ಮಂಗಳೂರು: ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮೊಗರ್ಪಣೆಯಲ್ಲಿ ನಡೆದಿದೆ.
ಸುಳ್ಯ ಜಯನಗರದ ನಿವಾಸಿ ಮೊಹಮ್ಮದ್ ಸಾಯಿ (39) ಗುಂಡಿನ ದಾಳಿಗೊಳಗಾದ ವ್ಯಕ್ತಿ. ಮೊಹಮ್ಮದ್ ಕಾರು ಹತ್ತುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಕೆಎ 12 ನೋಂದಣಿಯ ಸ್ಕಾರ್ಪಿಯೋ ಕಾರಿನಿಂದ ಗುಂಡು ಹಾರಾಟ ನಡೆದಿದೆ. ಅದೃಷ್ಟವಶಾತ್ ಗುಂಡು ಗುರಿ ತಪ್ಪಿ ಕಾರಿನ ಬಾಗಿಲಿಗೆ ತಾಗಿದೆ. ಈ ವೇಳೆ ಗುಂಡು ತಾಗಿ ಮೊಹಮ್ಮದ್ ಹೊಟ್ಟೆ ಭಾಗಕ್ಕೆ ಸಣ್ಣ ಗಾಯವಾಗಿದೆ.
ತಂಗಿಯ ಮನೆಗೆ ತೆರಳಿ ವಾಪಸ್ ತನ್ನ ಕಾರು ಹತ್ತುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.
ಪಾಟ್ನಾ: ಗ್ಯಾಂಗ್ ವಾರ್‌ನಲ್ಲಿ ಬಿಜೆಪಿಯ ಮಾಜಿ ಶಾಸಕ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವ ಘಟನೆ ನಗರದ ವಿಜಯ್ ನಗರದ ಜನನಿಬಿಡ ಮಾರುಕಟ್ಟೆಯಲ್ಲಿ ನಡೆದಿದೆ.
ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳು ನಡುರಸ್ತೆಯಲ್ಲೇ ಇಬ್ಬರನ್ನು ಹೇಗೆ ಕೊಂದಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗೌತಮ್ ಮತ್ತು ಶಂಭು ಗುಂಡಿನ ದಾಳಿಗೊಳಗಾದ ಚಿತ್ತರಂಜನ್ ಶರ್ಮಾ ಅವರ ಇಬ್ಬರು ಸಹೋದರರು. ಆರೋಪಿಗಳು ಮತ್ತು ಸಂತ್ರಸ್ತರು ಮೋಟಾರ್ ಸೈಕಲ್ ಚೇಸ್‍ನಲ್ಲಿ ತೊಡಗಿದ್ದರು. ನಂತರ ಅವರು ಗೌತಮ್ ಮೇಲೆ ಗುಂಡು ಹಾರಿಸಿದ್ದಾರೆ. ಒಮ್ಮೆ ಬೈಕ್‍ನಿಂದ ಬಿದ್ದ ಆರೋಪಿಗಳು ಹತ್ತಿರದಿಂದಲೇ ಗೌತಮ್ ತಲೆಗೆ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ದುಷ್ಕರ್ಮಿಗಳು ಶಂಬು ಅವರ ಮೇಲೂ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದು, ಜನ ಗುಂಪು ಸೇರುತ್ತಿರುವುದನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಇತ್ತ ಮಾರುಕಟ್ಟೆಯಲ್ಲಿದ್ದ ಸಾರ್ವಜನಿಕರಲ್ಲಿ ಭಯ, ಗಾಬರಿ ಆವರಿಸಿತು. ಗಾಯಗೊಂಡ ಇಬ್ಬರ ಪೈಕಿ ಗೌತಮ್ ಸ್ಥಳದಲ್ಲೇ ಮೃತಪಟ್ಟರೆ, ಶಂಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ
ಘಟನಾ ಸ್ಥಳದಿಂದ ನಾವು ಅರ್ಧ ಡಜನ್ ಖಾಲಿ ಕಾಟ್ರ್ರಿಡ್ಜ್‍ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‍ಎಸ್‍ಪಿ) ಮಾನವಜಿತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಕಲಬುರಗಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನನ್ನ ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೋಲೆಗೈದ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದ ಭೀಮನಗರ ಬಡಾವಣೆ ನಿವಾಸಿ ವಿಜಯ ಕಾಂಬಳೆ (25) ಕೊಲೆಗೀಡಾದ ಯುವಕ. ವಿಜಯ ಅನ್ಯಕೋಮಿನ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು. ಇದೇ ಕಾರಣಕ್ಕೆ ಯುವತಿಯ ಕುಟುಂಬಸ್ಥರು ವಿಜಯನನ್ನು ಕೊಲೆಗೈದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ದೈನಂದಿನಂತೆ ವಾಡಿ ಪಟ್ಟಣದಲ್ಲಿ ಓಡಾಡಿಕೊಂಡಿದ್ದ ವಿಜಯನನ್ನು ರೈಲ್ವೆ ತಡೆಗೋಡೆ ಹತ್ತಿರ ತಡೆದು ಜಗಳ ತೆಗೆದ ದುಷ್ಕರ್ಮಿಗಳು, ಮಾರಕಾಸ್ತ್ರ, ಕಲ್ಲು, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲಿದ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಇಂದು ರಾಜ್ಯಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ
ಪಾಟ್ನಾ: ಇಬ್ಬರು ದುಷ್ಕರ್ಮಿಗಳು ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ ಚಾಕುವಿನಿಂದ ಇರಿದ ಘಟನೆ ಗುರುಗ್ರಾಮದ ಡಿಎಲ್‍ಎಫ್ 3ನೇ ಹಂತದ ಪ್ರದೇಶವೊಂದರಲ್ಲಿ ಸೋಮವಾರ ನಡೆದಿದೆ.
ಗುರುಗ್ರಾಮದ ಡಿಎಲ್‍ಎಫ್ 3ನೇ ಹಂತದ ಪ್ರದೇಶದ ನಾಥುಪುರದಲ್ಲಿ 23 ವರ್ಷದ ಮಹಿಳೆಯೊಬ್ಬಳ ಮೇಲೆ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿ ಚಾಕುವಿನಿಂದ ಇರಿದಿದ್ದಾರೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ. ಆರೋಪಿಯನ್ನು ಬಿಹಾರ ನಿವಾಸಿ ಅನಿಲ್ ಠಾಕೂರ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರೇಪ್ ಕೇಸ್ ದಾಖಲಿಸಲು ಠಾಣೆಗೆ ಹೋದ ಬಾಲಕಿ ಮೇಲೆ ಪೊಲೀಸ್‌ನಿಂದಲೂ ಅತ್ಯಾಚಾರ!
ಗಂಭೀರ ಗಾಯಗೊಂಡ ಮಹಿಳೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸಂತ್ರಸ್ತೆಯ ಪತಿ, ಆಟೋರಿಕ್ಷಾ ಚಾಲಕನಾಗಿದ್ದು, ಪೊಲೀಸ್ ದೂರಿನಲ್ಲಿ ತಮ್ಮ ಹೆಂಡತಿಯಿಂದ ಕರೆ ಬಂದಿತ್ತು. ಇಬ್ಬರು ಪುರುಷರು ನನ್ನ ಮೇಲೆ ಅತ್ಯಾಚಾರವೆಸಗಿ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಿದಳು. ನಾನು ಸ್ಥಳದ ಬಗ್ಗೆ ಅವಳನ್ನು ಕೇಳಿದಾಗ, ಅವಳು ಅದನ್ನು ಬಹಿರಂಗಪಡಿಸಲು ಸಾಧ್ಯವಾಗಲಿಲ್ಲ. ಆದರೆ ಹೇಗಾದರೂ ಅವಳು ಮನೆಗೆ ತಲುಪಿದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿನಗರ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಲಕ್ಷ್ಮೀಕಾಂತ್ ನೇಮಕ
ಮಹಿಳೆಯ ಹೇಳಿಕೆಯನ್ನು ಇನ್ನೂ ದಾಖಲಿಸಿಕೊಳ್ಳಬೇಕಾಗಿದೆ. ಈಗಾಗಲೇ ಪತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪತಿಯ ದೂರಿನ ಆಧಾರದ ಮೇಲೆ ಇಬ್ಬರ ವಿರುದ್ಧವು ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುಂಬೈ: ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ದುಷ್ಕರ್ಮಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಐಪಿಎಲ್ ಸೀಸನ್ 15 ಮಾರ್ಚ್ 26 ರಿಂದ ಆರಂಭವಾಗಲಿದೆ. ಎಲ್ಲಾ ತಂಡಗಳ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಮುಂಬೈನ ಮೂರು ಸ್ಟೇಡಿಯಂಗಳಲ್ಲಿ ಅಂದರೆ ವಾಂಖೆಡೆ, ಬ್ರಾಬನ್ ಮತ್ತು ಡಿವೈ ಪಾಟೀಲ್‍ನಲ್ಲಿ ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಎಲ್ಲಾ ತಂಡಗಳ ಆಟಗಾರರು ಮುಂಬೈ ಕಡೆ ಪ್ರಯಾಣಿಸುತ್ತಿದ್ದಾರೆ. ಇದೆಲ್ಲದರ ನಡುವೆ ಆಟಗಾರರ ಭದ್ರತೆಯಲ್ಲಿ ಭಾರೀ ಲೋಪ ಕಂಡುಬಂದಿದೆ.
ಮಾರ್ಚ್ 16 ರಂದು, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಆಟಗಾರರನ್ನು ಕರೆತರಲು 5-ಸ್ಟಾರ್ ಹೋಟೆಲ್‍ನ ಹೊರಗೆ ನಿಲ್ಲಿಸಿದ್ದ ಐಷಾರಾಮಿ ಬಸ್‍ನ ಗಾಜುಗಳನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ಸಿಎಂ ಏನೇ ಮಾತಾಡಲಿ, ರಾಜ್ಯದಲ್ಲಿ ಜನ ಬದಲಾವಣೆ ಬಯಸಿದ್ದಾರೆ: ಡಿಕೆಶಿ
Mumbai | An FIR has been registered against 5-6 unknown persons under sections 143,147,149,427 of IPC for allegedly attacking the Delhi Capital IPL team parked bus, police said pic.twitter.com/aED8Z1Hd5G
ದೆಹಲಿ ಕ್ಯಾಪಿಟಲ್ ಐಪಿಎಲ್ ತಂಡದ ನಿಂತಿದ್ದ ಬಸ್ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಐಪಿಸಿಯ 143, 147, 149, 427 ಸೆಕ್ಷನ್‍ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್
ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಪ್ಯಾಲೇಸ್ ಎಂಬ ಹೋಟೆಲ್‍ನಲ್ಲಿ ದೆಹಲಿ ತಂಡ ತಂಗಿದೆ. ಪ್ರಸಿದ್ಧವಾದ ‘ಗೇಟ್‍ವೇ ಆಫ್ ಇಂಡಿಯಾ’ ಈ ಹೋಟೆಲ್‍ಗೆ ತುಂಬಾ ಹತ್ತಿರದಲ್ಲಿದ್ದು, ಇದು ವಾಂಖೆಡೆ ಸ್ಟೇಡಿಯಂಗೆ ಕೂಡ ಹತ್ತಿರದಲ್ಲಿದೆ.
ದೆಹಲಿ ಕ್ಯಾಪಿಟಲ್ಸ್ ಕಳೆದ ವಾರವಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022ಗಾಗಿ ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್, ವೇಗದ ಬೌಲರ್ ಅನ್ರಿಚ್ ನಾಟ್ರ್ಜೆ ಮತ್ತು ಹೊಸ ಆಟಗಾರ ಡೇವಿಡ್ ವಾರ್ನರ್ ಹೊಸ ಜೆರ್ಸಿಯೊಂದಿಗೆ ಪೋಸ್ ನೀಡಿದ್ದರು.
ಬೆಂಗಳೂರು: ಅಂಗಡಿ ಮಾಲೀಕರ ಬ್ಯಾಂಕ್ ಖಾತೆಯಿಂದ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಹಣವನ್ನು ಆನ್‍ಲೈನ್ ಮೂಲಕ ವಂಚಿಸಿ ಪರಾರಿಯಾಗಿರುವ ಘಟನೆ ನಗರದ ಹೊರವಲಯದ ಆನೇಕಲ್ ಪಟ್ಟಣದಲ್ಲಿ ನಡೆದಿದೆ.
ಆನೇಕಲ್ ಪಟ್ಟಣದ ತುಳಸಿ ಕಲೆಕ್ಷನ್ ಬಟ್ಟೆ ಅಂಗಡಿ ಮತ್ತು ಸೂರ್ಯ ಹಾರ್ಡ್‍ವೇರ್ ಅಂಗಡಿಯವರಿಗೆ ವಂಚಿಸಿದ್ದಾರೆ. ದುಷ್ಕರ್ಮಿಗಳು ಭಾರತ್ ಪೇ ಕ್ಯೂ ಆರ್ ಕೋಡ್ ಅಪ್ಡೇಟ್ ಮಾಡಿಸಿಕೊಡುವುದಾಗಿ ಸುಳ್ಳು ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಇದನ್ನೂ ಓದಿ:ಬಸಪ್ಪನಿಗೆ ಚಮಚದಲ್ಲಿ ಹಾಲು ಕುಡಿಸಿದ ಭಕ್ತರು!
ಬೆಂಗಳೂರು: ದುಷ್ಕರ್ಮಿಗಳು ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ಯುವಕನಿಗೆ ಲಾಂಗ್ ಮಚ್ಚು ತೋರಿಸಿ ದರೋಡೆ ಮಾಡಿದ ಘಟನೆ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12 ಗಂಟೆಗೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೈಕ್‍ನಲ್ಲಿ ಫುಡ್ ಡೆಲಿವರಿ ಕೊಡಲು ಹೋಗುತ್ತಿದ್ದ ರಾಜು ಎಂಬ ಯುವಕನ ಮೇಲೆ ದಾಳಿ ನಡೆದಿದೆ. ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿದ್ದು, ಮಧ್ಯರಾತ್ರಿ ದರೋಡೆ ಮಾಡಿದ್ದಾರೆ. ಪುಂಡರು ಯುವಕನ ಬಳಿ ಇದ್ದ ಮೊಬೈಲ್, ಹಣ ಸೇರಿ ಬೈಕ್ ಸಮೇತ ಕಿತ್ತುಕೊಂಡು ಪರಾರಿಯಾಗಿದ್ದಾರೆ. ದಮ್ಮಯ್ಯ ಅಂತ ಬೇಡಿದರೂ ಬಿಡದೇ ಲಾಂಗ್ ಬೀಸಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಆಫ್‍ಲೈನ್ ಕ್ಲಾಸ್‍ಗೆ ಹೋಗು ಅಂದಿದ್ದಕ್ಕೆ ಹುಡುಗಿ ಆತ್ಮಹತ್ಯೆ
5 ಮಂದಿ ದುಷ್ಕರ್ಮಿಗಳ ಕೃತ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ದುಷ್ಕರ್ಮಿಗಳು ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದ ಸಿಂದಗಿ-ಜೇವರ್ಗಿ ರಸ್ತೆಯಲ್ಲಿ ನಡೆದಿದೆ.
ಪಟ್ಟಣದ ಶಿವಶಂಕರ ಬಡಾವಣೆಯ ನಿವಾಸಿಯಾದ ಆಸೀಫ್ ಮೆಹಬೂಬ್ ಜಿನಾವರ್ ಹತ್ಯೆಯಾದ ವ್ಯಕ್ತಿ. ಆಸೀಫ್ ಕೊಲೆಗೆ ಪ್ರೀತಿಯೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ತಡರಾತ್ರಿ ಆಟೋ ಚಾಲಕನು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಹತ್ಯೆ ನಡೆದಿದೆ. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು
ಬೆಂಗಳೂರು: ನಗರದಲ್ಲಿ ದಿನೇ ದಿನೇ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಈ ಪುಂಡರ ಹಾವಳಿ ತಡೆಯೋದೇ ಪೊಲೀಸರಿಗೊಂದು ಸವಾಲಾಗಿ ಪರಿಣಮಿಸಿದೆ. ಬುಧವಾರ ತಡರಾತ್ರಿ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಯಡಿಯೂರಿನ ಕಾಲೋನಿಯಲ್ಲಿ ಪುಂಡರು ತಮ್ಮ ಆಟಾಟೋಪ ಮೆರೆದಿದ್ದಾರೆ.
ಮೂರು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯ ಅಕ್ಕ ಪಕ್ಕದಲ್ಲಿ ನಿಲ್ಲಿಸಿದ್ದ ಇಪ್ಪತ್ತಕ್ಕೂ ಹೆಚ್ಚು ಕಾರು, ಆಟೋಗಳ ಮೇಲೆ ಲಾಂಗು ಮಚ್ಚಿನಿಂದ ಮನಸೋ ಇಚ್ಚೆ ಬೀಸಿ ಗಾಜನ್ನ ಪುಡಿಗೈದಿದ್ದಾರೆ. ಅಷ್ಟೇ ಅಲ್ಲದೆ ದಾರಿಹೋಕರ ಮೇಲೂ ಲಾಂಗುಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ನೂತನ್ ಗೌಡ ಎಂಬವರ ಮೇಲೂ ಲಾಂಗು ಬೀಸಿ ಗಂಭೀರ ರೀತಿಯಲ್ಲಿ ಗಾಯಗೊಳಿಸಿದ್ದಾರೆ. ಅದೇ ರೀತಿ ಗಂಭೀರ ಗಾಯಗೊಂಡಿರುವ ಆನಂದ್ ಎಂಬವರು ಕೂಡ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಈಗಾಗಲೇ ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದಾರೆ. ಸದ್ಯ ಆರೋಪಿಗಳ ಪತ್ತೆಗಾಗಿ ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.
ಬೆಂಗಳೂರು: ನಗರದಲ್ಲಿ ಸುಲಿಗೆಗಾರರ ಹವಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಸ್ತೆ ಬದಿಯಲ್ಲಿ ನಿಲ್ಲಿಸುವ ಕ್ಯಾಬ್‍ಗಳಲ್ಲಿ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳ ತಂಡವೊಂದು ಹೊಯ್ಸಳ ಪೊಲೀಸರ ಮೇಲೆ ದಾಳಿಯ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
ಎರಡು ಡಿಯೋ ಬೈಕ್ ನಲ್ಲಿ ಮುಸುಕು ಹಾಕಿಕೊಂಡು ನಾಲ್ವರು ಸುಲಿಗೆಕೋರರು ಬಂದಿದ್ದಾರೆ. ಈ ವೇಳೆ ನಗರದ ಬಿಇಎಲ್ ಸರ್ಕಲ್‍ನಲ್ಲಿ ರಾತ್ರಿ ಸುಮಾರು 2.30 ಕ್ಕೆ ಪಾರ್ಕ್ ಮಾಡಿದ್ದ ಕ್ಯಾಬ್ ಚಾಲಕರಿಗೆ ಲಾಂಗ್ ಮಚ್ಚುಗಳನ್ನು ತೋರಿಸಿ ಕ್ಯಾಬ್ ಚಾಲಕರ ಬಳಿಯಿದ್ದ ಹಣ, ಪರ್ಸ್, ಮೊಬೈಲ್ ಕಸಿದುಕೊಂಡು ಬಿಇಎಲ್ ಸರ್ಕಲ್ ನಿಂದ ಗಂಗಮ್ಮನಗುಡಿ ಸರ್ಕಲ್ ಕಡೆಗೆ ಪರಾರಿಯಾಗಿದ್ದಾರೆ.
ಹಣ ಕಳೆದುಕೊಂಡ ಕ್ಯಾಬ್ ಚಾಲಕ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದರು. ರಾತ್ರಿ ಗಸ್ತಿನಲ್ಲಿದ್ದ ಜಾಲಹಳ್ಳಿ ಪೊಲೀಸ್ ಹೊಯ್ಸಳ ಸಿಬ್ಬಂದಿ ದರೋಡೆಕೋರರ ಬೆನ್ನತ್ತಿದ್ದಾರೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ತಮ್ಮ ಬಳಿಯಿದ್ದ ಲಾಂಗ್ ಮಚ್ಚಿನಿಂದ ದರೋಡೆಕೋರರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ಪರಿಣಾಮ ಹೋಂಗಾರ್ಡ್ ಹನುಮಂತರಾಜು ಎಂಬವರ ತಲೆಗೆ ಲಾಂಗಿನಿಂದ ಹೊಡೆದು ಪರಾರಿಯಾಗಿದ್ದಾರೆ.
ಸದ್ಯಕ್ಕೆ ಹೋಂಗಾರ್ಡ್ ಹನುಮಂತರಾಜು ಅವರನ್ನು ಕೆ ಸಿ ಜನರಲ್ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಯ್ಸಳದಲ್ಲಿದ್ದ ಎಎಸ್‍ಐ ಮೋಪುರಿ ಎಂಬವರು ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಈ ಸಂಬಂಧ ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಬಂಧನಕ್ಕೆ ಬಲೆ ಬಿಸಿದ್ದಾರೆ.