Tag: pesticide

  • ಕಲಬುರಗಿ| ಚೆಕ್ ಡ್ಯಾಂಗೆ ಕ್ರಿಮಿನಾಶಕ ಔಷಧಿ ಸೇರ್ಪಡೆ – ಮೀನುಗಳ ಮಾರಣಹೋಮ

    ಕಲಬುರಗಿ| ಚೆಕ್ ಡ್ಯಾಂಗೆ ಕ್ರಿಮಿನಾಶಕ ಔಷಧಿ ಸೇರ್ಪಡೆ – ಮೀನುಗಳ ಮಾರಣಹೋಮ

    ಕಲಬುರಗಿ: ಎರಡು ಚೆಕ್ ಡ್ಯಾಂಗಳಿಗೆ ಕ್ರಿಮಿನಾಶಕ ಔಷಧಿ ಸೇರ್ಪಡೆಯಾಗಿ ಮೀನುಗಳು ಸಾವನ್ನಪ್ಪಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲ್ಲೂಕಿ ಬೋನಸ್‌ಪುರ ಮತ್ತು ಮೊಗದಂಪುರದಲ್ಲಿ ನಡೆದಿದೆ.

    ಎರಡು ಚೆಕ್ ಡ್ಯಾಂಗಳಿಗೆ ಕ್ರಿಮಿನಾಶಕ (Pesticide) ಔಷಧಿ ಸೇರ್ಪಡೆ ಹಿನ್ನೆಲೆ, ನೀರು ಸಂಪೂರ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ಇದರಿಂದಾಗಿ ಹಲವಾರು ಮೀನುಗಳು ಸಾವನ್ನಪ್ಪಿವೆ. ಯಾರೋ ದುಷ್ಕರ್ಮಿಗಳು ಬೇಕು ಅಂತಾ ಚೆಕ್ ಡ್ಯಾಂನಲ್ಲಿರುವ ನೀರಿಗೆ ರಾಸಾಯನಿಕ ಕ್ರಿಮಿನಾಶಕ ಸೇರ್ಪಡೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೋನಸ್‌ಪುರ ಮತ್ತು ಮೊಗದಂಪುರ ಗ್ರಾಮದ ಜನರಲ್ಲಿ ಆತಂಕ ನಿರ್ಮಾಣವಾಗಿದೆ. ಇದನ್ನೂ ಓದಿ: 14 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ- ಮೂವರು ಸಾವು

    ಜಾನುವಾರುಗಳು ಮತ್ತು ರೈತರು ಕುಡಿಯಲು ಬಳಸುವ ನೀರಿಗೆ ವಿಷ ಸೇರ್ಪಡೆ ಹಿನ್ನೆಲೆ, ಸ್ಥಳಕ್ಕೆ ಚಿಂಚೋಳಿ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ

    ಆಯುಧ ಪೂಜೆಯ ದಿನ ಕ್ರಿಮಿನಾಶಕ ಔಷಧ ಸಾಗಣೆಯ ವಾಹನವೊಂದನ್ನು ಮೊಗದಂಪುರ ಚೆಕ್ ಡ್ಯಾಂ ಬಳಿ ನಿಲ್ಲಿಸಿ ತೊಳೆದಿರುವ ಸಾಧ್ಯತೆಯಿದ್ದು, ಈ ಚೆಕ್ ಡ್ಯಾಂ ನೀರು ಪಕ್ಕದ ಮೊಗದಂಪುರ ಚೆಕ್ ಡ್ಯಾಂ ಕಡೆಗೆ ಹರಿದಿದೆ. ಹೀಗಾಗಿ, ಕ್ರಿಮಿನಾಶಕ ಉಭಯ ಡ್ಯಾಂಗಳ ನೀರಿನಲ್ಲಿ ಹರಡಿಕೊಂಡಿದೆ. ಪ್ರಸ್ತುತ ಕುಂಚಾವರಂ ಪೊಲೀಸರು ಅಂದು ಆ ಸ್ಥಳಕ್ಕೆ ಬಂದಿದ್ದ ವಾಹನ ಯಾವುದು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಂಚಾವರಂ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ಪರಪ್ಪನ ಅಗ್ರಹಾರ ಜೈಲಿಂದ ರಿಲೀಸ್‌

     

  • ಜ್ಯೂಸ್ ಅಂತಾ ಕೀಟನಾಶಕ ಸೇವಿಸಿ ಮಗು ಸಾವು- ಪೋಷಕರ ಆಕ್ರಂದನ

    ಜ್ಯೂಸ್ ಅಂತಾ ಕೀಟನಾಶಕ ಸೇವಿಸಿ ಮಗು ಸಾವು- ಪೋಷಕರ ಆಕ್ರಂದನ

    ರಾಮನಗರ: ಜ್ಯೂಸ್ ಎಂದು ಮನೆಯಲ್ಲಿದ್ದ ಕೀಟನಾಶಕ ಕುಡಿದು ಪುಟ್ಟ ಕಂದಮ್ಮವೊಂದು ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

    ಗ್ರಾಮದ ಪುಷ್ಪ ಹಾಗೂ ಹನುಮಂತು ಎಂಬವರ ಪುತ್ರ ಎರಡು ವರ್ಷದ ಯಶ್ವಿಕ್ (2) ಕೀಟ ನಾಶಕ ಸೇವಿಸಿ ಮೃತಪಟ್ಟ ಮಗು. ಜಮೀನಿಗೆ ಸಿಂಪಡಿಸಿ ಉಳಿದಿದ್ದ ಕೀಟನಾಶಕವನ್ನ ಹನುಮಂತು ಮನೆಯಲ್ಲಿ ಇಟ್ಟಿದ್ದರು. ಈ ವೇಳೆ ಮಗು ಆಟವಾಡುವಾಗ ಕೀಟನಾಶಕದ ಬಾಟೆಲ್ ನೋಡಿ ಜ್ಯೂಸ್ ಎಂದು ಭಾವಿಸಿ ಕುಡಿದಿದೆ. ಇದನ್ನೂ ಓದಿ: ಸ್ನೇಹಿತನನ್ನು ರಕ್ಷಿಸಲು ಹೋಗಿ ವೈದ್ಯ ಸಮುದ್ರಪಾಲು

    ಕೆಲ ಕ್ಷಣಗಳ ಬಳಿಕ ಹೊಟ್ಟೆನೋವಿನಿಂದ ನರಳಾಡುತ್ತಿದ್ದ ಮಗುವನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಕಲಿ ಗೊಬ್ಬರ ತಯಾರಿಕಾ ಅಡ್ಡೆ ಮೇಲೆ ದಾಳಿ

    ನಕಲಿ ಗೊಬ್ಬರ ತಯಾರಿಕಾ ಅಡ್ಡೆ ಮೇಲೆ ದಾಳಿ

    ಮೈಸೂರು: ನಕಲಿ ಗೊಬ್ಬರ ತಯಾರಿಕೆ ಅಡ್ಡೆಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಮಂಡಕಳ್ಳಿ ಬಳಿಯ ಹಳೆ ಕೋಳಿ ಫಾರಂ ಒಂದರಲ್ಲಿ ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಖಚಿತ ಮಾಹಿತಿ ಆಧಾರಿಸಿ
    ಮೈಸೂರು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಧುಲತಾ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.

    ದಾಳಿಯ ವೇಳೆ ಹಲವು ಸಲಕರಣೆಗಳು ಪತ್ತೆಯಾಗಿವೆ. ಅಸಲಿ ಗೊಬ್ಬರಕ್ಕೆ ಮಿಶ್ರಣ ಮಾಡಲು ಶೇಖರಿಸಿಟ್ಟಿದ್ದ ಜೇಡಿಮಣ್ಣಿನ ಚೀಲಗಳು, ಯಂತ್ರೋಪಕರಣಗಳು ಪತ್ತೆಯಾಗಿವೆ.ಈ ಕುರಿತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪ್ಲೇಯಿಂಗ್ 11ನಲ್ಲಿ ಹೆಸರಿಲ್ಲ ಆದ್ರೂ ಬೌಲಿಂಗ್ ಮಾಡಿದ ಪ್ರಸಿದ್ಧ್ ಕೃಷ್ಣ!

    ಈ ಹಳೇ ಕೋಳಿ ಫಾರಂ ಬಾಡಿಗೆಗೆ ಪಡೆದು ನಕಲಿ ಗೊಬ್ಬರ ತಯಾರಿಸಲಾಗುತ್ತಿತ್ತು. ಮೈಸೂರು ಮೂಲದ ಮಹೇಶ್ ಎಂಬ ವ್ಯಕ್ತಿಯಿಂದ ನಕಲಿ ಗೊಬ್ಬರ ತಯಾರಿಕೆ ದಂಧೆ ನಡೆಯುತ್ತಿತ್ತು.

    Live Tv
    [brid partner=56869869 player=32851 video=960834 autoplay=true]

  • ಬೆಳೆದು ನಿಂತ ಬೆಳೆ ಅಧಿಕಾರಿಗಳಿಂದ ನಾಶ – ಕೀಟನಾಶಕ ಸೇವಿಸಿದ ರೈತ ದಂಪತಿ

    ಬೆಳೆದು ನಿಂತ ಬೆಳೆ ಅಧಿಕಾರಿಗಳಿಂದ ನಾಶ – ಕೀಟನಾಶಕ ಸೇವಿಸಿದ ರೈತ ದಂಪತಿ

    ಭೋಪಾಲ್: ಬೆಳೆದು ನಿಂತ ಬೆಳೆಯನ್ನು ಸರ್ಕಾರಿ ಕಂದಾಯ ಇಲಾಖೆ ಅಧಿಕಾರಿಗಳು ನಾಶ ಮಾಡಿದ್ದರಿಂದ ಅಧಿಕಾರಿಗಳ ಮುಂದೆಯೇ ದಲಿತ ರೈತ ದಂಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿ ನಡೆದಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಪೊಲೀಸರು ರೈತ ದಂಪತಿಯ ಮೇಲೆ ಹಲ್ಲೆ ಮಾಡಿ ಅವರನ್ನು ಅಂಬುಲೆನ್ಸ್‌ಗೆ ಎಳೆದು ಹಾಕುತ್ತಿರುವುದನ್ನು ಕಾಣಬಹುದು. ರೈತ ದಂಪತಿಗಳಾದ ರಾಮ್ ಕುಮಾರ್ ಅಹಿರ್ವಾರ್ (38) ಮತ್ತು ಸಾವಿತ್ರಿ ದೇವಿ (35) ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅವರು ಪ್ರಾಣಾಪಾಯದಿಂದ ಪರಾಗಿದ್ದಾರೆ.

    ಸರ್ಕಾರದ ದಾಖಲೆಯ ಪ್ರಕಾರ, 2018ರಲ್ಲಿ ಕಾಲೇಜು ನಿರ್ಮಿಸಲು ಸುಮಾರು 5.5 ಎಕರೆ ಸಾರ್ವಜನಿಕ ಭೂಮಿಯನ್ನು ಮೀಸಲಿಡಲಾಗಿತ್ತು. ಈ ಭೂಮಿಯನ್ನು ರಾಮ್ ಕುಮಾರ್ ಅಹಿರ್ವಾರ್ ಮತ್ತು ಸಾವಿತ್ರಿ ದೇವಿ ಅವರು ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಹಲವು ವರ್ಷಗಳಿಂದ ಅಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ಈಗ ಸರ್ಕಾರ ಈ ಜಾಗದಲ್ಲಿ ಕಾಲೇಜು ನಿರ್ಮಾಣ ಮಾಡಲು ತೀರ್ಮಾನಿಸಿರುವ ಕಾರಣ ನಾವು ಜಾಗವನ್ನು ಖಾಲಿ ಮಾಡಿಸುತ್ತಿದ್ದೇವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ರೈತ ಮಹಿಳೆ ಸಾವಿತ್ರಿ ದೇವಿ, ಇದು ಯಾರ ಜಮೀನು ಎಂದು ನಮಗೆ ಗೊತ್ತಿಲ್ಲ. ಆದರೆ ನಾವು ಬಹಳ ವರ್ಷದಿಂದ ಈ ಜಾಗದಲ್ಲಿ ಕೃಷಿ ಮಾಡುತ್ತಿದ್ದೇವೆ. ಈಗ ನಮ್ಮ ಬೆಳೆದು ನಿಂತ ಬೆಳೆಯನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ. ನಮಗೆ ಮೂರು ಲಕ್ಷ ಸಾಲವಿದೆ, ಅದನ್ನು ಯಾರು ಕೊಡುತ್ತಾರೆ. ಸರ್ಕಾರ ಸಾಲವನ್ನು ಕಟ್ಟುತ್ತದೆಯೇ? ನಮಗೆ ಆತ್ಮಹತ್ಯೆ ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಹೇಳಿದ್ದಾರೆ.

    ಮಂಗಳವಾರ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಅಧಿಕಾರಿಗಳು, ಇದು ಸರ್ಕಾರಿ ಜಾಗ ಎಂದು ದಾಖಲೆಯನ್ನು ತೋರಿಸಿದ್ದಾರೆ. ಆ ನಂತರ ಬೆಳೆದು ನಿಂತು ಬೆಳೆಯನ್ನು ನಾಶ ಮಾಡಿ ಅಲ್ಲಿ ಸುತ್ತಲೂ ಗೋಡೆ ನಿರ್ಮಿಸಲು ಆರಂಭ ಮಾಡಿದ್ದಾರೆ. ಈ ವೇಳೆ ರೈತರು ಇದಕ್ಕೆ ವಿರೋಧ ಮಾಡಿದ್ದಾರೆ. ಆಗ ಪೊಲೀಸ್ ಅಧಿಕಾರಿಗಳು ದಂಪತಿ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬೇಸತ್ತ ರೈತ ದಂಪತಿ ಅಲ್ಲಿ ಅಧಿಕಾರಿಗಳ ಮುಂದೆಯೇ ಕೀಟನಾಶಕ ಸೇವಿಸಿದ್ದಾರೆ.

    ನಾವು ಸ್ಥಳದಲ್ಲಿ ನಡೆದ ಘಟನೆಯ ಬಗ್ಗೆ ವಿಡಿಯೋ ನೋಡಿದ್ದೇವೆ. ಅಲ್ಲಿ ನಮ್ಮ ಅಧಿಕಾರಿಗಳ ತಪ್ಪು ಕಾಣಿಸುತ್ತಿಲ್ಲ. ರೈತ ದಂಪತಿ ವಿಷ ಸೇವಿಸಿದ ನಂತರವೇ ನಮ್ಮ ಅಧಿಕಾರಿಗಳು ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ನಮ್ಮ ಅಧಿಕಾರಿಗಳ ತಂಡ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರದೇ ಇದ್ದರೆ ಅವರು ಸಾವನ್ನಪ್ಪುತ್ತಿದ್ದರು ಎಂದು ಗುಣ ಜಿಲ್ಲೆಯ ಜಿಲ್ಲಾಧಿಕಾರಿ ವಿಶ್ವನಾಥ್ ಅವರು ಮಾಹಿತಿ ನೀಡಿದ್ದಾರೆ.

    ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಸದ್ಯ ಅಧಿಕಾರಿಗಳು ಆ ಜಾಗವನ್ನು ಬಿಟ್ಟು ಬರಬೇಕು. ಸರ್ಕಾರ ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ. ಇತ್ತ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸಿಂಗ್ ಅವರು ಇಂದು ಜಂಗಲ್ ರಾಜ್ಯ ಎಂದು ಸರ್ಕಾರ ಮೇಲೆ ಕಿಡಿಕಾರಿದ್ದಾರೆ.

  • ಶಾಲಾ ಆವರಣದಲ್ಲೇ ಪ್ರಿಯತಮೆಯ ಕತ್ತು ಸೀಳಿ ಕೊಲೆಗೈದು, ತಾನು ವಿಷ ಕುಡ್ದ!

    ಶಾಲಾ ಆವರಣದಲ್ಲೇ ಪ್ರಿಯತಮೆಯ ಕತ್ತು ಸೀಳಿ ಕೊಲೆಗೈದು, ತಾನು ವಿಷ ಕುಡ್ದ!

    ಹೈದರಾಬಾದ್: ತನ್ನ ಪ್ರೀತಿಯನ್ನು ನಿರಾಕರಸಿದಕ್ಕೆ ಕೋಪಗೊಂಡ ಯುವಕನೋರ್ವ ಪ್ರಿಯತಮೆಯ ಕತ್ತು ಸೀಳಿ ಕೊಲೆಗೈದು, ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರೋ ಆಘಾತಕಾರಿ ಘಟನೆಯೊಂದು ನಡೆದಿದೆ.

    ಶನಿವಾರ ತೆಲಂಗಾಣ ರಾಜ್ಯದ ಭದ್ರಾದಿ ಕೊಥೆಗುಡೆಮ್ ಜಿಲ್ಲೆಯಲ್ಲಿ ಶಾಲಾ ಆವರಣದಲ್ಲಿ ಈ ಘಟನೆ ನಡೆದಿದೆ. 26 ವರ್ಷದ ವಿ. ಶ್ರೀನಿವಾಸ್ ರಾವ್ ಎಂಬಾತನೇ ಪ್ರಿಯತಮೆ 24 ವರ್ಷದ ಪ್ರವಲಿಕಾ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ.

    ಪ್ರವಲಿಕಾ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿವಾಸಿಯಾಗಿದ್ದು, ಭದ್ರಾದಿ ಕೊಥೆಗುಡೆಮ್ ನ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಪ್ರತಿದಿನ ಪ್ರವಲಿಕಾಳಿಗೆ ತನ್ನನ್ನು ಮದುವೆ ಆಗಬೇಕೆಂದು ಕಿರುಕುಳ ನೀಡುತ್ತಿದ್ದನು. ಆದ್ರೆ ಪ್ರವಲಿಕಾ ಮಾತ್ರ ಶ್ರೀನಿವಾಸ ಪ್ರೀತಿಯನ್ನು ನಿರಾಕರಿಸಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ಪ್ರವಲಿಕಾಗೆ ಪೋಷಕರು ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು. ಈ ವಿಷಯ ತಿಳಿದು ರೊಚ್ಚಿಗೆದ್ದ ಶ್ರೀನಿವಾಸ್ ಹಾಡಹಗಲೇ ಶಾಲಾ ಆವರಣದಲ್ಲೇ ಆಕೆಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನು ತಂದಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.

    ಘಟನೆಯ ಬಳಿಕ ಪ್ರತ್ಯಕ್ಷದರ್ಶಿಗಳು ಶ್ರೀನಿವಾಸ್ ಬಹಳ ದಿನಗಳಿಂದ ಪ್ರವಲಿಕಾಗೆ ಹಿಂಬಾಲಿಸುವ ಮೂಲಕ ಕಿರುಕುಳ ನೀಡುತ್ತಿದ್ದನು ಎಂದು ತಿಳಿಸಿದ್ದಾರೆ.