Tag: peoples

  • ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಭೀಕರ ಬರಗಾಲಕ್ಕೆ ಜನ, ಜಾನುವಾರು ಕಂಗಾಲು- ದಿನ ಕಳೆದಂತೆ ಹೆಚ್ಚಾಗ್ತಿದೆ ನೀರಿಗಾಗಿ ಹಾಹಾಕಾರ

    ಕೊಪ್ಪಳ: ರಾಜ್ಯದ ಉತ್ತರ ಭಾಗದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಬರ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ಬರ ಒಂದು ಕಡೆಯಾದರೆ ಇನ್ನೊಂದೆಡೆ ಮೇವು ಇಲ್ಲದೆ ಜಾನುವಾರುಗಳೂ ಪರಿತಪಿಸುತ್ತಿವೆ.

    ಕುಷ್ಟಗಿ, ಯಲಬುರ್ಗಾ, ಕನಕಗಿರಿ ಮತ್ತು ಕೊಪ್ಪಳ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಸಾಕಷ್ಟು ಕಡೆ ಬೋರ್ ವೇಲ್ ಕೊರೆಸಿದ್ದಾರೆ. ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ನಡೆಯುತ್ತಿದೆ. ಆದರೂ ಕೂಡ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.

    ಈಗಾಗಲೇ ತುಂಗಭದ್ರಾ ಡ್ಯಾಂನಲ್ಲಿ ನೀರು ಇಲ್ಲದೆ ಬಣ ಗುಟ್ಟುತ್ತಿದೆ. ಮಳೆಗಾಲದಲ್ಲಿ ಡ್ಯಾಂ ತುಂಬಿ, 100 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿತ್ತು. ಹೆಚ್ಚಿಗೆ ನೀರು ಹರಿದು ಬಂದಿದ್ದರಿಂದ 50 ಟಿಎಂಸಿಗೂ ಹೆಚ್ಚು ನೀರನ್ನು ನದಿಗಳ ಮೂಲಕ ಹೊರಗೆ ಹರಿಬಿಡಲಾಗಿತ್ತು. ಆದರೆ ಆಗ ನೀರನ್ನು ಸಂಗ್ರಹಿಸಲು ಪರ್ಯಾಯ ವ್ಯವಸ್ಥೆ ಮಾಡಿದ್ದರೆ, ಇಂದು ನೀರಿನ ಸಮಸ್ಯೆ ಬರುತ್ತಿಲ್ಲ. ಇವತ್ತು ಡ್ಯಾಂನಲ್ಲಿ ಕೇವಲ 3 ಟಿಎಂಸಿ ನೀರು ಇದೆ. ಇದು ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಮೀಸಲಿಡಲಾಗಿದ್ದು, ಇನ್ನೂ ಒಂದು ಟಿಎಂಸಿ ನೀರು ಡೆಡ್ ಸ್ಟೋರೇಜ್‍ಗೆ ಬಿಡಬೇಕಾಗಿದೆ.

    ಇಂದು ನೀರು ಸಿಗದೆ ಬೇರೆ ಬೇರೆ ಊರುಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ. ನೀರಿಲ್ಲದೆ ಜಾನುವಾರುಗಳಿಗೆ ಮೇವು ಸಹ ಸಿಗುತ್ತಿಲ್ಲ. ಹೀಗಾಗಿ ಗುಡ್ಡ ಕಾಡು ಎನ್ನದೆ ಜಾನುವಾರುಗಳನ್ನು ರಕ್ಷಣೆ ಮಾಡಲು ರೈತರು ಮುಂದಾಗುತ್ತಿದ್ದಾರೆ. ರೈತರು ನಮ್ಮ ಸಮಸ್ಯೆ ಯಾರಿಗೆ ಹೇಳೋಣ ಎಂದು ಚಡಪಡಿಸುತ್ತಿದ್ದಾರೆ. ಅಲ್ಲದೆ ನಮ್ಮ ಸಮಸ್ಯೆಯನ್ನ ಜನಪ್ರತಿನಿಧಿಗಳೊಂದಿಗೆ ಹೇಳಿಕೊಂಡರೆ ಅವರು ಕಾರೇ ಎನ್ನುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

  • ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

    ಸಾರಿಗೆ ಇಲಾಖೆ ಇನ್ನಾದರೂ ಎಚ್ಚೆತ್ತುಕೊಳ್ಳಲಿ – ಸಾವಿನ ಜೊತೆ ಸವಾರಿಗೆ ಬೀಳುತ್ತಾ ಬ್ರೇಕ್?

    ಚಿಕ್ಕಬಳ್ಳಾಪುರ: ಇತ್ತ ಮಂಡ್ಯ ಸಾವಿನ ಬಸ್ ದುರಂತ ರಾಜ್ಯದ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದರೆ, ಅತ್ತ ಇಡೀ ರಾಜ್ಯಾದ್ಯಾಂತ ಇಂತಹ ಅದೆಷ್ಟೋ ಕಡೆಗಳಲ್ಲಿ ಖಾಸಗಿ ಬಸ್‍ಗಳಲ್ಲಿ ಸಾರ್ವಜನಿಕರು ಸಾವಿನ ಜೊತೆ ಸವಾರಿ ನಡೆಸುತ್ತಿದ್ದಾರೆ.

    ಇದಕ್ಕೆ ಪ್ರಮುಖ ಸಾಕ್ಷಿ ಎಂಬಂತೆ ರಾಜ್ಯ ರಾಜಧಾನಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಖಾಸಗಿ ಬಸ್‍ಗಳು ಸಾವಿನ ಬಸ್‍ಗಳಾಗಿ ಸಂಚರಿಸುತ್ತಿರುವ ದೃಶ್ಯ ಎಲ್ಲಡೆ ಸಾಮಾನ್ಯ ಎಂಬಂತಾಗಿದೆ. ಜಿಲ್ಲೆಯ ಗಡಿಭಾಗದ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕುಗಳಲ್ಲಿ ಯಾರ ಭಯವೂ ಇಲ್ಲದೆ ಖಾಸಗಿ ಬಸ್‍ಗಳು ಕಾನೂನುಗಳನ್ನು ಉಲ್ಲಂಘಿಸಿ ರಾಜರೋಷವಾಗಿ ಸಂಚರಿಸುತ್ತಿವೆ.

    ಚಿಂತಾಮಣಿ-ಚೇಳೂರು, ಚಿಂತಾಮಣಿ-ಕೆಂಚಾರ್ಲಹಳ್ಳಿ ಮಾರ್ಗದಲ್ಲಿ ಸರ್ಕಾರಿ ಬಸ್‍ಗಳ ಸಂಚಾರ ವಿರಳವಾಗಿರುವುದರಿಂದ ಖಾಸಗಿ ಬಸ್‍ಗಳು ಎಗ್ಗಿಲ್ಲದೇ ಸಂಚರಿಸುತ್ತಿವೆ. ಕೇವಲ ಖಾಸಗಿ ಬಸ್‍ನ ಓಳಭಾಗದಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿರೋದು ಮಾತ್ರವಲ್ಲದೆ ಸಾವಿನ ಸವಾರಿಗೆ ಸ್ಪಷ್ಟ ಸಾಕ್ಷಿ ಎಂಬಂತೆ ಬಸ್‍ನ ಟಾಪ್ ಮೇಲೆ ಕೂತು ಸಾರ್ವಜನಿಕರು ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ದಿನವೂ ಇದೇ ರೀತಿ ಸಾರ್ವಜನಿಕರು ಬಸ್‍ನ ಟಾಪ್ ಹಾಗೂ ಬಸ್‍ನ ಹಿಂಭಾಗದ ಮೆಟ್ಟಿಲುಗಳು ಸೇರಿದಂತೆ ಬಾಗಿಲಲ್ಲಿ ನೇತಾಡಿಕೊಂಡು ಪ್ರಯಾಣ ಮಾಡುತ್ತಿದ್ದರೂ ಖಾಸಗಿ ಬಸ್‍ಗಳಿಗೆ ಕಡಿವಾಣ ಹಾಕುವ ಕೆಲಸ ಆರ್‍ಟಿಓ ಇಲಾಖೆ ಮಾಡಿಲ್ಲ.

    ಪ್ರತಿದಿನವೂ ರಾಜ್ಯದ ನಾನಾ ಕಡೆಯೂ ಇಂತಹ ಅದೆಷ್ಟೂ ಸಾವಿನ ಬಸ್ ಗಳು ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟ ಆಡುತ್ತಾ ಸವಾರಿ ಮಾಡುತ್ತಿವೆ. ಹೀಗಾಗಿ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀ ಸಪ್ಲೈ ಮಾಡಿ ವ್ಯಾಪಾರಿಗಳಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ವ್ಯಕ್ತಿ ಪರಾರಿ!

    ಟೀ ಸಪ್ಲೈ ಮಾಡಿ ವ್ಯಾಪಾರಿಗಳಿಗೆ ಕೋಟ್ಯಂತರ ರೂ. ಪಂಗನಾಮ ಹಾಕಿ ವ್ಯಕ್ತಿ ಪರಾರಿ!

    ಚಿತ್ರದುರ್ಗ: ಟೀ ಸಪ್ಲೈ ಮಾಡಿಕೊಂಡೇ ಎಲ್ಲರ ವಿಶ್ವಾಸ ಗಳಿಸಿಕೊಂಡಿದ್ದ ವ್ಯಕ್ತಿಯೊಬ್ಬ ಅಂಗೈಯಲ್ಲೇ ಅರಮನೆ ತೋರಿಸಿ ಜನರಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ.

    ಚಿತ್ರದುರ್ಗ ನಗರದ ನೆಹರು ನಗರದ ಸೈದು ಟೀ ಸ್ಟಾಲ್ ಬಳಿ ಈ ಘಟನೆ ನಡೆದಿದೆ. ಈ ಅಂಗಡಿಯ ಮಾಲೀಕ ಸೈಯದ್ ಗೌಸ್ ಅಲಿಯಾಸ್ ಸೈದು, ಚೀಟಿ ವ್ಯವಹಾರದ ಹೆಸರಿನಲ್ಲಿ ಸುಮಾರು 250 ಜನರ ಬಳಿ ಕೋಟ್ಯಂತರ ರೂಪಾಯಿ ಪಡೆದಿದ್ದನು. ಹಣ ವಾಪಸ್ ಕೇಳಲು ಹೋದವರಿಗೆ ರಸ್ತೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ಹಿಡಿದಿದ್ದೇನೆ. ಅದರ ಬಿಲ್ ಆದ ಬಳಿಕ ದುಡ್ಡು ಹಿಂದಿರುಗಿಸುವುದಾಗಿ ಹೇಳಿ ಮತ್ತಷ್ಟು ಜನರ ಬಳಿ ಹಣ ಪಡೆದಿದ್ದಾನೆ. ಹೀಗೆ ನಂಬಿಸಿ ಹಣ ಪಡೆದ ಸೈದು ಇದೀಗ ಇದ್ದಕ್ಕಿದ್ದಂತೆ ಸುಮಾರು 7 ಕೋಟಿ ರೂ. ಹಣದೊಂದಿಗೆ ನಾಪತ್ತೆಯಾಗಿದ್ದಾನೆ.

    ನಾಪತ್ತೆಯಾದ ಪರಿಣಾಮ ಹಲವು ಮದುವೆಗಳು ಸಹ ನಿಂತು ಹೋಗಿವೆ. ಪತಿಗೆ ಗೊತ್ತಾಗದಂತೆ ಚಿನ್ನಾಭರಣ ಮಾರಾಟ ಮಾಡಿ ಮಹಿಳೆಯರು ಚೀಟಿ ಹಣ ಕಟ್ಟಿದ್ದು ಕುಟುಂಬಗಳಲ್ಲಿ ಸಮಸ್ಯೆ ನಿರ್ಮಾಣ ಆಗಿವೆ. ಹಣ ಕೇಳಲು ಮನೆ ಬಳಿಗೆ ಹೋದರೆ ಪೊಲೀಸರನ್ನು ಕರೆಸಿ ಬೆದರಿಸಲಾಗುತ್ತದೆ. ಕೆಲವರ ವಿರುದ್ಧ ದೂರು ದಾಖಲಿಸಿ ಕೋರ್ಟಿಗೆ ಅಲೆದಾಡುವಂತೆ ಮಾಡುತ್ತಿದ್ದಾನೆ  ಎಂದು  ಸ್ಥಳೀಯರು ಆರೋಪಿಸಿದ್ದಾರೆ.

    ಜನ ಸೈದು ಹೋಟೆಲ್ ಹಾಗೂ ಮನೆ ಬಳಿ ಜಮಾಯಿಸಿದ್ದ ವಿಷಯ ತಿಳಿದು ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ನಿಯಂತ್ರಿಸಿದರು. ಈ ಬಗ್ಗೆ ದೂರು ನೀಡಿದರೆ ಕಾನೂನು ಕ್ರಮ ಜರುಗಿಸುವ ಬಗ್ಗೆ ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ವಂಚನೆಯ ಆರೋಪ ಹೊತ್ತಿರುವ ಸೈದು ಸಹೋದರ ಖಾಜಾ ಹುಸೇನ್ ಗೆ ಈ ಬಗ್ಗೆ ಕೇಳಿದರೆ ನನ್ನ ಅಣ್ಣ ಚೀಟಿ ವ್ಯವಹಾರ ಮಾಡಿ ಇದೀಗ ನಾಪತ್ತೆ ಆಗಿರೋದು ನಿಜ. ಆದರೆ ಇಷ್ಟೆಲ್ಲ ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ಸಿಎಂ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆ!

    ರಾಮನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಕರ್ಮಭೂಮಿಯಲ್ಲೇ ಮರಳು ದಂಧೆಕೋರರ ಕರ್ಮಕಾಂಡ ಎಗ್ಗಿಲ್ಲದೇ ನಡೆಯುತ್ತಿದ್ದು, ನದಿಪಾತ್ರಗಳಲ್ಲೇ ಅಕ್ರಮ ಮರಳು ಫಿಲ್ಟರ್ ಅಡ್ಡೆ ಮೂಲಕ ಮರಳುಗಾರಿಕೆ ನಡೆಸುತ್ತಿದ್ದಾರೆ.

    ಮಳೆಯಿಂದ ಅರ್ಕಾವತಿ ನದಿ ಪಾತ್ರದಲ್ಲಿಯೇ ನೀರು ಹರಿಯುತ್ತಿದ್ದಂತೆ ದಂಧೆಕೋರರು ಬಾಲ ಬಿಚ್ಚಿದ್ದು, ಅರ್ಕಾವತಿ ನದಿ ಪಾತ್ರದಲ್ಲಿ ಅಡ್ಡೆಗಳನ್ನು ನಿರ್ಮಿಸಿಕೊಂಡು ಮರಳು ಫಿಲ್ಟರ್ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳು ರಾಜರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ. ನದಿಯಲ್ಲಿ ಮರಳುಗಾರಿಕೆ ನಡೆಸುವುದರ ಜೊತೆಗೆ ಬೇರೊಂದು ಸ್ಥಳಗಳಿಂದ ಮಣ್ಣು ಮಿಶ್ರಿತ ಮರಳನ್ನು ತಂದು ಅರ್ಕಾವತಿ ನದಿಯಲ್ಲಿ ದಂಧೆಕೋರರು ಫಿಲ್ಟರ್ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರವಿ ಹೇಳಿದ್ದಾರೆ.

    ಅಕ್ರಮ ಮರಳುಗಾರಿಕೆ ತಡೆಗಟ್ಟುವ ವಿಷಯದಲ್ಲಿ ಸಂಬಂಧಿಸಿದ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸೋದನ್ನೇ ಕೈಬಿಟ್ಟಿದೆ. ಹೊಸ ಜಿಲ್ಲಾಧಿಕಾರಿ ಬಂದರೂ ಮರಳುಗಾರಿಕೆಗೆ ತಡೆ ಹಾಕುತ್ತಾರೆ ಅಂದರೆ ಕಚೇರಿ ಬಿಟ್ಟು ಹೊರಗೆ ಬರುವುದೇ ಇಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಮರಳುಗಾರಿಕೆ ನಡೆಯುತ್ತಿದ್ದರೂ ತಡೆಗಟ್ಟುವ ಕೆಲಸ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಎಲ್ಲಿಯೂ ಚೆಕ್‍ಪೋಸ್ಟ್ ಗಳಾಗಲಿ, ತಪಾಸಣೆಯಾಗಲಿ ನಡೆಯುತ್ತಿಲ್ಲ. ಅಧಿಕಾರಿಗಳಂತೂ ತಾವಾಯ್ತು, ತಮ್ಮ ಕಚೇರಿಯಾಯ್ತು ಎಂದು ತಿರುಗಾಡುತ್ತಾ ಇರುವುದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

    ಗ್ರಹಣ ಎಫೆಕ್ಟ್ ಬೆಂಗಳೂರಿನ ರಸ್ತೆಗಳು ಖಾಲಿ ಖಾಲಿ

    ಬೆಂಗಳೂರು: ವಾರಾಂತ್ಯ ಬಂದರೆ ಬೆಂಗಳೂರಿನ ರಸ್ತೆಗಳಲ್ಲಿ ಜಾಸ್ತಿ ಜನಸಂದಣಿ ಇರುತ್ತದೆ. ಆದರೆ ಶುಕ್ರವಾರ ಸಂಜೆ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ಖಾಲಿ ಖಾಲಿಯಾಗಿದೆ.

    ಹಲವು ಅಂಗಡಿಗಳು ಮುಚ್ಚಿದ್ದು, ಟ್ರಾಫಿಕ್ ಜಾಮ್ ನ ಸಂಕಷ್ಟಕ್ಕೆ ಗ್ರಹಣದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

    ದೇವಾಲಯಗಳು ಇರುವ ಕಡೆ ಸ್ವಲ್ಪ ಟ್ರಾಫಿಕ್ ಹೆಚ್ಚಾಗಿದೆ. ರಸ್ತೆಯಲ್ಲಿ ಸರತಿ ಸಾಲು ಉದ್ದವಾಗಿದ್ದರಿಂದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗುತ್ತಿದೆ.

    ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬಹುತೇಕ ಸಚಿವರು ಯಾರೂ ಶಕ್ತಿ ಸೌಧಕ್ಕೆ ಬಂದಿರಲಿಲ್ಲ. ಹಲವು ಸಚಿವರ ಕೊಠಡಿಗಳು ಬಂದ್ ಆಗಿತ್ತು. ವಿಧಾನಸೌಧದ ಮೊಗಸಾಲೆ, ಕಾರಿಡಾರ್ ಗಳೂ ಕೂಡ ಖಾಲಿ ಖಾಲಿಯಾಗಿವೆ.