Tag: period

  • ಮಹಾರಾಷ್ಟ್ರ | ರಕ್ತದ ಕಲೆ ಕಂಡುಬಂದಿದ್ದಕ್ಕೆ ಬಲವಂತವಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್‌

    ಮಹಾರಾಷ್ಟ್ರ | ರಕ್ತದ ಕಲೆ ಕಂಡುಬಂದಿದ್ದಕ್ಕೆ ಬಲವಂತವಾಗಿ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಪ್ರಿನ್ಸಿಪಾಲ್‌

    ಮುಂಬೈ: ಮಹಾರಾಷ್ಟ್ರದ (Maharashtra) ಶಾಲೆಯೊಂದರಲ್ಲಿ ಪ್ರಾಂಶುಪಾಲನೊಬ್ಬ ಬಲವಂತವಾಗಿ ಬಾಲಕಿಯರ ಋತುಚಕ್ರ (Periods) ಪರೀಕ್ಷಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    5-10ನೇ ತರಗತಿ ವಿದ್ಯಾರ್ಥಿನಿಯರು ಸಂಸ್ಥೆಯ ಸ್ನಾನ ಗೃಹದಲ್ಲಿ ರಕ್ತದ ಕಲೆಗಳು ಕಂಡು ಬಂದ ನಂತರ ಪ್ರಾಂಶುಪಾಲ (School Principal) ಮತ್ತು ಸಿಬ್ಬಂದಿ ಮುಟ್ಟಾಗುತ್ತಿದೆಯೇ ಎಂದು ಪರೀಕ್ಷಿಸಲು ಬಲವಂತವಾಗಿ ಬಟ್ಟೆ ಬಿಚ್ಚಿಸಿದ್ದಾರೆ ಎಂದು ವರದಿಯಾಗಿದೆ. ಘಟನೆ ತಿಳಿದು ಪ್ರಾಂಶುಪಾಲ ಇತರ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ – ಪತಿಯನ್ನು ಕೊಂದು ಅಪಘಾತದಂತೆ ಬಿಂಬಿಸಿದ್ದ ಪತ್ನಿ, ಪ್ರಿಯಕರ ಅರೆಸ್ಟ್

    ಶಾಲಾ ಸಭಾಂಗಣಕ್ಕೆ ವಿದ್ಯಾರ್ಥಿನಿಯರನ್ನ ಕರೆದ ಪ್ರಾಂಶುಪಾಲರು ನೆಲದ ಮೇಲೆ ಕಂಡು ಬಂದ ರಕ್ತದ ಕಲೆಗಳನ್ನ ಚಿತ್ರಗಳನ್ನ ತೋರಿಸಿದ್ದಾರೆ. ನಂತರ ವಿದ್ಯಾರ್ಥಿಯರನ್ನ ಮುಟ್ಟಾಗುತ್ತಿರುವವರು ಮತ್ತು ಮುಟ್ಟಾಗದಿರುವವರು ಪ್ರತ್ಯೇಕ ಸಾಲಿನಲ್ಲಿ ನಿಲ್ಲುವಂತೆ ಸೂಚಿಸಿದ್ದಾರೆ. ಈ ವೇಳೆ 10 ರಿಂದ 12 ವರ್ಷ ವಯಸ್ಸಿನ ಕೆಲ ಹುಡುಗಿಯರನ್ನ ಒಬ್ಬೊಬ್ಬರಾಗಿ ಪರೀಕ್ಷಿಸುವಂತೆ ಮಹಿಳಾ ಸಿಬ್ಬಂದಿಗೆ ಹೇಳಿದ್ದಾರೆ. ಆದ್ರೆ ಅವರು ಮುಟ್ಟಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಾಂಜಾ ಮತ್ತಿನಲ್ಲಿ ಬಾಲಕಿಯ ರೇಪ್ ಮಾಡಿ ಹತ್ಯೆ – ಕಾಮುಕ ಅರೆಸ್ಟ್

    ತಪಾಸಣೆಯ ಸಮಯದಲ್ಲಿ ಮಹಿಳಾ ಸಿಬ್ಬಂದಿ ವಿದ್ಯಾರ್ಥಿನಿಯರ ಒಳಉಡುಪುಗಳನ್ನ ಮುಟ್ಟಿದ್ದಾರೆ. ಈ ವೇಳೆ ಸ್ಯಾನಿಟರಿ ನ್ಯಾಪ್ಕಿನ್‌ ಬಳಸುತ್ತಿದ್ದ ಓರ್ವ ವಿದ್ಯಾರ್ಥಿನಿಯನ್ನ ಕಂಡುಕೊಂಡಿದ್ದಾರೆ. ಆದ್ರೆ ಆಕೆ ಮುಟ್ಟಾದ ವಿದ್ಯಾರ್ಥಿನಿಯರ ಸಾಲಿನಲ್ಲಿ ನಿಂತಿದ್ದಳು. ಬಳಿಕ ತಮ್ಮ ಮಕ್ಕಳಿಂದ ವಿಷಯ ತಿಳಿದ ಪೋಷಕರು ಶಾಲೆಗ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬುಧವಾರ ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಯುವತಿಯರ ಅಸಭ್ಯ ಫೋಟೋ, ವಿಡಿಯೋ ಪೋಸ್ಟ್ – ಯುವಕ ಅರೆಸ್ಟ್

    ಶಾಲಾ ಪ್ರಾಂಶುಪಾಲರು, ಒಬ್ಬ ಸಿಬ್ಬಂದಿ, ಇಬ್ಬರು ಶಿಕ್ಷಕರು ಮತ್ತು ಇಬ್ಬರು ಟ್ರಸ್ಟಿಗಳು ಸೇರಿದಂತೆ 6 ಜನರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ಇಬ್ಬರನ್ನೂ ಬಂಧಿಸಲಾಗಿದ್ದು, ಉಳಿದ ನಾಲ್ವರಿಗಾಗಿ ಶೋಧ ನಡೆಸಲಾಗಿದೆ ಎಂದು ಮಹಾರಾಷ್ಟ್ರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ಪೀರಿಯಡ್ಸ್ ಸಮಯದಲ್ಲಾಗುವ ಹೊಟ್ಟೆನೋವಿಗೆ ಇಲ್ಲಿದೆ ಮನೆ ಮದ್ದು

    ತುಚಕ್ರದಿಂದಾಗಿ (Period) ಮಹಿಳೆಯರಿಗೆ ದೈನಂದಿನ ಚಟುವಟಿಕೆಯಲ್ಲಿ ಅನೇಕ ತೊಡಕುಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೇ ಹೊಟ್ಟೆ ನೋವು, ಬೆನ್ನು ನೋವು ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಈ ಸಂದರ್ಭದಲ್ಲಿ ಕೆಲವು ಸುಲಭ ಮನೆ ಮದ್ದುಗಳು (Home Remedies) ಇಲ್ಲಿವೆ.

    ಹೊಟ್ಟೆಗೆ ಶಾಖ ಕೊಡಿ: ಬಿಸಿ ನೀರಿನ ಬಾಟಲಿ ಅಥವಾ ವಾಟರ್ ಬ್ಯಾಗ್ (Water Bag) ಅನ್ನು ಹೊಟ್ಟೆಯ ಮೇಲೆ ಇಟ್ಟುಕೊಳ್ಳುವುದರಿಂದ ಸ್ನಾಯುಗಳಿಗೆ ವಿಶ್ರಾಂತಿ ದೊರೆಕಿದ ಹಾಗಾಗುತ್ತದೆ. ಜೊತೆಗೆ ನಿಮಗೆ ಬೆನ್ನು ಹಾಗೂ ಸೊಂಟ ನೋವು ಸೇರಿದಂತೆ ಎಲ್ಲೆಲ್ಲಿ ನೋವು ಇರುತ್ತದೆಯೋ ಅಲ್ಲಿ ಸುಮಾರು 30 ನಿಮಿಷಗಳ ಕಾಲ ಶಾಖ ನೀಡಿ ಇದರಿಂದಾಗಿ ಸ್ನಾಯು ಸೆಳೆತವನ್ನು ಕಡಿಮೆ ಮಾಡಬಹುದು.

    ಹೆಚ್ಚು ನೀರು ಕುಡಿಯಿರಿ: ಋತುಚಕ್ರದ ಸಮಯದಲ್ಲಿ ಹೆಚ್ಚು ನೀರು ಕುಡಿಯಿರಿ. ಇದರಿಂದಾಗಿ ದೇಹವು ನಿರ್ಜಲೀಕರಣಗೊಳ್ಳುವುದನ್ನು ತಡೆಯಬಹುದು. ನೀರನ್ನು ಕಡಿಮೆ ಕುಡಿಯುವುದರಿಂದ ದೈಹಿಕ ಹಾಗೂ ಮಾನಸಿಕ ಒತ್ತಡವು ಹೆಚ್ಚಾಗಬಹುದು.

    ಹೊಟ್ಟೆಗೆ ಮಸಾಜ್ ಮಾಡಿ: ಋತುಚಕ್ರದ ಸಮಯದಲ್ಲಿ ಹೊಟ್ಟೆಯನ್ನು ಮಸಾಜ್ ಮಾಡುವುದು ಒಳ್ಳೆಯದು. ಇದರಿಂದಾಗಿ ಉತ್ತಮ ಪರಿಹಾರವನ್ನು ಕಾಣಬಹುದು. ಕಿಬ್ಬೊಟ್ಟೆಯ ಮಸಾಜ್‍ಗಾಗಿ ಹರಳೆಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ಹೀಗೆ ಮುಟ್ಟಿನ ಸಮಯದಲ್ಲಿ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನವನ್ನು ಕಾಣಬಹುದು.

    ಇಂಗು ಮತ್ತು ತುಪ್ಪ: ಋತುಚಕ್ರದ ಸಮಯದಲ್ಲಿ ಇಂಗು ಸ್ವಲ್ಪ ಬಳಕೆ ಮಾಡಿದರೇ ಹೊಟ್ಟೆ ನೋವು ಕಡಿಮೆ ಆಗುತ್ತದೆ. ಒಂದು ಸಣ್ಣ ಸೌಟು ಅಥವಾ ಒಗ್ಗರಣೆ ಮಾಡುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ 1 ಚಮಚ ತುಪ್ಪ ಹಾಕಿ, 2 ಚಿಟಿಕೆ ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿ. 2 ನಿಮಿಷ ಅದನ್ನು ಮಿಕ್ಸ್ ಮಾಡಿದ ನಂತರ ತಣ್ಣಗಾದ ಮೇಲೆ ತಿಂದರೆ ನಿಮ್ಮ ಹೊಟ್ಟೆ ನೋವಿಗೆ ಬೈ ಬೈ ಹೇಳಬಹುದು. ಇದನ್ನೂ ಓದಿ: ಆರೋಗ್ಯ ಹೆಚ್ಚಿಸುವ ಬೆಟ್ಟದ ನೆಲ್ಲಿಕಾಯಿ

    ಶುಂಠಿ ಟೀ: ಶುಂಠಿ ಟೀ ಅಥವಾ ಶುಂಠಿ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಮುಟ್ಟು ವಿಳಂಬವಾಗುವುದನ್ನು ತಡೆಯಬಹುದು. ಹಾಗೆಯೇ ಸ್ನಾಯು ಸೆಳೆತವನ್ನು ತಡೆಯುತ್ತದೆ. ದೇಹದ ಆಂತರಿಕ ಅಂಗಗಳ ಉರಿಯೂತವು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಸಂಭವಿಸುತ್ತದೆ. ಅದನ್ನು ಸರಿಪಡಿಸಲು ಇದು ಉಪಯುಕ್ತವಾಗಿದೆ. ಒಂದು ಕಪ್ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕತ್ತರಿಸಿದ ಶುಂಠಿ ತುಂಡುಗಳನ್ನು ಹಾಕಿ ಕುದಿಸಿ ಸೋಸಿ ಕುಡಿಯಿರಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k