Tag: People’s Liberation Army

  • ಸ್ಫೋಟಕ ಆಡಿಯೋ ಲೀಕ್ – ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಯೋಜನೆ

    ಸ್ಫೋಟಕ ಆಡಿಯೋ ಲೀಕ್ – ತೈವಾನ್ ಮೇಲೆ ಆಕ್ರಮಣಕ್ಕೆ ಚೀನಾ ಯೋಜನೆ

    ಬೀಜಿಂಗ್: ಪೀಪಲ್ಸ್ ಲಿಬರೇಷನ್ ಆರ್ಮಿಯ(ಪಿಎಲ್‌ಎ) ಉನ್ನತ ರಹಸ್ಯ ಸಭೆಯ ಸ್ಫೋಟಕ ಆಡಿಯೋ ಸೋರಿಕೆಯಾಗಿದ್ದು, ಇದರಲ್ಲಿ ಚೀನಾ ತೈವಾನ್ ಮೇಲೆ ದಾಳಿ ನಡೆಸುವ ಬಗ್ಗೆ ಯೋಜನೆ ರೂಪಿಸಿರುವುದು ಬಹಿರಂಗವಾಗಿದೆ.

    1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಮಿಲಿಟರಿ ಕಮಾಂಡ್‌ನ ಉನ್ನತ ರಹಸ್ಯ ಸಭೆಯ ರೆಕಾರ್ಡಿಂಗ್ ಸೋರಿಕೆಯಾಗಿರುವುದು ಎಂದು ವರದಿಯಾಗಿದೆ. ಸೋರಿಕೆಯಾಗಿರುವ ಆಡಿಯೋ ಕ್ಲಿಪ್ ಅಧಿಕೃತವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ‘ಹೈಬ್ರೀಡ್’ ಉಗ್ರರ ಬಂಧನ- ಶಸ್ತ್ರಾಸ್ತ್ರಗಳು ವಶ

    ಮೇ 14ರಂದು ಚೀನಾದ ಕಮ್ಯುನಿಸ್ಟ್ ಪಾರ್ಟಿ ಮಿಲಿಟರಿಯೊಂದಿಗೆ ಸಭೆ ನಡೆಸಿತ್ತು. ಇದರ ಆಡಿಯೋ ರೆಕಾರ್ಡಿಂಗ್ ಅನ್ನು ಕಾರ್ಯಕರ್ತೆ ಜೆನ್ನಿಫರ್ ಝೆಂಗ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

    ಆಡಿಯೋದಲ್ಲಿ ಚೀನಾದ ಉನ್ನತ ಮಿಲಿಟರಿ ಜನರಲ್ ತೈವಾನ್ ಮೇಲೆ ಯುದ್ಧದ ಕಾರ್ಯತಂತ್ರ ರೂಪಿಸುವುದನ್ನು ಕೇಳಬಹುದು. ಆಡಿಯೋ ಕ್ಲಿಪ್ 57 ನಿಮಿಷಗಳದ್ದಾಗಿದ್ದು, ಚೀನಾದ ಉನ್ನತ ಜನರಲ್ ತೈವಾನ್‌ನಲ್ಲಿ ಯುದ್ಧ ಹೇಗೆ ನಡೆಸಬೇಕು ಹಾಗೂ ಹೇಗೆ ಸಾಗಬೇಕು ಎಂದು ಚರ್ಚಿಸಿದ್ದಾರೆ.