Tag: percentage

  • ಶಾಸಕ ಶಿವನಗೌಡ ನಾಯಕ್ ವಿರುದ್ಧ 100% ಕಮಿಷನ್ ಆರೋಪ

    ಶಾಸಕ ಶಿವನಗೌಡ ನಾಯಕ್ ವಿರುದ್ಧ 100% ಕಮಿಷನ್ ಆರೋಪ

    ರಾಯಚೂರು: ರಾಜ್ಯ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪವಿದೆ. ಆದರೆ ರಾಯಚೂರಿನ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಮೇಲೆ ಶೇ.100 ರಷ್ಟು ಕಮಿಷನ್ ಆರೋಪ ಕೇಳಿಬಂದಿದೆ. ರಸ್ತೆ ಕಾಮಗಾರಿಯನ್ನೇ ನಡೆಸದೆ ಕೋಟ್ಯಂತರ ರೂ. ಬಿಲ್ ಸಂಪೂರ್ಣವಾಗಿ ಎತ್ತಿರುವ ಬಗ್ಗೆ ದಾಖಲೆ ಸಹಿತ ಹೋರಾಟಗಾರರು ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ.

    ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮಾರು 20 ಕೋಟಿ ರೂ. ಕಾಮಗಾರಿಯನ್ನು ಒಂದಿಂಚೂ ಕೆಲಸ ಮಾಡದೆ ಸಂಪೂರ್ಣ ಬಿಲ್ ಎತ್ತಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲಾಖೆ ದಾಖಲೆ ಸೃಷ್ಟಿಸಿದ್ದಾರೆ. ವಾಸ್ತವವಾಗಿ ಸ್ಥಳದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇದಕ್ಕೆಲ್ಲಾ ದೇವದುರ್ಗ ಬಿಜೆಪಿ ಶಾಸಕ ಹಾಗೂ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಿವನಗೌಡ ನಾಯಕ್ ಮತ್ತು ಲೋಕೋಪಯೋಗಿ ಇಲಾಖೆಯ ಇಇ ಚನ್ನಬಸಪ್ಪ ಮೆಕಾಲೆ ಕಾರಣ ಎಂದು ದಾಖಲೆ ಸಹಿತ ಆರೋಪಗಳು ಕೇಳಿ ಬಂದಿವೆ. ಕಾಮಗಾರಿ ನಡೆಸದೇ ಬಿಲ್ ಎತ್ತಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಲದಕಲ್ ಗ್ರಾಮದಿಂದ ಮುಷ್ಟೂರುವರೆಗಿನ ಕಾಮಗಾರಿಗಳನ್ನು ವಿವಿಧ ಗುತ್ತಿಗೆದಾರರಿಗೆ ನೀಡಲಾಗಿದ್ದು ಒಂದೂ ಕಾಮಗಾರಿಯನ್ನು ಮಾಡದೆ ಬಿಲ್ ಎತ್ತಲಾಗಿದೆ. ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡ ಯೋಜನೆಯಡಿಯ ಕಾಮಗಾರಿ ಅನುದಾನ ದುರ್ಬಳಕೆ ಮಾಡಲಾಗಿದೆ. ಟೆಂಡರ್ ಕರೆದ ತಿಂಗಳಲ್ಲೇ ಕಾಮಗಾರಿ ಮುಗಿದಿದೆ ಎಂದು ಬಿಲ್ ಎತ್ತಲಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬುಡ್ಡನಗೌಡ ದಾಖಲೆ ಸಹಿತ ಆರೋಪಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ

    ಹದಗೆಟ್ಟ ರಸ್ತೆಯಲ್ಲೇ ಅಧಿಕಾರಿಗಳು ಹಾಗೂ ಶಾಸಕರಿಗೆ ಹಿಡಿಶಾಪ ಹಾಕುತ್ತಾ ದೇವದುರ್ಗದ ಜನರು ಕಷ್ಟಪಟ್ಟು ಓಡಾಡುತ್ತಿದ್ದಾರೆ. ಶಾಸಕರ ಬಗ್ಗೆ ಹೆಚ್ಚು ಮಾತನಾಡಿದರೆ, ಪ್ರಶ್ನೆ ಕೇಳಿದರೆ ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಸರ್ಕಾರ ರಸ್ತೆ ಕಾಮಗಾರಿ ಮಾಡಲು ನೀಡಿದ ಹಣವನ್ನು ಇವರೇ ಜೇಬಿಗೆ ಇಳಿಸಿಕೊಂಡರೆ ಸಾಮಾನ್ಯ ಜನ ಓಡಾಡುವುದು ಎಲ್ಲಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಕಾಮಗಾರಿ ನಡೆಯದೇ ಬಿಲ್ ಎತ್ತಿದ್ದಕ್ಕೆ ಮಲದಕಲ್, ರಾಮದುರ್ಗ, ಆಲ್ದರ್ತಿ, ಗೆಜ್ಜೆಭಾವಿ, ಮುಷ್ಟೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ: ಹೆಚ್.ಡಿ. ರೇವಣ್ಣ

    ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರೇ ಶಾಸಕರಾಗಿರುವ ಕ್ಷೇತ್ರದ ಮಹಾ ಕರ್ಮಕಾಂಡ ಇದು. ಕೆಲ ದಿನಗಳ ಹಿಂದೆ ತಮ್ಮನ್ನು ಕೇಳದೆ ಎನ್‌ಆರ್‌ಬಿಸಿ ಕಾಮಗಾರಿ ಬಿಲ್ ಮಾಡಿದ್ದ ಕಾರಣಕ್ಕೆ ಮುಖ್ಯ ಇಂಜಿನಿಯರ್‌ಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ಶಿವನಗೌಡ ನಾಯಕ್ ಈಗ ಮೌನಕ್ಕೆ ಶರಣಾಗಿದ್ದಾರೆ. ಕಾಮಗಾರಿಯನ್ನೇ ಮಾಡದೆ ಅನುದಾನ ನುಂಗಿ ನೀರು ಕುಡಿದವರ ವಿರುದ್ಧ ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಸರ್ಕಾರಕ್ಕೆ ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ: ನಿರಂಜನಪುರಿ ಶ್ರೀ

    ಸರ್ಕಾರಕ್ಕೆ ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ: ನಿರಂಜನಪುರಿ ಶ್ರೀ

    ಚಿತ್ರದುರ್ಗ: ಭಿಕ್ಷೆ ಬೇಡಿಯಾದರೂ ಮಠ ಕಟ್ಟುತ್ತೇವೆ ಹೊರತು ಸರ್ಕಾರಕ್ಕೆ ನಾವು ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ ಎಂದು ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರ ಒಕ್ಕೂಟದ ಅಧ್ಯಕ್ಷ ನಿರಂಜನಪುರಿ ಶ್ರೀಗಳು ಹೇಳಿದರು.

    ನಗರದ ಭೋವಿಗುರುಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ೩೦% ಕಮೀಷನ್ ಕೊಡಬೇಕಾಗಿದೆ ಎಂದು ಹೇಳಿದ್ದ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕಿಡಿಕಾರಿ ಮಠಾಧೀಶರಿಂದ ಯಾವುದೇ ಕಮೀಷನ್ ಪಡೆದಿಲ್ಲ ಅಂತ ಸರ್ಕಾರದ ಪರ ಬ್ಯಾಟ್ ಬೀಸಿದರು.

    ಕರ್ನಾಟಕದ ಮಟ್ಟಿಗೆ ದಲಿತ ಮಠಗಳ ಪರಂಪರೆಯಲ್ಲಿ ದಲಿತ, ಹಿಂದುಳಿದ ಮಠಮಾನ್ಯಗಳು ಕೇವಲ ೨-೩ ದಶಕಗಳ ಇತ್ತೀಚಿನ ಇತಿಹಾಸ ಹೊಂದಿರುವುದು ನಾಡಿಗೆ ತಿಳಿದ ವಿಚಾರವಾಗಿದೆ. ಅಂತಹ ಸಂದರ್ಭದಲ್ಲಿ ಆರ್ಥಿಕವಾಗಿ, ಸ್ಥಿತಿವಂತ ಸಮುದಾಯಗಳು ಮಠಮಾನ್ಯಗಳ ಕಟ್ಟುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ಸಂದರ್ಭದಲ್ಲಿ ನಿರೀಕ್ಷೆಯಂತೆ ಮುನ್ನಡೆ ಆಗಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನುಗ್ಗಿಕೇರಿ ಕಲ್ಲಂಗಡಿ ಗಲಾಟೆ ಪ್ರಕರಣಕ್ಕೆ ಟ್ವಿಸ್ಟ್

    ಇಂತಹ ಸಂದರ್ಭದಲ್ಲಿ ಶೋಷಿತ ಸಮುದಾಯಗಳು ಮಠಮಾನ್ಯಗಳ ಮೂಲಕ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯಲ್ಲಿ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಸಂಕಲ್ಪತೊಟ್ಟಿದ್ದರು ಕೂಡ ಆರ್ಥಿಕವಾದ ಬೆಂಬಲ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿರಲಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಶೋಷಿತ ಸಮುದಾಯಗಳ ಆದಿಯಾಗಿ ಎಲ್ಲಾ ಮಠಗಳಿಗೆ ಗೌರವಪೂರ್ವಕವಾಗಿ ಅನುದಾನ ನೀಡಲು ಆರಂಭ ಮಾಡಿದರು ಎಂದು ತಿಳಿಸಿದರು. ಇದನ್ನೂ ಓದಿ:  ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ಶ್ರೀರಾಮಸೇನೆಯ ನಾಲ್ವರ ಬಂಧನ

    ಅಲ್ಲಿಂದ ಈಗಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೆಗೂ ಮಠಮಾನ್ಯಗಳಿಗೆ ಬಂದಂತಹ ಅನುದಾನ ಸರ್ಕಾರಗಳು ವ್ಯವಸ್ಥಿತವಾಗಿ ಯೋಜನಾ ಬದ್ಧವಾಗಿ ಮತ್ತು ಸರ್ಕಾರದ ನಿಯಮಗಳ ಪ್ರಕಾರವಾಗಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಡುಗಡೆ ಮಾಡಿವೆ. ಈ ಸಂದರ್ಭದಲ್ಲಿ ಸರ್ಕಾರ ಮತ್ತು ಮಠಗಳ ನಡುವೆ ಅಧಿಕಾರಿಗಳ ಸಂಪೂರ್ಣ ಜವಾಬ್ದಾರಿ ಹಾಗೂ ಉಸ್ತುವಾರಿಯಿಂದ ಬಿಡುಗಡೆಯಾಗಿರುವ ಅನುದಾನ ಮಠಗಳ ಅಭಿವೃದ್ಧಿಗೆ ಪೂರಕವಾಗಿವೆ ಎಂಬ ವರದಿಯನ್ನು ಕಾಲಕಾಲಕ್ಕೆ ನೀಡುತ್ತಾ ಬರಲಾಗಿದೆ ಎಂದರು.

    BRIBE

    ಸರ್ಕಾರ ನೀಡಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಅನೇಕ ಶೋಷಿತ ಸಮುದಾಯದ ಮಠಗಳು ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸಮಾಜವನ್ನು ಮುಖ್ಯವಾಹಿನಿಗೆ ತರುವಂತಹ ನಿಟ್ಟಿನಲ್ಲಿ ಸಂಪೂರ್ಣವಾದ ಅಭಿವೃದ್ಧಿ ಯೋಜನೆಗಳ ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ನುಡಿದರು.

    ಇತ್ತೀಚಿನ ದಿನಗಳಲ್ಲಿ ಅನುದಾನ ಕುರಿತು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಮುಖ್ಯವಾಗಿ ಉತ್ತರ ಕರ್ನಾಟಕದ ಪ್ರಮುಖ ಸ್ವಾಮೀಜಿಯವರು ನೀಡಿರುವ ಹೇಳಿಕೆಗೆ ಹಿಂದುಳಿದ ದಲಿತ ಮಠಾಧೀಶರು ಪ್ರತಿಕ್ರಿಯೆ ನೀಡಲೇಬೇಕಾಗಿದೆ. ಕಾರಣ ಅವರು ಹೇಳಿರುವಂತೆ ‘ಮಠ ಮಾನ್ಯಗಳಿಗೆ ನೀಡುವ ಅನುದಾನಕ್ಕೆ ೩೦% ಕಮೀಷನ್ ಕೊಡಬೇಕೆಂಬ” ವಿಚಾರಕ್ಕೆ ಪ್ರತಿಕ್ರಿಯೆ ನೀಡಬೇಕಾಗಿದೆ. ನಮಗೆ ಇದುವರೆಗೆ ಸರ್ಕಾರ ನೀಡಿರುವ ಅನುದಾನಕ್ಕೆ ಸರ್ಕಾರದ ನಿಯಮಾನುಸಾರ ಇಲಾಖೆ ಮುಖೇನ ಬಿಡುಗಡೆ ಮಾಡಿದೆ. ಪ್ರತಿ ಹಂತದ ಕಾಮಗಾರಿ ಅಭಿವೃದ್ಧಿ ಸಂಬಂಧಿಸಿದ ಇಲಾಖೆಗಳ ಮೂಲಕ ವರದಿ ಪಡೆದು, ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.

  • ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಮಠಕ್ಕೆ ಅನುದಾನ ಬೇಕಿದ್ರೆ ಶೇ.30 ಕಮಿಷನ್ ಕೊಡಿ ಅಂತಾರೆ ಅಧಿಕಾರಿಗಳು: ದಿಂಗಾಲೇಶ್ವರ ಸ್ವಾಮೀಜಿ

    ಬಾಗಲಕೋಟೆ: ಸದ್ಯ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಪರ್ಸೆಂಟೇಜ್ ಪ್ರಕರಣ ಕಾವು ಪಡೆದುಕೊಂಡಿರುವ ಹೊತ್ತಿನಲ್ಲೇ ಶಿರಹಟ್ಟಿ ಜಗದ್ಗುರು ದಿಂಗಾಲೇಶ್ವರ ಸ್ವಾಮೀಜಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ.

    DINGALESWARA

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಈಚೆಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಅವು ಏನಾಗ್ತಿವೆ ಎಂದು ಎಲ್ಲರಿಗೂ ಗೊತ್ತಿದೆ. ಒಬ್ಬ ಸ್ವಾಮೀಜಿಗೆ ಅನುದಾನ ಬಿಡುಗಡೆ ಮಾಡಬೇಕಿದ್ರೆ 30 ಪರ್ಸೆಂಟ್ ಕಮಿಷನ್ ಕೊಡಬೇಕು. ಆಗಲೇ ಮಠಗಳಳಲ್ಲಿ ಕಟ್ಟಡ ಕೆಲಸ ಶುರುವಾಗುತ್ತದೆ. ನೀವು ಇಷ್ಟು ದುಡ್ಡು ಕಟ್ಟದಿದ್ರೆ ನಿಮ್ಮ ಕೆಲಸ ಆಗಲ್ಲ ಎಂದು ಅಧಿಕಾರಿಗಳೇ ಹೇಳುವ ಪರಿಸ್ಥಿತಿ ಬಂದಿದೆ ಅಂದರೆ, ಭ್ರಷ್ಟಾಚಾರ ಎಲ್ಲಿಗೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಇಬ್ಬರು, ಮೂವರು ಸಚಿವರನ್ನು ಬಿಟ್ಟು ಎಲ್ರೂ 40% ಕಮಿಷನ್ ಪಡೆಯುತ್ತಿದ್ದಾರೆ: ಎಂ.ಬಿ ಪಾಟೀಲ್

    prahlad joshi

    ಈಗ ಕಿಡಿಗೇಡಿಗಳ ಸರ್ಕಾರವೇ ಬರುತ್ತಿದೆ. ಉತ್ತರ ಕರ್ನಾಟಕಕ್ಕಾಗಿ ಕಾಕಾಗಳು (ಖಾದಿ -ಖಾವಿ) ಒಂದಾಗಿವೆ. ಆದರೆ, ಎಂದಿಗೂ ನಮ್ಮ ಹಕ್ಕು, ಸ್ವತ್ತನ್ನು ಕಳೆದುಕೊಳ್ಳಬಾರದು, ಅನ್ನೋದು ಎಸ್.ಆರ್.ಪಾಟೀಲ್ ಅವ್ರ ತಂಡದ ಮಾತಾಗಿದೆ. ಇನ್ನೇನು ಕೃಷ್ಣಾ ಮಹದಾಯಿ, ನವಲಿ ಯೋಜನೆಗಳು ಕಾರ್ಯರೂಪಕ್ಕೆ ಬಂದ್ರೆ ನಿಮ್ಮ ಭಾಗದ ಜನರ ಬಾಳು ಹಸನಾಗುತ್ತದೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹೆಣ್ಣುಮಕ್ಕಳು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು: ಡಾ.ನಾರಾಯಣ ಗೌಡ

    SR PATIL

    ಕೆಲಸ ಮಾಡದಿದ್ರೆ ಏನ್ ಉಪಯೋಗ?: ಈ ಭಾಗದ ಮಂತ್ರಿಯೊಬ್ಬ ಸದಾ ಪ್ರಧಾನಮಂತ್ರಿ ಅವರೊಂದಿಗೆ ಇರ್ತಾನೆ. ಆದರೆ, ಕೇಂದ್ರದಿಂದ ರಾಜ್ಯಕ್ಕೆ ಏನೂ ಕೊಡುಗೆ ನೀಡ್ತಿಲ್ಲ. ಪ್ರಧಾನಿ ಹಿಂದೆ ಓಡಾಡೋದೆ ದೊಡ್ಡ ಕೆಲಸ ಅನ್ಕೊಂಡಿದ್ದಾನೆ. ನೀನು ಪಿಎಂ ಜೊತೆ ಅಡ್ಡಾಡಿದ್ರೂ, ಈ ಭಾಗಕ್ಕೆ ಏನು ಮಾಡದೇ ಇದ್ರೆ, ಪ್ರಯೋಜನ ಇಲ್ಲ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಿರುದ್ಧ ಏಕವಚನದಲ್ಲೇ ಸ್ವಾಮೀಜಿ ಲೇವಡಿ ಮಾಡಿದರು.

    ದೆಹಲಿ ಸರ್ಕಾರಕ್ಕೆ ಟಾಂಗ್: ನಮ್ಮ ಉತ್ತರ ಕರ್ನಾಟಕದವರು ಸ್ವಲ್ಪ ಜಾಗೃತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು. ಕೆಲ ಭಾಗಗಳಲ್ಲಿ ಸ್ವಾಮೀಜಿಗಳಲ್ಲೇ ಇರುವ ತಾರತಮ್ಯ ನಿಲ್ಲಬೇಕು. ಈ ಹೋರಾಟ ಇಲ್ಲಿಗೆ ನಿಲ್ಲೋದು ಬೇಡ. ಇದು ಮುಂದುವರಿಯಬೇಕು. ಎಲ್ಲಿಯ ತನಕ ಈ ಭಾಗ ಅಭಿವೃದ್ಧಿ ಆಗುವವರೆಗೆ ನಿಮ್ಮ ಹೋರಾಟ ನಿಲ್ಲಬಾರದು. ನಾವೆಲ್ಲ ನಿಮ್ಮ ಜೊತೆಗಿರುತ್ತೇವೆ ಎಂದು ಹೋರಾಟಕ್ಕೆ ಬೆಂಬಲ ಘೋಷಿಸಿದರು.

  • ಮಠಾಧೀಶರಿಗೆ 10% ಡಿಸ್ಕೌಂಟ್ ಮಾಡಿ 30% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ: ಎಂಬಿ ಪಾಟೀಲ್ ವ್ಯಂಗ್ಯ

    ಮಠಾಧೀಶರಿಗೆ 10% ಡಿಸ್ಕೌಂಟ್ ಮಾಡಿ 30% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ: ಎಂಬಿ ಪಾಟೀಲ್ ವ್ಯಂಗ್ಯ

    ಚಿಕ್ಕೋಡಿ: ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸ್ವಾಮೀಜಿಗಳಿಗೆ 10% ಡಿಸ್ಕೌಂಟ್ ಮಾಡಿ 30% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ. ಉಳಿದವರಿಗೆಲ್ಲ 40% ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠಗಳ ಅನುದಾನದಲ್ಲೂ ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎನ್ನುವ ದಿಂಗಾಲೇಶ್ವರ ಸ್ವಾಮೀಜಿಗಳ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಗೋ ಮಾತೆ ಎಂದು ಹೇಳುತ್ತಾರೆ, ಗೋ ಮಾತೆಯ ಮೇವು ಹಗರಣ ಕೂಡ ಬರುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಯುಪಿ ಮಾಡೆಲ್ ಬೇಡವೇ ಬೇಡ: ಮೌಲ್ವಿ ಮಕ್ಸೂದ್ ಇಮ್ರಾನ್

    ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಗೃಹ ಸಚಿವರಾಗಲು ಕ್ಷಮತೆ ಇಲ್ಲ. ರಾಮಲಿಂಗಾ ರೆಡ್ಡಿ ಗೃಹ ಮಂತ್ರಿಯಾಗಿದ್ದಾಗ ಈ ರೀತಿ ಭ್ರಷ್ಟಾಚಾರ ಇರಲಿಲ್ಲ. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಭ್ರಷ್ಟಾಚಾರ ಆಗಿದೆ. ಹಣ ಕೊಟ್ಟು ಪೊಲೀಸ್ ಅಧಿಕಾರಿಗಳಾದವರು ಮತ್ತೆ ಜನರನ್ನೇ ಲೂಟಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಕಾಲಾವಧಿಯಲ್ಲಿ ಒಂದು ರೂ. ಹಣ ಇಲ್ಲದೇ ನೇಮಕಾತಿಗಳು ನಡೆದಿವೆ ಎಂದರು. ಇದನ್ನೂ ಓದಿ: ಹಿಂದೂಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ: ಸತ್ಯದೇವಾನಂದ ಸರಸ್ವತಿ

    ಸುದ್ದಿಗೋಷ್ಠಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ, ಕಾಂಗ್ರೆಸ್ ಮುಖಂಡ ಬಾಲಚಂದ್ರ ಇನಾಮದಾರ, ಮಾಜಿ ಸಚಿವ ಎಬಿ ಪಾಟೀಲ್, ರಾಜು ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಶಿವರಾಜ್ ಪಾಟೀಲ್‌ರಿಂದ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ: ರವಿ ಬೋಸರಾಜು ಆರೋಪ

    ಶಿವರಾಜ್ ಪಾಟೀಲ್‌ರಿಂದ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ: ರವಿ ಬೋಸರಾಜು ಆರೋಪ

    ರಾಯಚೂರು: ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್‌ರಿಂದ ಇಲ್ಲಿನ ಗುತ್ತಿಗೆದಾರರಿಗೆ ಪರ್ಸೆಂಟೇಜ್ ಕಿರಿಕಿರಿಯಿದೆ ಎಂದು ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಗಂಭೀರ ಆರೋಪ ಮಾಡಿದ್ದಾರೆ.

    ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯಂತಹ ಪ್ರಕರಣಗಳು ರಾಯಚೂರಿನಲ್ಲಿಯೂ ನಡೆಯುವ ಆತಂಕವಿದೆ. ಕಾಮಗಾರಿ ಪರ್ಸೆಂಟೇಜ್ ಕಮಿಷನ್ ಹಾವಳಿ ರಾಯಚೂರಲ್ಲೂ ತಾಂಡವವಾಡುತ್ತಿದೆ. ಶಿವರಾಜ್ ಪಾಟೀಲ್ 40 ರಿಂದ 50 ಪರ್ಸೆಂಟೇಜ್ ಕೇಳುತ್ತಿದ್ದಾರೆ. ಲಾಭದಾಯಕ ಕಾಮಗಾರಿಗಳು ಶಾಸಕರ ಸಹೋದರರೇ ಮಾಡುತ್ತಿದ್ದಾರೆ. ಅಪೆಂಡೆಕ್ಸ್ ಸಿ ನಾನ್ ಪ್ಲಾನ್ಡ್ ಎಕ್ಸ್ಪೆಂಡಿಚರ್ ಅಡಿ ಬಿಜೆಪಿ ಕಾರ್ಯಕರ್ತರಿಗೆ, ಗುತ್ತಿಗೆದಾರರಿಗೆ ಕೆಲಸ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನೈತಿಕ ಸ್ಥೈರ್ಯ ಕುಗ್ಗಿಸೋದು ಕಾಂಗ್ರೆಸ್ ಕನಸು: ಕೆಜಿ ಬೋಪಯ್ಯ

    ಅನುದಾನವೇ ಇಲ್ಲದ ಕೆಲಸ ಮಾಡುವ ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಶಾಸಕರ ಹಿಂದೆ ಅಲೆದಾಡುವಂತಾಗಿದೆ. ಬಿಲ್ ನಿಲ್ಲಿಸಿ ಅವರನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಹೀಗಾಗಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಂತೆ ಇಲ್ಲೂ ಅನಾಹುತಗಳಾಗುವ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌

    ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿಯೂ ಶಾಸಕರು ಹಲವರಿಗೆ 3-4 ಕೋಟಿ ರೂ.ಯ ಕೆಲಸ ಕೊಡಿಸುವ ಭರವಸೆ ನೀಡಿದ್ದಾರೆ. ರಾಯಚೂರು ನಗರಾಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಕಾಮಗಾರಿ ಎಲ್ಲಿ ನಡೆದಿವೆ ಎಂಬುವುದು ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಈ ಹಿಂದೆ ನೇರವಾಗಿ ಆರೋಪ ಮಾಡಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅವರ ತಪ್ಪು ಒಪ್ಪಿಕೊಂಡಂತೆ ಕಾಣುತ್ತಿದೆ ಎಂದು ರವಿ ಬೋಸರಾಜು ಆರೋಪಿಸಿದ್ದಾರೆ.

  • ಕಾಂಗ್ರೆಸ್ ಪರ್ಸೆಂಟೇಜ್ ಆರೋಪಕ್ಕೆ ಬಿಜೆಪಿ ಟಕ್ಕರ್ – ಎಲ್ಲ ಕಾಲದ ಟೆಂಡರ್‌ಗಳ ತನಿಖೆಗೆ ನಿರ್ಧಾರ

    ಕಾಂಗ್ರೆಸ್ ಪರ್ಸೆಂಟೇಜ್ ಆರೋಪಕ್ಕೆ ಬಿಜೆಪಿ ಟಕ್ಕರ್ – ಎಲ್ಲ ಕಾಲದ ಟೆಂಡರ್‌ಗಳ ತನಿಖೆಗೆ ನಿರ್ಧಾರ

    ಬೆಂಗಳೂರು: ರಾಜ್ಯದಲ್ಲಿ ಕೇಳಿಬಂದಿರೋ ಪರ್ಸೆಂಟೇಜ್ ಆರೋಪದ ಬಗ್ಗೆ ಸರ್ಕಾರ ತನಿಖೆಗೆ ಮುಂದಾಗಿದೆ. ಬಿಜೆಪಿ ಆಡಳಿತಾವಧಿಯಲ್ಲದೆ, ಕಾಂಗ್ರೆಸ್ ಆಡಳಿತಾವಧಿಯ ಟೆಂಡರ್ ಪ್ರಕ್ರಿಯೆ ಬಗ್ಗೆಯೂ ತನಿಖೆಗೆ ಸರ್ಕಾರ ನಿರ್ಧರಿಸಿದೆ.

    ದಾವಣಗೆರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ರಾಜ್ಯಪಾಲರಿಗೆ ಕಾಂಗ್ರೆಸ್ ದೂರು ನೀಡಿರೋದು ಹಾಸ್ಯಾಸ್ಪದ ಎಂದಿದ್ದಾರೆ. ಯಾವ ಅವಧಿಯಲ್ಲಿ ಹೀಗಾಗಿದೆ ಎಂದು ಗುತ್ತಿಗೆದಾರರು ತಿಳಿಸಿಲ್ಲ. ಕಾಂಗ್ರೆಸ್ಸಿಗರೇ ಪರ್ಸೆಂಟೇಜ್ ಜನಕರು. ಅವರ ಕಾಲದಲ್ಲೇ ಇದು ಇದು ಜಾಸ್ತಿ ಆಗಿರೋದು ಎಂದು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅವಧಿಯ ಟೆಂಡರ್ ಗಳ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದು ಸಿಎಂ ನೇರ ಎಚ್ಚರಿಕೆ ನೀಡಿದ್ದಾರೆ.

    ಸಚಿವ ಗೋವಿಂದ ಕಾರಜೋಳ ಕೂಡ ಎಲ್ಲಾ ಟೆಂಡರ್‍ಗಳ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ. 40 ಪರ್ಸೆಂಟ್ ಕಮಿಷನ್ ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಿ ಎಂದು ಸಚಿವ ಬೈರತಿ ಬಸವರಾಜ್ ಸವಾಲ್ ಹಾಕಿದ್ದಾರೆ. ಭ್ರಷ್ಟಾಚಾರದ ತಂದೆ ತಾಯಿ ಕಾಂಗ್ರೆಸ್. ನಾವು ಬಂದ್ಮೇಲೆ ಭ್ರಷ್ಟಾಚಾರವನ್ನೇ ಅಂತ್ಯ ಮಾಡಿದ್ದೇವೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ನಾಯಕರು ಅರ್ಥವಿಲ್ಲದ ಹೇಳಿಕೆ ನೀಡ್ತಿದ್ದಾರೆ: ಬೊಮ್ಮಾಯಿ

    ಇಷ್ಟೇ ಅಲ್ಲ ಕಾಂಗ್ರೆಸ್ ನೀಡಿರೋ ದೂರಿಗೆ ಬಿಜೆಪಿ ಟ್ವಿಟ್ಟರ್‍ನಲ್ಲೂ ವ್ಯಂಗ್ಯವಾಡಿದೆ. ಆಧಾರರಹಿತ ಪತ್ರದ ಆಧಾರದಲ್ಲಿ ಸರ್ಕಾರ ವಜಾಗೊಳಿಸಲು ಒತ್ತಾಯಿಸುವುದಾದರೇ ಐಟಿ ದಾಳಿ ವೇಳೆ ಲಭಿಸಿದ ಅಧಿಕೃತ ದಾಖಲೆಗಳ ಪ್ರಕಾರ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬಹುದಿಲ್ಲವೇ ಎಂದು ಬಿಜೆಪಿ ಪ್ರಶ್ನಿಸಿದೆ. ಡಿಕೆಶಿ ಮೇಲೆ ರೇಡ್ ನಡೆದಾಗ ಅವರು ಒಂದಿಷ್ಟು ಕಾಗದ ಹರಿದಿದ್ರು. ಆ ಕಾಗದ ಜೋಡಿಸಿದಾಗ ಅದ್ರಲ್ಲಿ ಎಐಸಿಸಿ, ಎಪಿ, ಆರ್‍ಜಿ, ಎಸ್‍ಜಿ ಎಂಬ ಉಲ್ಲೇಖವಿತ್ತು. ಕೈ ನಾಯಕರ ಮೇಲೆ ಐಟಿ ದಾಳಿ ನಡೆದಾಗಲೆಲ್ಲಾ ಇದೇ ರೀತಿಯ ರಹಸ್ಯಾಕ್ಷರಗಳು ಹೊರಬರುತ್ತವೆ.. ಯಾರಿವರು.. ಸಿದ್ದರಾಮಯ್ಯನವರೇ ಸ್ವಲ್ಪ ವಿವರಿಸಿ ಎಂದು ಬಿಜೆಪಿ ವ್ಯಂಗ್ಯವಾಗಿ ಕೇಳಿದೆ.

  • 13 ರಾಜ್ಯಗಳ 95 ಕ್ಷೇತ್ರಗಳ ಮತದಾನ ಅಂತ್ಯ

    13 ರಾಜ್ಯಗಳ 95 ಕ್ಷೇತ್ರಗಳ ಮತದಾನ ಅಂತ್ಯ

    ಬೆಂಗಳೂರು: 2019ರ ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನದ ಅಂತ್ಯಗೊಂಡಿದೆ. 2ನೇ ಹಂತದಲ್ಲಿ 13 ರಾಜ್ಯಗಳ 95 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆಯಿತು.

    ಎಲ್ಲೆಲ್ಲಿ ಎಷ್ಟು ಮತದಾನ?
    ತಮಿಳುನಾಡಿನ 38 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ನಡೆದಿದ್ದು, ಶೇ. 61.52 ರಷ್ಟು ಮತದಾನ ಆಗಿದೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಪಿ. ಚಿದಂಬರಂ ಅವರು ಸ್ಪರ್ಧೆ ಮಾಡಿರುವ ಶಿವಗಂಗಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಚ್ ರಾಜಾ ಸ್ಪರ್ಧೆ ಮಾಡಿದ್ದಾರೆ. ಚೆನ್ನೈ ಕ್ಷೇತ್ರದಲ್ಲಿ ಡಿಎಂಕೆ ಮುಖಂಡ ದಯಾನಿಧಿ ಮಾರನ್ ವಿರುದ್ಧ ಪಿಎಂಕೆ ಪಕ್ಷದ ಸ್ಯಾಮ್ ಪಾಲ್ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಪೊನ್ ರಾಧಾಕೃಷ್ಣನ್ ಕನ್ಯಾ ಕುಮಾರಿಯಿಂದ ಕಾಂಗ್ರೆಸ್ ಪಕ್ಷದ ಎಚ್. ವಸಂತಕುಮಾರ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ. ತೂತುಕುಡಿ ಯಿಂದ ಡಿಎಂಕೆ ನಾಯಕಿ ಕನಿಮೋಳಿ ಕಣಕ್ಕೆ ಇಳಿದ್ದು, ಬಿಜೆಪಿಯ ತಮಿಳ್‍ಸಾಯಿ ಸುಂದರರಾಜನ್ ಬಿಜೆಪಿಯಿಂದ ಸ್ಪರ್ಧೆ ನಡೆಸಿದ್ದಾರೆ. ನೀಲ್‍ಗಿರೀಸ್ ಕ್ಷೇತ್ರದಿಂದ ಡಿಎಂಕೆ ನಾಯಕ ಎ.ರಾಜಾ ಕಣಕ್ಕೆ ಇಳಿದಿದ್ದರೆ ಎಐಡಿಎಂಕೆ ಪಕ್ಷದಿಂದ ತ್ಯಾಗರಾಜನ್ ಕಣದಲ್ಲಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತ ಯಂತ್ರಗಳಲ್ಲಿ ಭದ್ರವಾಗಿದ್ದು, 23 ರಂದು ನಡೆಯುವ ಮತ ಎಣಿಕೆವರೆಗೂ ಫಲಿತಾಶಂಕ್ಕಾಗಿ ಕಾಯಬೇಕಿದೆ.

    ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಇಂದು 8 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಇಲ್ಲಿ ಶೇ. 58.12 ರಷ್ಟು ಮತದಾನ ನಡೆದಿದೆ. ಪ್ರಮುಖವಾಗಿ ನಟಿ ಹೇಮಾ ಮಾಲಿನಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಮಥುರಾದಲ್ಲಿ ಕಾಂಗ್ರೆಸ್ ಪಕ್ಷದ ಮಹೇಶ್ ಪಾಠಕ್ ಹಾಗೂ ಆರ್ ಎಲ್‍ಡಿ ಯಿಂದ ಕಣಕ್ಕೆ ಇಳಿದಿರುವ ಖುನ್ವರ್ ನರೇಂದ್ರ ಸಿಂಗ್ ಅವರ ನಡುವೆ ತ್ರಿಕೋನ ಸ್ಪರ್ಧೆ ಇದೆ. ಅಲ್ಲದೇ ಕಾಂಗ್ರೆಸ್ ಪಕ್ಷದ ರಾಜ್‍ಬಬ್ಬರ್ ಸ್ಪರ್ಧೆ ಮಾಡಿರುವ ಫತೇಪುರ್ ಸಿಕ್ರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಾಜಕುಮಾರ್ ಚಹಾರ್ ಹಾಗೂ ಬಿಎಸ್‍ಪಿಯಿಂದ ಭಗವಾನ್ ಶರ್ಮಾ ಕಣದಲ್ಲಿ ಇದ್ದಾರೆ. ಡ್ಯಾನಿಶ್ ಅಲಿ ಅವರು ಅಮ್ರೋಹಾ ಕ್ಷೇತ್ರದಿಂದ ಬಿಜೆಪಿಯ ಕನ್ವರ್ ಸಿಂಗ್ ಅವರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ.

    ಜಮ್ಮು ಕಾಶ್ಮೀರ ಶ್ರೀನಗರದಲ್ಲಿ ಎನ್‍ಸಿ ಪಕ್ಷದಿಂದ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿಯಿಂದ ಖಲೀದ್ ಜಹಾಂಗೀರ್ ಕಣದಲ್ಲಿದ್ದಾರೆ. ಇನ್ನು ಉಧಾಂಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ.ಜಿತೇಂದ್ರ ಸಿಂಗ್ ಮತ್ತು ಕಾಂಗ್ರೆಸ್ ನಿಂದ ವಿಕ್ರಮಾಧಿತ್ಯ ಸಿಂಗ್ ಸ್ಪರ್ಧೆ ನಡೆಸಿದ್ದಾರೆ. 2 ಕ್ಷೇತ್ರಗಳಲ್ಲಿ ಶೇ. 43.37 ಮತದಾನ ನಡೆದಿದೆ.

    ಉಳಿದಂತೆ ಆಸ್ಸಾಂನ 5 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 2ನೇ ಹಂತದ ಮತದಾನದಲ್ಲಿ ಅಧಿಕ ಅಂದರೆ ಶೇ. 73.30 ರಷ್ಟು ಮತದಾನ ನಡೆದಿದೆ. ಉಳಿದಂತೆ ಮಹಾರಾಷ್ಟ್ರ 10 ಕ್ಷೇತ್ರಗಳಲ್ಲಿ ಶೇ. 55.37, ಒಡಿಶಾ 5 ಕ್ಷೇತ್ರಗಳಲ್ಲಿ ಶೇ. 57.40, ಚತ್ತೀಸ್‍ಗಢ 3 ಕ್ಷೇತ್ರದಲ್ಲಿ 68.70 ಹಾಗೂ ಪಶ್ಚಿಮ ಬಂಗಾಳದ 3 ಕ್ಷೇತ್ರಗಳಲ್ಲಿ ಶೇ.75.27 ರಷ್ಟು ಮತದಾನ ದಾಖಲಾಗಿದೆ. ಇನ್ನು ಮಣಿಪುರದಲ್ಲಿ ಶೇ. 74.69 ಹಾಗೂ ಪಾಂಡಿಚೇರಿಯಲ್ಲಿ 72.40 ರಷ್ಟು ಮತದಾನ ಆಗಿದೆ.