Tag: personal assistant

  • ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ, ಬಿಎಸ್‌ವೈ ಮನೆ ಮೇಲೆ ಐಟಿ ದಾಳಿ: ಎಚ್‍ಡಿಕೆ

    ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ, ಬಿಎಸ್‌ವೈ ಮನೆ ಮೇಲೆ ಐಟಿ ದಾಳಿ: ಎಚ್‍ಡಿಕೆ

    -ಈಗಿನ RSS ದೇಶವನ್ನು ಹಾಳು ಮಾಡುವ ಸಂಘಟನೆ

    ಕಲಬುರಗಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರ ಮನೆ ಮೇಲೆ ಐಟಿ ರೇಡ್ ಬಿಜೆಪಿಯ ಆಂತರಿಕ ಕಿತ್ತಾಟದಿಂದ ಬೆಳಕಿಗೆ ಬಂದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    ಮಾಜಿ ಸಿಎಂ ಬಿಎಸ್‍ವೈ ಹಾಗೂ ಡಿಕೆಶಿ ಆಪ್ತರ ಮೇಲೆ ಐಟಿ ದಾಳಿ ಸಂಬಂಧಿಸಿದಂತೆ ಕಲಬುರಗಿ ಏರ್‌ಪೋರ್ಟ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ಬಗ್ಗೆ ನನಗೆ ಯಾವುದೇ ರೀತಿಯ ಪ್ರತಿಕ್ರಿಯೆ ಇಲ್ಲ. ಆದರೆ ಉಪಚುನಾಣೆ ಸಂದರ್ಭದಲ್ಲಿ ಐಟಿ ದಾಳಿ ಸರ್ವೇ ಸಾಮಾನ್ಯ. ಆದರೆ ಬಿಎಸ್‍ವೈ ಆಪ್ತರ ಮೇಲೆ ದಾಳಿ ನಡೆದಿರುವುದು ಕುತೂಹಲ ಮೂಡಿಸಿದೆ. ಇದರಿಂದ ಅವರ ಪಕ್ಷದಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು. ಇದನ್ನೂ ಓದಿ: ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

    ಉಪಚುನಾಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ಯಾರು ಇವರು ನನಗೆ ಹೇಳೋಕೆ? ಅವರ ಯಾವ ಡೊಣ್ಣೆ ನಾಯಕ? ಅವರ ಪರ್ಮಿಷನ್ ತಗೋಂಡು ಅಭ್ಯರ್ಥಿ ಹಾಕಬೇಕಾ? ಎಲ್ಲಿ ಯಾವ ಅಭ್ಯರ್ಥಿ ನಿಲ್ಲಿಸಬೇಕೋ ಅಲ್ಲಿ ನಿಲ್ಲಿಸುತ್ತೇವೆ. ಅವರಿಗೆ ಪರಿಜ್ಞಾನ ಇದ್ದರೆ ನನ್ನ ಪಕ್ಷದ ಅಭ್ಯರ್ಥಿ ಬಗ್ಗೆ ಮಾತನಾಡಬಾರದು ಎಂದು ಕಿಡಿಕಾರಿದರು.

    ಆರ್‌ಎಸ್‌ಎಸ್‌ ಕುರಿತು ಎಚ್‍ಡಿ ದೇವೆಗೌಡರ ಹೇಳಿಕೆ ವಿಚಾರವಾಗಿ, ಸ್ವಾತಂತ್ರ ಪೂರ್ವದ ಆರ್‌ಎಸ್‌ಎಸ್‌ ಬೇರೆ, ಈಗಿನ ಆರ್‌ಎಸ್‌ಎಸ್‌ ಬೇರೆ. ಈಗಿನ ಆರ್‌ಎಸ್‌ಎಸ್‌ ದೇಶವನ್ನು ಹಾಳು ಮಾಡುವ ಸಂಘಟನೆ. ದೇವೆಗೌಡರು ಹೇಳಿದ್ದು ಆರ್‌ಎಸ್‌ಎಸ್‌ ಸ್ವಾತಂತ್ರ ಪೂರ್ವದ ಸಂಘಟನೆ ಬಗ್ಗೆ ಎಂದರು. ಇದನ್ನೂ ಓದಿ: ದಿಢೀರ್‌ ಆರ್‌ಎಸ್‌ಎಸ್‌ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?

  • ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

    ಬಿಎಸ್‍ವೈ ಆಪ್ತನ ಮನೆ ಮೇಲೆ ಐಟಿ ರೇಡ್

    – ಮಾಜಿ ಸಿಎಂ ಯಡಿಯೂರಪ್ಪಗೆ ಶಾಕ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಉಮೇಶ್ ಸಹಿತ 30ಕ್ಕೂ ಹೆಚ್ಚು ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಯಾರು ಈ ಉಮೇಶ್?
    ಬಿಎಂಟಿಸಿ ಕಂಡೆಕ್ಟರ್ ಆಗಿದ್ದ ಉಮೇಶ್ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಅವರ ಆಪ್ತ ಸಹಾಯಕನಾಗಿ ಕಾರ್ಯನಿರ್ವಹಿಸಿದರು. ಬಳಿಕ ವಿಜಯೇಂದ್ರ ಹಾಗೂ ಬಿಎಸ್‍ವೈ ಇಬ್ಬರ ವ್ಯವಹಾರಗಳನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು. ಮೂಲತಃ ಶಿವಮೊಗ್ಗ ಜಿಲ್ಲೆ ಆಯನೂರಿನವರಾಗಿರುವ ಉಮೇಶ್, ಬಿಎಸ್‍ವೈ ಕುಟುಂಬದ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. 2008ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಸಿಎಂ ಆಪ್ತ ಶಾಖೆಯಲ್ಲಿ ಕೆಲಸ ಮಾಡಿದ್ದ ಬಳಿಕ ಅಧಿಕಾರ ಕಳೆದುಕೊಂಡರೂ ಬಿಎಸ್‍ವೈ ನಂಟು ಬಿಟ್ಟೇ ಇರಲಿಲ್ಲ. ಬಿಎಸ್‍ವೈ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಆಪ್ತ ಸಹಾಯಕನಾಗಿ ಕೆಲಸ ಮಾಡಿದ್ದರು. ಬಿಎಸ್‍ವೈ ಎಲ್ಲಾ ಆಪ್ತ ಖಾಸಗಿ ಕೆಲಸಗಳನ್ನು ನಿರ್ವಹಿಸುತ್ತಿದ್ದ ಉಮೇಶ್ ಇದೀಗ ಬಿಎಸ್‍ವೈ ರಾಜೀನಾಮೆ ಬಳಿಕ ಹಾಲಿ ಸಿಎಂ ಕಚೇರಿಯಲ್ಲಿ ಸಹಾಯಕನಾಗಿ ಸೇರ್ಪಡೆಗೊಂಡಿದ್ದರು. ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ

    ಸಿಎಂ ಆಪ್ತ ಸಹಾಯಕನಾದ್ರೂ ಬಿಎಸ್‍ವೈ ಮನೆಯಲ್ಲೇ ಕೆಲಸ ನಿರ್ವಹಿಸುತ್ತಿದ್ದು, ಯಡಿಯೂರಪ್ಪ ವಿಧಾನಸಭೆ ವಿಪಕ್ಷ ನಾಯಕರಾದಾಗಿಂದಲೂ ಜೊತೆಗೆ ಇರುವ ಉಮೇಶ್ ಶಿವಮೊಗ್ಗ, ಬೆಂಗಳೂರಿನಲ್ಲಿ ನೂರಾರು ಕೋಟಿ ಆಸ್ತಿ ಮಾಡಿರುವ ಆರೋಪ ಕೇಳಿ ಬಂದಿದ್ದು, ವಿಜಯನಗರದಲ್ಲಿ ಒಂದು ಭವ್ಯ ಮನೆಯ ನಿರ್ಮಾಣ ಮಾಡುತ್ತಿರುವ ಉಮೇಶ್ ಅವರ ಮೇಲೆ ಐಟಿ ರೇಡ್ ಆಗಿದೆ.

    ಉಮೇಶ್ ಸಹಿತ 6 ಜನ ಆಪ್ತರ ಮೇಲೂ ದಾಳಿ ನಡೆದಿದ್ದು, ಉಮೇಶ್ ಸ್ನೇಹಿತ ಗುತ್ತಿಗೆದಾರ ಮನೆ ಮೇಲೂ ದಾಳಿ ನಡೆದಿದ್ದು, 30ಕ್ಕೂ ಹೆಚ್ಚು ಸರ್ಕಾರಿ ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ದಾಳಿ ನಡೆದಿದೆ. ನೀರಾವರಿ ಇಲಾಖಡ ಸಹಿತ ಕೆಲ ಕಾಂಟ್ರ್ಯಾಕ್ಟರ್ ಗಳ ಮನೆ ಮೇಲೆ ಐಟಿ ರೇಡ್ ಆಗಿದ್ದು, ಎಲ್ಲರೂ ಕೂಡ ಬಿಎಸ್‍ವೈಗೆ ಆಪ್ತರಾಗಿದ್ದರು. ಇದನ್ನೂ ಓದಿ: 2023ರಲ್ಲೂ ಬೊಮ್ಮಾಯಿ ಸಿಎಂ ಆಗಿ ದಸರಾ ಉದ್ಘಾಟಿಸಲಿದ್ದಾರೆ: ಪ್ರತಾಪ್ ಸಿಂಹ

  • ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ವಿಧಾನಸೌಧದ ಗೇಟ್ ಬಳಿ ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

    ಬೆಂಗಳೂರು: ವಿಧಾನಸೌಧ ಪ್ರವೇಶದ ಗೇಟ್ ಬಳಿ 25.76 ಲಕ್ಷ ರೂ. ಹಣ ಸಿಕ್ಕ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಟೈಪಿಸ್ಟ್ ಮೋಹನ್ ಬಳಿ ಸಿಕ್ಕ ಹಣದ ಹಿಂದೆ ಮತ್ತೊಬ್ಬ ಸಚಿವರ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಆಪ್ತ ಸಹಾಯಕ ಕೃಷ್ಣಮೂರ್ತಿ ಎಂಬವರಿಗೆ ವಿಧಾನಸೌಧ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆ ವೇಳೆ ಟೈಪಿಸ್ಟ್ ಮೋಹನ್ ಕೃಷ್ಣಮೂರ್ತಿ ಅವರ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹಣ ಯಾರಿಗೆ ಸಂಬಂಧಿಸಿದ್ದು ಹಾಗೂ ಯಾವ ಕಾರಣಕ್ಕೆ ಹಣ ತರಲಾಗಿತ್ತು ಎಂಬ ಬಗ್ಗೆ ಉತ್ತರ ನೀಡುವಂತೆ ಕೃಷ್ಣ ಅವರಿಗೆ ನೋಟಿಸ್‍ನಲ್ಲಿ ಪೊಲೀಸರು ಮಾಹಿತಿ ಕೇಳಿದ್ದಾರೆ.

    ಸದ್ಯ ಪೊಲೀಸರು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಸಚಿವ ವೆಂಕಟರಮಣಪ್ಪ ಅವರ ಕೈವಾಡ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಕೃಷ್ಣಮೂರ್ತಿ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವರ ಬಳಿ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಚಿವ ವೆಂಕಟರಮಣಪ್ಪ ಅವರ ಎಲ್ಲಾ ಕಾರ್ಯಗಳನ್ನು ಅವರ ಪುತ್ರ ನೋಡಿಕೊಳ್ಳುತ್ತಿದ್ದು, ಈ ಹಣವನ್ನು ಅವರಿಗೆ ತಲುಪಿಸಲು ತಂದಿದ್ದರು ಎನ್ನಲಾಗಿದೆ.

    ಇಂದು ಪೊಲೀಸರ ವಿಚಾರಣೆಯಲ್ಲಿ ಟೈಪಿಸ್ಟ್ ಮೋಹನ್ ವಿಚಾರಣೆಯನ್ನು ವಿಧಾನಸಭೆ ಪೊಲೀಸರು ನಡೆಸಿದ್ದರು. ಈ ವಿಚಾರಣೆಯಲ್ಲಿ ಮೋಹನ್ ಸಚಿವರ ಆಪ್ತ ಸಹಾಯಕರ ಹೆಸರು ಬಾಯ್ಬಿಟ್ಟಿದ್ದಾನೆ. ಈ ಹಿಂದೆ ವಿಧಾನಸಭೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದರು. ಅಲ್ಲದೇ ಇದಕ್ಕೆ ಕಡಿವಾಣ ಹಾಕುವುದಾಗಿ ಎಚ್‍ಡಿಕೆ ಆಶ್ವಾಸನೆ ನೀಡಿದ್ದರು. ಆದರೆ ಸದ್ಯ ಅವರ ಸರ್ಕಾರದ ಸಚಿವರ ಆಪ್ತ ಸಹಾಯಕರ ಹೆಸರು ಪ್ರಕರಣದಲ್ಲಿ ಕೇಳಿ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

    ಬಿಜೆಪಿ ಯುವ ಮೋರ್ಚಾ ಲೀಡರ್ ಆದೇಶದ ಮೇರೆಗೆ ಈಶ್ವರಪ್ಪ ಪಿಎ ಕಿಡ್ನಾಪ್?

    ಬೆಂಗಳೂರು: ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಈಶ್ವರಪ್ಪ ಅವರ ಪಿಎ ವಿನಯ್ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಅಪಹರಣದ ಹಿಂದೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಕೈವಾಡ ಇದೆ ಎನ್ನುವ ಆರೋಪ ಕೇಳಿ ಬಂದಿದೆ.

    ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ರಾಜೇಂದ್ರ ಅರಸ್ ಆಣತಿಯಂತೆ ನಾವು ವಿನಯ್ ಅವರನ್ನು ಕಿಡ್ನಾಪ್ ಮಾಡಲು ಮುಂದಾಗಿದ್ದು ಎಂದು ವಿಚಾರಣೆ ವೇಳೆ ಹೇಳಿದ ಹಿನ್ನೆಲೆಯಲ್ಲಿ ಪೊಲೀಸರು ರಾಜೇಂದ್ರ ಅರಸ್ ಅವರನ್ನು ಎ1 ಆರೋಪಿಯನ್ನಾಗಿಸಿ ತನಿಖೆ ಮುಂದುವರಿಸುತ್ತಿದ್ದಾರೆ.

    ಪೊಲೀಸರ ಹುಡುಕಾಟದ ಬೆನ್ನಲ್ಲೇ ಕೋರ್ಟ್ ನಿಂದ ರಾಜೇಂದ್ರ ಅರಸ್ ಜಾಮೀನು ಪಡೆದುಕೊಂಡಿದ್ದಾರೆ. ಈ ವೇಳೆ ಕೋರ್ಟ್ ಎರಡು ದಿನದ ಒಳಗಡೆ ವಿಚಾರಣೆಗೆ ಹಾಜರಾಗುವಂತೆ ರಾಜೇಂದ್ರಗೆ ಸೂಚಿಸಿದೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬುಧವಾರ ವಿಚಾರಣೆಗೆ ಹಾಜರಾಗುವುದಾಗಿ ರಾಜೇಂದ್ರ ಅರಸ್ ಪೊಲೀಸರಿಗೆ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಮೇ 11ರಂದು ಮಹಾಲಕ್ಷ್ಮೀ ಲೇಔಟ್ ಬಳಿ ವಿನಯ್ ಅವರ ಮೇಲೆ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ಸುತ್ತುವರಿದು ಅಪಹರಿಸಲು ಯತ್ನಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ವಿನಯ್ ಮೇಲೆ ಹಲ್ಲೆ ನಡೆಸಿದ್ದರು. ಅಪಹರಣಕ್ಕೆ ಯತ್ನಿಸಲು ಮುಂದಾದಾಗ ವಿನಯ್ ರಕ್ಷಣೆಗಾಗಿ ಕೂಗಿಕೊಂಡಿದ್ದರು.