Tag: Peshawar Mosque

  • ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಭಯೋತ್ಪಾದಕರಿಗೆ ಏಕೆ ಬಾಗಿಲು ತೆರೆದರು? – ಆತ್ಮಾಹುತಿ ಬಾಂಬ್ ದಾಳಿಗೆ ನವಾಜ್ ಷರೀಫ್ ಪುತ್ರಿ ಖಂಡನೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಪೇಶಾವರದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯನ್ನು (Suicide Bomb Attack) ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರ್ಯಮ್ ನವಾಜ್ (Maryam Nawaz) ಖಂಡಿದ್ದಾರೆ.

    ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹತ್ಯೆಗೀಡಾದ 101 ಜನರ ಸಾವಿಗೆ ಮಾಜಿ ಐಎಸ್‌ಐ (ISI) ಮುಖ್ಯಸ್ಥ ಹಾಗೂ ಪೇಶಾವರ ಕಾರ್ಪ್ಸ್ ಕಮಾಂಡರ್ ಫೈಜ್ ಹಮೀದ್ ಹೊಣೆಗಾರ ಎಂದು ದೂರಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಹುಳಿ-ಸಿಹಿ ರುಚಿಯ ನೆಲ್ಲಿಕಾಯಿ ಜ್ಯಾಮ್ ಮಾಡಿ ನೋಡಿ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ - ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಮ್ರಾನ್ ಖಾನ್ (Imran Khan) ಯಾರನ್ನ ತನ್ನ ಕಣ್ಣು, ಕೈ ಹಾಗೂ ಕಿವಿ ಎಂದು ಕರೆಯುತ್ತಿದ್ದರೋ ಆ ಒಬ್ಬನನ್ನು ಪೇಶಾವರಲ್ಲಿ ನಿಯೋಜಿಸಲಾಗಿತ್ತು. ಅವನೇಕೆ ಭಯೋತ್ಪಾದಕರಿಗೆ ಬಾಗಿಲು ತೆರೆಯಬೇಕಿತ್ತು? ಭಯೋತ್ಪಾದಕರು ನಮ್ಮ ಸಹೋದರರು ಎಂದು ಏಕೆ ಹೇಳಿದ? ಭಯೋತ್ಪಾದಕನನ್ನ ಪಾಕಿಸ್ತಾನಕ್ಕೆ ಆಹ್ವಾನಿಸಿದ್ದೇಕೆ? ಜೈಲಿನಿಂದ ಹಾರ್ಡ್ಕೋರ್ ಭಯೋತ್ಪಾದಕರನ್ನ ಬಿಡುಗಡೆ ಮಾಡಿದ್ದೇಕೆ? ಅವನು (ಜನರಲ್ ಹಮೀದ್) ನಿಜವಾಗಿಯೂ ಪಾಕಿಸ್ತಾನದ ಕಣ್ಣು, ಕೈ ಮತ್ತು ಕಿವಿ ಆಗಿದ್ದರೆ, ಈ ಪರಿಸ್ಥಿತಿ (ಭಯೋತ್ಪಾದನೆಯ) ಸಂಭವಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ನನ್ನ ತಂದೆ ದೇಶವನ್ನು ಭಯೋತ್ಪಾದನೆ ದಾಳಿಯಿಂದ ಮುಕ್ತಗೊಳಿದ್ದರು. ಆದರೆ ಇಮ್ರಾನ್ ಖಾನ್ ಆಡಳಿತದ ಕೆಟ್ಟ ನೀತಿಗಳಿಂದ ಮತ್ತೆ ಭಯೋತ್ಪಾದನೆ ಮರಳಿತು. ನವಾಜ್ ಷರೀಫ್ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದ್ದರೆ, ಇಮ್ರಾನ್ ಖಾನ್ ಅವರ 4 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಾಲು ಮತ್ತು ಜೇನುತುಪ್ಪದ ನದಿಗಳು ಹರಿಯಬೇಕಾಗಿತ್ತು. ಆದರೆ ನವಾಜ್ ಷರೀಫ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ದೇಶವನ್ನು ಉಳಿಸಿದ್ದಾರೆ. ಈ ದೇಶವನ್ನು ಶ್ರೀಲಂಕಾದಂತೆ ಆಗುವುದನ್ನು ತಡೆದಿದ್ದಾರೆ ಎಂದು ಸ್ಮರಿಸಿದರು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಯಾರಿದು ಹಮೀದ್?
    ಐಎಸ್‌ಐ ಮುಖ್ಯಸ್ಥನ ಹುದ್ದೆಯನ್ನು ಪಾಕಿಸ್ತಾನ ಸೇನೆಯಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಪರಿಗಣಿಸಲಾಗಿದೆ. ಇದು ತನ್ನ 75 ವರ್ಷಗಳ ಅಸ್ತಿತ್ವದಲ್ಲಿ ಅರ್ಧಕ್ಕಿಂತ ಹೆಚ್ಚು ವರ್ಷಗಳ ಕಾಲ ದೇಶವನ್ನು ಆಳಿದೆ. 2019ರ ಜೂನ್ ನಿಂದ 2021ರ ನವೆಂಬರ್ ವರೆಗೆ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಮುಖ್ಯಸ್ಥನಾಗಿದ್ದ ಲೆಫ್ಟಿನೆಂಟ್ ಜನರಲ್ ಹಮೀದ್, 2021ರ ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೊದಲ ಉನ್ನತ ಶ್ರೇಣಿಯ ವಿದೇಶಿ ಅಧಿಕಾರಿ ಎನ್ನಿಸಿಕೊಂಡಿದ್ದ. ಕೊನೆಯದಾಗಿ ಅವರನ್ನು ಪೇಶಾವರಕ್ಕೆ ಕಾರ್ಪ್ಸ್ ಕಮಾಂಡರ್ ಆಗಿ ನಿಯೋಜಿಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಪ್ರಾರ್ಥನೆ ಮಾಡುವಾಗ ಭಾರತದಲ್ಲೂ ಕೊಂದಿಲ್ಲ.. ಆದ್ರೆ ಪಾಕಿಸ್ತಾನದಲ್ಲಿ ಆಗಿದೆ: ಮಸೀದಿ ದಾಳಿ ಬಗ್ಗೆ ಪಾಕ್‌ ಸಚಿವ ಹೇಳಿಕೆ

    ಇಸ್ಲಾಮಾಬಾದ್: ಪ್ರಾರ್ಥನೆ ಮಾಡುವ ವೇಳೆ ಭಾರತದಲ್ಲೂ (India) ಕೊಂದಿಲ್ಲ ಎಂದು ಪೇಶಾವರ್‌ನಲ್ಲಿ ಮಸೀದಿ (Peshawar Mosque) ಮೇಲೆ ನಡೆದ ಬಾಂಬ್‌ ದಾಳಿ ಬಗ್ಗೆ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khwaja Asif) ಪ್ರತಿಕ್ರಿಯಿಸಿದ್ದಾರೆ.

    ಪ್ರಾರ್ಥನೆ ಮಾಡುವಾಗ ಭಾರತದಲ್ಲಾಗಲಿ ಅಥವಾ ಇಸ್ರೇಲ್‌ನಲ್ಲಾಗಿ (Israel) ಯಾರನ್ನೂ ಹತ್ಯೆ ಮಾಡಿಲ್ಲ. ಆದರೆ ಅದು ಪಾಕಿಸ್ತಾನದಲ್ಲಿ (Pakistan) ಸಂಭವಿಸಿದೆ ಎಂದು ಆಸಿಫ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    2010-2017 ರ ಭಯೋತ್ಪಾದನಾ ಘಟನೆಗಳ ಕುರಿತು ಮಾತನಾಡಿದ ಸಚಿವರು, “ಈ ಯುದ್ಧವು ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ ಅಧಿಕಾರಾವಧಿಯಲ್ಲಿ ಸ್ವಾತ್‌ನಿಂದ ಪ್ರಾರಂಭವಾಯಿತು. ಪಿಎಂಎಲ್-ಎನ್‌ನ ಹಿಂದಿನ ಅಧಿಕಾರಾವಧಿಯಲ್ಲಿ ಮುಕ್ತಾಯಗೊಂಡಿತು. ನಂತರ ಕರಾಚಿಯಿಂದ ಸ್ವಾತ್‌ವರೆಗೆ ದೇಶದಲ್ಲಿ ಶಾಂತಿ ಸ್ಥಾಪಿಸಲಾಯಿತು” ಎಂದು ನೆನೆಪಿಸಿಕೊಂಡಿದ್ದಾರೆ.

    ಆಫ್ಘನ್ನರು ಪಾಕಿಸ್ತಾನಕ್ಕೆ ಬಂದು ನೆಲೆಸಿದ ನಂತರ ಸಾವಿರಾರು ಜನರು ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ ಎಂದು ಡಾನ್ ವರದಿ ಹೇಳಿದೆ. ಪುನರ್ವಸತಿ ಸೌಲಭ್ಯದಲ್ಲಿರುವ ಜನರ ವಿರುದ್ಧ ಸ್ವಾತ್‌ನ ಜನರು ಪ್ರತಿಭಟನೆ ನಡೆಸಿದಾಗ ಈ ಸಮಸ್ಯೆಗೆ ಪುರಾವೆ ಸಿಕ್ಕಿತು ಎಂದು ಆಸಿಫ್ ತಿಳಿಸಿದ್ದಾರೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟಾಗಬೇಕು ಎಂದು ಇದೇ ವೇಳೆ ಸಚಿವರು ಕರೆ ನೀಡಿದ್ದಾರೆ. ಪೇಶಾವರ್‌ನ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ.

    Live Tvpes
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಪಾಕ್‌ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್‌ನ ತುಂಡರಿಸಿದ ತಲೆ ಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ವಾಯುವ್ಯ ಪೇಶಾವರದ ಮಸೀದಿಯಲ್ಲಿ (Peshawar Mosque) ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಶಂಕಿತ ಉಗ್ರನ ತುಂಡರಿಸಿದ ತಲೆ ಪತ್ತೆಯಾಗಿದೆ.

    ಈಗಾಗಲೇ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ (Suicide Bomb Blast) ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದ್ದು 221 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ ಅವಶೇಷಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ – 89ಕ್ಕೇರಿದ ಸಾವಿನ ಸಂಖ್ಯೆ

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಸ್ಫೋಟಕ್ಕೂ ಮುನ್ನ ಆತ್ಮಾಹುತಿ ದಾಳಿಕೋರ ಪೊಲೀಸರ ಸಾಲಿನಲ್ಲೂ ಇದ್ದ ಸಾಧ್ಯತೆಗಳಿವೆ. ಅಲ್ಲದೇ ಮಸೀದಿ ಪ್ರವೇಶಿಸಲು ಅಧಿಕೃತ ವಾಹನವನ್ನೇ ಬಳಸಿರಬಹುದು. ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಪಾಕಿಸ್ತಾನಿ ತಾಲಿಬಾನ್ (Pakistani Taliban) ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಸಂಘಟನೆಯು ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    2014ರಲ್ಲಿಯೂ ಪಾಕಿಸ್ತಾನಿ ತಾಲಿಬಾನ್ (Pakistani Taliban) ವಾಯುವ್ಯ ನಗರದ ಪೇಶಾವರ್‌ನಲ್ಲಿರುವ ಆರ್ಮಿ ಪಬ್ಲಿಕ್ ಸ್ಕೂಲ್ (ಎಪಿಎಸ್) ಮೇಲೆ ದಾಳಿ ಮಾಡಿ 131 ವಿದ್ಯಾರ್ಥಿಗಳು ಸೇರಿದಂತೆ 150 ಮಂದಿಯನ್ನು ಕೊಂದಿತ್ತು. ಇದನ್ನೂ ಓದಿ: ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್‌ ಸ್ಫೋಟ- 28 ಮಂದಿ ಸಾವು, 150 ಮಂದಿಗೆ ಗಾಯ

    ಏನಿದು ಘಟನೆ?
    ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ (ಜ.30) ಮಧ್ಯಾಹ್ನ 1:40 ಸುಮಾರಿಗೆ ಝುಹರ್ ನಮಾಜ್ ಬಳಿಕ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಮಸೀದಿಯ ಒಂದು ಬದಿ ಕುಸಿದುಬಿದ್ದಿತ್ತು.

    ಪೇಶಾವರ ಮಸೀದಿಯಲ್ಲಿ ಬಾಂಬ್ ಸ್ಫೋಟ - 89ಕ್ಕೇರಿದ ಸಾವಿನ ಸಂಖ್ಯೆ

    ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಸ್ಫೋಟವನ್ನು ಖಂಡಿಸಿದ್ದರು. ಅಲ್ಲದೇ ಈ ಸ್ಫೋಟ ಇಸ್ಲಾಂನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಭಯೋತ್ಪಾದಕರು ಪಾಕಿಸ್ತಾನ ರಕ್ಷಿಸಲು ಕರ್ತವ್ಯ ನಿರ್ವಹಿಸುವವರನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k