹಾಗೂ ನಿಕ್ ತಮ್ಮ ಮದುವೆಗೆ ಆನೆ ಹಾಗೂ ಕುದುರೆಯನ್ನು ಮೆರವಣಿಗೆಯಲ್ಲಿ ಬಳಸಿದಕ್ಕೆ ಪೇಟಾ ಆಕ್ರೋಶ ವ್ಯಕ್ತಪಡಿಸಿದೆ.

    ಪೇಟಾ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಪ್ರೀತಿಯ ಪ್ರಿಯಾಂಕ ಹಾಗೂ ನಿಕ್. ಮದುವೆಗಾಗಿ ಆನೆಗಳನ್ನು ಹಾಗೂ ಕುದುರೆ ಬಳಸುವುದು ಸರಿಯಲ್ಲ. ಏಕೆಂದರೆ ಪ್ರಾಣಿಗಳನ್ನು ಚಾಟಿಯಿಂದ ನಿಯಂತ್ರಿಸಬೇಕಾಗುತ್ತದೆ. ನಿಮ್ಮ ಮದುವೆಗೆ ನಮ್ಮ ಕಡೆಯಿಂದ ಶುಭಾಶಯಗಳು. ಆದರೆ ಈ ದಿನ ಪ್ರಾಣಿಗಳನ್ನು ಬಳಕೆ ಮಾಡಿದ್ದು ಸರಿಯಿಲ್ಲ” ಎಂದು ಟ್ವೀಟ್ ಮಾಡಿದೆ.

    ಪೇಟಾ ಅವರ ಈ ಟ್ವೀಟ್‍ಗೆ ಅಭಿಮಾನಿಯೊಬ್ಬರು ಪ್ರಿಯಾಂಕ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡಿಲ್ಲ. ಈ ಮೊದಲೇ ನೀವು ಈ ರೀತಿ ಹೇಳುವುದು ಸರಿಯಲ್ಲ ಎಂದು ರೀ-ಟ್ವೀಟ್ ಮಾಡಿದರೆ, ಮತ್ತೊಬ್ಬರು ಭಾರತದಲ್ಲಿ 80% ಜನರು ಮದುವೆ ಮೆರವಣಿಗೆಯಲ್ಲಿ ಕುದುರೆ ಬಳಸುತ್ತಾರೆ ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಡಿ. 1ರಂದು ಹಾಗೂ 2ರಂದು ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಲ್ಲಿ ಮದುವೆಯಾದ ಬಳಿಕ ಪ್ರಿಯಾಂಕ ತಮ್ಮ ಮದುವೆಯ ಫೋಟೋಗಳನ್ನು ಮೊದಲ ಬಾರಿಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‍ನಲ್ಲಿ ಪ್ರಿಯಾಂಕ ಹಾಗೂ ನಿಕ್ ಆರತಕ್ಷತೆ ನಡೆದಿದೆ.

    ಆರತಕ್ಷತೆಯಲ್ಲಿ ಪ್ರಿಯಾಂಕ ಸಿಲ್ವರ್ ಬಣ್ಣದ ಲೆಹೆಂಗಾ ಧರಿಸಿದ್ದರೆ, ನಿಕ್ ಕಪ್ಪು ಬಣ್ಣದ ಉಡುಪನ್ನು ಧರಿಸಿ ಮಿಂಚಿದ್ದಾರೆ. ಇವರಿಬ್ಬರ ಆರತಕ್ಷತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿ ನವಜೋಡಿಯನ್ನು ಶುಭ ಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv