Tag: pervez musharraf

  • ಹೆಚ್.ಡಿ ದೇವೇಗೌಡರ ಬಗ್ಗೆ ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವಹೇಳನಕಾರಿ ಟ್ವೀಟ್- ಸಿಟಿ ರವಿ ತರಾಟೆ

    ಹೆಚ್.ಡಿ ದೇವೇಗೌಡರ ಬಗ್ಗೆ ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅವಹೇಳನಕಾರಿ ಟ್ವೀಟ್- ಸಿಟಿ ರವಿ ತರಾಟೆ

    ಬೆಂಗಳೂರು: ಮಾಜಿ ಪ್ರಧಾನಿ, ಕರ್ನಾಟಕದ ಮಣ್ಣಿನ ಮಗ ಹೆಚ್.ಡಿ.ದೇವೇಗೌಡ ಅವರ ಬಗ್ಗೆ ಜಮ್ಮು ಕಾಶ್ಮಿರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.

    ಓಮರ್ ಅಬ್ದುಲ್ಲಾ ಪಾಕಿಸ್ತಾನ ಸರ್ವಾಧಿಕಾರಿ ಅಂತಾನೇ ಕರೆಸಿಕೊಳ್ತಿದ್ದ ಪರ್ವೇಜ್ ಮುಷರಫ್‍ಗೆ ದೇವೇಗೌಡರನ್ನ ಹೋಲಿಸಿದ್ದಾರೆ. ಆಂಗ್ಲ ಮಾಧ್ಯಮವೊಂದು ಕುಲಭೂಷಣ್ ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಲಂಡನ್‍ನಿಂದ ಪರ್ವೇಜ್ ಮುಷರಫ್ ಅವರನ್ನ ಸಂದರ್ಶನ ಮಾಡಿತ್ತು. ಇದಕ್ಕೆ ಟ್ವೀಟ್ ಮಾಡಿದ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ, ಈ ವಿಚಾರದ ಬಗ್ಗೆ ಮಾತನಾಡಲು ಪರ್ವೇಜ್ ಮುಷರಫ್ ಅವರನ್ನ ಕೂರಿಸಿಕೊಳ್ಳಬೇಕಿತ್ತಾ? ಕುಲಭೂಷಣ್ ಬಗ್ಗೆ ಮುಷರಫ್ ಮಾತನಾಡೋದೂ ಒಂದೇ, ಅಭಿವೃದ್ಧಿ ಬಗ್ಗೆ ದೇವೇಗೌಡರನ್ನ ಕೇಳೋದೂ ಒಂದೇ ಅಂತಾ ಅವಹೇಳನ ಮಾಡಿದ್ದಾರೆ.

    ಸಿಟಿ ರವಿ ತರಾಟೆ: ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ಪಕ್ಷಬೇಧ ಮರೆತು ಬಿಜೆಪಿ ಮುಖಂಡ ಸಿ.ಟಿ.ರವಿ ಓಮರ್ ಅಬ್ದುಲ್ಲಾಗೆ ಟ್ವಿಟ್ಟರ್‍ನಲ್ಲೇ ಜಾಡಿಸಿದ್ದಾರೆ. ದೇವೇಗೌಡ ಅವರು ನಿಜವಾದ ಮಣ್ಣಿನ ಮಗ. ಅವರು ದೇಶದ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆಗಳನ್ನ ಓಮರ್ ಅಬ್ದುಲ್ಲಾ ಕುಟುಂಬ ಕನಸಿನಲ್ಲೂ ಮಾಡೋಕಾಗಲ್ಲ ಅಂತ ಟ್ವಿಟ್ಟರ್‍ನಲ್ಲೇ ತಿವಿದಿದ್ದಾರೆ.

    https://www.youtube.com/watch?v=K3PS-1RtJC8