Tag: Pepper Spray

  • ಬೆಂಗಳೂರು| ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ

    ಬೆಂಗಳೂರು| ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆ ಪೆಪ್ಪರ್‌ ಸ್ಪ್ರೇ

    ಬೆಂಗಳೂರು: ಇಸ್ಪೀಟ್‌ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರ ಮೇಲೆಯೇ ಪೆಪ್ಪರ್‌ ಸ್ಪ್ರೇ ದಾಳಿ ಮಾಡಿರುವ ಘಟನೆ ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ನವಿಲುನಗರದ ಇಟ್ಟಿಗೆ ಗೂಡಿನಲ್ಲಿ ನಡೆದಿದೆ.

    ರೌಡಿಶೀಟರ್ ಕ್ಯಾಟ್ ರಾಜನ ಸಹಚರರು ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪ ಕೇಳಿಬಂದಿತ್ತು. ಮಾಹಿತಿ ಮೇರೆಗೆ ಇಂದು ಸಂಜೆ ಎಸಿಪಿ ಚಂದನ್ & ಟೀಂ ದಾಳಿ ನಡೆಸಿತು. ಸುಮಾರು 30 ಜನ ಲಕ್ಷ ಲಕ್ಷ ಹಣ ಬಾಜಿ ಕಟ್ಟಿ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಇಸ್ಪೀಟ್ ಅಡ್ಡೆ ಮೇಲಿನ ದಾಳಿ ವೇಳೆ ಪೊಲೀಸರ ಮೇಲೆ ಆರೋಪಿಗಳು ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆ ಬಳಿಕ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾರೆ. ಇನ್ನೂ ಕೆಲವರು ಸ್ಥಳದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದಾರೆ. ಸದ್ಯ ಇಸ್ಪೀಟ್ ಆಡುತ್ತಿದ್ದ 13 ಆರೋಪಿಗಳನ್ನು ಬಂಧಿಸಲಾಗಿದೆ.

    3.80 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಬೆಂಗಳೂರು| ಬೈಕ್‌ನಲ್ಲಿ ಬಂದು ಪೆಪ್ಪರ್ ಸ್ಪ್ರೇ ಹಾಕಿ ಯುವಕರ ಮೇಲೆ ಹಲ್ಲೆ

    ಬೆಂಗಳೂರು: ಯುವಕರ ಮೇಲೆ ಪೆಪ್ಪರ್ ಸ್ಪ್ರೇ ಹಾಕಿ ಹಲ್ಲೆ ಮಾಡಿರುವ ಘಟನೆ ನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ (Hosahalli Metro Statin) ಬಳಿ ನಡೆದಿದೆ.

    ಶುಕ್ರವಾರ ರಾತ್ರಿ ಮೆಟ್ರೋ ಸ್ಟೇಷನ್ ಬಳಿ ಮಾತನಾಡುತ್ತಾ ಕುಳಿತಿದ್ದ ಯುವಕರ ಮೇಲೆ ಹಲ್ಲೆ ನಡೆದಿದೆ.ಇದನ್ನೂ ಓದಿ:ಮತ್ತೆ 3 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ – ಬೆಂಗಳೂರಿಂದ ಮುಂಬೈಗೆ ಹೊರಟಿದ್ದ ಫ್ಲೈಟ್‌ಗೂ ಥ್ರೆಟ್ ಕಾಲ್

    ಯುವತಿಯರ ಜೊತೆ ಯುವಕರು ಮಾತನಾಡುತ್ತಾ ಕುಳಿತಿದ್ದರು. ಮಾತನಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಪುಂಡರ ಗ್ಯಾಂಗ್‌ವೊಂದು ಬಂದಿದ್ದು, ಕುಳಿತಿದ್ದ ಯುವಕರಿಗೆ ಚಮಕ್ ನೀಡಿದ್ದಾರೆ. ಇದರಿಂದಾಗಿ ಯುವಕರು ಹಾಗೂ ಬೈಕ್‌ನವರ ಮಧ್ಯೆ ಗಲಾಟೆ ನಡೆದಿದೆ.

    ಗಲಾಟ ವೇಳೆ ಕುಳಿತಿದ್ದ ಯುವಕರ ಮೇಲೆ ಪೆಪ್ಪರ್ ಸ್ಪ್ರೇ (Pepper Spray) ಹಾಕಿ ಹಲ್ಲೆ ಮಾಡಿದ್ದಾರೆ. ರಾತ್ರಿ 10:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಗೋವಿಂದರಾಜನಗರ ಪೊಲೀಸರು ಭೇಟಿ ನೀಡಿದ್ದಾರೆ.

    ಈ ಪ್ರಕರಣ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ (Govindaraja Nagar Police Station) ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ:Public TV Impact | ಕಲಬುರಗಿ ಸೆಂಟ್ರಲ್‌ ಜೈಲ್‌ನ ಇಬ್ಬರು ಅಧಿಕಾರಿಗಳು ಅಮಾನತು

  • ರಕ್ಷಿಸು ಅಂದ್ರೆ ನಾನೇ ಕಿಡ್ನಾಪ್ ಮಾಡಿಸಿದ್ದು ಅಂದ- ಪೆಪ್ಪರ್ ಸ್ಪ್ರೇ ಉಳಿಸಿತು ಯುವತಿ ಪ್ರಾಣ

    ರಕ್ಷಿಸು ಅಂದ್ರೆ ನಾನೇ ಕಿಡ್ನಾಪ್ ಮಾಡಿಸಿದ್ದು ಅಂದ- ಪೆಪ್ಪರ್ ಸ್ಪ್ರೇ ಉಳಿಸಿತು ಯುವತಿ ಪ್ರಾಣ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿರ್ಭಯಾ ಮಾದರಿಯ ಭಾರೀ ದುರಂತವೊಂದು ತಪ್ಪಿದೆ. ಪೆಪ್ಪರ್ ಸ್ಪ್ರೇ ಯುವತಿಯ ಮಾನ, ಪ್ರಾಣವನ್ನು ಉಳಿಸಿದೆ.

    ಸಚಿನ್ ಯುವತಿಯನ್ನು ಕಿಡ್ನಾಪ್ ಮಾಡಿದ ಮಾಜಿ ಸಹೋದ್ಯೋಗಿ. ಯುವತಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಆಕೆಯನ್ನು ಮಾಜಿ ಸಹೋದ್ಯೋಗಿ ಕಿಡ್ನಾಪ್ ಮಾಡಿದ್ದಾನೆ. ಬಿಳಿ ಕಾರಲ್ಲಿ ಬಂದವರು ಯುವತಿಗೆ ಮಂಪರು ಬರಿಸಿ ಕಿಡ್ನಾಪ್ ಮಾಡಿದ್ದಾರೆ.

    ಸಚಿನ್ ತನ್ನ ಕೆಂಪು ಸ್ವಿಫ್ಟ್ ಕಾರಲ್ಲಿ ಹಿಂದೆಯೇ ಬಂದನು. ಈ ವೇಳೆ ಯುವತಿ ನನ್ನನ್ನು ರಕ್ಷಿಸು ಎಂದು ಕೇಳಿಕೊಂಡಿದ್ದಕ್ಕೆ ಕಿರಾತಕ ಸಚಿನ್ ನಾನೇ ಕಿಡ್ನಾಪ್ ಮಾಡಿಸಿದ್ದು ಎಂದು ಹೇಳಿದ್ದಾನೆ. ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

    ಕೊನೆಗೆ ಕಿರಾತಕರು ಯುವತಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆದರೆ ಪೆಪ್ಪರ್ ಸ್ಪ್ರೇ ಘಾಟು ಕಾರಲ್ಲಿ ಹರಡಿದ್ದ ಕಾರಣ ಸ್ವತಃ ಸಚಿನ್ ಒದ್ದಾಡಿದ್ದಾನೆ. ಕೊನೆಗೆ ಸಚಿನ್ ಫ್ರೆಶ್ ಏರ್ ಗಾಗಿ ಕಾರ್ ಡೋರ್ ಓಪನ್ ಮಾಡಿದ್ದನು. ಆಗ ಯುವತಿ ಕಾರಿನಿಂದ ಜಿಗಿದು ಎಸ್ಕೇಪ್ ಆದಳು.

    ಕುಣಿಗಲ್ ಬೈಪಾಸ್‍ನಲ್ಲಿ ಕಂಗಾಲಾಗಿ ಓಡ್ತಿದ್ದ ಯುವತಿಯನ್ನು ಆಟೋ ಚಾಲಕ ರಕ್ಷಿಸಿದ್ದಾರೆ. ಈ ಘಟನೆ ಕಳೆದ ಬುಧವಾರ ನಡೆದಿದ್ದು, ಟಿ ದಾಸರಹಳ್ಳಿಯಿಂದ ಯುವತಿ ಕಿಡ್ನಾಪ್ ಆಗಿದ್ದಳು. ಈ ಬಗ್ಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈಡ್ ಕೊಡ್ಲಿಲ್ಲವೆಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ ಮಾಡಿದ ದುಷ್ಕರ್ಮಿಗಳು!

    ಸೈಡ್ ಕೊಡ್ಲಿಲ್ಲವೆಂದು ಬಿಎಂಟಿಸಿ ಚಾಲಕನ ಮೇಲೆ ಹಲ್ಲೆ, ಪೆಪ್ಪರ್ ಸ್ಪ್ರೇ ಮಾಡಿದ ದುಷ್ಕರ್ಮಿಗಳು!

    ಬೆಂಗಳೂರು: ಸೈಡ್ ಕೊಡ್ಲಿಲ್ಲ ಅಂತಾ ಬಿಎಂಟಿಸಿ ಡ್ರೈವರ್ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ಬಳಿಕ ಪೆಪ್ಪರ್ ಸ್ಟ್ರೇ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

    36 ವರ್ಷದ ಪದ್ಮನಾಭ್ ಹಲ್ಲೆಗೊಳಗಾದ ಬಿಎಂಟಿಸಿ ಚಾಲಕ. ರೂಟ್ ನಂ 271 ಆರ್ ನಂಬರಿನ ಬಿಎಂಟಿಸಿ ಬಸ್ ಡ್ರೈವರ್ ಪದ್ಮನಾಭ್ ಮೇಲೆ ಬಿಇಎಲ್ ಸರ್ಕಲ್ ಬಳಿ ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ನಂತ್ರ ಪೆಪ್ಪರ್ ಸ್ಟ್ರೇ ಮಾಡಿ ಪರಾರಿಯಾಗಿದ್ದಾರೆ.

    ಸದ್ಯ ದುಷ್ಕರ್ಮಿಗಳ ವಿರುದ್ಧ ಚಾಲಕ ಪದ್ಮನಾಭ್ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.