Tag: Pendrive

  • ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೀತಾರೆ ಅಂತ ಮಾತನಾಡಿದ್ದಾರೆ: ಸೂರಜ್ ವಿರುದ್ಧ ಶ್ರೇಯಸ್ ಕಿಡಿ

    ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೀತಾರೆ ಅಂತ ಮಾತನಾಡಿದ್ದಾರೆ: ಸೂರಜ್ ವಿರುದ್ಧ ಶ್ರೇಯಸ್ ಕಿಡಿ

    ಹಾಸನ: ಮೈಕ್ ಸಿಕ್ಕಿದೆ, ಜನ ಶಿಳ್ಳೆ ಹೊಡೀತಾರೆ ಅಂತ ಮಾತನಾಡಿದ್ದಾರೆ. ಪೆನ್‌ಡ್ರೈವ್ ಒಳಗಿದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಎಂಎಲ್‌ಸಿ ಡಾ.ಸೂರಜ್‌ ರೇವಣ್ಣ (Suraj Revanna) ವಿರುದ್ಧ ಸಂಸದ ಶ್ರೇಯಸ್ ಪಟೇಲ್ (Shreyas Patel) ವಾಗ್ದಾಳಿ ನಡೆಸಿದ್ದಾರೆ.

    ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ (Pendrive) ವಿಚಾರ ನಾನು ಮಾತನಾಡಲ್ಲ. ಅದರಿಂದ ಎಷ್ಟೋ ಹೆಣ್ಣು ಮಕ್ಕಳ ಜೀವನ ಹಾಳಾಗಿದೆ. ಅನೇಕರು ಬಲಿಪಶು ಆಗಿದ್ದಾರೆ. ಅದಕ್ಕೆ ಕಾರಣ ಯಾರು? ಎಂಎಲ್‌ಸಿಯಾಗಿ ಅವರ ಸಾಧನೆ ಏನು ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದು ಬಿಡಿ, ಇವರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಹೊಸ ವರ್ಷದಲ್ಲಿ 3 ದಿನಕ್ಕೆ 3 ನಾಮ ಹಾಕಿದ್ದಾರೆ, ಇನ್ನೂ ಬಾಕಿಯಿದೆ: ಛಲವಾದಿ ನಾರಾಯಣಸ್ವಾಮಿ

     

    ಈಗಾಗಲೇ ಜನ ಬುದ್ಧಿ ಕಲಿಸಿದ್ದು, ಮುಂದೆಯೂ ಮಂಗಳಾರತಿ ಮಾಡುತ್ತಾರೆ. 2028ರ ಚುನಾವಣೆಯಲ್ಲಿ ಯಾರು ಏನಾಗುತ್ತಾರೆ ಎಂಬುದು ಗೊತ್ತಾಗಲಿದೆ. ಆದರೆ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ, ಇಲ್ಲದಿದ್ದರೆ ಸುಮ್ಮನಿರಲಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಜ.6 ರಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ಶುರುವಾಗಲ್ಲ: BMRCL ಸ್ಪಷ್ಟನೆ

    ಸಾರಿಗೆ ಬಸ್ ದರ ಏರಿಕೆ ಅನಿವಾರ್ಯ. ಇಂಧನ ದರ ಜಾಸ್ತಿ ಆಗಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಜೀವನ ನಿರ್ವಹಣಾ ವೆಚ್ಚ ಜಾಸ್ತಿ ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ. ಎಲ್ಲಾ ಸರ್ಕಾರಗಳು ಮಾಡಿವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.‌ ಇದನ್ನೂ ಓದಿ: ಮಟನ್‌ 100 ರೂಪಾಯಿ ಇದ್ದದ್ದು 500 ರೂಪಾಯಿ ಆದ್ರೆ ತಗೋತೀರ – ಟಿಕೆಟ್‌ ದರ ಏರಿಕೆ ಬಗ್ಗೆ ಚಲುವರಾಯಸ್ವಾಮಿ ಪ್ರತಿಕ್ರಿಯೆ

  • ನಾನು, ಪ್ರಜ್ವಲ್ ಹಾಸನದ ಋಣ ತೀರಿಸುತ್ತೇವೆ: ಸೂರಜ್ ರೇವಣ್ಣ

    ನಾನು, ಪ್ರಜ್ವಲ್ ಹಾಸನದ ಋಣ ತೀರಿಸುತ್ತೇವೆ: ಸೂರಜ್ ರೇವಣ್ಣ

    – ಪೆನ್‌ಡ್ರೈವ್ ಹಂಚಿ ಎಂಎಲ್‌ಸಿ ಆಗಿಲ್ಲ

    ಹಾಸನ: ಸೂರ್ಯ ಹುಟ್ಟುವುದು ಒಂದೇ ಸಲ ಅಲ್ಲ, ಸೂರ್ಯ ಪ್ರಜ್ವಲಿಸುತ್ತಾನೆ. ನಿಮ್ಮ ಪ್ರಜ್ವಲ್ ಅಣ್ಣ, ಸೂರಜ್ ಅಣ್ಣನೂ ಅಷ್ಟೇ. ಈ ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ (Suraj Revanna) ಹೇಳಿದ್ದಾರೆ.

    ತಮ್ಮ ಹುಟ್ಟುಹಬ್ಬದ ಅಂಗವಾಗಿ ಚನ್ನರಾಯಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೆಲವು ಅಧಿಕಾರಿಗಳು, ವಿರೋಧಿಗಳು ನಮ್ಮ ಕಾರ್ಯಕರ್ತರಿಗೆ ಯಾವ ರೀತಿ ತೊಂದರೆ ಕೊಡುತ್ತಿದ್ದಾರೆ ಎಂದು ನೋಡುತ್ತಿದ್ದೇವೆ. ಯಾವುದೂ ಶಾಶ್ವತವಲ್ಲ. ಯಾವ ಸರ್ಕಾರವೂ ಶಾಶ್ವತ ಅಲ್ಲ. ನಾನು, ನನ್ನಿಂದ ಮಾಡಿದ್ದು ಅಂತ ಹೇಳಿದವರು ಒಮ್ಮೆ ಸ್ಮಶಾನಕ್ಕೆ ಹೋಗಿ ಬನ್ನಿ. ಎಂತೆಂಥವರೋ ಏನೇನೋ ಆಗಿದ್ದಾರೆ ಅನ್ನೋದು ಗೊತ್ತಾಗುತ್ತದೆ. ನಾವು ಮಾಡುವ ಒಳ್ಳೆಯ ಕೆಲಸ ಮಾತ್ರ ಈ ಭೂಮಿ ಮೇಲೆ ಉಳಿಯುತ್ತದೆ. ಈ ದ್ವೇಷದ ರಾಜಕಾರಣ ಉಳಿಯಲ್ಲ ಎಂದರು. ಇದನ್ನೂ ಓದಿ: ಧರ್ಮಸ್ಥಳದ ಸ್ನಾನಘಟ್ಟ ಅಪವಿತ್ರಕ್ಕೆ ಹುನ್ನಾರ – ನೇತ್ರಾವತಿಯ ಉಪನದಿಯಲ್ಲಿ 11 ಗೋಣಿ ಗೋಮಾಂಸ ಪತ್ತೆ

    ಕೆಲಸ ಮಾಡಲಿ, ಜನಕ್ಕೆ ಒಳ್ಳೆಯದು ಮಾಡಲಿ ಎಂದು ನಿಮಗೆ 135 ಸೀಟ್ ಕೊಟ್ಟಿದ್ದು. ಅದನ್ನು ಬಿಟ್ಟು ದಿನ ಬೆಳಗ್ಗೆಯಾದರೆ ರೇವಣ್ಣ ಅವರನ್ನು ಹೇಗೆ ತುಳಿಯೋದು, ದೇವೇಗೌಡರ ಕುಟುಂಬವನ್ನು ಹೇಗೆ ಮುಗಿಸೋದು ಬರೀ ಇದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರಿನಲ್ಲಿ ಕೇಸ್‌, ತರೀಕೆರೆಯಲ್ಲಿ ವಿಚಾರಣೆ!

    ಸರ್ಕಾರ ಬಂದು ಎಷ್ಟು ತಿಂಗಳು ಆಯ್ತು, ಯಾವ ರೈತರಿಗೆ ಒಳ್ಳೆಯದಾಗಿದೆ ಹೇಳಿ? ಕುತಂತ್ರಿಗಳ, ವಿರೋಧಿಗಳ, ದ್ವೇಷದ ರಾಜಕಾರಣದ ಕತ್ತಲು ಆವರಿಸಿಕೊಂಡಿದೆ. ಮತ್ತೆ ನಿಮ್ಮ ಸೂರಜ್ ರೇವಣ್ಣನ ಮೂಲಕ ಸೂರ್ಯ ಹುಟ್ಟೇ ಹುಟ್ಟುತ್ತಾನೆ. ಇವತ್ತು ಮೂಡಲಹಿಪ್ಪೆಯಿಂದ ಬೆಂಕಿ ಶುರುವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರ ಇದೆ ಅಂತ ಕೆಲವರು ಕುಣಿಯುತ್ತಿದ್ದಾರೆ. ಅದನ್ನು ಸುಡುವಂತಹ ಪರಿಸ್ಥಿತಿ, ಕಣ್ಣೀರಿಡುವ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಮದ್ಯ, ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ – ಕಾನ್‌ಸ್ಟೇಬಲ್‌ಗಳು ಅರೆಸ್ಟ್

    ನಿನ್ನೆ ಮೊನ್ನೆ ಪೆನ್‌ಡ್ರೈವ್ (Pendrive) ಹಂಚಿ ನಾನು ಎಂಎಲ್‌ಸಿ ಆಗಿಲ್ಲ. ನಿಮ್ಮ ತಾತನ ತರ ಕುತಂತ್ರ ಮಾಡಿ ಎಂಎಲ್‌ಸಿ ಆಗಿದ್ದಲ್ಲ. ದೇವೇಗೌಡರು, ರೇವಣ್ಣನ ಕುಟುಂಬ ಮುಗಿಸುತ್ತಾರಂತೆ. ಇದೇ 25 ವರ್ಷದ ಹಿಂದೆ, ಇವತ್ತೇನು ಅಚಾನಕ್ಕಾಗಿ ಸಂಸದರಾಗಿದ್ದಾರೆಯೋ ಅವರ ತಾತ, ನಮ್ಮ ಅಜ್ಜಿ, ತಾಯಿ ಮೇಲೆ ಆಸಿಡ್ ಎರಚಿಸಿದ್ದನ್ನ ಯಾರೂ ಮರೆಯಬಾರದು. ಇದು ಇಲ್ಲಿರುವ ಹಿರಿಯರಿಗೆ ಮಾತ್ರ ನೆನಪಿರುತ್ತದೆ. ಇದೇ ರೀತಿ ಕುತಂತ್ರ, ಒಳಸಂಚು ಮಾಡಿ ನಮ್ಮ ತಾತ ಅವರ ತಮ್ಮನ ಮಕ್ಕಳಿಂದ ನಮ್ಮ ಅಜ್ಜಿ, ಅಮ್ಮನ ಮೇಲೆ ಹರದನಹಳ್ಳಿಯ ಶಿವನ ದೇವಾಲಯದಂತಹ ಪವಿತ್ರ ಸ್ಥಳದಲ್ಲಿ ಆಸಿಡ್ ದಾಳಿ ಮಾಡಿಸಿದ್ದರು. ಇದೇ ರೀತಿ ಇಡೀ ಕುಟುಂಬಕ್ಕೆ ಅವತ್ತೂ ಕೂಡ ಸಂಕಷ್ಟ ಇತ್ತು. ಅಂದೂ ಕಾಂಗ್ರೆಸ್ ಸರ್ಕಾರ ಇತ್ತು. ಈಗ 135 ಸೀಟ್, ಆಗ 130 ಸೀಟ್ ಗೆದ್ದಿದ್ದರು. ಇವರಿಗೆ ದೇವೇಗೌಡರು, ರೇವಣ್ಣ ಕುಟುಂಬ ಮುಗಿಸಬೇಕು ಎಂಬುದು ಒಂದೇ ಉದ್ದೇಶ. 25 ವರ್ಷದ ಹಿಂದೆ ನಮ್ಮ ಕುಟುಂಬ ಸಂಕಷ್ಟದಲ್ಲಿತ್ತು. ನಂತರ ಏನಾಯ್ತು ಸ್ವಾಮಿ, ಇದು ಅದೇ ರೀತಿಯ ಒಂದು ಅನುಭವ ಎಂದು ಸಂಸದ ಶ್ರೇಯಸ್ ಪಟೇಲ್ (Shreyas Patel) ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಜ.4ಕ್ಕೆ ಕಲಬುರಗಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ: ಗೋವಿಂದ ಕಾರಜೋಳ

  • ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ವೇಳೆ ಇತರೆ ರೋಗಿಗಳಿಗೆ ಸಮಸ್ಯೆ – ಆಸ್ಪತ್ರೆಯಲ್ಲಿ ಪರದಾಟ

    ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ವೇಳೆ ಇತರೆ ರೋಗಿಗಳಿಗೆ ಸಮಸ್ಯೆ – ಆಸ್ಪತ್ರೆಯಲ್ಲಿ ಪರದಾಟ

    ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಆಸ್ಪತ್ರೆಗೆ ಬಂದಿದ್ದ ಇತರೆ ರೋಗಿಗಳು ಪರದಾಡುವಂತಾಯಿತು.

    ಎಸ್‌ಐಟಿ (SIT) ಅಧಿಕಾರಿಗಳು ನಿನ್ನೆ ತಡರಾತ್ರಿ ಪ್ರಜ್ವಲ್ ರೇವಣ್ಣರನ್ನು ಬಂಧಿಸಿದರು. ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಅದಕ್ಕೂ ಮೊದಲು ವೈದ್ಯಕೀಯ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆ ತುರ್ತು ನಿಗಾ ಘಟಕದ ಕಟ್ಟಡದಲ್ಲಿ ಬಿಪಿ, ಶುಗರ್, ಪಲ್ಸ್, ಹಾರ್ಟ್ ರೇಟ್, ಯೂರಿನ್, ರಕ್ತ ಪರೀಕ್ಷೆ ನಡೆಸಲಾಯಿತು. ಇದನ್ನೂ ಓದಿ: ದೂರು ಕೊಡುವ ಸಂತ್ರಸ್ತೆಯರಿಗೆ ನಾವು ರಕ್ಷಣೆ ಕೊಡುತ್ತೇವೆ: ಪ್ರಜ್ವಲ್ ಬಂಧನ ಬಗ್ಗೆ ಗೃಹ ಸಚಿವರ ಪ್ರತಿಕ್ರಿಯೆ

    ಪ್ರಜ್ವಲ್ ವೈದ್ಯಕೀಯ ಪರೀಕ್ಷೆ ವೇಳೆ, ಬೌರಿಂಗ್ ಆಸ್ಪತ್ರೆ ಬಳಿ ಪೊಲೀಸರ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಕೆಎಸ್‌ಆರ್‌ಪಿಯ ಒಂದು ತುಕಡಿ ನಿಯೋಜನೆ ಮಾಡಲಾಗಿತ್ತು. ತುರ್ತು ನಿಗಾ ಘಟಕದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಇದರಿಂದಾಗಿ ಇತರೆ ರೋಗಿಗಳು ಪರದಾಡುವಂತಾಯಿತು.

    ಎಮರ್ಜೆನ್ಸಿ ಅಂತಾ ಆಟೋದಲ್ಲಿ ಬಂದ ರೋಗಿಯನ್ನ ಗೇಟ್ ಬಳಿಯೇ ತಡೆದು ಸೆಕ್ಯೂರಿಟಿ ಗಾರ್ಡ್ಸ್ ದರ್ಪ ಮೆರೆದರು. ನಡೆದುಕೊಂಡು ಹೋಗಿ, ಇಲ್ಲಿಂದ ಮುಂದೆ ವಾಹನ ಬಿಡೋಲ್ಲ ಎಂದು ತಡೆದರು. ಹೊಟ್ಟೆ ನೋವು ಅಂತಾ ಪೀಣ್ಯದಿಂದ ಬಂದಿದ್ದ ರೋಗಿಯನ್ನು ತಡೆದರು. ಇದನ್ನೂ ಓದಿ: ವಿಶ್ರಾಂತಿಗೆ ತೆರಳಿದ ಹೆಚ್‌.ಡಿ.ಕುಮಾರಸ್ವಾಮಿ ಕುಟುಂಬ

    ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ವೃದ್ಧರೊಬ್ಬರನ್ನು ತಡೆದು ಪೊಲೀಸರು ವಾಪಸ್ ಕಳಿಸಿದರು. ಪರೀಕ್ಷೆಗೆಂದು ಬ್ಯಾಂಡೇಜ್ ಸಮೇತ ರೋಗಿ ಆಸ್ಪತ್ರೆಗೆ ಬಂದಿದ್ದರು. ಈ ಬೆಳವಣಿಗೆ ಸಂಬಂಧ ‘ಪಬ್ಲಿಕ್ ಟಿವಿ’ ಸುದ್ದಿ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತಿದ್ದಾರೆ. ಆಸ್ಪತ್ರೆ ಮುಖ್ಯ ಗೇಟ್ ತೆರೆದು ರೋಗಿಗಳಿಗೆ ಪರೀಕ್ಷೆಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.

    ರೋಗಿಗಳಿಗೆ ತೊಂದರೆ ಆಗದಂತೆ ಆಸ್ಪತ್ರೆಗೆ ಬಿಡುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಸೆಕ್ಯೂರಿಟಿಗಳು ಮುಚ್ಚಿದ್ದ ಗೇಟ್ ತೆರೆದು ಎಂದಿನಂತೆ ರೋಗಿ ಮತ್ತು ಕುಟುಂಬದವರಿಗೆ ಆಸ್ಪತ್ರೆಗೆ ಹೋಗಲು ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ಮಹಿಳಾ ಅಧಿಕಾರಿಗಳಿಂದ ಪ್ರಜ್ವಲ್‌ ಅರೆಸ್ಟ್‌ – ಯಾಕೆ?

  • ಪ್ರಜ್ವಲ್ ರೇವಣ್ಣ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಬಂಧನ: ಗೃಹ ಸಚಿವ ಪರಮೇಶ್ವರ್

    ಪ್ರಜ್ವಲ್ ರೇವಣ್ಣ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಬಂಧನ: ಗೃಹ ಸಚಿವ ಪರಮೇಶ್ವರ್

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G.Parameshwar) ತಿಳಿಸಿದರು.

    ಪ್ರಜ್ವಲ್ ವಾಪಸ್ ಆಗುವ ಕುರಿತು ಮಾತನಾಡಿದ ಅವರು, ವಾರೆಂಟ್ ಇರುವುದರಿಂದ ಪ್ರಜ್ವಲ್ ರೇವಣ್ಣ ಅವರು ಬರುತ್ತಿದ್ದಂತೆ ಅರೆಸ್ಟ್ ಮಾಡಲೇಬೇಕಲ್ಲವೇ? ಎಸ್‌ಐಟಿಯವರು ಅದನ್ನ ಗಮನಿಸ್ತಾರೆ. ಅವರ ವಿರುದ್ಧ ವಾರೆಂಟ್ ಇರುವುದರಿಂದ ಅರೆಸ್ಟ್ ಮಾಡಬೇಕಲ್ಲ, ಅದನ್ನ ಮಾಡ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ

    ಎಲ್ಲಾ ರೀತಿಯಲ್ಲೂ ಕ್ರಮ ತೆಗೆದುಕೊಳ್ಳಬೇಕು. ವಾರೆಂಟ್ ಜಾರಿಯಾಗಿರುವುದರಿಂದ ಅರೆಸ್ಟ್ ಮಾಡಬೇಕು, ಅರೆಸ್ಟ್ ಮಾಡ್ತಾರೆ. ಎಸ್‌ಐಟಿ ಅವರು ಕಾಯ್ತ ಇದ್ದಾರೆ. ಏರ್‌ಪೋರ್ಟ್‌ಗೆ ಬಂದ ಮೇಲೆ ಅರೆಸ್ಟ್ ಮಾಡ್ತಾರೆ. ನಂತರ ಅವರ ಹೇಳಿಕೆಗಳು ಮತ್ತೊಂದು ಪ್ರಕ್ರಿಯೆ ಶುರು ಆಗುತ್ತೆ ಎಂದರು.

    ಪೆನ್‌ಡ್ರೈವ್ ಕೇಸಲ್ಲಿ ಹಾಸನದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಬಂಧನದಲ್ಲಿ ಬಿಜೆಪಿ, ಕಾಂಗ್ರೆಸ್, ದಳ ಅಂತಾ ಪ್ರಶ್ನೆ ಇಲ್ಲ. ಯಾರು ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೋ ಅಂಥವರನ್ನ ಅರೆಸ್ಟ್ ಮಾಡ್ತಾರೆ. ಇದೀಗ 11 ಜನರನ್ನ ಅರೆಸ್ಟ್ ಮಾಡಿದ್ದಾರೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನುಮಾನ ಬರುತ್ತೋ, ಅವರನ್ನ ಬಂಧಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು ಇತರೆ ವಸ್ತು ಕೊಂಡೊಯ್ದ ಎಸ್‌ಐಟಿ

    ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿ, ಚಂದ್ರಶೇಖರ್ ಸಾವಿನ ವಿಚಾರವಾಗಿ ಸಿಐಡಿ ತನಿಖೆ ನಡೆಯುತ್ತಿದೆ. ಈಗಾಗಲೇ ಆ ಇಲಾಖೆಯಿಂದ ದೂರು ಬಂದಿದೆ. 187 ಕೋಟಿ ಹಣ ವರ್ಗಾವಣೆ ಆಗಿದೆ ಅಂತಾ ಒಬ್ಬೊಬ್ಬರು ಒಂದು ಅಮೌಂಟ್ ಹೇಳ್ತಿದ್ದಾರೆ. 84 ಕೋಟಿ, 88 ಕೋಟಿ, 94 ಕೋಟಿ ಅಂತೆಲ್ಲಾ ಹೇಳ್ತಿದ್ದಾರೆ. ತನಿಖೆ ನಡೆಯುತ್ತಿದೆ, ಸತ್ಯ ಹೊರ ಬರುತ್ತೆ. ಬೇರ ಅಕೌಂಟ್‌ಗಳಿಗೆ ಹಣ ಹೋಗಿದೆ ಅಂತಾ ಮಾಹಿತಿ ಇದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿಜೆಪಿ ಯವರು ರಾಜೀನಾಮೆ ಕೇಳ್ತಾನೆ ಇರ್ತಾರೆ. ಪ್ರತಿಯೊಂದು ಘಟನೆಗೂ ರಾಜೀನಾಮೆ ಕೇಳ್ತಾರೆ. ಯಾರ ಸೂಚನೆ ಮೇರೆಗೆ ಹಣ ಹೋಗಿದೆ ಅಂತಾ ತನಿಖೆ ನಡೆಯುತ್ತಿದೆ. ಡೆತ್‌ನೋಟ್‌ನಲ್ಲಿ ಸಚಿವರು ಅಂತಾ ಬರೆದಿದ್ದಾರೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ನೇರವಾಗಿ ಎಲ್ಲಿಯೂ ಸಚಿವರ ಹೆಸರು ಹೇಳಿಲ್ಲ. ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಸಚಿವರ ಹೆಸರು ಹೇಳಿದ್ರು. ಹಾಗಾಗಿ ನಾವು ರಾಜೀನಾಮೆ ಕೇಳಿದ್ದು ಎಂದು ಸ್ಪಷ್ಟಪಡಿಸಿದರು.

    ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನ ಕುರಿತು ಮಾತನಾಡಿ, ಪಕ್ಷಕ್ಕೆ ಕೆಲಸ ಮಾಡಿ ಅನೇಕ ಅನುಭವ ಇರುವವರಿಗೆ ಎಂಎಲ್‌ಸಿ ಅವಕಾಶ ಕೊಡಬೇಕು. ಅವರು ನಮ್ಮ ಸಲಹೆಯನ್ನು ಕೇಳಿಲ್ಲ. ಇಲಾಖೆ ವಿಚಾರವಾಗಿ ನಾನು ಸಿಎಂ ಭೇಟಿ ಮಾಡಿದ್ದು. ಈ ವೇಳೆ ಪರಿಷತ್ ವಿಚಾರ ಚರ್ಚೆಯಾಗಿಲ್ಲ. ಅಲ್ಲಿ ಇರೋದು 7 ಸ್ಥಾನ. ಎಷ್ಟು ಅರ್ಜಿಗಳು ಬಂದಿವೆ ಅಂತಾ ನನಗೆ ಗೊತ್ತಿಲ್ಲ. ನಾನು ಇದನ್ನು ಪತ್ರಿಕೆಯಲ್ಲಿ ನೋಡಿದೆ. ಅದನ್ನು ಸ್ಕ್ರೀನಿಂಗ್ ಮಾಡೋದು ತುಂಬಾ ಕಷ್ಟ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಅದು ಇವಾಗ ಕಾಲ ಮೀರಿ ಹೋಗಿದೆ. ಈಗಾಗಲೇ ಸಿಎಂ, ಡಿಸಿಎಂ ದೆಹಲಿಗೆ ಹೋಗಿಬಿಟ್ಟಿದ್ದಾರೆ ಎಂದರು.

  • ಡಿಕೆಶಿ V/s ಹೆಚ್‍ಡಿಕೆ ನಡುವೆ ಕಥಾ ನಾಯಕ ಕಾಳಗ

    ಡಿಕೆಶಿ V/s ಹೆಚ್‍ಡಿಕೆ ನಡುವೆ ಕಥಾ ನಾಯಕ ಕಾಳಗ

    – ಸರ್ಕಾರದ ಮೇಲೆ ಮುಗಿಬಿದ್ದ ದಳಪತಿ, ಕೈಪಡೆಗೆ ಕೌಂಟರ್

    ಬೆಂಗಳೂರು: ಲೋಕಸಭಾ ಚುನಾವಣಾ (Loksabha Elections 2024) ಅಖಾಡದ ಜಿದ್ದಾಜಿದ್ದಿ ಮುಗಿದಿದೆ. ಲೋಕ ಸಮರದಲ್ಲೇ ಸಿಡಿದ ಆಶ್ಲೀಲ ಪೆನ್‍ಡ್ರೈವ್ ರಾಡಿ ರಾಜ್ಯವಷ್ಟೇ ಅಲ್ಲ ದೇಶ-ವಿದೇಶದಲ್ಲೂ ಸದ್ದು ಮಾಡ್ತಿದೆ. ಮತಯುದ್ಧ ಮುಗಿಯುತ್ತಿದ್ದಂತೆ ಪೆನ್‍ಡ್ರೈವ್ ಫೈಟ್ ತಾರಕಕ್ಕೇರಿದೆ. ಪೆನ್‍ಡ್ರೈವ್‍ನಲ್ಲಿ ವೀಡಿಯೋಗಳು ಕಾಡ್ಗಿಚ್ಚಿನಂತೆ ಹರಿದಾಡ್ತಿರೋ ಹೊತ್ತಲ್ಲೇ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹಾರಿದ್ರೆ, ಇತ್ತ ಪ್ರಕರಣದಲ್ಲಿ ಎಸ್‍ಐಟಿ ಅತಿದೊಡ್ಡ ಬೇಟೆ ಆಡಿತ್ತು. ಶಾಸಕ ರೇವಣ್ಣ ಬಂಧನ ಮೂಲಕ ಪ್ರಕರಣ ಮತ್ತಷ್ಟು ಕಾವು ಪಡೆಯಿತು. ರೇವಣ್ಣ ಪರಪ್ಪನ ಅಗ್ರಹಾರ ಸೇರಿದ್ರು. ಇತ್ತ ವಕೀಲ ದೇವರಾಜೇಗೌಡ ಸ್ಫೋಟಕ ಟ್ವಿಸ್ಟ್ ಕೊಟ್ರು. ಪ್ರಕರಣದ ಕಥಾನಾಯಕ ಡಿಕೆಶಿ ಅಂತಾ ಬಾಂಬ್ ಹಾಕಿದ ಬೆನ್ನಲ್ಲೇ ದಳಪತಿ ಕುಮಾರಸ್ವಾಮಿ ಇದೀಗ ಮೈಕೊಡವಿ ನಿಂತಿದ್ದಾರೆ.

    ಹೌದು. ಪೆನ್‍ಡ್ರೈವ್ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ (HD Revanna) ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರ ಸೇರಿದ ಬಳಿಕ ಕಥಾನಾಯಕ ಆರೋಪ ಹೊತ್ತಿರುವ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಎಸ್‍ಐಟಿ ತನಿಖೆ, ಕಾಂಗ್ರೆಸ್ ಸರ್ಕಾರ, ಒಕ್ಕಲಿಗ ಸಚಿವರ ವಿರುದ್ಧ ಗುಡುಗಿದ್ರು. ಡಿಕೆಶಿ-ನನಗೆ ಒಕ್ಕಲಿಗ ನಾಯಕತ್ವ ಫೈಟ್ ಅಂತಾರೆ. ನಾನು ಒಕ್ಕಲಿಗ ಕ್ಯಾಪ್ ಇಟ್ಟುಕೊಂಡು, ಇಂತಹ ಕೆಟ್ಟ ಘಟನೆಗೆ ಜಾತಿ ಹೆಸರಲ್ಲಿ ರಕ್ಷಣೆ ಪಡೆಯೊಲ್ಲ. ನಾನು ಎಲ್ಲೂ ಒಕ್ಕಲಿಗ ನಾಯಕ ಅಂತ ಹೇಳಿಲ್ಲ. ನಾನು ಹಿಟ್ ಅಂಡ್ ರನ್ ಅಲ್ಲ ಅಂತ ಕೌಂಟರ್ ಕೊಟ್ರು.

    ಮೊದಲ ದಿನ ಕೊಟ್ಟ ಹೇಳಿಕೆಯಿಂದ ನಾನು ಹಿಂದೆ ಸರಿದಿಲ್ಲ. ಈಗಲೂ ನಾನು ನನ್ನ ಮಾತಿಗೆ ಬದ್ಧ. ನಾನು ರೇವಣ್ಣ ಕುಟುಂಬ ಬೇರೆ ಅಂದ್ರೆ, ಇಂಡಿಪೆಂಡೆಂಟ್ ಆಗಿ ಜೀವನ ಮಾಡ್ತಿದ್ದೇವೆ. ನಮ್ಮ ವ್ಯವಹಾರ ಬೇರೆ ಬೇರೆ ಇದೆ ಅಂತ ಸ್ಪಷ್ಟಪಡಿಸಿದ್ರು. ಕಥಾನಾಯಕ ನಾನೇ, ಆಕ್ಟಿಂಗ್ ಮಾಡಿಲ್ಲ ಎಂದು ಡಿಕೆಶಿ ಕಥಾನಾಯಕ ಆರೋಪಕ್ಕೆ ಎಚ್‍ಡಿಕೆ ಕೌಂಟರ್ ಕೊಟ್ಟು, ಹೌದಪ್ಪ ಕಥಾ ನಾಯಕ ನಾನೇ. ಕಥಾ ನಾಯಕ ನನ್ನ ಮಾಡಿದ್ದಾರೆ. ಆದ್ರೆ ಆಕ್ಟಿಂಗ್ ಮಾತ್ರಾ ಮಾಡಿಲ್ಲ. ಏಕ ವಚನದಲ್ಲಿ ಮಾತಾಡಬೇಡಿ ಅಂದಿದ್ದಾರೆ. ಸಾರಿ ಅಪ್ಪ ಕ್ಷಮೆ ಇರಲಿ ಅಂತ ಡಿಕೆಗೆ ಡಿಚ್ಚಿ ಕೊಟ್ಟರು.

    25 ಸಾವಿರ ಪೆನ್‍ಡ್ರೈವ್ ಮಾಡಿದ್ರಿ: ರೇವಣ್ಣ ಕುಟುಂಬ ಮುಗಿಸೋಕೆ ಮಾಡಿದೆ ಅಂತಾರೆ. ಪೆನ್ ಡ್ರೈವ್ ನಾನೇ ಬಿಡುಗಡೆ ಮಾಡಿದ್ದು ಅಂತಾರೆ. ಕಥಾ ನಾಯಕ ಅಂತಾರೆ. ಇಂತಹ ದೊಡ್ಡ ಹಗರಣದಲ್ಲಿ ಪೆನ್ ಡ್ರೈವ್ ಬಿಟ್ರಲ್ಲ. 25 ಸಾವಿರ ಪೆನ್ ಡ್ರೈವ್ ಮಾಡಿದ್ರಿ. ನವೀನ್ ಅನ್ನೋನು ಪೋಸ್ಟ್ ಮಾಡಿದ್ದಾನೆ. ಎಂಟು ಗಂಟೆ ವರೆಗೂ ಕಾಯ್ರಿ ವೀಡಿಯೋ ಬರುತ್ತೆ ಅಂತ. ಅವನ ಮೇಲೆ ಏನು ಕ್ರಮ ಕೈಗೊಂಡ್ರಿ.? ಕಾರ್ತಿಕ್ ಅನ್ನೋನು ಡ್ರೈವರ್ ಕೊಟ್ಟ ಅಂತೀರಿ. ಸರ್ಜಿಕಲ್ ಸ್ಟ್ರೈಕ್ ರೀತಿ ವ್ಯವಸ್ಥಿತ ಸಂಚು ಮಾಡಿ ಪ್ರಕರಣ ಮುಚ್ಚಿ ಹಾಕಲಾಗ್ತಿದೆ ಅಂತ ಹೇಳಿದ್ದೀರಿ. ಸರ್ಕಾರ ನಿಮ್ಮದೇ ಇದೆ ನೀವು ಏನು ಮಾಡ್ತಿದ್ದಿರಾ? ಅಂತ ಕೃಷ್ಣಬೈರೇಗೌಡಗೆ ತಿರುಗೇಟು ಕೊಟ್ಟರು.

    ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ ಇದೀಗ ರಾಜ್ಯಪಾಲರ ಅಂಗಳಕ್ಕೆ ಹೋಗಿದೆ. ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜಭವನದ ಕದ ತಟ್ಟಿದ್ರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‍ಗೆ ಪ್ರಕರಣದ ವಿವರಣೆ ನೀಡಿ, ಪ್ರಕರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು. ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ. ವಿಡಿಯೋ ಬಿಡುಗಡೆ ಮಾಡಿದ ಪ್ರಮುಖ ಆರೋಪಿಗೆ ಬೆಂಗಳೂರಿನಲ್ಲಿ ಸರ್ಕಾರದಿಂದಲೇ ರಾಜ ಮರ್ಯಾದೆ ಸಿಕ್ತಿದೆ. ಇದರ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇದೆ. ಎಸ್‍ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೀತಿಲ್ಲ. ನವೀನ್ ಗೌಡ ಬಂಧನ ಮಾಡಿಲ್ಲ. 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ. ಡಿಕೆಶಿಯನ್ನ ವಿಚಾರಣೆ ಮಾಡದೇ ಎಸ್ ಐಟಿ ಪಾರದರ್ಶಕತೆ ಪ್ರದರ್ಶಿಸಿಲ್ಲ. ಡಿಕೆಶಿಯನ್ನು ಸಂಪುಟದಿಂದ ವಜಾಗೊಳಿಸಿ, ತನಿಖೆಯನ್ನ ಸಿಬಿಐಗೆ ಕೊಡುವಂತೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದ್ದಾರೆ.

    ವಾಯ್ಸ್: ಒಟ್ನಲ್ಲಿ ಪೆನ್‍ಡ್ರೈವ್ ಪ್ರಕರಣ ಸಾಕಷ್ಟು ತಿರುವುಗಳು, ಒಂದೊಂದೆ ಮಜಲುಗಳನ್ನು ಪಡೆಯುತ್ತಿದೆ. ವಾಗ್ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆ ಈ ಪ್ರಕರಣ ಯಾವ ಹಂತಕ್ಕೆ ಬಂದು ತಲುಪುತ್ತೊ ಗೊತ್ತಿಲ್ಲ.

  • ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ- 32 GB, 8 GB ಪೆನ್‌ಡ್ರೈವ್‍ಗಳನ್ನು ವಶಕ್ಕೆ ಪಡೆದ SIT

    ಪ್ರಜ್ವಲ್ ರೇವಣ್ಣ ವೀಡಿಯೋ ಪ್ರಕರಣ- 32 GB, 8 GB ಪೆನ್‌ಡ್ರೈವ್‍ಗಳನ್ನು ವಶಕ್ಕೆ ಪಡೆದ SIT

    ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (SIT) ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್ ಡ್ರೈವ್‍ಗಳನ್ನು ವಶಕ್ಕೆ ಪಡೆದಿದ್ದಾರೆ.

    32 ಜಿಬಿ ಮತ್ತು 8 ಜಿಬಿ ಎರಡು ಪೆನ್ ಡ್ರೈವ್‍ಗಳು ವಶಕ್ಕೆ ಪಡೆದಿರುವ ಅಧಿಕಾರಿಗಳು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ಎರಡು ಪೆನ್‍ಡ್ರೈವ್‍ಗಳನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಮೂಲಕ ತಾಂತ್ರಿಕ ಸಾಕ್ಷ್ಯ ಕಲೆಹಾಕಲು ತಯಾರಿ ನಡೆಸಲಾಗುತ್ತಿದೆ.

    ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆನರಸಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಸಂತ್ರಸ್ತೆಯಿಂದ ದೂರು ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354 (ಎ) ಲೈಂಗಿಕ ಕಿರುಕುಳ, 354 (ಡಿ) (ಮಹಿಳೆಗೆ ಮುಜುಗರ ಆಗುವಂತೆ ಹಿಂಬಾಲಿಸುವುದು), 506 (ಬೆದರಿಕೆ), 509 (ಮಹಿಳೆ ಮಾನಕ್ಕೆ ಹಾನಿ ಉಂಟುಮಾಡುವುದು) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಸಮಗ್ರ ತನಿಖೆಯನ್ನೂ ನಿರ್ವಹಿಸುವಂತೆ ಎಸ್‍ಐಟಿಗೆ ಆದೇಶಿಸಿದೆ.

    ಎಸ್‍ಐಟಿ ತನಿಖೆಯಲ್ಲಿ ಬೆಂಗಳೂರಿನ ಎಡಿಜಿಪಿ ಬಿಜಯಕುಮಾರ್ ಸಿಂಗ್, ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾದ ಸುಮನ್ ಡಿ. ಪನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ಅವರನ್ನೊಳಗೊಂಡ ತಂಡ ಇದೆ. ಬಿಜಯ ಕುಮಾರ್ ಸಿಂಗ್ ತಂಡದ ಮುಖ್ಯಸ್ಥರಾಗಿದ್ದಾರೆ. ಈ ನಡುವೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ.

  • ನನ್ನ ಹತ್ತಿರನೂ ಪೆನ್‌ಡ್ರೈವ್ ಇದೆ, ಬಿಡುಗಡೆಗಾಗಿ ಕಾಯ್ತಿದ್ದೇನೆ: ಲಕ್ಷ್ಮಣ ಸವದಿ

    ನನ್ನ ಹತ್ತಿರನೂ ಪೆನ್‌ಡ್ರೈವ್ ಇದೆ, ಬಿಡುಗಡೆಗಾಗಿ ಕಾಯ್ತಿದ್ದೇನೆ: ಲಕ್ಷ್ಮಣ ಸವದಿ

    ಚಿಕ್ಕೋಡಿ: ನನ್ನ ಹತ್ತಿರನೂ ಪೆನ್‌ಡ್ರೈವ್ (Pendrive) ಇದ್ದು ಬಿಡುಗಡೆಗಾಗಿ ಸಂದರ್ಭಕ್ಕೆ ಕಾಯುತ್ತಿದ್ದೇನೆ ಎಂದು ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಹೊಸ ಬಾಂಬ್ ಸಿಡಿಸಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಲಕ್ಷ್ಮಣ ಸವದಿ, ನನ್ನ ಹತ್ತಿರ ಪೆನ್‌ಡ್ರೈವ್ ಇದ್ದಾವೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಪೆನ್‌ಡ್ರೈವ್ ವಿಚಾರಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರೈತರ ದ್ರೋಹಿ ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ – ಈಶ್ವರಪ್ಪ ಕಿಡಿ

    ನಾನು ಮಾಧ್ಯಮದಲ್ಲಿ ಹೆಚ್‌ಡಿಕೆ ಮಾತನ್ನು ನೋಡಿದ್ದೇನೆ. ತುಂಬಾ ಜನರ ಕಡೆ ಪೆನ್‌ಡ್ರೈವ್ ಇದ್ದಾವೆ. ನನ್ನ ಹತ್ತಿರ ಒಂದು ಪೆನ್‌ಡ್ರೈವ್ ಇದೆ, ಕಾಲಾನುಸಾರ ಬಿಡುಗಡೆ ಮಾಡುತ್ತೇನೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ವಿರೋಧ ಪಕ್ಷ ಇದೆಯೆಂದು ತೋರಿಸಲು ಆ ರೀತಿ ಕುಮಾರಸ್ವಾಮಿ ಮಾತನಾಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಕೊಕಟನೂರು ಗ್ರಾಮದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಜನ್ಮದಿನಕ್ಕೆ ನಾಟಿ ಹಸುವಿನ ಉಡುಗೊರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

    ಕುಮಾರಸ್ವಾಮಿ ಯಾವತ್ತೂ ಹಿಟ್‌ & ರನ್ ಕೇಸ್‌ – ಸಿಎಂ ತಿರುಗೇಟು

    ಬೆಂಗಳೂರು: ಕುಮಾರಸ್ವಾಮಿ ಯಾವಗ್ಲೂ ಹಿಟ್ ಅಂಡ್ ರನ್ ಕೇಸ್ (Hit and Run Case). ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿ ಕಾರಿದ್ದಾರೆ.

    ಕಾಂಗ್ರೆಸ್‌ ಸರ್ಕಾರದ ಮೇಲೆ ಸಾಲು ಸಾಲು ಆರೋಪ ಮಾಡ್ತಿರೋ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಆರೋಪಗಳಿಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಪಾಪ ಹತಾಶರಾಗಿದ್ದಾರೆ. ಹತಾಶೆಯಾಗಿ ದ್ವೇಷದಿಂದ ಹೀಗೆಲ್ಲ ಮಾತಾಡ್ತಾ ಇದ್ದಾರೆ ಅಂತಾ ಕುಟುಕಿದ್ದಾರೆ.

    ಈಗ ಹೊಸ ಸರ್ಕಾರ ಬಂದಿದೆ, ಇದು ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ. ಜನರಲ್ ವರ್ಗಾವಣೆ ಪ್ರಕ್ರಿಯೆಯಲ್ಲಿ ವರ್ಗಾವಣೆ ಮಾಡಲೇಬೇಕು. ಅದಕ್ಕೆ ದಂಧೆ (Transfer Scam) ನಡೆದಿದೆ, ‌ಲಂಚ ನಡೆದಿದೆ ಅಂತಾ ಹೇಳ್ತಿರೋದು ಸುಳ್ಳು ಎಂದು ಹೆಚ್‌ಡಿಕೆ ಆರೋಪಗಳನ್ನ ತಳ್ಳಿಹಾಕಿದ್ದಾರೆ. ಇದನ್ನೂ ಓದಿ: ಮಳೆ ಹಾನಿಗೊಳಗಾದ ದ.ಕನ್ನಡ, ಉ. ಕನ್ನಡ, ಉಡುಪಿ ಜಿಲ್ಲೆಗೆ ಶೀಘ್ರವೇ ಪರಿಹಾರ ನೀಡಿ: ಸಿಎಂ ಸೂಚನೆ

    ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆ ಆಗಿರಲಿಲ್ಲವಾ? ಹಾಗಾದ್ರೆ ಅವರು ದುಡ್ಡು ತಗೊಂಡಿದ್ರಾ? ವರ್ಗಾವಣೆ ಆದಾಗೆಲ್ಲ ದಂಧೆ ನಡೆದಿದೆ, ದುಡ್ಡು ತಗೊಂಡಿದ್ದಾರೆ ಅಂದರೆ ಹೇಗೆ? ಹಾಗಾದ್ರೆ ಕುಮಾರಸ್ವಾಮಿನೂ ದುಡ್ಡು ತಗೊಂಡಿದ್ರಾ? ಹಾಗಾದ್ರೆ ನಾವು ಅವರ ಮೇಲೂ‌ ಹೇಳ್ತೀವಿ ದುಡ್ಡು ತಗೊಂಡಿದ್ರು ಅಂತಾ ಎಂದು ಹರಿಹಾಯ್ದಿದ್ದಾರೆ.

    ಸಾಮಾನ್ಯ ವರ್ಗಾವಣೆ ಆಡಳಿತಾತ್ಮಕ ದೃಷ್ಟಿಯಿಂದ ಮಾಡಬೇಕಾಗುತ್ತದೆ, ಊಹಿಸಿಕೊಂಡು ಹೇಳಬಾರದು. ಹೊಸ ಸರ್ಕಾರ ಬಂದಾಗ ಸ್ವಾಭಾವಿಕವಾಗಿ ವರ್ಗಾವಣೆ ಆಗುತ್ತವೆ. ಎಲೆಕ್ಷನ್ ಬಂದಿತ್ತು, ನೀತಿ ಸಂಹಿತೆ ಇತ್ತು, ಹೀಗಾಗಿ ವರ್ಗಾವಣೆ ಮಾಡಿರಲಿಲ್ಲ. ಈಗ ಸಾಮಾನ್ಯ ವರ್ಗಾವಣೆ ನಡೆಯುತ್ತಿದೆ ಇದನ್ನ ದಂಧೆ ಅಂದರೆ ಹೇಗೆ? ಹೆಚ್‌ಡಿಕೆ ಅವರಿಗೆ ಮರುಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸರ್ಕಾರ ರಾಜಕೀಯ ತೆವಲಿಗಾಗಿ ಜೀವದ ಜೊತೆ ಚೆಲ್ಲಾಟವಾಡ್ತಿದೆ – KSRTC ನೌಕರನ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ

    ಇನ್ನೂ ಕುಮಾರಸ್ವಾಮಿ ಪೆನ್ ಡ್ರೈವ್ ತೋರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಕುಮಾರಸ್ವಾಮಿ ಯಾವಾಗಲೂ ಹಿಟ್ ಅಂಡ್ ರನ್ ಕೇಸ್. ಇದುವರೆಗೆ ಮಾಡಿರೋ ಆರೋಪಗಳಲ್ಲಿ ಯಾವುದನ್ನ ಕುಮಾರಸ್ವಾಮಿ ಲಾಜಿಕಲ್ ಎಂಡ್ ಗೆ ತೆಗೆದುಕೊಂಡು ಹೋಗಿದ್ದಾರೆ ಹೇಳಲಿ.. ಅವರು ದಾಖಲೆ ಬಿಡುಗಡೆ ಮಾಡಲಿ ಅದಕ್ಕೆ ಉತ್ತರ ಕೊಡ್ತೀವಿ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್

    ನನ್ನ ಬಳಿ ದಾಖಲೆ ಇದೆ- ಹೆಚ್‍ಡಿಕೆ ಪೆನ್‍ಡ್ರೈವ್ ಬಾಂಬ್

    – 10 ಕೋಟಿಗೆ ಇಂಧನ ಇಲಾಖೆ ಬಿಕರಿಯಾಗಿದೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Govt) ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಇಂದು ದಾಖಲೆ ಸಮೇತ ಬಂದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ (Pendrive Politics) ಪ್ರದರ್ಶನ ಮಾಡಿದ್ದಾರೆ. ಶರ್ಟ್ ಪಾಕೆಟ್ ನಲ್ಲಿ ಪೆನ್ ಡ್ರೈವ್ ಹಿಡಿದುಕೊಂಡು ಬಂದಿರುವ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ಆಡಿಯೋ (Transfer Scam Audio) ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಹಾಕಿದ್ದಾರೆ.

    KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ (Congress) ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್‍ಂ ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗ್ತೀನಿ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?. ಪರಿಹಾರದ ದುಡ್ಡಲ್ಲಿ ಮಜಾ ಮಾಡಿದವರು ನೀವು ಎಂದು ಹೆಚ್‍ಡಿಕೆ ಗರಂ ಆದರು.

    ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ. ಮೈ ಕೈ ಪರಚಿಕೊಳ್ಳುವುದು ಬೇಡ ಅಂತಾ ಗುಂಡೂರಾವ್ ಹೇಳಿದರಲ್ಲ. ನಾನೇಕೆ ಮೈ ಕೈ ಪರಚಿಕೊಳ್ಳಲಿ?. ಸೋತಾಗ್ಲೂ ಜನರ ಕಷ್ಟ-ಸುಃಖ ಕೇಳಿದ್ದೇವೆ. ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ಎಷ್ಟಿತ್ತು?. ಆಸ್ತಿ ಈಗ ಎಷ್ಟಿದೆ ತನಿಖೆ ಮಾಡಲಿ ಎಂದು ಸವಾಲೆಸೆದರು.

    ಇಂಧನ ಇಲಾಖೆ ಟ್ರಾನ್ಸ್ ಫರ್ ಆಗಿದೆ. 10 ಕೋಟಿಗೆ ನಿನ್ನೆ ಬಿಕರಿಯಾಗಿದೆ. ನಗರ ಅಭಿವೃದ್ಧಿ ಇಲಾಖೆ ಇಲ್ಲ. ಇಲ್ಲಿರೋದು ನಗದು ಅಭಿವೃದ್ಧಿ ಇಲಾಖೆ ಇರೋದು. ಬಿಎಸ್‍ವೈ (B S Yediyurappa) ನನ್ನ ಬಗ್ಗೆ ಒಳ್ಳೆಯ ಮಾತಾನಾಡಿದ್ದಾರೆ. ಯಾರ್ಯಾರು ನನ್ನ ಜೊತೆ ರಾಜ್ಯದ ಸಂಪತ್ತು ಉಳಿಸಲು ಕೈ ಜೋಡಿಸ್ತಾರೋ ಅವರಿಗೆ ಸ್ವಾಗತ ಕೋರುತ್ತೇನೆ ಎಂದು ಇದೇ ವೇಳೆ ಹೆಚ್‍ಡಿಕೆ ಹೇಳಿದರು.

    ಟನಲ್ ಮಾಡೋಕೆ ಹೋಗಿ ಬೆಂಗಳೂರನ್ನು ಸಮಾಧಿ ಮಾಡಿದ್ರಿ. ಈಗಾಗಲೇ ಅಭಿವೃದ್ಧಿ ವಿಚಾರದಲ್ಲಿ ಸಮಾಧಿಯಾಗಿದೆ. ಅಂಬೇಡ್ಕರ್ ಹೆಸ್ರು ಹೇಳ್ಕೊಂಡು ಲೂಟಿ ಮಾಡ್ತಾ ಇದ್ದೀರಾ. ಬೆಂಗಳೂರು ಸಮಸ್ಯೆಗೆ ವೈಜ್ಞಾನಿಕ ರೀತಿಯಲ್ಲಿ ಕೆಲಸ ಮಾಡಿ. ಟನಲ್ ಮಾಡಿಸೋಕೆ ಹೋಗೋಕೆ ಬೆಂಗಳೂರು ಹಾಳ್ ಮಾಡಬೇಡಿ ಎಂದು ಡಿಕೆಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    ಗರ್ಭಿಣಿ ಮೇಲೆ ಸನ್ಯಾಸಿ ರೇಪ್- ಕಾಂಡೋಮ್, 19 ಮೊಬೈಲ್, 33 ಪೆನ್‍ಡ್ರೈವ್ ಪತ್ತೆ

    – ದೊಡ್ಡ ಬ್ಯಾಗಿನಲ್ಲಿ 2 ಲ್ಯಾಪ್‍ಟಾಪ್, 4 ಹಾರ್ಡ್ ಡಿಸ್ಕ್ ಪತ್ತೆ

    ಜೈಪುರ: ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈನ ಸನ್ಯಾಸಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಆರೋಪಿ ಜೈನ ಸನ್ಯಾಸಿ ಮನೆಯಲ್ಲಿ ಪೆನ್ ಡ್ರೈವ್, ಕಾಂಡೋಮ್ ಪ್ಯಾಕೆಟ್ ಮತ್ತು ಎರಡು ಲ್ಯಾಪ್‍ಟಾಪ್, ಮೊಬೈಲ್ ಫೋನ್‍ಗಳು ಪತ್ತೆಯಾಗಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

    ಬಂಧಿತ ಆರೋಪಿಯನ್ನು 38 ವರ್ಷದ ಜೈನ ಸನ್ಯಾಸಿ ಸುಕುಮಾಲ್ ನಂದಿ ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳು ಆರೋಪಿ ವಾಸಿಸುತ್ತಿದ್ದ ಸಮುದಾಯದ ಆಶ್ರಯ ಮನೆಯೊಂದರಲ್ಲಿ ದೊಡ್ಡ ಬ್ಯಾಗ್‍ನಲ್ಲಿ ಪತ್ತೆಯಾಗಿವೆ.

    ಬಂಧಿತ ಆರೋಪಿ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯ ತಂಡವನ್ನು ಕರೌಲಿಗೆ ನಿಯೋಜಿಸಲಾಗಿತ್ತು. ಈ ತಂಡವು ಶುಕ್ರವಾರ ಬೆಳಗ್ಗೆ ಆರೋಪಿ ಸನ್ಯಾಸಿ ವಾಸಿಸುತ್ತಿದ್ದ ಮನೆಗೆ ಹೋಗಿದೆ. ಅಲ್ಲಿ ತಪಾಸಣೆ ಮಾಡುವ ಸಂದರ್ಭದಲ್ಲಿ ದೊಡ್ಡ ಬ್ಯಾಗ್‍ಯೊಂದು ಪತ್ತೆಯಾಗಿದೆ.

    ಆ ಚೀಲವನ್ನು ತೆರೆದು ನೋಡಿದಾಗ ಅದರಲ್ಲಿ 19 ಮೊಬೈಲ್ ಫೋನ್, ಎರಡು ಲ್ಯಾಪ್‍ಟಾಪ್, ನಾಲ್ಕು ಹಾರ್ಡ್ ಡಿಸ್ಕ್, ಕಾಂಡೋಮ್ ಪ್ಯಾಕೆಟ್‍ಗಳು ಮತ್ತು 33 ಪೆನ್ ಡ್ರೈವ್‍ಗಳನ್ನು ಪತ್ತೆಯಾಗಿದೆ. ತನಿಖಾ ಅಧಿಕಾರಿಗಳು ಹಾರ್ಡ್ ಡಿಸ್ಕ್ ಗಳನ್ನು ಸ್ಕ್ಯಾನ್ ಮಾಡಿದ್ದಾರೆ. ಅದರಲ್ಲಿ ಅನೇಕ ಅಶ್ಲೀಲ ವಿಡಿಯೋ ಇರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

    ಸಂತ್ರಸ್ತೆ ಗರ್ಭಿಣಿ ತನ್ನ ಅತ್ತಿಗೆಯೊಂದಿಗೆ ಗುರುವಾರ ಆಶೀರ್ವಾದ ಪಡೆಯಲು ಆರೋಪಿ ಸನ್ಯಾಸಿಯನ್ನು ಭೇಟಿ ಮಾಡಲು ಹೋಗಿದ್ದರು. ಮೊದಲು ಸಂತ್ರಸ್ತೆಯ ಅತ್ತಿಗೆ ರೂಮಿಗೆ ಹೋಗಿದ್ದಾರೆ. ಆಗ ಸನ್ಯಾಸಿ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆ ರೂಮಿಗೆ ಹೋಗಿದ್ದು, ಈ ವೇಳೆ ಆರೋಪಿ ನಂದಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಒಂದು ವೇಳೆ ಈ ವಿಚಾರವನ್ನು ಕುಟುಂಬದವರಿಗೆ ಹೇಳಿದರೆ ನನ್ನ ಅಧಿಕಾರವನ್ನು ಬಳಸಿಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಇನ್ಸ್‌ಪೆಕ್ಟರ್ ಲಕ್ಷ್ಮಣ್ ಗೌರ್ ಹೇಳಿದರು.

    ಸಂತ್ರಸ್ತೆ ಮನೆಗೆ ಹಿಂದಿರುಗಿದ ನಂತರ ನಡೆದ ಘಟನೆಯನ್ನು ಕುಟುಂಬದವರ ಬಳಿ ಹೇಳಿದ್ದಾರೆ. ತಕ್ಷಣ ಕುಟುಂಬದವರು ಪೊಲೀಸ್ ಠಾಣೆಗೆ ಬಂದು ಸನ್ಯಾಸಿ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿ ಸನ್ಯಾಸಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದಂತೆ ಆ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು ಎಂದು ಲಕ್ಷ್ಮಣ್ ಗೌಡರ್ ತಿಳಿಸಿದರು.