Tag: Peresandra

  • ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು

    ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿ – ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣು

    ಚಿಕ್ಕಬಳ್ಳಾಪುರ: ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದ ವಿದ್ಯಾರ್ಥಿಯೋರ್ವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪೇರೇಸಂದ್ರ (Peresandra) ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ.

    ಕೇರಳದ (Kerala) ವಯನಾಡು (Wayanadu) ಮೂಲದ ಮೊಹಮ್ಮದ್ ಶಬ್ಬೀರ್ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಆರ್‌ಸಿಟಿ ಎನ್ನುವ ಅಲೈಡ್ ಸೈನ್ಸ್ ಕೋರ್ಸ್‌ನ (Allied Science Course) ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: MLC Nomination | ಮೇಲ್ಮನೆ ಸದಸ್ಯರಾಗಿ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರು ನಾಮನಿರ್ದೇಶನ

    ಇನ್ನೇನು ಕೆಲವೇ ತಿಂಗಳುಗಳಲ್ಲಿ ಕೋರ್ಸ್ ಮುಗಿಸಿ ಮನೆಗೆ ಮರಳಬೇಕಿದ್ದ ವಿದ್ಯಾರ್ಥಿ ಭಾನುವಾರ (ಸೆ.7) ಬೆಳಗ್ಗೆ ಹಾಸ್ಟೆಲ್‌ನ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ರೂಮ್‌ನ ಕಿಟಕಿಗೆ ಟವೆಲ್‌ ಕಟ್ಟಿ, ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್‌ ಪರಿಶೀಲನೆ ನಡೆಸಿದಾಗ ಡೆತ್‌ನೋಟ್ ಸಿಕ್ಕಿದೆ.

    ಡೆತ್‌ನೋಟ್‌ನಲ್ಲಿ ಏನಿದೆ?
    I didn’t stop anything until…. I always love you forever , You are my first and you are My last ಎಂದು ಬರೆದಿದ್ದಾನೆ.

    ಡೆತ್‌ನೋಟ್‌ನಲ್ಲಿ ಬರೆದಿರುವಂತೆ ಮೃತ ವಿದ್ಯಾರ್ಥಿ ಶಬ್ಬೀರ್ ತನ್ನ ಸಹಪಾಠಿಯೊಬ್ಬಳನ್ನು ಲವ್ ಮಾಡುತ್ತಿದ್ದ. ಕಳೆದ ಕೆಲವು ದಿನಗಳಿಂದ ಮೃತ ಶಬ್ಬೀರ್‌ನ ಪೋನ್ ನಂಬರ್‌ನ್ನು ಆ ಹುಡುಗಿ ಬ್ಲಾಕ್ ಮಾಡಿದ್ದಳಂತೆ. ಜೊತೆಗೆ ಸರಿಯಾಗಿ ರೆಸ್ಪಾನ್ಸ್ ಮಾಡಿರಲಿಲ್ಲವಂತೆ. ಹೀಗಾಗಿ ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯ ಪೇರೇಸಂದ್ರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಬರ್ತ್‌ಡೇ ಸೆಲೆಬ್ರೇಷನ್‌ಗೆ ಕರೆದೊಯ್ದು ಪರಿಚಯಸ್ಥರಿಂದಲೆ ಮಹಿಳೆಯ ಗ್ಯಾಂಗ್‌ ರೇಪ್‌

  • ಕಾಂಗ್ರೆಸ್, ಬಿಜೆಪಿಯಿಂದ ಪ್ರತ್ಯೇಕ ಗಣೇಶನ ಪ್ರತಿಷ್ಠಾಪನೆ – ವಿಸರ್ಜನೆ ವೇಳೆ ಗುಂಪು ಘರ್ಷಣೆ

    ಕಾಂಗ್ರೆಸ್, ಬಿಜೆಪಿಯಿಂದ ಪ್ರತ್ಯೇಕ ಗಣೇಶನ ಪ್ರತಿಷ್ಠಾಪನೆ – ವಿಸರ್ಜನೆ ವೇಳೆ ಗುಂಪು ಘರ್ಷಣೆ

    ಚಿಕ್ಕಬಳ್ಳಾಪುರ: ಬಿಜೆಪಿಯವರು (BJP) ಪ್ರತಿಷ್ಠಾಪನೆ ಮಾಡಿದ್ದ ಗಣೇಶನ (Ganesha) ವಿಸರ್ಜನೆ ವೇಳೆ ಮೆರವಣಿಗೆ ಕಾಂಗ್ರೆಸ್‌ನವರ (Congress) ಗಣೇಶ ಪ್ರತಿಷ್ಠಾಪನಾ ಸ್ಥಳಕ್ಕೆ ಬಂದಾಗ ಪರಸ್ಪರ ವಾಗ್ವಾದ ನಡೆದು ಗುಂಪು ಘರ್ಷಣೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಪೆರೇಸಂದ್ರ (Peresandra) ಕ್ರಾಸ್ ಬಳಿಯ ಕಮ್ಮಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಮ್ಮಗಾನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ನವರು ಹಾಗೂ ಬಿಜೆಪಿಯವರು ಪ್ರತ್ಯೇಕವಾಗಿ ಗಣೇಶನ ಪ್ರತಿಷ್ಠಾಪನೆ ಮಾಡಿದ್ದರು. ನಿನ್ನೆ ತಡರಾತ್ರಿ ಬಿಜೆಪಿಯವರು ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ನಡೆಸಿದ್ದು, ಈ ವೇಳೆ ಕಾಂಗ್ರೆಸ್‌ನವರು ಪ್ರತಿಷ್ಠಾಪನೆ ಮಾಡಿದ್ದ ಗಣೇಶನ ಬಳಿ ಬಂದಾಗ ಎರಡು ಕಡೆಯವರು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆಸಿ ವಾಗ್ವಾದ ಜೋರಾಗಿ ಹೊಡೆದಾಟ ಬಡಿದಾಟ ಮಾಡಿಕೊಂಡು, ದೊಡ್ಡ ಮಟ್ಟದ ಗುಂಪು ಘರ್ಷಣೆಯಾಗಿದೆ. ಘಟನೆಯಲ್ಲಿ ಎರಡೂ ಕಡೆಯವರಿಗೆ ಗಾಯಗಳಾಗಿವೆ.

    ಸ್ಥಳಕ್ಕೆ ಪೇರೇಸಂದ್ರ ಪೊಲೀಸರು ಆಗಮಿಸಿ ಗಲಾಟೆ ತಹಬದಿಗೆ ತರಲು ಪ್ರಯತ್ನಿಸಿದರೂ ಮಾತು ಕೇಳದಿದ್ದಾಗ ಲಾಠಿ ರುಚಿ ತೋರಿಸಿ ಎರಡು ಕಡೆಯವರನ್ನು ಚದುರಿಸಿ ಗಲಾಟೆ ಕಂಟ್ರೋಲ್ ಮಾಡಿದ್ದಾರೆ. ಈ ಸಂಬಂಧ ಎರಡು ಕಡೆಯವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ತಡರಾತ್ರಿಯೇ ಡಿಸ್ಚಾರ್ಜ್ ಆಗಿದ್ದಾರೆ. ಘಟನೆ ಬಗ್ಗೆ ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರು ಪ್ರತ್ಯೇಕ ದೂರು ನೀಡಿದ್ದಾರೆ. ಇದನ್ನೂ ಓದಿ: ಗಣಪತಿ ವಿಸರ್ಜನೆಯಲ್ಲಿ ಪೊಲೀಸರು ಬ್ಯುಸಿ – 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ

    ಬಿಜೆಪಿಯವರು ತಡರಾತ್ರಿಯೇ ಗಣೇಶನ ವಿಸರ್ಜನೆ ಮಾಡಿದ್ದಾರೆ. ಕಾಂಗ್ರೆಸ್‌ನವರ ಗಣೇಶ ಹಾಗೇ ಇದ್ದು ಪೂಜೆ ಮಾಡೋದನ್ನೇ ನಿಲ್ಲಿಸಲಾಗಿದೆ. ಗಲಾಟೆ ನಂತರ ಎಲ್ಲರೂ ನಾಪತ್ತೆಯಾಗಿದ್ದು ಗಣೇಶನ ಬಳಿ ಯಾರೂ ಬಂದಿಲ್ಲ. ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ಹಾಲಿ, ಮಾಜಿ ಶಾಸಕರ ಬೆಂಬಲಿಗರ ಪ್ರತಿಷ್ಠೆಯಿಂದ ಗಲಾಟೆಗೆ ಕಾರಣವಾಗಿದ್ದು, ಗ್ರಾಮದಲ್ಲಿನ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಉಂಟಾಗಿರೋ ವೈಮನಸ್ಸು ಹಳೆ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಶಾಕ್‌ – ತ.ನಾಡಿಗೆ ನಿತ್ಯ 5,000 ಕ್ಯೂಸೆಕ್‌ ನೀರು ಹರಿಸುವಂತೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]