Tag: Pepper

  • ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಬಂಗುಡೆ ಪೆಪ್ಪರ್‌ ಫ್ರೈ ಸವಿದ್ರೆ ಮನೆಯಲ್ಲಿ ಮತ್ತೆ ಮತ್ತೆ ಅದನ್ನೇ ಮಾಡ್ತೀರ…

    ಕೆಲಸದ ಒತ್ತಡದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವವರು ರುಚಿಕರ ಆಹಾರ ಸವಿಯಬೇಕಾದ್ರೆ ಹೋಟೆಲನ್ನೇ ಅವಲಂಬಿಸಿರ್ತಾರೆ. ಇನ್ನೂ ಕೆಲವರು ಅಷ್ಟು ಟೈಂ ಯಾರ್‌ ಕೊಡ್ತಾರೆ ಅಂತ ಇಷ್ಟವಿದ್ದರೂ ನೆಚ್ಚಿನ ಸ್ಫೈಸಿ ಫುಡ್‌ ಮಾಡೋಕಾಗದೇ ಅರ್ಜೆಂಟ್‌ನಲ್ಲಿ ಆಗಿದ್ದನ್ನು ಮಾಡಿಕೊಳ್ತಾರೆ. ಮನೆಗಳಲ್ಲಿ ಚಿಕನ್‌, ಮಟನ್‌ ಪೆಪ್ಪರ್‌ ಫ್ರೈ ಮಾಡೋದು ಸಹಜ.. ಆದ್ರೆ ಬಂಗುಡೆ ಪೆಪ್ಪರ್‌ ಫ್ರೈ ಕೂಡ ಸುಲಭವಾಗಿ ಮಾಡಬಹುದು ಅನ್ನೋದಕ್ಕೆ ಒಂದಿಷ್ಟು ಟಿಪ್ಸ್‌ ಇಲ್ಲಿದೆ.

    ಈ ಫಿಶ್ ಫ್ರೈ ಗರಿ ಗರಿಯಾಗಿರುತ್ತೆ ಮತ್ತು ರುಚಿಕರವಾಗಿಯೂ ಇರುತ್ತೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ. ಒಮ್ಮೆ ಇದನ್ನ ಸವಿದ್‌ರೆ ಮತ್ತೆ ಮತ್ತೆ ಸವಿಯಬೇಕು ಅಂತ ಅನ್ನಿಸುತ್ತೆ. ಇದನ್ನ ಹೇಗೆ ಮಾಡಬೇಕು ಅಂತ ನೋಡೋದಾದ್ರೆ…

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು.
    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು.
    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಪೆಪ್ಪರ್ ಪೌಡರ್ ಬಳಸಿ ಮಾಡಿ ಬಂಗುಡೆ ಫ್ರೈ

    ಬಂಗುಡೆ ಫ್ರೈಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.  ಈ  ಫಿಶ್ ಫ್ರೈ ಗರಿ ಗರಿಯಾಗಿರುತ್ತದೆ ಮತ್ತು ರುಚಿಕರವಾಗಿರುತ್ತದೆ. ಮೀನಿನ ಫ್ರೈಯನ್ನು ಈರುಳ್ಳಿ ಮತ್ತು ನಿಂಬೆ ಹಣ್ಣಿನ ಹೋಳಿನ ಜೊತೆಗೆ ಬಡಿಸಿ. ನಿಮ್ಮ ಕುಟುಂಬದ ಸದಸ್ಯರು ಖಂಡಿತವಾಗಿ ಈ ಭಾರತದ ಶೈಲಿಯ ಮೀನಿನ ಖಾದ್ಯವನ್ನು ಇಷ್ಟಪಡುತ್ತಾರೆ.

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ ಮೀನು – ಅರ್ಧ ಕೆಜಿ
    * ಕಾಳುಮೆಣಸಿನ ಪುಡಿ – 1 ಚಮಚ
    * ಸೋಂಪು ಪುಡಿ – 1 ಚಮಚ
    * ಕರಿಬೇವು- ಸ್ವಲ್ಪ
    * ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
    * ಅಡುಗೆ ಎಣ್ಣೆ- 2 ಚಮಚ
    * ಗರಂ ಮಸಾಲೆ- ಅರ್ಧ ಚಮಚ
    * ನಿಂಬೆರಸ – 1 ಚಮಚ
    * ಅರಿಶಿಣ – ಸ್ವಲ್ಪ
    * ಖಾರದಪುಡಿ – ಅರ್ಧ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಜೀರಿಗೆ ಪೌಡರ್- ಅರ್ಧ ಚಮಚ

    ಮಾಡುವ ವಿಧಾನ:
    * ಮೊದಲು ಮೀನನ್ನು ಚೆನ್ನಾಗಿ ತೊಳೆದುಕೊಂಡಿರಬೇಕು.
    * ಒಂದು ಬೌಲ್‍ನಲ್ಲಿ ನಿಂಬೆರಸ, ಅರಿಶಿಣ, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪೌಡರ್, ಕಾಳುಮೆಣಸಿನ ಪುಡಿ, ಸೋಂಪಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆಯನ್ನು ಹಾಕಿ ಮಸಾಲೆಯನ್ನು ತಯಾರಿಸಿಕೊಂಡಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಈಗಾಗಲೇ ನಾವು ತಯಾರಿಸಿದ ಮಸಾಲೆಯಲ್ಲಿ ಮೀನಿನ ತುಂಡುಗಳನ್ನು ಸೇರಿಸಿ ಕೆಲವು ನಿಮಿಷ ಹಾಗೆ ಇಟ್ಟಿರಬೇಕು. ಇದನ್ನೂ ಓದಿ: ಮಂಗಳೂರು ಸ್ಟೈಲ್ ಚಿಕನ್ ಸುಕ್ಕಾ ಮಾಡೋ ಸುಲಭ ವಿಧಾನ

    * ಪ್ಯಾನ್ ಬಿಸಿ ಮಾಡಿ ಅದಕ್ಕೆ ಅಡುಗೆಎಣ್ಣೆ ಹಾಕಿ ಬಿಸಿಯಾದ ನಂತರ ಅದರ ಮೇಲೆ ಮೀನಿನ ತುಂಡುಗಳನ್ನು ಇರಿಸಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಅದರ ಮೇಲೆ ಸೋಂಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಬಂಗುಡೆ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಮಲೆನಾಡಲ್ಲಿ ವರ್ಷಧಾರೆ – ಲಕ್ಷಾಂತರ ರೂಪಾಯಿ ಹಣ ಉಳಿಸಿದ ಮಳೆರಾಯ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಳೆಯಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದು ಬೆಂದಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ.

    ಇಂದು ಬೆಳಗ್ಗೆಯಿಂದಲೂ ಮಲೆನಾಡು ಭಾಗವಾದ ಕಳಸ, ಮೂಡಿಗೆರೆ ಹಾಗೂ ಕೊಪ್ಪ ಭಾಗದಲ್ಲಿ ಮೋಡ ಕವಿದ ವಾತಾವರಣವಿತ್ತು. ಮೋಡದ ಮಧ್ಯೆಯೂ ಸಿಕ್ಕಾಪಟ್ಟೆ ಸೆಕೆ ಕೂಡ ಇತ್ತು. ಜನ ಸಂಜೆ ವೇಳೆಗೆ ಮಳೆ ಬರಬಹುದು ಎಂದು ಭಾವಿಸಿದ್ದರು. ಅದರಂತೆ ಜಿಲ್ಲೆಯ ಕಳಸ ತಾಲೂಕಿನ ಕಳಸ, ಹೊರನಾಡು, ಹಿರೇಬೈಲು, ಹುಳುವಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಮೂರು ಗಂಟೆಯ ನಂತರ ಆರಂಭವಾದ ಮಳೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದಿದೆ.

    ಭಾರೀ ಬಿಸಿಲಿನಿಂದ ಬಳಲುತ್ತಿದ್ದ ಕಾಫಿ ಗಿಡಗಳಿಗೆ ಬೆಳೆಗಾರರು ಕೂಡ ನಾನಾ ರೀತಿಯಲ್ಲಿ ನೀರಾಯಿಸುತ್ತಿದ್ದರು. ಸ್ಪ್ರಿಂಕ್ಲರ್ ಸಾವಿರಾರು ಹಣ ನೀಡಿ ಕಾಫಿಗಿಡವನ್ನು ತಣ್ಣಗೆ ಇಡಲು ಪ್ರಯತ್ನಿಸುತ್ತಿದ್ದರು. ಸದ್ಯಕ್ಕೆ ಮಲೆನಾಡಲ್ಲಿ ಕಾಫಿ-ಮೆಣಸು-ಅಡಿಕೆಗೆ ನೀರು ಬೇಕಿತ್ತು. ಆದರೆ ಸಂಜೆ ವೇಳೆಗೆ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಕಾಫಿ-ಅಡಿಕೆ ಬೆಳೆಗಾರರಿಗೆ ವರವಾಗಿದೆ ಹಾಗೂ ಮಳೆರಾಯ ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ಹಣ ಉಳಿಸಿದ್ದಾನೆ.

    ಧಾರಾಕಾರವಾಗಿ ಸುರಿದ ಮಳೆಯಿಂದ ಸುಮಾರು ಇನ್ನೊಂದು ವಾರಗಳ ಕಾಲ ನೀರಾಯಿಸದಿದ್ದರೂ ಯಾವುದೇ ತೊಂದರೆ ಇಲ್ಲ. ಈ ಅಕಾಲಿಕ ಮಳೆಯಿಂದ ಮಲೆನಾಡಿಗರು ಸಂತಸಗೊಂಡಿದ್ದಾರೆ. ಆದರೆ ಈ ಸಂತೋಷದ ಮಧ್ಯೆಯೂ ಮಳೆ ಅಂದರೆ ಮಲೆನಾಡಿಗರಿಗೆ ಭಯ- ಆತಂಕ ಕೂಡ ಇದೆ. ಯಾಕೆಂದರೆ ಕಳೆದೆರಡು ವರ್ಷ ಮಳೆಯ ಅವಾಂತರಗಳನ್ನು ನೆನೆದು ಮಲೆನಾಡಿಗರು ಈ ಮಳೆಯಿಂದ ಸಂತಸಗೊಂಡರೂ ಕೂಡ ಭವಿಷ್ಯದ ಮಳೆ ಬಗ್ಗೆ ಭಯ ಹಾಗೆಯೇ ಇದೆ.

  • ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಕೂಲಿ ಕೆಲ್ಸಕ್ಕೆ ಅಸ್ಸಾಂನಿಂದ ಬಂದ ಅಮ್ಮ ಮಗಳು – ಕರೆಂಟ್ ಶಾಕ್‍ನಿಂದ ಸಾವು

    ಮಡಿಕೇರಿ: ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದ ಅಮ್ಮ ಮಗಳು ಕಾಳು ಮೆಣಸು ಕೊಯ್ಯಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ.

    ಮೃತ ಮಹಿಳೆಯರನ್ನು 45 ವಷ೯ದ ಸ್ವರೂಪ ಖಾತುನ್ ಮತ್ತು 20 ವಷ೯ದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಳು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೆ ಈ ಘಟನೆ ಕಾರಣ ಎನ್ನಲಾಗಿದೆ.

    ಕರಿಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ಬಳಕೆ ಮಾಡಬೇಡಿ ಎಂದು ಕಾರ್ಮಿಕ ಇಲಾಖೆಯ ಆದೇಶ ಹೋರಾಡಿಸಿದ್ದರೂ ಕೊಡಗಿನ ಬಹುತೇಕ ಕಾಫಿ ತೋಟದಲ್ಲಿ ಆದೇಶ ಪಾಲನೆ ಆಗುತ್ತಿಲ್ಲ. ಇದರಿಂದಾಗಿ ಇಂದು ಕೂಲಿ ಹುಡುಕಿ ಬಂದ ಎರಡು ಜೀವಗಳು ಬಲಿಯಾಗಿವೆ. ಕಾಳು ಕೊಯ್ಯಲು ಹೋದ ಖಾತುನ್ ಮತ್ತು ಹಸೀನಾ ಅಲ್ಯೂಮಿನಿಯಂ ಏಣಿ ಮೇಲೆ ಹತ್ತಿದ್ದಾರೆ. ಈ ವೇಳೆ ತೋಟದ ಮೇಲೆ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿಯಿಂದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಹಿಳೆಯರಿಗೂ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ವಿದ್ಯುತ್ ಸ್ಪರ್ಶದ ತೀವ್ರತೆ ಇಬ್ಬರು ಮಹಿಳೆಯರ ಕಾಲು ಸುಟ್ಟು ಕರಕಲಾಗಿದೆ. ಮೃತದೇಹಗಳನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಕೊಡಗಿನ ಹೈ ಕ್ವಾಲಿಟಿ ಕಾಳುಮೆಣಸಿನ ಜೊತೆ ವಿಯೇಟ್ನಾಂ ಮೆಣಸು ಕಲಬೆರಕೆ- ಜಿಲ್ಲಾ ರೈತ ಸಂಘದ ಪ್ರತಿಭಟನೆ

    ಮಡಿಕೇರಿ: ವಿಯೇಟ್ನಾಂನಿಂದ ಅತ್ಯಂತ ಕಳಪೆ ಗುಣಮಟ್ಟದ ಮೆಣಸು ಆಮದಾಗುತ್ತಿದ್ದು, ಉತ್ತಮ ಗುಣಮಟ್ಟದ ಕೊಡಗಿನ ಕಾಳುಮೆಣಸಿನೊಂದಿಗೆ ಕಲಬೆರಕೆಯಾಗಿ ಮಾರಾಟವಾಗುತ್ತಿದ್ದೆ. ಇದರಿಂದ ಕೊಡಗಿನ ಹೈ ಕ್ವಾಲಿಟಿ ಪೆಪ್ಪರ್ ತನ್ನ ಕ್ವಾಲಿಟಿ ಕಳೆದುಕೊಳ್ಳುತ್ತಿರೋದರಿಂದ ಮೆಣಸಿನ ಬೆಲೆ ಗಣನೀಯವಾಗಿ ಕುಸಿತ ಕಂಡಿದೆ.

    ಕಲಬೆರಕೆ ಮಾಡೋ ಕಾರ್ಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ರೋಸ್‍ಮೇರಿ ಇಂಟರ್ ನ್ಯಾಷನಲ್ ಕಂಪೆನಿಗೆ ನೀಡುತ್ತಿರೋ ಗೋಣಿಕೊಪ್ಪ ಎಪಿಎಂಸಿ ಗೋಡೌನ್‍ ನಲ್ಲಿ ಕಲಬೆರಕೆ ಹುಡಿಗಳು, ಯಂತ್ರಗಳು ಹಾಗೂ ವಿಯೆಟ್ನಾಂ ಪೆಪ್ಪರ್ ಪತ್ತೆಯಾಗಿದೆ.

    ಎಪಿಎಂಸಿಗೆ ಸೇರಿದ ಗೋಡೌನ್ ಒಳಗೆ ಕಲಬೆರಕೆ ನಡೆಯುತ್ತಿರೋದ್ರಲ್ಲಿ ಆಡಳಿತ ಮಂಡಳಿ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದ್ದು, ಇದನ್ನು ಖಂಡಿಸಿ ಕೊಡಗು ಜಿಲ್ಲಾ ರೈತ ಸಂಘ ಬೃಹತ್ ಟ್ರ್ಯಾಕ್ಟರ್ ಜಾಥಾ ನಡೆಸಿ ವಿಯೆಟ್ನಾಂ ಪೆಪ್ಪರ್ ಆಮದು ನಿಷೇಧಕ್ಕೆ ಆಗ್ರಹಿಸಿದ್ರು.

    ಇದಕ್ಕೆಲ್ಲಾ ಎಪಿಎಂಸಿಯ ಬಿಜೆಪಿ ಹಿಡಿತದ ಆಡಳಿತ ಮಂಡಳಿಯೇ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಕೊಡಗು ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಪ್ರಸ್ತಾಪವಾಗಿ ಕೋಲಾಹಲಕ್ಕೆ ಕಾರಣವಾಯಿತು. ಎಪಿಎಂಸಿ ವಿಯೆಟ್ನಾಂ ಕಾಳುಮೆಣಸು ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ಸಭೆಯಲ್ಲಿ ಪ್ರತಿಭಟನೆ ನಡೆಸಿದರು.

    ಒಟ್ಟಿನಲ್ಲಿ ವಿಯೇಟ್ನಾಂ ಕಾಳುಮೆಣಸು ಈಗ ಕೊಡಗಿನ ರೈತರನ್ನು ಕಂಗೆಡುವಂತೆ ಮಾಡಿದೆ.