Tag: Permission

  • ಲಂಚ ಪಡೆದ ಅರಣ್ಯಾಧಿಕಾರಿಗೆ ಸರ್ಕಾರದಿಂದ್ಲೇ ಬಂಪರ್ ಗಿಫ್ಟ್!

    ಲಂಚ ಪಡೆದ ಅರಣ್ಯಾಧಿಕಾರಿಗೆ ಸರ್ಕಾರದಿಂದ್ಲೇ ಬಂಪರ್ ಗಿಫ್ಟ್!

    ಬೆಂಗಳೂರು: ಭ್ರಷ್ಟಾಚಾರ ಆರೋಪವಿದ್ರೂ ಉಪವಲಯ ಅರಣ್ಯಾಧಿಕಾರಿಯಾಗಿದ್ದ ವಿಜಯ್ ಕುಮಾರ್‍ಗೆ ಅರಣ್ಯಾಧಿಕಾರಿಯಾಗಿ ಸರ್ಕಾರದಿಂದ ಬಡ್ತಿ ನೀಡಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಲಂಚ ಹೊಡೆಯೋ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ಪ್ರಮೋಷನ್? ದೂರು ಕೊಟ್ಟರೂ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ರಕ್ಷಣೆ ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಏನಿದು ಆರೋಪ?:
    ಮನೆಯ ಕಾಂಪೌಂಡ್‍ನಲ್ಲಿದ್ದ ಹಳೆ ಮರ ತೆರವಿಗೆ ಅನಮತಿ ಕೋರಿ ಬೆಂಗಳೂರಿನ ಶಾಂತಿನಗರದ ನಿವಾಸಿಯೊಬ್ಬರು, ಶ್ರೀನಿವಾಸ್ ಮೂಲಕ ಅರ್ಜಿ ಸಲ್ಲಿಸಿದ್ರು. ಆದ್ರೆ ಅರಣ್ಯಾಧಿಕಾರಿ ವಿಜಯ್ ಕುಮಾರ್ ಎಂಬವರು ಸುಮಾರು 50 ಸಾವಿರ ಆಗುತ್ತೆ ಅಂತ ಹೇಳಿದ್ದರು. ಈ ವೇಳೆ 50 ಸಾವಿರ ನಾವು ನಿಮಗೆ ಏನಕ್ಕೆ ನೀಡಬೇಕೆಂದು ಪ್ರಶ್ನಿಸಿದ್ದೆವು. ಆವಾಗ ಅಧಿಕಾರಿ, ಇಲ್ಲಪ್ಪ ಎಲ್ಲರೂ ಹಣ ತಗೊಳ್ತಾರೆ. ಇದೆಲ್ಲಾ ಮಾಮೂಲಿ ಅಂದರು.

    ಇದರಿಂದ ಸಂಶಯಗೊಂಡು ಆಯ್ತು ಅಂದ್ಬಿಟ್ಟು 5 ಸಾವಿರ ಅಡ್ವಾನ್ಸ್ ಕೊಟ್ಟು ಅದರ ವಿಡಿಯೋ ಆಡಿಯೋ ಮಾಡಿದ್ವಿ. ಈ ಬಗ್ಗೆ ಕ್ರಮಕೈಗೊಳ್ಳಿ ಅಂತ ಹೇಳಿದ್ರೂ ಇದೂವೆರೆಗೆ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಲು ಹೋದ್ರೆ ಅವರೇ ನಮ್ಮನ್ನು ಗದರಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ಅಧಿಕಾರಿಗಳು ಲಂಚ ತೆಗೆದುಕೊಳ್ತಾರೆ ಅಂತ ಹೇಳೋಕೆ ನಾಚಿಕೆಯಾಗುತ್ತದೆ. ಹೀಗಾಗಿ ವಿಜಯ್ ಕುಮಾರ್ ಅವರ ವಿರುದ್ಧ ದಯವಿಟ್ಟು ಕ್ರಮಕೈಗೊಂಡು ನ್ಯಾಯದೊರಕಿಸಿ ಕೊಡಬೇಕೆಂದು ಮನೆ ಮಾಲೀಕ ಶ್ರೀನಿವಾಸ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ರು.

    ಆದ್ರೆ ಉಪವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್ ಮಾತ್ರ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಶ್ರೀನಿವಾಸ್ ಈ ರೀತಿ ಮಾಡುತ್ತಿದ್ದಾರೆ ಅಂತ ಹೇಳುವ ಮೂಲಕ ಪ್ರಕರಣವನ್ನು ಅಲ್ಲಗಳೆದಿದ್ದಾರೆ. ಒಟ್ಟಿನಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲ್ಸ ಆಗುತ್ತೆ, ಇಲ್ಲಾಂದ್ರೆ ಇಲ್ಲ. ನನಗೊಬ್ಬನಿಗೇ ಅಲ್ಲ ಅಂತ ಹೇಳಿದ್ರು. ಲಂಚಕ್ಕೆ ಕೈಯೊಡ್ಡಿದ ಅಧಿಕಾರಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.

  • ಹಿರಿಯ ನಟಿಯ ಅನುಮತಿ ಪಡೆದು ಅಂಬಿ ಹುಟ್ಟುಹಬ್ಬದಲ್ಲಿ ಯಶ್ ಭಾಗವಹಿಸಿದ್ರು!

    ಹಿರಿಯ ನಟಿಯ ಅನುಮತಿ ಪಡೆದು ಅಂಬಿ ಹುಟ್ಟುಹಬ್ಬದಲ್ಲಿ ಯಶ್ ಭಾಗವಹಿಸಿದ್ರು!

    ಬೆಂಗಳೂರು: ಹಿರಿಯ ನಟಿ ಅನುಮತಿ ಪಡೆದು ರಾಕಿಂಗ್ ಸ್ಟಾರ್ ಯಶ್ ರೆಬಲ್ ಸ್ಟಾರ್ ಅಂಬರೀಷ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    66ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಂಬರೀಷ್‍ಗೆ ಬೆಂಗಳೂರಿನ ಕಲಾವಿದರ ಸಂಘದಿಂದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೊದಲು ಯಶ್ ಅವರು ಯಶ್ ಹಿರಿಯ ನಟಿ ಸುಮಲತಾರಿಂದ ಅನುಮತಿ ಪಡೆದು ರಾಧಿಕಾ ಪಂಡಿತ್ ಅವರನ್ನು ಬಿಟ್ಟು ಒಬ್ಬರೇ ಪಾಲ್ಗೊಂಡಿದ್ದರು.

    ಯಶ್‍ಗೆ ಗಡ್ಡ ತೆಗೆಯುವಂತೆ ಹಲವು ದಿನಗಳ ಹಿಂದೆ ಅಂಬರೀಷ್ ವಾರ್ನ್ ಮಾಡಿದ್ದರು. ಆದರೆ ಯಶ್ ಕೆಜಿಎಫ್ ಸಿನಿಮಾ ಮುಗಿದು ಪ್ರಮೋಶನ್ ಆ್ಯಕ್ಟಿವಿಟಿ ಮುಗಿಯೋವರೆಗೂ ಗಡ್ಡ ತೆಗೆಯುವಂತಿಲ್ಲ. ಹಾಗಾಗಿ ಗಡ್ಡ ತೆಗೆಯದೇ ಅಂಬಿ ಮುಂದೆ ಹೋದರೇ ಬೈಯುತ್ತಾರೋ ಏನೋ ಎಂದು ಮೊದಲು ನಟಿ ಸುಮಲತಾಗೆ ಕಾಲ್ ಮಾಡಿ ಕನ್ಫರ್ಮ್ ಮಾಡಿಕೊಂಡಿದ್ದಾರೆ. ಅನಂತರವಷ್ಟೇ ಅಂಬಿ ಸನ್ಮಾನ ಕಾರ್ಯಕ್ರಮಕ್ಕೆ ಯಶ್ ಹೋಗಿದ್ದಾರೆ.

    ನಾನು ಬಾಲ್ಯದ ದಿನಗಳಿಂದಲೂ ಅಂಬರೀಷ್ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಅಂತ, ನಾಗರಹಾವು ಸೇರಿದಂತೆ ಹಲವು ಸಿನಿಮಾಗಳು ನನಗೆ ಬಹಳ ಪರಿಣಾಮ ಬೀರಿವೆ. ನನ್ನ ಸಿನಿಕೆರಿಯರ್ ನಲ್ಲಿ ರೆಬೆಲ್ ಪಾತ್ರಗಳನ್ನು ಮಾಡುವ ಆಸೆ ಇಟ್ಟುಕೊಂಡಿದ್ದೇನೆ. ಮೊದಲು ಜಲೀಲನ ಥರ ಕ್ಯಾರೆಕ್ಟರ್ ಮಾಡಬೇಕು ಎಂದು ಮೈಂಡ್‍ನಲ್ಲಿ ಫಿಕ್ಸ್ ಆಗಿತ್ತು ಎಂದು ಸ್ವತಃ ಯಶ್ ಅಂಬರೀಷ್ ಸನ್ಮಾನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

    ಯಶ್‍ಗೆ ನೆಗೆಟೀವ್ ಶೇಡ್ ಪಾತ್ರಗಳಂದರೆ ಬಹಳ ಇಷ್ಟ. ಲವ್ವರ್ ಬಾಯ್‍ಗೂ ಸೈ ಆ್ಯಕ್ಷನ್‍ಗೂ ಜೈ ಎನ್ನುವ ಯಶ್ ಈಗಾಗಲೇ ಲವ್ವರ್ ಬಾಯ್ ಆಗಿ ಮಿಂಚಿದ್ದಾರೆ. ಆ್ಯಕ್ಷನ್ ಸಿನಿಮಾದಲ್ಲೂ ಕೂಡ ಮಿಂಚಿದ್ದಾರೆ. ಈಗ ಜಲೀಲನಾಗಿ ಮಿಂಚಬೇಕು ಎನ್ನುವ ಆಸೆಯನ್ನು ಯಶ್ ವ್ಯಕ್ತಪಡಿಸಿದ್ದಾರೆ.

  • ಮಾವುತರನ್ನು ಬಿಟ್ಟು ಹೋಗಲು ನಿರಾಕರಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಹೋಗಿ ನಿಂತ ಆನೆ!

    ಮಾವುತರನ್ನು ಬಿಟ್ಟು ಹೋಗಲು ನಿರಾಕರಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಹೋಗಿ ನಿಂತ ಆನೆ!

    ಮಡಿಕೇರಿ: ದುಬಾರೆ ಸಾಕಾನೆ ಶಿಬಿರ ಮಾವುತರು ಹಾಗೂ ಕಾಡಾನೆಗಳ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಯಿತು.

    ದುಬಾರೆ ಆನೆ ಶಿಬಿರದಿಂದ ಛತ್ತೀಸ್‍ಗಢಕ್ಕೆ ಮೂರು ಆನೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಜನವರಿ 22ರಂದು ಪರಶುರಾಮ ಹಾಗೂ ತೀರ್ಥರಾಮ ಎನ್ನುವ ಆನೆಗಳನ್ನು ಕಳುಹಿಸಿದ್ದರು. ಆದರೆ ಮಾವುತರ ಅಚ್ಚುಮೆಚ್ಚಿನ ಆನೆ ಅಜ್ಜಯ್ಯ ಮಾತ್ರ ಲಾರಿ ಹತ್ತಲಿಲ್ಲ.

    ಅರಣ್ಯ ಸಿಬ್ಬಂದಿ ಸಾಕಷ್ಟು ಕಸರತ್ತು ನಡೆಸಿದರೂ ಕೂಡ 30 ವರ್ಷ ವಯಸ್ಸಿನ ಆನೆ ಅಜ್ಜಯ್ಯ ಮಾತ್ರ ಒಪ್ಪಲಿಲ್ಲ. ಬಳಿಕ ದಸರಾ ಅಭಿಮನ್ಯು ಆನೆಯನ್ನು ತಂದು ಲಾರಿಗೆ ಹತ್ತಿಸುವ ಯತ್ನ ನಡೆಸಿದರು.

    ಈ ವೇಳೆ ಆನೆಗಳ ನಡುವಿನ ಜಟಾಪಟಿಯಲ್ಲಿ ಅಜ್ಜಯ್ಯ 2 ಬಾರಿ ನೆಲಕ್ಕುರುಳಿದ ಪರಿಣಾಮ ಅಜ್ಜಯ್ಯನ ದೇಹದ ಹಲವೆಡೆ ಗಾಯಗಳಾಗಿದೆ. ಗಾಬರಿಗೊಂಡ ಅಜ್ಜಯ್ಯ ಕಾಲಿಗೆ ಹಾಕಿದ್ದ ಸರಪಳಿಯನ್ನು ತುಂಡರಿಸಿಕೊಂಡು ರಾತ್ರಿ 12 ಗಂಟೆ ವೇಳೆಯಲ್ಲಿ ಕಾಡಿಗೆ ತಪ್ಪಿಸಿಕೊಂಡು ಹೋಗಿದೆ.

    ಬೆಳಗ್ಗೆ ಸಿಬ್ಬಂದಿ ಅಜ್ಜಯ್ಯನ ಹುಡುಕಾಟ ನಡೆಸಿದಾಗ ಕಾವೇರಿ ನದಿಯ ಮಧ್ಯಭಾಗದಲ್ಲಿ ನಿಂತಿತ್ತು. ಆದರೆ ದಡಕ್ಕೆ ಬರಲು ಒಪ್ಪಲೇ ಇಲ್ಲ. ಕೊನೆಗೆ ಹಿರಿಯ ಮಾವುತರೊಬ್ಬರು ಅಜ್ಜಯ್ಯನ ಮನವೊಲಿಸಿ ದಡಕ್ಕೆ ಕರೆತಂದು ಉಪಚಾರ ಮಾಡುತ್ತಿದ್ದಾರೆ.

    ಘಟನೆ ನಡೆದ ಬಳಿಕ ಅಸಮಾಧಾನಗೊಂಡ ಮಾವುತರು, ನಾವು ಸಾಕಿ ಸಲಹಿದ ಆನೆಗಳನ್ನು ಬೇರೆ ರಾಜ್ಯಗಳಿಗೆ ನೀಡಲ್ಲ ಎಂದು ಹೇಳುತ್ತಿದ್ದಾರೆ.

  • ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಆರೋಪಿಗೆ ಅದ್ಧೂರಿ ಮೆರವಣಿಗೆ

    ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಆರೋಪಿಗೆ ಅದ್ಧೂರಿ ಮೆರವಣಿಗೆ

    ಬಾಗಲಕೋಟೆ: ಜಾಮೀನು ಮೇಲೆ ಜೈಲಿನಿಂದ ಹೊರಬಂದ ಎಂಐಎಂ ಮುಖಂಡರಿಗೆ ಬಾಗಲಕೋಟೆಯಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಂಡಿದ್ದಾರೆ.

    ಟಿಪ್ಪು ಜಯಂತಿ ಅಂಗವಾಗಿ ನಿಷೇಧಾಜ್ಞೆ ನಡುವೆಯೂ ನವಂಬರ್ 3 ರಂದು ಇಳಕಲ್ ಪಟ್ಟಣದಲ್ಲಿ ಕೆಲ ಮುಖಂಡರು ಮೆರವಣಿಗೆ ಅನುಮತಿ ನೀಡುವಂತೆ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಗರದಲ್ಲಿ ಪೊಲೀಸರ ಮೇಲೆ ಕೆಲವರು ಕಲ್ಲೂತೂರಾಟ ನಡೆಸಿದ್ದರು. ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣಕ್ಕೆ ಕಾರಣವಾಗಿತ್ತು.

    ಆ ಘಟನೆಗೆ ಸಂಬಂಧಿಸಿ ಎಂಐಎಂ ಮುಖಂಡ ಉಸ್ಮಾನಗಣಿ ಉಮನಾಬಾದ್, ಜೆಡಿಎಸ್ ಮುಖಂಡ ಜಬ್ಬರ ಕಲಬುರ್ಗಿ ಸೇರಿದಂತೆ 13 ಜನರ ಮೇಲೆ ದೂರು ದಾಖಲಾಗಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಸೋಮವಾರ ಜಾಮೀನಿನ ಮೇಲೆ ಹೊರಬಂದವರಿಗೆ ಮೆರವಣಿಗೆ ಮೂಲಕ ಸ್ವಾಗತ ಮಾಡಿಕೊಳ್ಳಲಾಗಿದೆ.

    ಇದನ್ನೂ ಓದಿ: ಬೇಲ್ ಮೇಲೆ ಬಿಡುಗಡೆಯಾದ ಅತ್ಯಾಚಾರ ಆರೋಪಿಗೆ ರಾಜಮರ್ಯಾದೆ- 500 ಬೈಕ್, ಕಾರ್‍ಗಳ ಜೊತೆ ಮೆರವಣಿಗೆ